ವೀರ ಭಾಗೀರಥಿಯ ತನಯನೊ ಳಾ ರಿಪುವ್ರಜವಿಜಯ ಫಲುಗುಣಹೋರಿದನು ಸರಿಸಮರದಲಿ ತ್ರೈಜಗವು ಕೊಂಡಾಡೆ ||
vīra bhāgīrathiya tanayano ḷā ripuvrajavijaya phaluguṇahōridanu sarisamaradali traijagavu koṃḍāḍe ||
ಭೀಷ್ಮ ಪರ್ವ — ಸಂಧಿ ೯ · ಭೀಷ್ಮ ಪರ್ವ — ಸಂಧಿ ೯
bhīṣma parva — saṃdhi 9
The complete bhishma parva · sandhi 9 in Kannada.
51 passagesKannada with transliteration
Invocation
ವೀರ ಭಾಗೀರಥಿಯ ತನಯನೊ ಳಾ ರಿಪುವ್ರಜವಿಜಯ ಫಲುಗುಣಹೋರಿದನು ಸರಿಸಮರದಲಿ ತ್ರೈಜಗವು ಕೊಂಡಾಡೆ ||
vīra bhāgīrathiya tanayano ḷā ripuvrajavijaya phaluguṇahōridanu sarisamaradali traijagavu koṃḍāḍe ||
ಜೀಯ ಚಿತ್ತೈಸಿದಿರೆ ಸೇನಾ ನಾಯಕರ ಮೋರೆಗಳ ಮುಸುಕುಗ ಳಾಯತವನೀ ಹೊತ್ತು ಮುನ್ನಿನ ಬಿರುದಿನುಬ್ಬಟೆಯ ಕಾಯಿದಿರೆ ಧರ‍್ಮವನು ಜಠರ ಪ ರಾಯಣರ ಪರಿಣತೆಯಲಾದ ಪ ಲಾಯನದ ಹೆಬ್ಬೆಳಸ ನೋಡೆನೆ ಭೀಷ್ಮನಿಂತೆಂದ
jīya cittaisidire sēnā nāyakara mōregaḷa musukuga ḷāyatavanī hottu munnina birudinubbaṭeya kāyidire dharmavanu jaṭhara pa rāyaṇara pariṇateyalāda pa lāyanada hebbeḷasa nōḍene bhīṣmaniṃteṃda
ಅರಸ ಹೊಲ್ಲೆಹವೇನು ಪಾರ್ಥನ ಸರಿಸದಲಿ ನಿಲುವೆದೆಯ ಬಲುಹು ಳ್ಳರನು ದೇವಾಸುರರೊಳರಿಯೆನು ಮನುಜರೇನಹರು ತಿರುಗಬೇಕವಗಡಿಸಿದರೆ ಸಂ ಗರವ ಹೊಗುವುದು ಸರಿದರಿದಿರುವ ನರಿದು ಕಾದುವುದಿದರಲಾವುದು ಕೊರತೆ ಹೇಳೆಂದ
arasa hollehavēnu pārthana sarisadali niluvedeya baluhu ḷḷaranu dēvāsuraroḷariyenu manujarēnaharu tirugabēkavagaḍisidare saṃ garava hoguvudu saridaridiruva naridu kāduvudidaralāvudu korate hēḷeṃda
ನುಡಿಯೆವಾವು ಸಮರ್ಥರೆಂದುದೆ ಕಡು ನಿಧಾನವು ಸುಭಟರೋಟವೆ ಕಡೆಗೆ ಪರವಹ ಧರ‍್ಮ ಪಾರ್ಥನು ಜಗದೊಳಗ್ಗಳನು ನಡುಹೊಳೆಯ ಹರಿಗೋಲ ಮೂಲೆಯ ಕಡಿದಿರಾದರೆ ನಮ್ಮ ಪುಣ್ಯದ ಬಿಡುಗಡೆಯ ಕಾಲವು ಶಿವಾಯೆಂದರಸ ಬಿಸುಸುಯಿದ
nuḍiyevāvu samarthareṃdude kaḍu nidhānavu subhaṭarōṭave kaḍege paravaha dharma pārthanu jagadoḷaggaḷanu naḍuhoḷeya harigōla mūleya kaḍidirādare namma puṇyada biḍugaḍeya kālavu śivāyeṃdarasa bisusuyida
ಖತಿಯ ಮಾಡಿತೆ ನಮ್ಮ ನುಡಿಯನು ಚಿತಪರಾಯಣರೆಂದು ನಿನ್ನಯ ಮತಿಗೆ ತೋರಿತೆ ಮಾಣಲದು ನೋಡಾದಡಾಹವವ ಕ್ಷತಿಯ ಹೊರೆಕಾರರಿಗೆ ಸೌಖ್ಯ ಸ್ಥಿತಿಯ ಮಾಡುವೆನಿನ್ನು ಕುರುಭೂ ಪತಿ ವಿರೋಧಿಯ ವಿಧಿಯನೀಗಳೆ ತೋರಿಸುವೆನೆಂದ
khatiya māḍite namma nuḍiyanu citaparāyaṇareṃdu ninnaya matige tōrite māṇaladu nōḍādaḍāhavava kṣatiya horekārarige saukhya sthitiya māḍuveninnu kurubhū pati virōdhiya vidhiyanīgaḷe tōrisuveneṃda
ತರಿಸಿದನು ಹದಿನೆಂಟು ಸಾವಿರ ಸರಳ ಹೊದೆಗಳ ಬಂಡಿಗಳ ಹ ನ್ನೆರಡುಸಾವಿರ ಧನುವನುರುತರದಖಿಳ ಕೈದುಗಳ ಕರಸಿದನು ಸೈಂಧವನ ಶಲ್ಯನ ಗುರುಸುತನ ಕೃತವರ್ಮ ಭಗದ ತ್ತರ ಶಕುನಿ ದುಶ್ಶಾಸನ ದ್ರೋಣಾದಿ ನಾಯಕರ
tarisidanu hadineṃṭu sāvira saraḷa hodegaḷa baṃḍigaḷa ha nneraḍusāvira dhanuvanurutaradakhiḷa kaidugaḷa karasidanu saiṃdhavana śalyana gurusutana kr̥tavarma bhagada ttara śakuni duśśāsana drōṇādi nāyakara
ಒತ್ತುಗೊಡುವರೆ ಹಗೆಗೆ ಹಜ್ಜೆಯ ನಿತ್ತು ತೆಗೆವರೆ ಪಾರ್ಥ ಪರಬಲ ಮಿತ್ತುವೇ ಸಾಕಿನ್ನು ಹೋಗಲಿಯೆಂದು ಫಲವೇನು ಮತ್ತೆ ಕೆಣಕುವುದರ್ಜುನನ ನ ಮ್ಮತ್ತ ಬಿಡದಿರೆ ವೈರಿಸೇನೆಯ ಕಿತ್ತು ಬಿಸುಡುವೆ ಯಮಪುರಕೆ ಮೋಹರಿಸಿ ನೀವೆಂದ
ottugoḍuvare hagege hajjeya nittu tegevare pārtha parabala mittuvē sākinnu hōgaliyeṃdu phalavēnu matte keṇakuvudarjunana na mmatta biḍadire vairisēneya kittu bisuḍuve yamapurake mōharisi nīveṃda
ವಿಗಡರನಿಬರು ನೆರೆದು ಪಾರ್ಥನ ತೆಗೆದರತ್ತಲು ಭೀಷ್ಮನಿತ್ತಲು ಹೊಗೆದನಂತ್ಯದ ರುದ್ರನಗ್ಗದ ಕಣ್ಣ ಶಿಖಿಯಂತೆ ಬಿಗಿದ ಹೊದೆಗಳ ಹರಿದು ಬಿಲ್ಲಿಂ ದುಗುಳಿಸಿದನಂಬುಗಳನಳವಿಗೆ ತೆಗೆದು ಪಾಂಡವ ಬಲವ ಬೆಂಬತ್ತಿದನು ಖಾತಿಯಲಿ
vigaḍaranibaru neredu pārthana tegedarattalu bhīṣmanittalu hogedanaṃtyada rudranaggada kaṇṇa śikhiyaṃte bigida hodegaḷa haridu billiṃ duguḷisidanaṃbugaḷanaḷavige tegedu pāṃḍava balava beṃbattidanu khātiyali
ಕೊಂಡುಬಹ ಬಲುನಾಯಕರ ಖತಿ ಗೊಂಡು ದಡಿಯಲಿ ಹೊಯ್ಸಿ ಸೇನೆಯ ಹಿಂಡೊಡೆಯದೋಜೆಯಲಿ ಹುರಿಯೇರಿಸಿ ಮಹೀಶ್ವರರ ಗಂಡುಗಲಿಯಭಿಮನ್ಯು ಸಾತ್ಯಕಿ ಚಂಡಬಲ ಹೈಡಿಂಬರನು ಸಮ ದಂಡಿಯಲಿ ಮೋಹರಿಸಿ ಸಮರಕೆ ನಡೆದನಾ ಭೀಷ್ಮ
koṃḍubaha balunāyakara khati goṃḍu daḍiyali hoysi sēneya hiṃḍoḍeyadōjeyali huriyērisi mahīśvarara gaṃḍugaliyabhimanyu sātyaki caṃḍabala haiḍiṃbaranu sama daṃḍiyali mōharisi samarake naḍedanā bhīṣma
ತಳಿತ ಸೇನಾಜಲಧಿ ಲಗ್ಗೆಯ ಮೊಳಗಿನಲಿ ಮೊನೆದೋರೆ ಭೀಷ್ಮನ ಹಳಚಿದರು ಹರಹಿನಲಿ ಕವಿದರು ಕೋಡಕೈಗಳಲಿ ಎಲೆಲೆ ಪಾಂಡವ ಸೈನ್ಯಸಾಗರ ಮಲೆತುದೋ ಬರಹೇಳು ಮಾರಿಯ ಬಳಗವನು ಹೆಣದಿನಿಹಿಕಾರರ ಕರೆಯಿ ರಕ್ಕಸರ
taḷita sēnājaladhi laggeya moḷaginali monedōre bhīṣmana haḷacidaru harahinali kavidaru kōḍakaigaḷali elele pāṃḍava sainyasāgara maletudō barahēḷu māriya baḷagavanu heṇadinihikārara kareyi rakkasara
ಸೂಸಿದರು ಸರಳುಗಳನಗಲಕೆ ಹಾಸಿ ಹಬ್ಬಿದವಶ್ವ ನಿಕರವ ಕೀಸಿದವು ಕೀಲಿಸಿದವಾನೆಗಳುದರದೆಲುವಿನಲಿ ಬೀಸಿ ಬಿಸುಟವು ಪಾಯ್ದಳವ ರಥ ರಾಸಿಗಳ ಜರುಹಿದವು ಬಲವಾ ರಾಸಿಯಲಿ ತಾಯ್ಮಳಲ ಮೊಗೆದವು ಭೀಷ್ಮನಂಬುಗಳು
sūsidaru saraḷugaḷanagalake hāsi habbidavaśva nikarava kīsidavu kīlisidavānegaḷudaradeluvinali bīsi bisuṭavu pāydaḷava ratha rāsigaḷa jaruhidavu balavā rāsiyali tāymaḷala mogedavu bhīṣmanaṃbugaḷu
ಅಡಸಿ ತುಂಬಿತು ಗಗನ ತಲೆಗಳ ಗಡಣದಲಿ ದೆಸೆಯೆಲ್ಲ ಬಾಣದ ಕಡಿಯಮಯವಾಯಿತ್ತು ಹೆಣಮಯವಾಯ್ತು ರಣಭೂಮಿ ಕಡುಗಲಿಯ ಕೈಚಳಕದಂಬಿಂ ಗೊಡಲ ತೆತ್ತುದು ವೈರಿಬಲ ಬಿಡೆ ಜಡಿದುದಂತಕನಗರವದ್ಭುತವಾಯ್ತು ಸಂಗ್ರಾಮ
aḍasi tuṃbitu gagana talegaḷa gaḍaṇadali deseyella bāṇada kaḍiyamayavāyittu heṇamayavāytu raṇabhūmi kaḍugaliya kaicaḷakadaṃbiṃ goḍala tettudu vairibala biḍe jaḍidudaṃtakanagaravadbhutavāytu saṃgrāma
ಹೊಡೆಗೆಡೆದವಾನೆಗಳು ಥಟ್ಟಿಗೆ ಕೆಡೆದವಗ್ಗದ ತುರಗದಳ ಮೈ ಗಡಿತದಲಿ ಮುಂಕೊಂಡು ಹೊರಳಿತು ಕೂಡೆ ಪಾಯದಳ ಮಡ ಮುರಿದು ನುಗ್ಗಾಯ್ತು ರಥ ಬೆಳು ಗೊಡೆ ಪತಾಕಾದಂಡ ಚಮರಿಗ ಳುಡಿದು ಬಿದ್ದವು ಕೇಣವಿಲ್ಲದೆ ತರಿದನರಿಬಲವ
hoḍegeḍedavānegaḷu thaṭṭige keḍedavaggada turagadaḷa mai gaḍitadali muṃkoṃḍu horaḷitu kūḍe pāyadaḷa maḍa muridu nuggāytu ratha beḷu goḍe patākādaṃḍa camariga ḷuḍidu biddavu kēṇavillade taridanaribalava
ಮಂಡಿಸಿತು ನೊರೆರಕುತ ಕರುಳಿನ ಜೊಂಡು ಮಸಗಿತು ಕಡಿದ ಖಂಡದ ದಿಂಡು ತಳಿತುದು ತೊಗಲ ಕೊಯ್ಲಿನ ಮುರಿದ ಮೂಳೆಗಳ ಜೊಂಡೆ ನರಗಳ ಜುರಿತ ಮಿದುಳಿನ ಗೊಂಡೆಯದ ತೊರಳೆಗಳ ಕೊರಳಿನ ತುಂಡುಗಳ ಕಾಲಾಂತಕನ ಹೆಬ್ಬೆಳಸು ಹುಲುಸಾಯ್ತು
maṃḍisitu norerakuta karuḷina joṃḍu masagitu kaḍida khaṃḍada diṃḍu taḷitudu togala koylina murida mūḷegaḷa joṃḍe naragaḷa jurita miduḷina goṃḍeyada toraḷegaḷa koraḷina tuṃḍugaḷa kālāṃtakana hebbeḷasu hulusāytu
ಆಗ ಹೂಡಿದನಾಗ ಬಾಣವ ತೂಗಿ ಬರಸೆಳೆದೆಚ್ಚನಹಿತರ ನಾಗ ತಾಗಿದವಂಬು ಬಲ್ಲವರಾರು ಕೈಲುಳಿಯ ಬಾಗಿಹುದು ಬಲು ಬಿಲ್ಲು ಕಿವಿವರೆ ಗಾಗಿ ರಿಪುಬಲ ನಿಮಿಷ ನಿಮಿಷಕೆ ನೀಗಿಹುದು ನಿಟ್ಟುಸಿರನೆಲೆ ಭೂಪಾಲ ಕೇಳೆಂದ
āga hūḍidanāga bāṇava tūgi baraseḷedeccanahitara nāga tāgidavaṃbu ballavarāru kailuḷiya bāgihudu balu billu kivivare gāgi ripubala nimiṣa nimiṣake nīgihudu niṭṭusiranele bhūpāla kēḷeṃda
ಬೀಳುತಿರ್ದರು ಭಟರು ಮತ್ತೆ ಛ ಡಾಳಿಸಿತು ತಲೆಮಾರಿಗಳು ಹೆಣ ಸಾಲನೆಡಹಿದರರುಣವಾರಿಯ ತೊರೆಯನೀಸಿದರು ಆಳು ಹೊಕ್ಕುದು ದಂತಿಘಟೆಗಳು ತೂಳಿದವು ಕಡುಹೆದ್ದು ತುರಗದ ಮೇಲೆ ರಾವುತರಳವಿಗೊಟ್ಟುದು ತೇರ ಬಾಹೆಯಲಿ
bīḷutirdaru bhaṭaru matte cha ḍāḷisitu talemārigaḷu heṇa sālaneḍahidararuṇavāriya toreyanīsidaru āḷu hokkudu daṃtighaṭegaḷu tūḷidavu kaḍuheddu turagada mēle rāvutaraḷavigoṭṭudu tēra bāheyali
ಆಳು ಕುದುರೆಯ ಬೀಯಮಾಡಿ ನೃ ಪಾಲ ಮಾಡುವುದೇನು ದೊರೆಗಳು ಕಾಳೆಗಕೆ ಮೈದೋರಬಾರದೆ ಭೀಮ ಫಲುಗುಣರು ಜಾಳ ನೂಕಿಸಿ ಹೊತ್ತುಗಳೆವರು ಹೇಳಿ ಫಲವೇನಿನ್ನು ರಣ ಹೀ ಹಾಳಿ ತಮಗಿಲ್ಲೆಂದು ಗಹಗಹಿಸಿದನು ಕಲಿಭೀಷ್ಮ
āḷu kudureya bīyamāḍi nr̥ pāla māḍuvudēnu doregaḷu kāḷegake maidōrabārade bhīma phaluguṇaru jāḷa nūkisi hottugaḷevaru hēḷi phalavēninnu raṇa hī hāḷi tamagilleṃdu gahagahisidanu kalibhīṣma
ದಿವಿಜ ನಗರಿಯ ಸೂಳೆಗೇರಿಗೆ ಕವಿವ ಮನವೇ ಮುಂದು ಹಜ್ಜೆಗೆ ತವಕಿಸುವರಳುಕುವರೆ ಮೇಣ್ ಕೈತಪ್ಪ ಮಾಡಿಸೆನು ಕವಿಯಿರೈ ಕಾಲಾಳು ರಾವುತ ರವಗಡಿಸಿರೈ ಜೋದರೆಸಿರೈ ನವ ಮಹಾರಥರಂಬ ಕರೆಯಿರೆನುತ್ತ ಕವಿದೆಚ್ಚ
divija nagariya sūḷegērige kaviva manavē muṃdu hajjege tavakisuvaraḷukuvare mēṇ kaitappa māḍisenu kaviyirai kālāḷu rāvuta ravagaḍisirai jōdaresirai nava mahāratharaṃba kareyirenutta kavidecca
ಕಡಿದು ಬಿಸುಟನು ತುರಗ ದಳವನು ಕೆಡಹಿದನು ಹೇರಾನೆಗಳ ತಡೆ ಗಡಿದನೊಗ್ಗಿನ ರಥವನುರೆ ಕೊಚ್ಚಿದನು ಕಾಲಾಳ ಹೊಡಕರಿಸಿ ಹೊದರೆದ್ದು ಮುಂದಕೆ ನಡೆನಡೆದು ಕೈಮಾಡಿ ಕಾಯದ ತೊಡಕನೊಲ್ಲದೆ ತೆಕ್ಕೆಗಟ್ಟಿತು ಭಟರು ನಾಕದಲಿ
kaḍidu bisuṭanu turaga daḷavanu keḍahidanu hērānegaḷa taḍe gaḍidanoggina rathavanure koccidanu kālāḷa hoḍakarisi hodareddu muṃdake naḍenaḍedu kaimāḍi kāyada toḍakanollade tekkegaṭṭitu bhaṭaru nākadali
ಆಳು ಮುರಿದವು ಮೇಲೆ ಹೊಕ್ಕು ನೃ ಪಾಲಕರು ಬೊಬ್ಬಿರಿದು ಭೀಷ್ಮನ ಕೋಲ ಕೊಳ್ಳದೆ ಕೊಂಡು ಹರಿದರು ರಥದ ಹೊರೆಗಾಗಿ ಆಳುತನದಂಗವಣೆಯೊಳ್ಳಿತು ಮೇಳವೇ ಬಳಿಕೇನು ಪೃಥ್ವೀ ಪಾಲರಲ್ಲಾ ಪೂತು ಮಝ ಎನುತೆಚ್ಚನಾ ಭೀಷ್ಮ
āḷu muridavu mēle hokku nr̥ pālakaru bobbiridu bhīṣmana kōla koḷḷade koṃḍu haridaru rathada horegāgi āḷutanadaṃgavaṇeyoḷḷitu mēḷavē baḷikēnu pr̥thvī pālarallā pūtu majha enuteccanā bhīṣma
ಅಂಗವಿಸಿ ಮರಿಹುಲ್ಲೆ ಖುರದಲಿ ಸಿಂಗವನು ಹೊಯ್ವಂತೆ ನೃಪರು ತ್ತುಂಗ ಸಹಸಿಯ ಮೇಲೆ ಕೈಮಾಡಿದರು ಖಡ್ಗದಲಿ ಅಂಗವಣೆಯನು ಹೊಗಳುತಾ ದಿವಿ ಜಾಂಗನಾ ಕಾಮುಕರ ಮಾಡಿಯ ಭಂಗ ಭೀಷ್ಮನು ಮೆರೆದನುನ್ನತ ಬಾಹುವಿಕ್ರಮವ
aṃgavisi marihulle khuradali siṃgavanu hoyvaṃte nr̥paru ttuṃga sahasiya mēle kaimāḍidaru khaḍgadali aṃgavaṇeyanu hogaḷutā divi jāṃganā kāmukara māḍiya bhaṃga bhīṣmanu meredanunnata bāhuvikramava
ಧರಣಿಪತಿಗಳು ಹತ್ತು ಸಾವಿರ ವುರುಳಿತಾ ದಿವಸದಲಿ ಹಿಂದಣ ಕೊರತೆಯುಳಿಲೆಕ್ಕಕ್ಕೆ ಕೊಂದನು ಹತ್ತು ಸಾವಿರವ ಮರಳಿ ಮೂಸಾವಿರವ ಮತ್ತಂ ತೆರಡು ಸಾವಿರ ಮತ್ತೆ ಯೈಸಾ ವಿರವ ಸವರಿದನಹಿತ ಬಲದಲಿ ಭೂಪ ಕೇಳೆಂದ
dharaṇipatigaḷu hattu sāvira vuruḷitā divasadali hiṃdaṇa korateyuḷilekkakke koṃdanu hattu sāvirava maraḷi mūsāvirava mattaṃ teraḍu sāvira matte yaisā virava savaridanahita baladali bhūpa kēḷeṃda
ಭುವನ ನೆರೆ ಹೊಗೆವಂದು ಹೆಚ್ಚಿದ ಶಿವನ ಖತಿ ಮೈದೋರಿತೆನೆ ರಿಪು ನಿವಹದಲಿ ನೆಲೆಗೊಂಡುದೀತನ ಖಾತಿ ಕೊಪ್ಪರಿಸಿ ಜವನ ಪುರಿಗಿಂಬಿಲ್ಲ ಕೊಂಡೊ ಯ್ವವರು ಕೈಗುಂದಿದರು ಗಂಗಾ ಭವನು ಕೊಲುವುದ ಬಿಡನಿದೇನೆನುತಿರ್ದುದಮರಗಣ
bhuvana nere hogevaṃdu heccida śivana khati maidōritene ripu nivahadali nelegoṃḍudītana khāti kopparisi javana purigiṃbilla koṃḍo yvavaru kaiguṃdidaru gaṃgā bhavanu koluvuda biḍanidēnenutirdudamaragaṇa
ಬಲವನದ ಹೊದರೆಲ್ಲಿ ಸೇನಾ ಜಲನಿಧಿಯ ಸುಳಿವೆಲ್ಲಿ ಸುಭಟರ ಕಳಕಳದ ಕಡುಹೆಲ್ಲಿ ಖರೆಯದ ರಥಿಕರವರೆಲ್ಲಿ ಹೊಳೆದು ಮೊಳಗಿದನಲ್ಲಿ ಬಾಣದ ಬಲೆಯ ಬೀಸಿದನಲ್ಲಿ ರಕುತದ ಹೊಳೆಯ ಹರಿಸಿದನಲ್ಲಿ ಗಂಗಾಸೂನು ಖಾತಿಯಲಿ
balavanada hodarelli sēnā jalanidhiya suḷivelli subhaṭara kaḷakaḷada kaḍuhelli khareyada rathikaravarelli hoḷedu moḷagidanalli bāṇada baleya bīsidanalli rakutada hoḷeya harisidanalli gaṃgāsūnu khātiyali
ಕಡುಹು ಹಿರಿದೋ ಕಾಲರುದ್ರನ ಪಡೆಯಲಾಡುವನೀತನೋ ಮೈ ಗೊಡದಿರೋ ಬಲ ಹೊರಳಿಯೊಡೆಯಲಿ ಹೋಗಿ ದೆಸೆದೆಸೆಗೆ ತಡೆಯಲರಿದೋ ತಡವ ಮಾಡದಿ ರೊಡಲ ಬದುಕಿಸಿಕೊಳ್ಳಿ ನೋಡುವ ರೊಡೆಯರನು ಬಳಿಕೆನುತ ಮುರಿದುದು ಪಾಂಡುಸುತಸೇನೆ
kaḍuhu hiridō kālarudrana paḍeyalāḍuvanītanō mai goḍadirō bala horaḷiyoḍeyali hōgi desedesege taḍeyalaridō taḍava māḍadi roḍala badukisikoḷḷi nōḍuva roḍeyaranu baḷikenuta muridudu pāṃḍusutasēne
ಜರಿದುದಲ್ಲಿಯದಲ್ಲಿ ಭರದಲಿ ತೆರಳಿತಲ್ಲಿಯದಲ್ಲಿ ಹಿಂದಕೆ ಮರಳಿತಲ್ಲಿಯದಲ್ಲಿ ರಾಯರ ಕಣ್ಣ ಸನ್ನೆಯಲಿ ತಿರುಗಿತಲ್ಲಿಯದಲ್ಲಿ ಭಟರೆದೆ ಬಿರಿದುದಲ್ಲಿಯದಲ್ಲಿ ಭೀಷ್ಮನ ಸರಳಗಾಳಿಗೆ ಬೆಸುಗೆಯೊಡೆದುದು ವೈರಿಬಲಮೇಘ
jaridudalliyadalli bharadali teraḷitalliyadalli hiṃdake maraḷitalliyadalli rāyara kaṇṇa sanneyali tirugitalliyadalli bhaṭarede biridudalliyadalli bhīṣmana saraḷagāḷige besugeyoḍedudu vairibalamēgha
ಬಲವ ನಿಲಿಸಲು ನೂಕದನಿಲಜ ನಳುಕಿದನು ಸಹದೇವ ಹಿಂದಣಿ ಗೊಲೆದ ಧೃಷ್ಟದ್ಯುಮ್ನ ನಕುಲರು ನೆನೆದರನುಚಿತವ ಕಲಿ ಘಟೋತ್ಕಚನಧಮಧರ‍್ಮವ ಬಳಸಿದನು ಪಾಂಚಾಲ ಮತ್ಸ್ಯರು ಹಲರು ನಡೆದುದೆ ಮಾರ್ಗವೆಂದೇ ಮುರುಹಿದರು ಮುಖವ
balava nilisalu nūkadanilaja naḷukidanu sahadēva hiṃdaṇi goleda dhr̥ṣṭadyumna nakularu nenedaranucitava kali ghaṭōtkacanadhamadharmava baḷasidanu pāṃcāla matsyaru halaru naḍedude mārgaveṃdē muruhidaru mukhava
ಹದುಳವಿಡುವವರಿಲ್ಲ ಸೇನೆಯ ಮೊದಲಿಗರು ಮುನ್ನೋಟವಿಕ್ಕಿತು ಕದನದಲಿ ಕೈಸೂರೆಗೊಟ್ಟರು ಜಯವ ತಮತಮಗೆ ಎದೆಯ ನೀವಿದನಹಿತ ನೃಪನ ಭ್ಯುದಯವೆರಡೆಲೆಯಾಯ್ತು ಸಾಹಸಿ ಸದೆದನೋ ಕಲಿ ಭೀಷ್ಮನೆಂದುದು ಮೇಲೆ ಸುರಕಟಕ
haduḷaviḍuvavarilla sēneya modaligaru munnōṭavikkitu kadanadali kaisūregoṭṭaru jayava tamatamage edeya nīvidanahita nr̥pana bhyudayaveraḍeleyāytu sāhasi sadedanō kali bhīṣmaneṃdudu mēle surakaṭaka
ಸಕಲ ದೆಸೆಯಲಿ ಮುರಿದು ಬಹ ನಾ ಯಕರ ಕಂಡನು ಪಾರ್ಥನಸುರಾಂ ತಕಗೆ ತೋರಿದನಕಟ ನೋಡಿದಿರೆಮ್ಮವರ ವಿಧಿಯ ನಕುಲನಿಲ್ಲಾ ಭೀಮನೋ ಸಾ ತ್ಯಕಿಯೊ ಸೇನಾಪತಿಯೊ ಕಟಕಟ ವಿಕಳರೋಡಿದರೋಡಲಿದಿರಿಗೆ ರಥವ ಹರಿಸೆಂದ
sakala deseyali muridu baha nā yakara kaṃḍanu pārthanasurāṃ takage tōridanakaṭa nōḍidiremmavara vidhiya nakulanillā bhīmanō sā tyakiyo sēnāpatiyo kaṭakaṭa vikaḷarōḍidarōḍalidirige rathava hariseṃda
ಮಾತು ಹಿಂಚಿತು ತೇರು ಸೇನಾ ವ್ರಾತವನು ಹಿಂದಿಕ್ಕಿ ಗಂಗಾ ಜಾತನಿದಿರಲಿ ನಿಂದುದೇನೆಂಬೆನು ಮಹಾದ್ಭುತವ ಸೋತು ಚೆಲ್ಲಿದ ಸೇನೆ ಹರ್ಷದೊ ಳಾತು ನಿಂದುದು ಮತ್ತೆ ಭಂಗದ ಮಾತದೇತಕೆ ಕೇಳು ಜನಮೇಜಯ ಮಹೀಪಾಲ
mātu hiṃcitu tēru sēnā vrātavanu hiṃdikki gaṃgā jātanidirali niṃdudēneṃbenu mahādbhutava sōtu cellida sēne harṣado ḷātu niṃdudu matte bhaṃgada mātadētake kēḷu janamējaya mahīpāla
ಬಲವನಾಯಕವೇ ವೃಥಾ ಹುಲು ದಳದೊಳಗೆ ನಿಮ್ಮಗ್ಗಳಿಕೆ ಕೈ ಯಳವ ಮನಗಲಿತನದಳವ ಬಿಲುಗಾಱತನದಳವ ಬಲಿಯಿರೇ ನಮ್ಮೊಡನೆ ಮೆಚ್ಚಿಸಿ ಬಳಿಕ ಹಡೆಯಿರಿ ಬಿರುದನೆನುತವೆ ಫಲುಗುಣನು ಕೈಯಿಕ್ಕಿದನು ಗಂಗಾಕುಮಾರನಲಿ
balavanāyakavē vr̥thā hulu daḷadoḷage nimmaggaḷike kai yaḷava managalitanadaḷava bilugāṟatanadaḷava baliyirē nammoḍane meccisi baḷika haḍeyiri birudanenutave phaluguṇanu kaiyikkidanu gaṃgākumāranali
ನಾವು ವೃದ್ಧರು ಬಿರುದುಗಿರುದಿನ ಲಾವಣಿಗೆ ನಮಗೇಕೆ ಹೇಳೈ ನೀವಲೈ ಜವ್ವನದ ಭಂಟರು ರಣದ ಧುರಭರಕೆ ನೀವಿರಲು ನಿರ್ನಾಯಕವೆ ಸೇ ನಾವಳಿ ಮಹಾದೇವ ಮೂದಲೆ ಗಾವು ಲಕ್ಷ್ಯವೆ ಹೇಳು ಫಲುಗುಣ ಎಂದನಾ ಭೀಷ್ಮ
nāvu vr̥ddharu birudugirudina lāvaṇige namagēke hēḷai nīvalai javvanada bhaṃṭaru raṇada dhurabharake nīviralu nirnāyakave sē nāvaḷi mahādēva mūdale gāvu lakṣyave hēḷu phaluguṇa eṃdanā bhīṣma
ಕಟಕಿಯೇಕಿದು ಪರಶುರಾಮನ ಪಟುತನಕೆ ಮದ್ದರೆದೆನೆಂಬೀ ನಿಟಿಲನೇತ್ರನ ಭುಜಬಲಕೆ ಸಮಜೋಳಿ ಗಡ ನೀವು ಕುಟಿಲ ಭಣಿತೆಯನರೆಯೆನಿದರೊಳು ಭಟರು ನೀವಹುದೆನ್ನ ಶರ ಸಂ ಘಟನವನು ಚಿತ್ತಯಿಸಿಯೆಂದನು ಪಾರ್ಥ ನಸುನಗುತ
kaṭakiyēkidu paraśurāmana paṭutanake maddaredeneṃbī niṭilanētrana bhujabalake samajōḷi gaḍa nīvu kuṭila bhaṇiteyanareyenidaroḷu bhaṭaru nīvahudenna śara saṃ ghaṭanavanu cittayisiyeṃdanu pārtha nasunaguta
ಅವರು ಪೂರ‍್ವರು ಪರಶುರಾಮ ಪ್ರವರರನು ಮೆಚ್ಚಿಸಿದೆವೀಗಳಿ ನವರು ಕಡುಜಾಣಾಯ್ಲರೆಂದು ಸುರೇಖರೆಂದಿಹರು ಅವರ ಮೆಚ್ಚಿಸಬಹುದು ನೀವಾ ಹವ ಸುವಿದ್ಯಾ ದುರ್ವಿದಗ್ಧರು ನಿವಗೆ ನಾವಿದಿರಾಗಬಲ್ಲೆವೆಯೆಂದನಾ ಭೀಷ್ಮ
avaru pūrvaru paraśurāma pravararanu meccisidevīgaḷi navaru kaḍujāṇāylareṃdu surēkhareṃdiharu avara meccisabahudu nīvā hava suvidyā durvidagdharu nivage nāvidirāgaballeveyeṃdanā bhīṣma
ಬರಿಯ ಮಾತೋ ಚಾಪ ವಿದ್ಯದೊ ಳರಿತವುಂಟೋ ಹೊತ್ತುಗಳೆಯದೆ ಹೆಱಿರಿಸಿರೇ ನಾರಿಯನು ನಿಮ್ಮಯ ಬಾಣಗರ್ಭಿಣಿಯ ಅರಿಯಬಹುದೆನಲಹುದಹುದು ಕೈ ಮರೆಯದಿರು ಕೈಕೊಳ್ಳೆನುತ ಬೊ ಬ್ಬಿರಿದು ಪಾರ್ಥನನದ್ದಿದನು ಬಾಣಾಂಬುರಾಶಿಯಲಿ
bariya mātō cāpa vidyado ḷaritavuṃṭō hottugaḷeyade heṟirisirē nāriyanu nimmaya bāṇagarbhiṇiya ariyabahudenalahudahudu kai mareyadiru kaikoḷḷenuta bo bbiridu pārthananaddidanu bāṇāṃburāśiyali
ಒಳ್ಳಿತೈ ಕೈ ಚಳಕವಾವನ ಲಿಲ್ಲ ಹರಹರ ಪರಶುರಾಮನ ನಲ್ಲಿ ಮೆಚ್ಚಿಸಿದಂದವಿನಿತೋ ಮತ್ತೆ ಬೇರುಂಟೊ ಒಳ್ಳೆಗರನೋಡಿಸಿದ ಸಹಸವ ನಿಲ್ಲಿ ತೋಱಲು ನೆನೆದಿರೇ ತ ಪ್ಪಲ್ಲ ತಪ್ಪಲ್ಲೆನುತ ಕಣೆಗಳ ಕಡಿದನಾ ಪಾರ್ಥ
oḷḷitai kai caḷakavāvana lilla harahara paraśurāmana nalli meccisidaṃdavinitō matte bēruṃṭo oḷḷegaranōḍisida sahasava nilli tōṟalu nenedirē ta ppalla tappallenuta kaṇegaḷa kaḍidanā pārtha
ಖೋಡಿ ಮಾಡದಿರೆಲೆ ಕಿರೀಟಿ ವಿ ಭಾಡಿಸುವುದರಿದೇ ದೊಠಾರಿಸಿ ಯಾಡುವುದು ದೊರೆಗುಚಿತವೇ ಗರುವಾಯಿಗಂಗವಿದೆ ನೋಡು ನೋಡಾದರೆ ಕಪರ್ದಿಯ ಕೂಡೆ ನೀ ಹೊಯಿದಾಡಿ ಬಿಲ್ಲ ಸ ಘಾಡನಹೆ ದಿಟ ಕಾದುಕೊಳ್ಳೆನುತೆಚ್ಚನಾ ಭೀಷ್ಮ
khōḍi māḍadirele kirīṭi vi bhāḍisuvudaridē doṭhārisi yāḍuvudu doregucitavē garuvāyigaṃgavide nōḍu nōḍādare kapardiya kūḍe nī hoyidāḍi billa sa ghāḍanahe diṭa kādukoḷḷenuteccanā bhīṣma
ಇದು ಹೊಸತು ಬಾಣಾಬ್ಧಿ ವೇಲೆಯ ನೊದೆದು ಹಾಯ್ದುದೊ ಭುವನವಳಿವಂ ದುದಯಿಸಿದ ಮಳೆಗಾಲವೋ ಮಾಮಾ ಶರಾವಳಿಯೊ ಹೊದರಡಸಿ ಕಿಡಿಯೆದ್ದು ದೆಸೆಗಳ ಹೊದಿಸಿದವು ಹೊಳೆದರ್ಜುನನ ಮು ತ್ತಿದವು ಕೆತ್ತಿದವರಿಯ ಸೀಸಕ ಜೋಡು ಮೊಚ್ಚೆಯವ
idu hosatu bāṇābdhi vēleya nodedu hāydudo bhuvanavaḷivaṃ dudayisida maḷegālavō māmā śarāvaḷiyo hodaraḍasi kiḍiyeddu desegaḷa hodisidavu hoḷedarjunana mu ttidavu kettidavariya sīsaka jōḍu mocceyava
ಹನುಮ ಮಸೆಗಂಡನು ಮುರಾಂತಕ ಕನಲಿದನು ಕಡುನೊಂದು ಪಾರ್ಥನ ತನುವಿನಲಿ ಹೆಬ್ಬಟ್ಟೆಯಾದುದು ಬಾಣಪಥಿಕರಿಗೆ ಮೊನೆಯಲಗು ಮುಕ್ಕುರುಕೆ ರಥವನು ತನಿಗೊಡಹಿ ಮುಗ್ಗಿದವು ತೇಜಿಗ ಳನುವರಕೆ ಮುಖದಿರುಹಿದವು ಕಲಿ ಭೀಷ್ಮನುಪಟಳಕೆ
hanuma masegaṃḍanu murāṃtaka kanalidanu kaḍunoṃdu pārthana tanuvinali hebbaṭṭeyādudu bāṇapathikarige moneyalagu mukkuruke rathavanu tanigoḍahi muggidavu tējiga ḷanuvarake mukhadiruhidavu kali bhīṣmanupaṭaḷake
ಬಸಿವ ರಕುತವ ಬಳಿದು ಖಾತಿಯ ಮಸಕದಲಿ ಕೈಮರೆದು ಮಿಗೆ ದ ಳ್ಳಿಸುತ ಹೊಗರಿಡುತೌಡುಗಚ್ಚುತ ಹುಬ್ಬುಗಳ ಬಲಿದು ಹೊಸಮಸೆಯ ಬಾಯ್ಧಾರೆಗಳ ಶರ ವಿಸರವನು ತೊಡಚಿದನು ಭೀಷ್ಮನ ಮುಸುಕಿದನು ಮಗುಳೆಚ್ಚು ಪುನರಪಿ ಕರೆದನಂಬುಗಳ
basiva rakutava baḷidu khātiya masakadali kaimaredu mige da ḷḷisuta hogariḍutauḍugaccuta hubbugaḷa balidu hosamaseya bāydhāregaḷa śara visaravanu toḍacidanu bhīṣmana musukidanu maguḷeccu punarapi karedanaṃbugaḷa
ಮುತ್ತಿದವು ನರನಂಬು ಫಣಿಗಳು ಹುತ್ತ ಹೊಗುವಂದದಲಿ ಕಂಡವ ಕುತ್ತಿ ಹಾಯ್ದವು ಕೆತ್ತಿ ಹರಿದವು ಕಿಬ್ಬರಿಗಳೆಲುವ ಮೆತ್ತಿದವು ಕೈಮೈಗಳಲಿ ತಲೆ ಯೊತ್ತಿದವು ವಜ್ರಾಂಗಿಯಲಿ ಭಟ ನತ್ತಲಿತ್ತಲೆನಲ್ಕೆ ಬಳಸಿದವಾ ನದೀಸುತನ
muttidavu naranaṃbu phaṇigaḷu hutta hoguvaṃdadali kaṃḍava kutti hāydavu ketti haridavu kibbarigaḷeluva mettidavu kaimaigaḷali tale yottidavu vajrāṃgiyali bhaṭa nattalittalenalke baḷasidavā nadīsutana
ಜೋಡು ಹರಿದುದು ತಾಳ ಹಳವಿಗೆ ನೀಡಿ ಕೆಡೆದುದು ಸಾರಥಿಗಳಸು ಹೂಡಿತಂತಕಪುರಿಗೆ ತೇಜಿಗಳಸುವ ಕಾರಿದವು ಗೂಡುಗೊಂಡುದು ವಿಕ್ರಮಾನಳ ನಾಡಬಾರದು ಭೀಷ್ಮನನು ಕೈ ಗೂಡಿ ಕವಿಯಲಿ ದ್ರೋಣ ಗುರುಸುತರೆಂದುದಖಿಲಜನ
jōḍu haridudu tāḷa haḷavige nīḍi keḍedudu sārathigaḷasu hūḍitaṃtakapurige tējigaḷasuva kāridavu gūḍugoṃḍudu vikramānaḷa nāḍabāradu bhīṣmananu kai gūḍi kaviyali drōṇa gurusutareṃdudakhilajana
ಸಾರು ಫಡ ಕೆಲಬಲದ ಹಂಗಿನ ವೀರನೇ ಕಲಿ ಭೀಷ್ಮ ಮುನಿದರೆ ಹೋರಟೆಗೆ ಬರಹೇಳು ಭರ್ಗನನಿವನ ಪಾಡೇನು ಮೇರೆಗಿದ್ದೆನು ಮಕ್ಕಳೆಂದೇ ವೈರಬಂಧವ ಬಿಟ್ಟೆನಕಟ ವಿ ಕಾರಿತನವೇ ನಮ್ಮೊಡನೆಯೆನುತೆಚ್ಚನಾ ಭೀಷ್ಮ
sāru phaḍa kelabalada haṃgina vīranē kali bhīṣma munidare hōraṭege barahēḷu bhargananivana pāḍēnu mēregiddenu makkaḷeṃdē vairabaṃdhava biṭṭenakaṭa vi kāritanavē nammoḍaneyenuteccanā bhīṣma
ಎಸಲು ಕಡಿದನು ಪಾರ್ಥನೀತನ ವಿಶಿಖವನು ತರಿದವನು ಕಿಡಿ ದ ಳ್ಳಿಸುವ ಧಾರೆಯ ಭೂರಿ ಬಾಣದ ಬಲೆಯ ಬೀಸಿದನು ಕುಸುರಿದರಿದನು ಮತ್ತೆ ಜೋಡಿಸಿ ನಿಶಿತ ಶರದಲಿ ಬಳಿಕಲವನಿಗೆ ಹಸುಗೆ ಮಾಡಿದನಿತ್ತ ಸವೆದವು ಸರಳು ಸಮರದಲಿ
esalu kaḍidanu pārthanītana viśikhavanu taridavanu kiḍi da ḷḷisuva dhāreya bhūri bāṇada baleya bīsidanu kusuridaridanu matte jōḍisi niśita śaradali baḷikalavanige hasuge māḍidanitta savedavu saraḷu samaradali
ಉರಗ ಬಾಣವನಿವರು ಕರೆದರು ಗರುಡ ಶರದಲಿ ಪಾರ್ಥ ತವಿಸಿದ ನುರಿಯ ವಿಶಿಖವನಿವರು ನಂದಿಸಿದರು ಜಲಾಸ್ತ್ರದಲಿ ಗಿರಿಶಿಳೀಮುಖಕಿವರು ವಜ್ರವ ಹರಿಸಿದರು ತಿಮಿರಾಸ್ತ್ರವೆದ್ದರೆ ತರಣಿ ಮಾರ್ಗಣದಿಂದ ತರಿದನು ಭೀಷ್ಮ ವಹಿಲದಲಿ
uraga bāṇavanivaru karedaru garuḍa śaradali pārtha tavisida nuriya viśikhavanivaru naṃdisidaru jalāstradali giriśiḷīmukhakivaru vajrava harisidaru timirāstraveddare taraṇi mārgaṇadiṃda taridanu bhīṣma vahiladali
ಆವ ವಿಧದಲಿ ಪಾರ್ಥನೆಸುವನ ದಾವ ಬೇಗದಿ ಮುರಿವನೀತನ ದಾವ ಚಾಪ ರಹಸ್ಯ ವಿದ್ಯೆಗಳೊಳಗೆ ಬಳಸಿದನೊ ಆ ವಿಧದಲಾ ಪರಿಯಲಾ ಸಂ ಭಾವನೆಯಲಾ ಲುಳಿಯಲಾ ನಾ ನಾ ವಿಧಾನದಲೊದಗಿ ಸರಿ ಮಿಗಿಲೆನಿಸಿದನು ಭೀಷ್ಮ
āva vidhadali pārthanesuvana dāva bēgadi murivanītana dāva cāpa rahasya vidyegaḷoḷage baḷasidano ā vidhadalā pariyalā saṃ bhāvaneyalā luḷiyalā nā nā vidhānadalodagi sari migilenisidanu bhīṣma
ಎರಡು ಶರದಲಿ ನರನು ಭೀಷ್ಮನ ಕರದ ಕರ‍್ಮುಕದಂಡವನು ಕ ತ್ತರಿಸಿದನು ಕೈಯೊಡನೆ ಕೊಂಡನು ಭೀಷ್ಮ ಹೊಸ ಧನುವ ಸರಳ ಸೂಟಿಯ ತೋರಿಸಿದಡ ಬ್ಬರಿಸಿ ಫಲುಗುಣನೈದು ಬಾಣದ ಲರಿಭಟನ ಚಾಪವನು ಕಡಿ ಮೂರಾಗಿ ಖಂಡಿಸಿದ
eraḍu śaradali naranu bhīṣmana karada karmukadaṃḍavanu ka ttarisidanu kaiyoḍane koṃḍanu bhīṣma hosa dhanuva saraḷa sūṭiya tōrisidaḍa bbarisi phaluguṇanaidu bāṇada laribhaṭana cāpavanu kaḍi mūrāgi khaṃḍisida
ಮತ್ತೆ ಹೊಸ ಚಾಪದಲಿ ಭೀಷ್ಮನು ಮಿತ್ತು ಖತಿಗೊಂಡಂತೆ ಶರದಲಿ ಕೆತ್ತನಾಕಾಶವನು ಕಡಿದನು ಪಾರ್ಥ ನಿಮಿಷದಲಿ ಮುತ್ತಯನ ಕರತಳದ ಧನುವನು ಕತ್ತರಿಸಿದನು ಹಿಡಿಯಲೀಯದೆ ಹತ್ತುಸಾವಿರ ಬಿಲ್ಲು ಸವೆದವು ಕುರುಪಿತಾಮಹನ
matte hosa cāpadali bhīṣmanu mittu khatigoṃḍaṃte śaradali kettanākāśavanu kaḍidanu pārtha nimiṣadali muttayana karataḷada dhanuvanu kattarisidanu hiḍiyalīyade hattusāvira billu savedavu kurupitāmahana
ಉಲಿಯೆ ಕಿರುಘಂಟೆಗಳು ಹೊಳ ಹೊಳ ಹೊಳೆವ ಶಕ್ತಿಯ ತುಡುಕಿ ಭೀಷ್ಮನು ಫಲುಗುಣನನಿಡೆ ಕಡಿದು ಬಿಸುಟನು ನೂರು ಬಾಣದಲಿ ಸೆಳೆದು ಫಲುಗುಣ ತಿರುಹಿ ಭೀಷ್ಮನ ತಲೆಯ ಲಕ್ಷಿಸಿ ಹೊನ್ನ ಘಂಟೆಗ ಳುಲಿಯೆ ಬಿಟ್ಟೇರಿಂದಲಿಡೆ ಖಂಡಿಸಿದನಾ ಭೀಷ್ಮ
uliye kirughaṃṭegaḷu hoḷa hoḷa hoḷeva śaktiya tuḍuki bhīṣmanu phaluguṇananiḍe kaḍidu bisuṭanu nūru bāṇadali seḷedu phaluguṇa tiruhi bhīṣmana taleya lakṣisi honna ghaṃṭega ḷuliye biṭṭēriṃdaliḍe khaṃḍisidanā bhīṣma
ಆವ ಚಾಪವ ತುಡುಕಿ ಕೆನ್ನೆಗೆ ತೀವಿ ತೆಗೆಯದ ಮುನ್ನ ಫಲುಗುಣ ನೋವದೆಸುವನು ಕಡಿದು ಬಿಸುಡುವನಿವರ ಬಿಲ್ಲುಗಳ ಆವ ದಿವ್ಯಾಸ್ತ್ರವನು ಕುಂತಿಯ ಮಾವ ತೊಡುವನು ತೊಡದ ಮುನ್ನ ಶ ರಾವಳಿಯ ಮುಂಕೊಂಡು ಖಂಡಿಸಿ ಪಾರ್ಥನೆಸುತಿರ್ದ
āva cāpava tuḍuki kennege tīvi tegeyada munna phaluguṇa nōvadesuvanu kaḍidu bisuḍuvanivara billugaḷa āva divyāstravanu kuṃtiya māva toḍuvanu toḍada munna śa rāvaḷiya muṃkoṃḍu khaṃḍisi pārthanesutirda
ಮೇಲೆ ಹೇಳಿಕೆಯಾಯ್ತು ಕೌರವ ರಾಳಿನಲಿ ದುಶ್ಶಾಸನಂಗೆ ಕ ರಾಳ ಭೂರಿಶ್ರವ ಜಯದ್ರಥ ಗುರು ಕೃಪಾದ್ಯರಿಗೆ ಕೋಲ ಹೊದೆಗಳ ಬಂಡಿಯಲಿ ನಿ ಸ್ಸಾಳ ಸೂಳಿನ ಲಗ್ಗೆಯಲಿ ಹೇ ರಾಳ ದೊಡ್ಡವಣೆಯಲಿ ಪಡಿಬಲ ಕವಿದುದುರವಣಿಸಿ
mēle hēḷikeyāytu kaurava rāḷinali duśśāsanaṃge ka rāḷa bhūriśrava jayadratha guru kr̥pādyarige kōla hodegaḷa baṃḍiyali ni ssāḷa sūḷina laggeyali hē rāḷa doḍḍavaṇeyali paḍibala kaviduduravaṇisi
ನರನ ಬೆಂಬಲವಾಗಿ ಪಾಂಚಾ ಲರನು ಮತ್ಸ್ಯನ ಭೀಮಸೇನನ ವರ ನಕುಲ ಸಹದೇವ ಧೃಷ್ಟದ್ಯುಮ್ನ ಸಾತ್ಯಕಿಯ ಅರಸನಟ್ಟಿದನಿತ್ತಲಂಬಿನ ತಿರುಹುವೆರಳಿನ ಮೊರೆವ ಬಿಲ್ಲಿನ ವರ ರಥದ ದುವ್ವಾಳಿ ಮೆರೆಯೆ ಶಿಖಂಡಿ ನಡೆತಂದ
narana beṃbalavāgi pāṃcā laranu matsyana bhīmasēnana vara nakula sahadēva dhr̥ṣṭadyumna sātyakiya arasanaṭṭidanittalaṃbina tiruhuveraḷina moreva billina vara rathada duvvāḷi mereye śikhaṃḍi naḍetaṃda
Keys: ← → turn the page, J K step through the verses.
Illustration: Verse & Place (Project-owned).