ರಾಯ ಪಾಂಡವರರಸಿ ಕಮಲ ದ ಳಾಯತಾಕ್ಷಿಯ ಪರಿಭವವನೆರೆ ಕಾಯಿದುದೆಲಾ ವೀರ ನಾರಾಯಣನ ಸಿರಿನಾಮ
rāya pāṃḍavararasi kamala da ḷāyatākṣiya paribhavavanere kāyidudelā vīra nārāyaṇana sirināma
ಸಭಾ ಪರ್ವ — ಸಂಧಿ ೧೪ · ಸಭಾ ಪರ್ವ — ಸಂಧಿ ೧೪
sabhā parva — saṃdhi 14
The complete sabha parva · sandhi 14 in Kannada.
132 passagesKannada with transliteration
Invocation
ರಾಯ ಪಾಂಡವರರಸಿ ಕಮಲ ದ ಳಾಯತಾಕ್ಷಿಯ ಪರಿಭವವನೆರೆ ಕಾಯಿದುದೆಲಾ ವೀರ ನಾರಾಯಣನ ಸಿರಿನಾಮ
rāya pāṃḍavararasi kamala da ḷāyatākṣiya paribhavavanere kāyidudelā vīra nārāyaṇana sirināma
ಕೇಳು ಜನಮೇಜಯ ಧರಿತ್ರೀ ಪಾಲ ವಿದುರನ ಮಾತ ಮುರಿದು ನೃ ಪಾಲನೆಚ್ಚರಿಸಿದನು ಕಣುಸನ್ನೆಯಲಿ ಸೌಬಲನ ಏಳು ಧರ್ಮಜ ಸೋತೆಲಾ ನಿ ನ್ನಾಳು ಕುದುರೆಯನಿನ್ನು ಸಾಕು ದ ಯಾಳುವಲ್ಲ ಸುಯೋಧನನು ಧನವಿಲ್ಲ ನಿನಗೆಂದ
kēḷu janamējaya dharitrī pāla vidurana māta muridu nr̥ pālaneccarisidanu kaṇusanneyali saubalana ēḷu dharmaja sōtelā ni nnāḷu kudureyaninnu sāku da yāḷuvalla suyōdhananu dhanavilla ninageṃda
ತೆಗೆವೆನೇ ಸಾರಿಗಳ ನಿನ್ನೀ ನಗೆಮೊಗದ ಸಿರಿ ಸೀದು ಕರಿಯಾ ಯ್ತುಗುಳುತಿದೆ ನಿನ್ನನುಜರಿಂಗಿತ ರೋಷಪಾವಕನ ಸೊಗಸು ಬೀಯದು ರಪಣವಿಲ್ಲದ ಬೆಗಡು ನೋಯದು ಕ್ಷತ್ರಧರ್ಮದ ತಗಹು ಸಾಯದು ನಿನಗೆನುತ ಗಹಗಹಿಸಿದನು ಶಕುನಿ
tegevenē sārigaḷa ninnī nagemogada siri sīdu kariyā ytuguḷutide ninnanujariṃgita rōṣapāvakana sogasu bīyadu rapaṇavillada begaḍu nōyadu kṣatradharmada tagahu sāyadu ninagenuta gahagahisidanu śakuni
ಎಲವೊ ಸೌಬಲ ವಿತ್ತವೀಸರ ಲಳಿದುದೇ ನೀ ನಗುವವೋಲ್ನ ಮ್ಮೊಳಗು ಡಿಳ್ಳವೆ ರಪಣವಿದೆಲಾ ಬಹಳ ಭಂಡಾರ ಸುಳಿಸು ಹಾಸಂಗಿಗಳ ಮೋಹರ ಗೊಳಿಸು ಸಾರಿಯನೊಂದು ರೇಖೆಯ ಬಳಿಯಲೊಂದೇ ಕೋಟಿ ಧನವೆಂದೊದರಿದನು ಭೂಪ
elavo saubala vittavīsara laḷidudē nī naguvavōlna mmoḷagu ḍiḷḷave rapaṇavidelā bahaḷa bhaṃḍāra suḷisu hāsaṃgigaḷa mōhara goḷisu sāriyanoṃdu rēkheya baḷiyaloṃdē kōṭi dhanaveṃdodaridanu bhūpa
ದುಗುಣಕಿಕ್ಕಿದನರಸನಾಚೆಗೆ ತೆಗೆದನವ ಮೂರೆಂದು ನಾಲ್ಕ ಕ್ಕುಗಿದನವ ನಿಪನೈದ ಕಳೆದನು ಬಹಳವನು ಶಕುನಿ ತೆಗೆದ ನಿಮ್ಮಡಿಗರಸನವನಾ ತ್ರಿಗುಣ ಪಂಚಕ ಸಪ್ತ ನವಮ ಪ್ರಗುಣವೆಂದನು ಶಕುನಿ ಸೋಲಿಸಿದನು ಮಹೀಪತಿಯ
duguṇakikkidanarasanācege tegedanava mūreṃdu nālka kkugidanava nipanaida kaḷedanu bahaḷavanu śakuni tegeda nimmaḍigarasanavanā triguṇa paṃcaka sapta navama praguṇaveṃdanu śakuni sōlisidanu mahīpatiya
ಎಣಿಸಿದನು ರೇಖೆಗಳ ನಿಮ್ಮೊಡ ಗಣಿತ ಸಂಖ್ಯಾ ಸಿದ್ಧವಸ್ತುವ ನೆಣಿಸಲರ್ಬುದ ಸಂಖ್ಯೆಯಾಯಿತು ಹಲಗೆಯೊಂದರಲಿ ಗುಣನಿಧಿಯೆ ಮಗುಳೊಡ್ಡಲಾಪರೆ ಪಣವ ಸಬುದಿಸು ಕೇಳ್ವೆನೆನೆ ನೃಪ ಗುಣ ಶಿರೋಮಣಿ ಧರ್ಮಸುತ ನಸುನಗುತಲಿಂತೆಂದ
eṇisidanu rēkhegaḷa nimmoḍa gaṇita saṃkhyā siddhavastuva neṇisalarbuda saṃkhyeyāyitu halageyoṃdarali guṇanidhiye maguḷoḍḍalāpare paṇava sabudisu kēḷvenene nr̥pa guṇa śirōmaṇi dharmasuta nasunagutaliṃteṃda
ಹೂಡು ಸಾರಿಯ ರೇಖೆ ರೇಖೆಗೆ ಮಾಡಿದರ್ಬುದ ಧನ ಸುಯೋಧನ ನಾಡಿ ನೋಡಲಿ ಹಾಯ್ದು ಹಾಸಂಗಿಗಳ ಹಾಯ್ಕೆನುತ ಆಡಿದನು ಯಮಸೂನು ಖಾಡಾ ಖಾಡಿಯಲಿ ಸಾರಿಗಳೊಡನೆ ಹೋ ಗಾಡಿದನು ಭಂಡಾರವನು ಭೂಪಾಲ ಕೇಳೆಂದ
hūḍu sāriya rēkhe rēkhege māḍidarbuda dhana suyōdhana nāḍi nōḍali hāydu hāsaṃgigaḷa hāykenuta āḍidanu yamasūnu khāḍā khāḍiyali sārigaḷoḍane hō gāḍidanu bhaṃḍāravanu bhūpāla kēḷeṃda
ಸಾರಿ ಸೋತವು ಸೋಲು ನಿನಗನು ಸಾರಿ ನೀವೈವರು ವನಾಂತಕೆ ಸಾರಿ ಸಾಕಿನ್ನೊಡ್ಡಲಾಪರೆ ಮತ್ತೆ ನುಡಿ ಧನವ ಭೂರಮಣ ಹೇಳೆನಲು ರೇಖೆಯ ಭಾರಿಯೊಡ್ಡಕೆ ಪದ್ಮ ಸಂಖ್ಯೆಯ ಭೂರಿ ಧನವಿದೆ ರಪಣವೆಂದನು ನಗುತ ಯಮಸೂನು
sāri sōtavu sōlu ninaganu sāri nīvaivaru vanāṃtake sāri sākinnoḍḍalāpare matte nuḍi dhanava bhūramaṇa hēḷenalu rēkheya bhāriyoḍḍake padma saṃkhyeya bhūri dhanavide rapaṇaveṃdanu naguta yamasūnu
ಬರಹಕಿಮ್ಮಡಿ ನೂರು ಮಡಿ ಸಾ ವಿರದ ಮಡಿ ಪರಿಯಂತವಿಕ್ಕಿತು ಹರುಷ ನನಗೆ ಕೊನೆಯಾಯ್ತು ಹೆಚ್ಚಿತು ಕಲಿಮಲಾವೇಶ ಸ್ಥಿರವೆ ಹಿಂಗಿತು ವಾಸಿ ಪಾಡಿನ ದುರುಳತನವುಬ್ಬೆದ್ದುದಡಿಗಡಿ ಗರಸನೊಡ್ಡಿದ ಮೇಲೆ ಮೇಲೊಡ್ಡವನು ವಿರಚಿಸಿದ
barahakimmaḍi nūru maḍi sā virada maḍi pariyaṃtavikkitu haruṣa nanage koneyāytu heccitu kalimalāvēśa sthirave hiṃgitu vāsi pāḍina duruḷatanavubbeddudaḍigaḍi garasanoḍḍida mēle mēloḍḍavanu viracisida
ತೀರಿತಿಂದ್ರಪ್ರಸ್ಥದುರು ಭಂ ಡಾರ ತನ್ನರಮನೆಯ ಪೈಕದ ವಾರಕದ ಭಂಗಾರವೊಡ್ಡಿತು ಕೋಟಿ ಸಂಖ್ಯೆಯಲಿ ಸೇರಿತದು ಕುರುಪತಿಗೆ ರಾಯನ ನಾರಿಯರ ವಿವಿಧಾಭರಣ ಸಿಂ ಗಾರವೊಡ್ಡಿತು ಕೊಂಡು ಮುಳುಗಿತು ಖಡ್ಡತನ ನೃಪನ
tīritiṃdraprasthaduru bhaṃ ḍāra tannaramaneya paikada vārakada bhaṃgāravoḍḍitu kōṭi saṃkhyeyali sēritadu kurupatige rāyana nāriyara vividhābharaṇa siṃ gāravoḍḍitu koṃḍu muḷugitu khaḍḍatana nr̥pana
ನಕುಲ ಸಹದೇವಾರ್ಜುನರ ಮಣಿ ಮಕುಟ ಕರ್ಣಾಭರಣ ಪದಕಾ ದಿಕ ಸಮಸ್ತಾಭರಣವೊಡ್ಡಿತು ಹಲಗೆಯೊಂದರಲಿ ವಿಕಟ ಮಾಯಾ ವಿಷಮ ಕರ್ಮವ ನಕಟ ಬಲ್ಲನೆ ಸಾಧುಜನ ಸೇ ವಕನು ಸೋತನು ಸಾಧ್ಯವಹುದೇ ವಿಧಿಯ ಮುಳಿಸಿನಲಿ
nakula sahadēvārjunara maṇi makuṭa karṇābharaṇa padakā dika samastābharaṇavoḍḍitu halageyoṃdarali vikaṭa māyā viṣama karmava nakaṭa ballane sādhujana sē vakanu sōtanu sādhyavahudē vidhiya muḷisinali
ಸೋತೆಲಾ ಕೌಂತೇಯ ನಿಮಿಷಕೆ ಬೀತುದೇ ನಿನ್ನಖಿಳ ಸಿರಿ ವಿ ಖ್ಯಾತಿ ಬರತುದೆ ವೇಡೆಗೆದರಿತೆ ಮನದ ವಾಸಿಗಳ ಪ್ರೀತಿಯುಂಟೇ ನಿಮಗೆ ಮತ್ತೀ ದ್ಯೂತದಲಿ ಧನವಿಲ್ಲಲಾ ಗ ರ್ವಾತಿರೇಕವ ಬೀಳುಗೊಂಡಿರೆಯೆಂದನಾ ಶಕುನಿ
sōtelā kauṃtēya nimiṣake bītudē ninnakhiḷa siri vi khyāti baratude vēḍegedarite manada vāsigaḷa prītiyuṃṭē nimage mattī dyūtadali dhanavillalā ga rvātirēkava bīḷugoṃḍireyeṃdanā śakuni
ಖಿನ್ನ ನಾದನು ರಾಜ್ಯಲಕ್ಷ್ಮಿಯ ಬೆನ್ನ ಕಂಡನು ಬಳಚಿಹೋದ ನಿ ಜೋನ್ನತಿಯಲವನೀಶನಿದ್ದನು ಮುರಿದ ಮಹಿಮೆಯಲಿ ಇನ್ನು ಪಣವೇನೋ ವಿರೋಧಿಗ ಳೆನ್ನ ಭಂಗಿಸಿ ನುಡಿದರಿದಕಿ ನ್ನೆನ್ನನಿಕ್ಕಿ ದ್ಯೂತವಿಜಯವ ಸಾಧಿಸುವೆನೆಂದ
khinna nādanu rājyalakṣmiya benna kaṃḍanu baḷacihōda ni jōnnatiyalavanīśaniddanu murida mahimeyali innu paṇavēnō virōdhiga ḷenna bhaṃgisi nuḍidaridaki nnennanikki dyūtavijayava sādhisuveneṃda
ಎಲವೊ ಫಡ ಫಡ ಶಕುನಿ ಗರ್ವದ ತಳಿ ಮುರಿವುದೇ ನಿನ್ನ ದುರ್ಮತಿ ಗಳಿಗೆ ಹೂಡಿದ ದುರ್ಗವಿದೆ ತನ್ನಂತರಂಗದಲಿ ಉಳಿದ ಧನವೇಗುವುದು ಜೀವ ಸ್ಥಳವಿದೇ ಮೇಲೊಡ್ಡವೊಂದೇ ಹಲಗೆಗೊಡ್ಡಿದೆನೆನ್ನ ನಕುಲನನೆಂದನಾ ಭೂಪ
elavo phaḍa phaḍa śakuni garvada taḷi murivudē ninna durmati gaḷige hūḍida durgavide tannaṃtaraṃgadali uḷida dhanavēguvudu jīva sthaḷavidē mēloḍḍavoṃdē halagegoḍḍidenenna nakulananeṃdanā bhūpa
ವಾಸಿಗನುಜನನೊಡ್ಡಿದರೆ ನಮ ಗೀಸರಲಿ ಭಯವೇನು ನೋಡುವೆ ವೈಸಲೇ ನೃಪ ಹಾಯ್ದು ಹಾಸಂಗಿಗಳ ಹಾಯ್ಕೆನುತ ಆ ಶಕುನಿ ಪೂರ್ವಾರ್ಜಿತದ ಡೊ ಳ್ಳಾಸದಲಿ ಡಾವರಿಸಿ ಧರ್ಮ ವಿ ನಾಶಿ ನಕುಲನ ಗೆಲಿದು ಬೊಬ್ಬಿರಿದನವನಿಪನ ಜರೆದ
vāsiganujananoḍḍidare nama gīsarali bhayavēnu nōḍuve vaisalē nr̥pa hāydu hāsaṃgigaḷa hāykenuta ā śakuni pūrvārjitada ḍo ḷḷāsadali ḍāvarisi dharma vi nāśi nakulana gelidu bobbiridanavanipana jareda
ಅರಸ ಸೋತೈ ನಕುಲನನು ಹೇ ವರಿಸದಿರು ಹೇಳೊಡ್ಡವನು ವಿ ಸ್ತರಿಸಲೊಂದೇ ಹಲಗೆ ಸೋಲ್ವುದು ಹೇಳು ಹೇಳೆನಲು ವರಿಸಿದೆನು ಸಹದೇವನನು ನೆರೆ ಮರಳಿಚುವೆನೆನನ್ನಖಿಳ ವಸ್ತೂ ತ್ಕರವನೆಂದನು ಧರ್ಮನಂದನನರಸ ಕೇಳೆಂದ
arasa sōtai nakulananu hē varisadiru hēḷoḍḍavanu vi starisaloṃdē halage sōlvudu hēḷu hēḷenalu varisidenu sahadēvananu nere maraḷicuvenenannakhiḷa vastū tkaravaneṃdanu dharmanaṃdananarasa kēḷeṃda
ಹರಿಬದಲಿ ತನ್ನಖಿಳ ವಸ್ತೂ ತ್ಕರವ ಮರಳಿಚುವನು ಮಹೀಪತಿ ಕಿರಿಯ ತಮ್ಮನಪೊಡ್ಡಿದನು ಮಾದ್ರೀ ಕುಮಾರಕನ ಅರಸ ದಾಯವೆ ಬಾ ಜಯಾಂಗದ ಸಿರಿಯೆ ಬಾ ಕುರುರಾಯ ರಾಜೋ ತ್ಕರುಷ ಸಿದ್ಧಿಯೆ ಬಾಯೆನುತ ಗರ್ಜಿಸಿದನಾ ಶಕುನಿ
haribadali tannakhiḷa vastū tkarava maraḷicuvanu mahīpati kiriya tammanapoḍḍidanu mādrī kumārakana arasa dāyave bā jayāṃgada siriye bā kururāya rājō tkaruṣa siddhiye bāyenuta garjisidanā śakuni
ಏನ ಬಣ್ಣಿಸುವೆನು ವಿಕಾರಿಗ ಳೇನ ನೆನೆಯರು ಕಪಟ ವಿಧದಲಿ ಮಾನನಿಧಿ ತಾ ಸೋತನನುಜದ್ವಯ ಮಹಾಧನವ ಗ್ಲಾನಿಚಿತ್ತದೊಳಿಲ್ಲಲೇ ಸುಮ ನೋನುರಾಗವೆ ಭೀಮ ಪಾರ್ಥರು ತಾನಿದೊಮ್ಮಿಗೆ ಬದುಕಿದರು ನಿಮಗೆಂದನಾ ಶಕುನಿ
ēna baṇṇisuvenu vikāriga ḷēna neneyaru kapaṭa vidhadali mānanidhi tā sōtananujadvaya mahādhanava glānicittadoḷillalē suma nōnurāgave bhīma pārtharu tānidommige badukidaru nimageṃdanā śakuni
ಭೇದ ಮಂತ್ರವ ಮಾಡಿ ನಮ್ಮನು ಭೇದಿಸುವ ಗಡ ಸುಬಲ ಸುತನಕ ಟೀ ದುರಾತ್ಮನ ನೋಡಿರೈ ಸಭ್ಯರು ಶಿವಾಯೆನುತ ಆ ದುರಾಗ್ರಹಿ ಲೋಕಜನ ಪರಿ ವಾದ ಪದನಿರ್ಭೀತನಕ್ಷ ವಿ ನೋದ ಕರ್ದಮ ಮಗ್ನನೊಡ್ಡಿದನಾ ಧನಂಜಯನ
bhēda maṃtrava māḍi nammanu bhēdisuva gaḍa subala sutanaka ṭī durātmana nōḍirai sabhyaru śivāyenuta ā durāgrahi lōkajana pari vāda padanirbhītanakṣa vi nōda kardama magnanoḍḍidanā dhanaṃjayana
ಎಲೆ ಧನಂಜಯ ನಿನ್ನನೊಡ್ಡಿದ ಛಲಿ ಯುಧಿಷ್ಠಿರನಿಲ್ಲಿ ಸೋತರೆ ಬಳಿಕ ನಿನ್ನನು ಮಾರಿದನಲಾ ಕೌರವೇಶ್ವರಗೆ ತಿಳಿದು ಭೀಮಾರ್ಜುನರು ನೀವ್ ನಿ ಮ್ಮೊಳಗೆ ಬಲಿದಿಹುದೆನಲು ಖತಿಯಲಿ ಮುಳಿದು ಬೈದರು ಭೀಮ ಪಾರ್ಥರು ಸುಬಲನಂದನನ
ele dhanaṃjaya ninnanoḍḍida chali yudhiṣṭhiranilli sōtare baḷika ninnanu māridanalā kauravēśvarage tiḷidu bhīmārjunaru nīv ni mmoḷage balidihudenalu khatiyali muḷidu baidaru bhīma pārtharu subalanaṃdanana
ದೇಹಿಗೆರವೇ ದೇಹವೆಲವೋ ದೇಹಿ ಭೂಪತಿ ಧರ್ಮಪುತ್ರನ ದೇಹವಾವಿದರೊಳಗೆ ನಿನ್ನ ಕುಮಂತ್ರಭಾವಿತದ ಊಹೆಗೊಂಬುದೆ ಕಪಟದಿಂದವ ಗಾಹಿಸುವೆ ಸಾಕಿನ್ನು ಮೇಲಣ ಗಾಹುಗತಕಗಳೆಮ್ಮೊಳೆಂದರು ಜರೆದು ಸೌಬಲನ
dēhigeravē dēhavelavō dēhi bhūpati dharmaputrana dēhavāvidaroḷage ninna kumaṃtrabhāvitada ūhegoṃbude kapaṭadiṃdava gāhisuve sākinnu mēlaṇa gāhugatakagaḷemmoḷeṃdaru jaredu saubalana
ಮೇಲೆ ಹೇಳುವುದೇನು ಸಾರಿಯ ಸಾಲು ಮುರಿದುದು ಸೆರೆಯ ಕಳವಿನ ಕಾಲು ಕೀಲ್ಗಳನಾರು ಬಲ್ಲರು ಕುಟಿಲ ಕೋವಿದರ ಹೇಳುವದರಿಮ್ಮುನ್ನ ಶಕುನಿಗೆ ಬೀಳುವುದು ಬೇಕಾದ ದಾಯವು ಕೌಳಿಕದ ವಿಧಿ ಪಾಶ ತೊಡಕಿತು ನೀಗಿತರ್ಜುನನ
mēle hēḷuvudēnu sāriya sālu muridudu sereya kaḷavina kālu kīlgaḷanāru ballaru kuṭila kōvidara hēḷuvadarimmunna śakunige bīḷuvudu bēkāda dāyavu kauḷikada vidhi pāśa toḍakitu nīgitarjunana
ಸೋತಿರರಸರೆ ಮತ್ತೆ ಹೇಳೀ ದ್ಯೂತ ಶಿಖಿಗಾಹುತಿಯನೆನೆ ಕುಂ ತೀತನುಜನೊಡ್ಡಿದನು ವಿಗಡ ಬಕಾಸುರಾಂತಕನ ಆತುದೊಂದರೆಗಳಿಗೆ ಸೌಬಲ ಸೋತ ಧರ್ಮಜ ಗೆಲಿದ ಧರ್ಮಜ ಸೋತ ಸೌಬಲ ಗೆಲಿದನೆಂಬವೊಲಾಯ್ತು ಘನ ರಭಸ
sōtirarasare matte hēḷī dyūta śikhigāhutiyanene kuṃ tītanujanoḍḍidanu vigaḍa bakāsurāṃtakana ātudoṃdaregaḷige saubala sōta dharmaja gelida dharmaja sōta saubala gelidaneṃbavolāytu ghana rabhasa
ಆ ಹಲಗೆ ಸೋತುದು ಯುಧಿಷ್ಠಿರ ನೂಹೆ ಮುರಿದುದು ಮುಂದುಗೆಟ್ಟನು ರಾಹುಹಿಡಿದ ಹಿಮಾಂಶು ಮಂಡಲದುಳಿದ ಕಳೆಯಂತೆ ತೋಹಿನಲಿ ತೊಟ್ಟಿಸಿದ ಮೃಗದವೊ ಲೂಹೆಯಳಿದುದು ಯಂತ್ರಸೂತ್ರದ ಹೂಹೆಯಂತಿರೆ ನೃಪತಿ ತೆತ್ತನು ಹಗೆಗೆ ತನುಧನವ
ā halage sōtudu yudhiṣṭhira nūhe muridudu muṃdugeṭṭanu rāhuhiḍida himāṃśu maṃḍaladuḷida kaḷeyaṃte tōhinali toṭṭisida mr̥gadavo lūheyaḷidudu yaṃtrasūtrada hūheyaṃtire nr̥pati tettanu hagege tanudhanava
ಜನಪ ಮಾರಿದೆ ಭೀಮಸೇನಾ ರ್ಜುನರು ಸಹಿತೊಡಹುಟ್ಟಿದರ ನಿ ರ್ಧನಿಕನಾಗಿಯು ಮತ್ತೆ ಬಿಡದೇ ದ್ಯೂತ ದುರ್ವ್ಯಸನ ಎನಲು ಶಕುನಿಯ ಜರೆದು ತಾನೇ ಧನವಲಾ ಸಾಕೊಂದು ಹಲಗೆಯೊ ಳೆನಗೆ ಜಯವೀ ದಾಯವೆಂದೊಡ್ಡಿದನು ಜನನಾಥ
janapa māride bhīmasēnā rjunaru sahitoḍahuṭṭidara ni rdhanikanāgiyu matte biḍadē dyūta durvyasana enalu śakuniya jaredu tānē dhanavalā sākoṃdu halageyo ḷenage jayavī dāyaveṃdoḍḍidanu jananātha
ಹೇಳಲೇನದನವರು ರಚಿಸಿದ ಬೇಳುವೆಯನಾ ಶಕುನಿಯೊಡ್ಡಿದ ಕಾಲು ಕುಣಿಕೆಯೊಳಾರು ಬೀಳರು ನೃಪತಿ ನಿಮಿಷದಲಿ ಬೀಳುಗೊಟ್ಟನು ತನ್ನನಾ ಜನ ಜಾಲವಿದ್ದುದು ಬಿಗಿದ ಬೆರಗಿನೊ ಳಾಲಿಸುವಿರೇ ಜೀಯ ಪಣವೇನೆಂದನಾ ಶಕುನಿ
hēḷalēnadanavaru racisida bēḷuveyanā śakuniyoḍḍida kālu kuṇikeyoḷāru bīḷaru nr̥pati nimiṣadali bīḷugoṭṭanu tannanā jana jālaviddudu bigida beragino ḷālisuvirē jīya paṇavēneṃdanā śakuni
ಎಲವೊ ಸೌಬಲ ಸಾಕಿದೊಂದೇ ಹಲಗೆ ಸರ್ವಸ್ವಾಪಹಾರವ ನಿಳುಹುವೆನು ನೀಲಾಳಕಿಯನೊಡ್ಡುವೆನು ಬಾಲಕಿಯ ಉಳಿದ ಧನವೆಮ್ಮೈವರಿಗೆ ನಿ ಷ್ಖಲಿತವಿದು ಹೂಡೆನಲು ಹರುಷದ ಲಳಿಯ ಚೌಪಟಮಲ್ಲ ಸಾರಿಯ ಸಾಲ ಜೋಡಿಸಿದ
elavo saubala sākidoṃdē halage sarvasvāpahārava niḷuhuvenu nīlāḷakiyanoḍḍuvenu bālakiya uḷida dhanavemmaivarige ni ṣkhalitavidu hūḍenalu haruṣada laḷiya caupaṭamalla sāriya sāla jōḍisida
ಆಡಿದನು ಯಮಸೂನು ಮಿಗೆ ಹೋ ಗಾಡಿದನು ಮನುಮಥನ ಖಾಡಾ ಖಾಡಿ ಖಾತಿಯನಕಟ ಮದನನ ಮಂತ್ರದೇವತೆಯ ಕೂಡೆ ತಿವಿದನು ಕಟ್ಟಿದನು ಕಳಿ ದೋಡಿಸಿದ ಸಾರಿಗಳ ಸೋಲದ ಖೋಡಿಯನು ಚಿತ್ರಿಸಿದನರಸನ ಚಿತ್ತ ಭಿತ್ತಿಯಲಿ
āḍidanu yamasūnu mige hō gāḍidanu manumathana khāḍā khāḍi khātiyanakaṭa madanana maṃtradēvateya kūḍe tividanu kaṭṭidanu kaḷi dōḍisida sārigaḷa sōlada khōḍiyanu citrisidanarasana citta bhittiyali
ಬೆರಗು ಬೆಳೆದುದು ಮನದ ಮಿಡುಕಿನ ಮರುಕ ಮುಂದಲೆಗೊಟ್ಟುದರಿವಿನ ಸೆರಗು ಹಾರಿತು ಲಜ್ಜೆ ಬೆಳಗಿತು ಬಿಟ್ಟ ಬೀದಿಯಲಿ ಉರುಬಿತಪದೆಸೆ ರಾಜ್ಯಲಕ್ಷ್ಮಿಯ ತುರುಬು ಕೈದೊಳಸಾಯ್ತು ಹಗೆಗಾ ನರಿಯೆನರಸನ ವಿರಸ ಚೇತೋಭಾವ ಭಂಗಿಗಳ
beragu beḷedudu manada miḍukina maruka muṃdalegoṭṭudarivina seragu hāritu lajje beḷagitu biṭṭa bīdiyali urubitapadese rājyalakṣmiya turubu kaidoḷasāytu hagegā nariyenarasana virasa cētōbhāva bhaṃgigaḷa
ಮೊಳೆನಗೆಯ ಕಟಕಿಗಳ ಹದಿರಿನ ಹಳಿವುಗಳ ಸನ್ನೆಗಳ ಸವಿ ಬೈ ಗುಳಿನ ಜಾಣಿನ ನೋಟಗಳ ಜೊತ್ತಿನ ನವಾಯಿಗಳ ಒಳದೆಗಹಿನುಬ್ಬುಗಳ ಮೀಸೆಯೊ ಳಿಳಿವ ಬೆರಳ್ಗಳ ಕರ್ಣ ಸೈಂಧವ ಖಳತಿಲಕ ದುಶ್ಶಾಸನಾದಿಗಳಿದ್ದರೀಚೆಯಲಿ
moḷenageya kaṭakigaḷa hadirina haḷivugaḷa sannegaḷa savi bai guḷina jāṇina nōṭagaḷa jottina navāyigaḷa oḷadegahinubbugaḷa mīseyo ḷiḷiva beraḷgaḷa karṇa saiṃdhava khaḷatilaka duśśāsanādigaḷiddarīceyali
ಕಳಕಳದ ಕಂದೆರವೆಗಳ ಕುರು ಕುಲದ ನಿರ್ಮೂಲನದ ನಿಶ್ಚಯ ದೊಳಗುವರಿದಾಲೋಚನೆಯ ನಿರ್ದ್ರವದ ತಾಳಿಗೆಯ ತಳಿತ ಮೋನದ ಬೀತ ಹರುಷದ ಜಲದ ನಯನದಲಿದ್ದರಾ ವಿ ಹ್ವಲರು ಭೀಷ್ಮ ವಿಕರ್ಣ ವಿದುರ ದ್ರೋಣ ಗೌತಮರು
kaḷakaḷada kaṃderavegaḷa kuru kulada nirmūlanada niścaya doḷaguvaridālōcaneya nirdravada tāḷigeya taḷita mōnada bīta haruṣada jalada nayanadaliddarā vi hvalaru bhīṣma vikarṇa vidura drōṇa gautamaru
ಇಟ್ಟ ಮೂಗಿನ ಬೆರಳ ನೆಲದಲಿ ನಟ್ಟ ದೃಷ್ಟಿಯ ಕಳವು ಜೂಜಿನ ದಿಟ್ಟರಾಟಕೆ ಬಲಿದ ಬೆರಗಿನ ಬಿಗಿದ ಖಾತಿಗಳ ತಟ್ಟಿಸುವ ರಿಪುವರ್ಗ ಶಿಖಿಯಲಿ ಸುಟ್ಟ ಕರಣ ಚತುಷ್ಟಯದ ಜಗ ಜಟ್ಟಿಗಳು ಭೀಮಾರ್ಜುನಾದಿಗಳಿರ್ದರೀಚೆಯಲಿ
iṭṭa mūgina beraḷa neladali naṭṭa dr̥ṣṭiya kaḷavu jūjina diṭṭarāṭake balida beragina bigida khātigaḷa taṭṭisuva ripuvarga śikhiyali suṭṭa karaṇa catuṣṭayada jaga jaṭṭigaḷu bhīmārjunādigaḷirdarīceyali
ಹಾಸಗರ್ವದ ಮೋನದಲಿ ಸಂ ತೋಷ ಗರ್ವದ ದುಗುಡದಲಿ ಸುವಿ ಳಾಸ ಗರ್ವದ ಖೇದದಲಿ ಮದಗರ್ವ ಚಿಂತೆಯಲಿ ವೈಸಿಕದ ಕಣಿ ಕುಟಿಲ ಮಂತ್ರದ ಮಿಸಲಳಿಯದ ಕುಹಕ ವಿದ್ಯಾ ವಾಸಗೃಹ ಧೃತರಾಷ್ಟ್ರನಿದ್ದನು ವಿಕೃತ ಭಾವದಲಿ
hāsagarvada mōnadali saṃ tōṣa garvada duguḍadali suvi ḷāsa garvada khēdadali madagarva ciṃteyali vaisikada kaṇi kuṭila maṃtrada misalaḷiyada kuhaka vidyā vāsagr̥ha dhr̥tarāṣṭraniddanu vikr̥ta bhāvadali
ಜನಪತಿಯ ಜಾಡ್ಯವನು ಭೀಮಾ ರ್ಜುನರ ಸೈರಣೆಗಳನು ದುರ್ಯೋ ಧನನ ದುಶ್ಚೇಷ್ಟೆಯನು ಶಕುನಿಯ ಸಾರ ಕೃತ್ರಿಮವ ತನತನಗೆ ಕಂಡರು ಮಹೀಸುರ ಜನಪ ವೈಶ್ಯ ಚತುರ್ಥರುಕ್ಕಿದ ಮನದಳಲಿನಲಿ ಬೈದರಚ್ಯುತ ಹರ ಚತುರ್ಮುಖರ
janapatiya jāḍyavanu bhīmā rjunara sairaṇegaḷanu duryō dhanana duścēṣṭeyanu śakuniya sāra kr̥trimava tanatanage kaṃḍaru mahīsura janapa vaiśya caturtharukkida manadaḷalinali baidaracyuta hara caturmukhara
ನ್ಯಾಯವೆಮ್ಮದು ಮುನ್ನ ಸೋತಿರಿ ಜೀಯ ನಿಮ್ಮೊಡ ಹುಟ್ಟಿದರು ಸಹಿ ತಾಯತಾಕ್ಷಿಯ ಬಳಿಕ ಸೋತಿರಿ ಬಲುಹ ಮಾಡೆವೆಲೆ ರಾಯನೊಲಿದುದ ಮಾಡಲಾವ ನ್ಯಾಯವರ್ತಿಗಳಲ್ಲಲೇ ಬೆಸ ಸಾ ಯುಧಿಷ್ಠಿರಯೆನುತ ಕೈಗಳ ಮುಗಿದನಾ ಶಕುನಿ
nyāyavemmadu munna sōtiri jīya nimmoḍa huṭṭidaru sahi tāyatākṣiya baḷika sōtiri baluha māḍevele rāyanoliduda māḍalāva nyāyavartigaḷallalē besa sā yudhiṣṭhirayenuta kaigaḷa mugidanā śakuni
ಗೆಲಿದು ಕೊಟ್ಟೆನು ಸಕಲ ಚಾತು ರ್ಬಲವನಾ ಭಂಡಾರ ಸಹಿತ ಗ್ಗಳೆಯರೈವರ ಕಮಲಮುಖಿಯನು ರಾಜ್ಯ ಸಿರಿಸಹಿತ ಕಲಶವಿಟ್ಟೆನು ಕೊಟ್ಟ ಭಾಷೆಗೆ ಎಲೆ ಸುಯೋಧನಯೆಂದು ನಯನಾಂ ಗುಲಿಯ ಸಂಕೇತದಲಿ ಸನ್ನೆಯ ಮಾಡಿದನು ಶಕುನಿ
gelidu koṭṭenu sakala cātu rbalavanā bhaṃḍāra sahita ggaḷeyaraivara kamalamukhiyanu rājya sirisahita kalaśaviṭṭenu koṭṭa bhāṣege ele suyōdhanayeṃdu nayanāṃ guliya saṃkētadali sanneya māḍidanu śakuni
ವಿದುರ ಬಾ ನಮ್ಮಾಕೆಯಾ ದ್ರೌ ಪದಿಯ ಕರೆ ಬೆಸಗೊಂಬೆ ತೊತ್ತಿರ ಸದನದಿಚ್ಛೆಯೊ ರಾಣಿವಾಸದ ಮನೆಯಪೇಕ್ಷಿತವೊ ಬೆದರಬೇಡಿನ್ನಬುಜಮುಖಿಗಾ ವುದು ಮನೋರಥವೆಮ್ಮೊಳುಂಟೆಂ ಬುದು ಲತಾಂಗಿಯ ಕರೆವುದೆಂದನು ಕೌರವರ ರಾಯ
vidura bā nammākeyā drau padiya kare besagoṃbe tottira sadanadiccheyo rāṇivāsada maneyapēkṣitavo bedarabēḍinnabujamukhigā vudu manōrathavemmoḷuṃṭeṃ budu latāṃgiya karevudeṃdanu kauravara rāya
ಸಿಡಿಲ ಪೊಟ್ಟಣಗಟ್ಟಿ ಸೇಕವ ಕೊಡುವರೇ ಹರನೇತ್ರ ವಹ್ನಿಯೊ ಳಡಬಳವ ಸುಡಬಗೆದೆಲಾ ಮರುಳೆ ಮಹೀಪತಿಯೆ ಹೆಡತಲೆಯ ತುರಿಸುವರೆ ಹಾವಿನ ಹೆಡೆಯನಕಟಾ ಪಾಂಡುಪುತ್ರರ ಮಡದಿ ತೊತ್ತಹಳೇ ಶಿವಾ ಎಂದಳಲಿದನು ವಿದುರ
siḍila poṭṭaṇagaṭṭi sēkava koḍuvarē haranētra vahniyo ḷaḍabaḷava suḍabagedelā maruḷe mahīpatiye heḍataleya turisuvare hāvina heḍeyanakaṭā pāṃḍuputrara maḍadi tottahaḷē śivā eṃdaḷalidanu vidura
ಕಾಳಕೂಟದ ತೊರೆಗಳಲಿ ಜಲ ಕೇಳಿಯೇ ಕಾಲಾಂತಕನ ದಂ ಷ್ಟ್ರಾಳಿಯಲಿ ನವಿಲುಯ್ಯಲೆಯ ನೀವಾಡಲಾಪಿರಲೆ ಕಾಲರುದ್ರನ ಲಳಿಯ ನಾಟ್ಯದ ಕೇಳಿಕೆಗೆ ನೀವರ್ತಿಕಾರರೆ ಹೋಲದೋ ಶಿವಯೆನುತ ಕಂಬನಿದುಂಬಿದನು ವಿದುರ
kāḷakūṭada toregaḷali jala kēḷiyē kālāṃtakana daṃ ṣṭrāḷiyali naviluyyaleya nīvāḍalāpirale kālarudrana laḷiya nāṭyada kēḷikege nīvartikārare hōladō śivayenuta kaṃbaniduṃbidanu vidura
ಬಡಗಲುತ್ತರ ಕುರುನರೇಂದ್ರರ ನಡುಗಿಸಿದರುದಯಾದ್ರಿ ತನಕವೆ ನಡೆದು ಮುರಿದರು ಮೂಡಣರಸುಗಳತುಳ ಭುಜಬಲರ ಪಡುವಲಗಣಿತ ಯವನ ತೆಂಕಲು ಗಡೆ ವಿಭೀಷಣನೀ ಮಹೀಶರ ಬಡಿದ ಪಾಂಡವರರಸಿ ತೊತ್ತಹಳೇ ಶಿವಾಯೆಂದ
baḍagaluttara kurunarēṃdrara naḍugisidarudayādri tanakave naḍedu muridaru mūḍaṇarasugaḷatuḷa bhujabalara paḍuvalagaṇita yavana teṃkalu gaḍe vibhīṣaṇanī mahīśara baḍida pāṃḍavararasi tottahaḷē śivāyeṃda
ತಿರುವ ಕೊರಳಲಿ ತೊಡಿಸಲಾರದೆ ತೆರಳಿದರು ಚತುರಂತ ಪೃಥ್ವೀ ಶ್ವರರು ಮಾಗಧ ಚೈದ್ಯ ಮೊದಲಾದತುಲಭುಜಬಲರು ತಿರುವನೇರಿಸಿ ಧನುವನುಗಿದ ಬ್ಬರಿಸಿ ಗಗನದ ಯಂತ್ರಮತ್ಸ್ಯವ ಮುರಿದ ಪಾಂಡವರರಸಿ ತೊತ್ತಹಳೇ ಶಿವಾಯೆಂದ
tiruva koraḷali toḍisalārade teraḷidaru caturaṃta pr̥thvī śvararu māgadha caidya modalādatulabhujabalaru tiruvanērisi dhanuvanugida bbarisi gaganada yaṃtramatsyava murida pāṃḍavararasi tottahaḷē śivāyeṃda
ಬಕನ ಮುರಿದರು ವನದಲಿ ಹಿಡಿಂ ಬಕನ ಹಣಿದರು ಮಾಗಧನ ಸು ಪ್ರಕಟ ಬಲನಂಬುಜದ ನಾಳವನಾನೆ ಕೀಳ್ವಂತೆ ಸಕಲಜನ ನೃಪರರಿಯೆ ಸೀಳಿದ ರಕಟ ಮಾರಿಯ ಬೇಟವೇ ಪಾ ತಕವಲಾ ಪಾಂಚಾಲೆ ತೊತ್ತಹಳೆ ಶಿವಾಯೆಂದ
bakana muridaru vanadali hiḍiṃ bakana haṇidaru māgadhana su prakaṭa balanaṃbujada nāḷavanāne kīḷvaṃte sakalajana nr̥parariye sīḷida rakaṭa māriya bēṭavē pā takavalā pāṃcāle tottahaḷe śivāyeṃda
ಸೋಲಿಸಿದೆ ನೀನೀಗಲೀ ನರ ಪಾಲರನು ಜೂಜಿನಲಿ ಮೇಲಣ ಕಾಳಗದ ಕಳನೊಳಗೆ ಕವಿತಹ ಕೋಲ ತೋಹಿನಲಿ ಸೋಲವೊಂದಕೆ ನೂರು ನೂರರ ಮೇಲೆ ಸಾವಿರ ಸಾವಿರದ ಮೈ ಸಾಲ ಲಕ್ಷವನಂತವಾಗಿಯೆ ತೆಗೆವರವರೆಂದ
sōliside nīnīgalī nara pālaranu jūjinali mēlaṇa kāḷagada kaḷanoḷage kavitaha kōla tōhinali sōlavoṃdake nūru nūrara mēle sāvira sāvirada mai sāla lakṣavanaṃtavāgiye tegevaravareṃda
ಎಳೆದು ತರಿಸಾ ದ್ರೌಪದಿಯ ನೀ ಕಳಕಳಕೆ ಕೈಗೊಟ್ಟವೋಲ ಸ್ಖಲಿತರಿಹರಕ್ಷಮತೆಯಲಿ ತತ್ಸಮಯ ಪರಿಯಂತ ಬಳಿಕ ನೂರ್ವರ ಸತಿಯರಕ್ಕೆಯ ಕಳವಳದ ಬಿಡುಮುಡಿಯ ಬಸುರಿನ ತಳದ ಬಿರುವೊಯ್ಲುಗಳ ಭಂಗವ ಕಾಂಬರಿವರೆಂದ
eḷedu tarisā draupadiya nī kaḷakaḷake kaigoṭṭavōla skhalitariharakṣamateyali tatsamaya pariyaṃta baḷika nūrvara satiyarakkeya kaḷavaḷada biḍumuḍiya basurina taḷada biruvoylugaḷa bhaṃgava kāṃbarivareṃda
ಇವನವರ ಬಹಿರಂಗ ಜೀವ ವ್ಯವಹರಣೆಯಾತನು ವೃಥಾ ತಾ ನಿವನ ಕೆಣಕಿದೆನಕಟ ಬೋಧಭ್ರಾಂತಿ ಬಾಹಿರನ ಇವನಿರಲಿ ಬಾ ಪ್ರಾತಿಕಾಮಿಕ ಯುವತಿಯನು ಕರೆ ಹೋಗು ನೀನೆನ ಲವ ಹಸಾದವ ಹಾಯ್ಕಿ ಬಂದನು ದೇವಿಯರಮನೆಗೆ
ivanavara bahiraṃga jīva vyavaharaṇeyātanu vr̥thā tā nivana keṇakidenakaṭa bōdhabhrāṃti bāhirana ivanirali bā prātikāmika yuvatiyanu kare hōgu nīnena lava hasādava hāyki baṃdanu dēviyaramanege
ಬಂದು ಬಾಗಿಲ ಕಾಹಿಗಳ ಕರೆ ದೆಂದನರಸಿಗೆ ಬಿನ್ನವಿಸಿ ತಾ ಬಂದ ಹದನನು ಕಾರ್ಯವುಂಟೆನೆ ಹಲವು ಬಾಗಿಲಲಿ ಬಂದುದಲ್ಲಿಯದಲ್ಲಿಗರುಹಿಸ ಲಿಂದುಮುಖಿ ಕೇಳಿದಳು ಬರ ಹೇ ಳೆಂದರಾತನ ಹೊಗಿಸಿದರು ಹೊಕ್ಕನು ಸತೀಸಭೆಯ
baṃdu bāgila kāhigaḷa kare deṃdanarasige binnavisi tā baṃda hadananu kāryavuṃṭene halavu bāgilali baṃdudalliyadalligaruhisa liṃdumukhi kēḷidaḷu bara hē ḷeṃdarātana hogisidaru hokkanu satīsabheya
ಹೊಳೆವ ಕಂಗಳ ಕಾಂತಿಗಳ ಥಳ ಥಳಿಪ ವದನಪ್ರಭೆಯ ರತ್ನಾ ವಳಿಯ ಬಹುವಿಧ ರಶ್ಮಿಗಳ ಲಾವಣ್ಯ ಲಹರಿಗಳ ಎಳೆನಗೆಯ ಸುಲಿಪಲ್ಲ ಮುಕ್ತಾ ವಳಿಯ ನಖ ದೀಧಿತಿಯ ಬೆಳಗಿನ ಬಳಗವೆನೆ ಬಾಲಕಿಯರಿದ್ದರು ಸತಿಯ ಬಳಸಿನಲಿ
hoḷeva kaṃgaḷa kāṃtigaḷa thaḷa thaḷipa vadanaprabheya ratnā vaḷiya bahuvidha raśmigaḷa lāvaṇya laharigaḷa eḷenageya sulipalla muktā vaḷiya nakha dīdhitiya beḷagina baḷagavene bālakiyariddaru satiya baḷasinali
ಗಿಳಿಯ ಮೆಲು ನುಡಿಗಳ ವಿನೋದದಿ ಕೆಲರು ವೀಣಾಧ್ವನಿಯ ರಹಿಯಲಿ ಕೆಲರು ಸರಸ ಸುಗಂಧ ಸಂಗೀತದ ಸಮಾಧಿಯಲಿ ಕೆಲರು ನೆತ್ತದಲಮಳ ಮುಕ್ತಾ ವಳಿಯ ಚೆಲುವಿನ ಚದುರೆಯರು ಕಂ ಗೊಳಿಸಿತಬಲೆಯ ಮಣಿಯ ಮಂಚದ ಸುತ್ತುವಳೆಯದಲಿ
giḷiya melu nuḍigaḷa vinōdadi kelaru vīṇādhvaniya rahiyali kelaru sarasa sugaṃdha saṃgītada samādhiyali kelaru nettadalamaḷa muktā vaḷiya celuvina cadureyaru kaṃ goḷisitabaleya maṇiya maṃcada suttuvaḷeyadali
ಸಕಲ ಶಕ್ತಿಪರೀತ ವಿಮಳಾಂ ಬಿಕೆಯವೋಲ್ ವರಮಂತ್ರ ದೇವೀ ನಿಕರ ಮಧ್ಯದಿ ಶೋಭಿಸುವ ಸಾವಿತ್ರಿಯಂದದಲಿ ವಿಕಟರಶ್ಮಿ ನಿಬದ್ಧ ರತ್ನ ಪ್ರಕರ ಮಧ್ಯದ ಕೌಸ್ತುಭದವಲ್ ಚಕಿತ ಬಾಲಮೃಗಾಕ್ಷಿ ಮೆರೆದಳು ಯುವತಿ ಮಧ್ಯದಲಿ
sakala śaktiparīta vimaḷāṃ bikeyavōl varamaṃtra dēvī nikara madhyadi śōbhisuva sāvitriyaṃdadali vikaṭaraśmi nibaddha ratna prakara madhyada kaustubhadaval cakita bālamr̥gākṣi meredaḷu yuvati madhyadali
ಸುತ್ತಲೆಸೆಯ ವಿಳಾಸಿನೀಜನ ಹತ್ತು ಸಾವಿರ ನಡುವೆ ಕಂಡನು ಮತ್ತ ಕಾಶಿನಿಯನು ಪತಿವ್ರತೆಯರ ಶಿರೋಮಣಿಯ ಹತ್ತಿರೈತರಲಂಜಿದನು ತ ನ್ನುತ್ತ ಮಾಂಗಕೆ ಕರಯುಗವ ಚಾ ಚುತ್ತ ಬಿನ್ನಹ ಮಾಡಿದನು ಪಾಂಚಾಲನಂದನೆಗೆ
suttaleseya viḷāsinījana hattu sāvira naḍuve kaṃḍanu matta kāśiniyanu pativrateyara śirōmaṇiya hattiraitaralaṃjidanu ta nnutta māṃgake karayugava cā cutta binnaha māḍidanu pāṃcālanaṃdanege
ತಾಯೆ ಬಿನ್ನಹವಿಂದು ನಿಮ್ಮಯ ರಾಯ ಸೋತನು ಜೂಜಿನಲಿ ಕುರು ರಾಯ ಗೆಲಿದನು ಕೋಶವನು ಗಜತುರಗ ರಥಸಹಿತ ನೋಯಲಾಗದು ಹಲವು ಮಾತೇ ನಾ ಯುಧಿಷ್ಠಿರ ನೃಪತಿ ಸೋತನು ತಾಯೆ ಭೀಮಾರ್ಜುನ ನಕುಲ ಸಹದೇವ ನೀವ್ಸಹಿತ
tāye binnahaviṃdu nimmaya rāya sōtanu jūjinali kuru rāya gelidanu kōśavanu gajaturaga rathasahita nōyalāgadu halavu mātē nā yudhiṣṭhira nr̥pati sōtanu tāye bhīmārjuna nakula sahadēva nīvsahita
ಅರಳಿದಂಬುಜ ವನಕೆ ಮಂಜಿನ ಸರಿಯು ಸುರಿವಂದದಲಿ ಸುಗ್ಗಿಯ ಸಿರಿಯ ಹೊಸ ಬೆಳುದಿಂಗಳನು ಬಲುಮುಗಿಲು ಕವಿವಂತೆ ಚರನ ಬಿನ್ನಹಕರಸಿ ಮೊದಲಾ ಗಿರೆ ಸಮಸ್ತ ಸಖೀಜನದ ಮುಖ ಸರಸಿರುಹ ಬಾಡಿದವು ಮುಸುಕಿತು ಮೌನಮಯಜಲಧಿ
araḷidaṃbuja vanake maṃjina sariyu surivaṃdadali suggiya siriya hosa beḷudiṃgaḷanu balumugilu kavivaṃte carana binnahakarasi modalā gire samasta sakhījanada mukha sarasiruha bāḍidavu musukitu maunamayajaladhi
ದೂತ ಹೇಳೈ ತಂದೆ ಜೂಜನ ಜಾತರಿಪುವಾಡಿದನೆ ಸೋತನೆ ಕೈತವದ ಬಲೆಗಾರರವದಿರು ಶಕುನಿ ಕೌರವರು ದ್ಯೂತದಲಿ ಮುನ್ನೇನನೊಡ್ಡಿದ ಸೋತನೇನನು ಶಿವಶಿವಾ ನಿ ರ್ಧೂತಕಿಲ್ಬಿಷನರಸನೆಂದಳು ದ್ರೌಪದಾದೇವಿ
dūta hēḷai taṃde jūjana jātaripuvāḍidane sōtane kaitavada balegāraravadiru śakuni kauravaru dyūtadali munnēnanoḍḍida sōtanēnanu śivaśivā ni rdhūtakilbiṣanarasaneṃdaḷu draupadādēvi
ತಾಗಿದುದಲಾ ನಾರದಾದ್ಯರ ನಾಗತವನರುಹಿದರು ಹಿಂದೆ ವಿ ಯೋಗವಾಯಿತೆ ಲಕ್ಷ್ಮಿಗಿಂದ್ರಪ್ರಸ್ಥ ಪುರವರದ ಹೋಗಲದು ಮುನ್ನೇನನೊಡ್ಡಿದ ನೀಗಿದನು ಗಡ ತನ್ನನೆಂತಿದ ರಾಗು ಹೋಗೇನೆಂದು ನುಡಿದಳು ಪ್ರಾತಿಕಾಮಿಕನ
tāgidudalā nāradādyara nāgatavanaruhidaru hiṃde vi yōgavāyite lakṣmigiṃdraprastha puravarada hōgaladu munnēnanoḍḍida nīgidanu gaḍa tannaneṃtida rāgu hōgēneṃdu nuḍidaḷu prātikāmikana
ಮೊದಲಲರ್ಥವ ಹೆಸರುಗೊಂಡೊ ಡ್ಡಿದನು ಸೋತನು ಮರಳೆ ಮಗುಳೊ ಡ್ಡಿದನು ಹೇರಾಳದಲಿ ಧನವನು ಕರಿಘಟಾವಳಿಯ ಕುದುರೆ ರಥ ನಿಮ್ಮಡಿಯ ಮೇಳದ ಸುದತಿಯರನೊಡ್ಡಿದನು ಸೋತನು ತುದಿಯಲನುಜರನೊಡ್ಡಿ ಸೋತನು ತಾಯೆ ಕೇಳೆಂದ
modalalarthava hesarugoṃḍo ḍḍidanu sōtanu maraḷe maguḷo ḍḍidanu hērāḷadali dhanavanu karighaṭāvaḷiya kudure ratha nimmaḍiya mēḷada sudatiyaranoḍḍidanu sōtanu tudiyalanujaranoḍḍi sōtanu tāye kēḷeṃda
ಬಳಿಕ ತನ್ನನೆ ಸೋತನಲ್ಲಿಂ ಬಳಿಕ ನಿಮ್ಮಡಿಗಳಿಗೆ ಬಂದುದು ಖಳರು ಶಕುನಿ ಸುಯೋಧನರು ನೀವಾಗಳೆಂದಿರಲೆ ಅಳುಕಬೇಡಿನ್ನೇನು ಭೂಪತಿ ತಿಲಕ ತನ್ನನು ಮುನ್ನ ಸೋಲಿದು ಬಳಿಕ ತನ್ನನು ಸೋತನೇ ಹೇಳೆಂದಳಿಂದುಮುಖಿ
baḷika tannane sōtanalliṃ baḷika nimmaḍigaḷige baṃdudu khaḷaru śakuni suyōdhanaru nīvāgaḷeṃdirale aḷukabēḍinnēnu bhūpati tilaka tannanu munna sōlidu baḷika tannanu sōtanē hēḷeṃdaḷiṃdumukhi
ಅಹುದು ತನ್ನನು ಮುನ್ನ ಸೋತನು ಮಹಿಳೆಗೊಡ್ಡಿದೆನೆಂದು ನಿಮ್ಮನು ಮಹಿಪ ಸೋತನು ತಾಯೆ ಬಿಜಯಂಗೈಯ್ಯಬೇಹುದೆನೆ ವಿಹಿತವಿದು ಮಾನುಷವೆ ದೈವದ ಕುಹಕವೈಸಲೆ ಮಗನೆ ತಾನೇ ಬಹೆನು ನೀ ಹೋಗೊಮ್ಮೆ ಹೇಳೀ ಮಾತನಾ ಸಭೆಗೆ
ahudu tannanu munna sōtanu mahiḷegoḍḍideneṃdu nimmanu mahipa sōtanu tāye bijayaṃgaiyyabēhudene vihitavidu mānuṣave daivada kuhakavaisale magane tānē bahenu nī hōgomme hēḷī mātanā sabhege
ಮುನ್ನ ತನ್ನನು ಸೋತ ಬಳಿಕಿನೊ ಳೆನ್ನ ಸೋತರೆ ಸಲುವುದೇ ಸಂ ಪನ್ನ ವಿಮಲಜ್ಞಾನರರಿದೀ ಪ್ರಶ್ನೆಗುತ್ತರವ ಎನ್ನ ಮೆಚ್ಚಿಸಿಕೊಡಲಿ ತಾ ಬಹೆ ನೆನ್ನು ಹೋಗೆನಲವನು ಭಯದಲಿ ತನ್ನೊಳಗೆ ನಡುಗುತ್ತ ಬಂದನು ಕೌರವನ ಸಭೆಗೆ
munna tannanu sōta baḷikino ḷenna sōtare saluvudē saṃ panna vimalajñānararidī praśneguttarava enna meccisikoḍali tā bahe nennu hōgenalavanu bhayadali tannoḷage naḍugutta baṃdanu kauravana sabhege
ಜೀಯ ದೇವಿಯರೆಂದ ಮಾತಿದು ರಾಯ ಮುನ್ನವೆ ತನ್ನ ಸೋತಬು ಜಾಯತಾಕ್ಷಿಯ ಬಳಿಕ ಸೋತರೆ ಧರ್ಮಸೂಕ್ಷ್ಮದಲಿ ರಾಯಸಭೆಯಲಿ ಹಿರಿಯರರಿದದ ರಾಯತವನರುಹಿದರೆ ಬಹೆನೆಂ ದಾ ಯುವತಿ ಬಿನ್ನಹ ಮಾಡಿದಳೆಂದು ಕೈ ಮುಗಿದ
jīya dēviyareṃda mātidu rāya munnave tanna sōtabu jāyatākṣiya baḷika sōtare dharmasūkṣmadali rāyasabheyali hiriyararidada rāyatavanaruhidare baheneṃ dā yuvati binnaha māḍidaḷeṃdu kai mugida
ರಾಯ ಸೋತನು ತನ್ನ ನಾವ ನ್ಯಾಯದಲಿ ತಹುದಿಲ್ಲ ತೊತ್ತಿರ ಲಾಯದಲಿ ಕೂಡುವೆವು ಕರೆಯೆನಲಿವನು ಗರ ಹೊಡೆದು ವಾಯುಸುತನಂಜಿಸುವನೆಂದೀ ನಾಯಿ ಬೆದರಿದನಕಟ ದೂತನ ಬಾಯ ನೋಡಾಯೆನುತ ಮಿಗೆ ಗರ್ಜಿಸಿದ ಕುರುರಾಯ
rāya sōtanu tanna nāva nyāyadali tahudilla tottira lāyadali kūḍuvevu kareyenalivanu gara hoḍedu vāyusutanaṃjisuvaneṃdī nāyi bedaridanakaṭa dūtana bāya nōḍāyenuta mige garjisida kururāya
ತಮ್ಮ ಬಾರೈ ಹೋಗು ದಿಟ ನೀ ನಮ್ಮುವರೆ ಹಿಡಿದೆಳೆದು ತಾ ನೃಪ ರೆಮ್ಮ ಕಿಂಕರರೈವರಿದ್ದೇನ ಮಾಡುವರು ತಮ್ಮ ಕರ್ಮವಿಪಾಕ ಗತಿ ನೆರೆ ತಮ್ಮನೇ ಕೆಡಿಸುವುದು ಧರ್ಮವಿ ದೆಮ್ಮ ಕಾರಣವಲ್ಲ ನೀ ಹೋಗೆಂದನಾ ಭೂಪ
tamma bārai hōgu diṭa nī nammuvare hiḍideḷedu tā nr̥pa remma kiṃkararaivariddēna māḍuvaru tamma karmavipāka gati nere tammanē keḍisuvudu dharmavi demma kāraṇavalla nī hōgeṃdanā bhūpa
ಗಾಳಿಯಳ್ಳೆಯನಿರಿಯಲಗ್ನಿ ಜ್ವಾಲೆಯಲಿ ತಟ್ಟಿಯವೆ ಕಡುಹಿನ ಕಾಳಕೂಟದ ನದಿಗೆ ನಂಜಿನ ಹೊನಲು ಬೆರೆಸಿದರೆ ವಾಳೆಯವೆ ದುಶ್ಶಾಸನನು ಜಗ ದೂಳಿಗದ ದುರುದುಂಬಿ ಕುರುಪತಿ ಮೇಲೆ ನೇಮಿಸಲುಚಿತಗೈವನೆ ಭೂಪ ಕೇಳೆಂದ
gāḷiyaḷḷeyaniriyalagni jvāleyali taṭṭiyave kaḍuhina kāḷakūṭada nadige naṃjina honalu beresidare vāḷeyave duśśāsananu jaga dūḷigada duruduṃbi kurupati mēle nēmisalucitagaivane bhūpa kēḷeṃda
ಹರಿದನವ ಬೀದಿಯಲಿ ಬಿಡುದಲೆ ವೆರೆಸಿ ಸತಿಯರಮನೆಯ ಬಾಗಿಲ ಚರರು ತಡೆದರೆ ಮೆಟ್ಟಿದನು ತಿವಿದನು ಕಠಾರಿಯಲಿ ತರುಣಿಯರು ಕಂಡಂಜಿ ಹೊಕ್ಕರು ಸರಸಿಜಾಕ್ಷಿಯ ಮರೆಯನೀ ಖಳ ನುರವಣಿಸಿದನು ರಾಹು ತಾರಾಧಿಪನ ತಗುಳ್ವಂತೆ
haridanava bīdiyali biḍudale veresi satiyaramaneya bāgila cararu taḍedare meṭṭidanu tividanu kaṭhāriyali taruṇiyaru kaṃḍaṃji hokkaru sarasijākṣiya mareyanī khaḷa nuravaṇisidanu rāhu tārādhipana taguḷvaṃte
ಬಂದನಿವನಬುಜಾಕ್ಷಿಯಿದಿರಲಿ ನಿಂದನೆಲೆಗೇ ಗರುವತನವಿದು ಹಿಂದೆ ಸಲುವುದು ಸಲ್ಲದಿದು ಕುರುರಾಜ ಭವನದಲಿ ಇಂದು ಮರೆನಡೆ ನಮ್ಮ ತೊತ್ತಿರ ಮುಂದೆ ಮೆರೆ ನಡೆ ಮಂಚದಿಂದಿಳಿ ಯೆಂದು ಜರೆದನು ಕೌರವಾನುಜನಾ ಮಹಾಸತಿಯ
baṃdanivanabujākṣiyidirali niṃdanelegē garuvatanavidu hiṃde saluvudu salladidu kururāja bhavanadali iṃdu marenaḍe namma tottira muṃde mere naḍe maṃcadiṃdiḷi yeṃdu jaredanu kauravānujanā mahāsatiya
ಜನಪನನುಜನು ನೀನೆನಗೆ ಮೈ ದುನನಲೇ ತಪ್ಪೇನು ಯಮ ನಂ ದನನು ಸೋಲಲಿ ನನ್ನ ಪ್ರಶ್ನೆಗೆ ಕೊಡಲಿ ಮರುಮಾತ ಅನುಜ ಕೇಳೈ ಪುಷ್ಪವತಿ ತಾ ನೆನಗೆ ರಾಜಸಭಾ ಪ್ರವೇಶವ ದನುಚಿತವಲೇ ಹೇಳೆನಲು ಖಳರಾಯ ಖತಿಗೊಂಡ
janapananujanu nīnenage mai dunanalē tappēnu yama naṃ dananu sōlali nanna praśnege koḍali marumāta anuja kēḷai puṣpavati tā nenage rājasabhā pravēśava danucitavalē hēḷenalu khaḷarāya khatigoṃḍa
ಎಲ್ಲಿಯದು ದುಷ್ಪ್ರಶ್ನೆ ಮರು ಮಾ ತೆಲ್ಲಿಯದು ನೀ ಪುಷ್ಪವತಿಯಾ ಗಲ್ಲಿ ಫಲವತಿಯಾಗು ನಡೆ ಕುರುರಾಯ ಭವನದಲಿ ಖುಲ್ಲರೈವರು ತಮ್ಮ ಸೋತರು ಬಲ್ಲವಿಕೆಯುಚಿತವನು ಮೌಳಿಯ ನಲ್ಲಿ ತೋರಾಯೆನುತ ತಪ್ಪಿದನಹಹ ಸಿರಿಮುಡಿಗೆ
elliyadu duṣpraśne maru mā telliyadu nī puṣpavatiyā galli phalavatiyāgu naḍe kururāya bhavanadali khullaraivaru tamma sōtaru ballavikeyucitavanu mauḷiya nalli tōrāyenuta tappidanahaha sirimuḍige
ಆ ಮಹೀಶಕ್ರತುವರದೊಳು ದ್ದಾಮ ಮುನಿಜನರಚಿತ ಮಂತ್ರ ಸ್ತೋಮ ಪುಷ್ಕಲ ಪೂತ ಪುಣ್ಯಜಲಾಭಿಷೇಚನದ ಶ್ರೀಮುಡಿಗೆ ಕೈಯಿಕ್ಕಿದನು ವರ ಕಾಮಿನೀ ನಿಕುರುಂಬವಕಟಕ ಕಾ ಮಹಾಸತಿ ಶಿವ ಶಿವಾಯೆಂದೊದರಿತಲ್ಲಲ್ಲಿ
ā mahīśakratuvaradoḷu ddāma munijanaracita maṃtra stōma puṣkala pūta puṇyajalābhiṣēcanada śrīmuḍige kaiyikkidanu vara kāminī nikuruṃbavakaṭaka kā mahāsati śiva śivāyeṃdodaritallalli
ಕೆದರಿದವು ಸೂಸಕದ ಮುತ್ತುಗ ಳುದುರಿದವು ಸೀಮಂತ ಮಣಿಗಳ ಹೊದರು ಮುರಿದವು ಕರ್ಣಪೂರದ ರತ್ನದೋಲೆಗಳು ಸುದತಿಯರು ಗೋಳಿಡುತ ಬರೆ ಮೆ ಟ್ಟಿದನು ತಿವಿದನು ಕಾಲಲಡಬಿ ದ್ದುದು ಸಖೀಜನವೆಳೆದು ಝಾಡಿಸಿ ಜರೆದು ಝೋಂಪಿಸಿದ
kedaridavu sūsakada muttuga ḷuduridavu sīmaṃta maṇigaḷa hodaru muridavu karṇapūrada ratnadōlegaḷu sudatiyaru gōḷiḍuta bare me ṭṭidanu tividanu kālalaḍabi ddudu sakhījanaveḷedu jhāḍisi jaredu jhōṃpisida
ಮಣಿದ ತನುವಿನ ವೇಗಗತಿಯಲಿ ಝಣಝಣಿಪ ನೂಪುರದ ರವ ಕಂ ಕಣದ ದನಿ ಕೇವಣದ ಹೊಂಗಿರುಗೆಜ್ಜೆಗಳ ರಭಸ ಗಣಿಕೆಯರ ಕೆಳದಿಯರ ಹಾಹಾ ರಣಿತಕಿವು ನೆರವಾದವಾ ಪ ಟ್ಟಣವ ತುಂಬಿತು ಶೋಕವದನೇನೆಂಬೆನದ್ಭುತವ
maṇida tanuvina vēgagatiyali jhaṇajhaṇipa nūpurada rava kaṃ kaṇada dani kēvaṇada hoṃgirugejjegaḷa rabhasa gaṇikeyara keḷadiyara hāhā raṇitakivu neravādavā pa ṭṭaṇava tuṃbitu śōkavadanēneṃbenadbhutava
ಹಡಪಗಿತಿಯರು ಸೀಗುರಿಯ ಕ ನ್ನಡಿಯವರು ಮೇಳದ ವಿನೋದದ ನುಡಿನಗೆಯ ಸಖಿಯರು ಪಸಾಯ್ತೆಯರಾಪ್ತ ದಾಸಿಯರು ಒಡನೆ ಬಂದರು ಕಂಬನಿಯ ಬಿಡು ಮುಡಿಯ ಹಾಹಾ ರವದ ರಭಸದ ನಡೆಯಲಖಿಳ ವಿಲಾಸಿನಿಯರು ಸಹಸ್ರ ಸಂಖ್ಯೆಯಲಿ
haḍapagitiyaru sīguriya ka nnaḍiyavaru mēḷada vinōdada nuḍinageya sakhiyaru pasāyteyarāpta dāsiyaru oḍane baṃdaru kaṃbaniya biḍu muḍiya hāhā ravada rabhasada naḍeyalakhiḷa vilāsiniyaru sahasra saṃkhyeyali
ನಗೆಮೊಗವನೊಮ್ಮೆಯು ಪಯೋಧರ ಯುಗಳ ನೋಡುವ ಸಖ್ಯದಲಿ ದೃಗು ಯುಗಳ ಜಲಬಿಂದುಗಳಿಗಾ ಜಲಬಿಂದು ಸುರಿವಂತೆ ಒಗುವ ಖಂಡಿತ ಹಾರ ಮುಕ್ತಾ ಳಿಗಳು ಮೆರೆದವು ಮಾನಿನಿಯರು ಬ್ಬೆಗದ ರೋದನ ರೌರವದೊಳೈತಂದಳಿಂದುಮುಖಿ
nagemogavanommeyu payōdhara yugaḷa nōḍuva sakhyadali dr̥gu yugaḷa jalabiṃdugaḷigā jalabiṃdu surivaṃte oguva khaṃḍita hāra muktā ḷigaḷu meredavu māniniyaru bbegada rōdana rauravadoḷaitaṃdaḷiṃdumukhi
ಬೆದರುಗಂಗಳ ಬಿಟ್ಟ ಮಂಡೆಯ ಹುದಿದ ಹಾಹಾರವದ ತೊಡಕಿದ ಪಡಯುಗದ ಮೇಲುದಿನ ಬೀದಿಯ ಧೂಳಿ ಧೂಸರದ ವದನಕಮಲದ ಖಳನ ವಾಮಾಂ ಗದಲಿ ಬಾಗಿದ ತನುಲತೆಯ ವರ ಸುದತಿ ಬಂದಳು ರಾಜಸಭೆಗೆ ನೃಪಾಲ ಕೇಳೆಂದ
bedarugaṃgaḷa biṭṭa maṃḍeya hudida hāhāravada toḍakida paḍayugada mēludina bīdiya dhūḷi dhūsarada vadanakamalada khaḷana vāmāṃ gadali bāgida tanulateya vara sudati baṃdaḷu rājasabhege nr̥pāla kēḷeṃda
ಅಹಹ ಪಾಂಡವ ರಾಯ ಪಟ್ಟದ ಮಹಿಳೆಗೀ ವಿಧಿಯೇ ಮಹಾಕ್ರತು ವಿಹಿತಮಂತ್ರಜಲಾಭಿಷಿಕ್ತ ಕಚಾಗ್ರಕಿದು ವಿಧಿಯೆ ಮಿಹಿರಬಿಂಬವ ಕಾಣದೀ ನೃಪ ಮಹಿಳೆಗಿದು ವಿಧಿಯೇ ವಿಧಾತನ ಕುಹಕವೈಸಲೆ ಶಿವಶಿವಾಯೆಂದರು ಸಭಾಜನರು
ahaha pāṃḍava rāya paṭṭada mahiḷegī vidhiyē mahākratu vihitamaṃtrajalābhiṣikta kacāgrakidu vidhiye mihirabiṃbava kāṇadī nr̥pa mahiḷegidu vidhiyē vidhātana kuhakavaisale śivaśivāyeṃdaru sabhājanaru
ತುಳುಕಿದವು ಕಂಬನಿಗಳಾ ಸಭೆ ಯೊಳಗೆ ದುಶ್ಶಾಸನ ಸುಯೋಧನ ಖಳಶಿರೋಮಣಿ ಶಕುನಿ ಕರ್ಣ ಜಯದ್ರಥಾದ್ಯರಿಗೆ ತಳಿತುದದ್ಭುತಹರ್ಷ ಮುಖಮಂ ಡಲಕೆ ಸೀರೆಯನವುಚಿ ನಯನೋ ದ್ಗಳಿತ ಜಲಧಾರೆಯಲಿ ನೆನೆದುದು ಸಭೆ ವಿಷಾದದಲಿ
tuḷukidavu kaṃbanigaḷā sabhe yoḷage duśśāsana suyōdhana khaḷaśirōmaṇi śakuni karṇa jayadrathādyarige taḷitudadbhutaharṣa mukhamaṃ ḍalake sīreyanavuci nayanō dgaḷita jaladhāreyali nenedudu sabhe viṣādadali
ವ್ಯಾಕುಲವನಿದ ಕಾಂಬ ಕಣ್ಣುಗ ಳೇಕೆ ರಾಜ ಕುಮಾರಿಯೀಕೆಯ ಶೋಕ ರಸವನು ಕುಡಿವ ಕರ್ಣದ್ವಯವಿದೇಕೆಮಗೆ ಏಕೆ ವಿಧಿ ನಿರ್ಮಿಸಿದನೋ ನಾ ವೇಕೆ ಸಪ್ರಾಣರೊ ಶಿವಾಯೆಂ ದಾ ಕುಠಾರರ ಬೈದುದಾ ಸಭೆಯಲಿ ಬುಧವ್ರಾತ
vyākulavanida kāṃba kaṇṇuga ḷēke rāja kumāriyīkeya śōka rasavanu kuḍiva karṇadvayavidēkemage ēke vidhi nirmisidanō nā vēke saprāṇaro śivāyeṃ dā kuṭhārara baidudā sabheyali budhavrāta
ವನಜಮುಖಿಯಕ್ಕೆಯನು ದುಶ್ಶಾ ಸನನ ದಿರ್ನೀತಿಯನು ದುರ್ಯೋ ಧನನ ದುಶ್ಚೇಷ್ಟೆಯನು ಕಂಡೀ ಭೀಮ ಫಲುಗುಣರು ಮನದೊಳಗೆ ಕೌರವನ ಕರುಳನು ತನಿ ರಕುತದಲಿ ಕುದಿಸಿದರು ವಾ ಜನಿಕ ಕರ್ಮಕ್ರಿಯೆಗೆ ನೆನೆವುದನರಿದನಾ ಭೂಪ
vanajamukhiyakkeyanu duśśā sanana dirnītiyanu duryō dhanana duścēṣṭeyanu kaṃḍī bhīma phaluguṇaru manadoḷage kauravana karuḷanu tani rakutadali kudisidaru vā janika karmakriyege nenevudanaridanā bhūpa
ಹುಬ್ಬಿನಲಿ ನಿಲಿಸಿದನು ಪವನಜ ನುಬ್ಬ ಟೆಯನರ್ಜುನನ ವಿಕೃತಿಯ ನಿಬ್ಬರಾಲಾಪವನು ಧರ್ಮರಹಸ್ಯ ನಿಷ್ಠೆಯಲಿ ಹಬ್ಬಿದುದು ಭೀಷ್ಮಂಗೆ ಶೋಕದ ಮಬ್ಬು ಗುರು ಗೌತಮರು ವಿದುರನು ಸರ್ಬ ಖೇದಾಂಬುಧಿಯೊಳದ್ದರು ಭೂಪ ಕೇಳೆಂದ
hubbinali nilisidanu pavanaja nubba ṭeyanarjunana vikr̥tiya nibbarālāpavanu dharmarahasya niṣṭheyali habbidudu bhīṣmaṃge śōkada mabbu guru gautamaru viduranu sarba khēdāṃbudhiyoḷaddaru bhūpa kēḷeṃda
ಅರಸ ಕೇಳೈ ಬಳಿಕ ಹಸ್ತಿನ ಪುರದೊಳಾಯ್ತಿಯಾ ವಾರ್ತೆ ಬಳಿಕೀ ಪುರದ ಬಹಿರೋದ್ಯಾನ ವೀಧಿಗಳೊಳಗೆ ಹರಹಿನಲಿ ಅರಸಿಯರು ಸೌಭದ್ರನವರೈ ವರ ಕುಮಾರರು ಮಂತ್ರಿಗಳು ಮು ಖ್ಯರು ಪಸಾಯ್ತರು ಕೇಳಿದರು ಪಾಂಡವ ಪರಾಜಯವ
arasa kēḷai baḷika hastina puradoḷāytiyā vārte baḷikī purada bahirōdyāna vīdhigaḷoḷage harahinali arasiyaru saubhadranavarai vara kumāraru maṃtrigaḷu mu khyaru pasāytaru kēḷidaru pāṃḍava parājayava
ಬಂದರಿದಿರೊಳು ಕೌರವರ ಕಡೆ ನಂದನರ ಕಡೆ ಯಾವುದೆನೆ ಸಾ ವಂದದಲಿ ಹೊಯ್ದಾಡಿ ಹಿಡಿವೆವು ಸುರರ ಸೂಳೆಯರ ಎಂದು ತಮ್ಮೊಳು ನೆರೆದು ಸೇನಾ ವೃಂದ ಸಜ್ಜೋಡಿನಲಿ ಕಾಳಗ ಕಂದು ಮೋಹರಿಸಿದರು ಹಸ್ತಿನಪುರದ ಬಾಹೆಯಲಿ
baṃdaridiroḷu kauravara kaḍe naṃdanara kaḍe yāvudene sā vaṃdadali hoydāḍi hiḍivevu surara sūḷeyara eṃdu tammoḷu neredu sēnā vr̥ṃda sajjōḍinali kāḷaga kaṃdu mōharisidaru hastinapurada bāheyali
ಇತ್ತಲಬಲೆಯ ವಿಧಿಯ ಕೇಳತಿ ಮತ್ತನೈ ಧೃತರಾಷ್ಟ್ರ ಸುತನೀ ಮತ್ತಗಜಗಾಮಿನಿಯ ಬಿಡಿಸಿದನವನ ಕೈಯಿಂದ ನೆತ್ತ ಸೋತುದು ನಿನ್ನನೊಡ್ಡಿ ನೃ ಪೋತ್ತಮನು ಸಲೆ ಮಾರ ಮಾರಿದ ನತ್ತಡೇನಹುದೆಲೆಗೆ ತೊತ್ತಿರ ಹಿಂಡ ಹೊಗುಯೆಂದ
ittalabaleya vidhiya kēḷati mattanai dhr̥tarāṣṭra sutanī mattagajagāminiya biḍisidanavana kaiyiṃda netta sōtudu ninnanoḍḍi nr̥ pōttamanu sale māra mārida nattaḍēnahudelege tottira hiṃḍa hoguyeṃda
ಲಲಿತ ಬುದ್ಧಿಗಳೀಗ ನೋಡಿರಿ ಲಲನೆಯನು ಸತಿ ದಿಟ್ಟೆಯೆನ್ನದಿ ರೆಲೆ ಸುಯೋಧನ ರಾಜ ಸಭೆಯಿದು ದೋಷರಹಿತವಲೆ ಗೆಲವಿದೆಂತುಟೊ ತನ್ನ ಸೋಲಿದು ಬಳಿಕ ಸೋತರೆ ಧರ್ಮಗತಿಯನು ತಿಳಿದು ಹೇಳಲಿ ತತ್ಸಭಾ ಸದರೆಂದಳಿಂದುಮುಖಿ
lalita buddhigaḷīga nōḍiri lalaneyanu sati diṭṭeyennadi rele suyōdhana rāja sabheyidu dōṣarahitavale gelavideṃtuṭo tanna sōlidu baḷika sōtare dharmagatiyanu tiḷidu hēḷali tatsabhā sadareṃdaḷiṃdumukhi
ಹಿರಿಯರಿಲ್ಲದ ಸಭೆ ಮನುಷ್ಯರ ನೆರವಿಯದು ಸಭೆಯಲ್ಲ ಮೂರ್ಖರು ಹಿರಿಯರಲ್ಲ ಯಥಾರ್ಥಭಾಷಣಭೀತಚೇತನರು ಹಿರಿಯರಿದೆ ಸಾಮಾಜಿಕರು ಸ ಚ್ಚರಿತರಿದೆಲಾ ಸ್ತ್ರೀಮತವನು ತ್ತರಿಸಲಾಗದೆ ಧರ್ಮಶಾಸ್ತ್ರದೊಳೆಂದಳಿಂದುಮುಖಿ
hiriyarillada sabhe manuṣyara neraviyadu sabheyalla mūrkharu hiriyaralla yathārthabhāṣaṇabhītacētanaru hiriyaride sāmājikaru sa ccaritaridelā strīmatavanu ttarisalāgade dharmaśāstradoḷeṃdaḷiṃdumukhi
ಚಪಳೆ ಫಡ ಹೋಗಿವಳು ಹಲಬರ ನುಪಚರಿಸುವುದನರಿಯಲಾದುದು ದ್ರುಪದನಂದನೆ ನಡೆ ವಿಳಾಸಿನಿಯರ ವಿಧಾನದಲಿ ಕೃಪಣನೇ ಕುರುರಾಯ ನಿನಗಿ ನ್ನಪದೆಸೆಯ ಹೊಲೆ ಹೋಯ್ತು ರಾಯನ ವಿಪುಳ ವಿಭವವನನುಭವಿಸು ನಡೆಯೆಂದನಾ ಕರ್ಣ
capaḷe phaḍa hōgivaḷu halabara nupacarisuvudanariyalādudu drupadanaṃdane naḍe viḷāsiniyara vidhānadali kr̥paṇanē kururāya ninagi nnapadeseya hole hōytu rāyana vipuḷa vibhavavananubhavisu naḍeyeṃdanā karṇa
ಅಹುದೆಲೇ ಬಳಿಕೇನು ದಾಸ್ಯಕೆ ವಿಹಿತವಾಯಿತು ನಿನ್ನ ತನುವಿನ ಲಹ ಮನೋವ್ಯಥೆಯೇಕೆ ರಾಣೀವಾಸವೀಧಿಯಲಿ ಮಹಿಳೆಯರ ಸಖ್ಯದಲಿ ಸೌಭಖ್ಯದ ರಹಣಿಗೊಡಬಡು ವಾರಕದಲತಿ ಬಹಳ ಭೂಷಣ ಭಾರದಲಿ ಮೆರೆಯೆಂದನಾ ಶಕುನಿ
ahudelē baḷikēnu dāsyake vihitavāyitu ninna tanuvina laha manōvyatheyēke rāṇīvāsavīdhiyali mahiḷeyara sakhyadali saubhakhyada rahaṇigoḍabaḍu vārakadalati bahaḷa bhūṣaṇa bhāradali mereyeṃdanā śakuni
ವಾರಕದ ವಿವಿಧಾಭರಣ ಶೃಂ ಗಾರವಂತಿರಲೀಕೆಯಾಡಿದ ಸಾರ ಭಾಷೆಗೆ ನೆನೆಯರೇ ನಿರ್ವಾಹ ಸಂಗತಿಯ ಓರೆಪೋರೆಯೊಳಾಡಿ ಧರ್ಮದ ಧಾರಣೆಯ ಧಟ್ಟಿಸುವದಿದು ಗಂ ಭೀರರಿಗೆ ಗರುವಾಯಿಯೇ ಸುಡಲೆಂದನಾ ಭೀಷ್ಮ
vārakada vividhābharaṇa śr̥ṃ gāravaṃtiralīkeyāḍida sāra bhāṣege neneyarē nirvāha saṃgatiya ōrepōreyoḷāḍi dharmada dhāraṇeya dhaṭṭisuvadidu gaṃ bhīrarige garuvāyiyē suḍaleṃdanā bhīṣma
ತುಟ್ಟಿಸಲಿ ಧನ ಮಾನಗರ್ವದ ಬೆಟ್ಟ ಮುರಿಯಲಿ ಜೀವವೊಡಲನು ಬಿಟ್ಟು ಹಿಂಗಲಿ ಬಿಡೆನು ಸತ್ಯವನೆಂದು ಯಮಸೂನು ನೆಟ್ಟನೇ ನಿಶ್ಬೈಸಿದುದನೊಡ ಹುಟ್ಟಿದರು ಮನ್ನಿಸಿದರಲ್ಲದೆ ಹುಟ್ಟಿ ಹೊಂದಲು ಗತಿಯಹುದೆ ನಿನಗೆಂದನಾ ಭೀಷ್ಮ
tuṭṭisali dhana mānagarvada beṭṭa muriyali jīvavoḍalanu biṭṭu hiṃgali biḍenu satyavaneṃdu yamasūnu neṭṭanē niśbaisidudanoḍa huṭṭidaru mannisidarallade huṭṭi hoṃdalu gatiyahude ninageṃdanā bhīṣma
ಅಳಿಯದಂತಿರೆ ಸತ್ಯಧರ್ಮದ ನೆಳಲು ನೆಗ್ಗದೆ ಕೀರ್ತಿವಧುವಿನ ಸುಳಿವು ನೋಯದೆ ತಳಿರು ಬಾಡದೆ ಧೈರ್ಯ ಸುರಕುಜದ ಹಳಿವಿಗಳುಕದೆ ವೈರಿವರ್ಗದ ಕಳಕಳಕೆ ಮೈಗೊಡದೆ ನೃಪ ನಿ ರ್ಮಳದಲಿದ್ದರೆ ನಿನಗೆ ಸದರವೆಯೆಂದನಾ ಭೀಷ್ಮ
aḷiyadaṃtire satyadharmada neḷalu neggade kīrtivadhuvina suḷivu nōyade taḷiru bāḍade dhairya surakujada haḷivigaḷukade vairivargada kaḷakaḷake maigoḍade nr̥pa ni rmaḷadaliddare ninage sadaraveyeṃdanā bhīṣma
ಸೋತ ಬಳಿಕಿವರೆಮ್ಮ ವಶವ ಖ್ಯಾತಿಯಲಿ ನಾವ್ ನಡೆವರಲ್ಲ ವೃ ಥಾತಿರೇಕದಿ ನೀವು ಘೂರ್ಮಿಸಲಂಜುವೆವೆ ನಿಮಗೆ ಈ ತಳೋದರಿ ತೊತ್ತಿರಲಿ ಸಂ ಘಾತವಾಗಲಿ ಸಾಕು ನಿಮ್ಮಯ ಮಾತೆನುತ ಕುರುರಾಯ ಜರೆದನು ಭೀಷ್ಮ ಗುರು ಕೃಪರ
sōta baḷikivaremma vaśava khyātiyali nāv naḍevaralla vr̥ thātirēkadi nīvu ghūrmisalaṃjuveve nimage ī taḷōdari tottirali saṃ ghātavāgali sāku nimmaya mātenuta kururāya jaredanu bhīṣma guru kr̥para
ನೊಂದನೀ ಮಾತಿನಲಿ ಮಾರುತ ನಂದನನು ಸಹದೇವನನು ಕರೆ ದೆಂದನಗ್ನಿಯ ತಾ ಯುಧಿಷ್ಠಿರನೃಪನ ತೋಳುಗಳ ಮಂದಿ ನೋಡಲು ಸುಡುವೆನೇಳೇ ಳೆಂದು ಜರೆದರೆ ಹಿಡಿದುಮಾದ್ರೀ ನಂದನನ ನಿಲಿಸಿದನು ಫಲುಗುಣ ನುಡಿದನನಿಲಜನ
noṃdanī mātinali māruta naṃdananu sahadēvananu kare deṃdanagniya tā yudhiṣṭhiranr̥pana tōḷugaḷa maṃdi nōḍalu suḍuvenēḷē ḷeṃdu jaredare hiḍidumādrī naṃdanana nilisidanu phaluguṇa nuḍidananilajana
ಏನಿದೇನೈ ಭೀಮ ನಿಲು ಯಮ ಸೂನು ಶಿವ ಶಿವ ಗುರುವಲಾ ನಮ ಗೀ ನಿತಂಬಿನಿಯಾದಿಯಾದ ಸಮಸ್ತ ವಸ್ತುಗಳು ಈ ನರೇಂದ್ರಗೆ ಸರಿಯೆ ಕುಂತೀ ಸೂನುವೇ ಪ್ರಾಣಾರ್ಥದಿಂದ ಸ ಘಾನನೈ ನಮಗೀತನೇ ಗತಿಯೆಂದನಾ ಪಾರ್ಥ
ēnidēnai bhīma nilu yama sūnu śiva śiva guruvalā nama gī nitaṃbiniyādiyāda samasta vastugaḷu ī narēṃdrage sariye kuṃtī sūnuvē prāṇārthadiṃda sa ghānanai namagītanē gatiyeṃdanā pārtha
ಹಿಂಗಿ ಹೋಗಲಿ ತನುವನಸು ಸ ಪ್ತಾಂಗ ಬೇಯಲಿ ಖೋಡಿ ಮನದಲಿ ಹಿಂಗುವದೆ ಹರಹರ ಧನಂಜಯ ಕಾಕ ಬಳಸಿದೆಲ ಅಂಗನೆಯ ಮೇಲೊಡ್ಡವೇ ಲಲಿ ತಾಂಗಿಗೀ ವಿಧಿಯೇಕೆ ನವಗೀ ಭಂಗ ಸಾಲದೆ ಸುಡುವೆನಾದೊಡೆ ತನ್ನ ತೋಳುಗಳ
hiṃgi hōgali tanuvanasu sa ptāṃga bēyali khōḍi manadali hiṃguvade harahara dhanaṃjaya kāka baḷasidela aṃganeya mēloḍḍavē lali tāṃgigī vidhiyēke navagī bhaṃga sālade suḍuvenādoḍe tanna tōḷugaḷa
ಈಯವಸ್ಥೆಗೆ ತಂದ ಕೌರವ ನಾಯಿಗಳ ನಿಟ್ಟೆಲುವ ಮುರಿದು ನ ವಾಯಿಯಲಿ ಘಟ್ಟಿಸದೆ ಕೊಬ್ಬಿದ ತನ್ನ ತೋಳುಗಳ ವಾಯುಸಖನಲಿ ಸುಡುವೆನೀಗಳೆ ಬೀಯವಾಗಲಿ ದೇಹವಾಚಂ ದ್ರಾಯತವೆ ಎಂದೊಡನೊಡನೆ ಮಿಡುಕಿದನು ಕಲಿಭೀಮ
īyavasthege taṃda kaurava nāyigaḷa niṭṭeluva muridu na vāyiyali ghaṭṭisade kobbida tanna tōḷugaḷa vāyusakhanali suḍuvenīgaḷe bīyavāgali dēhavācaṃ drāyatave eṃdoḍanoḍane miḍukidanu kalibhīma
ಅಕಟ ಧರ್ಮಜ ಭೀಮ ಫಲುಗುಣ ನಕುಲ ಸಹದೇವಾದ್ಯರಿರ ಬಾ ಲಕಿಯನೊಪ್ಪಿಸಿ ಕೊಟ್ಟಿರೇ ಮೃತ್ಯುವಿನ ತಾಳಿಗೆಗೆ ವಿಕಳರಾದಿರೆ ನಿಲ್ಲಿ ನೀವೀ ಗಕುಟಿಲರಲಾ ಭೀಷ್ಮ ಗುರು ಬಾ ಹ್ಲಿಕ ಕೃಪಾದಿಗಳುತ್ತರವ ಕೊಡಿಯೆಂದಳಬುಜಾಕ್ಷಿ
akaṭa dharmaja bhīma phaluguṇa nakula sahadēvādyarira bā lakiyanoppisi koṭṭirē mr̥tyuvina tāḷigege vikaḷarādire nilli nīvī gakuṭilaralā bhīṣma guru bā hlika kr̥pādigaḷuttarava koḍiyeṃdaḷabujākṣi
ಕಂಗಳಿಂದನುಯೋಗ ನಿಜ ಹ ಸ್ತಾಂಗುಲಿಯೊಳುತ್ತರ ಲಸದ್ಭ್ರೂ ಭಂಗದಲಿ ಸಂದೇಹ ಮುಖ ವಿಕೃತಿಯಲಿ ದುರ್ನೀತಿ ಇಂಗಿತದಲಾಂಗಿಕದ ಭಾವಾ ಭಂಗ ಪರಿಯನು ಯೋಗಮುಕ್ತ ನ ಯಂಗಳಲಿ ತಿಳಿದುಸುರದಿರ್ದುದು ಸಭೆ ಸುಭೀತಿಯಲಿ
kaṃgaḷiṃdanuyōga nija ha stāṃguliyoḷuttara lasadbhrū bhaṃgadali saṃdēha mukha vikr̥tiyali durnīti iṃgitadalāṃgikada bhāvā bhaṃga pariyanu yōgamukta na yaṃgaḷali tiḷidusuradirdudu sabhe subhītiyali
ಅರಿದು ಮೌನವೊ ಮೇಣು ಮಾನಿನಿ ಯೊರಲುತಿರಲೆಂದಾದುಪೇಕ್ಷೆಯೊ ಮುರಿದು ನುಡಿವುದಸಾಧ್ಯವೋ ಮೇಣಾವುದಿದರೊಳಗೆ ಅರಿಯಿರೇ ಸಮವರ್ತಿ ದೂತನ ಮುರುಕವನು ನೀವೇಕೆ ನಿಮ್ಮನು ಮರೆದಿರೆಂದು ವಿಕರ್ಣ ಜರೆದನು ತತ್ಸಭಾಸದರ
aridu maunavo mēṇu mānini yoralutiraleṃdādupēkṣeyo muridu nuḍivudasādhyavō mēṇāvudidaroḷage ariyirē samavarti dūtana murukavanu nīvēke nimmanu maredireṃdu vikarṇa jaredanu tatsabhāsadara
ಹುಸಿವಚನ ಪೌರುಷ್ಯ ಲಲನಾ ವಿಷಯ ಮೃಗತೃಷ್ಣಾಪಿಪಾಸಾ ವ್ಯಸನಿ ಬಲ್ಲನೆ ಧರ್ಮತತ್ವರಹಸ್ಯ ನಿಶ್ಚಯವ ಉಸುರಲಮ್ಮಿರೆ ವೈದಿಕದ ತನಿ ರಸದ ಸವಿ ನಿವಗಲ್ಲದಾರಿಗೆ ಬಸಿದು ಬೀಳ್ವುದು ಭೀಷ್ಮಯೆಂದು ವಿಕರ್ಣ ಗರ್ಜಿಸಿದ
husivacana pauruṣya lalanā viṣaya mr̥gatr̥ṣṇāpipāsā vyasani ballane dharmatatvarahasya niścayava usuralammire vaidikada tani rasada savi nivagalladārige basidu bīḷvudu bhīṣmayeṃdu vikarṇa garjisida
ತನ್ನ ಸೋತಾಗಲೆ ಮಹೀಪತಿ ಯನ್ಯನಾದನು ಸತಿಗೆ ತನ್ನಿಂ ಮುನ್ನ ಸೋತರೆ ತನ್ನ ಧನವೈಸಲೆ ವಿಚಾರಿಸಲು ಅನ್ಯನನ್ಯಳ ಸೋತ ಗಡ ತಾ ತನ್ನ ಧನವೆಂದರಸ ಶಕುನಿಯ ಬಿನ್ನಣಕೆ ಬೆಳ್ಳಾದನೆಂದು ವಿಕರ್ಣ ಖತಿಗೊಂಡ
tanna sōtāgale mahīpati yanyanādanu satige tanniṃ munna sōtare tanna dhanavaisale vicārisalu anyananyaḷa sōta gaḍa tā tanna dhanaveṃdarasa śakuniya binnaṇake beḷḷādaneṃdu vikarṇa khatigoṃḍa
ಫಡ ವಿಕಾರವೆ ನಮ್ಮೊಡನೆ ಬಾ ಯ್ಬಡಿಕತನವೇ ಕುರು ಮಹೀಪತಿ ಯೊಡನೆ ಹುಟ್ಟಿದೆಯಾದ ಕಾರಣ ಬಿಟ್ಟೆವೀಸದಲಿ ನುಡಿದರೇ ಭೀಷ್ಮಾದಿಗಳು ನೀ ನೊಡಬಡಿಸಲೆಂತರಿವೆ ಧರ್ಮದ ಕಡೆ ಮೊದಲ ಕೈವಾರ ನಿನಗೇಕೆಂದನಾ ಕರ್ಣ
phaḍa vikārave nammoḍane bā ybaḍikatanavē kuru mahīpati yoḍane huṭṭideyāda kāraṇa biṭṭevīsadali nuḍidarē bhīṣmādigaḷu nī noḍabaḍisaleṃtarive dharmada kaḍe modala kaivāra ninagēkeṃdanā karṇa
ಏಕಪತಿ ಬಹುಸತಿಯರೆಂಬುದು ಲೋಕ ಪದ್ಧತಿಯಾದುದದು ತಾ ನೇಕಸತಿ ಬಹುಪತಿಗಳಿದು ವೈದಿಕ ವಿರುದ್ಧವಲೆ ಲೌಕಿಕವ್ಯವಹಿತದ ಕರ್ಮವ ನೀ ಕುಮಾರ್ಗಿಗಳಲ್ಲಿ ಕಂಡೆವು ನೀ ಕುರುವ್ರಜದೊಳಗೆ ಜನಿಸೆ ವಿಕರ್ಣ ಹೋಗೆಂದ
ēkapati bahusatiyareṃbudu lōka paddhatiyādudadu tā nēkasati bahupatigaḷidu vaidika viruddhavale laukikavyavahitada karmava nī kumārgigaḷalli kaṃḍevu nī kuruvrajadoḷage janise vikarṇa hōgeṃda
ಅಹುದು ಕರ್ಣನ ನುಡಿ ವಿಕರ್ಣನು ಬಹುವಚನ ಪಂಡಿತನು ಬಾಹಿರ ನಹುದಲೇ ಕುರುರಾಜ ವಂಶದೊಳುದಿಸಿ ಫಲವೇನು ಅಹಿತಹಿತ ವಿಜ್ಞಾನಿಯಲ್ಲದ ಬೃಹದುದರ ಕಿಂಕರನ ನುಡಿ ಕಿಂ ಗಹನವೇ ಕಲಿಕರ್ಣಯೆಂದನು ನಗುತ ಕುರುರಾಯ
ahudu karṇana nuḍi vikarṇanu bahuvacana paṃḍitanu bāhira nahudalē kururāja vaṃśadoḷudisi phalavēnu ahitahita vijñāniyallada br̥hadudara kiṃkarana nuḍi kiṃ gahanavē kalikarṇayeṃdanu naguta kururāya
ಹಾರ ಪದಕ ಕಿರೀಟ ಮಣಿ ಕೇ ಯೂರ ಕರ್ಣಾಭರಣವೆಂಬಿವು ಭಾರವಲ್ಲಾ ತೆಗೆಯ ಹೇಳ್ ದಾಕ್ಷಿಣ್ಯವೇನಿದಕೆ ನಾರಿಗೀ ವಸ್ತ್ರಾಭರಣ ಶೃಂ ಗಾರವೇಕಿನ್ನಿವನು ತೆಗೆ ಕೈ ವಾರವಿದಕೇಕೆಂದು ದುಶ್ಶಾಸನಗೆ ನೇಮಿಸಿದ
hāra padaka kirīṭa maṇi kē yūra karṇābharaṇaveṃbivu bhāravallā tegeya hēḷ dākṣiṇyavēnidake nārigī vastrābharaṇa śr̥ṃ gāravēkinnivanu tege kai vāravidakēkeṃdu duśśāsanage nēmisida
ತೆಗೆದು ಬಿಸುಟರು ಹಾರ ಪದಕಾ ದಿಗಳ ನಿವರೈವರು ದುಕೂಲವ ನುಗಿದು ಹಾಯ್ಕಿದರಿದ್ದರಿವರೊಂದೊಂದು ವಸ್ತ್ರದಲಿ ಹೊಗೆಮೊಗದ ಕಿಡಿಗಣ್ಣ ಕೆಮ್ಮೀ ಸೆಗಳ ಗುಜುರಿನ ಜುಂಜುಗೇಶದ ವಿಗಡನೆದ್ದನು ಬಂದು ಹಿಡಿದನು ದ್ರೌಪದಿಯ ಸೆರಗ
tegedu bisuṭaru hāra padakā digaḷa nivaraivaru dukūlava nugidu hāykidariddarivaroṃdoṃdu vastradali hogemogada kiḍigaṇṇa kemmī segaḷa gujurina juṃjugēśada vigaḍaneddanu baṃdu hiḍidanu draupadiya seraga
ಮುರುಹಿದರು ಮುಸುಡುಗಳ ಮಿಗೆ ನೀ ರೊರೆವ ಕಂಗಳಲಕಟಕಟ ನಿ ಷ್ಠುರವಿದೇಕಪಕೀರ್ತಿಯೇಕನುಚಿತವಿದೇಕೆನುತ ಕರಗಿದರು ಕಂದಿದರು ಮಮ್ಮಲ ಮರುಗಿದರು ಭೀಷ್ಮಾದಿಗಳು ಜ ರ್ಝರಿತರಾದರು ತಡೆಯಲಾರದೆ ಖಳನ ದುಷ್ಕೃತವ
muruhidaru musuḍugaḷa mige nī roreva kaṃgaḷalakaṭakaṭa ni ṣṭhuravidēkapakīrtiyēkanucitavidēkenuta karagidaru kaṃdidaru mammala marugidaru bhīṣmādigaḷu ja rjharitarādaru taḍeyalārade khaḷana duṣkr̥tava
ಅಳುಕಿದನೆ ಸುಡಲವನ ಮೇಲುದ ಸೆಳೆದನುನ್ನತ ಕುಚವ ನಳಿತೋ ಳ್ಗಳಲಿ ಮುಚ್ಚಿದಳಬಲೆ ಬೆಚ್ಚಿದಳವನ ನಿಷ್ಠುರಕೆ ಕಳವಳಿಸಿದಳು ಬೆರಲಿನಲಿ ದೃಗು ಜಲವ ಬಿದುರುತ ನೋಡಿದಳು ನೃಪ ತಿಲಕನನು ಬೀಮಾರ್ಜುನರ ಮಾದ್ರೀಕುಮಾರಕರ
aḷukidane suḍalavana mēluda seḷedanunnata kucava naḷitō ḷgaḷali muccidaḷabale beccidaḷavana niṣṭhurake kaḷavaḷisidaḷu beralinali dr̥gu jalava biduruta nōḍidaḷu nr̥pa tilakananu bīmārjunara mādrīkumārakara
ಮುರಿದವನಿಬರ ಮೋರೆ ಮಹಿಪನ ಕೊರಲ ಕೊಂಕಿನಲಿದ್ದರಾ ಸೋ ದರರು ಸಾರವನಲ್ಲಿ ಕಾಣದೆ ಭೀಷ್ಮ ಗುರು ಕೃಪರ ಮರಳಿ ನೋಡಿದಳ ಕಟ ಗಂಗಾ ವರಕುಮಾರ ದ್ರೋಣ ಕೃಪರೀ ಸೆರಗ ಬಿಡಿಸಿರೆ ತಂದೆಗಳಿರೆಂದೊರಲಿದಳು ತರಳೆ
muridavanibara mōre mahipana korala koṃkinaliddarā sō dararu sāravanalli kāṇade bhīṣma guru kr̥para maraḷi nōḍidaḷa kaṭa gaṃgā varakumāra drōṇa kr̥parī seraga biḍisire taṃdegaḷireṃdoralidaḷu taraḷe
ಕ್ರೂರನಿವ ದುಶ್ಶಾಸನನು ಗಾಂ ಧಾರಿ ಬಿಡಿಸೌ ಸೆರಗ ಸೊಸೆಯ ಲ್ಲಾರು ಹೇಳೌ ತಂಗಿಯಲ್ಲಾ ನಿಮಗೆ ಭಾನುಮತಿ ವೀರ ಸೈಂಧವನರಸಿ ರಾಜ ಕು ಮಾರಿ ನೀ ನಾದಿನಿಯಲಾ ಖಳ ರೌರವದೊಳದ್ದುವನು ಬಿಡಿಸೆಂದೊರಲಿದಳು ತರಳೆ
krūraniva duśśāsananu gāṃ dhāri biḍisau seraga soseya llāru hēḷau taṃgiyallā nimage bhānumati vīra saiṃdhavanarasi rāja ku māri nī nādiniyalā khaḷa rauravadoḷadduvanu biḍiseṃdoralidaḷu taraḷe
ಎಲೆ ವಿಲಾಸಿನಿಯರಿರ ಭೂಪನ ತಿಳಿಹಿರೌ ತಾಯ್ಗಳಿರ ನೀವಿಂ ದೆಲೆ ಪಸಾಯ್ತೆ ಯರಿರ ಸಹೋದರಿಯೆಂದು ಕೌರವನ ತಿಳುಹಿರೌ ಶರಣಾಗತರ ತಾ ನುಳುಹಿ ಕೊಂಬುದು ಧರ್ಮವಕಟಾ ಕಲುಹೃದಯರೌ ನೀವೆನುತ ಹಲುಬಿದಳು ತರಳಾಕ್ಷಿ
ele vilāsiniyarira bhūpana tiḷihirau tāygaḷira nīviṃ dele pasāyte yarira sahōdariyeṃdu kauravana tiḷuhirau śaraṇāgatara tā nuḷuhi koṃbudu dharmavakaṭā kaluhr̥dayarau nīvenuta halubidaḷu taraḷākṣi
ಧಾರುಣೀಪತಿಗಳಿರ ರಾಜ ಕು ಮಾರರಿರ ಮಂತ್ರಿಗಳಿರಾ ಪರಿ ವಾರಕಿದು ಪಂಥವೆ ವಿಚಾರಿಸಿ ನಿರಪರಾಧಿಯನು ನಾರಿಯೊಬ್ಬಳನಕಟ ಸಭೆಯಲಿ ಸೀರೆಯುಡಿಯುರ್ಚುವರು ಕೆಟ್ಟೆನು ಕಾರಣಿಕರಿಲ್ಲಾ ಶಿವಾಯೆಂದೊರಲಿದಳು ತರಳೆ
dhāruṇīpatigaḷira rāja ku mārarira maṃtrigaḷirā pari vārakidu paṃthave vicārisi niraparādhiyanu nāriyobbaḷanakaṭa sabheyali sīreyuḍiyurcuvaru keṭṭenu kāraṇikarillā śivāyeṃdoralidaḷu taraḷe
ಪತಿಗಳೆನ್ನನು ಮಾರಿ ಧರ್ಮ ಸ್ಥಿತಿಯ ಕೊಂಡರು ಭೀಷ್ಮ ಮೊದಲಾ ದತಿರಥರು ಪರಹಿತವ ಬಿಸುಟರು ವ್ಯರ್ಥ ಭೀತಿಯಲಿ ಸುತನ ಸಿರಿ ಕಡುಸೊಗಸಲಾ ಭೂ ಪತಿಗೆ ಗಾಂಧಾರಿಗೆ ಅನಾಥೆಗೆ ಗತಿಯ ಕಾಣೆನು ಶಿವಶಿವಾಯೆಂದೊರಲಿದಳು ತರಳೆ
patigaḷennanu māri dharma sthitiya koṃḍaru bhīṣma modalā datiratharu parahitava bisuṭaru vyartha bhītiyali sutana siri kaḍusogasalā bhū patige gāṃdhārige anāthege gatiya kāṇenu śivaśivāyeṃdoralidaḷu taraḷe
ಮೈದೆಗೆದವೀ ಪ್ರಾಣವಾಯುಗ ಳೈದು ಬಳಿಕೆನಗಾರು ಮರುಗುವ ರೈದೆತನವೊಂದುಳಿಯಲುಳಿವುದು ಮಿಕ್ಕ ಮಹಿಮೆಗಳು ಬೈದು ಫಲವೇನಿನ್ನು ನಿನ್ನಯ ಮೈದುನರ ಮರುಳಾಟಕೆನ್ನನು ಕಾಯ್ದು ಕೊಳ್ಳೈ ಕೃಷ್ಣಯೆಂದೊರಲಿದಳು ಲಲಿತಾಂಗಿ
maidegedavī prāṇavāyuga ḷaidu baḷikenagāru maruguva raidetanavoṃduḷiyaluḷivudu mikka mahimegaḷu baidu phalavēninnu ninnaya maidunara maruḷāṭakennanu kāydu koḷḷai kr̥ṣṇayeṃdoralidaḷu lalitāṃgi
ಸುಲಿವರೂರೊಳಗುಟ್ಟ ಸೀರೆಯ ನೆಲೆ ಮುರಾಂತಕ ರಕ್ಷಿಸೈ ಶಶಿ ಕಳೆಗೆ ಸದರವೆ ರಾಹು ರಚಿಸಿದ ತುಟಿಯ ತೋಟಿಯದು ಸೆಳೆವರಸುವನು ಖಳರು ಸೀರೆಯ ಸುಲಿದರುಳಿಯೆನು ಕೃಷ್ಣ ಕರುಣಾ ಜಲಧಿಯೇ ಕೈಗಾಯಬೇಕೆಂದೊರಳಿದಳು ತರಳೆ
sulivarūroḷaguṭṭa sīreya nele murāṃtaka rakṣisai śaśi kaḷege sadarave rāhu racisida tuṭiya tōṭiyadu seḷevarasuvanu khaḷaru sīreya sulidaruḷiyenu kr̥ṣṇa karuṇā jaladhiyē kaigāyabēkeṃdoraḷidaḷu taraḷe
ಗತಿವಿಹೀನರಿಗಕಟ ನೀನೇ ಗತಿಯಲೈ ಗೋವಿಂದ ರಿಪು ಬಾ ಧಿತರಿಗಬಲರಿಗಾರ್ತರಿಗೆ ನೀ ಪರಮ ಬಂಧುವಲ ಸತಿ ಪಶು ದ್ವಿಜ ಬಾಧೆಯಲಿ ಜೀ ವಿತವ ತೊರೆವರು ಗರುವರದು ಹಿಂ ಗಿತೆ ಸುಯೋಧನ ಸಭೆಯೊಳೆಂದೊರಲಿದಳು ಲಲಿತಾಂಗಿ
gativihīnarigakaṭa nīnē gatiyalai gōviṃda ripu bā dhitarigabalarigārtarige nī parama baṃdhuvala sati paśu dvija bādheyali jī vitava torevaru garuvaradu hiṃ gite suyōdhana sabheyoḷeṃdoralidaḷu lalitāṃgi
ಕಾಯಿದೈ ಕರುಣದಲಿ ದಿವಿಜರ ತಾಯ ಪರಿಭವವನು ಪಯೋಧಿಯ ಹಾಯಿದಮರಾರಿಗಳ ಖಂಡಿಸಿ ತಲೆಯ ಚೆಂಡಾಡಿ ಕಾಯಿದೈ ಜಾನಕಿಯನೆನ್ನನು ಕಾಯಬೇಹುದು ಹೆಣ್ಣ ಹರಿಬಕೆ ನೋಯಬಲ್ಲರೆ ಕೆಲಬರೆಂದೊರಲಿದಳು ತರಳಾಕ್ಷಿ
kāyidai karuṇadali divijara tāya paribhavavanu payōdhiya hāyidamarārigaḷa khaṃḍisi taleya ceṃḍāḍi kāyidai jānakiyanennanu kāyabēhudu heṇṇa haribake nōyaballare kelabareṃdoralidaḷu taraḷākṣi
ವೇದವಧುಗಳ ಕಾಯ್ದೆಲಾ ತಮ ಬಾಧೆಯಲಿ ಖಳನಿಂದ ಧರಣಿ ಮ ಹೋದಧಿಯಲಕ್ಕಾಡಿದರೆ ದಾಡೆಯಲಿ ದಾನವನ ಕೋದು ಹಾಕೀ ಭೂತ ಧಾತ್ರಿಯ ಕಾದೆಲಾ ಕಾರುಣ್ಯಸಿಂಧುವೆ ಮೇದಿನೀಪತಿ ಮನ್ನಿಸೆಂದೊರಲಿದಳು ತರಳಾಕ್ಷಿ
vēdavadhugaḷa kāydelā tama bādheyali khaḷaniṃda dharaṇi ma hōdadhiyalakkāḍidare dāḍeyali dānavana kōdu hākī bhūta dhātriya kādelā kāruṇyasiṃdhuve mēdinīpati manniseṃdoralidaḷu taraḷākṣi
ರಕ್ಷಿಸಿದೆ ಯೋಗಿಣಿಗೆ ಬೆದರುವ ದಕ್ಷಸುತೆಯನು ಕೋಪಶಿಖಿ ತಿಮಿ ರಾಕ್ಷನಾ ಜಮದಗ್ನಿ ಮುನಿಪನ ನುಡಿಯನನುಕರಿಸಿ ರಕ್ಷಿಸಿದೆ ರೇಣುಕೆಯನೆನ್ನನು ಪೇಕ್ಷಿಸದಿರೈ ಕರುಣದಲಿ ಕಮ ಲಾಕ್ಷ ಬಿಡಿಸಾ ಸೆರಗನೆಂದೊರಲಿದಳುಹರಿಣಾಕ್ಷಿ
rakṣiside yōgiṇige bedaruva dakṣasuteyanu kōpaśikhi timi rākṣanā jamadagni munipana nuḍiyananukarisi rakṣiside rēṇukeyanennanu pēkṣisadirai karuṇadali kama lākṣa biḍisā seraganeṃdoralidaḷuhariṇākṣi
ದೇವಕೀದೇವಿಯರ ಸೆರೆಯನು ದೇವ ಕೃಪೆಯಲಿ ಬಿಡಿಸಿದೈ ಕರು ಣಾವಲಂಬದಿ ಕಳಚಿದೈ ಹದಿನಾರು ಸಾವಿರದ ದೇವಕನ್ಯಾ ಬಂಧನವನಭಿ ಭಾವಕರ ಕೌರವರ ಭಂಗಿಸಿ ದೇವ ಬಿಡಿಸೈ ಸೆರಗನೆಂದೊರಲಿದಳು ಪಾಂಚಾಲೆ
dēvakīdēviyara sereyanu dēva kr̥peyali biḍisidai karu ṇāvalaṃbadi kaḷacidai hadināru sāvirada dēvakanyā baṃdhanavanabhi bhāvakara kauravara bhaṃgisi dēva biḍisai seraganeṃdoralidaḷu pāṃcāle
ಶಿಶು ವಧೆಗೆ ಸೀವರಿಸದಸುರನ ಬಸುರ ಹೂಮಾಲೆಯನು ನೀ ತುರು ಬಿಸಿದೆಲಾ ನಖರಾಜಿಗಬಲನ ಕಾಯ್ದು ಕರುಣದಲಿ ಶಿಶುವನಯ್ಯಂಗಿತ್ತು ಜಲಧಿಯ ಮುಸುಕನುಗಿದತಿ ಕರುಣಿಯೇ ಹೆಂ ಗುಸಿನ ಹರಿಬಕೆ ಕೃಪೆಯ ಮಾಡೆಂದೊರಲಿದಳು ತರಳೆ
śiśu vadhege sīvarisadasurana basura hūmāleyanu nī turu bisidelā nakharājigabalana kāydu karuṇadali śiśuvanayyaṃgittu jaladhiya musukanugidati karuṇiyē heṃ gusina haribake kr̥peya māḍeṃdoralidaḷu taraḷe
ತುರುವ ನುಂಗಿದ ಫಣಿಯ ಗಂಟಲ ಮುರಿದು ಕಾಯ್ದೈ ಗೋವುಗಳ ಗಿರಿ ಮರೆಯಲಿಂದ್ರನ ಖಾತಿಗಳುಕದೆ ಕಾಯ್ದೆ ಗೋಕುಲವ ಮೆರೆದೆಲಾ ಕೃಪೆಯಲಿ ಗಜೇಂದ್ರನ ಮುರಿಯಲೀಯದೆ ಖಳನು ಸೋಕಿದ ಸೆರಗ ಬಿಡಿಸೈ ಕೃಷ್ಣಯೆಂದಳು ಪಾಂಡವರ ರಾಣಿ
turuva nuṃgida phaṇiya gaṃṭala muridu kāydai gōvugaḷa giri mareyaliṃdrana khātigaḷukade kāyde gōkulava meredelā kr̥peyali gajēṃdrana muriyalīyade khaḷanu sōkida seraga biḍisai kr̥ṣṇayeṃdaḷu pāṃḍavara rāṇi
ಒದೆದೊಡೊಲಿದವರುಂಟೆ ಬೈದೊಡೆ ಪದವನಿತ್ತವರುಂಟೆ ಕರುಣಾ ಸ್ಪದರನಾ ಕೇಳ್ದರಿಯೆನೇ ಕಮಲಾಸನಾದ್ಯರಲಿ ಪದವ ಸೋಂಕಿದ ಮೂಹೊರಡು ತಿ ದ್ದಿದುದು ಗಡ ಹೆಂಗುಸಿನ ಹೇರಾ ಳದ ಕೃಪಾಳುವೆ ಕೃಷ್ಣ ಸಲಹೆಂದೊರಲಿದಳು ತರಳೆ
odedoḍolidavaruṃṭe baidoḍe padavanittavaruṃṭe karuṇā spadaranā kēḷdariyenē kamalāsanādyarali padava sōṃkida mūhoraḍu ti ddidudu gaḍa heṃgusina hērā ḷada kr̥pāḷuve kr̥ṣṇa salaheṃdoralidaḷu taraḷe
ಸೊಕ್ಕಿದಂತಕ ದೂತರನು ಸದೆ ದೊಕ್ಕಲಿಕ್ಕಿಯಜಾಮಿಳನ ಹಿಂ ದಿಕ್ಕಿಕೊಂಡೆಯಲೈ ದುರಾತ್ಮಕ್ಷತ್ರಬಂಧದಲಿ ಸೊಕ್ಕಿದರು ಕೌರವರು ಖಳರಿಗೆ ಸಿಕ್ಕಿದೆನು ನಿನಗಲ್ಲದಾರಿಗೆ ಕಕ್ಕುಲಿತೆಬಡುವೆನು ಮುರಾಂತಕಯೆಂದಳಿಂದುಮುಖಿ
sokkidaṃtaka dūtaranu sade dokkalikkiyajāmiḷana hiṃ dikkikoṃḍeyalai durātmakṣatrabaṃdhadali sokkidaru kauravaru khaḷarige sikkidenu ninagalladārige kakkulitebaḍuvenu murāṃtakayeṃdaḷiṃdumukhi
ಚರಣ ಭಜಕರ ಮಾನ ಹಾನಿಯ ಹರಿಬವಾರದು ಕೃಷ್ಣ ನಾಮ ಸ್ಮರಣ ಧನಿಕರಿಗುಂಟೆ ಘಲ್ಲಣೆ ಘೋರ ಪಾತಕದ ಪರಮ ಭಕ್ತ ಕುಟುಂಬಕನು ನೀ ಕರುಣಿಯಲ್ಲದೊಡೀ ಕುಟುಂಬಕೆ ಶರಣದಾರೈ ಕೃಷ್ಣ ಸಲಹೆಂದೊರಲಿದಳು ತರಳೆ
caraṇa bhajakara māna hāniya haribavāradu kr̥ṣṇa nāma smaraṇa dhanikariguṃṭe ghallaṇe ghōra pātakada parama bhakta kuṭuṃbakanu nī karuṇiyalladoḍī kuṭuṃbake śaraṇadārai kr̥ṣṇa salaheṃdoralidaḷu taraḷe
ನಾಥರಿಲ್ಲದ ಶಿಶುಗಳಿಗೆ ನೀ ನಾಥನೈ ಗೋವಿಂದ ಸಲಹೈ ಯೂಥಪತಿಗಳು ಬಿಸುಟ ತುರಣಿಗೆ ಕೃಪೆಯ ನೀ ಮಾಡೈ ನಾಥರಿಲ್ಲೆನಗಿಂದು ದೀನಾ ನಾಥಬಾಂಧವ ನೀನಲೈ ವರ ಮೈಥಿಲೀಪತಿ ಮನ್ನಿಸೆಂದೊರಲಿದಳು ಮೃಗನಯನೆ
nātharillada śiśugaḷige nī nāthanai gōviṃda salahai yūthapatigaḷu bisuṭa turaṇige kr̥peya nī māḍai nātharillenagiṃdu dīnā nāthabāṃdhava nīnalai vara maithilīpati manniseṃdoralidaḷu mr̥ganayane
ಹೊಲಬುದಪ್ಪಿದ ಹುಲ್ಲೆ ಬೇಡನ ಬಲೆಗೆ ಬಿದ್ದಂತಾದೆನೈ ಬಲು ಹಳುವದಲಿ ತಾಯ್ಬಿಸುಟ ಶಿಶು ತಾನಾದೆನೆಲೆ ಹರಿಯೆ ಕೊಲುವವೈ ಕಾಗೆಗಳಕಟ ಕೋ ಗಿಲೆಯ ಮರಿಯನು ಕೃಷ್ಣ ಕರುಣಾ ಜಲಧಿಯೇ ಕೈಗಾಯಬೇಕೆಂದೊರಲಿದಳು ತರಳೆ
holabudappida hulle bēḍana balege biddaṃtādenai balu haḷuvadali tāybisuṭa śiśu tānādenele hariye koluvavai kāgegaḷakaṭa kō gileya mariyanu kr̥ṣṇa karuṇā jaladhiyē kaigāyabēkeṃdoralidaḷu taraḷe
ಅಕಟ ಹಂಸೆಯ ಮರಿಯ ಮೋದುವ ಬಕನ ತೆಗೆಸೈ ಗಿಡುಗನೆರಗುವ ಶುಕನ ಶೋಕನ ಮಾಣಿಸೈ ವಾಣಿಯವೆ ಭಕುತರಲಿ ಪ್ರಕಟಭೂತಗ್ರಹದ ಬಾಧೆಗೆ ವಿಕಳೆ ನಿನ್ನಯ ಬಿರುದ ತಡೆದೆನು ಭಕುತವತ್ಸಲನಹರೆ ಸಲಹೆಂದೊರಲಿದಳು ತರಳೆ
akaṭa haṃseya mariya mōduva bakana tegesai giḍuganeraguva śukana śōkana māṇisai vāṇiyave bhakutarali prakaṭabhūtagrahada bādhege vikaḷe ninnaya biruda taḍedenu bhakutavatsalanahare salaheṃdoralidaḷu taraḷe
ಆರಿಗೊರಲುವೆನೈ ಖಳಾಪ ಸ್ಮಾರವಿದೆ ಸೆರೆವಿಡಿದು ತನ್ನಸು ವಾರಿಗೆಯು ವೈರಾಗ್ಯ ಗಡ ಮತ್ಪ್ರಾಣ ವಿಭುಗಳಿಗೆ ಘೋರತರ ಭವದುರಿತತರುವಿನ ಬೇರ ಸುಡುವೀ ನಿನ್ನ ನಾಮಕೆ ನಾರಿಯಕ್ಕೆಯ ನಿಲಿಸಲೇನರಿದೆಂದಳಿಂದುಮುಖಿ
ārigoraluvenai khaḷāpa smāravide sereviḍidu tannasu vārigeyu vairāgya gaḍa matprāṇa vibhugaḷige ghōratara bhavaduritataruvina bēra suḍuvī ninna nāmake nāriyakkeya nilisalēnarideṃdaḷiṃdumukhi
ಕರುಣಿ ನೀ ಕಾರುಣ್ಯ ಪಾತ್ರದ ತರಳೆ ತಾ ದೀನಾರ್ತಿ ದುಃಖೋ ತ್ತರಣ ನೀ ದೀನಾರ್ತ ದುಃಖಿತೆಯಾನು ಜಗವರಿಯೆ ಪರಮ ಪಾಲಕ ನೀನೆ ಗತ್ಯಂ ತರದ ವಿಹ್ವಲೆ ತಾನಲಾ ನಿ ಷ್ಠುರವಿದೇನೈ ಕೃಷ್ಣಯೆಂದೊರಲಿದಳು ತರಳಾಕ್ಷಿ
karuṇi nī kāruṇya pātrada taraḷe tā dīnārti duḥkhō ttaraṇa nī dīnārta duḥkhiteyānu jagavariye parama pālaka nīne gatyaṃ tarada vihvale tānalā ni ṣṭhuravidēnai kr̥ṣṇayeṃdoralidaḷu taraḷākṣi
ಮರೆದೆನಭ್ಯುದಯಲಿ ನೀನೆಂ ದರಿವೆನಾಪತ್ತಿನಲಿ ಮದದಲಿ ಮುರುಕಿಸುವೆನುಬ್ಬಿನಲಿ ಕಳವಳಿಸುವೆನು ಖೋಡಿಯಲಿ ಅರಿಯದಜ್ಞರ ಗುಣವ ದೋಷನ ನರಸುವರೆ ನಿನ್ನಡಿಯ ಕೃಪೆಯನು ಮೆರೆಯಲಾಗದೆ ಕೃಷ್ಣಯೆಂದೊರಲಿದಳು ನಳಿನಾಕ್ಷಿ
maredenabhyudayali nīneṃ darivenāpattinali madadali murukisuvenubbinali kaḷavaḷisuvenu khōḍiyali ariyadajñara guṇava dōṣana narasuvare ninnaḍiya kr̥peyanu mereyalāgade kr̥ṣṇayeṃdoralidaḷu naḷinākṣi
ಋಷಿಗಳತಿ ತಾರ್ಕಿಕರು ಕರ್ಮ ವ್ಯಸನಿಗಳು ಕೋವಿದರು ಮಿಕ್ಕಿನ ವಿಷಯದೆರೆ ಮೀನುಗಳು ಮೂಢ ಮನುಷ್ಯರೆಂಬವರು ಒಸೆದು ನಿನ್ನವರೆಂದು ಬಗೆವರೆ ಬಸಿದು ಬೀಳುವ ಕೃಪೆಯ ನೀ ತೋ ರಿಸೆಯಿದೇನೈ ಕೃಷ್ಣಯೆಂದೊರಲಿದಳು ನಳಿನಾಕ್ಷಿ
r̥ṣigaḷati tārkikaru karma vyasanigaḷu kōvidaru mikkina viṣayadere mīnugaḷu mūḍha manuṣyareṃbavaru osedu ninnavareṃdu bagevare basidu bīḷuva kr̥peya nī tō riseyidēnai kr̥ṣṇayeṃdoralidaḷu naḷinākṣi
ತುಸು ಮೊದಲು ಚತುರಾಸ್ಯ ಪರಿಯಂ ತೆಸೆವುದೇ ಭುವನದಲಿ ಜೀವ ಪ್ರಸರವಿದ್ದುದು ದುಃಖಸೌಖ್ಯದ ತಾರತಮತೆಯಲಿ ಉಸುರು ಪಸರಣವಿಲ್ಲದೆನ್ನು ಬ್ಬಸದ ಭೀತಿಯ ಬೇಗೆ ಮಿಗೆ ದಾ ಹಿಸುವುದೈ ಕಾರುಣ್ಯ ನಿಧಿಯೆಂದೊರಲಿದಳು ತರಳೆ
tusu modalu caturāsya pariyaṃ tesevudē bhuvanadali jīva prasaraviddudu duḥkhasaukhyada tāratamateyali usuru pasaraṇavilladennu bbasada bhītiya bēge mige dā hisuvudai kāruṇya nidhiyeṃdoralidaḷu taraḷe
ನಂದಗೋಪ ಕುಮಾರ ಗೋಪೀ ವೃಂದ ವಲ್ಲಭ ದೈತ್ಯಮಥನ ಮು ಕುಂದ ಮುರಹರ ಭಕ್ತವತ್ಸಲ ಘನಕೃಪಾಜಲಧೆ ನೊಂದೆನೈ ನುಗ್ಗಾದೆನೈ ಗೋ ವಿಂದ ಕೃಪೆ ಮಾಡಕಟೆನುತ ಪೂ ರ್ಣೇಂದುಮುಖಿ ಹಲುಬಿದಳು ಬಲು ತೆರದಿಂದಲಚ್ಯುತನ
naṃdagōpa kumāra gōpī vr̥ṃda vallabha daityamathana mu kuṃda murahara bhaktavatsala ghanakr̥pājaladhe noṃdenai nuggādenai gō viṃda kr̥pe māḍakaṭenuta pū rṇēṃdumukhi halubidaḷu balu teradiṃdalacyutana
ಇತ್ತ ದ್ವಾರಾವತಿಯೊಳಗೆ ದೇ ವೋತ್ತಮನು ಭಕುತರಿಗೆ ತನ್ನನು ತೆತ್ತು ಬದುಕುವನೆಂಬ ಪರಮವ್ರತದ ನಿಷ್ಠೆಯನು ಚಿತ್ತದಲಿ ನೆಲೆಗೊಳಿಸಿ ರುಕ್ಮಿಣಿ ಸತ್ಯಭಾಮೆಯರೊಳು ಸಮೇಳದ ನೆತ್ತ ಸಾರಿಯ ಹರಹಿ ಹಾಸಂಗಿಯನು ದಾಳಿಸುತ
itta dvārāvatiyoḷage dē vōttamanu bhakutarige tannanu tettu badukuvaneṃba paramavratada niṣṭheyanu cittadali nelegoḷisi rukmiṇi satyabhāmeyaroḷu samēḷada netta sāriya harahi hāsaṃgiyanu dāḷisuta
ಕೇಳಿದನು ಮುರವೈರಿ ತನ್ನಯ ಮೇಳದೈವರ ಸತಿಯ ಹುಯ್ಯಲ ನಾಳಿನೊಂದಪಮಾನವಾಳ್ದಂಗೆಂಬ ನುಡಿಯಿಂದ ಕೋಳುಹೋದುವೆ ಪಾಂಡುಪುತ್ರರ ಬಾಳುವೆಗಳಕಟೆನುತ ಲಕ್ಷ್ಮೀ ಲೋಲ ಚಿಂತಿಸಿ ನುಡಿದ ರುಕ್ಮಿಣಿದೇವಿಗೀ ಹದನ
kēḷidanu muravairi tannaya mēḷadaivara satiya huyyala nāḷinoṃdapamānavāḷdaṃgeṃba nuḍiyiṃda kōḷuhōduve pāṃḍuputrara bāḷuvegaḷakaṭenuta lakṣmī lōla ciṃtisi nuḍida rukmiṇidēvigī hadana
ಕ್ರೂರ ದುರ್ಯೋಧನನು ದುಪದ ಕು ಮಾರಿ ಪಾಂಚಾಲೆಯನು ಸಭೆಯಲಿ ಸೀರೆಯನು ಸುಲಿಯಲ್ಕೆ ಕಾಯೈ ಕೃಷ್ಣೆಯೆಂದೆನುತ ನಾರಿಯೊರಲುತ್ತಿಹಳು ವುಟ್ಟಾ ಸೀರೆ ಸೆಳೆಯಲು ಬಳಿಕಲಕ್ಷಯ ಸೀರೆಯಾಗಲಿಯೆಂದ ಗದುಗಿನ ವೀರ ನಾರಯಣ
krūra duryōdhananu dupada ku māri pāṃcāleyanu sabheyali sīreyanu suliyalke kāyai kr̥ṣṇeyeṃdenuta nāriyoraluttihaḷu vuṭṭā sīre seḷeyalu baḷikalakṣaya sīreyāgaliyeṃda gadugina vīra nārayaṇa
Keys: ← → turn the page, J K step through the verses.
Illustration: Verse & Place (Project-owned).