ರಾಯಕಟಕಪಿತಾಮಹನ ತರು ವಾಯಲಭಿಷೇಕವನು ಕೌರವ ರಾಯ ಮಾಡಿಸಿ ಪತಿಕರಿಸಿದನು ಕುಂಭಸಂಭವನ
rāyakaṭakapitāmahana taru vāyalabhiṣēkavanu kaurava rāya māḍisi patikarisidanu kuṃbhasaṃbhavana
ದ್ರೋಣ ಪರ್ವ — ಸಂಧಿ ೧ · ದ್ರೋಣ ಪರ್ವ — ಸಂಧಿ ೧
drōṇa parva — saṃdhi 1
The complete drona parva · sandhi 1 in Kannada.
71 passagesKannada with transliteration
Invocation
ರಾಯಕಟಕಪಿತಾಮಹನ ತರು ವಾಯಲಭಿಷೇಕವನು ಕೌರವ ರಾಯ ಮಾಡಿಸಿ ಪತಿಕರಿಸಿದನು ಕುಂಭಸಂಭವನ
rāyakaṭakapitāmahana taru vāyalabhiṣēkavanu kaurava rāya māḍisi patikarisidanu kuṃbhasaṃbhavana
ಸೋಲಿಸಿತೆ ಕರ್ಣಾಮೃತದ ಮಳೆ ಗಾಲ ನಿನ್ನಯ ಕಿವಿಗಳನು ನೆರೆ ಕೇಳಿದೈ ಕೌರವನ ಕದನದ ಬಾಲಕೇಳಿಗಳ ಹೇಳುವುದು ತಾನೇನು ಕೆಂಗರಿ ಗೋಲ ಮಂಚದ ಮಹಿಮನಿರವನು ಮೇಲುಪೋಗಿನ ಕಥೆಯನವಧಾನದಲಿ ಕೇಳೆಂದ
sōlisite karṇāmr̥tada maḷe gāla ninnaya kivigaḷanu nere kēḷidai kauravana kadanada bālakēḷigaḷa hēḷuvudu tānēnu keṃgari gōla maṃcada mahimaniravanu mēlupōgina katheyanavadhānadali kēḷeṃda
ಬತ್ತಿತಂಬುಧಿ ನಿನ್ನ ಮಗ ಹೊಗು ವತ್ತ ಕಾದುದು ನೆಲನು ನೃಪ ತಲೆ ಗುತ್ತಿ ಹೊಗಲೊಳಕೊಳ್ಳದಂಬರವೇನನುಸುರುವೆನು ಮಿತ್ತು ನಿನಗೊಲಿದಿಹಳು ಬಳಿಕಿ ನ್ನುತ್ತರೋತ್ತರವೆಲ್ಲಿಯದು ನೆರೆ ಚಿತ್ತವಿಸುವುದು ಜೀಯ ದ್ರೋಣಂಗಾಯ್ತು ಹರಿವೆಂದ
battitaṃbudhi ninna maga hogu vatta kādudu nelanu nr̥pa tale gutti hogaloḷakoḷḷadaṃbaravēnanusuruvenu mittu ninagolidihaḷu baḷiki nnuttarōttaravelliyadu nere cittavisuvudu jīya drōṇaṃgāytu hariveṃda
ಐದು ದಿವಸದೊಳಹಿತ ಬಲವನು ಹೊಯ್ದು ಹೊಡೆಕುಟ್ಟಾಡಿ ರಿಪುಗಳೊ ಳೈದೆ ದೊರೆಗಳನಿರಿದು ಮೆರೆದನು ಭುಜಮಹೋನ್ನತಿಯ ಕೈದುಕಾರರ ಗುರು ಛಡಾಳಿಸಿ ಮೈದೆಗೆದು ನಿರ್ಜರರ ನಗರಿಗೆ ಹಾಯ್ದನೆನಲುರಿ ಜಠರದಲಿ ಮೋಹರಿಸಿತವನಿಪನ
aidu divasadoḷahita balavanu hoydu hoḍekuṭṭāḍi ripugaḷo ḷaide doregaḷaniridu meredanu bhujamahōnnatiya kaidukārara guru chaḍāḷisi maidegedu nirjarara nagarige hāydanenaluri jaṭharadali mōharisitavanipana
ಶಿವಶಿವಾ ಭೀಷ್ಮಾವಸಾನ ಶ್ರವಣ ವಿಷವಿದೆ ಮತ್ತೆ ಕಳಶೋ ದ್ಭವನ ದೇಹವ್ಯಥೆಯ ಕೇಳ್ದೆನೆ ಪೂತು ವಿಧಿಯೆನುತ ಅವನಿಪತಿ ದುಗುಡದಲಿ ಮೋರೆಯ ನವುಚಿದನು ಕರತಳದಿ ಚಿತ್ತದ ಬವಣಿಗೆಯ ಭಾರಣೆಯ ಕಡುಶೋಕದಲಿ ಮೈಮರೆದ
śivaśivā bhīṣmāvasāna śravaṇa viṣavide matte kaḷaśō dbhavana dēhavyatheya kēḷdene pūtu vidhiyenuta avanipati duguḍadali mōreya navucidanu karataḷadi cittada bavaṇigeya bhāraṇeya kaḍuśōkadali maimareda
ಶೋಕವೇತಕೆ ಜೀಯ ನೀನವಿ ವೇಕಿತನದಲಿ ಮಗನ ಹೆಚ್ಚಿಸಿ ಸಾಕಿ ಕಲಿಸಿದೆ ಕುಟಿಲತನವನು ಕುಹಕ ವಿದ್ಯೆಗಳ ಆಕೆವಾಳರು ಹೊರಿಗೆಯುಳ್ಳ ವಿ ವೇಕಿಗಳು ನಿಮ್ಮಲ್ಲಿ ಸಲ್ಲರು ಸಾಕಿದೇತಕೆ ಸೈರಿಸೆಂದನು ಸಂಜಯನು ನೃಪನ
śōkavētake jīya nīnavi vēkitanadali magana heccisi sāki kaliside kuṭilatanavanu kuhaka vidyegaḷa ākevāḷaru horigeyuḷḷa vi vēkigaḷu nimmalli sallaru sākidētake sairiseṃdanu saṃjayanu nr̥pana
ಆರು ಕುಹಕಿಗಳಾರು ದುರ್ಜನ ರಾರು ಖುಲ್ಲರು ನೀತಿ ಬಾಹಿರ ರಾರು ದುರ್ಬಲರವರು ನಿನ್ನರಮನೆಯ ಮಂತ್ರಿಗಳು ಆರು ಹಿತವರು ನೀತಿ ಕೋವಿದ ರಾರು ಸುಜನರು ಬಹು ಪರಾಕ್ರಮ ರಾರವರ ಹೊರಬೀಸಿ ಕಾಬುದು ನಿನ್ನ ಮತವೆಂದ
āru kuhakigaḷāru durjana rāru khullaru nīti bāhira rāru durbalaravaru ninnaramaneya maṃtrigaḷu āru hitavaru nīti kōvida rāru sujanaru bahu parākrama rāravara horabīsi kābudu ninna mataveṃda
ಹರಿದುದೈ ಕುರುಸೇನೆ ಬತ್ತಿದ ಕೆರೆಯೊಳಗೆ ಬಲೆಯೇಕೆ ಹಗೆ ಹೊ ಕ್ಕಿರಿವರಿನ್ನಾರಡ್ಡಬೀಳ್ವರು ನಿನ್ನ ಮಕ್ಕಳಿಗೆ ಬರಿದೆ ಮನ ನೋಯದಿರು ಸಾಕೆ ಚ್ಚರುವುದೆನೆ ತನ್ನೊಳಗೆ ಹದುಳಿಸಿ ಸರಿಹೃದಯನೀ ಮಾತನೆಂದನು ಮತ್ತೆ ಸಂಜಯಗೆ
haridudai kurusēne battida kereyoḷage baleyēke hage ho kkirivarinnāraḍḍabīḷvaru ninna makkaḷige baride mana nōyadiru sāke ccaruvudene tannoḷage haduḷisi sarihr̥dayanī mātaneṃdanu matte saṃjayage
ಘಾಸಿಯಾದೆನು ಮಗನ ಮೇಲಿ ನ್ನಾಸೆ ಬೀತುದು ಬೆಂದ ಹುಣ್ಣಲಿ ಸಾಸಿವೆಯ ಬಳಿಯದಿರು ಸಂಜಯ ನಿನಗೆ ದಯವಿಲ್ಲ ಏಸು ಬಲುಹುಂಟಾದರೆಯು ಹಗೆ ವಾಸುದೇವನ ಹರಿಬವೆಂದಾ ನೇಸನೊರಲಿದೆನೇನ ಮಾಡುವೆನೆಂದನಂಧ ನೃಪ
ghāsiyādenu magana mēli nnāse bītudu beṃda huṇṇali sāsiveya baḷiyadiru saṃjaya ninage dayavilla ēsu baluhuṃṭādareyu hage vāsudēvana haribaveṃdā nēsanoralidenēna māḍuveneṃdanaṃdha nr̥pa
ಬೇಡ ಮಗನೇ ಪಾಂಡುಸುತರಲಿ ಮಾಡು ಸಂಧಿಯನಸುರ ರಿಪುವಿನ ಕೂಡೆ ವಿಗ್ರಹವೊಳ್ಳಿತೇ ಹಗೆ ಹೊಲ್ಲ ದೈವದಲಿ ಪಾಡು ತಪ್ಪಿದ ಬಳಿಕ ವಿನಯವ ಮಾಡಿ ಮೆರೆವುದು ಬಂಧುವರ್ಗದ ಕೂಡೆ ವಾಸಿಗಳೇತಕೆನ್ನೆನೆ ನಿನ್ನ ಮನವರಿಯೆ
bēḍa maganē pāṃḍusutarali māḍu saṃdhiyanasura ripuvina kūḍe vigrahavoḷḷitē hage holla daivadali pāḍu tappida baḷika vinayava māḍi merevudu baṃdhuvargada kūḍe vāsigaḷētakennene ninna manavariye
ಹೋಗಲಿನ್ನಾ ಮಾತು ಖೂಳರು ತಾಗಿ ಬಾಗರು ಸುಕೃತ ದುಷ್ಕೃತ ಭೋಗವದು ಮಾಡಿದರಿಗಪ್ಪುದು ಖೇದ ನಮಗೇಕೆ ಈಗಲೀ ಕದನದಲಿ ವಜ್ರಕೆ ಬೇಗಡೆಯ ಮಾಡಿದನದಾವನು ತಾಗಿ ದ್ರೋಣನ ಮುರಿದ ಪರಿಯನು ರಚಿಸಿ ಹೇಳೆಂದ
hōgalinnā mātu khūḷaru tāgi bāgaru sukr̥ta duṣkr̥ta bhōgavadu māḍidarigappudu khēda namagēke īgalī kadanadali vajrake bēgaḍeya māḍidanadāvanu tāgi drōṇana murida pariyanu racisi hēḷeṃda
ಚಿತ್ತವಿಸು ಧೃತರಾಷ್ಟ್ರ ಮಲಗಿದ ಮುತ್ತಯನ ಬೀಳ್ಕೊಂಡು ಕೌರವ ರಿತ್ತ ಸರಿದರು ಪಾಂಡುನಂದನರತ್ತ ತಿರುಗಿದರು ಹೊತ್ತ ಮೋನದ ವಿವಿಧ ವಾದ್ಯದ ಕೆತ್ತ ಬಾಯ್ಗಳ ಪಾಠಕರ ಕೈ ಹತ್ತುಗೆಯ ಮೋರೆಯ ಮಹೀಪತಿ ಹೊಕ್ಕನರಮನೆಯ
cittavisu dhr̥tarāṣṭra malagida muttayana bīḷkoṃḍu kaurava ritta saridaru pāṃḍunaṃdanaratta tirugidaru hotta mōnada vividha vādyada ketta bāygaḷa pāṭhakara kai hattugeya mōreya mahīpati hokkanaramaneya
ಗಾಹು ಕೊಳ್ಳದ ಭೀಮ ಪಾರ್ಥರ ಸಾಹಸವನೆಣಿಸುತ ಕಠಾರಿಯ ಮೋಹಳದ ಮೇಲಿಟ್ಟ ಗಲ್ಲದ ಮಕುಟದೊಲಹುಗಳ ಊಹೆದೆಗಹಿನ ಕಂಬನಿಯ ತನಿ ಮೋಹರದ ಘನ ಶೋಕವಹ್ನಿಯ ಮೇಹುಗಾಡಿನ ಮನದ ಕೌರವನಿತ್ತನೋಲಗವ
gāhu koḷḷada bhīma pārthara sāhasavaneṇisuta kaṭhāriya mōhaḷada mēliṭṭa gallada makuṭadolahugaḷa ūhedegahina kaṃbaniya tani mōharada ghana śōkavahniya mēhugāḍina manada kauravanittanōlagava
ಗುರುತನುಜ ವೃಷಸೇನ ಮಾದ್ರೇ ಶ್ವರ ಕಳಿಂಗ ವಿಕರ್ಣ ದುಸ್ಸಹ ದುರುಳ ಶಕುನಿ ಸುಕೇತು ಭೂರಿಶ್ರವ ಜಯದ್ರಥರು ವರ ಸುಲೋಚನ ವಿಂದ್ಯ ಯವನೇ ಶ್ವರರು ಕೃಪ ಕೃತವರ್ಮ ಭಗದ ತ್ತರು ಮಹಾಮಂತ್ರಿಗಳು ಬಂದರು ರಾಯನೋಲಗಕೆ
gurutanuja vr̥ṣasēna mādrē śvara kaḷiṃga vikarṇa dussaha duruḷa śakuni sukētu bhūriśrava jayadratharu vara sulōcana viṃdya yavanē śvararu kr̥pa kr̥tavarma bhagada ttaru mahāmaṃtrigaḷu baṃdaru rāyanōlagake
ತೊಡರ ಝಣಝಣ ರವದ ಹೆಗಲಲಿ ಜಡಿವ ಹಿರಿಯುಬ್ಬಣದ ಹೆಚ್ಚಿದ ಮುಡುಹುಗಳ ಮಿಗೆ ಹೊಳೆವ ಹೀರಾವಳಿಯ ಕೊರಳುಗಳ ಕಡುಮನದ ಕಲಿ ರಾಜಪುತ್ರರ ನಡುವೆ ಮೈಪರಿಮಳದಿ ದೆಸೆ ಕಂ ಪಿಡಲು ಭಾರವಣೆಯಲಿ ಬಂದನು ಕರ್ಣನೋಲಗಕೆ
toḍara jhaṇajhaṇa ravada hegalali jaḍiva hiriyubbaṇada heccida muḍuhugaḷa mige hoḷeva hīrāvaḷiya koraḷugaḷa kaḍumanada kali rājaputrara naḍuve maiparimaḷadi dese kaṃ piḍalu bhāravaṇeyali baṃdanu karṇanōlagake
ಇತ್ತ ಬಾರೈ ಕರ್ಣ ಕುರುಕುಲ ಮತ್ತವಾರಣ ಕುಳ್ಳಿರೈ ಬಾ ಯಿತ್ತ ಬಾ ತನ್ನಾಣೆಯೆನುತವೆ ಸೆರಗ ಹಿಡಿದೆಳೆದು ಹತ್ತಿರಾತನ ನಿಲಿಸಿ ಬಟ್ಟಲ ಲಿತ್ತು ವೀಳೆಯವನು ಸುಯೋಧನ ಕೆತ್ತುಕೊಂಡಿರೆ ನುಡಿಸಿದನು ಕಲಿ ಕರ್ಣನವನಿಪನ
itta bārai karṇa kurukula mattavāraṇa kuḷḷirai bā yitta bā tannāṇeyenutave seraga hiḍideḷedu hattirātana nilisi baṭṭala littu vīḷeyavanu suyōdhana kettukoṃḍire nuḍisidanu kali karṇanavanipana
ಜೀಯ ದುಗುಡವಿದೇಕೆ ಬಿಡು ಗಾಂ ಗೇಯನಳುಕಿದರೇನು ಕಾಣಿಯ ಬೀಯದಲಿ ಬಡವಹುದೆ ಕನಕಾಚಲ ನಿಧಾನಿಸಲು ರಾಯ ಜಗಜಟ್ಟಿಗಳು ರಣದೊಳ ಜೇಯರಿದೆ ಪರಿವಾರವನು ನಿ ರ್ದಾಯದಲಿ ದಣಿಸುವೆನು ರಿಪುಗಳ ಸಿರಿಯ ಸೂರೆಯಲಿ
jīya duguḍavidēke biḍu gāṃ gēyanaḷukidarēnu kāṇiya bīyadali baḍavahude kanakācala nidhānisalu rāya jagajaṭṭigaḷu raṇadoḷa jēyaride parivāravanu ni rdāyadali daṇisuvenu ripugaḷa siriya sūreyali
ಕರ್ಣ ಕರ್ಣಕಠೋರ ಸಾಹಸ ನಿರ್ಣಯಿಸು ಪರಸೈನ್ಯ ಸುಭಟ ಮ ಹಾರ್ಣವಕೆ ಬಿಡು ನಿನ್ನ ವಿಕ್ರಮಬಾಡಬಾನಳನ ಪೂರ್ಣಕಾಮನು ನೀನು ಕುರುಬಲ ಕರ್ಣಧಾರನು ನೀನು ವಿಶ್ವವಿ ಕರ್ಣ ನೀನೇ ರಕ್ಷಿಸೆಂದುದು ನಿಖಿಳ ಪರಿವಾರ
karṇa karṇakaṭhōra sāhasa nirṇayisu parasainya subhaṭa ma hārṇavake biḍu ninna vikramabāḍabānaḷana pūrṇakāmanu nīnu kurubala karṇadhāranu nīnu viśvavi karṇa nīnē rakṣiseṃdudu nikhiḷa parivāra
ಕಾದುವೆನು ರಿಪುಭಟರ ಜೀವವ ಸೇದುವೆನು ಸಮರಂಗ ಭೂಮಿಯ ನಾದುವೆನು ನೆಣಗೊಬ್ಬಿನಹಿತರ ಗೋಣ ರಕುತದಲಿ ಹೋದ ದಿವಸಂಗಳಲಿ ಕಾಳೆಗ ಮಾದುದಂದಿನ ಭೀಷ್ಮರೊಡನೆ ವಿ ವಾದ ಕಾರಣ ಬೇಡಿಕೊಳಬೇಹುದು ನದೀಸುತನ
kāduvenu ripubhaṭara jīvava sēduvenu samaraṃga bhūmiya nāduvenu neṇagobbinahitara gōṇa rakutadali hōda divasaṃgaḷali kāḷega mādudaṃdina bhīṣmaroḍane vi vāda kāraṇa bēḍikoḷabēhudu nadīsutana
ಎಂದು ನೃಪತಿಯ ಬೀಳುಕೊಂಡಿನ ನಂದನನು ಬೊಂಬಾಳ ದೀಪದ ಸಂದಣಿಗಳಲಿ ಸೆಳೆದಡಾಯ್ದದ ಭಟರ ಮುತ್ತಿಗೆಯ ಮುಂದೆ ಪಾಯವಧಾರು ರಿಪುನೃಪ ಬಂದಿಕಾರವಧಾರು ಧಿರುಪಯ ವೆಂದು ಕಳಕಳ ಗಜರು ಮಿಗೆ ಕುರು ಭೂಮಿಗೈತಂದ
eṃdu nr̥patiya bīḷukoṃḍina naṃdananu boṃbāḷa dīpada saṃdaṇigaḷali seḷedaḍāydada bhaṭara muttigeya muṃde pāyavadhāru ripunr̥pa baṃdikāravadhāru dhirupaya veṃdu kaḷakaḷa gajaru mige kuru bhūmigaitaṃda
ಹಾಯಿದವು ನರಿ ನಾಯಿಗಳು ಕಟ ವಾಯಲೆಳಲುವ ಕರುಳಿನಲಿ ಬಸಿ ವಾಯ ರಕುತದಲೋಡಿದವು ರಣ ಭೂತ ದೆಸೆದೆಸೆಗೆ ಆಯುಧದ ಹರಹುಗಳ ತಲೆಗಳ ಡೋಯಿಗೆಯ ಕಡಿ ಖಂಡಮಯದ ಮ ಹಾಯತದ ರಣದೊಳಗೆ ಬಂದನು ಭೀಷ್ಮನಿದ್ದೆಡೆಗೆ
hāyidavu nari nāyigaḷu kaṭa vāyaleḷaluva karuḷinali basi vāya rakutadalōḍidavu raṇa bhūta desedesege āyudhada harahugaḷa talegaḷa ḍōyigeya kaḍi khaṃḍamayada ma hāyatada raṇadoḷage baṃdanu bhīṣmaniddeḍege
ಸರಳ ಮಂಚವ ಹೊದ್ದಿ ಭೀಷ್ಮನ ಚರಣಕಮಲವ ಹಿಡಿದು ನೊಸಲಿನೊ ಳೊರಸಿಕೊಂಡನು ನಾದಿದನು ಕಂಬನಿಯೊಳಂಘ್ರಿಗಳ ಕರುಣಿಸೈ ಗಾಂಗೇಯ ಕರುಣಾ ಶರಧಿಯೈ ಖಳತಿಲಕ ಕರ್ಣನ ದುರುಳತನವನು ಮರೆದು ಮೆರೆವುದು ನಿಮ್ಮ ಸದ್ಗುಣವ
saraḷa maṃcava hoddi bhīṣmana caraṇakamalava hiḍidu nosalino ḷorasikoṃḍanu nādidanu kaṃbaniyoḷaṃghrigaḷa karuṇisai gāṃgēya karuṇā śaradhiyai khaḷatilaka karṇana duruḷatanavanu maredu merevudu nimma sadguṇava
ಎನಲು ಹೃದಯಾಂಬುಜದ ಪೀಠದ ವನಜನಾಭಧ್ಯಾನಸುಧೆಯಲಿ ನನೆದು ಹೊಂಗಿದ ಕರಣ ಹೊರೆಯೇರಿತ್ತು ನಿಮಿಷದಲಿ ತನುಪುಳಕವಡಗಿದವು ರೋಮಾಂ ಚನದ ಬಿಗುಹಡಗಿತ್ತು ಕಂಗಳ ನನೆಗಳರಳಿದವಾಯ್ತು ಭೀಷ್ಮಂಗಿತ್ತಣವಧಾನ
enalu hr̥dayāṃbujada pīṭhada vanajanābhadhyānasudheyali nanedu hoṃgida karaṇa horeyērittu nimiṣadali tanupuḷakavaḍagidavu rōmāṃ canada biguhaḍagittu kaṃgaḷa nanegaḷaraḷidavāytu bhīṣmaṃgittaṇavadhāna
ಅಳಲದಿರು ಬಾ ಮಗನೆ ಕುರುಕುಲ ತಿಲಕನವಸರದಾನೆ ರಿಪು ಮಂ ಡಳಿಕಮಸ್ತಕಶೂಲ ಬಾರೈ ಕರ್ಣ ಬಾಯೆನುತ ತುಳುಕಿದನು ಕಂಬನಿಯ ಕೋಮಳ ತಳದಿ ಮೈದಡವಿದನು ಕೌರವ ನುಳಿವು ನಿನ್ನದು ಕಂದ ಕದನವ ಜಯಿಸು ಹೋಗೆಂದ
aḷaladiru bā magane kurukula tilakanavasaradāne ripu maṃ ḍaḷikamastakaśūla bārai karṇa bāyenuta tuḷukidanu kaṃbaniya kōmaḷa taḷadi maidaḍavidanu kaurava nuḷivu ninnadu kaṃda kadanava jayisu hōgeṃda
ಗಾರುಗೆಡೆದೆನು ನಿಮ್ಮನೋಲೆಯ ಕಾರತನದುಬ್ಬಿನಲಿ ತನಿ ಮದ ವೇರಿ ನಿಮ್ಮಲಿ ಸೆಣಸಿದೆನು ಸೇನಾಧಿಪತ್ಯದಲಿ ದೂರ ಹೊತ್ತೆನು ರಣದ ಮೀಸಲಿ ನೇರು ತಪ್ಪಿತು ನೀಲಮಣಿ ತಲೆ ಗೇರಿಸಿದ ತೃಣವದಕೆ ಸರಿಯೇ ಭೀಷ್ಮ ಹೇಳೆಂದ
gārugeḍedenu nimmanōleya kāratanadubbinali tani mada vēri nimmali seṇasidenu sēnādhipatyadali dūra hottenu raṇada mīsali nēru tappitu nīlamaṇi tale gērisida tr̥ṇavadake sariyē bhīṣma hēḷeṃda
ತನುಜ ತಪ್ಪೇನದಕೆ ಕಾಳೆಗ ವೆನಗೆ ತನಗೆನಬೇಕು ವೀರರು ಮನದ ಕಲಿತನದುಬ್ಬುಗೊಬ್ಬಿನಲೆಂಬರಿದಕೇನು ಮನದೊಳಗೆ ಖತಿಯಿಲ್ಲ ದುರಿಯೋ ಧನ ನೃಪತಿಯೋಪಾದಿ ನೀ ಬೇ ರೆನಗೆ ಲೋಗನೆ ಕಂದ ಕದನವ ಜಯಿಸು ಹೋಗೆಂದ
tanuja tappēnadake kāḷega venage tanagenabēku vīraru manada kalitanadubbugobbinaleṃbaridakēnu manadoḷage khatiyilla duriyō dhana nr̥patiyōpādi nī bē renage lōgane kaṃda kadanava jayisu hōgeṃda
ಆಳುತನದ ದೊಠಾರತನ ಸರಿ ಯಾಳಿನಲಿ ಸೆಣಸಾದೊಡೊಳ್ಳಿತು ಮೇಳವೇ ಗುರು ದೈವದಲಿ ಕಟ್ಟುವರೆ ಬಿರುದುಗಳ ಹಾಳಿ ಹಸುಗೆಯನರಿಯದಾ ಹೀ ಹಾಳಿಗೆಡಿಸಿದೆನಂದು ಸಭೆಯಲಿ ಖೂಳನವಗುಣ ಶತವ ನೋಡದೆ ನಿಮ್ಮ ಮೆರೆಯೆಂದ
āḷutanada doṭhāratana sari yāḷinali seṇasādoḍoḷḷitu mēḷavē guru daivadali kaṭṭuvare birudugaḷa hāḷi hasugeyanariyadā hī hāḷigeḍisidenaṃdu sabheyali khūḷanavaguṇa śatava nōḍade nimma mereyeṃda
ನೋವು ಮನದೊಳಗುಳ್ಳಡಾ ರಾ ಜೀವಲೋಚನನಾಣೆ ಮಗನೇ ಜೀವ ಕೌರವನಲ್ಲಿ ಕರಗುವುದೇನ ಹೇಳುವೆನು ಆವನಾತನ ಬಂಧುವಾತನೆ ಜೀವವೆನ್ನಯ ದೆಸೆಯ ಭಯ ಬೇ ಡಾವ ಪರಿಯಿಂದವನನುಳುಹುವ ಹದನ ಮಾಡೆಂದ
nōvu manadoḷaguḷḷaḍā rā jīvalōcananāṇe maganē jīva kauravanalli karaguvudēna hēḷuvenu āvanātana baṃdhuvātane jīvavennaya deseya bhaya bē ḍāva pariyiṃdavananuḷuhuva hadana māḍeṃda
ಎನ್ನ ಹವಣೇ ಹಗೆಯ ಗೆಲುವಡೆ ನಿನ್ನ ವಂದಿಗರಿರಲು ನೂಕದು ತನ್ನ ಸಾಹಸವೆಲ್ಲಿಪರಿಯಂತಹುದು ಕದನದಲಿ ಗನ್ನಕಾಱನು ಕೃಷ್ಣನವರಿಗೆ ತನ್ನನೊಚ್ಚತಗೊಟ್ಟನಹಿತರ ನಿನ್ನು ಗೆಲುವವರಾರು ಜಯವೆಲ್ಲಿಯದು ನಮಗೆಂದ
enna havaṇē hageya geluvaḍe ninna vaṃdigariralu nūkadu tanna sāhasavellipariyaṃtahudu kadanadali gannakāṟanu kr̥ṣṇanavarige tannanoccatagoṭṭanahitara ninnu geluvavarāru jayavelliyadu namageṃda
ಆಲವಟ್ಟದ ಗಾಳಿಯಲಿ ಮೇ ಘಾಳಿ ಮುರಿವುದೆ ಮಿಂಚುಬುಳುವಿಗೆ ಸೋಲುವುದೆ ಕತ್ತಲೆಯ ಕಟಕವು ಜೀಯ ಚಿತ್ತೈಸು ಸೀಳಬಹುದೇ ಸೀಸದುಳಿಯಲಿ ಶೈಲವನು ಹರಿಯೊಲಿದ ಮನುಜರ ಮೇಲೆ ಮುನಿದೇಗುವರು ಕೆಲಬರು ಭೀಷ್ಮ ಹೇಳೆಂದ
ālavaṭṭada gāḷiyali mē ghāḷi murivude miṃcubuḷuvige sōluvude kattaleya kaṭakavu jīya cittaisu sīḷabahudē sīsaduḷiyali śailavanu hariyolida manujara mēle munidēguvaru kelabaru bhīṣma hēḷeṃda
ಲೇಸನಾಡಿದೆ ಕರ್ಣ ದಿಟ ನೀ ನೀಸು ಸಮ್ಯಜ್ಞಾನಿಯೆಂಬುದ ನೀಸು ದಿನ ನಾವರಿಯೆವೈ ನೀ ಸತ್ಕುಲೀನನಲ ಆ ಸುಯೋಧನಗರುಹಿ ಸಂಧಿಯ ನೀ ಸಮಯದಲಿ ಘಟಿಸು ನೀನೆನ ಲೈಸ ಮೀರನು ಪಾಂಡವರ ಸಂಪ್ರತಿಯ ಮಾಡೆಂದ
lēsanāḍide karṇa diṭa nī nīsu samyajñāniyeṃbuda nīsu dina nāvariyevai nī satkulīnanala ā suyōdhanagaruhi saṃdhiya nī samayadali ghaṭisu nīnena laisa mīranu pāṃḍavara saṃpratiya māḍeṃda
ಜೀಯ ಮಂತ್ರದ ಮಾತು ರಾವುತ ಪಾಯಕರಿಗೊಪ್ಪುವುದೆ ಅವರವ ರಾಯತದಲೋಲೈಸಬೇಹುದು ಮೇರೆ ಮಾರ್ಗದಲಿ ರಾಯನೊಲಿದುದ ಹಿಡಿವೆನೊಲ್ಲದ ದಾಯವನು ಬಿಡುವೆನು ನಿಜಾಭಿ ಪ್ರಾಯವಿದು ಸಂಪ್ರತಿಯ ನುಡಿ ತನಗಂಗವಲ್ಲೆಂದ
jīya maṃtrada mātu rāvuta pāyakarigoppuvude avarava rāyatadalōlaisabēhudu mēre mārgadali rāyanoliduda hiḍivenollada dāyavanu biḍuvenu nijābhi prāyavidu saṃpratiya nuḍi tanagaṃgavalleṃda
ಭಾನುಸನ್ನಿಭ ಮರಳು ಭೂಪನ ಹಾನಿ ವೃದ್ಧಿಗಳೆಲ್ಲ ನಿನ್ನದು ನೀನು ಪಂಥದ ಜಾಣನಲ್ಲಾ ವಿಜಯನಾಗೆನಲು ಆ ನದೀಸುತನಡಿಗೆರಗಿ ರವಿ ಸೂನು ಕಳುಹಿಸಿಕೊಂಡು ಬಹಳ ಮ ನೋನುರಾಗದಲೈದಿದನು ಕುರುರಾಯನೋಲಗವ
bhānusannibha maraḷu bhūpana hāni vr̥ddhigaḷella ninnadu nīnu paṃthada jāṇanallā vijayanāgenalu ā nadīsutanaḍigeragi ravi sūnu kaḷuhisikoṃḍu bahaḷa ma nōnurāgadalaididanu kururāyanōlagava
ಭಾನುಸುತ ಕುಳ್ಳಿರು ನದೀಸುತ ನೇನನೆಂದನು ತನ್ನ ಚಿತ್ತ ಗ್ಲಾನಿಯನು ಬಿಸುಟೇನ ನುಡಿದನು ಭಾವಶುದ್ಧಿಯಲಿ ಏನನೆಂಬೆನು ಜೀಯ ಬಹಳ ಕೃ ಪಾನಿಧಿಯಲಾ ಭೀಷ್ಮನನುಸಂ ಧಾನವಿಲ್ಲದೆ ಬೆಸಸಿ ಕಳುಹಿದನೆಂದನಾ ಕರ್ಣ
bhānusuta kuḷḷiru nadīsuta nēnaneṃdanu tanna citta glāniyanu bisuṭēna nuḍidanu bhāvaśuddhiyali ēnaneṃbenu jīya bahaḷa kr̥ pānidhiyalā bhīṣmananusaṃ dhānavillade besasi kaḷuhidaneṃdanā karṇa
ಇನ್ನು ಸೇನಾಪತಿಯದಾರೈ ನಿನ್ನ ಮತವೇನುದಯವಾಗದ ಮುನ್ನ ಬವರವ ಹಿಡಿಯಬೇಹುದು ವೈರಿರಾಯರಲಿ ಎನ್ನು ನಿನ್ನಭಿಮತವನೆನೆ ಸಂ ಪನ್ನಭುಜಬಲ ದ್ರೋಣನಿರಲಾ ರಿನ್ನು ಸೇನಾಪತಿಗಳೆಂದನು ಭೂಪತಿಗೆ ಕರ್ಣ
innu sēnāpatiyadārai ninna matavēnudayavāgada munna bavarava hiḍiyabēhudu vairirāyarali ennu ninnabhimatavanene saṃ pannabhujabala drōṇaniralā rinnu sēnāpatigaḷeṃdanu bhūpatige karṇa
ಪ್ರಭೆಯದಾರಿಗೆ ಸೂರ್ಯನಿದಿರಿನೊ ಳಭವನಿರೆ ತಾನಾರು ಭುವನಕೆ ವಿಭುಗಳೈ ವೈಕುಂಠನಿದಿರಿನೊಳಾರು ದೇವತೆಯೈ ವಿಭವ ನದಿಗಳಿಗುಂಟೆ ಜಲಧಿಯ ರಭಸದಿದಿರಲಿ ನಮ್ಮ ಬಲದಲಿ ಸುಭಟರಾರೈ ದ್ರೋಣನಿರುತಿರಲೆಂದನಾ ಕರ್ಣ
prabheyadārige sūryanidirino ḷabhavanire tānāru bhuvanake vibhugaḷai vaikuṃṭhanidirinoḷāru dēvateyai vibhava nadigaḷiguṃṭe jaladhiya rabhasadidirali namma baladali subhaṭarārai drōṇanirutiraleṃdanā karṇa
ಜಾಗು ಜಾಗುರೆ ಕರ್ಣ ಪರರ ಗು ಣಾಗಮವ ಪತಿಕರಿಸಿ ನುಡಿವವ ನೀಗಳಿನ ಯುಗದಾತನೇ ಮಝ ಪೂತು ಭಾಪೆನುತ ತೂಗುವೆರಳಿನ ಮಕುಟದೊಲಹಿನೊ ಳಾ ಗರುವ ಭಟರುಲಿಯೆ ಲಹರಿಯ ಸಾಗರದ ಸೌರಂಭದಂತಿರೆ ಮಸಗಿತಾಸ್ಥಾನ
jāgu jāgure karṇa parara gu ṇāgamava patikarisi nuḍivava nīgaḷina yugadātanē majha pūtu bhāpenuta tūguveraḷina makuṭadolahino ḷā garuva bhaṭaruliye lahariya sāgarada sauraṃbhadaṃtire masagitāsthāna
ನುಡಿಸು ನಿಸ್ಸಾಳವನು ಕರೆ ಹೊಂ ಗೊಡನ ಹಿಡಿದೈತರಲಿ ನಾರಿಯ ರೆಡ ಬಲನು ತೆರಹಾಗಲಿಕ್ಕಲಿ ಸಿಂಹವಿಷ್ಟರವ ತಡವು ಬೇಡೆನೆ ಕೌರವೇಂದ್ರನ ನುಡಿಗೆ ಮುನ್ನನುವಾಯ್ತು ವಿಪ್ರರ ಗಡಣ ಬಂದುದು ರಚಿಸಿದರು ಮೂರ್ಧಾಭಿಷೇಚನವ
nuḍisu nissāḷavanu kare hoṃ goḍana hiḍidaitarali nāriya reḍa balanu terahāgalikkali siṃhaviṣṭarava taḍavu bēḍene kauravēṃdrana nuḍige munnanuvāytu viprara gaḍaṇa baṃdudu racisidaru mūrdhābhiṣēcanava
ಸಕಲ ಸಾವಂತರು ಮಹೀಪಾ ಲಕರು ಬಂದುದು ಚರಣದಲಿ ಕಾ ಣಿಕೆಯನಿಕ್ಕಿತು ಕೈಯ ಮುಗಿದುದು ನಿಖಿಳ ಪರಿವಾರ ಮಕುಟರತ್ನದ ಲಹರಿ ಖಡುಗದ ವಿಕಟ ಧಾರಾರಶ್ಮಿ ದೀಪ ಪ್ರಕರದಲಿ ಥಳಥಳಿಸೆ ರವಿಯವೊಲೆಸೆದನಾ ದ್ರೋಣ
sakala sāvaṃtaru mahīpā lakaru baṃdudu caraṇadali kā ṇikeyanikkitu kaiya mugidudu nikhiḷa parivāra makuṭaratnada lahari khaḍugada vikaṭa dhārāraśmi dīpa prakaradali thaḷathaḷise raviyavolesedanā drōṇa
ಅರಸ ಬೇಡೈ ವರವನೆನ್ನನು ಕರೆದು ಮಿಗೆ ಪತಿಕರಿಸೆ ಬಳಿಕಾ ಬರಿದೆ ಹೋಹೆನೆ ಮೆಚ್ಚಿದುದ ನುಡಿ ಖೇಡತನವೇಕೆ ಹೊರೆ ಹೊಗದೆ ಹೇಳೆನಲು ನಗೆಮೊಗ ವರಳಿ ಹೊಂಪುಳಿಯೋಗಿ ಕೌರವ ರರಸ ನುಡಿದನು ಕಟ್ಟಿಕೊಡಿ ಧರ್ಮಜನ ತನಗೆಂದು
arasa bēḍai varavanennanu karedu mige patikarise baḷikā baride hōhene mecciduda nuḍi khēḍatanavēke hore hogade hēḷenalu nagemoga varaḷi hoṃpuḷiyōgi kaurava rarasa nuḍidanu kaṭṭikoḍi dharmajana tanageṃdu
ಮರಣ ಮಂತ್ರಾನುಗ್ರಹವನವ ಧರಿಸಬಹುದೇ ಮಗನೆ ಪಾರ್ಥನ ಪರಿಯನರಿಯಾ ಹಿಡಿಯಲೀವನೆ ಧರ್ಮನಂದನನ ಅರಿದ ಬೇಡಿದೆ ತನಗೆ ನೂಕದ ವರವ ವಚನಿಸಿ ಮಾಡದಿಹ ಬಾ ಹಿರರು ನಾವಲ್ಲೆನಲು ಕೌರವರಾಯನಿಂತೆಂದ
maraṇa maṃtrānugrahavanava dharisabahudē magane pārthana pariyanariyā hiḍiyalīvane dharmanaṃdanana arida bēḍide tanage nūkada varava vacanisi māḍadiha bā hiraru nāvallenalu kauravarāyaniṃteṃda
ಕೊಡುವಡಿದು ವರವಲ್ಲದಿದ್ದರೆ ನುಡಿಗೆ ಮೊಳೆ ಹೊಮ್ಮುವರೆ ನಿಮ್ಮಯ ತೊಡಕನೊಲುವವನಲ್ಲ ನೀವೇ ಬಲ್ಲಿರೆನೆ ನಗುತ ಹಿಡಿದು ಬಿಗಿವೆನು ಪಾರ್ಥನನು ಕೆಲ ಕಡೆಗೆ ತಪ್ಪಿಸು ಧರ್ಮಪುತ್ರನ ಬಿಡೆನು ನಿನ್ನಯ ಪುಣ್ಯದಳತೆಯನರಿಯಬಹುದೆಂದ
koḍuvaḍidu varavalladiddare nuḍige moḷe hommuvare nimmaya toḍakanoluvavanalla nīvē ballirene naguta hiḍidu bigivenu pārthananu kela kaḍege tappisu dharmaputrana biḍenu ninnaya puṇyadaḷateyanariyabahudeṃda
ಸಾಕಿದೊಳ್ಳಿತು ಚಾಪತಂತ್ರ ಪಿ ನಾಕಿಯೇರಿಸಿ ನುಡಿದ ನುಡಿಗಳು ಕಾಕಹುದೆ ಕೈಕೊಂಡೆವೆನುತವನೀಶ ಹರುಷದಲಿ ಆ ಕೃಪಾದಿ ಮಹಾಪ್ರಧಾನಾ ನೀಕವನು ಕಳುಹಿದನು ಮನೆಗೆ ದಿ ವಾಕರನು ಹೆಡತಲೆಗೆ ಹಗರಿಕ್ಕಿದನು ಚಂದ್ರಮನ
sākidoḷḷitu cāpataṃtra pi nākiyērisi nuḍida nuḍigaḷu kākahude kaikoṃḍevenutavanīśa haruṣadali ā kr̥pādi mahāpradhānā nīkavanu kaḷuhidanu manege di vākaranu heḍatalege hagarikkidanu caṃdramana
ಜಗವರಾಜಕವಾಯ್ತು ಕುಮುದಾ ಳಿಗಳ ಬಾಗಿಲು ಹೂಡಿದವು ಸೂ ರೆಗರು ಕವಿದುದು ತುಂಬಿಗಳು ಸಿರಿವಂತರರಮನೆಯ ಉಗಿದವಂಬರವನು ಮಯೂಖಾ ಳಿಗಳು ಭುವನದ ಜನದ ಕಂಗಳ ತಗಹು ತೆಗೆದುದು ಸೆರೆಯ ಬಿಟ್ಟುದು ಜಕ್ಕವಕ್ಕಿಗಳ
jagavarājakavāytu kumudā ḷigaḷa bāgilu hūḍidavu sū regaru kavidudu tuṃbigaḷu sirivaṃtararamaneya ugidavaṃbaravanu mayūkhā ḷigaḷu bhuvanada janada kaṃgaḷa tagahu tegedudu sereya biṭṭudu jakkavakkigaḷa
ಸೂಳವಿಸಿ ಬೊಬ್ಬಿರಿದವುರು ನಿ ಸ್ಸಾಳಚಯವದ್ರಿಗಳ ಹೆಡತಲೆ ಸೀಳೆ ಸಿಡಿಲೇಳಿಗೆಯಲೆದ್ದವು ವಿವಿಧ ವಾದ್ಯರವ ಆಳು ನೆರೆದುದು ನೆಲ ಕುಸಿಯೆ ರಥ ಜಾಲ ಜಡಿದುದು ಹಣ್ಣಿದಾನೆಯ ಸಾಲು ಮೆರೆದುವು ಕುಣಿವುತಿದ್ದುವು ಕೂಡೆ ವಾಜಿಗಳು
sūḷavisi bobbiridavuru ni ssāḷacayavadrigaḷa heḍatale sīḷe siḍilēḷigeyaleddavu vividha vādyarava āḷu neredudu nela kusiye ratha jāla jaḍidudu haṇṇidāneya sālu mereduvu kuṇivutidduvu kūḍe vājigaḷu
ತಳಿತ ಝಲ್ಲರಿಗಳಿಗೆ ಗಗನದ ವಳಯವೈದದು ನೆರೆದ ಸೇನೆಗೆ ನೆಲನಗಲ ನೆರೆಯದು ನಿರೂಢಿಯ ಭಟರ ವಿಕ್ರಮಕೆ ಅಳವು ಕಿರಿದರಿರಾಯರಿಗೆ ದಿಗು ವಳಯವಿಟ್ಟೆಡೆಯಾಗೆ ರಥ ಹಯ ದಳವುಳಕೆ ಕುರುಸೇನೆ ನಡೆದುದು ದೊರೆಯ ನೇಮದಲಿ
taḷita jhallarigaḷige gaganada vaḷayavaidadu nereda sēnege nelanagala nereyadu nirūḍhiya bhaṭara vikramake aḷavu kiridarirāyarige digu vaḷayaviṭṭeḍeyāge ratha haya daḷavuḷake kurusēne naḍedudu doreya nēmadali
ಹರಿಗೆ ಹರಿದವು ಮುಂದೆ ಬಿಲ್ಲಾ ಳುರವಣಿಸಿದರು ಮೋಹರವ ಮಿ ಕ್ಕುರುಬಿದರು ಸಬಳಿಗರು ಮುಂಚಿತು ರಣಕೆ ಖಡ್ಗಿಗಳು ತುರಗ ಕವಿದವು ದಂತಿ ಘಟೆಗಳು ತುರುಗಿದವು ರಥ ರಾಜಿ ಮುಂಗುಡಿ ವರಿದುದವನೀಪತಿಯ ಚೂಣಿಯ ನೃಪರ ಜೋಕೆಯಲಿ
harige haridavu muṃde billā ḷuravaṇisidaru mōharava mi kkurubidaru sabaḷigaru muṃcitu raṇake khaḍgigaḷu turaga kavidavu daṃti ghaṭegaḷu turugidavu ratha rāji muṃguḍi varidudavanīpatiya cūṇiya nr̥para jōkeyali
ಸಿಡಿಲ ಕುಡುಹುಗಳಿಂದ ಕಮಲಜ ಹೊಡೆಯಲಬುಜಭವಾಂಡ ಭೇರಿಯ ಕಡುದನಿಗಳೆನಲೊದರಿದವು ನಿಸ್ಸಾಳ ಕೋಟಿಗಳು ತುಡುಕಿದವು ತಂಬಟದ ದನಿ ಜಗ ದಡಕಿಲನು ಫಡ ಕೌರವೇಂದ್ರನ ತೊಡಕು ಬೇಡೆಂದೊದರುತಿದ್ದವು ಗೌರುಗಹಳೆಗಳು
siḍila kuḍuhugaḷiṃda kamalaja hoḍeyalabujabhavāṃḍa bhēriya kaḍudanigaḷenalodaridavu nissāḷa kōṭigaḷu tuḍukidavu taṃbaṭada dani jaga daḍakilanu phaḍa kauravēṃdrana toḍaku bēḍeṃdodarutiddavu gaurugahaḷegaḷu
ಬಿಗಿದ ಝಲ್ಲರಿ ಮುಗಿಲ ಹೊಸ ಕೈ ದುಗಳ ಮಿಂಚಿನ ಮಕುಟಮಣಿಕಾಂ ತಿಗಳ ಸುರಧನುವಿನ ಚತುರ್ಬಲ ರವದ ಸಿಡಿಲುಗಳ ವಿಗಡ ಕುಂಭಜ ಮೇಘ ಋತು ತನಿ ಹೊಗರಿರಿದು ಪರಬಲದ ಕಡುವೇ ಸಗೆಗೆ ಕವಿದುದು ರಾಜಹಂಸ ಪ್ರಕರವೋಸರಿಸೆ
bigida jhallari mugila hosa kai dugaḷa miṃcina makuṭamaṇikāṃ tigaḷa suradhanuvina caturbala ravada siḍilugaḷa vigaḍa kuṃbhaja mēgha r̥tu tani hogariridu parabalada kaḍuvē sagege kavidudu rājahaṃsa prakaravōsarise
ಕಳನ ಗೆಲಿದುದು ಬಂದು ಕೌರವ ಬಲ ಯುಧಿಷ್ಠಿರರಾಯ ದಳ ಮುಂ ಕೊಳಿಸಿ ಹೊಕ್ಕುದು ಜಯದ ಸುಮ್ಮಾನದ ಸಘಾಡದಲಿ ಬಲಿದರೊಡ್ಡನು ಮಂಡಳಾಕೃತಿ ಗೊಳಿಸಿ ಕೌರವರಿವರು ಥಟ್ಟನು ನಿಲಿಸಿದರು ಚಂದ್ರಾರ್ಧಸದೃಶದಲಖಿಳ ಮೋಹರವ
kaḷana gelidudu baṃdu kaurava bala yudhiṣṭhirarāya daḷa muṃ koḷisi hokkudu jayada summānada saghāḍadali balidaroḍḍanu maṃḍaḷākr̥ti goḷisi kauravarivaru thaṭṭanu nilisidaru caṃdrārdhasadr̥śadalakhiḷa mōharava
ಚೌರಿಗಳು ಬಲವೆರಡರೊಳಗೊ ಯ್ಯಾರದಲಿ ತೂಗಿದವು ಚೂಣಿಯ ವೀರರುರವಣೆ ಮಿಗಲು ಹೊಯ್ದರು ಹೊಕ್ಕು ಪರಬಲವ ಮಾರಿ ಮೊಗವಡದೆರೆದವೊಲು ಜ ಜ್ಝಾರ ಮಾಸಾಳುಗಳು ನಿಜ ದಾ ತಾರನವಸರಕೊದಗಿ ಹಣವಿನ ಋಣನ ನೀಗಿದರು
caurigaḷu balaveraḍaroḷago yyāradali tūgidavu cūṇiya vīraruravaṇe migalu hoydaru hokku parabalava māri mogavaḍaderedavolu ja jjhāra māsāḷugaḷu nija dā tāranavasarakodagi haṇavina r̥ṇana nīgidaru
ಬಿಟ್ಟ ಸೂಠಿಯೊಳೇರಿ ಕುದುರೆಗ ಳಟ್ಟಿದುವು ಕಿವಿಗೌಂಕಿದುಂಗುಟ ವಿಟ್ಟ ಸನ್ನೆಯೊಳೊಲೆದು ಕವಿದವು ಸೊಕ್ಕಿದಾನೆಗಳು ನಿಟ್ಟುವರಿಯಲು ಕೂಡೆ ರಥ ಸಾ ಲಿಟ್ಟು ಹರಿದವು ಬಿಡದೆ ಸುಭಟರು ಮುಟ್ಟಿ ಮೂದಲಿಸುತ್ತ ಹೊಯ್ದರು ಹೊಕ್ಕು ಪರಬಲವ
biṭṭa sūṭhiyoḷēri kudurega ḷaṭṭiduvu kivigauṃkiduṃguṭa viṭṭa sanneyoḷoledu kavidavu sokkidānegaḷu niṭṭuvariyalu kūḍe ratha sā liṭṭu haridavu biḍade subhaṭaru muṭṭi mūdalisutta hoydaru hokku parabalava
ಏರುವಡೆದರು ಹೊಕ್ಕವರು ಕೈ ದೋರೆ ಕಳಕಳಕಾರರಸುಗಳ ಕಾರಿದರು ಕೈಮಾಡಿ ಕೊಂಡರು ಸುರರ ಕೋಟೆಗಳ ತಾರುಥಟ್ಟಿನೊಳಟ್ಟಿ ಮೈಮಸೆ ಸೂರೆಕಾಱರು ಮಿದುಳ ಜೊಂಡಿನ ಜೋರುಗಳ ಬೀರಿದವು ಬೇತಾಳರಿಗೆ ಭಟನಿಕರ
ēruvaḍedaru hokkavaru kai dōre kaḷakaḷakārarasugaḷa kāridaru kaimāḍi koṃḍaru surara kōṭegaḷa tāruthaṭṭinoḷaṭṭi maimase sūrekāṟaru miduḷa joṃḍina jōrugaḷa bīridavu bētāḷarige bhaṭanikara
ತೆಗೆಸು ದೊದ್ದೆಯನುರವಣಿಸದಿರಿ ವಿಗಡ ಸುಭಟರು ಸಾಹಸದ ತನಿ ಹೊಗರಿನಾತಗಳೆಲ್ಲಿ ಭೀಮಾರ್ಜುನರ ಬರಹೇಳು ಹೊಗುವ ಬಿನುಗನು ಹೊಯ್ಯದಿರಿ ತೆಗೆ ತೆಗೆಯೆನುತ ಸಾವಿರ ಮಹಾರಥ ರಗಲದಲಿ ಬರಲುರುಬಿ ಹೊಕ್ಕನು ದ್ರೋಣ ಪರಬಲವ
tegesu doddeyanuravaṇisadiri vigaḍa subhaṭaru sāhasada tani hogarinātagaḷelli bhīmārjunara barahēḷu hoguva binuganu hoyyadiri tege tegeyenuta sāvira mahāratha ragaladali baralurubi hokkanu drōṇa parabalava
ಸಾರಿರೈ ಸಾಹಸಿಕರಿರ ಕೆಲ ಸಾರಿರೈ ಪಾಂಚಾಲ ಮತ್ಸ್ಯರು ವೀರರಹುದಲ್ಲೆಂಬೆವೇ ಶಿವ ಶಿವ ಮಹಾದೇವ ಸಾರಿರೈ ನಮ್ಮೊಡನೆ ಕೈ ಮನ ವಾರೆ ಕಾದುವ ಬಳಿಕ ಮೊದಲೊಳು ದಾರ ಭೀಮಾರ್ಜುನರ ನೋಡುವೆನೆನುತ ಕೈಕೊಂಡ
sārirai sāhasikarira kela sārirai pāṃcāla matsyaru vīrarahudalleṃbevē śiva śiva mahādēva sārirai nammoḍane kai mana vāre kāduva baḷika modaloḷu dāra bhīmārjunara nōḍuvenenuta kaikoṃḍa
ಬಿನುಗು ಹಾರುವ ನಿನಗೆ ಭೀಮಾ ರ್ಜುನರ ಪರಿಯಂತೇಕೆಯಂಬಿನ ಮೊನೆಯಲುಣಲಿಕ್ಕುವೆನು ರಣಭೂತಕ್ಕೆ ನಿನ್ನೊಡಲ ಎನುತ ಧೃಷ್ಟದ್ಯುಮ್ನನಿದಿರಾ ದನು ಶರೌಘದ ಸೋನೆಯಲಿ ಮು ಮ್ಮೊನೆಯ ರಥಿಕರ ಮುರಿದು ದ್ರೋಣನ ರಥಕೆ ಮಾರಾಂತ
binugu hāruva ninage bhīmā rjunara pariyaṃtēkeyaṃbina moneyaluṇalikkuvenu raṇabhūtakke ninnoḍala enuta dhr̥ṣṭadyumnanidirā danu śaraughada sōneyali mu mmoneya rathikara muridu drōṇana rathake mārāṃta
ಕಡಗಿದಡೆ ಕೋದಂಡ ರುದ್ರನ ತೊಡಕಿ ಬದುಕುವರಾರು ಸಾರೆಂ ದೊಡನೊಡನೆ ನಾರಾಚ ಜಾಲದಲರಿಭಟನ ಬಿಗಿದು ಕಡಿದು ಬಿಸುಟನು ದ್ರುಪದತನಯನು ಹಿಡಿದ ಬಿಲ್ಲನು ಸಾರಥಿಯನಡೆ ಗೆಡಹಿದನು ಚಂದ್ರಾರ್ಧಶರದಲಿ ನೊಸಲನೊಡೆಯೆಚ್ಚ
kaḍagidaḍe kōdaṃḍa rudrana toḍaki badukuvarāru sāreṃ doḍanoḍane nārāca jāladalaribhaṭana bigidu kaḍidu bisuṭanu drupadatanayanu hiḍida billanu sārathiyanaḍe geḍahidanu caṃdrārdhaśaradali nosalanoḍeyecca
ಎಸಲು ಧೃಷ್ಟದ್ಯುಮ್ನ ದ್ರೋಣನ ವಿಶಿಖ ಹತಿಯಲಿ ನೊಂದು ರಥದಲಿ ಬಸವಳಿಯೆ ಬಳಿ ಸಲಿಸಿದರು ಪಾಂಚಾಲ ನಾಯಕರು ಮುಸುಡ ಬಿಗುಹಿನ ಸೆಳೆದಡಾಯುಧ ಹೊಸ ಪರಿಯ ಬಿರುದುಗಳ ಗಜರಥ ವಿಸರ ಮಧ್ಯದಲೆಂಟು ಸಾವಿರ ರಥಿಕರೌಂಕಿದರು
esalu dhr̥ṣṭadyumna drōṇana viśikha hatiyali noṃdu rathadali basavaḷiye baḷi salisidaru pāṃcāla nāyakaru musuḍa biguhina seḷedaḍāyudha hosa pariya birudugaḷa gajaratha visara madhyadaleṃṭu sāvira rathikarauṃkidaru
ರಾಯರೊಳು ಪಾಂಚಾಲರುಬ್ಬಟೆ ಕಾಯಗಟ್ಟಿತು ಪೂತು ಮಝ ಕುರು ರಾಯನಾಡಿತು ದಿಟವೆನುತ ಹೊಗರಂಬ ಹೊದೆಗೆದರಿ ನೋಯಿಸಿದನುರವಣಿಸಿ ಹರಿತಹ ನಾಯಕರನುಬ್ಬೆದ್ದ ಬಿರುದರ ಬೀಯ ಮಾಡಿದನಹಿತ ರಥಿಕರನೆಂಟು ಸಾವಿರವ
rāyaroḷu pāṃcālarubbaṭe kāyagaṭṭitu pūtu majha kuru rāyanāḍitu diṭavenuta hogaraṃba hodegedari nōyisidanuravaṇisi haritaha nāyakaranubbedda birudara bīya māḍidanahita rathikaraneṃṭu sāvirava
ಆಳುತನವುಳ್ಳವರ ಕರೆ ಪಾಂ ಚಾಲರೊಳ್ಳೆಗರವದಿರಂಬಿನ ಕೋಲ ಕಾಣದ ಮುನ್ನ ಹಮ್ಮೈಸುವರು ಹುರಿಯೊಡೆದು ಖೂಳರಿವರಂತಿರಲಿ ದೊರೆ ಕ ಟ್ಟಾಳಹನು ಕರೆ ಧರ್ಮಪುತ್ರನ ತೋಳ ಬಲುಹನು ನೋಡಬೇಕೆಂದುರುಬಿದನು ದ್ರೋಣ
āḷutanavuḷḷavara kare pāṃ cālaroḷḷegaravadiraṃbina kōla kāṇada munna hammaisuvaru huriyoḍedu khūḷarivaraṃtirali dore ka ṭṭāḷahanu kare dharmaputrana tōḷa baluhanu nōḍabēkeṃdurubidanu drōṇa
ಸವರಿ ಹೊಕ್ಕನು ಕೆಲಬಲದ ಪಾಂ ಡವ ಮಹಾರಥರನು ವಿಭಾಡಿಸಿ ಪವನಜನ ಮುರಿಯೆಚ್ಚು ನಕುಲನ ರಥವ ಹುಡಿಮಾಡಿ ಕವಲುಗೋಲಲಿ ದ್ರುಪದ ಮತ್ಸ್ಯರ ನವಗಡಿಸಿ ಹೈಡಿಂಬನಭಿಮ ನ್ಯುವನು ಮಸೆಗಾಣಿಸಿ ಮಹೀಶನ ರಥಕೆ ಮಾರಾಂತ
savari hokkanu kelabalada pāṃ ḍava mahāratharanu vibhāḍisi pavanajana muriyeccu nakulana rathava huḍimāḍi kavalugōlali drupada matsyara navagaḍisi haiḍiṃbanabhima nyuvanu masegāṇisi mahīśana rathake mārāṃta
ಅರಸ ಘಡ ಹೋಗದಿರು ಸಾಮದ ಸರಸ ಕೊಳ್ಳದು ಬಿಲ್ಲ ಹಿಡಿ ಹಿಡಿ ಹರನ ಮರೆವೊಗು ನಿನ್ನ ಹಿಡಿವೆನು ಹೋಗು ಹೋಗೆನುತ ಸರಳ ಮುಷ್ಟಿಯ ಕೆನ್ನೆಯೋರೆಯ ಗುರು ಛಡಾಳಿಸೆ ಧನುವನೊದರಿಸಿ ಧರಣಿಪತಿ ಹಳಚಿದನು ಹೂಳಿದನಂಬಿನಲಿ ರಥವ
arasa ghaḍa hōgadiru sāmada sarasa koḷḷadu billa hiḍi hiḍi harana marevogu ninna hiḍivenu hōgu hōgenuta saraḷa muṣṭiya kenneyōreya guru chaḍāḷise dhanuvanodarisi dharaṇipati haḷacidanu hūḷidanaṃbinali rathava
ಶಿವಶಿವಾ ಬೆಳುದಿಂಗಳಲಿ ಮೈ ಬೆವರುವುದೆ ಕಲಿ ಧರ್ಮಪುತ್ರನ ಬವರದಲಿ ಬೆಂಡಹರೆ ವೀರರು ಕಂಡೆವದುಭುತವ ನಿವಗಿದೆತ್ತಣ ಕೈಮೆ ಕೋಲ್ಗಳ ಕವಿಸುವಂದವಿದೊಳ್ಳಿತಿದಲೇ ನವಗಭೀಷ್ಟವೆನುತ್ತ ಕಟ್ಟಳವಿಯಲಿ ಕೈಕೊಂಡ
śivaśivā beḷudiṃgaḷali mai bevaruvude kali dharmaputrana bavaradali beṃḍahare vīraru kaṃḍevadubhutava nivagidettaṇa kaime kōlgaḷa kavisuvaṃdavidoḷḷitidalē navagabhīṣṭavenutta kaṭṭaḷaviyali kaikoṃḍa
ಎಲೆಲೆ ದೊರೆ ಸಿಕ್ಕಿದನು ಕರೆ ಪಡಿ ತಳಿಸ ಹೇಳೋ ಸ್ವಾಮಿದ್ರೋಹರು ದಳದಲಿದ್ದವರೆತ್ತ ಹೋದರು ನಾಯಕಿತ್ತಿಯರು ಕಳವಳಿಸಿ ಸಾತ್ಯಕಿ ಘಟೋತ್ಕಚ ರುಲಿದು ಹರಿತರೆ ಕೇಳಿದಾ ಕ್ಷಣ ದಲಿ ಮುರಾಂತಕ ಸಹಿತ ವಹಿಲದಿ ಬಂದನಾ ಪಾರ್ಥ
elele dore sikkidanu kare paḍi taḷisa hēḷō svāmidrōharu daḷadaliddavaretta hōdaru nāyakittiyaru kaḷavaḷisi sātyaki ghaṭōtkaca rulidu haritare kēḷidā kṣaṇa dali murāṃtaka sahita vahiladi baṃdanā pārtha
ಕಾಳಕೂಟದ ಬಹಳ ದಾಳಿಗೆ ಶೂಲಿಯೊಡ್ಡೈಸುವವೊಲವನೀ ಪಾಲಕನ ಹಿಂದಿಕ್ಕಿ ತಡೆದನು ಕಳಶಜನ ರಥವ ಆಲಿಯಳುಕಿತು ತಿರುಹಿದಂಬಿನ ಕೋಲ ಝಳಪಿಸಿ ಪೂತು ಮಝ ಮೇ ಲಾಳು ಬಂದುದೆಯಕಟೆನುತ ಹಲುಮೊರೆದನಾ ದ್ರೋಣ
kāḷakūṭada bahaḷa dāḷige śūliyoḍḍaisuvavolavanī pālakana hiṃdikki taḍedanu kaḷaśajana rathava āliyaḷukitu tiruhidaṃbina kōla jhaḷapisi pūtu majha mē lāḷu baṃdudeyakaṭenuta halumoredanā drōṇa
ಮಂದಭಾಗ್ಯನು ಕೌರವನು ನಾ ವೆಂದು ಮಾಡುವುದೇನು ನಿಮಿಷವು ನಿಂದನಾದರೆ ಹಿಡಿವೆನಾಗಳೆ ಧರ್ಮನಂದನನ ಬಂದು ಫಲಗುಣನಡ್ಡವಿಸಲಿ ನ್ನಿಂದುಧರ ಮುಳಿದೇನ ಮಾಡುವ ನೆಂದು ಖಾತಿಯ ಹಿಡಿದು ರಥವನು ತಿರುಹಿದನು ದ್ರೋಣ
maṃdabhāgyanu kauravanu nā veṃdu māḍuvudēnu nimiṣavu niṃdanādare hiḍivenāgaḷe dharmanaṃdanana baṃdu phalaguṇanaḍḍavisali nniṃdudhara muḷidēna māḍuva neṃdu khātiya hiḍidu rathavanu tiruhidanu drōṇa
ಎರಡು ಬಲದಲಿ ವೀರ ನೀ ಮಡ ಮುರಿಯಲಿವನೇಸರವನಂಧಾ ಸುರನೊ ತಾರಕನೋ ಹಿರಣ್ಯಾಸುರನೊ ಕೈಟಭನೊ ಗುರುಗಳಿದಿರಲಿ ವೀರವೇ ಸಾ ಕಿರಲಿ ಮೂದಲೆಯೆನುತಲಾ ಬಿಲು ದಿರುವ ಮಿಡಿದೈದಿದರು ನಾಸಾವಿರ ಮಹಾರಥರು
eraḍu baladali vīra nī maḍa muriyalivanēsaravanaṃdhā surano tārakanō hiraṇyāsurano kaiṭabhano gurugaḷidirali vīravē sā kirali mūdaleyenutalā bilu diruva miḍidaididaru nāsāvira mahāratharu
ಫಡ ಫಡೆಲವೋ ಪಾರ್ಥ ಭೀಷ್ಮನ ಕೆಡಹಿದುಬ್ಬಟೆ ನಮ್ಮ ಕೂಡಳ ವಡದು ತೆಗೆ ತೆಗೆಯೆನುತ ತುಳುಕಿದರಂಬಿನಂಬುಧಿಯ ಗಡಣವೊಳ್ಳಿತು ಗಾಢ ಮಿಗೆ ಬಿಲು ವಿಡಿಯ ಬಲ್ಲಿರಿ ಸಮರ ಜಯವಳ ವಡುವುದಳವಡದಿಹುದು ತಪ್ಪೇನೆನುತ ನರನೆಚ್ಚ
phaḍa phaḍelavō pārtha bhīṣmana keḍahidubbaṭe namma kūḍaḷa vaḍadu tege tegeyenuta tuḷukidaraṃbinaṃbudhiya gaḍaṇavoḷḷitu gāḍha mige bilu viḍiya balliri samara jayavaḷa vaḍuvudaḷavaḍadihudu tappēnenuta naranecca
ಜೋಡು ಜರಿಯದೆ ಹುರುಳುಗೆಡದೆ ಚ್ಚಾಡಿದರು ಫಲುಗುಣನ ರಥದಲಿ ಹೂಡಿದರು ಹೊಗರಂಬುಗಳನುಬ್ಬೆದ್ದು ತಮತಮಗೆ ನೋಡಿದನು ಸಾಕಿವದಿರನು ಕೊಂ ಡಾಡಲೇಕೆನುತನಿಬರಸುಗಳ ತೋಡಿದನು ಕೂರಂಬಿನಲಿ ಸಾವಿರ ಮಹಾರಥರ
jōḍu jariyade huruḷugeḍade ccāḍidaru phaluguṇana rathadali hūḍidaru hogaraṃbugaḷanubbeddu tamatamage nōḍidanu sākivadiranu koṃ ḍāḍalēkenutanibarasugaḷa tōḍidanu kūraṃbinali sāvira mahārathara
ಮಡಿದು ಕೆಲಬರು ಕೊರಳಲಸುಗಳ ಹಿಡಿದು ಕೆಲಬರು ಘಾಯವಡೆದೆಲು ವೊಡೆದು ಕೆಲಬರು ಕೈದು ರಥವನು ಬಿಸುಟು ಕೆಲಕೆಲರು ಹೊಡೆವ ಬಿರುಗಾಳಿಯಲಿ ಮುಗಿಲೊ ಡ್ಡೊಡೆದವೊಲು ಮೈಮಾರಿಗಳು ಹಿಂ ಡೊಡೆದುದೈ ಹೇರಾಳದಲಿ ಹೊಕ್ಕೆಚ್ಚನಾ ಪಾರ್ಥ
maḍidu kelabaru koraḷalasugaḷa hiḍidu kelabaru ghāyavaḍedelu voḍedu kelabaru kaidu rathavanu bisuṭu kelakelaru hoḍeva birugāḷiyali mugilo ḍḍoḍedavolu maimārigaḷu hiṃ ḍoḍedudai hērāḷadali hokkeccanā pārtha
ನಿಮಗೆ ಸದರವೆ ಪಾರ್ಥನೆಲೆ ವಿ ಕ್ರಮದರಿದ್ರರಿರಾ ವೃಥಾ ಸಂ ಭ್ರಮಿತರಿರ ಭಂಡಾಟವೇತಕೆ ರಣಕೆ ಹೆರತೆಗೆಯಿ ಸಮರವಿಜಯತ್ಯಾಗಿಯೇ ತಾ ನಮರಪತಿನಂದನನು ಸಾಕೀ ಕುಮತಿಗಳ ತಡೆಯದಿರಿ ಹೋಗಲಿಯೆಂದನಾ ದ್ರೋಣ
nimage sadarave pārthanele vi kramadaridrarirā vr̥thā saṃ bhramitarira bhaṃḍāṭavētake raṇake herategeyi samaravijayatyāgiyē tā namarapatinaṃdananu sākī kumatigaḷa taḍeyadiri hōgaliyeṃdanā drōṇa
ಸೋಲದಲಿ ಕೌರವನ ಸೇನಾ ಜಾಲ ಚೆಲ್ಲಿತು ವೀರ ಪಾರ್ಥನ ಕೋಲು ಕಾಲನ ದಣಿಸಿದವು ಚತುರಂಗ ಸೇನೆಯಲಿ ಕೋಲು ಧರಿಸಿದವೆರಕೆಗಳನೆನೆ ಚಾಳಿಸಿತು ಪಡೆ ರವಿಯ ರಶ್ಮಿಯ ಗೂಳೆಯವು ತೆಗೆಯಿತ್ತು ಪಡುವಣ ಕಡಲೊಳಿನನಿಳಿದ
sōladali kauravana sēnā jāla cellitu vīra pārthana kōlu kālana daṇisidavu caturaṃga sēneyali kōlu dharisidaverakegaḷanene cāḷisitu paḍe raviya raśmiya gūḷeyavu tegeyittu paḍuvaṇa kaḍaloḷinaniḷida
Keys: ← → turn the page, J K step through the verses.
Illustration: Verse & Place (Project-owned).