Skip to content

ಸಭಾ ಪರ್ವ — ಸಂಧಿ ೧೩ · ಸಭಾ ಪರ್ವ — ಸಂಧಿ ೧೩

Sabha Parva · Sandhi 13

sabhā parva — saṃdhi 13

The complete sabha parva · sandhi 13 in Kannada.

78 passagesKannada with transliteration

An original emblem for Sabha Parva.

Invocation

2.13.opening

ವೀತರಾಗದ್ವೇಷಭಯನನ ಜಾತ ಶತ್ರುವನಕಟ ಕಪಟ ದ್ಯೂತದಲಿ ಕುರುರಾಯ ಗೆಲಿದನು ಧರ್ಮನಂದನನ

vītarāgadvēṣabhayanana jāta śatruvanakaṭa kapaṭa dyūtadali kururāya gelidanu dharmanaṃdanana

ಕೇಳು ಜನಮೇಜಯ ಧರಿತ್ರೀ ಪಾಲ ಪಾಂಡವ ನೃಪರನರಮನೆ ಬೀಳುಗೊಂಡುದು ವಿಳಸದಿಂದ್ರಪ್ರಸ್ಥಪುರ ಸಹಿತ ಮೇಲೆ ನೆಗಳುವ ದುರ್ನಿಮಿತ್ತವ ನಾಲಿಸಿದರೇ ದೈವದೋಷ ನಿ ಮೀಲಿತಾಂತಃಕರಣ ಹತರೈತಂದರಿಭ ಪುರಿಗೆ

kēḷu janamējaya dharitrī pāla pāṃḍava nr̥paranaramane bīḷugoṃḍudu viḷasadiṃdraprasthapura sahita mēle negaḷuva durnimittava nālisidarē daivadōṣa ni mīlitāṃtaḥkaraṇa hataraitaṃdaribha purige

Report an error

ಹರಡೆ ಕೆದರಿತು ಬಲದಲುದಯದ ಲುರಿಯಲೊದರಿತು ಹಸುಬನೆಡದಲಿ ಕರಿಯ ಹಕ್ಕಿಯ ತಾರುಹಂಗನ ವಾಮದುಡಿಕೆಗಳ ನರಿಗಳೊದರಿದವಿದಿರಿನಲಿ ಮೋ ಹರವ ಮೊಲನಡಹಾಯ್ದ ವಾನೆಗ ಳರಚಿ ಕೆಡೆದವು ಮುಗ್ಗಿದವು ರಥವಾಜಿಗಳು ನೃಪರ

haraḍe kedaritu baladaludayada luriyalodaritu hasubaneḍadali kariya hakkiya tāruhaṃgana vāmaduḍikegaḷa narigaḷodaridavidirinali mō harava molanaḍahāyda vānega ḷaraci keḍedavu muggidavu rathavājigaḷu nr̥para

Report an error

ಶಕುನಗತಿ ಸಾಮಾನ್ಯವಿದು ಕಂ ಟಕದ ನೆಲೆ ಜನ್ಮದಲಿ ಸಪ್ತಾ ಧಿಕದೊಳಿದ್ದರು ಸೌರಿ ಗುರು ಭೌಮಾಬ್ಜ ಬಾಂಧವರು ವಿಕಳದೆಸೆ ನಿಮ್ಮಡಿಗೆ ವೈರಿ ಪ್ರಕರಕುನ್ನತದೆಸೆ ಮಹೀ ಪಾ ಲಕ ಶಿರೋಮಣಿ ಪುರಕೆ ಮರಳೆಂದರು ಮಹೀಸುರರು

śakunagati sāmānyavidu kaṃ ṭakada nele janmadali saptā dhikadoḷiddaru sauri guru bhaumābja bāṃdhavaru vikaḷadese nimmaḍige vairi prakarakunnatadese mahī pā laka śirōmaṇi purake maraḷeṃdaru mahīsuraru

Report an error

ಮರಳಲಹುದೈ ದೈವವಿಕ್ಕಿದ ಕೊರಳುಗಣ್ಣಿಯ ಕುಣಿಕೆ ಯಾರಲಿ ಹರಿವುದೈ ಮನ್ನಿಸಿದನೇ ಮೌಹೂರ್ತಕರ ನುಡಿಯ ಕರೆಸುವನು ಧೃತರಾಷ್ಟ್ರ ನಮಗೀ ನರಿ ಮೊಲಂಗಳ ಹಕ್ಕಿ ಹರಿಣೆಯ ಕರಹವೇಗುವವೆಂದು ಜರೆದನು ಶಕುನ ಕೋವಿದರ

maraḷalahudai daivavikkida koraḷugaṇṇiya kuṇike yārali harivudai mannisidanē mauhūrtakara nuḍiya karesuvanu dhr̥tarāṣṭra namagī nari molaṃgaḷa hakki hariṇeya karahavēguvaveṃdu jaredanu śakuna kōvidara

Report an error

ಹರಿದರರಸಾಳುಗಳು ರಾಯನ ಬರವನರುಹಿದರಂಧ ಭೂಪತಿ ಪುರದೊಳಗೆ ಗುಡಿಗಟ್ಟಿಸಿದನತ್ಯಧಿಕ ಹರ್ಷದಲಿ ಸುರನದೀಜ ದ್ರೋಣ ಗೌತಮ ಗುರುಜ ಕರ್ಣ ಜಯದ್ರಥಾದಿಗ ಳುರು ವಿಭವದಿಂದಿದಿರುಗೊಂಡರು ಹೊಗಿಸಿದರು ಪುರವ

haridararasāḷugaḷu rāyana baravanaruhidaraṃdha bhūpati puradoḷage guḍigaṭṭisidanatyadhika harṣadali suranadīja drōṇa gautama guruja karṇa jayadrathādiga ḷuru vibhavadiṃdidirugoṃḍaru hogisidaru purava

Report an error

ಸೇನೆ ಬಿಟ್ಟುದು ಪುರದ ಬಹಿರೋ ದ್ಯಾನ ವೀಧಿಗಳೊಳಗೆ ಕುಂತೀ ಸೂನುಗಳು ಸುಮ್ಮಾನ ಮಿಗೆ ನಡೆತಂದರಿಭಪುರಿಗೆ ಆ ನಗರದೊತ್ತೊತ್ತೆಗಳನಾ ಮಾನಿನಿಯರು ಪ್ಪಾರತಿಯನವ ರಾನನೇಂದು ಪ್ರಭೆ ವಿಭಾಡಿಸೆ ಬಿಸಿಲ ಬೇಗೆಗಳ

sēne biṭṭudu purada bahirō dyāna vīdhigaḷoḷage kuṃtī sūnugaḷu summāna mige naḍetaṃdaribhapurige ā nagaradottottegaḷanā māniniyaru ppāratiyanava rānanēṃdu prabhe vibhāḍise bisila bēgegaḷa

Report an error

ಪೌರ ನಾರೀಜನದ ತಳಿಗೆಗ ಳಾರತಿಯ ಸೇಸೆಗಳ ಲಾಜೆಯ ತೋರಮುತ್ತಿನ ಮಳೆಯ ಮಂಗಳರವದ ಕಳಕಳದ ಓರಣದ ತೋರಣದ ಗುಡಿಗಳ ಚಾರು ವೀಧಿಗಳೊಳಗೆ ಬಂದರು ಭೂರಮಣರುತ್ಸಾಹದಲಿ ಧೃತರಾಷ್ಟ್ರನರಮನೆಗೆ

paura nārījanada taḷigega ḷāratiya sēsegaḷa lājeya tōramuttina maḷeya maṃgaḷaravada kaḷakaḷada ōraṇada tōraṇada guḍigaḷa cāru vīdhigaḷoḷage baṃdaru bhūramaṇarutsāhadali dhr̥tarāṣṭranaramanege

Report an error

ಇಳಿದರಾನೆಯನಮಳ ರತ್ನಾ ವಳಿಯ ಕಾಣಿಕೆಗಳನು ಸುರಿದರು ಖಳ ಶಿರೋಮಣಿಗೆರಗಿದರು ಧೃತರಾಷ್ಟ್ರ ಭೂಪತಿಗೆ ಕುಲತಿಲಕ ಬಾ ಕಂದ ಭರತಾ ವಳಿ ವನದ ಮಾಕಂದ ಧರ್ಮ ಸ್ಥಳ ಲತಾವಳಿ ಕಂದ ಬಾಯಂದಪ್ಪಿದನು ನೃಪನ

iḷidarāneyanamaḷa ratnā vaḷiya kāṇikegaḷanu suridaru khaḷa śirōmaṇigeragidaru dhr̥tarāṣṭra bhūpatige kulatilaka bā kaṃda bharatā vaḷi vanada mākaṃda dharma sthaḷa latāvaḷi kaṃda bāyaṃdappidanu nr̥pana

Report an error

ಬಾ ಮಗನೆ ರಿಪುರಾಯ ಮನ್ಮಥ ಭೀಮ ಬಾರೈ ಭೀಮ ರಣ ನಿ ಸ್ಸೀಮ ಫಲುಗುಣ ಬಾ ನಕುಲ ಸಹದೇವ ಬಾಯೆನುತ ಪ್ರೇಮ ರಸದಲಿ ಬೇರೆ ಬೇರು ದ್ದಾಮ ಭುಜನಪ್ಪಿದನು ಚಿತ್ತದ ತಾಮಸದ ತನಿ ಬೀಜ ಮುಸುಕಿತು ಹರ್ಷ ರಚನೆಯಲಿ

bā magane ripurāya manmatha bhīma bārai bhīma raṇa ni ssīma phaluguṇa bā nakula sahadēva bāyenuta prēma rasadali bēre bēru ddāma bhujanappidanu cittada tāmasada tani bīja musukitu harṣa racaneyali

Report an error

ಹರಸಿದನು ಕಾಣಿಕೆಯ ಕೊಂಡೈ ವರ ಮಹಾ ಸತಿಯನು ಕುಮಾರರ ನರಸಿಯರನನಿಬರ ವಚೋ ರಚನೆಯಲಿ ಮನ್ನಿಸಿದ ಅರಸ ಗಾಂಧಾರಿಯನು ವಂದಿಸಿ ದರುಶನವ ಕೊಡು ಹೋಗೆನಲು ಕಡು ಹರುಷ ಮಿಗಿಲೈತಂದರಾ ಗಾಂಧಾರಿಯರಮನೆಗೆ

harasidanu kāṇikeya koṃḍai vara mahā satiyanu kumārara narasiyarananibara vacō racaneyali mannisida arasa gāṃdhāriyanu vaṃdisi daruśanava koḍu hōgenalu kaḍu haruṣa migilaitaṃdarā gāṃdhāriyaramanege

Report an error

ಬಂದು ಕಾಣಿಕೆ ಕೊಟ್ಟು ವಂದಿಸಿ ನಿಂದರೈವರು ತನ್ನ ಕೆಳದಿಯ ರಿಂದ ತರಿಸಿದಳಾರತಿಯನುಪ್ಪಾರತಿಯನೊಲಿದು ಚಂದ ಮಿಗೆ ಸಾವಿರದ ಸಂಖ್ಯೆಯ ರಿಂದು ಮುಖಿಯರ ತಳಿಗೆಯಾರತಿ ಸಂದಣಿಸಿದವು ಜಯ ಸಬುದ ಝೋಂಪಿಸಿದುದಂಬರವ

baṃdu kāṇike koṭṭu vaṃdisi niṃdaraivaru tanna keḷadiya riṃda tarisidaḷāratiyanuppāratiyanolidu caṃda mige sāvirada saṃkhyeya riṃdu mukhiyara taḷigeyārati saṃdaṇisidavu jaya sabuda jhōṃpisidudaṃbarava

Report an error

ಅರಸಿ ಕಾಣಿಸಿಕೊಂಡಳೀ ನೃಪ ರರಸಿಯನು ಸುಕುಮಾರಕರನವ ರರಸಿಯರ ಸಖಿಯರ ವಿಳಾಸಿನಿಯರ ಪಸಾಯ್ತೆಯರ ತರಿಸಿ ಕೊಟ್ಟನು ಬೇರೆ ಬೇರನಿ ಬರಿಗೆ ಉಡುಗೊರೆ ಗಂಧ ಮಾಲ್ಯಾ ಭರಣವನು ರಾಜೋಪಚಾರ ವಿಳಾಸ ವಿಭವದಲಿ

arasi kāṇisikoṃḍaḷī nr̥pa rarasiyanu sukumārakaranava rarasiyara sakhiyara viḷāsiniyara pasāyteyara tarisi koṭṭanu bēre bērani barige uḍugore gaṃdha mālyā bharaṇavanu rājōpacāra viḷāsa vibhavadali

Report an error

ಬೀಳುಕೊಟ್ಟಳು ಬಳಿಕ ಕುರು ನೃಪ ನಾಲಯಕೆ ಕರೆದೊಯ್ದು ಕುಂತಿಯ ಕಾಲಿಗೆರಗಿ ದನಿವರನುಚಿತೋಕ್ತಿಯಲಿ ಮನ್ನಿಸಿದ ಬಾಲಮೃಗವೊಳಗಾಯ್ತಲಾ ತೊಡು ಕೋಲನೆಂದರು ನಗುತ ಮನದಲಿ ಕೌಳಿಕದ ಕುಹಕಿಗಳು ಕೌರವರಾಯ ಶಕುನಿಗಳು

bīḷukoṭṭaḷu baḷika kuru nr̥pa nālayake karedoydu kuṃtiya kāligeragi danivaranucitōktiyali mannisida bālamr̥gavoḷagāytalā toḍu kōlaneṃdaru naguta manadali kauḷikada kuhakigaḷu kauravarāya śakunigaḷu

Report an error

ಖಳರ ಹೃದಯದ ಕಾಳ ಕೂಟದ ಹುಳಕು ಬಲ್ಲರೆ ಮಾನ್ಯರವದಿರ ಲಲಿತ ಮಧುರ ವಚೋವಿಳಾಸಕೆ ಮರುಳಗೊಂಡರಲೈ ಅಳುಪಿದರೆ ಮಧುಕರನ ಮರಿ ಬೊ ಬ್ಬುಲಿಯ ವನದೊಳಗೇನಹುದು ನೃಪ ತಿಲಕರಿದ್ದರು ಬೇರೆ ರಚಿಸಿದ ರಾಜಭವನದಲಿ

khaḷara hr̥dayada kāḷa kūṭada huḷaku ballare mānyaravadira lalita madhura vacōviḷāsake maruḷagoṃḍaralai aḷupidare madhukarana mari bo bbuliya vanadoḷagēnahudu nr̥pa tilakariddaru bēre racisida rājabhavanadali

Report an error

ಬಂದು ಕಂಡುದು ನಿಖಿಳ ಪುರ ಜನ ವಂದು ಕಾಣಿಕೆಗೊಟ್ಟು ಕೌರವ ನಂದನರು ಸಚಿವರು ಪಸಾಯ್ತರು ನಿಯೋಗಿ ಮಂತ್ರಿಗಳು ಸಂದಣಿಸಿದುದು ಕವಿ ಗಮಕಿ ನಟ ವಂದಿ ಮಾಗಧ ಮಲ್ಲ ಗಾಯಕ ವೃಂದ ದೀನಾನಾಥರೋಲಗಿಸಿದರು ಧರ್ಮಜನ

baṃdu kaṃḍudu nikhiḷa pura jana vaṃdu kāṇikegoṭṭu kaurava naṃdanaru sacivaru pasāytaru niyōgi maṃtrigaḷu saṃdaṇisidudu kavi gamaki naṭa vaṃdi māgadha malla gāyaka vr̥ṃda dīnānātharōlagisidaru dharmajana

Report an error

ಆ ದಿವಸವನು ಮಧುರ ಗೇಯ ನಿ ನಾನದದಲಿ ಕವಿ ವಾದಿ ವಾಗ್ಮಿ ವಿ ನೋದದಲಿ ನೂಕಿದರು ಮಜ್ಜನ ಭೋಜನಾದಿಯಲಿ ಆದುದುತ್ಸಹವಂದಿನಿರುಳು ದಿ ನಾದಿಯಲಿ ಕಂಡನು ಕನಸ ಪ್ರಾ ಸಾದ ಶಿಖರವು ಮುರಿದು ಬಿದ್ದುದನಡವಿ ಮಧ್ಯದಲಿ

ā divasavanu madhura gēya ni nānadadali kavi vādi vāgmi vi nōdadali nūkidaru majjana bhōjanādiyali ādudutsahavaṃdiniruḷu di nādiyali kaṃḍanu kanasa prā sāda śikharavu muridu biddudanaḍavi madhyadali

Report an error

ಅರಸನುಪ್ಪವಡಿಸಿದನವನೀ ಶ್ವರವಿಹಿತ ಸತ್ಕ್ರಿಯೆಗಳನು ವಿ ಸ್ತರಿಸಿದನು ದುಃಸ್ವಪ್ನ ಕುಂತವಿಭಿನ್ನ ಚೇತನನು ಕರೆಸಿ ಧೌಮ್ಯನಿಗರುಹಲತಿ ದು ಸ್ತರದ ಕನಸಿದು ಶಾಂತಿ ಕರ್ಮವ ಪುರದೊಳಗೆ ವಿರಚಿಸುವೆನಂಜದಿರೆಂದನಾ ಮುನಿಪ

arasanuppavaḍisidanavanī śvaravihita satkriyegaḷanu vi starisidanu duḥsvapna kuṃtavibhinna cētananu karesi dhaumyanigaruhalati du starada kanasidu śāṃti karmava puradoḷage viracisuvenaṃjadireṃdanā munipa

Report an error

ಪುರದೊಳೆಲ್ಲಿಯ ಶಾಂತಿ ನಾರದ ನೊರದನುತ್ಪಾತ ಪ್ರಬಂಧದ ಹೊರಿಗೆಯನು ನಿಮ್ಮೈಶ್ವರಿಯ ವಿಧ್ವಂಸಕರವೆಂದು ಇರುಳು ನಾನಾಸ್ವಪ್ನ ಕಾನನ ಗಿರಿ ಪರಿಭ್ರಮಣೈಕ ಚಿಂತಾ ಭರಿತನಾದೆನು ದೈವಕೃತ ಉಪಭೋಗ್ಯವೆನಗೆಂದ

puradoḷelliya śāṃti nārada noradanutpāta prabaṃdhada horigeyanu nimmaiśvariya vidhvaṃsakaraveṃdu iruḷu nānāsvapna kānana giri paribhramaṇaika ciṃtā bharitanādenu daivakr̥ta upabhōgyavenageṃda

Report an error

ಜನಪ ಕಳುಹಿದ ದೂತರಿವರರ ಮನೆಗೆ ಬಂದರು ಜೀಯ ಧೃತರಾ ಷ್ಟ್ರನ ಸಮಯವಾಯಿತ್ತು ನಿಮ್ಮಡಿ ಬಿಜಯ ಮಾಡುವದು ಎನಲು ತನ್ನ ಕುಮಾರರನು ತ ನ್ನನುಜರನು ಸಚಿವ ಪ್ರಧಾನರ ನನಿಬರನು ಕರೆಸಿದನು ನೃಪ ಹೊರವಂಟನರಮನೆಯ

janapa kaḷuhida dūtarivarara manege baṃdaru jīya dhr̥tarā ṣṭrana samayavāyittu nimmaḍi bijaya māḍuvadu enalu tanna kumāraranu ta nnanujaranu saciva pradhānara nanibaranu karesidanu nr̥pa horavaṃṭanaramaneya

Report an error

ಬಂದು ಧೃತರಾಷಟ್ರನ ಪದಾಬ್ಜಕೆ ವಂದಿಸಿದೊಡೆನ್ನಾನೆ ಬಾರೈ ಕಂದೆ ಬಾರೆಂದೆಳೆದು ಕುಳ್ಳಿರಿಸಿದನು ಮಂಚದಲಿ ನಂದನರು ಭೀಮಾರ್ಜುನಾದಿಗ ಳಂದು ಪರಿವೇಷ್ಟಿಸಿದರಿತ್ತಲು ಕಂದು ಹೃದಯದ ಕೌರವೇಂದ್ರನ ಹದನ ಕೇಳೆಂದ

baṃdu dhr̥tarāṣaṭrana padābjake vaṃdisidoḍennāne bārai kaṃde bāreṃdeḷedu kuḷḷirisidanu maṃcadali naṃdanaru bhīmārjunādiga ḷaṃdu parivēṣṭisidarittalu kaṃdu hr̥dayada kauravēṃdrana hadana kēḷeṃda

Report an error

ಕರೆಸಿದನು ಶಕುನಿಯನು ಕರ್ಣಂ ಗರುಹಿದನು ಸೈಂಧವನನೆಕ್ಕಟಿ ಗರೆದು ಹೇಳಿದ ಕೃತ್ರಿಮದ ಹಾಸಂಗಿಗಳ ರಚಿಸಿ ಹರಸಿಕೊಂಡರು ಗಣಪ ಯಕ್ಷೇ ಶ್ವರಿ ಕಳಾವತಿ ದುರ್ಗಿ ಭುವನೇ ಶ್ವರಿಗಳಿಗೆ ವಿವಿಧೋಪಚಾರದ ಬಲ ವಿಧಾನದಲಿ

karesidanu śakuniyanu karṇaṃ garuhidanu saiṃdhavananekkaṭi garedu hēḷida kr̥trimada hāsaṃgigaḷa racisi harasikoṃḍaru gaṇapa yakṣē śvari kaḷāvati durgi bhuvanē śvarigaḷige vividhōpacārada bala vidhānadali

Report an error

ದ್ಯೂತ ಸಿದ್ಧಿಯ ಮಂತ್ರ ವರ ವಿ ದ್ಯಾತಿಶಯ ವಿಚ್ಛೇದ ರಕ್ಷ ವಿ ಧೂತ ರಿಪುಮತಿ ಯಂತ್ರಪರಸನ್ಮೋಹನೌಷಧಿಯ ಈತಗಳು ಮೇಳವಿಸಿದರು ನಿ ರ್ಭೀತರಿವರಿದನೆತ್ತ ಬಲ್ಲರು ಕೈತವದ ಕಣಿ ಕೌರವೇಶ್ವರ ಬಂದನರಮನೆಗೆ

dyūta siddhiya maṃtra vara vi dyātiśaya vicchēda rakṣa vi dhūta ripumati yaṃtraparasanmōhanauṣadhiya ītagaḷu mēḷavisidaru ni rbhītarivaridanetta ballaru kaitavada kaṇi kauravēśvara baṃdanaramanege

Report an error

ಆತ್ತವಿಸಿದರೆ ಬೊಪ್ಪ ಮಯ ನಿವ ಗಿತ್ತ ಸಭೆಯದು ದೇವ ನಿರ‍್ಮಿತ ವೆತ್ತ ಮಾನವ ಕರ್ಮವೆತ್ತಲು ಸರಿಸವಲ್ಲದಕೆ ಇತ್ತ ನಿಮ್ಮಡಿ ಮಾಡಿಸಿದ ಸಭೆ ಯೆತ್ತ ಬಿಜಯಂಗೈದು ನೋಡಿದ ಡುತ್ತ ಮವಲಾಯೆಂದನಾ ದುರ‍್ಯೋಧನನು ನಗುತ

āttavisidare boppa maya niva gitta sabheyadu dēva nirmita vetta mānava karmavettalu sarisavalladake itta nimmaḍi māḍisida sabhe yetta bijayaṃgaidu nōḍida ḍutta mavalāyeṃdanā duryōdhananu naguta

Report an error

ಆ ಸಭೆಯ ನೋಡುವೆವು ಶಿಲ್ಪದ ದೇಸಿಗಾರರ ಕೈಮೆಗಳು ಲೇ ಸೈಸಲೇ ಬೇರೇನು ಮಾನುಷ ದೈವಕೃತಿಯೆಂದು ಈಸು ಸಂಪ್ರಿಯ ನಮ್ಮಲುಂಟೇ ಲೇಸೆನುತ ನೃಪನೆದ್ದು ಕೈಗೊಡ ಲಾ ಸಭೆಗೆ ಧೃತರಾಷ್ಟ್ರ ಬಂದನು ರಾಜಗಣ ಸಹಿತ

ā sabheya nōḍuvevu śilpada dēsigārara kaimegaḷu lē saisalē bērēnu mānuṣa daivakr̥tiyeṃdu īsu saṃpriya nammaluṃṭē lēsenuta nr̥paneddu kaigoḍa lā sabhege dhr̥tarāṣṭra baṃdanu rājagaṇa sahita

Report an error

ಬಿಗಿದ ನೀಲದ ಸರಿಯ ನೆಲಗ ಟ್ಟುಗಳ ವೈಢೂರಿಯದ ಮಣಿ ಭಿ ತ್ತಿಗಳ ವಜ್ರದ ವೇದಿಗಳ ವಿದ್ರುಮದ ಲೋವೆಗಳ ಝಗೆಯ ಲಹರಿಯ ಜಾಳಿಗೆಯ ಪ ಚ್ಚೆಗಳ ಪಾಗಾರದ ಸುರತ್ನಾ ಳಿಗಳಲೆಸೆದುದು ರಾಜಸಭೆ ತತ್ಕ್ರೋಶ ಮಾತ್ರದಲಿ

bigida nīlada sariya nelaga ṭṭugaḷa vaiḍhūriyada maṇi bhi ttigaḷa vajrada vēdigaḷa vidrumada lōvegaḷa jhageya lahariya jāḷigeya pa ccegaḷa pāgārada suratnā ḷigaḷalesedudu rājasabhe tatkrōśa mātradali

Report an error

ಕವಿವ ವರುಣಾಂಶುಗಳ ಲಹರಿಯ ಲವಣಿ ಲಾವಣಿಗೆಯಲಿ ನೀಲ ಚ್ಛವಿಯ ದೀಧಿತಿ ಝಳಪಿಸಿತು ದೆಸೆದೆಸೆಯ ಭಿತ್ತಿಗಳ ತಿವಿದವೆಳ ಮುತ್ತುಗಳ ಚಂದ್ರಿಕೆ ಜವಳಿಸಿದವೊಂದೊಂದನೌಕಿದ ವವಿರಳಿತ ಮಣಿ ಕಿರಣ ವೇಣೀಬಂಧ ಬಂಧುರದಿ

kaviva varuṇāṃśugaḷa lahariya lavaṇi lāvaṇigeyali nīla cchaviya dīdhiti jhaḷapisitu desedeseya bhittigaḷa tividaveḷa muttugaḷa caṃdrike javaḷisidavoṃdoṃdanaukida vaviraḷita maṇi kiraṇa vēṇībaṃdha baṃdhuradi

Report an error

ಅಲ್ಲಿ ವಿಮಳೋದ್ಯಾನ ವೀಧಿಗ ಳಲ್ಲಿ ತಾವರೆಗೊಳದ ರಚನೆಗ ಳಲ್ಲಿ ಹಂಸ ಮಯೂರ ಮಧುಕರ ಶುಕಪಿಕಾನೀಕ ಅಲ್ಲಿ ಕೇಳೀ ಶೈಲ ಹಿಮ ಗೃಹ ವಲ್ಲಿ ವಿವಿಧ ವಿಳಾಸ ರಚನೆಗ ಳಲ್ಲಿ ಹೊಯ್ಕೈಯೆನಿಸಿ ಮೆರೆದುದು ಪಾಂಡವರ ಸಭೆಯ

alli vimaḷōdyāna vīdhiga ḷalli tāvaregoḷada racanega ḷalli haṃsa mayūra madhukara śukapikānīka alli kēḷī śaila hima gr̥ha valli vividha viḷāsa racanega ḷalli hoykaiyenisi meredudu pāṃḍavara sabheya

Report an error

ಸ್ಥಳವನೇ ಜಲವೆಂದು ನಿರ್ಮಳ ಜಲವನೇ ಸ್ಥಳವೆಂದು ಬಾಗಿಲ ನೆಳಲ ಭಿತ್ತಿಯ ಹಾಯ್ದು ಬಾಗಿಲ ಭಿತ್ತಿಯೆಂದಿಳಿದು ಕಳವಳಿಸುವನೆ ಧರ್ಮಸುತನಾ ಕೊಳನನೇ ಕೊಳನೆಂದು ಬಾಗಿಲ ನೆಳಲ ಹೊಗಳುತ ಬಂದು ಹೊಕ್ಕನು ಬಹಳ ಚೌಕಿಗೆಯ

sthaḷavanē jalaveṃdu nirmaḷa jalavanē sthaḷaveṃdu bāgila neḷala bhittiya hāydu bāgila bhittiyeṃdiḷidu kaḷavaḷisuvane dharmasutanā koḷananē koḷaneṃdu bāgila neḷala hogaḷuta baṃdu hokkanu bahaḷa caukigeya

Report an error

ಕೆಲಸದಲಿ ಶಿಲ್ಪದಲಿ ರತ್ನಾ ವಳಿಯ ಘಾಟನವಾಯಿಯಲಿ ಸಭೆ ಯಿಳೆಗಪೂರ್ವವಲಾ ಮಹಾದೇವೆಂತು ರಚಿಸಿದರೊ ವಿಳಸದಾಯವ್ಯಯದ ವಿಶ್ರುತ ವಳಯದುನ್ನತ ವಾಸ್ತು ಲಕ್ಷಣ ದೊಳಗೆ ಸೇರಿದುದೆಂದು ನೃಪ ಕೊಂಡಾಡಿದನು ಸಭೆಯ

kelasadali śilpadali ratnā vaḷiya ghāṭanavāyiyali sabhe yiḷegapūrvavalā mahādēveṃtu racisidaro viḷasadāyavyayada viśruta vaḷayadunnata vāstu lakṣaṇa doḷage sēridudeṃdu nr̥pa koṃḍāḍidanu sabheya

Report an error

ಸೂಸಕದ ಮುತ್ತುಗಳು ತಾರಾ ರಾಶಿಗಳ ಹಬ್ಬುಗೆಯ ನೀಲದ ಹಾಸರೆಗಳು ಹೋಲುತಿದ್ದವು ಗಗನ ಮಂಡಲವ ಸೂಸಕಂಗಳ ಮುರಿದ ಮುತ್ತಿನ ದೇಶಿಕಾತಿಯರಾನನೇಂದುಗ ಳಾ ಸುಧಾಕರವೆನಲು ಗೆಲಿದುದು ಸಭೆ ನಭಸ್ಥಳವ

sūsakada muttugaḷu tārā rāśigaḷa habbugeya nīlada hāsaregaḷu hōlutiddavu gagana maṃḍalava sūsakaṃgaḷa murida muttina dēśikātiyarānanēṃduga ḷā sudhākaravenalu gelidudu sabhe nabhasthaḷava

Report an error

ಗುರು ನದೀಸುತ ಕರ್ಣ ಸೈಂಧವ ಗುರುತನುಜ ಭಗದತ್ತ ಬಾಹ್ಲಿಕ ನುರು ಯವನ ಸಂವೀರ ಕೌಸಲ ಚೈದ್ಯ ಮಾಗಧರು ಅರಸುಗಳು ನಾನಾ ದಿಗಂತದ ಧರಣಿಪರು ಸಚಿವರು ಪಸಾಯ್ತರು ನೆರೆದುದಂದಿನ ದಿವಸದೋಲಗದೊಡ್ಡು ಚೆಲುವಾಯ್ತು

guru nadīsuta karṇa saiṃdhava gurutanuja bhagadatta bāhlika nuru yavana saṃvīra kausala caidya māgadharu arasugaḷu nānā digaṃtada dharaṇiparu sacivaru pasāytaru neredudaṃdina divasadōlagadoḍḍu celuvāytu

Report an error

ಧರಣಿಪತಿ ಕೇಳೊಂದು ಹರಿಯಂ ತರ ವಿಶಾಲ ಮಹಾಸಭಾ ವಿ ಸ್ತರಣದರಲಿ ತೆರಹ ಕಾಣೆನು ತೀವಿತವನಿಪರು ಹೊರಗೆ ರಥಿಕರು ರಾಹುತರು ಜೋ ಧರು ಪದಾತಿಗಳಿದ್ದುದಂದಿನ ಸಿರಿ ಸುರೇಂದ್ರನ ಪಾಡಿಗೈಮಡಿ ಹತ್ತು ಮಡಿಯೆಂದ

dharaṇipati kēḷoṃdu hariyaṃ tara viśāla mahāsabhā vi staraṇadarali teraha kāṇenu tīvitavaniparu horage rathikaru rāhutaru jō dharu padātigaḷiddudaṃdina siri surēṃdrana pāḍigaimaḍi hattu maḍiyeṃda

Report an error

ಒಂದು ಕಡೆಯಲಿ ಕವಡಿಕೆಯ ಜೂ ಜೊಂದು ಕಡೆಯಲಿ ಗದ್ಯಪದ್ಯವ ದೊಂದು ಕಡೆಯಲಿ ವಾರವಧುಗಳ ಸಾರಸಂಗೀತ ಒಂದು ಕಡೆಯಲಿ ತರ್ಕಗೋಷ್ಠಿಯ ದೊಂದು ಕಡೆಯಲಿ ಕೌರವೇಂದ್ರನ ಮುಂದೆ ಜಡಿದುದು ರಭಸ ಹಾಸಂಗಿಗಳ ಸಾರಿಗಳ

oṃdu kaḍeyali kavaḍikeya jū joṃdu kaḍeyali gadyapadyava doṃdu kaḍeyali vāravadhugaḷa sārasaṃgīta oṃdu kaḍeyali tarkagōṣṭhiya doṃdu kaḍeyali kauravēṃdrana muṃde jaḍidudu rabhasa hāsaṃgigaḷa sārigaḷa

Report an error

ಆಡಲರಿವನು ಗಡ ಯುಧಿಷ್ಠಿರ ನಾಡುವರೆ ಬರಹೇಳು ಮೇಣ್ತಾ ನೋಡುತಿರಲಾವಾಡುವೆವು ಸಭೆಯಲಿ ವಿನೋದದಲಿ ಖೋಡಿಯಿಲ್ಲದ ಸರಸ ನೆತ್ತವ ನಾಡಲರಿಯದ ನೃಪತಿ ಮೃಗವೆಂ ದಾಡುತಿಹ ರಿವವರು ತಾವಲ್ಲೆಂದನಾ ಶಕುನಿ

āḍalarivanu gaḍa yudhiṣṭhira nāḍuvare barahēḷu mēṇtā nōḍutiralāvāḍuvevu sabheyali vinōdadali khōḍiyillada sarasa nettava nāḍalariyada nr̥pati mr̥gaveṃ dāḍutiha rivavaru tāvalleṃdanā śakuni

Report an error

ಅಹುದು ಹೊಲ್ಲೆಹವಾವುದಾಡಲು ಬಹುದು ಸುಜನರ ಕೂಡೆ ನೀವೇ ಕುಹಕ ವಿದ್ಯಾಸಾರ್ವಭೌಮರು ಶಕುನಿಕೌರವರು ಸುಹೃದಯರಿಗತಿ ಕುಟಿಲರಲಿ ನಿ ಸ್ಪೃಹರಿಗತಿ ರಾಗಿಗಳೊಡನೆ ದು ಸ್ಸಹ ಕಣಾ ಸಮ್ಮೇಳವೆಂದನು ಧರ್ಮಸುತ ನಗುತ

ahudu hollehavāvudāḍalu bahudu sujanara kūḍe nīvē kuhaka vidyāsārvabhaumaru śakunikauravaru suhr̥dayarigati kuṭilarali ni spr̥harigati rāgigaḷoḍane du ssaha kaṇā sammēḷaveṃdanu dharmasuta naguta

Report an error

ನೀವು ಸುಹೃದಯರಿಂದು ದುರ್ಜನ ರಾವು ನೀವ್ನೀರಾಗಿಗಳು ರಾ ಗಾವಲಂಬರು ನಾವಲೇ ನೀವರಿಯರೇ ನಿಜವ ನೀವು ನಾವೆಂಬೀ ಪೃಥಗ್ಭಾ ವಾವಲಂಬನವೇಕೆ ನಿಮ್ಮಲಿ ನಾವು ನಮ್ಮಲಿ ನೀವೆಯೆಂದನು ನಗುತ ಕುರುರಾಯ

nīvu suhr̥dayariṃdu durjana rāvu nīvnīrāgigaḷu rā gāvalaṃbaru nāvalē nīvariyarē nijava nīvu nāveṃbī pr̥thagbhā vāvalaṃbanavēke nimmali nāvu nammali nīveyeṃdanu naguta kururāya

Report an error

ಇರಲಿ ಬಾಂಧವರಿದರೊಳೆರಡಿ ಟ್ಟಿರದೆ ನಿಲಲದು ಲೇಸಲಾ ವಿ ಸ್ತರಿಸಲೇಕೈ ದ್ಯೂತ ದುರ್ವ್ಯಸನ ಪ್ರಪಂಚವಿದು ತರುಣ ವಿಟ ಚಾರಣ ಕುಶೀಲಕ ಭರತ ಗಣಿಕಾಯೋಗ್ಯ ವಿಷಯಕೆ ಗರುವರೊಲಿವರೆಯೆಂದನಾ ಕುರುಪತಿಗೆ ಯಮಸೂನು

irali bāṃdhavaridaroḷeraḍi ṭṭirade nilaladu lēsalā vi starisalēkai dyūta durvyasana prapaṃcavidu taruṇa viṭa cāraṇa kuśīlaka bharata gaṇikāyōgya viṣayake garuvarolivareyeṃdanā kurupatige yamasūnu

Report an error

ದ್ಯೂತವಿದು ದುರ್ವ್ಯಸನವೆಂಬವ ನೀತಿವಿದನೇ ಶ್ರೋತ್ರಿಯರಿಗ ಖ್ಯಾತಿಯದು ಯತಿಗಳಿಗೆ ಮೇಣ್ ರಣಭೀತ ಭೂಪರಿಗೆ ದ್ಯೂತ ಮೃಗಯಾ ಸ್ತ್ರೀವ್ಯಸನ ನೃಪ ಜಾತಿಗೋಸುಗರಾದವಿದರ ರ ಸಾತಿಶಯವರಿಯದವ ನರಮೃಗವೆಂದನಾ ಶಕುನಿ

dyūtavidu durvyasanaveṃbava nītividanē śrōtriyariga khyātiyadu yatigaḷige mēṇ raṇabhīta bhūparige dyūta mr̥gayā strīvyasana nr̥pa jātigōsugarādavidara ra sātiśayavariyadava naramr̥gaveṃdanā śakuni

Report an error

ಅರಸ ಕೇಳ್ ಕಾಳಗಕೆ ಜೂಜಿಗೆ ಕರೆದಡೋಸರಿಸಿದೊಡೆ ಬಳಿಕವ ಗರುವನೇ ಕ್ಷತ್ರಿಯರೊಳಗೆ ನೃಪಧರ್ಮ ನೀನರಿಯ ಕರೆದೆವಾವ್ ಜೂಜಿಂಗೆ ಬೇಕೇ ಧರಣಿಪತಿ ಬಾ ರಾಜಧರ್ಮವ ನೊರಸುವರೆ ನಿಲ್ಲೆಂದುಪೇಕ್ಷಿಸಿ ನುಡಿದನಾ ಶಕುನಿ

arasa kēḷ kāḷagake jūjige karedaḍōsarisidoḍe baḷikava garuvanē kṣatriyaroḷage nr̥padharma nīnariya karedevāv jūjiṃge bēkē dharaṇipati bā rājadharmava norasuvare nilleṃdupēkṣisi nuḍidanā śakuni

Report an error

ರಾಜ ಧರ್ಮವಿದಹುದು ಕಳವಿನ ಜೂಜು ಧರ್ಮದ ಮಗನೊ ಮೊಮ್ಮನೊ ಬೀಜವಾವುದು ನಿಮ್ಮ ಕಪಟದ್ಯೂತ ನಿರ್ಣಯಕೆ ರಾಜ ಪರಿಪಾಟಿಗಳ ಪಂಥದ ಜೂಜ ಬಲ್ಲರೆ ಕರೆಯಿ ಬಾರದ ಡಾ ಜನಾರ್ದನನಾಣೆಯೆಂದನು ಧರ್ಮನಂದನನು

rāja dharmavidahudu kaḷavina jūju dharmada magano mommano bījavāvudu nimma kapaṭadyūta nirṇayake rāja paripāṭigaḷa paṃthada jūja ballare kareyi bārada ḍā janārdananāṇeyeṃdanu dharmanaṃdananu

Report an error

ಭೂರಮಣ ಕೇಳಖಿಳ ನೃಪ ಸಂ ಹಾರಬೀಜದ ಕರ್ಮಫಲ ಸಂ ಸ್ಕಾರವಳ್ಳೆಯನಿರಿದು ನೂಕಿತು ಧರ್ಮನಂದನನ ಧೀರನಲ್ಲಾ ಧರ್ಮಶಾಸ್ತ್ರ ವಿ ಚಾರ ಸಾರಜ್ಞಾನ ನಿಷ್ಠೆಯೊ ಳೋರೆಯುಂಟೇ ದ್ಯೂತಕೇಳಿಗೆ ಮಾಡಿದನು ಮನವ

bhūramaṇa kēḷakhiḷa nr̥pa saṃ hārabījada karmaphala saṃ skāravaḷḷeyaniridu nūkitu dharmanaṃdanana dhīranallā dharmaśāstra vi cāra sārajñāna niṣṭheyo ḷōreyuṃṭē dyūtakēḷige māḍidanu manava

Report an error

ಇಂದುವದನೆಗೆ ದಕ್ಷಿಣಾಕ್ಷಿ ಸ್ಪಂದವಾಯಿತು ಭೀಮ ಪಾರ್ಥರಿ ಗಂದು ಕೆತ್ತಿತು ಹೃದಯ ವಾಮ ಭುಜಾಕ್ಷಿಗಳು ಸಹಿತ ಕಂದಿದುವು ಮೋರೆಗಳು ಗಂಗಾ ನಂದನ ದ್ರೋಣಾದಿ ಸುಜನರಿ ಗಂದವೇರಿತು ಮುಸುಡು ಶಕುನಿ ಸುಯೋಧನಾದಿಗಳ

iṃduvadanege dakṣiṇākṣi spaṃdavāyitu bhīma pārthari gaṃdu kettitu hr̥daya vāma bhujākṣigaḷu sahita kaṃdiduvu mōregaḷu gaṃgā naṃdana drōṇādi sujanari gaṃdavēritu musuḍu śakuni suyōdhanādigaḷa

Report an error

ಕುರುಪತಿಯ ಕೃತಪುಣ್ಯಬೀಜಾಂ ಕುರದ ಕಾಲ ದಿಗಂತದವನೀ ಶ್ವರ ಸಮೂಹ ಚಮೂನಿಬರ್ಹಣ ಸೂಚನಾ ಸಮಯ ಅರಸ ಕೇಳ್ ಕುಂತೀಕುಮಾರರ ಸಿರಿಯ ದುಗುಡದ ಹೊತ್ತು ಮಿಗೆ ಗ ಬ್ಬರಿಸಿತೈ ಧರ್ಮಜನ ಗಾಢದ ಬುದ್ಧಿ ಪರ್ವತವ

kurupatiya kr̥tapuṇyabījāṃ kurada kāla digaṃtadavanī śvara samūha camūnibarhaṇa sūcanā samaya arasa kēḷ kuṃtīkumārara siriya duguḍada hottu mige ga bbarisitai dharmajana gāḍhada buddhi parvatava

Report an error

ವ್ಯಸನತೃಷ್ಣೆಯು ಕೀಳು ಚಿತ್ತದ ಮಿಸುನಿಯೊಳು ಬೆರೆಸಿತು ಸುಬುದ್ಧಿಯ ರಸವು ಹಾರಿತು ಹುದಿದ ರಾಗದ್ವೇಷ ವಹ್ನಿಯಲಿ ಮುಸುಡ ತಿರುಹಿತು ತಿಳಿವು ಲಜ್ಜೆಯ ದೆಸೆಗೆ ದುರ್ಘಟವಾಯ್ತು ಪರಿಭವ ದೊಸಗೆಯನು ಸೂಚಿಸಿತು ಲಕ್ಷ್ಮಿಗೆ ಧರ್ಮಜನ ಹೃದಯ

vyasanatr̥ṣṇeyu kīḷu cittada misuniyoḷu beresitu subuddhiya rasavu hāritu hudida rāgadvēṣa vahniyali musuḍa tiruhitu tiḷivu lajjeya desege durghaṭavāytu paribhava dosageyanu sūcisitu lakṣmige dharmajana hr̥daya

Report an error

ಹಲವು ಮಾತಿನಲೇನು ಭೂಪತಿ ಕೆಲಕೆ ಸಿಲುಕಿದನವದಿರೊಡ್ಡಿದ ಬಲೆಗೆ ಬಂದನು ನೆತ್ತ ಸಾರಿಯ ಗುರಿಯ ಗದ್ದುಗೆಗೆ ಕೆಲದಲನುಜರು ವಾಮದಲಿ ಮಣಿ ವಳಯ ಮಂಚದಲಂಧನೃಪನಿದಿ ರಲಿ ಸುಯೋಧನ ಕರ್ಣ ಶಕುನಿ ಜಯದ್ರಥಾದಿಗಳು

halavu mātinalēnu bhūpati kelake silukidanavadiroḍḍida balege baṃdanu netta sāriya guriya gaddugege keladalanujaru vāmadali maṇi vaḷaya maṃcadalaṃdhanr̥panidi rali suyōdhana karṇa śakuni jayadrathādigaḷu

Report an error

ಹಲಗೆಯಿಕ್ಕಿತು ಹೊನ್ನ ಸಾರಿಗ ಳಿಳುಹಿದವು ಹೇಳೊಡ್ಡವನು ಕಳ ಕಳವ ನಿಲಹೇಳೆನುತ ಹಾಸಂಗಿಗಳ ಹೊಸೆಹೊಸೆದು ನೆಲಕೆ ಹಾಯ್ಕಿದನಡಿಗಡಿಗೆ ಮಂ ಡಳಿಸಿ ಸಾರಿಯ ಹೂಡಿ ಕುರುಪತಿ ಗೆಲಿದ ಹೋಗೆಂದೊದರುತಿದ್ದನು ತೊಡೆಯನಪ್ಪಳಿಸಿ

halageyikkitu honna sāriga ḷiḷuhidavu hēḷoḍḍavanu kaḷa kaḷava nilahēḷenuta hāsaṃgigaḷa hosehosedu nelake hāykidanaḍigaḍige maṃ ḍaḷisi sāriya hūḍi kurupati gelida hōgeṃdodarutiddanu toḍeyanappaḷisi

Report an error

ಆಟವಾರಂಭಿಸದು ಬರಿ ಬೊ ಬ್ಬಾಟವೇತಕೆ ವಿಜಯಸಿರಿ ವಾ ಚಾಟರಿಗೆ ಮೆಚ್ಚುವಳೆ ತೋರಾ ದ್ಯೂತಕೌಶಲವ ತೋಟಿ ಬೇಕೇ ಕೈಯ ಹೊಯ್ ಬೂತಾಟವೇತಕೆ ಧರ್ಮನಂದನ ನಾಟವೊಳ್ಳಿತು ಬಲ್ಲೆನೆಂದನು ಶಕುನಿ ನಸುನಗುತ

āṭavāraṃbhisadu bari bo bbāṭavētake vijayasiri vā cāṭarige meccuvaḷe tōrā dyūtakauśalava tōṭi bēkē kaiya hoy būtāṭavētake dharmanaṃdana nāṭavoḷḷitu balleneṃdanu śakuni nasunaguta

Report an error

ಎನ್ನ ಲೆಕ್ಕಕೆ ಶಕುನಿ ಭೂಪತಿ ನಿನ್ನೊಡನೆ ಕೈ ಹೊಯ್ದನೊಡ್ಡವ ನೆನ್ನೊಡನೆ ಹೇಳೆಂದು ನುಡಿದನು ಕೌರವರರಾಯ ನಿನ್ನೊಳಾಗಲಿ ನಿನ್ನ ಮಾವನೆ ಮುನ್ನ ಬರಲಿದಕೇನೆನುತ ಸಂ ಪನ್ನ ಶಠರೊಡನಳವಿಗೊಟ್ಟವನೀಶನಿಂತೆಂದ

enna lekkake śakuni bhūpati ninnoḍane kai hoydanoḍḍava nennoḍane hēḷeṃdu nuḍidanu kauravararāya ninnoḷāgali ninna māvane munna baralidakēnenuta saṃ panna śaṭharoḍanaḷavigoṭṭavanīśaniṃteṃda

Report an error

ಹೇಮಭಾರದ ವಿಮಲ ರತುನ ಸ್ತೋಮವಿದೆ ಪಣವೆನಲು ಕೌರವ ಭೂಮಿಪತಿಯೊಡ್ಡಿದನು ಧರ್ಮಜ ಹೆಸರಿಸಿದ ಧನವ ಆ ಮಹಿಪ ಶಕುನಿಗಳು ಸಾರಿ ಗ್ರಾಮವನು ಕೆದರಿದರು ದ್ಯೂತದ ತಾಮಸದಲುಬ್ಬೆದುದ್ದಿಬ್ಬರ ಕರಣವೃತ್ತಿಗಳು

hēmabhārada vimala ratuna stōmavide paṇavenalu kaurava bhūmipatiyoḍḍidanu dharmaja hesarisida dhanava ā mahipa śakunigaḷu sāri grāmavanu kedaridaru dyūtada tāmasadalubbeduddibbara karaṇavr̥ttigaḷu

Report an error

ದುಗನ ಹಾಯಿತು ತನಗೆ ಹಾಯ್ಕಿ ತ್ತಿಗನವೆಂಬಬ್ಬರದ ಹಾಸಂ ಗಿಗಳ ಬೊಬ್ಬೆಯ ಸಾರಿಗಳ ಮಣಿ ಖಟಿಲ ನಿಸ್ವನವ ಉಗಿವ ಸೆರೆಗಳ ಬಳಿ ದುಹಾರದ ಬಿಗುಹುಗಳ ಬೀದಿಗಳ ತಳಿ ಸಾ ರಿಗಳ ಧಾಳಾಧೂಳಿ ಮಸಗಿತು ಭೂಪ ಕೇಳೆಂದ

dugana hāyitu tanage hāyki ttiganaveṃbabbarada hāsaṃ gigaḷa bobbeya sārigaḷa maṇi khaṭila nisvanava ugiva seregaḷa baḷi duhārada biguhugaḷa bīdigaḷa taḷi sā rigaḷa dhāḷādhūḷi masagitu bhūpa kēḷeṃda

Report an error

ರಾಯ ಸೋತನು ಶಕುನಿ ಬೇಡಿದ ದಾಯ ತಹ ಹಮ್ಮಿಗೆಯಲೊದಗಿದ ವಾಯತದ ಕೃತ್ರಿಮವಲೇ ಕೌರವರ ಸಂಕೇತ ಆಯಿತೀ ಹಲಗೆಯನು ಕೌರವ ರಾಯ ಗೆಲಿದನು ಮತ್ತೆ ಪಣವೇ ನಾಯಿತೆಂದನು ಶಕುನಿ ಯಮನಂದನನನೀಕ್ಷಿಸುತ

rāya sōtanu śakuni bēḍida dāya taha hammigeyalodagida vāyatada kr̥trimavalē kauravara saṃkēta āyitī halageyanu kaurava rāya gelidanu matte paṇavē nāyiteṃdanu śakuni yamanaṃdanananīkṣisuta

Report an error

ಕನಕಮಯ ರಥವೆರಡು ಸಾವಿರ ಮೊನೆಗೆ ಹೂಡಿದವೆಂಟು ಸಾವಿರ ವಿನುತ ವಾಜಿಗಳೊಡ್ಡವೆಂದನು ಧರ್ಮನಂದನನು ಜನಪತಿಗೆ ತಾನೈಸಲೇ ಹಾ ಯ್ಕೆನುತ ಸಾರಿಯ ಕೆದರಿದನು ದು ರ್ಜನರಿಗೊಲಿದುದು ದೈವಗತಿ ಬೊಬ್ಬಿರಿದನಾ ಶಕುನಿ

kanakamaya rathaveraḍu sāvira monege hūḍidaveṃṭu sāvira vinuta vājigaḷoḍḍaveṃdanu dharmanaṃdananu janapatige tānaisalē hā ykenuta sāriya kedaridanu du rjanarigolidudu daivagati bobbiridanā śakuni

Report an error

ಸೋತೆಯರಸಾ ನಿನಗೆ ಜೂಜಿನ ಭೀತಿಯುಂಟೇ ಮಾಣು ಮೇಣ್ ನಿ ರ್ಭೀತನೇ ನುಡಿ ಮೇಲಣೊಡ್ಡವ ಹಲವು ಮಾತೇನು ಕಾತರಿಸಬೇಡೆನಲು ಫಡ ಪಣ ಭೀತನೇ ತಾನಕಟೆನುತ ಕುಂ ತೀತನುಜನೊಡ್ಡಿದನು ಸಾವಿರ ಮತ್ತಗಜ ಘಟೆಯ

sōteyarasā ninage jūjina bhītiyuṃṭē māṇu mēṇ ni rbhītanē nuḍi mēlaṇoḍḍava halavu mātēnu kātarisabēḍenalu phaḍa paṇa bhītanē tānakaṭenuta kuṃ tītanujanoḍḍidanu sāvira mattagaja ghaṭeya

Report an error

ಆದವೆಮಗಿವು ಗಜ ಘಟೆಗಳೆಂ ದಾ ದುರಾತ್ಮಕನಾಡಿದನು ದು ರ್ಭೇದ ವಿವದಿರ ಕಪಟ ಮಂತ್ರವನಾವನರಿವವನು ಆದುದರಸಗೆ ಸೋಲವಿನ್ನೇ ನಾದುದೈ ಭೂಪತಿಯೆ ಗಜಘಟೆ ತೀದವೇ ಮೇಲೇನು ಪಣವುಂಟೆಂದನಾ ಶಕುನಿ

ādavemagivu gaja ghaṭegaḷeṃ dā durātmakanāḍidanu du rbhēda vivadira kapaṭa maṃtravanāvanarivavanu ādudarasage sōlavinnē nādudai bhūpatiye gajaghaṭe tīdavē mēlēnu paṇavuṃṭeṃdanā śakuni

Report an error

ಫಡ ದರಿದ್ರನೆ ತಾನು ತನ್ನಯ ಮಡದಿಯರ ಕೆಳದಿಯರು ಸಾವಿರ ಮಡಿ ಸುಯೋಧನ ರಾಜಭವನದ ವಾರನಾರಿಯರ ನುಡಿಯಬೇಕೇ ಧರ್ಮಸುತ ನಿ ಮ್ಮಡಿಗಳೊಡ್ಡಿದ ಬಳಿಕ ಗೆಲಿದವ ರೊಡವೆಯೈಸಲೆ ಹಾಯ್ಕು ಹಾಯ್ಕೆಂದೊದರಿದನು ಶಕುನಿ

phaḍa daridrane tānu tannaya maḍadiyara keḷadiyaru sāvira maḍi suyōdhana rājabhavanada vāranāriyara nuḍiyabēkē dharmasuta ni mmaḍigaḷoḍḍida baḷika gelidava roḍaveyaisale hāyku hāykeṃdodaridanu śakuni

Report an error

ಏನನಾಡಿದಡೇನು ಫಲ ದೈ ವಾನುಕೂಲ್ಯದ ಕುಣಿಕೆ ಬೇರಹು ದಾ ನರೇಂದ್ರನ ಸಾರಿ ಸೋತುದು ನಿಮಿಷ ಮಾತ್ರದಲಿ ಆ ನಿರೂಢಿಯ ಹತ್ತು ಸಾವಿರ ಮಾನಿನಿಯರನು ಮತ್ತೆ ಸೋತನು ಮಾನನಿಧಿಯೇ ಮತ್ತೆ ಪಣವೇನೆಂದನಾ ಶಕುನಿ

ēnanāḍidaḍēnu phala dai vānukūlyada kuṇike bērahu dā narēṃdrana sāri sōtudu nimiṣa mātradali ā nirūḍhiya hattu sāvira māniniyaranu matte sōtanu mānanidhiyē matte paṇavēneṃdanā śakuni

Report an error

ಅರಸಿಯರ ಮೈಗಾಹುಗಳ ಕಿಂ ಕರರು ಸಾವಿರವಿದೆ ಪಣ ನಿ ಮ್ಮರಸನಲಿ ಪಣವೇನೆನಲು ನೀವೇನನೊಡ್ಡಿದಿರಿ ಮರಳಿ ಬೆಸಗೊಳಬೇಡ ನಮ್ಮಲಿ ಬರಹವದು ಹಾಯ್ಕೆನುತ ಸಾರಿಯ ಬೆರಸಿ ತಿವಿದಾಡಿದನು ಹೆಕ್ಕಳವಿಕ್ಕಿದನು ಶಕುನಿ

arasiyara maigāhugaḷa kiṃ kararu sāviravide paṇa ni mmarasanali paṇavēnenalu nīvēnanoḍḍidiri maraḷi besagoḷabēḍa nammali barahavadu hāykenuta sāriya berasi tividāḍidanu hekkaḷavikkidanu śakuni

Report an error

ಅರಸ ಸೋತೈ ನಾರಿಯರ ಜಯ ಮರಳಿತಿತ್ತಲು ಮನಕೆ ಭಿತಿಯ ಬೆರಕೆಯುಳ್ಳಡೆ ಬಿಟ್ಟು ಕಳೆ ಪೈಸರಕೆ ಸಮಯವಿದು ಅರಸು ಪಂಥದ ವಾಸಿ ಮನಕು ಬ್ಬರಿಸುವೊಡೆ ಪಣವೇನು ಹೇಳೈ ಧರಣಿಪಾಲಯೆನುತ್ತ ರಿಂಗಣಗುಣಿದನಾ ಶಕುನಿ

arasa sōtai nāriyara jaya maraḷitittalu manake bhitiya berakeyuḷḷaḍe biṭṭu kaḷe paisarake samayavidu arasu paṃthada vāsi manaku bbarisuvoḍe paṇavēnu hēḷai dharaṇipālayenutta riṃgaṇaguṇidanā śakuni

Report an error

ಎಲವೊ ಸೌಬಲ ಪಾಂಡುವಿನ ಮ ಕ್ಕಳು ಕಣಾ ಚತುರಂಬುನಿಧಿಮೇ ಖಲೆಯ ಉತ್ತರ ಕುರು ನರೇಂದ್ರರ ಸೀಮೆಪರಿಯಂತ ನೆಲವಿದೆಮ್ಮದು ನೃಪರೊಳಗೆ ನಾ ವುಳಿಯೆ ಧರಣಿಪರಾರು ರಥ ಸಂ ಕುಳವನೊಡ್ಡುವೆನೊಂದು ಬಾರಿಗೆ ಹತ್ತು ಸಾವಿರವ

elavo saubala pāṃḍuvina ma kkaḷu kaṇā caturaṃbunidhimē khaleya uttara kuru narēṃdrara sīmepariyaṃta nelavidemmadu nr̥paroḷage nā vuḷiye dharaṇiparāru ratha saṃ kuḷavanoḍḍuvenoṃdu bārige hattu sāvirava

Report an error

ಈ ರಥಕೆ ನಾಲ್ವತ್ತು ಸಾವಿರ ವಾರುವಂಗಳ ಕೂಟವಾ ಪರಿ ವಾರವಿದೆಲಾ ರಪಣವೆಂದನು ಸುಬಲತನಯಂಗೆ ವೀರನಹೆಯೈ ಧರಣಿಪತಿ ತೆಗೆ ಸಾರಿಗಳ ಬಿಡು ಸೆರೆಯ ಬಿಗಿದು ದು ಹಾರದಲಿ ನೀ ಸೋತೆ ಹೋಗೆಂದೊದರಿದನು ಶಕುನಿ

ī rathake nālvattu sāvira vāruvaṃgaḷa kūṭavā pari vāravidelā rapaṇaveṃdanu subalatanayaṃge vīranaheyai dharaṇipati tege sārigaḷa biḍu sereya bigidu du hāradali nī sōte hōgeṃdodaridanu śakuni

Report an error

ಆವ ಕೌಳಿಕ ಮಂತ್ರತಂತ್ರದ ಡಾವರದ ಡೊಳ್ಳಾಸವಿಕ್ಕಿದ ದೀವಸದ ಬೇಳುವೆಯನೇನೆಂಬೆನು ಮಹೀಪತಿಯ ಆವ ವಸ್ತುವನರಸನೊಡ್ಡುವ ನಾವ ವಹಿಲದಲಾತ ಸೋಲಿಸಿ ಕೈವಳಿಸಿದನೊ ಬಲ್ಲನಾವವನೆಂದನಾ ಮುನಿಪ

āva kauḷika maṃtrataṃtrada ḍāvarada ḍoḷḷāsavikkida dīvasada bēḷuveyanēneṃbenu mahīpatiya āva vastuvanarasanoḍḍuva nāva vahiladalāta sōlisi kaivaḷisidano ballanāvavaneṃdanā munipa

Report an error

ಅರಸ ನೀಗಿದೆ ಹತ್ತು ಸಾವಿರ ವರ ರಥವನಿನ್ನೇನು ಸಾಕೀ ಸರಲಿ ನಿಲುವದು ವಿತ್ತವುಂಟೇ ಮತ್ತೆ ಹೇಳೆನಲು ಮರುಳೆ ಸೌಬಲ ಚಿತ್ರರಥನೀ ನರಗೆ ಕೊಟ್ಟನು ತೇಜಿಗಳ ತಿ ತ್ತಿರಿಯ ಬಣ್ಣದ ಹತ್ತು ಸಾವಿರ ತುರಗವಿವೆಯೆಂದ

arasa nīgide hattu sāvira vara rathavaninnēnu sākī sarali niluvadu vittavuṃṭē matte hēḷenalu maruḷe saubala citrarathanī narage koṭṭanu tējigaḷa ti ttiriya baṇṇada hattu sāvira turagaviveyeṃda

Report an error

ಆಡಿದನು ನೃಪನಾ ಕ್ಷಣಕೆ ಹೋ ಗಾಡಿದನು ಖೇಚರರ ಖಾಡಾ ಖಾಡಿಯಲಿ ಝಾಡಿಸಿದ ಹಯವನು ಹತ್ತು ಸಾವಿರವ ಹೂಡಿದನು ಸಾರಿಗಳ ಮರಳಿ ನ್ನಾಡುವರೆ ಪಣವಾವುದೈ ಮಾ ತಾಡಿಯೆನೆ ಮನದಲಿ ಮಹೀಪತಿ ಧನವ ಚಿಂತಿಸಿದ

āḍidanu nr̥panā kṣaṇake hō gāḍidanu khēcarara khāḍā khāḍiyali jhāḍisida hayavanu hattu sāvirava hūḍidanu sārigaḷa maraḷi nnāḍuvare paṇavāvudai mā tāḍiyene manadali mahīpati dhanava ciṃtisida

Report an error

ಅಗಣಿತದ ಧನವುಂಟು ಹಾಸಂ ಗಿಗಳ ಹಾಯಿಕು ಸೋತ ವಸ್ತುವ ತೆಗೆವೆನೀಗಳೆ ಶಕುನಿ ನೋಡಾ ತನ್ನ ಕೌಶಲವ ದುಗುಣ ಹಲಗೆಗೆ ಹತ್ತು ಮಡಿ ರೇ ಖೆಗೆ ಗಜಾಶ್ವನಿಕಾಯ ರಥವಾ ಜಿಗಳು ಸಹಿತಿದೆ ಸಕಲ ಸೈನಿಕವೆಂದನಾ ಭೂಪ

agaṇitada dhanavuṃṭu hāsaṃ gigaḷa hāyiku sōta vastuva tegevenīgaḷe śakuni nōḍā tanna kauśalava duguṇa halagege hattu maḍi rē khege gajāśvanikāya rathavā jigaḷu sahitide sakala sainikaveṃdanā bhūpa

Report an error

ಆಯಿತಿದು ಪಣವಹುದಲೇ ನೃಪ ಹಾಯಿಕಾ ಹಾಸಂಗಿಗಳ ಸಾ ಹಾಯ ಕುರುಪತಿಗಿಲ್ಲ ಕೃಷ್ಣಾದಿಗಳು ನಿನ್ನವರು ದಾಯ ಕಂದೆರೆವರೆ ಸುಯೋಧನ ರಾಯನುಪಚಿತಪುಣ್ಯವಕಟಾ ದಾಯವೇ ಬಾಯೆಂದು ಮಿಗೆ ಬೊಬ್ಬಿರಿದನಾ ಶಕುನಿ

āyitidu paṇavahudalē nr̥pa hāyikā hāsaṃgigaḷa sā hāya kurupatigilla kr̥ṣṇādigaḷu ninnavaru dāya kaṃderevare suyōdhana rāyanupacitapuṇyavakaṭā dāyavē bāyeṃdu mige bobbiridanā śakuni

Report an error

ಮತ್ತೆ ಹೇಳುವುದೇನ ಸೋಲವ ಬಿತ್ತಿ ಬೆಳೆದನು ಭೂಪನವರಿಗೆ ತೆತ್ತ ನೈ ಸರ್ವಸ್ವ ಧನವನು ಸಕಲ ಸೈನಿಕನ ಮತ್ತೆ ಪಣವೇನೆನಲು ಬಳಿಕರು ವತ್ತು ಸಾವಿರ ಕರಿಕಳಭವೆಂ ಬತ್ತು ಸಾವಿರ ತುರಗ ಶಿಶುಗಳನೊಡ್ಡಿದನು ಭೂಪ

matte hēḷuvudēna sōlava bitti beḷedanu bhūpanavarige tetta nai sarvasva dhanavanu sakala sainikana matte paṇavēnenalu baḷikaru vattu sāvira karikaḷabhaveṃ battu sāvira turaga śiśugaḷanoḍḍidanu bhūpa

Report an error

ಅರಸ ಕೇಳೀ ತುರಗವೀ ರಥ ಕರಿ ನಿಕರವೀ ಸೈನ್ಯ ಹಸ್ತಿನ ಪುರಿಗೆ ಬಂದುದು ತಮ್ಮ ಕೂಡೆ ವಿನೋದ ಕೇಳಿಯಲಿ ಕುರುಪತಿಯ ವಶವಾಯ್ತು ಬಳಿಕಿನ ಮರಿಗುದುರೆ ಮರಿಯಾನೆಗಳನು ಚ್ಚರಿಸಿ ಸಾರಿಯ ಸೋಕಿದಾಗಲೆ ಸೋತನಾ ಭೂಪ

arasa kēḷī turagavī ratha kari nikaravī sainya hastina purige baṃdudu tamma kūḍe vinōda kēḷiyali kurupatiya vaśavāytu baḷikina marigudure mariyānegaḷanu ccarisi sāriya sōkidāgale sōtanā bhūpa

Report an error

ಅಕಟ ಸಾಲದೆ ಜೂಜು ನಿರ್ಬಂ ಧಕವೆ ಶಿವಶಿವ ತಾನಿದೆತ್ತಣ ಶಕುನಿಯೆತ್ತಣ ಭರತಕುಲದ ಮಹಾ ಮಹೀಶ್ವರರು ವಿಕಳ ಚೇಷ್ಟೆಯದೇನು ವೃದ್ಧ ಪ್ರಕರಕಿದು ವಿಳಸವೆ ವಿಘಾತಿಗೆ ಸಕಲಜನ ಸಮ್ಮತವೆಯೆಂದನು ಖಾತಿಯಲಿ ವಿದುರ

akaṭa sālade jūju nirbaṃ dhakave śivaśiva tānidettaṇa śakuniyettaṇa bharatakulada mahā mahīśvararu vikaḷa cēṣṭeyadēnu vr̥ddha prakarakidu viḷasave vighātige sakalajana sammataveyeṃdanu khātiyali vidura

Report an error

ವರಪುರೂರವ ನಹುಷನವನೀ ಶ್ವರತಿಲಕ ದುಷ್ಯಂತ ಕುರುಸಂ ವರಣನಮಲ ಯಯಾತಿಯಾದಿ ಪರಂಪರಾಗತದ ಭರತ ಕುಲವಿದರೊಳಗೆ ವಂಶೋ ದ್ಧರರಿಳೆಯ ಬೆಳಗಿದರು ನೀನವ ತರಿಸಿ ತಂದೈ ತೊಡಕನೆಂದನು ಖಾತಿಯಲಿ ವಿದುರ

varapurūrava nahuṣanavanī śvaratilaka duṣyaṃta kurusaṃ varaṇanamala yayātiyādi paraṃparāgatada bharata kulavidaroḷage vaṃśō ddharariḷeya beḷagidaru nīnava tarisi taṃdai toḍakaneṃdanu khātiyali vidura

Report an error

ಸೋಲ ಮಚ್ಚಿದುದಿವರನೊಡ್ಡದ ಮೇಲೆ ಹೇರಿದುದೊಡ್ಡವೀಗಳು ಮೇಲುಗೈ ನೀನಾದೆ ಕುಸಿದರು ಪಾಂಡು ನಂದನರು ಸೋಲವಿದು ಕಾಲಾಂತಕನ ಮೈ ಸಾಲ ಸಾರಿದೆನಕಟ ಸಾಕಿ ನ್ನೇಳು ಕೌರವ ನೃಪತಿಯೆಂದನು ಖಾತಿಯಲಿ ವಿದುರ

sōla maccidudivaranoḍḍada mēle hēridudoḍḍavīgaḷu mēlugai nīnāde kusidaru pāṃḍu naṃdanaru sōlavidu kālāṃtakana mai sāla sāridenakaṭa sāki nnēḷu kaurava nr̥patiyeṃdanu khātiyali vidura

Report an error

ಗೆಲಿದ ಧನವಕ್ಕುವುದೆ ಸೋತವ ರಳುಕಿದವರೇ ಪಾಂಡುಪುತ್ರರ ಬಲುಹ ಬೆಸಗೊಳ್ಳಾ ತದೀಯ ಶ್ರವಣ ದೃಷ್ಟಿಗಳ ಎಲೆ ಸುಯೋಧನ ವಿಷದ ಮಧುರವು ಕೊಲುವುದೋ ಮನ್ನಿಸುವುದೋ ಕ ಕ್ಕುಲಿತೆಗಿದು ಕಡೆಹಾರವಾಗಲಿ ಸಾಕು ತೆಗೆಯೆಂದ

gelida dhanavakkuvude sōtava raḷukidavarē pāṃḍuputrara baluha besagoḷḷā tadīya śravaṇa dr̥ṣṭigaḷa ele suyōdhana viṣada madhuravu koluvudō mannisuvudō ka kkulitegidu kaḍehāravāgali sāku tegeyeṃda

Report an error

ಗೆಲಿದ ದರ್ಪದ ದಡ್ಡಿ ತೆಗೆ ಸೌ ಬಲನ ಬೀಳ್ಕೊಡು ನಿಖಿಲ ಬಾಂಧವ ಕುಲಸಹಿತ ನೀ ಮಧುರ ವಚನದಲಿವರ ಸಂತೈಸು ನೆಲನನೇಕಚ್ಛತ್ರದಲಿ ಹದ ಗೊಳಿಸು ಬದುಕುವರಿದು ನಿಜಾನ್ವಯ ದುಳಿವು ಬೆಸಗೊಳು ಬೇಹ ಹಿರಿಯರನೆಂದನಾ ವಿದುರ

gelida darpada daḍḍi tege sau balana bīḷkoḍu nikhila bāṃdhava kulasahita nī madhura vacanadalivara saṃtaisu nelananēkacchatradali hada goḷisu badukuvaridu nijānvaya duḷivu besagoḷu bēha hiriyaraneṃdanā vidura

Report an error

ಖೂಳನೆಂಬೆನೆ ಸಕಲ ಕಲೆಗಳ ಬಾಳುಮನೆ ಗಡ ನಿನ್ನ ಬುದ್ಧಿ ವಿ ಶಾಲಮತಿ ನೀನೆಂಬೆನೇ ಜಗದಜ್ಞರಧಿದೈವ ಕೇಳಿದೊಡೆ ಮೇಣಹಿತ ಹಿತವನು ಹೇಳುವದು ಪಾಂಡಿತ್ಯ ನಿನ್ನನು ಕೇಳಿದವರಾರೆಂದು ಜರೆದನು ಕೌರವರ ರಾಯ

khūḷaneṃbene sakala kalegaḷa bāḷumane gaḍa ninna buddhi vi śālamati nīneṃbenē jagadajñaradhidaiva kēḷidoḍe mēṇahita hitavanu hēḷuvadu pāṃḍitya ninnanu kēḷidavarāreṃdu jaredanu kauravara rāya

Report an error

ಹಿತವ ನೀನವರಿಗೆ ಕುಟುಂಬ ಸ್ಥಿತಿ ವಿಡಂಬಕೆ ನಾವು ಕುಂತೀ ಸುತರೊಡನೆ ಸಮ್ಮೇಳವೆಮ್ಮೊಳು ವೈಮನಸ್ಯಗತಿ ಕೃತಕ ಮಾರ್ಗದ ಮೋಡಿಯಲಿ ಪರಿ ಚಿತನು ನೀನಲ್ಲಕ್ಷ ವಿಮಲ ಕ್ರತು ವಿಧಾನವನಕ್ಷ ದೀಕ್ಷಿತರರಿವರಿದನೆಂದ

hitava nīnavarige kuṭuṃba sthiti viḍaṃbake nāvu kuṃtī sutaroḍane sammēḷavemmoḷu vaimanasyagati kr̥taka mārgada mōḍiyali pari citanu nīnallakṣa vimala kratu vidhānavanakṣa dīkṣitararivaridaneṃda

Report an error

ನೀ ಹಿತವನೈ ಶಕುನಿ ರಾಜ ದ್ರೋಹಿಯೈ ಹುಸಿಯಲ್ಲ ನೀನೇ ಹೋಹುದೈ ನಿನಗಾವುದಭಿಮತವಾ ದಿಗಂತರಕೆ ಐಹಿಕಾಮುಷ್ಠಿಕದ ವಿಭವೋ ತ್ಸಾಹ ನಿಸ್ಪೃಹರಾವಲೇ ಸಂ ದೇಹವೇ ನೀವರಿವಿರೆಂದನು ತೂಗಿ ತುದಿವೆರಳ

nī hitavanai śakuni rāja drōhiyai husiyalla nīnē hōhudai ninagāvudabhimatavā digaṃtarake aihikāmuṣṭhikada vibhavō tsāha nispr̥harāvalē saṃ dēhavē nīvarivireṃdanu tūgi tudiveraḷa

Report an error

ಗುರುಗಳುಸುರರು ಭೀಷ್ಮರೆಮ್ಮನು ಕೆರಳಿಚರು ಕೃಪ ನುಡಿಯನಯ್ಯನ ಕೊರಳು ಕೊಂಕದು ಬಾಹ್ಲಿಕನ ಮನ ನೋಯದಿನ್ನೆಬರ ಹಿರಿಯರಿವರೇನಜ್ಞರೇ ನೀ ಪರಮತತ್ವಜ್ಞಾನಿಯೇ ಕಾ ತರಿಸದಿರು ನೀನೆಂದು ಟಕ್ಕರಿಗಳೆದನಾ ಭೂಪ

gurugaḷusuraru bhīṣmaremmanu keraḷicaru kr̥pa nuḍiyanayyana koraḷu koṃkadu bāhlikana mana nōyadinnebara hiriyarivarēnajñarē nī paramatatvajñāniyē kā tarisadiru nīneṃdu ṭakkarigaḷedanā bhūpa

Report an error

ಇವರ ಜನಪಾಧ್ವರವನಡಹಾ ಯ್ದವನನಾಗಳೆ ದೇವಕೀಸುತ ಸವರಿದನು ನಮ್ಮೀ ವಿನೋದದ್ಯೂತಸಂಪದದ ಸವನ ವಿಘ್ನ ವಿಕಾರಿಯನು ಪರಿ ಭವಿಸುವವರನು ಕಾಣೆ ಶಿವಯೆಂ ದವವನಿಪತಿ ನಿಜ ಹುಬ್ಬಿನಲಿ ಹೂಳಿದನು ಪರಿಚರರ

ivara janapādhvaravanaḍahā ydavananāgaḷe dēvakīsuta savaridanu nammī vinōdadyūtasaṃpadada savana vighna vikāriyanu pari bhavisuvavaranu kāṇe śivayeṃ davavanipati nija hubbinali hūḷidanu paricarara

Report an error

ಮಣಿಯೆ ನೀನಿಲ್ಲೀಯನರ್ಥವ ಕುಣಿಕೆಗೊಳಿಸಿದ ನೀ ಸಹಿತ ನಿ ನ್ನೆಣೆಗಳಹ ಸೈಂಧವನನೀ ರಾಧೇಯ ಶಕುನಿಗಳ ರಣದೊಳಗೆ ಭೀಮಾರ್ಜುನರ ಮಾ ರ್ಗಣದ ಧಾರೆಗೆ ವೀರನಾರಾ ಯಣನೆ ಸೇರಿಸಿಕೊಡುವನರಿದಿರುಯೆಂದನಾ ವಿದುರ

maṇiye nīnillīyanarthava kuṇikegoḷisida nī sahita ni nneṇegaḷaha saiṃdhavananī rādhēya śakunigaḷa raṇadoḷage bhīmārjunara mā rgaṇada dhārege vīranārā yaṇane sērisikoḍuvanaridiruyeṃdanā vidura

Report an error

Illustration: Verse & Place (Project-owned).