ರಾಯಧರ್ಮಜ ಯಮಳ ಫಲುಗುಣ ವಾಯುಸುತರಱಸಿದರು ಕೌರವ ರಾಯನನು ಕಳನೊಳಗೆ ಕಾಣದೆ ಮುತ್ತಿದರು ಕೊಳನ
rāyadharmaja yamaḷa phaluguṇa vāyusutaraṟasidaru kaurava rāyananu kaḷanoḷage kāṇade muttidaru koḷana
ಗದಾ ಪರ್ವ — ಸಂಧಿ ೪ · ಗದಾ ಪರ್ವ — ಸಂಧಿ ೪
gadā parva — saṃdhi 4
The complete gada parva · sandhi 4 in Kannada.
60 passagesKannada with transliteration
Invocation
ರಾಯಧರ್ಮಜ ಯಮಳ ಫಲುಗುಣ ವಾಯುಸುತರಱಸಿದರು ಕೌರವ ರಾಯನನು ಕಳನೊಳಗೆ ಕಾಣದೆ ಮುತ್ತಿದರು ಕೊಳನ
rāyadharmaja yamaḷa phaluguṇa vāyusutaraṟasidaru kaurava rāyananu kaḷanoḷage kāṇade muttidaru koḷana
ಕೇಳು ಜನಮೇಜಯ ಧರಿತ್ರೀ ಪಾಲ ಸಂಜಯ ಬರುತ ಕುರುಭೂ ಪಾಲನರಕೆಯ ಭೀಮನವರಿವರಲ್ಲಲೇ ಎನುತ ಮೇಲೆ ಹತ್ತಿರ ಬರಬರಲು ಸಮ ಪಾಳಿಯಲಿ ರಥ ಮೂರರಲಿ ಕೃಪ ಕೋಲಗುರುವಿನ ಮಗನಲಾ ಎನುತಲ್ಲಿಗೈತಂದ
kēḷu janamējaya dharitrī pāla saṃjaya baruta kurubhū pālanarakeya bhīmanavarivarallalē enuta mēle hattira barabaralu sama pāḷiyali ratha mūrarali kr̥pa kōlaguruvina maganalā enutalligaitaṃda
ಇಳಿದು ರಥವನು ಸಂಜಯನ ಬರ ಸೆಳೆದು ತಕ್ಕೈಸಿದರು ಹಗೆಯಲಿ ಸಿಲುಕಿ ಬಂದೈ ಭಾಗ್ಯದಲಿ ಧೃತರಾಷ್ಟ್ರಭೂಪತಿಯ ಕಲಹಗತಿಯೇನಾಯ್ತು ಶಕುನಿಯ ದಳದೊಳಿದ್ದನು ಕೌರವೇಶ್ವರ ನುಳಿದನೇ ಹದನಾವುದೆಂದರು ಭಟರು ಸಂಜಯನ
iḷidu rathavanu saṃjayana bara seḷedu takkaisidaru hageyali siluki baṃdai bhāgyadali dhr̥tarāṣṭrabhūpatiya kalahagatiyēnāytu śakuniya daḷadoḷiddanu kauravēśvara nuḷidanē hadanāvudeṃdaru bhaṭaru saṃjayana
ಅರಿದುದಿಲ್ಲಾ ಕೌರವೇಂದ್ರನ ನರಸಿ ಶಕುನಿಯ ದಳವ ಮುತ್ತಿದ ರಿರಿದರವರು ತ್ರಿಗರ್ತರನು ಸೌಬಲ ಸುಶರ‍್ಮಕರ ಮುರಿದ ಬವರವ ಬಲಿದು ಗಜ ನೂ ರರಲಿ ಹೊಕ್ಕನು ರಾಯನಹಿತರ ಜರಿದು ಝಾಡಿಸಿ ಬೀದಿವರಿದನು ರಾಯದಳದೊಳಗೆ
aridudillā kauravēṃdrana narasi śakuniya daḷava muttida riridaravaru trigartaranu saubala suśarmakara murida bavarava balidu gaja nū rarali hokkanu rāyanahitara jaridu jhāḍisi bīdivaridanu rāyadaḷadoḷage
ಬಳಿಕ ಭೀಮನ ಗದೆಯಲಿಭಶತ ವಳಿದರೊಬ್ಬನೆ ತಿರುಗಿ ಹಾಯ್ದನು ಕೊಳುಗುಳದ ಕೋಳ್ಗುದಿಯ ಕೋಲಾಹಲದ ಕೆಸರಿನಲಿ ತಲೆಗೆ ಬಂದುದು ತನಗೆಯಾಕ್ಷಣ ಸುಳಿದರೆಮ್ಮಾರಾಧ್ಯ ವರಮುನಿ ತಿಲಕ ವೇದವ್ಯಾಸದೇವರು ಕೃಪೆಯ ಭಾರದಲಿ
baḷika bhīmana gadeyalibhaśata vaḷidarobbane tirugi hāydanu koḷuguḷada kōḷgudiya kōlāhalada kesarinali talege baṃdudu tanageyākṣaṇa suḷidaremmārādhya varamuni tilaka vēdavyāsadēvaru kr̥peya bhāradali
ಸೆಳೆದುಕೊಂಡನು ಮೃತ್ಯುವಿನ ಹೆಡ ತಲೆಯನೊದೆದು ಕೃಪಾಳು ತನ್ನನು ತಲೆಬಳಿಚಿ ಕಳುಹಿದರೆ ಬಂದೆನು ರಾಯನರಕೆಯಲಿ ಬಳಲಿ ಬೀಳುತ್ತೇಳುತೊಬ್ಬನೆ ತಲೆಮುಸುಕಿನಲಿ ನಡೆಯೆ ಕಂಡೆನು ನೆಲನೊಡೆಯನಹುದಲ್ಲೆನುತ ಸುಳಿದೆನು ಸಮೀಪದಲಿ
seḷedukoṃḍanu mr̥tyuvina heḍa taleyanodedu kr̥pāḷu tannanu talebaḷici kaḷuhidare baṃdenu rāyanarakeyali baḷali bīḷuttēḷutobbane talemusukinali naḍeye kaṃḍenu nelanoḍeyanahudallenuta suḷidenu samīpadali
ಕಂಡೆನರಸನ ನಿಬ್ಬರವ ಬಳಿ ಕಂಡಲೆದುದತಿಶೋಕಶಿಖಿ ಕೈ ಗೊಂಡುದಿಲ್ಲರೆಘಳಿಗೆ ಬಳಿಕೆಚ್ಚತ್ತು ಕಂದೆರೆದು ಖಂಡಿಸಿದನೆನ್ನುಬ್ಬೆಯನು ಹುರಿ ಗೊಂಡುದಾತನ ಸತ್ವವಾತನ ದಂಡಿಯಲಿ ಬಹರಾರು ಸುರ ನರ ನಾಗಲೋಕದಲಿ
kaṃḍenarasana nibbarava baḷi kaṃḍaledudatiśōkaśikhi kai goṃḍudillareghaḷige baḷikeccattu kaṃderedu khaṃḍisidanennubbeyanu huri goṃḍudātana satvavātana daṃḍiyali baharāru sura nara nāgalōkadali
ಬಂದನೆನ್ನನು ಸಂತವಿಡುತಲ ದೊಂದು ಸರಸಿಯ ತಡಿಯಲಳವಡೆ ನಿಂದು ಸಂವರಿಸಿದನು ಗದೆಯನು ಬಾಹುಮೂಲದಲಿ ತಂದೆಗರುಹೆಂದೆನಗೆ ಹೇಳಿದು ಹಿಂದೆ ಮುಂದೆಡಬಲನನಾರೈ ದಂದವಳಿಯದೆ ನೀರ ಹೊಕ್ಕನು ಕಾಣೆನವನಿಪನ
baṃdanennanu saṃtaviḍutala doṃdu sarasiya taḍiyalaḷavaḍe niṃdu saṃvarisidanu gadeyanu bāhumūladali taṃdegaruheṃdenage hēḷidu hiṃde muṃdeḍabalananārai daṃdavaḷiyade nīra hokkanu kāṇenavanipana
ಅವರು ಕಂಬನಿದುಂಬಿದರು ಕೌ ರವ ಮಹಾವಂಶಾಭಿಚಾರ ವ್ಯವಸಿತಕೆ ಫಲವಾಯ್ತಲಾ ಯಮನಂದನಾದಿಗಳ ಶಿವಶಿವಾ ಪವಡಿಸಿತೆ ಚತುರಾ ರ್ಣವ ವಿಪರಿ ಪರಿಧಾನ ಪೃಥ್ವೀ ಧವನ ಬಾಳಿಕೆ ನೀರೊಳೆಂದಳಲಿದನು ಗುರುಸೂನು
avaru kaṃbaniduṃbidaru kau rava mahāvaṃśābhicāra vyavasitake phalavāytalā yamanaṃdanādigaḷa śivaśivā pavaḍisite caturā rṇava vipari paridhāna pr̥thvī dhavana bāḷike nīroḷeṃdaḷalidanu gurusūnu
ಅಳಲದಿರಿ ಗಜಪುರಿಗೆ ಸತಿಯರ ಕಳುಹುವೆನು ನೀವವನಿಪಾಲನ ತಿಳುಹಲಾಪಡೆ ಸಂಧಿಗೊಡಬಡಿಸುವದು ಕುರುಪತಿಯ ಕೊಳನ ತಡಿಯಲಿ ಕಾಣದಂತಿರೆ ಬಳಸಿ ನೀವೆಂದವರನತ್ತಲು ಕಳುಹಿ ಸಂಜಯ ಬಂದು ಹೊಕ್ಕನು ನೃಪನ ಪಾಳೆಯವ
aḷaladiri gajapurige satiyara kaḷuhuvenu nīvavanipālana tiḷuhalāpaḍe saṃdhigoḍabaḍisuvadu kurupatiya koḷana taḍiyali kāṇadaṃtire baḷasi nīveṃdavaranattalu kaḷuhi saṃjaya baṃdu hokkanu nr̥pana pāḷeyava
ಅರಮನೆಗೆ ಬಂದಖಿಳ ಸಚಿವರ ಕರಸಿದನು ಸರಹಸ್ಯವನು ವಿ ಸ್ತರಿಸಿದನು ಸರ್ವಾಪಹಾರವ ನೃಪಪಲಾಯನವ ಅರಸಿಯರಿದಳು ಭಾನುಮತಿ ಮಿ ಕ್ಕರಸಿಯರಿಗರುಹಿಸಿದಳಂತಃ ಪುರದೊಳಲ್ಲಿಂದಲ್ಲಿ ಹರೆದುದು ಕೂಡೆ ರಣಭೀತಿ
aramanege baṃdakhiḷa sacivara karasidanu sarahasyavanu vi starisidanu sarvāpahārava nr̥papalāyanava arasiyaridaḷu bhānumati mi kkarasiyarigaruhisidaḷaṃtaḥ puradoḷalliṃdalli haredudu kūḍe raṇabhīti
ಕೂಡೆ ಗಜಬಜವಾಯ್ತು ಪಾಳೆಯ ವೋಡಿತಲ್ಲಿಯದಲ್ಲಿ ಜನವ ಲ್ಲಾಡಿದುದು ಕ್ರಯವಿಕ್ರಯದ ವಾಣಿಜ್ಯವೀಥಿಯಲಿ ಹೂಡಿದವು ಬಂಡಿಗಳು ಹರಿದೆಡೆ ಯಾಡಿದವು ಕೊಲ್ಲಾರಿಗಳು ರಥ ಗೂಡಿದವು ಬದ್ಧರದ ದಂಡಿಗೆ ಬಂದವರಮನೆಗೆ
kūḍe gajabajavāytu pāḷeya vōḍitalliyadalli janava llāḍidudu krayavikrayada vāṇijyavīthiyali hūḍidavu baṃḍigaḷu harideḍe yāḍidavu kollārigaḷu ratha gūḍidavu baddharada daṃḍige baṃdavaramanege
ಭಾನುಮತಿ ಹೊರವಂಟಳರಸನ ಮಾನಿನಿಯರು ಸಹಸ್ರಸಂಖ್ಯೆಯೊ ಳಾನನೇಂದುಪ್ರಭೆ ವಿಭಾಡಿಸೆ ಬಿಸಿಲ ಬೇಗೆಗಳ ಭಾನುದತ್ತನ ಸೈಂಧವನ ರವಿ ಸೂನುವಿನ ದುಶ್ಶಾಸನನ ಜಲ ಜಾನನೆಯರೊಗ್ಗಿನಲಿ ರಥವೇರಿದರು ದುಗುಡದಲಿ
bhānumati horavaṃṭaḷarasana māniniyaru sahasrasaṃkhyeyo ḷānanēṃduprabhe vibhāḍise bisila bēgegaḷa bhānudattana saiṃdhavana ravi sūnuvina duśśāsanana jala jānaneyarogginali rathavēridaru duguḍadali
ಸರಕ ಹಿಡಿದವು ಬಂಡಿ ಶತಸಾ ವಿರ ನೃಪಾಲಯದಿಂದ ವಿವಿಧಾ ಭರಣಭರಿತದ ಭೂರಿ ಪೆಟ್ಟಿಗೆ ಘಾಡಿಸಿತು ರಥವ ವರ ದುಕೂಲದ ಪಟ್ಟಕರ್ಮದ ಥರದದಿಂದೊತ್ತಿದವು ಚಾಮೀ ಕರಮಯದ ಬಹುವಿಧದ ಭಾಂಡದ ಬಂಡಿ ನೂಕಿದವು
saraka hiḍidavu baṃḍi śatasā vira nr̥pālayadiṃda vividhā bharaṇabharitada bhūri peṭṭige ghāḍisitu rathava vara dukūlada paṭṭakarmada tharadadiṃdottidavu cāmī karamayada bahuvidhada bhāṃḍada baṃḍi nūkidavu
ಬಳಿಯ ಚೌರಿಯ ಹೊರೆಯ ಚಿತ್ರಾ ವಳಿ ವಿಧಾನದ ಹಾಸುಗಳ ಹೊಂ ಬಳಿಯ ತೆರೆಸೀರೆಗಳ ಛತ್ರ ವ್ಯಜನ ಸೀಗುರಿಯ ಹೊಳೆವ ಪಟ್ಟೆಯಲೋಡಿಗೆಯ ಹೊಂ ಗೆಲಸದೊಳಝಗೆಗಳ ಸುವರ್ಣಾ ವಳಿಯ ದಿಂಡುಗಳೊಟ್ಟಿದವು ಬಂಡಿಗಳ ಜವ ಜಡಿಯೆ
baḷiya cauriya horeya citrā vaḷi vidhānada hāsugaḷa hoṃ baḷiya teresīregaḷa chatra vyajana sīguriya hoḷeva paṭṭeyalōḍigeya hoṃ gelasadoḷajhagegaḷa suvarṇā vaḷiya diṃḍugaḷoṭṭidavu baṃḍigaḷa java jaḍiye
ಕರವತಿಗೆ ಹೊಂಗಳಸ ಹೊಂಗೊ ಪ್ಪರಿಗೆ ದೀಪಸ್ತಂಭ ಹೇಮದ ಸರಪಣಿಯ ಮಣಿಮಯದ ಜಂತ್ರದ ಜೀವಪುತ್ರಿಗಳ ಮರಕತದ ಮಧುಪಾತ್ರೆ ನೀಲದ ಕರಗ ವೈಡೂರಿಯದ ಪಡಿಗವ ಚರರು ತಂದೊಟ್ಟಿದರು ಬಂಡಿಗೆ ಭಾರಿಸಂಖ್ಯೆಯಲಿ
karavatige hoṃgaḷasa hoṃgo pparige dīpastaṃbha hēmada sarapaṇiya maṇimayada jaṃtrada jīvaputrigaḷa marakatada madhupātre nīlada karaga vaiḍūriyada paḍigava cararu taṃdoṭṭidaru baṃḍige bhārisaṃkhyeyali
ಮೆರೆವ ಗಜ ಹಯಶಾಲೆಯಲಿ ಮೈ ಮುರಿಕ ವೃದ್ಧ ವ್ಯಾಧಿತಾವಳಿ ಮರಿಗುದುರೆ ಮರಿಯಾನೆ ತೆಗೆದವು ಲಕ್ಕ ಸಂಖ್ಯೆಯಲಿ ಉರುವ ಭಂಡಾರದ ಮಹಾರ್ಘದ ನೆರವಣಿಗೆ ಗಾಢಿಸಿತು ಬೀದಿಯ ತೆರಹು ಕೆತ್ತವು ಹೊತ್ತ ಸರಕಿನ ಬಹಳ ಬಂಡಿಗಳ
mereva gaja hayaśāleyali mai murika vr̥ddha vyādhitāvaḷi marigudure mariyāne tegedavu lakka saṃkhyeyali uruva bhaṃḍārada mahārghada neravaṇige gāḍhisitu bīdiya terahu kettavu hotta sarakina bahaḷa baṃḍigaḷa
ರಾಯನರಮನೆ ಮಂಡವಿಗೆ ಗುಡಿ ಲಾಯ ಚವುಕಿಗೆ ನಿಖಿಳ ಭವನ ನಿ ಕಾಯವನು ತೆಗೆದೊಟ್ಟಿದರು ಬಂಡಿಗಳ ಹಂತಿಯಲಿ ರಾಯನನುಜರ ದ್ರೋಣ ಕೃಪ ರಾ ಧೇಯ ಸೈಂಧವ ಶಕುನಿ ರಾಜಪ ಸಾಯಿತರ ಗುಡಿಗೂಢಚಂಪಯವೇರಿದವು ರಥವ
rāyanaramane maṃḍavige guḍi lāya cavukige nikhiḷa bhavana ni kāyavanu tegedoṭṭidaru baṃḍigaḷa haṃtiyali rāyananujara drōṇa kr̥pa rā dhēya saiṃdhava śakuni rājapa sāyitara guḍigūḍhacaṃpayavēridavu rathava
ಪಾಳೆಯಕೆ ಗಜಪುರದ ವಂಕಕೆ ಕೀಲಿಸಿತು ದಂಡಿಗೆಯ ಸಂದಣಿ ಮೇಲುಸರಕಿನ ಬಂಡಿ ತಲೆವೊರೆಯೆತ್ತು ಕಂಬಿಗಳ ಹೇಳಲೇನು ಸಮುದ್ರ ವಿಭವವ ನೇಳಿಸುವ ಪಾಳೆಯದ ಸಿರಿ ಶೂ ನ್ಯಾಲಯಕೆ ಜೋಡಿಸಿತಲೈ ಜನಮೇಜಯ ಕ್ಷಿತಿಪ
pāḷeyake gajapurada vaṃkake kīlisitu daṃḍigeya saṃdaṇi mēlusarakina baṃḍi talevoreyettu kaṃbigaḷa hēḷalēnu samudra vibhavava nēḷisuva pāḷeyada siri śū nyālayake jōḍisitalai janamējaya kṣitipa
ತುಂಬಿತಿದು ಗಜಪುರವನಲ್ಲಿಯ ಕಂಬನಿಯ ಕಾಲುವೆಯನದನೇ ನೆಂಬೆನೈ ಗಜಬಜಿಕೆ ಮೊಳೆತುದು ಕೇರಿಕೇರಿಯಲಿ ಲಂಬಿಸಿತು ಭಯತಿಮಿರ ಶೋಕಾ ಡಂಬರದ ಡಾವರ ವಿವೇಕವ ಚುಂಬಿಸಿತು ಧೃತರಾಷ್ಟ್ರ ವಿದುರರ ಪೌರ ಪರಿಜನದ
tuṃbitidu gajapuravanalliya kaṃbaniya kāluveyanadanē neṃbenai gajabajike moḷetudu kērikēriyali laṃbisitu bhayatimira śōkā ḍaṃbarada ḍāvara vivēkava cuṃbisitu dhr̥tarāṣṭra vidurara paura parijanada
ಬಂದು ಸಂಜಯನಂಧನೃಪತಿಯ ಮಂದಿರವ ಹೊಕ್ಕಖಿಳ ನಾರೀ ವೃಂದವನು ಕಳುಹಿದನು ದಂಡಿಗೆಗಳಲಿ ಮನೆಮನೆಗೆ ಬಂದರಾರೆನೆ ಸಂಜಯನು ಜೀ ಯೆಂದಡುತ್ಸಾಹದಲಿ ಬಂದೈ ತಂದೆ ಸಂಜಯ ಬಾಯೆನುತ ತಡವಿದನು ಬೋಳೈಸಿ
baṃdu saṃjayanaṃdhanr̥patiya maṃdirava hokkakhiḷa nārī vr̥ṃdavanu kaḷuhidanu daṃḍigegaḷali manemanege baṃdarārene saṃjayanu jī yeṃdaḍutsāhadali baṃdai taṃde saṃjaya bāyenuta taḍavidanu bōḷaisi
ಹೋಗಿ ತಳುವಿದೆ ಕೌರವೇಂದ್ರನ ನೀಗಿದಳೆ ಜಯಲಕ್ಷ್ಮಿ ಪಾಂಡವ ರಾಗುಹೋಗೇನಾಯ್ತು ಶಕುನಿಯ ಹಯದ ಮೋಹರವ ತಾಗಿ ಮುರಿದನೆ ಭೀಮನೀ ಮೇ ಲ್ಪೋಗಿನಾಹವವೇನು ರಾಯನ ತಾಗು ಥಟ್ಟೇನಾಯ್ತು ಸಂಜಯ ತಿಳಿಯಹೇಳೆಂದ
hōgi taḷuvide kauravēṃdrana nīgidaḷe jayalakṣmi pāṃḍava rāguhōgēnāytu śakuniya hayada mōharava tāgi muridane bhīmanī mē lpōgināhavavēnu rāyana tāgu thaṭṭēnāytu saṃjaya tiḷiyahēḷeṃda
ಶಕುನಿ ಬಿದ್ದನು ಜೀಯ ಸಹದೇ ವಕನ ಕೈಯಲುಳೂಕ ಮಡಿದನು ನಕುಲನಂಬಿನಲಾ ತ್ರಿಗರ್ತ ಸುಶರ್ಮಕಾದಿಗಳು ಸಕಲ ಗಜಹಯಸೇನೆ ಸಮಸ ಪ್ತಕರು ಪಾರ್ಥನ ಶರದಲಮರೀ ನಿಕರವನು ಸೇರಿದರು ಹೇಳುವುದೇನು ರಣರಸವ
śakuni biddanu jīya sahadē vakana kaiyaluḷūka maḍidanu nakulanaṃbinalā trigarta suśarmakādigaḷu sakala gajahayasēne samasa ptakaru pārthana śaradalamarī nikaravanu sēridaru hēḷuvudēnu raṇarasava
ಬಳಿಕ ನೂರಾನೆಯಲಿ ನಿನ್ನವ ನಳವಿಗೊಟ್ಟನು ಭೀಮಸೇನನ ಚಲಗತಿಯ ಚಾತುರ ಚಪೇಟ ಪದಪ್ರಹಾರದಲಿ ಕಳನೊಳಗೆ ಕೋಡೂರಿ ಮಗ್ಗುಲ ನೆಲಕೆ ಕೀಲಿಸಲಾನೆಯಿಂದಿಳೆ ಗಿಳಿದು ಹಾಯ್ದನು ಭಯದಿನೇಕಾಂಗದಲಿ ಕುರುರಾಯ
baḷika nūrāneyali ninnava naḷavigoṭṭanu bhīmasēnana calagatiya cātura capēṭa padaprahāradali kaḷanoḷage kōḍūri maggula nelake kīlisalāneyiṃdiḷe giḷidu hāydanu bhayadinēkāṃgadali kururāya
ಕುರುಪತಿಯನರಸುತ್ತ ತಾನೈ ತರಲು ಸಾತ್ಯಕಿ ಕಂಡು ಸೂಠಿಯ ಲುರವಣಿಸಿ ಹರಿತಂದು ಹಿಡಿದನು ಹೊಯ್ದು ಕೆಲಬಲನ ಕರೆದು ಧೃಷ್ಟದ್ಯುಮ್ನ ತನ್ನಯ ಶಿರವನರಿಯೆನೆ ಬಳಿಕ ಸಾತ್ಯಕಿ ಕರದ ಖಡುಗವನುಗಿದು ಹೂಡಿದನೆನ್ನ ಗಂಟಲಲಿ
kurupatiyanarasutta tānai taralu sātyaki kaṃḍu sūṭhiya luravaṇisi haritaṃdu hiḍidanu hoydu kelabalana karedu dhr̥ṣṭadyumna tannaya śiravanariyene baḷika sātyaki karada khaḍugavanugidu hūḍidanenna gaṃṭalali
ಜಲಧಿಯಲಿ ಫಣಿವದನದಲಿ ರಿಪು ಬಲದ ಮುಖದಲಿ ಸಿಡಿಲ ಹೊಯ್ಲಲಿ ಹಳುವದಲಿ ಗಿರಿಶಿಖರದಲಿ ದಾವಾಗ್ನಿ ಮಧ್ಯದಲಿ ಸಿಲುಕಿದಡೆ ಬಿಡಿಸುವವಲೇ ಪ್ರತಿ ಫಲಿತ ಪೂರ್ವಾದತ್ತ ಪುಣ್ಯಾ ವಳಿಗಳೆಂಬುದು ತನ್ನೊಳಾದುದು ಭೂಪ ಕೇಳೆಂದ
jaladhiyali phaṇivadanadali ripu balada mukhadali siḍila hoylali haḷuvadali giriśikharadali dāvāgni madhyadali silukidaḍe biḍisuvavalē prati phalita pūrvādatta puṇyā vaḷigaḷeṃbudu tannoḷādudu bhūpa kēḷeṃda
ಆವ ವಹಿಲದೊಳಾದುದಾವಿ ರ್ಭಾವವೆಂದಾನರಿಯೆನಾಗಳೆ ದೇವಮುನಿಯಡ್ಡೈಸಿ ಹಿಡಿದನು ಕೊರಳಡಾಯುಧವ ಸಾವು ತಪ್ಪಿತು ಬಾದರಾಯಣ ನೋವಿ ಕೃಪೆಯಲಿ ಮೈದಡವಿ ಸಂ ಭಾವಿಸುತ ಕುರುಪತಿಯನರಸೆಂದೆನಗೆ ನೇಮಿಸಿದ
āva vahiladoḷādudāvi rbhāvaveṃdānariyenāgaḷe dēvamuniyaḍḍaisi hiḍidanu koraḷaḍāyudhava sāvu tappitu bādarāyaṇa nōvi kr̥peyali maidaḍavi saṃ bhāvisuta kurupatiyanaraseṃdenage nēmisida
ಬೀಳುಕೊಂಡೆನು ಮುನಿಯನವನೀ ಪಾಲಕನನರಸಿದೆನು ಕಳನೊಳು ಸಾಲ ಹೆಣನೊಟ್ಟಿಲ ಕಬಂಧದ ರುಧಿರಪೂರದಲಿ ಬೀಳುತೇಳುತ ನಿಲುತ ಬಳಲಿದು ಕಾಲುನಡೆಯಲಿ ಸುಳಿವ ಕುರುಭೂ ಪಾಲಕನ ಕಂಡೊಡನೆ ಬಂದೆನು ಕೊಳನ ತಡಿಗಾಗಿ
bīḷukoṃḍenu muniyanavanī pālakananarasidenu kaḷanoḷu sāla heṇanoṭṭila kabaṃdhada rudhirapūradali bīḷutēḷuta niluta baḷalidu kālunaḍeyali suḷiva kurubhū pālakana kaṃḍoḍane baṃdenu koḷana taḍigāgi
ಇಳಿದು ಸರಸಿಯ ಮಧ್ಯದಲಿ ನೃಪ ತಿಲಕ ನಿಂದನು ಪಾಳೆಯವ ನೀ ಕಳುಹು ಗಜಪುರಿಗೆನಲು ಬಂದೆನು ಪಥದ ಮಧ್ಯದಲಿ ಸುಳಿವ ಕಂಡೆನು ಕೃಪನನಾ ಗುರು ಗಳ ಮಗನ ಕೃತವರ್ಮಕನನಂ ದುಳಿದ ಮೂವರ ಕಳುಹಿದೆನು ಕುರುಪತಿಯ ಹೊರೆಗಾಗಿ
iḷidu sarasiya madhyadali nr̥pa tilaka niṃdanu pāḷeyava nī kaḷuhu gajapurigenalu baṃdenu pathada madhyadali suḷiva kaṃḍenu kr̥pananā guru gaḷa magana kr̥tavarmakananaṃ duḷida mūvara kaḷuhidenu kurupatiya horegāgi
ತಂದೆನಿಲ್ಲಿಗೆ ಸಕಲ ನಾರೀ ವೃಂದವನು ಕುರುಪತಿಯ ನೇಮದ ಲಿಂದಿನೀ ವೃತ್ತಾಂತ ವರ್ತಿಸಿತಿಲ್ಲಿ ಪರಿಯಂತ ಮುಂದೆ ಹೇಳುವುದೇನು ನೀ ಬೆಸ ಸೆಂದಡವನೀಪತಿಯ ಹೊರೆಗೈ ತಂದನೇ ಗುರುಸೂನು ಮೇಲಣ ಹದನ ಹೇಳೆಂದ
taṃdenillige sakala nārī vr̥ṃdavanu kurupatiya nēmada liṃdinī vr̥ttāṃta vartisitilli pariyaṃta muṃde hēḷuvudēnu nī besa seṃdaḍavanīpatiya horegai taṃdanē gurusūnu mēlaṇa hadana hēḷeṃda
ಅರಸ ಕೇಳ್ ಕೃಪ ಗುರುಜ ಕೃತವ ರ‍್ಮರು ರಥಾಶ್ವಂಗಳನು ದೂರದ ಲಿರಿಸಿ ತಲೆಮುಸುಕಿನಲಿ ಬಂದರು ಕೊಳನ ತಡಿಗಾಗಿ ತರುಲತೆಗಳರುಬಿನಲಿ ಕಂಜಾ ಕರದ ತಡಿಯಲಿ ನಿಂದು ಮೆಲ್ಲನೆ ಕರೆದು ಕೇಳಿಸಿ ಹೇಳಿದರು ತಂತಮ್ಮ ಹೆಸರುಗಳ
arasa kēḷ kr̥pa guruja kr̥tava rmaru rathāśvaṃgaḷanu dūrada lirisi talemusukinali baṃdaru koḷana taḍigāgi tarulategaḷarubinali kaṃjā karada taḍiyali niṃdu mellane karedu kēḷisi hēḷidaru taṃtamma hesarugaḷa
ಬದುಕಿ ಬಂದಿರೆ ಭೀಮ ನಿಮ್ಮನು ಗದೆಯ ಸವಿಗಾಣಿಸನಲಾ ಸಾ ಕಿದನ ಸಮಯಕೆ ಸುಳಿದಿರೈ ಸಾಹಿತ್ಯರೇಖೆಯಲಿ ಕದನದಲಿ ಸೌಬಲ ಸುಶರ್ಮರ ಹೊದರ ಹರೆಗಡಿವಲ್ಲಿ ನೀವ್ ಮಾ ಡಿದ ಪರಾಕ್ರಮವಾವುದೆಂದನು ನೃಪತಿ ಖಾತಿಯಲಿ
baduki baṃdire bhīma nimmanu gadeya savigāṇisanalā sā kidana samayake suḷidirai sāhityarēkheyali kadanadali saubala suśarmara hodara haregaḍivalli nīv mā ḍida parākramavāvudeṃdanu nr̥pati khātiyali
ಜೀಯ ಖತಿಯೇಕೆಮ್ಮೊಡನೆ ಚ ಕ್ರಾಯುಧನ ಚಾತುರ‍್ಯದಲಿ ರಣ ದಾಯತಪ್ಪಿತು ಭಟರು ಬೀತುದು ಹೇಳಲೇನದನು ಕಾಯಿದರೊ ಕಾದಿದರೊ ಗುರು ಗಾಂ ಗೇಯ ಸೈಂಧವ ಮಾದ್ರಪತಿ ರಾ ಧೇಯರನುಗತವಾಗದಿಹುದಪರಾಧ ನಮಗೆಂದ
jīya khatiyēkemmoḍane ca krāyudhana cāturyadali raṇa dāyatappitu bhaṭaru bītudu hēḷalēnadanu kāyidaro kādidaro guru gāṃ gēya saiṃdhava mādrapati rā dhēyaranugatavāgadihudaparādha namageṃda
ಅರಸ ಹೊರವಡು ಭೀಮಪಾರ್ಥರ ಕರುಳ ಬೀಯವ ಭೂತನಿಕರಕೆ ಬರಿಸುವೆವು ನೀ ನೋಡಲೊಡ್ಡುವೆವಸ್ತ್ರಸಂತತಿಯ ಗರುವರಿಹರೇ ನೀರೊಳಾ ಹಿಮ ಕರ ಮಹಾನ್ವಯ ಕೀರ್ತಿ ಜಲದೊಳು ಕರಗದಿಹುದೇ ಕಷ್ಟವೃತ್ತಿಯದೆಂದರವನಿಪನ
arasa horavaḍu bhīmapārthara karuḷa bīyava bhūtanikarake barisuvevu nī nōḍaloḍḍuvevastrasaṃtatiya garuvariharē nīroḷā hima kara mahānvaya kīrti jaladoḷu karagadihudē kaṣṭavr̥ttiyadeṃdaravanipana
ಏಳು ಕುರುಪತಿ ಪಾಂಡುತನಯ ವ್ಯಾಳಸೇನೆಗೆ ಸಿಂಹವಿದೆ ನಿ ನ್ನಾಳ ಬಿಡು ನೀ ನೋಡುತಿರು ಕರ್ಣಾದಿ ಸುಭಟರಲಿ ಜಾಳಿಸಿದ ಜಯಕಾಮಿನಿಯ ಜಂ ಘಾಳತನವನು ನಿಲಿಸಿ ನಿನ್ನಯ ತೋಳಿನಲಿ ತೋರುವೆವು ಮೈದೋರೆಂದರವನಿಪನ
ēḷu kurupati pāṃḍutanaya vyāḷasēnege siṃhavide ni nnāḷa biḍu nī nōḍutiru karṇādi subhaṭarali jāḷisida jayakāminiya jaṃ ghāḷatanavanu nilisi ninnaya tōḷinali tōruvevu maidōreṃdaravanipana
ಒಪ್ಪದಿದು ಭೀಷ್ಮಾದಿಯವ್ವನ ದರ್ಪದಲಿ ಜರಿದ ಜಯಾಂಗನೆ ಮುಪ್ಪಿನಲಿ ನಮಗೊಲಿವುದರಿದೇಕಾಕಿಯಾದೆವಲೆ ತಪ್ಪಿದುದನೀ ಸಲಿಲವಾಸದೊ ಳೊಪ್ಪವಿಡುವೆನು ನಾಳೆ ನೀವ್ ತೊಲ ಗಿಪ್ಪುದಿಂದಿನೊಳೆಂದನವನಿಪನಾ ಕೃಪಾದಿಗಳ
oppadidu bhīṣmādiyavvana darpadali jarida jayāṃgane muppinali namagolivudaridēkākiyādevale tappidudanī salilavāsado ḷoppaviḍuvenu nāḷe nīv tola gippudiṃdinoḷeṃdanavanipanā kr̥pādigaḷa
ಇವೆ ಮಹಾಮಂತ್ರಾಸ್ತ್ರಸಂತತಿ ಯಿವೆ ಮಹಾಧನು ರಾಜ್ಯಸತ್ಕೃತಿ ಸವನ ಸಾಪೇಕ್ಷಂಗಳಿವೆ ತ್ರೈರಥಿಕರೊಬ್ಬರಲಿ ಅವನಿಪತಿ ನೀ ಸೇಸೆದಳಿ ಮಿ ಕ್ಕವರು ಸೇನೆ ವಿರೋಧಿವರ್ಗಕೆ ದಿವವೊ ಧರೆಯೋ ನೋಡಲಹುದೇಳೆಂದನಾ ದ್ರೌಣಿ
ive mahāmaṃtrāstrasaṃtati yive mahādhanu rājyasatkr̥ti savana sāpēkṣaṃgaḷive trairathikarobbarali avanipati nī sēsedaḷi mi kkavaru sēne virōdhivargake divavo dhareyō nōḍalahudēḷeṃdanā drauṇi
ಸೇಸೆದಳಿದೆನು ಭೀಷ್ಮಗಗ್ಗದ ಭಾಷೆ ನಿಮ್ಮಯ್ಯನಲಿ ಗತವಾ ಯ್ತೇಸ ಪತಿಕರಿಸಿದೆನು ಕರ್ಣನನಂದು ನೀನರಿಯ ಓಸರಿಸಿದನೆ ಮಾದ್ರಪತಿ ಬಳಿ ಕೀಸು ಬಂದುದು ದೈವದೊಲಹಿನ ಪೈಸರಕೆ ನೀವೇನ ಮಾಡುವಿರೆಂದನಾ ಭೂಪ
sēsedaḷidenu bhīṣmagaggada bhāṣe nimmayyanali gatavā ytēsa patikarisidenu karṇananaṃdu nīnariya ōsarisidane mādrapati baḷi kīsu baṃdudu daivadolahina paisarake nīvēna māḍuvireṃdanā bhūpa
ರಣದೊಳಾ ಗಾಂಗೇಯಗಿಮ್ಮಡಿ ಗುಣವ ತೋರುವೆನಪ್ಪನವರಿಂ ದೆಣಿಸಿಕೊಳು ಮೂವಡಿಯನಗ್ಗದ ಸೂತನಂದನನ ರಣಕೆ ನಾಲ್ವಡಿ ಮಾದ್ರರಾಜನ ಹೊಣಕೆಗೈದು ಸುಶರ‍್ಮ ಶಕುನಿಗ ಳೆಣಿಸುವಡೆ ಪಾಡಲ್ಲ ನೋಡೇಳೆಂದನಾ ದ್ರೌಣಿ
raṇadoḷā gāṃgēyagimmaḍi guṇava tōruvenappanavariṃ deṇisikoḷu mūvaḍiyanaggada sūtanaṃdanana raṇake nālvaḍi mādrarājana hoṇakegaidu suśarma śakuniga ḷeṇisuvaḍe pāḍalla nōḍēḷeṃdanā drauṇi
ಖರೆಯರೈ ನೀವುಭಯ ರಾಯರ ಗುರುಗಳದು ಕುಂದಿಲ್ಲ ಕೃಪನೇ ಹಿರಿಯನಾಚಾರಿಯನು ಯಾದವರೊಳಗೆ ಕೃತವರ್ಮ ಗರುವರೈ ನೀವಿಲ್ಲಿ ರಣಬಾ ಹಿರರೆ ಸಾಕಂತಿರಲಿ ಸುಕೃತದೊ ಳರಗೆಲಸಿಗಳು ನಾವೆ ನಿಮ್ಮಲಿ ಕೊರತೆಯಿಲ್ಲೆಂದ
khareyarai nīvubhaya rāyara gurugaḷadu kuṃdilla kr̥panē hiriyanācāriyanu yādavaroḷage kr̥tavarma garuvarai nīvilli raṇabā hirare sākaṃtirali sukr̥tado ḷaragelasigaḷu nāve nimmali korateyilleṃda
ಅರಸ ಕೇಳೈ ಸುಕೃತವನು ವಿ ಸ್ತರಿಸುವೆನು ಪೂರಾಯವೆನೆ ಕಾ ಹುರದ ನುಡಿ ಬೇಡೇಳು ನಡೆವುದು ಹಸ್ತಿನಾಪುರಿಗೆ ಅರಿಗಳೈತಂದೌಕಿದಡೆ ಗಜ ಪುರದ ದುರ್ಗವ ಬಲಿದು ನಿಲುವುದು ಪರಮಮಂತ್ರವಿದೆಂದನಶ್ವತ್ಥಾಮನವನಿಪನ
arasa kēḷai sukr̥tavanu vi starisuvenu pūrāyavene kā hurada nuḍi bēḍēḷu naḍevudu hastināpurige arigaḷaitaṃdaukidaḍe gaja purada durgava balidu niluvudu paramamaṃtravideṃdanaśvatthāmanavanipana
ಸಲಿಲ ಮಧ್ಯದೊಳಿಂದಿನಿರುಳನು ಕಳೆದೆನಾದಡೆ ಪಾಂಡುಪುತ್ರರ ಗೆಲುವೆನುದಯದೊಳಿದುವೆ ನಿಶ್ಚಯವೆನ್ನ ಚಿತ್ತದಲಿ ಅಳುಕಿ ಕದನದೊಳೋಡಿ ನಗರಿಯ ಲಲನೆಯರ ಮರೆಗೊಂಬೆನೇ ನೀವ್ ತೊಲಗಿ ಭೀಮನ ಬೇಹು ಬಹುದಿರಬೇಡ ನೀವೆಂದ
salila madhyadoḷiṃdiniruḷanu kaḷedenādaḍe pāṃḍuputrara geluvenudayadoḷiduve niścayavenna cittadali aḷuki kadanadoḷōḍi nagariya lalaneyara maregoṃbenē nīv tolagi bhīmana bēhu bahudirabēḍa nīveṃda
ಅರಸ ಕೇಳೈ ದೈವಯೋಗವ ಪರಿಹರಿಸಲಾರಳವು ಪವನಜ ನರಮನೆಯ ಮೃಗವೇಂಟೆಕಾರರು ಮಾಂಸಭಾರದಲಿ ಬರುತ ನೀರಡಿಸಿದರು ಕಂಡರು ಸರಸಿಯನು ನೀರ್ಗುಡಿಯಲೈತಂ ದಿರಿಸಿದರು ತೀರದಲಿ ಬಹಳಾಮಿಷದ ಕಂಬಿಗಳ
arasa kēḷai daivayōgava pariharisalāraḷavu pavanaja naramaneya mr̥gavēṃṭekāraru māṃsabhāradali baruta nīraḍisidaru kaṃḍaru sarasiyanu nīrguḍiyalaitaṃ dirisidaru tīradali bahaḷāmiṣada kaṃbigaḷa
ಚರಣ ವದನವ ತೊಳೆದು ನಿರ‍್ಮಳ ತರವರಾಂಬುವನೀಂಟಿದರು ಕೃಪ ಗುರುಸುತರ ನುಡಿಗಳನು ನಡುನೀರಲಿ ನೃಪಧ್ವನಿಯ ಅರಿದರಿವರಾಲಿಸಿದರೇನಿದು ಕುರುಪತಿಯ ತತ್ಸುಭಟವಾದೋ ತ್ತರವಲಾ ಲೇಸಾಯ್ತೆನುತ ಕೇಳಿದರು ಮರೆವಿಡಿದು
caraṇa vadanava toḷedu nirmaḷa taravarāṃbuvanīṃṭidaru kr̥pa gurusutara nuḍigaḷanu naḍunīrali nr̥padhvaniya aridarivarālisidarēnidu kurupatiya tatsubhaṭavādō ttaravalā lēsāytenuta kēḷidaru mareviḍidu
ಆಯಿತಿದು ನೃಪರಾಜಕಾರ‍್ಯದ ದಾಯಕಿದು ದುರಪದವಲಾ ಕುರು ರಾಯಗುಪ್ತನಿವಾಸವರ್ಥಪ್ರದವಲಾ ನಮಗೆ ಕಾಯಿದಿರು ಕಂಡೌ ಸರೋಜದ ತಾಯಿ ಸರಸಿಯೆನುತ್ತ ಹೋದರು ವಾಯು ತನುಜನ ಬೇಂಟೆಕಾರರು ನಗುತ ಪಾಳೆಯಕೆ
āyitidu nr̥parājakāryada dāyakidu durapadavalā kuru rāyaguptanivāsavarthapradavalā namage kāyidiru kaṃḍau sarōjada tāyi sarasiyenutta hōdaru vāyu tanujana bēṃṭekāraru naguta pāḷeyake
ಅರಸ ಕೇಳ್ ಸಮಸಪ್ತಕರ ಸಂ ಹರಿಸಿ ಶಕುನಿಯ ಮುರಿದು ಕಳನಲಿ ದೊರೆಯ ಕಾಣದೆ ಭೀಮಸೇನಾರ್ಜುನರು ದುಗುಡದಲಿ ಹರಿಸಿದರು ದೂತರನು ಕೌರವ ಧರಣಿಪನ ಪಾಳೆಯಕೆ ಹಸ್ತಿನ ಪುರಿಗೆ ಕೂಡೆ ದಿಗಂತದಲಿ ಚರರರಸಿದರು ನೃಪನ
arasa kēḷ samasaptakara saṃ harisi śakuniya muridu kaḷanali doreya kāṇade bhīmasēnārjunaru duguḍadali harisidaru dūtaranu kaurava dharaṇipana pāḷeyake hastina purige kūḍe digaṃtadali carararasidaru nr̥pana
ಹರಿದು ದೂತರು ನೃಪನ ಕಾಣದೆ ಮರಳಿದರು ಯಮಸೂನು ದುಗುಡದ ಭರದ ಭಾರವಣೆಯಲಿ ಹೊಕ್ಕನು ತನ್ನ ಪಾಳೆಯವ ಕುರುನೃಪತಿ ತಪ್ಪಿದನು ಭೀಷ್ಮಾ ದ್ಯರ ವಿಜಯ ವೃಥೆಯಾಯ್ತು ಹಸ್ತಿನ ಪುರದ ಸಿರಿ ಜಾರಿದಳು ತನಗೆಂದರಸ ಬಿಸುಸುಯ್ದ
haridu dūtaru nr̥pana kāṇade maraḷidaru yamasūnu duguḍada bharada bhāravaṇeyali hokkanu tanna pāḷeyava kurunr̥pati tappidanu bhīṣmā dyara vijaya vr̥theyāytu hastina purada siri jāridaḷu tanageṃdarasa bisusuyda
ಹೆಣನ ಬಗಿದರಸಿದರು ಕರಿಗಳ ಹಣಿದದಲಿ ನೋಡಿದರು ರಥಸಂ ದಣಿಗಳೊಟ್ಟಿಲ ಕೆದರಿ ಭೀಷ್ಮನ ಸರಳ ಮಂಚದಲಿ ಹಣುಗಿದರು ಭಗದತ್ತನಾನೆಯ ನಣೆದುನೋಡಿದರರುಣವಾರಿಯ ಕೆಣಕಿ ಕೂಡರಸಿದರು ಚಾರರು ಕಳನ ಚೌಕದಲಿ
heṇana bagidarasidaru karigaḷa haṇidadali nōḍidaru rathasaṃ daṇigaḷoṭṭila kedari bhīṣmana saraḷa maṃcadali haṇugidaru bhagadattanāneya naṇedunōḍidararuṇavāriya keṇaki kūḍarasidaru cāraru kaḷana caukadali
ಹರಿಹರಿದು ಕೂಡರಸಿ ದೂತರು ಮರಳಿ ಬಂದರು ದುಗುಡಭರದಲಿ ಬೆರಳ ಮೂಗಿನಲಿದ್ದುದವನಿಪಸಹಿತ ಪರಿವಾರ ಇರುಳು ಬೇಗೆಯ ಚಕ್ರವಾಕಕೆ ತರಣಿ ತಲೆದೋರಿದವೊಲಟವೀ ಚರರಿಗರಸಗೆ ಭಾವಭಾವ ವ್ಯಕ್ತವಾಯ್ತೆಂದ
hariharidu kūḍarasi dūtaru maraḷi baṃdaru duguḍabharadali beraḷa mūginaliddudavanipasahita parivāra iruḷu bēgeya cakravākake taraṇi taledōridavolaṭavī cararigarasage bhāvabhāva vyaktavāyteṃda
ತಂದ ಮಾಂಸದ ಕಂಬಿಗಳನು ಪು ಳಿಂದರೊಪ್ಪಿಸಿ ಭೀಮಸೇನನ ಮಂದಿರವ ಸಾರಿದರು ಕಂಡರು ಜನದ ಕಳವಳವ ಇಂದಿನೀ ಸಂಗ್ರಾಮಜಯದಲಿ ಬಂದ ಜಾಡ್ಯವಿದೇನು ಬಿನ್ನಹ ವೆಂದು ಸಲುಗೆಯ ಶಬರಪತಿ ನುಡಿಸಿದನು ಪವನಜನ
taṃda māṃsada kaṃbigaḷanu pu ḷiṃdaroppisi bhīmasēnana maṃdirava sāridaru kaṃḍaru janada kaḷavaḷava iṃdinī saṃgrāmajayadali baṃda jāḍyavidēnu binnaha veṃdu salugeya śabarapati nuḍisidanu pavanajana
ರಣಮುಖದೊಳೇಕಾದಶಾಕ್ಷೋ ಹಿಣಿಯ ಗೆಲಿದುದು ವಿಫಲವಾದುದು ಜುಣುಗಿದರಿನೃಪನಾವ ಜವನಿಕೆ ಮರೆಯೊಳಡಗಿದನೊ ತೃಣವನದೊಳಿರುಬಿನಲಿ ಮೆಳೆಸಂ ದಣಿಗಳಲಿ ಮರಗಾಡಿನಲಿ ಮೃಗ ಗಣದ ನೆಲೆಯಲಿ ಕಾಣಿರಲೆ ನೀವೆಂದನಾ ಭೀಮ
raṇamukhadoḷēkādaśākṣō hiṇiya gelidudu viphalavādudu juṇugidarinr̥panāva javanike mareyoḷaḍagidano tr̥ṇavanadoḷirubinali meḷesaṃ daṇigaḷali maragāḍinali mr̥ga gaṇada neleyali kāṇirale nīveṃdanā bhīma
ಆದರೆಕ್ಕಟಿ ಬಿನ್ನಹವ ನೀ ವಾದರಿಪುದೆನೆ ತುಷ್ಟನಾಗಿ ವೃ ಕೋದರನು ಕರಸಿದನು ಪರಿಮಿತಕಾ ಪುಳಿಂದಕರ ಆದುದೇ ನೆಲೆ ಕುರುಪತಿಗೆ ದು ರ್ಭೇದವಿದು ಮೆಚ್ಚುಂಟು ನಿಮಗೆನ ಲಾ ದುರಾತ್ಮಕರರುಹಿದರು ಧೃತರಾಷ್ಟ್ರ ಕೇಳೆಂದ
ādarekkaṭi binnahava nī vādaripudene tuṣṭanāgi vr̥ kōdaranu karasidanu parimitakā puḷiṃdakara ādudē nele kurupatige du rbhēdavidu meccuṃṭu nimagena lā durātmakararuhidaru dhr̥tarāṣṭra kēḷeṃda
ಜೀಯ ಕುರುಪತಿ ಗುಪ್ತದಲಿ ದ್ವೈ ಪಾಯನನ ಸರಸಿಯಲಿ ಸಮರವಿ ಧಾಯಕದ ವಾರ್ತೆಯನು ತನ್ನವರೊಡನೆ ತೀರದಲಿ ಬಾಯಿಗೇಳಿಸುತಿರ್ದ ನಾವ್ ತ ತ್ತೋಯಪಾನಕೆ ತಿರುಗಿ ಕಂಡೆವು ರಾಯನಂಘ್ರಿಗಳಾಣೆಯೆಂದರು ಶಬರರನಿಲಜಗೆ
jīya kurupati guptadali dvai pāyanana sarasiyali samaravi dhāyakada vārteyanu tannavaroḍane tīradali bāyigēḷisutirda nāv ta ttōyapānake tirugi kaṃḍevu rāyanaṃghrigaḷāṇeyeṃdaru śabararanilajage
ಇತ್ತನವದಿರಿಗಂಗಚಿತ್ತವ ನುತ್ತಮಾಂಬರ ವೀರ ನೂಪುರ ಮುತ್ತಿನೇಕಾವಳಿಯ ಕರ್ಣಾಭರಣ ಮುದ್ರಿಕೆಯ ಹೊತ್ತ ಹರುಷದ ಹೊಳೆವ ಕಂಗಳ ತೆತ್ತಿಸಿದ ಪುಳಕದ ಸಘಾಡಿಕೆ ವೆತ್ತ ಸುಮ್ಮಾನದಲಿ ಬಂದನು ರಾಯನರಮನೆಗೆ
ittanavadirigaṃgacittava nuttamāṃbara vīra nūpura muttinēkāvaḷiya karṇābharaṇa mudrikeya hotta haruṣada hoḷeva kaṃgaḷa tettisida puḷakada saghāḍike vetta summānadali baṃdanu rāyanaramanege
ಗುಡಿಯ ಕಟ್ಟಿಸು ಜೀಯ ಚರರಿಗೆ ಕೊಡು ಪಸಾಯವನರಿನೃಪನ ತಲೆ ವಿಡಿದರಾ ದ್ವೈಪಾಯನ ಸರೋವರದ ಮಧ್ಯದಲಿ ಅಡಗಿದನು ತಡಿವಿಡಿದು ನಿಂದವ ರೊಡನೆ ಮಾತಾಡಿದನು ಗಡ ನಿ ಮ್ಮಡಿಯೆ ಬಲ್ಲಿರಿ ರಾಜಕಾರ‍್ಯವನೆಂದನಾ ಭೀಮ
guḍiya kaṭṭisu jīya cararige koḍu pasāyavanarinr̥pana tale viḍidarā dvaipāyana sarōvarada madhyadali aḍagidanu taḍiviḍidu niṃdava roḍane mātāḍidanu gaḍa ni mmaḍiye balliri rājakāryavaneṃdanā bhīma
ಕರೆ ಮುಕುಂದನನರ್ಜುನನ ಸಂ ವರಣೆ ಬರಲಿ ಶಿಖಂಡಿ ಪಾಂಚಾ ಲರಿಗೆ ನೇಮಿಸು ಕರೆಸು ಧೃಷ್ಟದ್ಯುಮ್ನ ಸೃಂಜಯರ ಕರಿ ತುರಗ ರಥವಿಶ್ರಮವನಿಂ ದಿರುಳಿನಲಿ ನೂಕುವುದು ಹೊರವಡಿ ಹೊರವಡೆನೆ ನಿಸ್ಸಾಳ ಸೂಳವಿಸಿದವು ಲಗ್ಗೆಯಲಿ
kare mukuṃdananarjunana saṃ varaṇe barali śikhaṃḍi pāṃcā larige nēmisu karesu dhr̥ṣṭadyumna sr̥ṃjayara kari turaga rathaviśramavaniṃ diruḷinali nūkuvudu horavaḍi horavaḍene nissāḷa sūḷavisidavu laggeyali
ಅವರ ಸುಮ್ಮಾನವನು ಸೇನಾ ನಿವಹ ರಭಸದ ಭೂರಿಭೇರಿಯ ವಿವಿಧ ವಾದ್ಯಧ್ವನಿಯ ರಥಗಜಹಯದ ಗರ್ಜನೆಯ ಇವರು ಕೇಳಿದರಕಟಕಟ ಕೌ ರವನ ಗುಪ್ತ ಪ್ರಕಟವಾದುದೆ ಶಿವಶಿವಾ ಹರಿಸರ‍್ವಗತನಹುದೆಂದನಾ ದ್ರೌಣಿ
avara summānavanu sēnā nivaha rabhasada bhūribhēriya vividha vādyadhvaniya rathagajahayada garjaneya ivaru kēḷidarakaṭakaṭa kau ravana gupta prakaṭavādude śivaśivā harisarvagatanahudeṃdanā drauṇi
ಏಳು ಕುರುಪತಿ ಪಾಂಡುನಂದನ ರಾಳು ಬರುತಿದೆ ನಾವು ನಾಲ್ವರು ಕಾಳೆಗದೊಳಂಘೈಸುವೆವು ಬಿಡುಬಿಡು ಸರೋವರವ ಹೇಳು ಮನವೇನೆನಲು ನೀವಿ ನ್ನೇಳಿ ದೂರದಲಿರಿ ವಿರೋಧಿಗ ಳಾಳು ಮಾಡುವುದೇನು ಸಲಿಲದೊಳೆಂದನಾ ಭೂಪ
ēḷu kurupati pāṃḍunaṃdana rāḷu barutide nāvu nālvaru kāḷegadoḷaṃghaisuvevu biḍubiḍu sarōvarava hēḷu manavēnenalu nīvi nnēḷi dūradaliri virōdhiga ḷāḷu māḍuvudēnu saliladoḷeṃdanā bhūpa
ಅನಿಮಿಷರು ಗಂಧರ್ವ ಯಕ್ಷರು ಮುನಿದು ಮಾಡುವುದೇನು ಮಾಯದ ಮನುಜರಿಗೆ ತಾ ಸಾಧ್ಯವಹೆನೇ ತನ್ನನರಿಯಿರಲಾ ವಿನುತ ಸಲಿಲಸ್ತಂಭವಿದ್ಯೆಯೊ ಳೆನಗಿರವು ಪಾತಾಳದಲಿ ಯಮ ತನುಜನೇಗುವ ರೂಹುದೋರದೆ ಹೋಗಿ ನೀವೆಂದ
animiṣaru gaṃdharva yakṣaru munidu māḍuvudēnu māyada manujarige tā sādhyavahenē tannanariyiralā vinuta salilastaṃbhavidyeyo ḷenagiravu pātāḷadali yama tanujanēguva rūhudōrade hōgi nīveṃda
ಉರವಣಿಸಿತರಿಸೇನೆ ಮುತ್ತಿತು ಸರಸಿಯನು ವೇಢೆಯಲಿ ಗಿಡುಮೆಳೆ ತರುಲತೆಯಲೊಳಕೊಂಡು ನಿಂದುದು ಚತುರಚತುರಂಗ ನರರ ಗರ್ಜನೆ ವಾದ್ಯರವ ಕರಿ ತುರಗ ರಥ ನಿರ್ಘೋಷ ಪರ‍್ವತ ಬಿರಿಯೆ ಮೊಳಗಿತು ಸಿಲುಕಿದನು ಸಿಲುಕಿದನು ಹಗೆಯೆನುತ
uravaṇisitarisēne muttitu sarasiyanu vēḍheyali giḍumeḷe tarulateyaloḷakoṃḍu niṃdudu caturacaturaṃga narara garjane vādyarava kari turaga ratha nirghōṣa parvata biriye moḷagitu silukidanu silukidanu hageyenuta
ಇವರು ತಿರುಗಿದರಿನ್ನು ದೈವ ವ್ಯವಸಿತವೆ ಫಲಿಸುವುದಲಾ ಕೌ ರವನ ಸಿರಿ ಪಣ್ಯಾಂಗನಾವಿಭ್ರಮವ ವರಿಸಿತಲಾ ಅವರಿಗಿದನಾರರುಹಿದರೊ ಪಾಂ ಡವರಿಗಾವುದು ಕೊರತೆ ಪುಣ್ಯ ಪ್ರವರ ಗದುಗಿನ ವೀರನಾರಾಯಣನ ಕರುಣದಲಿ
ivaru tirugidarinnu daiva vyavasitave phalisuvudalā kau ravana siri paṇyāṃganāvibhramava varisitalā avarigidanāraruhidaro pāṃ ḍavarigāvudu korate puṇya pravara gadugina vīranārāyaṇana karuṇadali
Keys: ← → turn the page, J K step through the verses.
Illustration: Verse & Place (Project-owned).