ಮುತ್ತಿ ಮೂದಲಿಸಿದರು ಕುರುರಾ ಜೋತ್ತಮನನುದಕದಲಿ ಹೊರವಡಿ ಸುತ್ತ ಕಂಡರು ಪಾಂಡುತನುಜರು ರೋಹಿಣೀಸುತನ
mutti mūdalisidaru kururā jōttamananudakadali horavaḍi sutta kaṃḍaru pāṃḍutanujaru rōhiṇīsutana
ಗದಾ ಪರ್ವ — ಸಂಧಿ ೫ · ಗದಾ ಪರ್ವ — ಸಂಧಿ ೫
gadā parva — saṃdhi 5
The complete gada parva · sandhi 5 in Kannada.
57 passagesKannada with transliteration
Invocation
ಮುತ್ತಿ ಮೂದಲಿಸಿದರು ಕುರುರಾ ಜೋತ್ತಮನನುದಕದಲಿ ಹೊರವಡಿ ಸುತ್ತ ಕಂಡರು ಪಾಂಡುತನುಜರು ರೋಹಿಣೀಸುತನ
mutti mūdalisidaru kururā jōttamananudakadali horavaḍi sutta kaṃḍaru pāṃḍutanujaru rōhiṇīsutana
ಕೇಳು ಧೃತರಾಷ್ಟ್ರಾವನಿಪ ರಿಪು ಜಾಲ ಜಡಿದುದು ಕೊಳನ ತಡಿಯಲಿ ತೂಳಿದುದು ಬಲುಬೊಬ್ಬೆಯಬ್ಬರವಭ್ರಮಂಡಲವ ಸೂಳವಿಸಿದವು ಲಗ್ಗೆಯಲಿ ನಿ ಸ್ಸಾಳ ಬಹುವಿಧ ವಾದ್ಯರವ ಹೆ ಗ್ಗಾಳೆಗಳು ಚೀರಿದವು ಬೈಸಿಕೆ ಬಿಡೆ ಕುಲಾದ್ರಿಗಳ
kēḷu dhr̥tarāṣṭrāvanipa ripu jāla jaḍidudu koḷana taḍiyali tūḷidudu balubobbeyabbaravabhramaṃḍalava sūḷavisidavu laggeyali ni ssāḷa bahuvidha vādyarava he ggāḷegaḷu cīridavu baisike biḍe kulādrigaḷa
ತಳಮಳಲ ಮೊಗೆಮೊಗೆದು ಕದಡಿತು ಕೊಳನ ಜಲಚರನಿಚಯವೀ ಬೊ ಬ್ಬುಳಿಕೆ ಮಿಗಲೊಬ್ಬುಳಿಕೆ ನೆಗೆದವು ವಿಗತವೈರದಲಿ ದಳವ ಬಿಗಿದಂಬುಜದೊಳಡಗಿದ ವಳಿನಿಕರ ಹಾರಿದವು ಹಂಸಾ ವಳಿ ಜವಾಯಿಲತನದಿ ಜಗುಳ್ದವು ಜಕ್ಕವಕ್ಕಿಗಳು
taḷamaḷala mogemogedu kadaḍitu koḷana jalacaranicayavī bo bbuḷike migalobbuḷike negedavu vigatavairadali daḷava bigidaṃbujadoḷaḍagida vaḷinikara hāridavu haṃsā vaḷi javāyilatanadi jaguḷdavu jakkavakkigaḷu
ಬಂದುದರಿಬಲ ಕೊಳನ ತೀರದ ಲಂದು ವೇಢೈಸಿದರು ಸರಸಿಯ ಬಂದಿಕಾರರು ಬೊಬ್ಬಿರಿದರಬ್ಬರಕೆ ಧರೆ ಬಿರಿಯೆ ಅಂದಣದಲೈತಂದು ಧರ‍್ಮಜ ನಿಂದನರ್ಜುನ ಭೀಮ ಯಮಳ ಮು ಕುಂದ ಸಾತ್ಯಕಿ ದ್ರುಪದಸೂನು ಶಿಖಂಡಿಗಳು ಸಹಿತ
baṃdudaribala koḷana tīrada laṃdu vēḍhaisidaru sarasiya baṃdikāraru bobbiridarabbarake dhare biriye aṃdaṇadalaitaṃdu dharmaja niṃdanarjuna bhīma yamaḷa mu kuṃda sātyaki drupadasūnu śikhaṃḍigaḷu sahita
ವರ ಯುಧಾಮನ್ಯೂತ್ತಮೌಂಜಸ ರಿರಲು ಪಂಚದ್ರೌಪದೀಸುತ ರರಸ ನಿಮ್ಮ ಯುಯುತ್ಸು ಸೃಂಜಯ ಸೋಮಕಾದಿಗಳು ಕರಿಗಳೈನೂರೈದು ಸಾವಿರ ತುರಗಪಯದಳವೆಂಟು ಸಾವಿರ ವೆರಡು ಸಾವಿರ ರಥವಿದರಿಮೋಹರದ ಪರಿಶೇಷ
vara yudhāmanyūttamauṃjasa riralu paṃcadraupadīsuta rarasa nimma yuyutsu sr̥ṃjaya sōmakādigaḷu karigaḷainūraidu sāvira turagapayadaḷaveṃṭu sāvira veraḍu sāvira rathavidarimōharada pariśēṣa
ದೇವ ಕಂಡಿರೆ ಕುರುಪತಿಯ ಮಾ ಯಾವಿಡಂಬನವಿದ್ಯೆಯನು ನಿ ಷ್ಠೀವನಾವಿರ್ಭೂತ ಸಲಿಲಸ್ತಂಭ ಡಂಬರವ ಆವುದಿಲ್ಲಿಯ ವಿಧಿಯ ಸಮರ ವ್ಯಾವಹಾರಿಕ ವಿಷಯ ತಪ್ಪದೆ ನೀವು ಬೆಸಸುವುದೆಂದನರಸನು ದೇವಕೀಸುತನ
dēva kaṃḍire kurupatiya mā yāviḍaṃbanavidyeyanu ni ṣṭhīvanāvirbhūta salilastaṃbha ḍaṃbarava āvudilliya vidhiya samara vyāvahārika viṣaya tappade nīvu besasuvudeṃdanarasanu dēvakīsutana
ಭರತವಂಶಲಲಾಮ ಕೇಳ್ ನೃಪ ವರರ ಪದ್ಧತಿ ಕಂಟಕದಿನು ತ್ತರಿಸುವುದು ಕಂಟಕವ ಮಾಯಾವಿಗಳ ವಿದ್ಯೆಗಳ ಪರಿಹರಿಸುವುದು ಮಾಯೆಯಿಂ ಪ್ರತಿ ಗರಳದಲಿ ಗರಳವನು ಮಾಯಾ ಪರರು ಮಾಯೋಪಾಯವಧ್ಯರು ಭೂಪ ಕೇಳೆಂದ
bharatavaṃśalalāma kēḷ nr̥pa varara paddhati kaṃṭakadinu ttarisuvudu kaṃṭakava māyāvigaḷa vidyegaḷa pariharisuvudu māyeyiṃ prati garaḷadali garaḷavanu māyā pararu māyōpāyavadhyaru bhūpa kēḷeṃda
ಮರಣವೆಂದಿಂಗಾಗದಂತಿರೆ ವರವ ಕೊಂಡು ಹಿರಣ್ಯಕಾಸುರ ಸುರನರೋರಗರನು ವಿಭಾಡಿಸಿ ಧರ‍್ಮಪದ್ಧತಿಗೆ ಧರಧುರವ ಮಾಡಿದಡೆ ನರಕೇ ಸರಿಯ ರೂಪಿನೊಳಾದಿವಿಶ್ವಂ ಭರನು ಗೆಲಿದನು ಮಾಯೆಯನು ಮಾಯಾಭಿಯೋಗದಲಿ
maraṇaveṃdiṃgāgadaṃtire varava koṃḍu hiraṇyakāsura suranarōragaranu vibhāḍisi dharmapaddhatige dharadhurava māḍidaḍe narakē sariya rūpinoḷādiviśvaṃ bharanu gelidanu māyeyanu māyābhiyōgadali
ಲಲಿತ ವೈದಿಕ ಧರ್ಮಮಾರ್ಗವ ನಳಿದು ಹೆಚ್ಚಿದ ಕಾಲನೇಮಿಯ ತಲೆಯ ಕೊಂಡನು ಚಕ್ರದಲಿ ದೈತ್ಯಾರಿ ಪೂರ್ವದಲಿ ಬಲನ ಜಂಭನ ವೃತ್ರನನು ಶೃಂ ಖಳಿತ ಮಾಯರ ಮಾಯೆಯಿಂದವೆ ಬಲವಿರೋಧಿ ವಿಭಾಡಿಸಿದನವನೀಶ ಕೇಳೆಂದ
lalita vaidika dharmamārgava naḷidu heccida kālanēmiya taleya koṃḍanu cakradali daityāri pūrvadali balana jaṃbhana vr̥trananu śr̥ṃ khaḷita māyara māyeyiṃdave balavirōdhi vibhāḍisidanavanīśa kēḷeṃda
ಹರನ ವರದಲಿ ಹೆಚ್ಚಿ ಭಸ್ಮಾ ಸುರನು ಶಿವನ ವಿರೋಧಿಸಿದನು ಬ್ಬರದವನನುರುಹಿದನು ಹರಿ ಮಾಯಾಪ್ರಯೋಗದಲಿ ಸುರರನರೆಯಾಳಿದನು ಭುವನವ ನೊರಲಿಸಿದ ರಾವಣನ ರೂಢಿಯ ಶಿರವ ನರರೂಪಿನಲಿ ಖತಿಯಲಿ ರಾಮ ಖಂಡಿಸಿದ
harana varadali hecci bhasmā suranu śivana virōdhisidanu bbaradavananuruhidanu hari māyāprayōgadali suraranareyāḷidanu bhuvanava noralisida rāvaṇana rūḍhiya śirava nararūpinali khatiyali rāma khaṃḍisida
ಎಮಗೆ ತಾಯೊಡಹುಟ್ಟಿದನು ನಿ ರ್ಮಮತೆಯಲಿ ನಿರ್ಧಾಟಿಸಿದನಾ ಕ್ರಮದಲೇ ಕಂಸಂಗೆ ಹಿಂಸಾಕೃತಿಯ ರಚಿಸಿದೆವು ಸಮರದೊಳಗೆ ಸೃಗಾಲನೃಪನಾ ಕ್ರಮಿಸಿದನು ಠಕ್ಕಿನಲಿ ಮಾಯಾ ತಿಮಿರವನು ಮಾಯೆಯಲಿ ಗೆಲಿದೆವು ಭೂಪ ಕೇಳೆಂದ
emage tāyoḍahuṭṭidanu ni rmamateyali nirdhāṭisidanā kramadalē kaṃsaṃge hiṃsākr̥tiya racisidevu samaradoḷage sr̥gālanr̥panā kramisidanu ṭhakkinali māyā timiravanu māyeyali gelidevu bhūpa kēḷeṃda
ಕಾಲಯವನನ ದಂತವಕ್ತ್ರನ ಸಾಲುವನ ಮಾಗಧನ ನರಕನ ಸೀಳಿದೆವು ಕೃತಮಾಯರನು ಮಾಯಾಪ್ರಪಂಚದಲಿ ಢಾಳರನು ಢವಳರನು ಠಕ್ಕಿನ ಠೌಳಿಕಾರರನವರ ವಿದ್ಯೆಯ ಲಾಳಿಗೊಂಡಡೆ ದೋಷವಿಲ್ಲವನೀಶ ಕೇಳೆಂದ
kālayavanana daṃtavaktrana sāluvana māgadhana narakana sīḷidevu kr̥tamāyaranu māyāprapaṃcadali ḍhāḷaranu ḍhavaḷaranu ṭhakkina ṭhauḷikāraranavara vidyeya lāḷigoṃḍaḍe dōṣavillavanīśa kēḷeṃda
ದ್ಯೂತ ಮೃಗಯಾವ್ಯಸನವಿವು ನೃಪ ಜಾತಿಗಾದ ವಿನೋದ ಕಪಟ ದ್ಯೂತವಿದು ನೃಪಧರ್ಮವೇ ಮಾಯಾಭಿಯೋಗದಲಿ ಸೋತಿರಿಳೆಯನದಂತಿರಲಿ ನಿ ರ್ಭೀತಿಯಲಿ ನಿಮ್ಮರಸಿಯುಟ್ಟುದ ನೀತ ಸುಲಿಸಿದನಿವನು ಸುಜನನೆ ಭೂಪ ಹೇಳೆಂದ
dyūta mr̥gayāvyasanavivu nr̥pa jātigāda vinōda kapaṭa dyūtavidu nr̥padharmavē māyābhiyōgadali sōtiriḷeyanadaṃtirali ni rbhītiyali nimmarasiyuṭṭuda nīta sulisidanivanu sujanane bhūpa hēḷeṃda
ಐಹಿಕದ ಸಂಭಾವನೆಯ ಸ ಮ್ಮೋಹನಕೆ ಮರುಳಾಗಿ ಸುಕೃತ ದ್ರೋಹವಾಗದಲೇ ಸುಯೋಧನವಧೆಯ ದೆಸೆಯಿಂದ ಈ ಹದನ ಬಿನ್ನೈಸಿದೆವು ನೀ ವಾಹವಕೆ ಧರ‍್ಮಾರ್ಥಶಾಸ್ತ್ರವ ನೂಹಿಸಿದಿರೆಂದರಸ ನುಡಿಸಿದನಿತ್ತ ಕುರುಪತಿಯ
aihikada saṃbhāvaneya sa mmōhanake maruḷāgi sukr̥ta drōhavāgadalē suyōdhanavadheya deseyiṃda ī hadana binnaisidevu nī vāhavake dharmārthaśāstrava nūhisidireṃdarasa nuḍisidanitta kurupatiya
ಏಳು ಕೌರವರಾಯ ಸಲಿಲ ವ್ಯಾಳನೇ ನೀನಕಟ ಜಲದೊಳ ಗಾಳುವರೆ ಕಾಳಾಯ್ತು ನಿನ್ನಲಿ ಗರುವ ಶಶಿವಂಶ ಕಾಳೆಗದೊಳದ್ದಿದೆ ಸಹೋದರ ಜಾಲ ಪುತ್ರಜ್ಞಾತಿ ಬಂಧು ನೃ ಪಾಲರನು ನೀ ನೀರೊಳಡಗಿದೆ ಕಷ್ಟವಾಯ್ತೆಂದ
ēḷu kauravarāya salila vyāḷanē nīnakaṭa jaladoḷa gāḷuvare kāḷāytu ninnali garuva śaśivaṃśa kāḷegadoḷaddide sahōdara jāla putrajñāti baṃdhu nr̥ pālaranu nī nīroḷaḍagide kaṣṭavāyteṃda
ಜಾತಿಮಾತ್ರದಮೇಲೆ ಬಂದ ಖ್ಯಾತಿವಿಖ್ಯಾತಿಗಳು ನಮಗೆನೆ ಜಾತರಾದೆವು ನಾವು ನಿರ‍್ಮಳಸೋಮವಂಶದಲಿ ಭೀತಿಯಲಿ ನೀ ನೀರ ಹೊಕ್ಕಡೆ ಮಾತು ತಾಗದೆ ತಮ್ಮನಕಟಾ ಬೂತುಗಳ ಕೈಬಾಯ್ಗೆ ಬಂದೈ ತಂದೆ ಕುರುರಾಯ
jātimātradamēle baṃda khyātivikhyātigaḷu namagene jātarādevu nāvu nirmaḷasōmavaṃśadali bhītiyali nī nīra hokkaḍe mātu tāgade tammanakaṭā būtugaḷa kaibāyge baṃdai taṃde kururāya
ನಾಡೊಳರ್ಧವ ಕೊಡದೆ ಹೋದಡೆ ಬೇಡಿದೈದೂರುಗಳ ಕೊಡುಯೆನ ಲೇಡಿಸಿದಲೈ ಸೂಚಿಯಗ್ರಪ್ರಮಿತಧಾರುಣಿಯ ಕೂಡೆ ನೀ ಕೊಡೆನೆಂದು ದರ್ಪವ ಮಾಡಿ ಸಕಲ ಮಹೀತಳವ ಹೋ ಗಾಡಿ ಹೊಕ್ಕೈ ಜಲವನಾವೆಡೆ ನಿನ್ನ ಛಲವೆಂದ
nāḍoḷardhava koḍade hōdaḍe bēḍidaidūrugaḷa koḍuyena lēḍisidalai sūciyagrapramitadhāruṇiya kūḍe nī koḍeneṃdu darpava māḍi sakala mahītaḷava hō gāḍi hokkai jalavanāveḍe ninna chalaveṃda
ಹೇಳಿದರಲಾ ಭೀಷ್ಮವಿದುರರು ಮೇಲುದಾಯದ ತಾಗುಥಟ್ಟನು ಕೇಳದಖಿಳಾಕ್ಷೋಹಿಣಿಯ ಕ್ಷತ್ರಿಯರ ತಡೆಗಡಿಸಿ ಕಾಳೆಗದೊಳೊಟ್ಟೈಸಿ ನೀರೊಳು ಬೀಳುವುದ ನಿನಗಾರು ಬುದ್ಧಿಯ ಹೇಳಿದರು ನುಡಿ ನುಡಿ ಸುಯೋಧನ ಎಂದನಾ ಭೂಪ
hēḷidaralā bhīṣmaviduraru mēludāyada tāguthaṭṭanu kēḷadakhiḷākṣōhiṇiya kṣatriyara taḍegaḍisi kāḷegadoḷoṭṭaisi nīroḷu bīḷuvuda ninagāru buddhiya hēḷidaru nuḍi nuḍi suyōdhana eṃdanā bhūpa
ಕಂಡೆವಂದೊಬ್ಬನ ಪಲಾಯನ ಪಂಡಿತನನುತ್ತರನನಾತನ ಗಂಡ ನೀನಾದೈ ಪಲಾಯನಸಿರಿಯ ಸೂರೆಯಲಿ ಭಂಡರಿಬ್ಬರು ಭೂಮಿಪರೊಳಾ ಭಂಡನಿಗೆ ನೀ ಮಿಗಿಲು ಸಲಿಲದ ಕೊಂಡದಲಿ ಹೊಕ್ಕನೆ ವಿರಾಟಜನೆಂದನಾ ಭೂಪ
kaṃḍevaṃdobbana palāyana paṃḍitananuttarananātana gaṃḍa nīnādai palāyanasiriya sūreyali bhaṃḍaribbaru bhūmiparoḷā bhaṃḍanige nī migilu salilada koṃḍadali hokkane virāṭajaneṃdanā bhūpa
ಅಡವಿಯೇ ನೆಲೆ ಪಾಂಡುಸುತರಿಗೆ ಕೊಡೆನು ಧರಣಿಯನೆಂದು ಖಡುಗವ ಜಡಿದೆಲಾ ನಿನ್ನೋಲಗದ ನಾರಿಯರ ಸಮ್ಮುಖದಿ ಖಡುಗವನು ಕಳನೊಳಗೆ ಹಾಯಿಕಿ ನಡುಗೊಳನ ನೀನೋಡಿ ಹೊಕ್ಕಡೆ ಮಡದಿಯರು ತಮತಮಗೆ ನಗರೇ ಹೊಯ್ದು ಕರತಳವ
aḍaviyē nele pāṃḍusutarige koḍenu dharaṇiyaneṃdu khaḍugava jaḍidelā ninnōlagada nāriyara sammukhadi khaḍugavanu kaḷanoḷage hāyiki naḍugoḷana nīnōḍi hokkaḍe maḍadiyaru tamatamage nagarē hoydu karataḷava
ಜೀವಸಖ ರಾಧೇಯನಾತನ ಸಾವಿನಲಿ ನೀನುಳಿದೆ ಸೋದರ ಮಾವ ಶಕುನಿಯ ಸೈಂಧವನ ದುಶ್ಶಾಸನಾದಿಗಳ ಸಾವಿನಲಿ ಹಿಂದುಳಿದ ಜೀವನ ಜೀವನವೆ ಜೀವನನಿವಾಸವಿ ದಾವ ಗರುವಿಕೆ ಕೊಳನ ಹೊರವಡು ಕೈದುಗೊಳ್ಳೆಂದ
jīvasakha rādhēyanātana sāvinali nīnuḷide sōdara māva śakuniya saiṃdhavana duśśāsanādigaḷa sāvinali hiṃduḷida jīvana jīvanave jīvananivāsavi dāva garuvike koḷana horavaḍu kaidugoḷḷeṃda
ಓಡಿ ಕೈದುವ ಹಾಯ್ಕಿ ಕಳನೊಳು ಹೇಡಿಗರ ಹಿಡಿದಳುಕಿ ಬದುಕಿದ ಗೂಡಿಹುದೆ ಗರುವಾಯಿಯಲಿ ಕಲ್ಪಾಂತಪರಿಯಂತ ಓಡಿ ಪಾತಾಳವನು ಹೊಕ್ಕಡೆ ಕೂಡೆ ಸಂಧಿಸಿ ನಿನ್ನ ಬೇಂಟೆಯ ನಾಡದಿಹ ಠಾವುಂಟೆ ಕುರುಪತಿ ಕೈದುಗೊಳ್ಳೆಂದ
ōḍi kaiduva hāyki kaḷanoḷu hēḍigara hiḍidaḷuki badukida gūḍihude garuvāyiyali kalpāṃtapariyaṃta ōḍi pātāḷavanu hokkaḍe kūḍe saṃdhisi ninna bēṃṭeya nāḍadiha ṭhāvuṃṭe kurupati kaidugoḷḷeṃda
ಭರತ ನಹುಷ ಯಯಾತಿ ನಳ ಸಂ ವರಣ ಸಗರ ದಿಳೀಪ ನೃಗ ರಘು ವರ ಪುರೂರವ ದುಂದುಮಾರ ಭಗೀರಥಾದಿಗಳು ಧರಣಿಪಾಲರನಂತಸಮರದೊ ಳರಿಬಲವ ಸವರಿದರು ನಿನ್ನವೊ ಲುರುಳಿದವರಾರುದಕದಲಿ ನೃಪ ಕೈದುಗೊಳ್ಳೆಂದ
bharata nahuṣa yayāti naḷa saṃ varaṇa sagara diḷīpa nr̥ga raghu vara purūrava duṃdumāra bhagīrathādigaḷu dharaṇipālaranaṃtasamarado ḷaribalava savaridaru ninnavo luruḷidavarārudakadali nr̥pa kaidugoḷḷeṃda
ಕೊಳನ ಬಿಡು ಕಾದೇಳು ಹಿಂದಣ ಹಳಿವ ತೊಳೆ ಹೇರಾಳ ಬಾಂಧವ ಬಳಗ ಭೂಮೀಶ್ವರರ ಬಹಳಾಕ್ಷೋಹಿಣೀದಳವ ಅಳಿದ ಕೀರ್ತಿಯ ಕೆಸರ ತೊಳೆ ಭೂ ವಳಯಮಾನ್ಯನು ದೈನ್ಯವೃತ್ತಿಯ ಬಳಸುವರೆ ಸುಡು ಮರುಳೆ ಕುರುಪತಿ ಕೈದುಗೊಳ್ಳೆಂದ
koḷana biḍu kādēḷu hiṃdaṇa haḷiva toḷe hērāḷa bāṃdhava baḷaga bhūmīśvarara bahaḷākṣōhiṇīdaḷava aḷida kīrtiya kesara toḷe bhū vaḷayamānyanu dainyavr̥ttiya baḷasuvare suḍu maruḷe kurupati kaidugoḷḷeṃda
ವಿಷವನಿಕ್ಕಿದೆ ಹಾವಿನಲಿ ಬಂ ಧಿಸಿದೆ ಮಡುವಿನೊಳಿಕ್ಕಿ ಬಳಿಕು ಬ್ಬಸವ ಮಾಡಿದೆ ಹಿಂದೆ ಮನಮುನಿಸಾಗಿ ಬಾಲ್ಯದಲಿ ವಸತಿಯಲಿ ಬಳಿಕಗ್ನಿದೇವರ ಪಸರಿಸಿದೆ ಪುಣ್ಯದಲಿ ನಾವ್ ಜೀ ವಿಸಿದೆವಡಗಿದಡಿನ್ನು ಬಿಡುವೆನೆಯೆಂದನಾ ಭೀಮ
viṣavanikkide hāvinali baṃ dhiside maḍuvinoḷikki baḷiku bbasava māḍide hiṃde manamunisāgi bālyadali vasatiyali baḷikagnidēvara pasariside puṇyadali nāv jī visidevaḍagidaḍinnu biḍuveneyeṃdanā bhīma
ಎಲವೊ ರಾಯನ ಪಟ್ಟದರಸಿಯ ಸುಲಿಸಿದಾ ಛಲವೆಲ್ಲಿ ಹಗೆಗಳ ಹಳುವದಲಿ ಹೊಗಿಸಿದೆನೆನಿಪ ಸುಮ್ಮಾನ ತಾನೆಲ್ಲಿ ಖಳ ಶಿರೋಮಣಿ ನಿನ್ನ ತಲೆಗೂ ದಲಲಿ ಕೈಗಳ ಕಟ್ಟಿ ಖೇಚರ ನೆಳೆಯೆ ಬಿಡಿಸಿದರಾರು ಕೌರವ ಎಂದನಾ ಭೀಮ
elavo rāyana paṭṭadarasiya sulisidā chalavelli hagegaḷa haḷuvadali hogisidenenipa summāna tānelli khaḷa śirōmaṇi ninna talegū dalali kaigaḷa kaṭṭi khēcara neḷeye biḍisidarāru kaurava eṃdanā bhīma
ಭೀಮನೆನೆ ಭುಗಿಲೆಂಬ ರೋಷದ ತಾಮಸವ ಬೀಳ್‌ಕೊಟ್ಟೆಲಾ ನಿ ರ್ನಾಮವಾದುದೆ ಬಿರುದು ಪಾಂಡವತಿಮಿರರವಿಯೆಂಬ ಭೀಮವನದಾವಾಗ್ನಿ ಹೊರವಡು ಭೀಮಭಾಸ್ಕರರಾಹು ಹೊರವಡು ಭೀಮಗರ್ಜನೆ ಮಧುರಗೀತವೆ ನೃಪತಿಯೇಳೆಂದ
bhīmanene bhugileṃba rōṣada tāmasava bīḷkoṭṭelā ni rnāmavādude birudu pāṃḍavatimiraraviyeṃba bhīmavanadāvāgni horavaḍu bhīmabhāskararāhu horavaḍu bhīmagarjane madhuragītave nr̥patiyēḷeṃda
ಕೆಡಹಿ ದುಶ್ಶಾಸನನ ರಕುತವ ಕುಡಿದವನು ತಾನಲ್ಲಲೇ ನಿ ನ್ನೊಡನೆ ಹುಟ್ಟಿದ ನೂರ ನುಂಗಿದ ಕಾಲಯಮನಲ್ಲಾ ಅಡಗಿದಡೆ ಬಿಡುವೆನೆ ಭಯಜ್ವರ ಹಿಡಿದ ನಿನ್ನನು ಸೆಳೆದು ರಣದಲಿ ತೊಡೆಯ ಕಳುಚವ ಮೃತ್ಯು ಭೀಮನ ಕಯ್ಯ ನೋಡೆಂದ
keḍahi duśśāsanana rakutava kuḍidavanu tānallalē ni nnoḍane huṭṭida nūra nuṃgida kālayamanallā aḍagidaḍe biḍuvene bhayajvara hiḍida ninnanu seḷedu raṇadali toḍeya kaḷucava mr̥tyu bhīmana kayya nōḍeṃda
ಜಲವಹೊಕ್ಕನ ಹುಲ್ಲ ಕಚ್ಚಿದ ಖಳನ ತರುಗಿರಿಶಿಖರದಲಿ ಕಾ ಲ್ದೊಳಸಿದನ ವಲ್ಮೀಕಸಂಗತನನು ನಿರಾಯುಧನ ಕೊಲುವುದನುಚಿತವೆಂಬ ಶಾಸ್ತ್ರವ ತಿಳಿದು ನಂಬಿದೆ ನಿನ್ನನೊಬ್ಬನ ಕೊಲುವುದಕೆ ಶ್ರುತಶಾಸ್ತ್ರರಾವಲ್ಲೆಂದನಾ ಭೀಮ
jalavahokkana hulla kaccida khaḷana tarugiriśikharadali kā ldoḷasidana valmīkasaṃgatananu nirāyudhana koluvudanucitaveṃba śāstrava tiḷidu naṃbide ninnanobbana koluvudake śrutaśāstrarāvalleṃdanā bhīma
ಅರಸನಲಿ ಹಗೆಯಿಲ್ಲ ಯಮಳರು ತರಳರಲಿ ಮುನಿಸಿಲ್ಲ ಫಲುಗುಣ ನರೆವಿರೋಧಿ ಸಗರ್ವಿ ಭೀಮನ ಬಾಡ ಕೊಯ್‌ಕೊಯ್ದು ಮರುಳ ಬಳಗವ ತಣಿಸಿದಡೆ ಹಿರಿಯರಸರಲಿ ಸಂಧಾನವೆಂಬೈ ಕುರುಪತಿಯೆ ನೆರೆ ವೈರಿ ಭೀಮನ ಸೀಳಲೇಳೆಂದ
arasanali hageyilla yamaḷaru taraḷarali munisilla phaluguṇa narevirōdhi sagarvi bhīmana bāḍa koykoydu maruḷa baḷagava taṇisidaḍe hiriyarasarali saṃdhānaveṃbai kurupatiye nere vairi bhīmana sīḷalēḷeṃda
ತನತನಗೆ ಸಾತ್ಯಕಿ ಯಮಳ ಫಲು ಗುಣರು ಪಂಚದ್ರೌಪದೀನಂ ದನರು ಧೃಷ್ಟದ್ಯುಮ್ನ ಸೃಂಜಯ ಸೋಮಕಾದಿಗಳು ಅನುಚಿತವು ಸಲಿಲಪ್ರವೇಶವು ಜನಪತಿಗಕರ್ತವ್ಯವೆಂಬುದು ಜನಜನಿತವೆಂದುಲಿದುದೈದೆ ಸಮುದ್ರಘೋಷದಲಿ
tanatanage sātyaki yamaḷa phalu guṇaru paṃcadraupadīnaṃ danaru dhr̥ṣṭadyumna sr̥ṃjaya sōmakādigaḷu anucitavu salilapravēśavu janapatigakartavyaveṃbudu janajanitaveṃdulidudaide samudraghōṣadali
ಅರಸ ಕೇಳೈ ನಿನ್ನ ಮಗನು ಬ್ಬರಿಸಿದನು ರೋಮಾಂಚದಲಿ ಗ ಬ್ಬರಿಸುತಧಿಕಕ್ರೋಧಶಿಖಿ ಕರಣೇಂದ್ರಿಯಾದಿಗಳ ತುರುಗಿದಂತಃಖೇದ ಮಂತ್ರಾ ಕ್ಷರಕೆ ಜವನಿಕೆಯಾದುದೈ ನಿ ರ್ಭರದ ವೀರಾವೇಶದಲಿ ಪಲ್ಲಟಿಸಿದನು ಭೂಪ
arasa kēḷai ninna maganu bbarisidanu rōmāṃcadali ga bbarisutadhikakrōdhaśikhi karaṇēṃdriyādigaḷa turugidaṃtaḥkhēda maṃtrā kṣarake javanikeyādudai ni rbharada vīrāvēśadali pallaṭisidanu bhūpa
ಮರೆದುದುದಕಸ್ತಂಭ ಸಲಿಲದ ಹೊರಗೆ ಬೊಬ್ಬುಳಿಕೆಗಳ ತೆರೆ ನೊರೆ ದುರುಗಿದವು ಘುಳುಘುಳಿಸಿ ಜಲಬುದ್ಬುದದ ಚೂಣಿಯಲಿ ದುರುದುರಿಪ ಬಿಸುಸುಯ್ಲ ಸೆಕೆಯಲಿ ಮರುಗಿ ಕುದಿದುದು ನೀರು ಭೀಮನ ಬಿರುನುಡಿಯ ಬೇಳಂಬದಲಿ ಬೆಂಡಾದನಾ ಭೂಪ
maredududakastaṃbha salilada horage bobbuḷikegaḷa tere nore durugidavu ghuḷughuḷisi jalabudbudada cūṇiyali duruduripa bisusuyla sekeyali marugi kudidudu nīru bhīmana birunuḍiya bēḷaṃbadali beṃḍādanā bhūpa
ಜ್ಞಾನವಳಿದುದು ವೀರಪಣದಭಿ ಮಾನ ಮಸೆದುದು ಮಂತ್ರನಿಷ್ಠೆಯ ಮೌನ ಹಿಂಬೆಳೆಯಾಯ್ತು ಮೋಹಿದುದಾಹವವ್ಯಸನ ದೀನಮನ ಹೊರಗಳೆದುದುದಕ ಸ್ಥಾನಭಾವಕೆ ನಾಚಿದನು ತವ ಸೂನು ತಳವೆಳಗಾದನಹಿತವಚೋವಿಘಾತದಲಿ
jñānavaḷidudu vīrapaṇadabhi māna masedudu maṃtraniṣṭheya mauna hiṃbeḷeyāytu mōhidudāhavavyasana dīnamana horagaḷedududaka sthānabhāvake nācidanu tava sūnu taḷaveḷagādanahitavacōvighātadali
ಜಲಧಿ ಮಧ್ಯದೊಳೇಳ್ವ ವಡಬಾ ನಲನವೊಲು ತವಕದಲಿ ತಡಿಗ ವ್ವಳಿಸಿದನು ತತ್ಕ್ರೋಧಶಿಖಿ ಕಿಡಿಮಸಗೆ ಕಂಗಳಲಿ ಹೊಳೆವ ಭಾರಿಯ ಹೆಗಲ ಗದೆ ಕರ ತಳದ ವಿಪುಳ ಸಘಾಡಗರ‍್ವದ ಚಳನಯನದ ಛಡಾಳಛಲದ ನೃಪಾಲ ಹೊರವಂಟ
jaladhi madhyadoḷēḷva vaḍabā nalanavolu tavakadali taḍiga vvaḷisidanu tatkrōdhaśikhi kiḍimasage kaṃgaḷali hoḷeva bhāriya hegala gade kara taḷada vipuḷa saghāḍagarvada caḷanayanada chaḍāḷachalada nr̥pāla horavaṃṭa
ಅರಳಿತರಸನ ವದನ ಭೀಮನ ಹರುಷವುಕ್ಕಿತು ಪಾರ್ಥನುಬ್ಬಿದ ನುರುಮುದದಿನುರೆ ನಕುಲನುಬ್ಬರಿಸಿದನು ಸಹದೇವ ಹರಕೆಯಲಿ ದೈವಂಗಳಿತ್ತವು ವರವನೆಂದರು ದ್ರೌಪದೀಸುತ ರುರುಶಿಖಂಡಿ ದ್ರುಪದಸುತ ಸಾತ್ಯಕಿಗಳೊಲವಿನಲಿ
araḷitarasana vadana bhīmana haruṣavukkitu pārthanubbida nurumudadinure nakulanubbarisidanu sahadēva harakeyali daivaṃgaḷittavu varavaneṃdaru draupadīsuta ruruśikhaṃḍi drupadasuta sātyakigaḷolavinali
ನಗೆ ಮಸಗಿ ಕರತಳವ ಹೊಯ್‌ಹೊ ಯ್ದೊಗುಮಿಗೆಯ ಹರುಷದಲಿ ನಕುಲಾ ದಿಗಳು ಬೊಬ್ಬಿರಿದಾರಿದರು ಬಹುವಾದ್ಯರವದೊಡನೆ ಅಗಿದು ಗುಡಿಗಟ್ಟಿದವು ಮುಂಗಾ ಲುಗಳ ಹೊಯ್ಲಲಿ ತೇಜಿಗಳು ಕೈ ನೆಗಹಿ ಜಯಸೂಚನೆಯಲೊಲೆದವು ಪಟ್ಟದಾನೆಗಳು
nage masagi karataḷava hoyho ydogumigeya haruṣadali nakulā digaḷu bobbiridāridaru bahuvādyaravadoḍane agidu guḍigaṭṭidavu muṃgā lugaḷa hoylali tējigaḷu kai negahi jayasūcaneyaloledavu paṭṭadānegaḷu
ಧರಣಿಪತಿ ಕೇಳ್ ಕೊಳನ ತಡಿಯಲಿ ಕುರುಕುಲಾಗ್ರಣಿ ನಿಂದು ನೋಡಿದ ನರಿಭಟರ ಸುಮ್ಮಾನವನು ಸಂಭ್ರಾಂತಚೇತನವ ಉರಿದುದಾ ಮಸ್ತಕದ ರೋಷೋ ತ್ಕರದ ಝಳಝಾಡಿಸಿತು ಶುಭ್ರ ಸ್ಫುರಣದಂತನಿಪೀಡಿತಾಧರನಾದನಾ ಭೂಪ
dharaṇipati kēḷ koḷana taḍiyali kurukulāgraṇi niṃdu nōḍida naribhaṭara summānavanu saṃbhrāṃtacētanava uridudā mastakada rōṣō tkarada jhaḷajhāḍisitu śubhra sphuraṇadaṃtanipīḍitādharanādanā bhūpa
ಪೂತು ಮಝ ಕುರುಪತಿಯ ಘನಸ ತ್ವಾತಿಶಯವೈ ಕೌರವಾನ್ವಯ ಜಾತನಲ್ಲಾ ಬುಧ ಪುರೂರವ ಸಕ್ರಮಾಗತರ ಖ್ಯಾತನಲ್ಲಾ ಬಂದುದೊಂದ ಖ್ಯಾತಿ ಸಲಿಲದ ಗಾಹವುಳಿದಂ ತೀತನೊಳು ದೊರೆಯಾರು ಸರಿಯೆಂದನು ಮಹೀಪಾಲ
pūtu majha kurupatiya ghanasa tvātiśayavai kauravānvaya jātanallā budha purūrava sakramāgatara khyātanallā baṃdudoṃda khyāti salilada gāhavuḷidaṃ tītanoḷu doreyāru sariyeṃdanu mahīpāla
ಅರಸ ತೊಡು ಕವಚವನು ಚಾಮೀ ಕರ ಪರಿಷ್ಕೃತ ವಜ್ರಮಯ ಬಂ ಧುರದ ಸೀಸಕವಿದೆ ದುಕೂಲವರಾನುಲೇಪನವ ಪರಿಹರಿಸಬೇಡೊಲವಿನಲಿ ಪತಿ ಕರಿಸೆನುತ ಪೆಟ್ಟಿಗೆಯ ಮುಚ್ಚಳ ತೆರೆದು ಮುಂದಿರಿಸಿದನು ಸೌಹಾರ್ದದಲಿ ಯಮಸೂನು
arasa toḍu kavacavanu cāmī kara pariṣkr̥ta vajramaya baṃ dhurada sīsakavide dukūlavarānulēpanava pariharisabēḍolavinali pati karisenuta peṭṭigeya muccaḷa teredu muṃdirisidanu sauhārdadali yamasūnu
ಪೂರವಿಸಿದನು ಗಂಧವನು ಸರ ಳೋರೆಪೋರೆಯ ಮೈಯ ಘಾಯದ ಹೋರುಗಳ ಹೂಳಿದನು ವರಕಸ್ತುರಿಯ ಸಾರದಲಿ ಸಾರತರ ಸಾದಿನ ಜವಾಜಿಯ ಭೂರಿ ಪರಿಮಳದಿಂದ ನವಕ ಸ್ತೂರಿ ತಿಲಕವ ರಚಿಸಿ ಗೆಲಿದನು ತಿಗುರ ತವಕದಲಿ
pūravisidanu gaṃdhavanu sara ḷōrepōreya maiya ghāyada hōrugaḷa hūḷidanu varakasturiya sāradali sāratara sādina javājiya bhūri parimaḷadiṃda navaka stūri tilakava racisi gelidanu tigura tavakadali
ತೆಗೆದು ವಜ್ರಾಂಗಿಯನು ಮೈಯಲಿ ಬಿಗಿದು ಹೊಂಬರಹದ ಸುರತ್ನಾ ಳಿಗಳ ಬಲುಸೀಸಕವನಳವಡಿಸಿದನು ಸಿರಿಮುಡಿಗೆ ಝಗಝಗಿಪ ಬೆಳುದಿಂಗಳಿನ ತೆಳು ದಗಡೆನಲು ತೊಳಗುವ ದುಕೂಲವ ಬಿಗಿದು ಮೊನೆಮುಂಜೆರಗನಳವಡಿಸಿದನು ದೇಸಿಯಲಿ
tegedu vajrāṃgiyanu maiyali bigidu hoṃbarahada suratnā ḷigaḷa balusīsakavanaḷavaḍisidanu sirimuḍige jhagajhagipa beḷudiṃgaḷina teḷu dagaḍenalu toḷaguva dukūlava bigidu monemuṃjeraganaḷavaḍisidanu dēsiyali
ಘೋಳಿಸಿದ ಕರ್ಪೂರ ಕಸ್ತ್ತುರಿ ವೀಳೆಯವ ಕೊಂಡೆದ್ದು ಸಮರಾ ಭೀಳ ಗದೆಯನು ತಿರುಹಿದನು ಪಯಪಾಡನಾರೈದು ಆಳು ಕವಿಯಲಿ ರಾವುತರ ಸಮ ಪಾಳಿಯಲಿ ಬಿಡಿ ಜೋದರಾನೆಯ ತೂಳಿಸಲಿ ಸಮರಥರು ಸರಳಿಸಿಯೆಂದನಾ ಭೂಪ
ghōḷisida karpūra kastturi vīḷeyava koṃḍeddu samarā bhīḷa gadeyanu tiruhidanu payapāḍanāraidu āḷu kaviyali rāvutara sama pāḷiyali biḍi jōdarāneya tūḷisali samaratharu saraḷisiyeṃdanā bhūpa
ಹಿಡಿ ಧನುವನೆಲೆ ಭೂಪ ಪವನಜ ತುಡುಕು ಗದೆಯನು ಪಾರ್ಥ ಸಮರಕೆ ತಡೆಯದಿರು ಮಾದ್ರೀಕುಮಾರಕರೇಳಿ ಕಾಳೆಗಕೆ ಮಿಡುಕು ಧೃಷ್ಟದ್ಯುಮ್ನ ಸಾತ್ಯಕಿ ಹೊಡಕರಿಸು ಪಾಂಚಾಲ ನೀ ವಂ ಗಡ ದೊಳೆಮ್ಮೊಡನೇಳ್ವುದೊಬ್ಬನೆ ನಿಲುವೆ ತಾನೆಂದ
hiḍi dhanuvanele bhūpa pavanaja tuḍuku gadeyanu pārtha samarake taḍeyadiru mādrīkumārakarēḷi kāḷegake miḍuku dhr̥ṣṭadyumna sātyaki hoḍakarisu pāṃcāla nī vaṃ gaḍa doḷemmoḍanēḷvudobbane niluve tāneṃda
ದಿಟ್ಟನೈ ನೃಪರಾವು ಮಝ ಜಗ ಜಟ್ಟಿಯಲ್ಲಾ ದೊರೆಗಳೊಡನೀ ಥಟ್ಟಿಗೊಬ್ಬನೆ ನಿಲುವೆನೆಂದನದಾವ ಸತ್ವನಿಧಿ ಹುಟ್ಟಿದವರಿಗೆ ಸಾವು ಹಣೆಯಲಿ ಕಟ್ಟಿಹುದು ವಿಧಿಯೆಂದಡೀಪರಿ ಮುಟ್ಟೆ ಧೀವಶಿಯಾವನೆಂದುದು ನಿಖಿಳ ಪರಿವಾರ
diṭṭanai nr̥parāvu majha jaga jaṭṭiyallā doregaḷoḍanī thaṭṭigobbane niluveneṃdanadāva satvanidhi huṭṭidavarige sāvu haṇeyali kaṭṭihudu vidhiyeṃdaḍīpari muṭṭe dhīvaśiyāvaneṃdudu nikhiḷa parivāra
ಮೆಚ್ಚಿದನು ಯಮಸೂನು ಛಲ ನಿನ ಗೊಚ್ಚತವಲೈ ವೈರಿಭಟರಲಿ ಬೆಚ್ಚದಾಡಿದೆಯಾದಡೇನದು ನಮ್ಮೊಳೈವರಲಿ ಮೆಚ್ಚಿದರ ನೀ ವರಿಸಿ ಕಾದುವು ದಚ್ಚರಿಯ ಮಾತೇನು ಗೆಲವಿನ ನಿಚ್ಚಟನೆ ನೆಲಕೊಡೆಯನಹುದಿದು ಸಮಯಕೃತವೆಂದ
meccidanu yamasūnu chala nina goccatavalai vairibhaṭarali beccadāḍideyādaḍēnadu nammoḷaivarali meccidara nī varisi kāduvu daccariya mātēnu gelavina niccaṭane nelakoḍeyanahudidu samayakr̥taveṃda
ನಿನಗೆ ಸೋಲವೆ ನಾವು ಭೂಕಾ ಮಿನಿಯನಾಳ್ವೆವು ನಮ್ಮೊಳೊಬ್ಬರು ನಿನಗೆ ಸೋತಡೆ ಮಿಕ್ಕ ನಾಲ್ವರು ನಿನಗೆ ಕಿಂಕರರು ನಿನಗೆ ಹಸ್ತಿನಪುರದ ಸಿರಿ ಸಂ ಜನಿತವೀ ಸಂಕೇತವೇ ಸಾ ಧನ ನಿನಗೆ ನಮಗೆಂದು ನುಡಿದನು ಧರ‍್ಮಸುತ ನಗುತ
ninage sōlave nāvu bhūkā miniyanāḷvevu nammoḷobbaru ninage sōtaḍe mikka nālvaru ninage kiṃkararu ninage hastinapurada siri saṃ janitavī saṃkētavē sā dhana ninage namageṃdu nuḍidanu dharmasuta naguta
ಹಾ ಯುಧಿಷ್ಠಿರ ನಿಮ್ಮ ಕೂಡೆಮ ಗಾಯಛಲವಿಲ್ಲರ್ಜುನನು ಮಗು ವೀ ಯಮಳರಿಗೆ ಕೈದುಗೊಳ್ಳೆನು ಹೊಯ್ದು ಕೆಣಕಿದಡೆ ಬಾಯಿಬಡಿಕನು ಸತ್ವದಲಿ ನಾ ಗಾಯುತದ ಬಲನೆಂಬ ಡೊಂಬಿನ ವಾಯುವಿನ ಮಗನೆನ್ನೊಡನೆ ಮಾರಾಂತಡಹುದೆಂದ
hā yudhiṣṭhira nimma kūḍema gāyachalavillarjunanu magu vī yamaḷarige kaidugoḷḷenu hoydu keṇakidaḍe bāyibaḍikanu satvadali nā gāyutada balaneṃba ḍoṃbina vāyuvina maganennoḍane mārāṃtaḍahudeṃda
ವರಿಸಿದೆನು ಭೀಮನನು ನೀವಾ ದರಿಸುವಡೆ ಧರ್ಮವನು ದುರ್ಜನ ಸರಣಿಯಲಿ ನೀವ್ ಬಹಡೆ ದಳಸಹಿತೈವರಿದಿರಹುದು ತೆರಳುವವರಾವಲ್ಲ ನೀವ್ ಪತಿ ಕರಿಸಿದುದೆ ನಮ್ಮಿಷ್ಟವೆನೆ ಮುರ ಹರ ಯುಧಿಷ್ಠಿರನೃಪನನೆಕ್ಕಟಿಗರೆದು ಗರ್ಜಿಸಿದ
varisidenu bhīmananu nīvā darisuvaḍe dharmavanu durjana saraṇiyali nīv bahaḍe daḷasahitaivaridirahudu teraḷuvavarāvalla nīv pati karisidude nammiṣṭavene mura hara yudhiṣṭhiranr̥pananekkaṭigaredu garjisida
ಮರುಳೆ ನೀ ಹೆಚ್ಚಾಳುತನಕು ಬ್ಬರಿಸಿ ನುಡಿದೆ ಸುಯೋಧನನ ನೀ ನರಿಯಲಾಗದೆ ಕೈಗೆ ಬಂದರೆ ಕದನಭೂಮಿಯಲಿ ಸರಿಸದಲಿ ಮಲೆತವನು ಜೀವಿಸಿ ಮರಳಲರಿವನೆ ನಮ್ಮೊಳೊಬ್ಬನ ವರಿಸು ವಿಗ್ರಹಕೆಂದು ನಮ್ಮನು ಕೊಂದೆ ನೀನೆಂದ
maruḷe nī heccāḷutanaku bbarisi nuḍide suyōdhanana nī nariyalāgade kaige baṃdare kadanabhūmiyali sarisadali maletavanu jīvisi maraḷalarivane nammoḷobbana varisu vigrahakeṃdu nammanu koṃde nīneṃda
ಗೆಲಿದಡೈವರೊಳೊಬ್ಬನನು ಮಿ ಕ್ಕುಳಿದವರು ಕಿಂಕರರು ಗಡ ನೀ ತಿಳಿದು ನುಡಿದಾ ನಿನ್ನನಾಹವಮುಖಕೆ ವರಿಸಿದಡೆ ಗೆಲಲು ಬಲ್ಲಾ ನೀನು ಫಲುಗುಣ ಗೆಲುವನೇ ನಿನ್ನುಳಿದರಿಬ್ಬರು ನಿಲುವರೇ ಕುರುಪತಿಯಘಾಟದ ಗದೆಯ ಘಾಯದಲಿ
gelidaḍaivaroḷobbananu mi kkuḷidavaru kiṃkararu gaḍa nī tiḷidu nuḍidā ninnanāhavamukhake varisidaḍe gelalu ballā nīnu phaluguṇa geluvanē ninnuḷidaribbaru niluvarē kurupatiyaghāṭada gadeya ghāyadali
ಇಂದು ನಮ್ಮಯ ಭಾಗ್ಯಲಕ್ಷ್ಮಿಯ ಕಂದೆರೆವೆಯಲಿ ಭೀಮ ಕಾದುವು ದೆಂದು ಜಾರಿಸಿ ನಿಮ್ಮ ಬಿಟ್ಟನು ನಮ್ಮ ಪುಣ್ಯದಲಿ ಇಂದಿನೀ ಸಮರದಲಿ ಪವನಜ ನಿಂದಡೇನಹುದೆಂಬ ಚಿತ್ತದ ಸಂದೆಯವು ನಮಗುಂಟು ಕೌರವನೈಸು ಬಲುಹೆಂದ
iṃdu nammaya bhāgyalakṣmiya kaṃdereveyali bhīma kāduvu deṃdu jārisi nimma biṭṭanu namma puṇyadali iṃdinī samaradali pavanaja niṃdaḍēnahudeṃba cittada saṃdeyavu namaguṃṭu kauravanaisu baluheṃda
ಎಲೆ ಮುರಾಂತಕ ನಿಮ್ಮ ಮುಂದ ಗ್ಗಳೆಯತನವೆಮಗಿಲ್ಲ ನಿಮ್ಮಡಿ ಗಳ ಸುಧಾಕರುಣಾವಧಾನವೆ ವಜ್ರಕವಚವಲಾ ಮಲೆತ ಹಗೆವನ ಪಡಿಮುಖದ ಬಲು ವಲಗೆಯಲಿ ಗದೆಯಿಂದ ರಾಯನ ಬಲುಹ ಬಿರುದಾವಳಿಯ ಬರೆವೆನು ಕೃಷ್ಣ ಕೇಳೆಂದ
ele murāṃtaka nimma muṃda ggaḷeyatanavemagilla nimmaḍi gaḷa sudhākaruṇāvadhānave vajrakavacavalā maleta hagevana paḍimukhada balu valageyali gadeyiṃda rāyana baluha birudāvaḷiya barevenu kr̥ṣṇa kēḷeṃda
ಪೂತು ಮಝ ಭಟ ಎನುತ ಕಂಸಾ ರಾತಿ ಕೊಂಡಾಡಿದನು ಸಾತ್ಯಕಿ ಭೂತಳಾಧಿಪ ಪಾರ್ಥ ಯಮಳಾದಿಗಳು ನಲವಿನಲಿ ವಾತಜನ ಹೊಗಳಿದರು ಸುಭಟ ವ್ರಾತಸೌಹಾರ್ದದಲಿ ಶೌರ‍್ಯ ಖ್ಯಾತಿಯನು ಬಣ್ಣಿಸಿದುದವನೀಪಾಲ ಕೇಳೆಂದ
pūtu majha bhaṭa enuta kaṃsā rāti koṃḍāḍidanu sātyaki bhūtaḷādhipa pārtha yamaḷādigaḷu nalavinali vātajana hogaḷidaru subhaṭa vrātasauhārdadali śaurya khyātiyanu baṇṇisidudavanīpāla kēḷeṃda
ಗದೆಯ ಕೊಂಡನು ಕೌರವೇಂದ್ರನ ನಿದಿರುಗೊಂಡನು ಭೀಮ ಬಲವಂ ಕದಲಿ ವಾಮಾಂಗದಲಿ ಬಳಸಿದರಗ್ರಜಾನುಜರು ಕದನಭೂಮಿಯ ಬಿಡೆಯರಿದು ನಿಂ ದುದು ಚತುರ್ಬಲ ಸುತ್ತಿ ಗಗನದೊ ಳೊದಗಿದುದು ಸುರನಿಕರ ತೀವಿ ವಿಮಾನವೀಥಿಯಲಿ
gadeya koṃḍanu kauravēṃdrana nidirugoṃḍanu bhīma balavaṃ kadali vāmāṃgadali baḷasidaragrajānujaru kadanabhūmiya biḍeyaridu niṃ dudu caturbala sutti gaganado ḷodagidudu suranikara tīvi vimānavīthiyali
ಚಟುಳತರ ಭಾರಂಕದಂಕದ ಭಟರು ತರುಬಿದರುಬ್ಬೆಯಲಿ ಲಟ ಕಟಿಸಿದವು ಕಣ್ಣಾಲಿ ಬದ್ಧಭ್ರುಕುಟಿಭಂಗದಲಿ ಕಟುವಚನ ವಿಕ್ಷೇಪರೋಷ ಸ್ಫುಟನವೇಲ್ಲಿತವಾಕ್ಯಭಂಗೀ ಘಟನ ವಿಘಟನದಿಂದ ಮೂದಲಿಸಿದರು ಮುಳಿಸಿನಲಿ
caṭuḷatara bhāraṃkadaṃkada bhaṭaru tarubidarubbeyali laṭa kaṭisidavu kaṇṇāli baddhabhrukuṭibhaṃgadali kaṭuvacana vikṣēparōṣa sphuṭanavēllitavākyabhaṃgī ghaṭana vighaṭanadiṃda mūdalisidaru muḷisinali
ಅರಸ ಕೇಳಿವರಿಬ್ಬರುಬ್ಬಿನ ಧುರದ ಥಟ್ಟಣೆ ಪಸರಿಸಿತು ಸುರ ನರರನಾ ಸಮಯದಲಿ ಪೂರ‍್ವೋತ್ತರದ ದೆಸೆಯಿಂದ ವರ ಮುನಿಸ್ತೋಮದ ನಡುವೆ ಕಂ ಧರದ ಮುಸಲದ ವಿಮಳ ನೀಲಾಂ ಬರದ ರಾಮನ ಸುಳಿವ ಕಂಡರು ಕೃಷ್ಣ ಪಾಂಡವರು
arasa kēḷivaribbarubbina dhurada thaṭṭaṇe pasarisitu sura nararanā samayadali pūrvōttarada deseyiṃda vara munistōmada naḍuve kaṃ dharada musalada vimaḷa nīlāṃ barada rāmana suḷiva kaṃḍaru kr̥ṣṇa pāṃḍavaru
ಆ ನಿಖಿಳ ಪರಿವಾರದನುಸಂ ಧಾನ ದೃಷ್ಟಿಗಳತ್ತ ತಿರುಗಿದ ವೇನನೆಂಬೆನು ಮುಸಲಧರನಾಗಮನ ಸಂಗತಿಯ ಈ ನರೇಂದ್ರನ ಸುಮುಖತೆಯ ಸು ಮ್ಮಾನ ಹೊಳೆದುದು ಭಯದಿ ಕುಂತೀ ಸೂನುಗಳು ಮರೆಗೊಳುತಲಿರ್ದುದು ವೀರನರಯಣನ
ā nikhiḷa parivāradanusaṃ dhāna dr̥ṣṭigaḷatta tirugida vēnaneṃbenu musaladharanāgamana saṃgatiya ī narēṃdrana sumukhateya su mmāna hoḷedudu bhayadi kuṃtī sūnugaḷu maregoḷutalirdudu vīranarayaṇana
Keys: ← → turn the page, J K step through the verses.
Illustration: Verse & Place (Project-owned).