ಅರಿಮಹೀಶಕುಠಾರವೀರನು ವರ ಕಿರೀಟಿಕುಮಾರ ಧೀರನು ಸುರರ ನಗರಿಗೆ ನಡೆಯೆ ಹಲುಬಿದನಂದುಯಮಸೂನು
arimahīśakuṭhāravīranu vara kirīṭikumāra dhīranu surara nagarige naḍeye halubidanaṃduyamasūnu
ದ್ರೋಣ ಪರ್ವ — ಸಂಧಿ ೭ · ದ್ರೋಣ ಪರ್ವ — ಸಂಧಿ ೭
drōṇa parva — saṃdhi 7
The complete drona parva · sandhi 7 in Kannada.
39 passagesKannada with transliteration
Invocation
ಅರಿಮಹೀಶಕುಠಾರವೀರನು ವರ ಕಿರೀಟಿಕುಮಾರ ಧೀರನು ಸುರರ ನಗರಿಗೆ ನಡೆಯೆ ಹಲುಬಿದನಂದುಯಮಸೂನು
arimahīśakuṭhāravīranu vara kirīṭikumāra dhīranu surara nagarige naḍeye halubidanaṃduyamasūnu
ತೆಗೆದುದರಿಪರಿವಾರ ಕಹಳಾ ದಿಗಳ ಸನ್ನೆಯಲುಭಯಬಲ ಕಾ ಳೆಗವನುಳಿದುದು ಬಂದು ಹೊಕ್ಕರು ತಮ್ಮ ಪಾಳಯವ ಮಗನು ರಣದಲಿ ಮಡಿದ ಹದ ಬೀ ಡುಗಳೊಳಾದುದು ವಾರ್ತೆ ದೂತರು ದುಗುಡ ಭರದಲಿ ಬಂದು ಹೊಕ್ಕರು ರಾಜಮಂದಿರವ
tegedudariparivāra kahaḷā digaḷa sanneyalubhayabala kā ḷegavanuḷidudu baṃdu hokkaru tamma pāḷayava maganu raṇadali maḍida hada bī ḍugaḷoḷādudu vārte dūtaru duguḍa bharadali baṃdu hokkaru rājamaṃdirava
ಅವನಿಪನ ಖಂಡೆಯವ ನಕುಲನ ಪವನಸುತನ ಕಠಾರಿಯನು ನೃಪ ನಿವಹದಾಯುಧ ತತಿಯನೊಯ್ಯನೆ ತೆಗೆದು ಬೈಚಿಟ್ಟು ಬವರದಲಿ ಸುತನಳಿದನೋ ಕೌ ರವರ ಕೈವಶವಾದನೋ ಸಂ ಭವಿಪ ಹದನೇನೆಂಬ ನೃಪತಿಯ ಕಂಡರೈತಂದು
avanipana khaṃḍeyava nakulana pavanasutana kaṭhāriyanu nr̥pa nivahadāyudha tatiyanoyyane tegedu baiciṭṭu bavaradali sutanaḷidanō kau ravara kaivaśavādanō saṃ bhavipa hadanēneṃba nr̥patiya kaṃḍaraitaṃdu
ಅವನಿಪಾಲಕುಮಾರಕಂಠೀ ರವನು ರಣದಲಿ ಬೀದಿವರಿದು ತ್ಸವದಲಹಿತರನಿರಿದು ಕೌರವ ರಾಯ ನಂದನರ ಜವನ ನಗರಿಗೆ ಕಳುಹಿ ತಾ ವಾ ಸವನ ಸಿಂಹಾಸನವನಡರುವ ತವಕದಲಿ ಜಾರಿದನೆನಲು ಶಿವ ಎನುತ ಬಸವಳಿದ
avanipālakumārakaṃṭhī ravanu raṇadali bīdivaridu tsavadalahitaraniridu kaurava rāya naṃdanara javana nagarige kaḷuhi tā vā savana siṃhāsanavanaḍaruva tavakadali jāridanenalu śiva enuta basavaḷida
ಕುಲಿಶ ಹತಿಯಲಿ ಕುಲ ಶಿಲೋಚ್ಚಯ ವಿಳೆಗೆ ಕೆಡೆವಂದದಲಿ ನಿಜಸುತ ನಳಿದ ವಾರ್ತಾ ವಚನದುಪಟಳಕವನಿಪಾಲಕನು ಮಲಗಿದನು ಮೈಮರೆದು ಮಹಿ ಮಂ ಡಳಿಕರೊಳು ಗುಜುಗುಜಿನೊಳಿರೆ ಕಳ ವಳಿಕೆ ಮೊಳೆತುದು ಕಟಕದಲಿ ದುಮ್ಮಾನಮಯವಾಯ್ತು
kuliśa hatiyali kula śilōccaya viḷege keḍevaṃdadali nijasuta naḷida vārtā vacanadupaṭaḷakavanipālakanu malagidanu maimaredu mahi maṃ ḍaḷikaroḷu gujugujinoḷire kaḷa vaḷike moḷetudu kaṭakadali dummānamayavāytu
ಅರಮನೆಯ ಗಜಬಜದ ಹದನರಿ ದರಸನಪಗತನೆಂದು ಪಾಳೆಯ ದಿರುಳು ನಡುಗಿತು ತೊಡಗಿದವು ಕೈಸೂರೆ ಕೆಲಕಡೆಯ ನೆರವಿ ಮಸಗಿತು ಕೆತ್ತುವಂಗಡಿ ದುರುಳರಬ್ಬರಿಸಿದರು ಮುಸುಕಿನ ಸುರಗಿ ಕೆತ್ತವು ಮಂದಿ ದಳವುಳವಾಯ್ತು ನಿಮಿಷದಲಿ
aramaneya gajabajada hadanari darasanapagataneṃdu pāḷeya diruḷu naḍugitu toḍagidavu kaisūre kelakaḍeya neravi masagitu kettuvaṃgaḍi duruḷarabbarisidaru musukina suragi kettavu maṃdi daḷavuḷavāytu nimiṣadali
ಹೊಳಲು ತಲೆಕೆಳಕಾಯ್ತು ಹುಯ್ಯಲು ತಳಿತುದೊಳತೋಟಿಯಲಿ ಕೆತ್ತವು ನಿಳಯ ನಿಳಯ ಕವಾಟವುದ್ರೇಕಿಗಳ ಮಯವಾಯ್ತು ಎಲೆಲೆ ಕೆಟ್ಟುದು ಕಟಕವೆಂದು ಮ್ಮಳಿಸಿದರು ಸಚಿವರು ಮಹೀಪತಿ ಯುಳಿವನರಿಯಲು ನಾಸಿಕದಲಾರೈದರುಸುರುಗಳ
hoḷalu talekeḷakāytu huyyalu taḷitudoḷatōṭiyali kettavu niḷaya niḷaya kavāṭavudrēkigaḷa mayavāytu elele keṭṭudu kaṭakaveṃdu mmaḷisidaru sacivaru mahīpati yuḷivanariyalu nāsikadalāraidarusurugaḷa
ಉರಿಯ ಚೂಣಿಯಲುಸುರು ಮೂಗಿನ ಲುರವಣಿಸುತಿದೆ ಧರಣಿಪತಿ ಸು ಸ್ಥಿರನು ಹೊಯ್ ಹೊಯ್ ಹೊಳಲ ಬೆದರಿಸಿ ಸುಲಿವಬಣಗುಗಳ ಹರಿಯೆನಲು ಹೊರವಂಟು ಹೊಯ್ದರು ತುರಗ ಗಜಘಟೆ ಬೀದಿವರಿದವು ನೆರವಿದೊಳಸಿನ ಮನ್ನೆಯರ ಸೆಣಸಿದರು ಶೂಲದಲಿ
uriya cūṇiyalusuru mūgina luravaṇisutide dharaṇipati su sthiranu hoy hoy hoḷala bedarisi sulivabaṇagugaḷa hariyenalu horavaṃṭu hoydaru turaga gajaghaṭe bīdivaridavu neravidoḷasina manneyara seṇasidaru śūladali
ಹೊಳಲ ಗಜಬಜವಡಗಿತರಮನೆ ಯೊಳಗೆ ಪಸರಿಸಿತತುಳ ಶೋಕದ ಜಲಧಿ ಭೂಪಾಲಕನ ಸೈರಣೆಗಾಯ್ತು ಮಹನವಮಿ ಒಳಗುರಿವ ಹಸಿಮರದ ತುದಿಯಲಿ ಜಲವೊಗುವವೊಲು ಹೃದಯ ಶಿಖಿಯುರಿ ತಳಿತು ಲೋಚನವಾರಿ ತುಳುಕಿತು ಪವನಜಾದಿಗಳ
hoḷala gajabajavaḍagitaramane yoḷage pasarisitatuḷa śōkada jaladhi bhūpālakana sairaṇegāytu mahanavami oḷaguriva hasimarada tudiyali jalavoguvavolu hr̥daya śikhiyuri taḷitu lōcanavāri tuḷukitu pavanajādigaḷa
ಮರೆವುತೆಚ್ಚರುತವನಿಪತಿ ಕರೆ ತರುಣನಾವೆಡೆ ರಾಯಗಜ ಕೇ ಸರಿಯದಾವೆಡೆ ಕಂದ ಬಾಯೆನುತಪ್ಪಿದನು ಬಯಲ ಹೊರಳಿದನು ಹುಡಿಯೊಳಗೆ ಸಲೆ ಕಾ ತರಸಿದನು ಮೋಹಾಂಧಕಾರಕೆ ಕರಣವನು ಕೈಸೂರೆಗೊಟ್ಟನು ನಿಜದೊಳೆಚ್ಚರದೆ
marevuteccarutavanipati kare taruṇanāveḍe rāyagaja kē sariyadāveḍe kaṃda bāyenutappidanu bayala horaḷidanu huḍiyoḷage sale kā tarasidanu mōhāṃdhakārake karaṇavanu kaisūregoṭṭanu nijadoḷeccarade
ಬಂದು ಫಲುಗುಣನೆನ್ನ ಮೋಹದ ಕಂದನಾವೆಡೆಯೆಂದಡಾನೇ ನೆಂದು ಮಾರುತ್ತರವ ಕೊಡುವೆನು ವೈರಿ ನಾಯಕರು ಕೊಂದರೆಂಬೆನೊ ಮೇಣು ನಾನೇ ಕೊಂದೆನೆಂಬೆನೊ ಶಿವ ಮಹಾ ದೇ ವೆಂದು ಪುತ್ರಸ್ನೇಹ ಸೌರಂಭದಲಿ ಹಲುಬಿದನು
baṃdu phaluguṇanenna mōhada kaṃdanāveḍeyeṃdaḍānē neṃdu māruttarava koḍuvenu vairi nāyakaru koṃdareṃbeno mēṇu nānē koṃdeneṃbeno śiva mahā dē veṃdu putrasnēha sauraṃbhadali halubidanu
ಅರಮನೆಯ ಗಜಬಜವ ಕೇಳಿದು ದೊರೆಯೊಳಾವವನಳಿದನಕಟೆಂ ದರಸಿಯರು ಬೆಸಗೊಳಲು ದ್ರೌಪದಿಗರುಹಿದರು ಹದನ ಉರಿವ ಡಾವರವೆಳೆಯ ಬಾಳೆಯ ಬೆರಸುವಂತಿರೆ ರಾಯ ಕುವರನ ಮರಣ ವಾರ್ತೆಯನಾ ಸುಭದ್ರಾ ದೇವಿ ಕೇಳಿದಳು
aramaneya gajabajava kēḷidu doreyoḷāvavanaḷidanakaṭeṃ darasiyaru besagoḷalu draupadigaruhidaru hadana uriva ḍāvaraveḷeya bāḷeya berasuvaṃtire rāya kuvarana maraṇa vārteyanā subhadrā dēvi kēḷidaḷu
ತೆಳುವಸುರ ಬಿರುವೊಯ್ಲ ಮುರಜದ ಬಳಲ ಮುಡಿಯರಳುಗಳ ಮುತ್ತಿಗೆ ಯಳಿರವದ ಭಾರಣೆಯ ಹಾಹಾರವದ ಕಾಯದಲಿ ಲಲನೆ ಬರೆ ಚೆಲುವಾಯ್ತು ಧರ್ಮಜ ನಳಲು ಮಿಗೆ ಕೊಂಡಿರಲು ನಾಟ್ಯದ ಕಳನ ಗೆಲದಿರಳೆನಲು ಬಂದಳು ದ್ರೌಪದಾದೇವಿ
teḷuvasura biruvoyla murajada baḷala muḍiyaraḷugaḷa muttige yaḷiravada bhāraṇeya hāhāravada kāyadali lalane bare celuvāytu dharmaja naḷalu mige koṃḍiralu nāṭyada kaḷana geladiraḷenalu baṃdaḷu draupadādēvi
ಅಳಲ ಶಿಖಿಯಲಿ ಬಾಡಿದಾನನ ಜಲರುಹದ ಕಡುವೇದನೆಯ ಕಳ ಕಳದ ಹಾಹಾ ರವದ ರೌದ್ರೆ ಸುಭದ್ರೆ ನಡೆತಂದು ನೆಲಕೆ ಧೊಪ್ಪನೆ ಕೆಡೆದು ಸಭೆಯಲಿ ಹಲುಬಿದಳು ಕೊಳುಗುಳಕೆ ಕಂದನ ಕಳುಹಿದವರಿಗೆ ಸಂದುದೇ ಪರಿಣಾಮವೆಂದೆನುತ
aḷala śikhiyali bāḍidānana jalaruhada kaḍuvēdaneya kaḷa kaḷada hāhā ravada raudre subhadre naḍetaṃdu nelake dhoppane keḍedu sabheyali halubidaḷu koḷuguḷake kaṃdana kaḷuhidavarige saṃdudē pariṇāmaveṃdenuta
ಎಲೆ ಯುಧಿಷ್ಠಿರದೇವ ಸಾಲದೆ ಕೆಲನ ಮೆಚ್ಚಿಸುವಳಲು ಲೋಚನ ಜಲವ ತೊಡೆಯೈ ಭೀಮ ಬಲ್ಲೆನು ನಿಮ್ಮ ನೆನಹುಗಳ ಅಳಲದಿರಿ ಸಹದೇವ ನಕುಳರು ನಿಲಿಸಿರೈ ನಿಮ್ಮಿಷ್ಟಸಿದ್ಧಿಯ ಬೆಳಸು ಫಲವಾಯ್ತೇಕೆ ನೋವಿನ್ನೆಂದಳಿಂದುಮುಖಿ
ele yudhiṣṭhiradēva sālade kelana meccisuvaḷalu lōcana jalava toḍeyai bhīma ballenu nimma nenahugaḷa aḷaladiri sahadēva nakuḷaru nilisirai nimmiṣṭasiddhiya beḷasu phalavāytēke nōvinneṃdaḷiṃdumukhi
ಮಗನು ಪಂಚದ್ರೌಪದೇಯರ ಬಗೆಯನೆನ್ನವನಿರಲು ರಾಜ್ಯವ ಹೊಗಿಸಲನುವಿಲ್ಲೆಂದು ಕಂದನ ರಣಕೆ ನೂಕಿದಿರಿ ಬಗೆಯೊಲವು ಫಲವಾಯ್ತಲಾ ಕಾ ಳೆಗವ ಗೆಲಿದೈವರು ಕುಮಾರರ ಹೊಗಿಸಿರೈ ಗಜಪುರವನೆಂದು ಸುಭದ್ರೆ ಹಲುಬಿದಳು
maganu paṃcadraupadēyara bageyanennavaniralu rājyava hogisalanuvilleṃdu kaṃdana raṇake nūkidiri bageyolavu phalavāytalā kā ḷegava gelidaivaru kumārara hogisirai gajapuravaneṃdu subhadre halubidaḷu
ಅಕಟ ಮಗನೇ ಬಹಳ ಪಾಪಾ ತ್ಮಕರ ಬಸುರಲಿ ಬಹುದರಿಂದೀ ನಕುಳನುದರದಲಾಗಲೀ ಧರ್ಮಜನ ಜಠರದಲಿ ಸುಕೃತಿ ನೀನುದಯಿಸಲು ಬಹು ಕಂ ಟಕರು ಬಳಿಕಾರುಂಟು ಕಡುಪಾ ತಕಿಯಲಾ ನಿಮ್ಮಯ್ಯನೆಂದಳು ಫಲುಗುಣನ ರಾಣಿ
akaṭa maganē bahaḷa pāpā tmakara basurali bahudariṃdī nakuḷanudaradalāgalī dharmajana jaṭharadali sukr̥ti nīnudayisalu bahu kaṃ ṭakaru baḷikāruṃṭu kaḍupā takiyalā nimmayyaneṃdaḷu phaluguṇana rāṇi
ಧುರವ ಹೊಗತಕ್ಕವನೆ ಚಿಕ್ಕವ ನಿರಿಯಲಾಪನೆ ಬಹನೆ ಮರಳಿದು ಧರೆಯ ವೈಭವಕಳುಪಿ ಕಳುಹಿದಿರೆನ್ನ ಕಂದನನು ವರ ಯುಧಿಷ್ಠಿರ ಜನಪ ಲೋಕದ ಕರುಣಿಯೆಂಬರು ಕುನ್ನಿಗಳು ಮರೆ ಗೊರಳುಗೊಯ್ಕನನರಿಯರೆಂದಳು ಫಲುಗುಣನ ರಾಣಿ
dhurava hogatakkavane cikkava niriyalāpane bahane maraḷidu dhareya vaibhavakaḷupi kaḷuhidirenna kaṃdananu vara yudhiṣṭhira janapa lōkada karuṇiyeṃbaru kunnigaḷu mare goraḷugoykananariyareṃdaḷu phaluguṇana rāṇi
ಶೋಕವಿಮ್ಮಡಿಸಿತ್ತು ಚಿತ್ತ ವ್ಯಾಕುಳತೆಯಾ ಸತಿಯ ನುಡಿಗಳ ನೇಕ ಸಾಣೆಯ ಸರಳು ಮುರಿದವು ನೃಪನ ಹೃದಯದಲಿ ಆ ಕುಮಾರ ವಿಯೋಗವಹ್ನಿಗೆ ಯೀಕೆಯಳಲು ಸಮೀರನಾಯ್ತು ದಿ ವೌಕಸರ ಸಮ್ಮೇಳವೇ ಪುರುಷಾರ್ಥ ತನಗೆಂದ
śōkavimmaḍisittu citta vyākuḷateyā satiya nuḍigaḷa nēka sāṇeya saraḷu muridavu nr̥pana hr̥dayadali ā kumāra viyōgavahnige yīkeyaḷalu samīranāytu di vaukasara sammēḷavē puruṣārtha tanageṃda
ಎಲೆ ವೃಕೋದರ ನಕುಳ ಸಾತ್ಯಕಿ ನಿಲಿಸಿರೈ ತಂಗಿಯನು ತನ್ನಯ ಕೊಲೆಗೆ ಮಗನಳಿವೊಂದು ಸಾಲದೆ ತನ್ನ ನುಡಿಯೇಕೆ ನಳಿನನಾಭನ ಕರುಣದೊರತೆಯು ಕಳಿದರಾರೇಗುವರು ಶಿವ ಶಿವ ನೆಲನೊಳೆನ್ನವೊಲಾರು ಪಾಪಿಗಳೆಂದು ಬಿಸುಸುಯ್ದ
ele vr̥kōdara nakuḷa sātyaki nilisirai taṃgiyanu tannaya kolege maganaḷivoṃdu sālade tanna nuḍiyēke naḷinanābhana karuṇadorateyu kaḷidarārēguvaru śiva śiva nelanoḷennavolāru pāpigaḷeṃdu bisusuyda
ಧರಣಿಪನ ಶೋಕಾತಿಶಯವನು ವರ ಸಮಾಧಿಯೊಳರಿದು ಮುನಿಪತಿ ಕರುಣದಲಿ ಕಡುನೊಂದು ಸಕಲ ಜಗಕ್ಕನುಗ್ರಹವ ಕರುಣಿಸುವವೊಲು ಕರುಣಿತನವನು ಮೆರೆಯಲೋಸುಗವಿರದೆ ಗಗನೇ ಚರದ ಗತಿಯಲಿ ಬಂದನೈ ದ್ವೈಪಾಯನವ್ರತಿಪ
dharaṇipana śōkātiśayavanu vara samādhiyoḷaridu munipati karuṇadali kaḍunoṃdu sakala jagakkanugrahava karuṇisuvavolu karuṇitanavanu mereyalōsugavirade gaganē carada gatiyali baṃdanai dvaipāyanavratipa
ಬಂದು ವೇದವ್ಯಾಸಮುನಿ ನೃಪ ಮಂದಿರವ ಹೊಗಲೆದ್ದು ಪದದಲಿ ಸಂದಣಿಸಿ ಚಾಚಿದನು ಮಕುಟವನವನಿಪಾಲಕನು ನೊಂದವರು ಸತ್ಸಂಗತಿಯಲಾ ನಂದವಡೆವುದೆನುತ್ತ ಮುನಿಪತಿ ಕಂದುಮೋರೆಯ ಮಹಿಪತಿಯ ನೆಗಹಿದನು ಕರುಣದಲಿ
baṃdu vēdavyāsamuni nr̥pa maṃdirava hogaleddu padadali saṃdaṇisi cācidanu makuṭavanavanipālakanu noṃdavaru satsaṃgatiyalā naṃdavaḍevudenutta munipati kaṃdumōreya mahipatiya negahidanu karuṇadali
ಎಲೆ ಯುಧಿಷ್ಠಿರ ನೃಪಕುಮಾರ ಪ್ರಳಯದಾಪತ್ತಾಯ್ತೆ ಭೀಮನ ನಲವಿಗೂಣೆಯವಾಯ್ತೆ ದುಸ್ಥಿತಿಯಾಯ್ತೆ ನಕುಲಂಗೆ ಬಲು ದುಗುಡ ಸಹದೇವನಲಿ ಸಂ ಗಳಿಸಿತೇ ದ್ರೌಪದಿ ಸುಭದ್ರಾ ಲಲನೆಯರಿಗನುಚಿತವು ಘಟಿಸಿತೆ ಎಂದನಾ ಮುನಿಪ
ele yudhiṣṭhira nr̥pakumāra praḷayadāpattāyte bhīmana nalavigūṇeyavāyte dusthitiyāyte nakulaṃge balu duguḍa sahadēvanali saṃ gaḷisitē draupadi subhadrā lalaneyariganucitavu ghaṭisite eṃdanā munipa
ಅಡಸಿದಾಪತ್ತಿನಲಿ ಧೈರ‍್ಯವ ಹಿಡಿವುದೇ ಸುಪ್ರೌಢಿ ಸಾಕಿ ನ್ನೊಡಲು ಕರಗಿದೊಡೇಳಲರಿವನೆ ಹಿಂಗಿದಭಿಮನ್ಯು ಒಡನೆ ಬಂದವು ಬಿಡವು ಭವದಲಿ ತೊಡಕಿ ಸುಕೃತವು ದುಷ್ಕೃತಂಗಳು ಕಡೆಗೆ ತಿಳಿವಿನೊಳಲ್ಲದಿಹಪರ ಸೌಖ್ಯವಿಲ್ಲೆಂದ
aḍasidāpattinali dhairyava hiḍivudē suprauḍhi sāki nnoḍalu karagidoḍēḷalarivane hiṃgidabhimanyu oḍane baṃdavu biḍavu bhavadali toḍaki sukr̥tavu duṣkr̥taṃgaḷu kaḍege tiḷivinoḷalladihapara saukhyavilleṃda
ಎಲ್ಲರೋಪಾದಿಯ ಕುಮಾರಕ ನಲ್ಲ ಕಾಣಿರೆ ವೀರ ವಿತರಣ ದಲ್ಲಿ ಛಲದಲಿ ಶೀಲದಲಿ ನಾನಾ ಗುಣಂಗಳಲಿ ಇಲ್ಲ ಸುಕುಮಾರಂಗೆ ಸರಿ ಮಗ ನಿಲ್ಲದೇಗುವೆನಕಟ ವಚನದ ಸೆಲ್ಲಹದಲಿರಿಯದಿರೆನುತ ಹಲುಬಿದನು ಭೂಪಾಲ
ellarōpādiya kumāraka nalla kāṇire vīra vitaraṇa dalli chaladali śīladali nānā guṇaṃgaḷali illa sukumāraṃge sari maga nilladēguvenakaṭa vacanada sellahadaliriyadirenuta halubidanu bhūpāla
ಜನನವೇ ಲಯಬೀಜ ಮರಣವೆ ಜನನ ಬೀಜವು ತೋರಿ ಕೆಡುವೀ ತನುವಿನಭಿರಂಜನೆಯ ಸೌಖ್ಯಕೆ ಮಾರದಿರು ಮನವ ಘನಪರಂಜ್ಯೋತಿ ಸ್ವರೂಪದ ನೆನಹ ಮರೆದೀ ಮೋಹಮಯ ಬಂ ಧನದೊಳಗೆ ಮರುಳಹರೆ ಮಗನೇ ನಿನ್ನನರಿಯೆಂದ
jananavē layabīja maraṇave janana bījavu tōri keḍuvī tanuvinabhiraṃjaneya saukhyake māradiru manava ghanaparaṃjyōti svarūpada nenaha maredī mōhamaya baṃ dhanadoḷage maruḷahare maganē ninnanariyeṃda
ಹರನೊಡನೆ ಹೊಯ್ದಾಡಿದಗ್ಗದ ನರನು ತಂದೆ ಸಮಸ್ತ ಭುವನೇ ಶ್ವರನಲಾ ಮುರವೈರಿ ಮಾವನು ನಿನ್ನ ತನಯನಿಗೆ ಧುರದೊಳೀ ಹದನಾಯ್ತು ಮಿಕ್ಕಿನ ನೊರಜುಗಳ ಪಾಡೇನು ಕಾಲನು ಹರಿಹರ ಬ್ರಹ್ಮಾದಿಗಳ ಕೈಕೊಂಬನಲ್ಲೆಂದ
haranoḍane hoydāḍidaggada naranu taṃde samasta bhuvanē śvaranalā muravairi māvanu ninna tanayanige dhuradoḷī hadanāytu mikkina norajugaḷa pāḍēnu kālanu harihara brahmādigaḷa kaikoṃbanalleṃda
ದೇಹ ತಾನಭಿಮನ್ಯುವೋ ದಿಟ ದೇಹಿ ತಾನಭಿಮನ್ಯುವೋ ಜಡ ದೇಹ ತಾನಭಿಮನ್ಯುವಲ್ಲದು ಕೆಟ್ಟರೇನಾಯ್ತು ದೇಹವೆಂಬುದನಿತ್ಯ ನಿನ್ನವ ರಾಹವದೊಳಳಿದವರ ಬಿಡು ಸಂ ದೇಹವನಹಮ್ಮಮತೆಗಳ ಬೀಳ್ಕೊಟ್ಟು ನೋಡೆಂದ
dēha tānabhimanyuvō diṭa dēhi tānabhimanyuvō jaḍa dēha tānabhimanyuvalladu keṭṭarēnāytu dēhaveṃbudanitya ninnava rāhavadoḷaḷidavara biḍu saṃ dēhavanahammamategaḷa bīḷkoṭṭu nōḍeṃda
ಎನ್ನದಾನೆಂಬೆರಡರಿಂದವೆ ಬನ್ನಬಡುವನು ಜೀವನಲ್ಲದೆ ಮುನ್ನವಿನ್ನೆಂದೆಂದಿಗಾತ್ಮಂಗಿಲ್ಲ ಭವಬಂಧ ನಿನ್ನ ನೀನರಿ ಸಾಕು ಮಾಯೆಯ ಗನ್ನಗತಕವ ಗೆಲುವೆ ಕನಸಿನ ಪೊನ್ನ ಕಾಣದೆ ದುಃಖಪಡುವರೆ ಭೂಪ ಕೇಳೆಂದ
ennadāneṃberaḍariṃdave bannabaḍuvanu jīvanallade munnavinneṃdeṃdigātmaṃgilla bhavabaṃdha ninna nīnari sāku māyeya gannagatakava geluve kanasina ponna kāṇade duḥkhapaḍuvare bhūpa kēḷeṃda
ಉರಗ ನರ ದಿವಿಜಾದಿಗಳಿಗಿದು ಪರಿಹರಿಸಲಳವಲ್ಲ ದೈವದ ಪರುಠವಣೆ ಮುನ್ನಾದಿಯಲಿ ನಿರ್ಮಿಸಿತು ಮೃತ್ಯುವನು ಅರಸನಾಗಲಿ ಧನಿಕನಾಗಲಿ ಹಿರಿಯನಾಗಲಿ ಬಡವನಾಗಲಿ ಮರಣ ಜನಿಸಿದ ಬಳಿಕ ತಪ್ಪದು ಮಗನೆ ಕೇಳೆಂದ
uraga nara divijādigaḷigidu pariharisalaḷavalla daivada paruṭhavaṇe munnādiyali nirmisitu mr̥tyuvanu arasanāgali dhanikanāgali hiriyanāgali baḍavanāgali maraṇa janisida baḷika tappadu magane kēḷeṃda
ಇರುಳು ಹಗಲಿನ ಬೀಜ ನೆರವಿಯೆ ಹರೆವುದಕೆ ಮೊದಲುನ್ನತೋನ್ನತ ಮರುಳೆ ಕೇಡಿನ ಕಾಳಕೂಟವೆ ವೀರನಿರ್ವಹಣ ಸಿರಿ ದರಿದ್ರತೆಗಡಹು ಜನನವೆ ಮರಣ ಫಲವಿದನರಿದು ಬುಧರಾ ಚರಿಸುವುದು ಕೇಳೆಂದು ವೇದವ್ಯಾಸ ಮುನಿ ನುಡಿದ
iruḷu hagalina bīja neraviye harevudake modalunnatōnnata maruḷe kēḍina kāḷakūṭave vīranirvahaṇa siri daridrategaḍahu jananave maraṇa phalavidanaridu budharā carisuvudu kēḷeṃdu vēdavyāsa muni nuḍida
ತಿಳಿದು ಧರ್ಮಜ ಕೇಳು ಕೃತಯುಗ ದೊಳಗೆ ಕಂಪನನೆಂಬ ಭೂಪನು ಕುಲತಿಲಕ ಹರಿಯೆಂಬ ಮಗನಾತಂಗೆ ಜನಿಸಿದನು ಬಳಿಕ ಯೌವನನಾಗಿ ಪರಮಂ ಡಲಕೆ ನಡೆದನು ವೈರಿ ರಾಯರ ವಳಿತವನು ತಾನೊತ್ತಿಕೊಂಡನು ರಿಪು ನೃಪರ ಕೆಡಹಿ
tiḷidu dharmaja kēḷu kr̥tayuga doḷage kaṃpananeṃba bhūpanu kulatilaka hariyeṃba maganātaṃge janisidanu baḷika yauvananāgi paramaṃ ḍalake naḍedanu vairi rāyara vaḷitavanu tānottikoṃḍanu ripu nr̥para keḍahi
ಮಗನೆ ಕಂಪನನೆಂಬ ಭೂಪನ ಮಗನು ಮತ್ತೊಮ್ಮಿನಲಿ ಬಲುಗಾ ಳೆಗವ ಕಾದಿ ವಿರೋಧಿ ಸೇನೆಯೊಳಾನೆವರಿವರಿದು ಬಗೆಯೆ ನಿನ್ನಭಿಮನ್ಯುವಿನವೋ ಲಗಣಿತರನಸಿಯರೆದು ಸುರಪನ ನಗರಿಗೈದಿದನೆಂದು ಕಂಪನು ಕೇಳಿ ಬಸವಳಿದ
magane kaṃpananeṃba bhūpana maganu mattomminali balugā ḷegava kādi virōdhi sēneyoḷānevarivaridu bageye ninnabhimanyuvinavō lagaṇitaranasiyaredu surapana nagarigaididaneṃdu kaṃpanu kēḷi basavaḷida
ನಿನಗೆ ಬಂದಾಪತ್ತಿನಂತಿರ ಲನಿತು ಬಂದುದು ಕಂಪನೆಂಬಾ ತನನು ಸಂತೈಸಲ್ಕೆ ನಾರದನವನಿಗೈತಂದು ಜನಪತಿಯ ಹಿಡಿದೆತ್ತಿದನು ಕಾ ಲನನು ಮೀರುವರಾರು ಪೌರಾ ತನ ಕೃತ ಧ್ರುವ ಮೃತ್ಯುವನು ಗೆಲುವಾತನಿಲ್ಲೆಂದ
ninage baṃdāpattinaṃtira lanitu baṃdudu kaṃpaneṃbā tananu saṃtaisalke nāradanavanigaitaṃdu janapatiya hiḍidettidanu kā lananu mīruvarāru paurā tana kr̥ta dhruva mr̥tyuvanu geluvātanilleṃda
ಮೃತ್ಯುವಾರೆಂದವನಿಪತಿ ಮುನಿ ಪೋತ್ತಮನ ಬೆಸಗೊಳಲು ಬ್ರಹ್ಮನ ಕಿತ್ತಡದ ಕೋಪದಲಿ ಜನಿಸಿದ ರುದ್ರನಿಂ ಬಳಿಕ ಮೃತ್ಯುವೆಂಬವಳಾದಳಾ ಸತಿ ಯತ್ತ ಕಂಬನಿ ರುಜೆಗಳಾದವು ತೆತ್ತಿಗರು ಷಡುವರ್ಗ ಕಾಮಕ್ರೋಧ ಮೊದಲಾಗಿ
mr̥tyuvāreṃdavanipati muni pōttamana besagoḷalu brahmana kittaḍada kōpadali janisida rudraniṃ baḷika mr̥tyuveṃbavaḷādaḷā sati yatta kaṃbani rujegaḷādavu tettigaru ṣaḍuvarga kāmakrōdha modalāgi
ಜನದ ಕೊಲೆಗೆಲಸದ ನಿರೂಪಕೆ ಮನವ ತಂದಳು ಮೃತ್ಯು ನಿಜ ಸಾ ಧನ ಸಹಿತ ಕೈಕೊಂಡ ಕೆಲಸವನಾಗುಮಾಡುವಳು ಜನಪ ದೃಷ್ಟನ್ನಷ್ಟವೆಂಬುದ ನನುಕರಿಸಿ ಮೂರ್ತಿತ್ರಯಂಗಳ ತನಗೆ ನೆರೆವಶಮಾಡಿಕೊಂಡಿಹಳೆಂದು ಮುನಿ ನುಡಿದ
janada kolegelasada nirūpake manava taṃdaḷu mr̥tyu nija sā dhana sahita kaikoṃḍa kelasavanāgumāḍuvaḷu janapa dr̥ṣṭannaṣṭaveṃbuda nanukarisi mūrtitrayaṃgaḷa tanage nerevaśamāḍikoṃḍihaḷeṃdu muni nuḍida
ಆ ಮಹಾ ಮೃತ್ಯುವನು ಹುಟ್ಟಿಸಿ ದಾ ಮಹಾದೇವಾದಿ ದೇವರು ಕಾಮಿನಿಯ ಕಳುಹಲ್ಕೆ ಬಾರದೆನುತ್ತ ಬೋಧಿಸಲು ಭೂಮಿಪತಿ ನಿಜಸುತನ ಮೃತಿಯು ದ್ದಾಮ ತಾಪವ ಕಳೆಯಬೇಕೆಂ ದಾ ಮುನೀಶ್ವರ ಸಂತವಿಟ್ಟನು ಕಂಪಭೂಪತಿಯ
ā mahā mr̥tyuvanu huṭṭisi dā mahādēvādi dēvaru kāminiya kaḷuhalke bāradenutta bōdhisalu bhūmipati nijasutana mr̥tiyu ddāma tāpava kaḷeyabēkeṃ dā munīśvara saṃtaviṭṭanu kaṃpabhūpatiya
ಆದರಾ ಮೃತ್ಯುವಿನ ಕೈವಶ ವಾದವರನೆನಗರುಹ ಬೇಹುದು ಮೇದಿನೀಶರೊಳೆಂದು ಬಿನ್ನಹ ಮಾಡಿದನು ನೃಪತಿ ಆ ದಯಾಳುಗಳರಸನಾ ಶೋ ಕೋದಧಿಗೆ ವಡಬಾಗ್ನಿ ಸಮನೆನಿ ಪಾದಿಯಲಿ ಷೋಡಶ ಮಹೀಶರ ಕಥೆಯ ವಿರಚಿಸಿದ
ādarā mr̥tyuvina kaivaśa vādavaranenagaruha bēhudu mēdinīśaroḷeṃdu binnaha māḍidanu nr̥pati ā dayāḷugaḷarasanā śō kōdadhige vaḍabāgni samaneni pādiyali ṣōḍaśa mahīśara katheya viracisida
ಭರತ ಪೃಥು ಪೌರವ ಭಗೀರಥ ವರ ಯಯಾತಿ ಮರುತ್ತ ನಹುಷೇ ಶ್ವರ ಪುರೂರವ ರಂತಿದೇವ ಗಯಾಂಬರೀಷಕರು ಪರಶುರಾಮ ದಿಲೀಪ ಮಾಂಧಾ ತರು ಹರಿಶ್ಚಂದ್ರಾದಿ ಪೃಥ್ವೀ ಶ್ವರರನಂತರು ಮೃತ್ಯುವಶವರ್ತಿಗಳು ಕೇಳೆಂದ
bharata pr̥thu paurava bhagīratha vara yayāti marutta nahuṣē śvara purūrava raṃtidēva gayāṃbarīṣakaru paraśurāma dilīpa māṃdhā taru hariścaṃdrādi pr̥thvī śvararanaṃtaru mr̥tyuvaśavartigaḷu kēḷeṃda
ಎಂದು ಷೋಡಶ ರಾಯರಾ ಕಥೆ ಯಿಂದ ನೃಪತಿಯ ಸಂತವಿಟ್ಟನು ಬಂದು ಧರ್ಮಜನೆರಗಿದನು ಮುನಿರಾಯನಂಘ್ರಿಯಲಿ ಅಂದು ವೇದವ್ಯಾಸ ಪಾಳಯ ದಿಂದ ಕಳುಹಿಸಿಕೊಂಡನಿತ್ತ ಮು ಕುಂದನಭಿಮನ್ಯುವಿನ ಮರಣವನರಿ ದ ಮನದೊಳಗೆ
eṃdu ṣōḍaśa rāyarā kathe yiṃda nr̥patiya saṃtaviṭṭanu baṃdu dharmajaneragidanu munirāyanaṃghriyali aṃdu vēdavyāsa pāḷaya diṃda kaḷuhisikoṃḍanitta mu kuṃdanabhimanyuvina maraṇavanari da manadoḷage
Keys: ← → turn the page, J K step through the verses.
Illustration: Verse & Place (Project-owned).