ಸಾಮದಲಿ ಪರಬಲದ ಸುಭಟ ಸ್ತೋಮವನು ತನ್ನೊಳಗು ಮಾಡಿಯೆ ಭೂಮಿಪತಿ ಯಮನಂದನನು ಸಂಗ್ರಾಮಕನುವಾದ
sāmadali parabalada subhaṭa stōmavanu tannoḷagu māḍiye bhūmipati yamanaṃdananu saṃgrāmakanuvāda
ಭೀಷ್ಮ ಪರ್ವ — ಸಂಧಿ ೨ · ಭೀಷ್ಮ ಪರ್ವ — ಸಂಧಿ ೨
bhīṣma parva — saṃdhi 2
The complete bhishma parva · sandhi 2 in Kannada.
40 passagesKannada with transliteration
Invocation
ಸಾಮದಲಿ ಪರಬಲದ ಸುಭಟ ಸ್ತೋಮವನು ತನ್ನೊಳಗು ಮಾಡಿಯೆ ಭೂಮಿಪತಿ ಯಮನಂದನನು ಸಂಗ್ರಾಮಕನುವಾದ
sāmadali parabalada subhaṭa stōmavanu tannoḷagu māḍiye bhūmipati yamanaṃdananu saṃgrāmakanuvāda
ಕೇಳು ಜನಮೇಜಯ ಧರಿತ್ರೀ ಪಾಲ ಧೃಷ್ಟದ್ಯುಮ್ನ ಭೀಷ್ಮರ ಪಾಳಯದೊಳಂದಮಮ ಕೈಗೈದಿಳೆಗೆ ಹೊಸತೆನಿಸಿ ಕಾಳೆಗಕ್ಕುನುವಾಗಿ ರಥತುರ ಗಾಳಿ ಕರಿ ಕಾಲಾಳು ದೊರೆಗಳ ಮೇಲುಗೈಚಮರಿಗಳನೀಕ್ಷಿಸುತಿದ್ದುದುಭಯಬಲ
kēḷu janamējaya dharitrī pāla dhr̥ṣṭadyumna bhīṣmara pāḷayadoḷaṃdamama kaigaidiḷege hosatenisi kāḷegakkunuvāgi rathatura gāḷi kari kālāḷu doregaḷa mēlugaicamarigaḷanīkṣisutiddudubhayabala
ಮಡದ ಸೋಂಕಿಂ ಮುನ್ನ ಗಗನವ ತುಡುಕ ಬಗೆದವು ತೇಜಿಗಳು ನಸು ಸಡಿಲಬಿಡೆ ವಾಘೆಯಲಿ ಚಿಗಿದವು ರಥದ ವಾಜಿಗಳು ತುಡುಕುವಂಕುಶದಿಂದ ಮುನ್ನಿಳೆ ಯೊಡೆಯ ಗಜ ಗಾಢಿಸಿದವರಸರ ಬಿಡುಹು ತಡೆದೆಡಗಲಸಬಗೆದುವು ವಿಗಡ ಪಾಯದಳ
maḍada sōṃkiṃ munna gaganava tuḍuka bagedavu tējigaḷu nasu saḍilabiḍe vāgheyali cigidavu rathada vājigaḷu tuḍukuvaṃkuśadiṃda munniḷe yoḍeya gaja gāḍhisidavarasara biḍuhu taḍedeḍagalasabageduvu vigaḍa pāyadaḷa
ಗಜದ ಬಲುಗರ್ಜನೆಯ ವಾಜಿ ವ್ರಜದ ಹೇಷಿತರವದ ತೇರಿನ ಗಜಬಜದ ಕಾಲಾಳು ಕಡುಹಿನ ಬೊಬ್ಬೆಯಬ್ಬರದ ಗಜರುವಗ್ಗದ ಬೊಗ್ಗುಗಳ ದಿ ಗ್ವ್ರಜವ ನುಡಿಸುವ ರಾಯಗಿಡಿಗನ ವಿಜಯಬಲ ತೊಡರಿಕ್ಕಿತೈ ಕಲ್ಪಾಂತ ಸಾಗರಕೆ
gajada balugarjaneya vāji vrajada hēṣitaravada tērina gajabajada kālāḷu kaḍuhina bobbeyabbarada gajaruvaggada boggugaḷa di gvrajava nuḍisuva rāyagiḍigana vijayabala toḍarikkitai kalpāṃta sāgarake
ತಿಗಡಲೊದರುವ ಹರಿಗೆಗಳ ಗೌ ರಗಿವ ಹೆಗ್ಗಹಳೆಗಳ ಹೊನ್ನಾ ಯುಗದ ಖಡುಗದ ಗಜರು ಡೊಂಕಣಿಗಳ ಝಣತ್ಕೃತಿಯ ಬಿಗಿದ ಬಿಲು ಬೊಬ್ಬೆಗಳ ಬಿರುದರ ವಿಗಡ ಮೂದಲೆಗಳ ಮಹಾಧ್ವನಿ ಬಿಗಿದುದೈ ತಾವರೆಯ ತನಯನ ಕರ್ಣ ಕೋಟರವ
tigaḍalodaruva harigegaḷa gau ragiva heggahaḷegaḷa honnā yugada khaḍugada gajaru ḍoṃkaṇigaḷa jhaṇatkr̥tiya bigida bilu bobbegaḷa birudara vigaḍa mūdalegaḷa mahādhvani bigidudai tāvareya tanayana karṇa kōṭarava
ಕುಣಿವ ಕುದುರೆಯ ಮದದ ಬಲುಭಾ ರಣೆಯಲೊಲೆವಾನೆಗಳ ತುರಗವ ಕೆಣಕಿ ಸರಳಿಸಿ ಹಿಡಿವ ತೇರಿನ ಸೂತರೋಜೆಗಳ ಅಣೆವ ಹರಿಗೆಯನೊಬ್ಬನೊಬ್ಬರ ನಣಸಿನಲಿ ತಿವಿದಗಿವ ಭಟರೊ ಡ್ಡಣೆ ಸಘಾಡಿಸಿತೆರಡುಬಲದಲಿ ಭೂಪ ಕೇಳೆಂದ
kuṇiva kudureya madada balubhā raṇeyalolevānegaḷa turagava keṇaki saraḷisi hiḍiva tērina sūtarōjegaḷa aṇeva harigeyanobbanobbara naṇasinali tividagiva bhaṭaro ḍḍaṇe saghāḍisiteraḍubaladali bhūpa kēḷeṃda
ಝಳಪದಲಿ ಬೊಬ್ಬಿಡುವಡಾಯುಧ ಹೊಳವುಗಳ ಡೊಂಕಣಿಯ ತಳಪದ ಬೆಳಗುಗಳ ಬಟ್ಟೇರ ಧಾರೆಯ ಬಳ್ಳಿಮಿಂಚುಗಳ ಅಲಗಿನುಬ್ಬರಗಿಡಿಯ ಹಬ್ಬುಗೆ ಥಳಥಳಿಸಿ ಸೈಗರೆದುದೈ ಹೆ ಬ್ಬಲ ದಿವಾಕರಶತವನೆನೆ ಹೆಸರಿಡುವನಾರೆಂದ
jhaḷapadali bobbiḍuvaḍāyudha hoḷavugaḷa ḍoṃkaṇiya taḷapada beḷagugaḷa baṭṭēra dhāreya baḷḷimiṃcugaḷa alaginubbaragiḍiya habbuge thaḷathaḷisi saigaredudai he bbala divākaraśatavanene hesariḍuvanāreṃda
ಕೇಳು ಜನಮೇಜಯ ಧರಿತ್ರೀ ಪಾಲ ಭೀಷ್ಮನ ಹೊರೆಗೆ ಕುರುಭೂ ಪಾಲ ಬಂದನು ಬಿನ್ನವಿಸಿದನು ಮುಕುಳಕರನಾಗಿ ಮೇಳದಲಿ ಮಂಡಳಿಸಿದರಿನೃಪ ಜಾಲದಲಿ ಯಮಸೂನುವಾವನು ಮೇಲೆ ಭೀಮಾರ್ಜುನರ ವಿವರಿಸಿ ತೋರಬೇಕೆಂದ
kēḷu janamējaya dharitrī pāla bhīṣmana horege kurubhū pāla baṃdanu binnavisidanu mukuḷakaranāgi mēḷadali maṃḍaḷisidarinr̥pa jāladali yamasūnuvāvanu mēle bhīmārjunara vivarisi tōrabēkeṃda
ನಸುನಗೆಯ ಚೂಣಿಯಲಿ ವದನದ ರಸುಮೆ ಝಳಪಿಸೆ ಕೌರವೇಂದ್ರಂ ಗುಸುರಿದನು ಕಲಿಭೀಷ್ಮನವಧರಿಸೈ ಮಹೀಪತಿಯೆ ಪಸರಿಸಿದ ಮುಗಿಲೊಡ್ಡಿನಲಿ ಮಿಂ ಚೆಸವವೊಲು ಗಜದಳದ ಮಧ್ಯದೊ ಳೆಸೆವನಾತನು ವೀರಧೃಷ್ಟದ್ಯುಮ್ನ ನೋಡೆಂದ
nasunageya cūṇiyali vadanada rasume jhaḷapise kauravēṃdraṃ gusuridanu kalibhīṣmanavadharisai mahīpatiye pasarisida mugiloḍḍinali miṃ cesavavolu gajadaḷada madhyado ḷesevanātanu vīradhr̥ṣṭadyumna nōḍeṃda
ಇವ ಕಣಾ ಪಾಂಡವರ ಸೇನಾ ರ್ಣವಕೆ ನಾಯಕನಿವನ ಕೆಲಬಲ ದವರು ತೆಕ್ಕೆಯ ತೇರ ತೇಜಿಯ ಥಟ್ಟಿನುನ್ನತಿಯ ಬವರಿಗರು ಪಾಂಚಾಲಕುಲ ಸಂ ಭವರು ದ್ರುಪದ ಸಹೋದರರು ಮ ತ್ತಿವರು ಸೃಂಜಯ ವರ ಯುಧಾಮನ್ಯೂತ್ತಮೌಂಜಸರು
iva kaṇā pāṃḍavara sēnā rṇavake nāyakanivana kelabala davaru tekkeya tēra tējiya thaṭṭinunnatiya bavarigaru pāṃcālakula saṃ bhavaru drupada sahōdararu ma ttivaru sr̥ṃjaya vara yudhāmanyūttamauṃjasaru
ಡೊಂಕಣಿಯ ಹೊದರುಗಳಲೆಡಬಲ ವಂಕದಾನೆಯ ಥಟ್ಟುಗಳ ನಿ ಶ್ಶಂಕಮಲ್ಲನು ದ್ರುಪದನೀತ ವಿರಾಟನೃಪನೀತ ಮುಂಕುಡಿಯ ನಾಯಕರಿವರು ಪತಿ ಯಂಕಕಾರರು ಇವರ ಬಳಿಯಲಿ ಬಿಂಕದೆರಡಕ್ಷೋಣಿ ಬಲವದೆ ರಾಯ ನೋಡೆಂದ
ḍoṃkaṇiya hodarugaḷaleḍabala vaṃkadāneya thaṭṭugaḷa ni śśaṃkamallanu drupadanīta virāṭanr̥panīta muṃkuḍiya nāyakarivaru pati yaṃkakāraru ivara baḷiyali biṃkaderaḍakṣōṇi balavade rāya nōḍeṃda
ಅವರ ಮೋಹರದಾಚೆಯಲಿ ನಿಂ ತವರು ಕೊಂತೀಭೋಜ ಕೇಕಯ ರವರ ಬಳಿಯಲಿ ತಳಿತುದೆರಡಕ್ಷೋಹಿಣೀ ಸೇನೆ ಅವರ ಹತ್ತಿರೆ ಮೋಹರಿಸಿ ನಿಂ ದವರು ಪಾಂಡ್ಯ ಶಿಖಂಡಿ ಸೋಮಕ ರವರ ಮೋಹರದೊಳಗೆ ನೋಡಕ್ಷೋಹಿಣೀ ಸೇನೆ
avara mōharadāceyali niṃ tavaru koṃtībhōja kēkaya ravara baḷiyali taḷituderaḍakṣōhiṇī sēne avara hattire mōharisi niṃ davaru pāṃḍya śikhaṃḍi sōmaka ravara mōharadoḷage nōḍakṣōhiṇī sēne
ಅರೆನೆಲೆಯ ದಳದತ್ತ ದೃಷ್ಟಿಯ ಹರಿಯಬಿಡು ನೋಡಲ್ಲಿ ಕೌಂತೇ ಯರ ಕುಮಾರರನಮಲ ಪಂಚ ದ್ರೌಪದೀಸುತರ ಉರಿಯ ಕರುವಿಟ್ಟಂತೆ ವಿಲಯದ ಹರನ ಖತಿ ಹೊಗೆವಂತೆ ಸಿಡಿಲಿನ ಹೊರಳಿ ಹೊದರೆದ್ದಂತೆ ನಿಂದವನವ ಘಟೋತ್ಕಚನು
areneleya daḷadatta dr̥ṣṭiya hariyabiḍu nōḍalli kauṃtē yara kumāraranamala paṃca draupadīsutara uriya karuviṭṭaṃte vilayada harana khati hogevaṃte siḍilina horaḷi hodareddaṃte niṃdavanava ghaṭōtkacanu
ಭೀಮಸೇನನ ಮಗನವನು ಸಂ ಗ್ರಾಮ ಚಾಪಟನವನ ಬಳಿಯಲಿ ತಾಮಸದ ಬಲುಮೊಗದ ಹೊಗರಿನ ಹೊಳೆವ ದಾಡೆಗಳ ಕಾಮರೂಪಿಗಳೊಂದು ಕೋಟಿ ಸ ನಾಮದೈತ್ಯರು ಕುಂಭಕರ್ಣ ಸ್ತೋಮವೆನಲದೆ ಲಯಕೃತಾಂತನ ಕ್ರೂರ ಪರಿವಾರ
bhīmasēnana maganavanu saṃ grāma cāpaṭanavana baḷiyali tāmasada balumogada hogarina hoḷeva dāḍegaḷa kāmarūpigaḷoṃdu kōṭi sa nāmadaityaru kuṃbhakarṇa stōmavenalade layakr̥tāṃtana krūra parivāra
ಅವರ ಹೊರೆಯಲಿ ಫಲುಗುಣಗೆ ಮಲೆ ವವರ ಗಂಡನು ರಿಪುಕುಮಾರಕ ನಿವಹ ಕಾಳಾನಳನು ನೋಡಭಿಮನ್ಯುವರ್ಜುನನ ಕುವರನಿವ ಮಗುವಲ್ಲ ಬಲುಗೆ ಯ್ಯವನ ಮೋಹರದೊತ್ತಿನಲಿ ನಿಂ ದವರು ಸಾತ್ಯಕಿ ಚೇಕಿತಾನ ಪ್ರಮುಖ ನಾಯಕರು
avara horeyali phaluguṇage male vavara gaṃḍanu ripukumāraka nivaha kāḷānaḷanu nōḍabhimanyuvarjunana kuvaraniva maguvalla baluge yyavana mōharadottinali niṃ davaru sātyaki cēkitāna pramukha nāyakaru
ಅವರೊಳೊಂದಕ್ಷೋಹಿಣಿಯು ಮಾ ಧವನ ಮನೆಯದು ಧೃಷ್ಟಕೇತು ಪ್ರವರನಾತನು ಚೈದ್ಯನಂದನನವರ ಕಂಡಿಹನು ಅವರ ಹೊರೆಯಲಿ ವೀರ ಸೇನಾ ನಿವಹದೊಳು ಸಹದೇವನಾತನ ಸವಹರೆಯ ನಕುಲಾಂಕನಿವರಾಹವ ಧುರಂಧರರು
avaroḷoṃdakṣōhiṇiyu mā dhavana maneyadu dhr̥ṣṭakētu pravaranātanu caidyanaṃdananavara kaṃḍihanu avara horeyali vīra sēnā nivahadoḷu sahadēvanātana savahareya nakulāṃkanivarāhava dhuraṃdhararu
ಇತ್ತಲಿದು ಕಲ್ಪಾಂತರುದ್ರನ ಮೊತ್ತ ಕಾಳೋಗರನ ಜಂಗುಳಿ ಮತ್ಯುವಿನ ಮೋಹರ ಕೃತಾಂತನ ಥಟ್ಟು ಭೈರವನ ತೆತ್ತಿಗರ ದಾವಣಿಯೊಳಣ್ಣನ ಮತ್ತವಾರಣ ಭೀಮಸೇನನ ನಿತ್ತ ನೋಡೈ ಮಗನೆ ಕುರುಕುಲ ಕೇಣಿಕಾರನನು
ittalidu kalpāṃtarudrana motta kāḷōgarana jaṃguḷi matyuvina mōhara kr̥tāṃtana thaṭṭu bhairavana tettigara dāvaṇiyoḷaṇṇana mattavāraṇa bhīmasēnana nitta nōḍai magane kurukula kēṇikārananu
ಕೆಲದಲಾ ತರುವಾಯಲಾಹವ ದಳಲಿಗರ ಮೇಳದಲಿ ಮುಕುಟದ ಲಲಿತರತ್ನ ಪ್ರಭೆಯ ಲಹರಿಯ ಲಾವಣಿಗೆ ಮಿಗಲು ಚಲತುರಂಗದ ಭಾರಿಯಾನೆಯ ದಳದ ರಥದ ಪದಾತಿಮಧ್ಯದ ಹೊಳಹಿನಲಿ ನಿಂದಾತನಾತ ಮಹೀಶ ಧರ್ಮಜನು
keladalā taruvāyalāhava daḷaligara mēḷadali mukuṭada lalitaratna prabheya lahariya lāvaṇige migalu calaturaṃgada bhāriyāneya daḷada rathada padātimadhyada hoḷahinali niṃdātanāta mahīśa dharmajanu
ಆತನೆಡವಂಕದಲಿ ಹನುಮನ ಕೇತನದ ಗರುವಾಯಿಯಲಿ ನವ ಶಾಂತಕುಂಭವರೂಥದಲಿ ನೆರೆ ತೀವಿದಸ್ತ್ರದಲಿ ನೂತನಾಶ್ವ ನಿಕಾಯ ಖುರಪುಟ ಧೂತಧೂಳೀಪಟಲವಿಹಿತ ನಿ ಶಾತಘನ ಜಯಯುವತಿವಿಟನರ್ಜುನನ ನೋಡೆಂದ
ātaneḍavaṃkadali hanumana kētanada garuvāyiyali nava śāṃtakuṃbhavarūthadali nere tīvidastradali nūtanāśva nikāya khurapuṭa dhūtadhūḷīpaṭalavihita ni śātaghana jayayuvativiṭanarjunana nōḍeṃda
ತಿಳಿಯಲೊಬ್ಬನ ರೋಮರೋಮದ ಕುಳಿಯೊಳಗೆ ಬ್ರಹ್ಮಾಂಡಕೋಟಿಯ ಸುಳಿವು ಗಡ ಶ್ರುತಿನಿಕರವೊರಲಿದರೊಳಗುದೋರ ಗಡ ಹಲವು ಮಾತೇನಾತನೀತನ ಬಳಿಯ ಬಂಡಿಯ ಬೋವನಾಗಿಯೆ ಸುಳಿವನಾತನ ನೋಡು ಮಗನೇ ವೀರನರಯಣನ
tiḷiyalobbana rōmarōmada kuḷiyoḷage brahmāṃḍakōṭiya suḷivu gaḍa śrutinikaravoralidaroḷagudōra gaḍa halavu mātēnātanītana baḷiya baṃḍiya bōvanāgiye suḷivanātana nōḍu maganē vīranarayaṇana
ಅದೆ ದುರಂತದ ದುರುಳ ದೊದ್ದೆಯ ಹದನ ಬಣ್ಣಿಸಲೆನಗೆ ನೂಕದು ತುದಿಯಲರಿವೆನು ದಳದ ಮನ್ನೆಯ ಮಂಡಲೀಕರಲಿ ಕದನವಿದು ಭಾರಂಕವಾರ ಭ್ಯುದಯ ತಲೆದೋರುವುದೊ ನಮಗೇ ಕಿದರ ಚಿಂತೆ ಮುರಾರಿ ಬಲ್ಲನು ಕಂದ ಕೇಳೆಂದ
ade duraṃtada duruḷa doddeya hadana baṇṇisalenage nūkadu tudiyalarivenu daḷada manneya maṃḍalīkarali kadanavidu bhāraṃkavāra bhyudaya taledōruvudo namagē kidara ciṃte murāri ballanu kaṃda kēḷeṃda
ಅವರೊಳೇಳಕಕ್ಷೋಣಿಬಲ ನ ಮ್ಮವರೊಳಗೆ ಹನ್ನೊಂದು ಮತ್ತವ ರಿವರ ಸಖ್ಯಕೆ ನೆರೆದುದೇಕಾದಶಶತಕ್ಷೋಣಿ ತವಿಸುವರೆ ನನಗೊಂದು ದಿನ ಮೂ ದಿವಸದಲಿ ಗುರುವೈದು ದಿವಸಕೆ ರವಿಜ ನಿಮಿಷಕೆ ದ್ರೌಣಿ ನಿಮಿಷಾರ್ಧಕೆ ಧನಂಜಯನು
avaroḷēḷakakṣōṇibala na mmavaroḷage hannoṃdu mattava rivara sakhyake neredudēkādaśaśatakṣōṇi tavisuvare nanagoṃdu dina mū divasadali guruvaidu divasake ravija nimiṣake drauṇi nimiṣārdhake dhanaṃjayanu
ಎನಲು ಗುರುತನಯನ ಸಘಾಟಕೆ ಕೊನರಿತಾತನ ಮನವಜಾಂಡಕೆ ತನುಪುಲಕದುಬ್ಬಿನಲಿ ಪಾರ್ಥನ ಪಟುಪರಾಕ್ರಮಕೆ ಮೊನೆಗಣೆಯ ನುಡಿ ಸೋಂಕೆ ಕರ್ಣವ ನಿನಿತು ಕುಸಿದ ರಸಾತಳಕೆ ಕುರು ಜನಪನನಿಬದ್ಧ ಪ್ರಲಾಪವ ಬಿಡಿಸಿದನು ಭೀಷ್ಮ
enalu gurutanayana saghāṭake konaritātana manavajāṃḍake tanupulakadubbinali pārthana paṭuparākramake monegaṇeya nuḍi sōṃke karṇava ninitu kusida rasātaḷake kuru janapananibaddha pralāpava biḍisidanu bhīṣma
ತಾಗಲನುಗೈದುಭಯಬಲ ಕೈ ಲಾಗನೀಕ್ಷಿಸುತಿರಲು ರಿಪುಬಲ ಸಾಗರದ ಸೌರಂಭವನು ಮಿಗೆ ನೋಡಿ ಧರ್ಮಜನು ತೂಗಿದನು ಶಿರವನು ಮಹಾಹವ ಮೀಗಲಾಗದ ಮುನ್ನ ಭೇದದ ಲಾಗಿನಲಿ ಭೀಷ್ಮಾದಿಗಳ ಮನವೊಲಿಸಬೇಕೆಂದ
tāgalanugaidubhayabala kai lāganīkṣisutiralu ripubala sāgarada sauraṃbhavanu mige nōḍi dharmajanu tūgidanu śiravanu mahāhava mīgalāgada munna bhēdada lāginali bhīṣmādigaḷa manavolisabēkeṃda
ಬಂದು ಭೀಷ್ಮನ ಚರಣ ಕಮಲ ದ್ವಂದ್ವದಲಿ ಚಾಚಿದನು ಮಕುಟವ ನಿಂದಿನಾಹವದೊಳಗೆ ನಮಗಿನ್ನೇನು ನಿರ್ವಾಹ ನಿಂದು ನೀವ್ ಕಾದುವರೆ ನಮಗಿ ನ್ನೆಂದು ಹರಿವುದು ಬವರವೆಮಗೇ ನೆಂದು ಬೆಸಸಿದಿರೆನುತ ಕರುಣವ ತೋರಿದನು ಭೂಪ
baṃdu bhīṣmana caraṇa kamala dvaṃdvadali cācidanu makuṭava niṃdināhavadoḷage namaginnēnu nirvāha niṃdu nīv kāduvare namagi nneṃdu harivudu bavaravemagē neṃdu besasidirenuta karuṇava tōridanu bhūpa
ನೀವರಿಯಲಾವುತ್ತರಾಯಿಗ ಳಾವ ಪರಿಯಲು ಕೌರವರು ಬಹ ಳಾವಮಾನವನೆಮಗೆ ನೆಗಳಿದರೆಮ್ಮ ಸತ್ಯವನು ನೀವು ಮೆಚ್ಚಲು ನಡೆಸಿದೆವು ತಲೆ ಗಾವುದುಂಟೇ ಕರುಣಿಸಲ್ಲದ ಡಾವ ಹದನೆಂದವಗೆ ನೇಮವ ಕೊಟ್ಟು ಕಳುಹೆಂದ
nīvariyalāvuttarāyiga ḷāva pariyalu kauravaru baha ḷāvamānavanemage negaḷidaremma satyavanu nīvu meccalu naḍesidevu tale gāvuduṃṭē karuṇisallada ḍāva hadaneṃdavage nēmava koṭṭu kaḷuheṃda
ಏಳು ಮಗನೇ ನಮ್ಮ ಮತಿಯನು ಕೇಳೆನುತ ಭೂಪಾಲ ತಿಲಕನ ಮೌಳಿಯನು ನೆಗಹಿದನು ಗಂಗಾಸೂನು ನಸುನಗುತ ಆಳುಗೊಂಡನು ಕೌರವನು ಪರ ರಾಳುತನವೆಮಗಾಯ್ತು ಪರಸೇ ವಾ ಲಘುಸ್ಥಿತರೆಮ್ಮನೇತಕೆ ನುಡಿಸಿದಪೆಯೆಂದ
ēḷu maganē namma matiyanu kēḷenuta bhūpāla tilakana mauḷiyanu negahidanu gaṃgāsūnu nasunaguta āḷugoṃḍanu kauravanu para rāḷutanavemagāytu parasē vā laghusthitaremmanētake nuḍisidapeyeṃda
ಹಿರಿಯನಾಗಲಿ ಸುಜನನಾಗಲಿ ಗರುವನಾಗಲಿ ಅರ್ಥವುಳ್ಳನ ಚರಣಸೇವಾಪರರು ಜಗದಲಿ ವರ್ತಮಾನವಿದು ಪರರ ಭಜಕರೊಳಾವಗುಣವಾ ವಿರವದಾವಗ್ಗಳಿಕೆ ಯಾವುದು ಗರುವತನವೈ ತಂದೆ ಪುರುಷಾಧಮನು ತಾನೆಂದ
hiriyanāgali sujananāgali garuvanāgali arthavuḷḷana caraṇasēvāpararu jagadali vartamānavidu parara bhajakaroḷāvaguṇavā viravadāvaggaḷike yāvudu garuvatanavai taṃde puruṣādhamanu tāneṃda
ಕೌರವನ ಧನವೆಂಬ ಘನಸಂ ಸಾರಗುಣದೊಳು ಬದ್ಧನಾದೆನು ಧೀರ ನಾನೇಗೈವೆನೆನೆ ಯಮಸೂನು ಕೈಮುಗಿದು ವೈರವೃತ್ತಿಯ ರಣದೊಳೆಮಗಿ ನ್ನಾರು ಗತಿ ನೀನುಭಯನೃಪರಿಗೆ ಕಾರುಣಿಕ ನೀ ಮುನಿದಡೆಮಗಿನ್ನಾಸೆಯಿಲ್ಲೆಂದ
kauravana dhanaveṃba ghanasaṃ sāraguṇadoḷu baddhanādenu dhīra nānēgaivenene yamasūnu kaimugidu vairavr̥ttiya raṇadoḷemagi nnāru gati nīnubhayanr̥parige kāruṇika nī munidaḍemaginnāseyilleṃda
ಮಾನನಿಧಿ ಕೇಳ್ ಕೌರವಂಗಾ ಧೀನವೆನ್ನಯ ತನು ವಿಧಾತ್ರಾ ಧೀನವೆನ್ನಯ ಜೀವವದು ಕಾರಣದಿನಾವಹಕೆ ನೀನು ಚಿಂತಿಸಬೇಡ ನನ್ನವ ಸಾನಕಾಲಕೆ ಮತ್ತೆ ಬರಲು ನಿ ದಾನವನು ನೆರೆ ಬುದ್ಧಿಗಲಿಸುವೆನೀಗ ಮರಳೆಂದ
mānanidhi kēḷ kauravaṃgā dhīnavennaya tanu vidhātrā dhīnavennaya jīvavadu kāraṇadināvahake nīnu ciṃtisabēḍa nannava sānakālake matte baralu ni dānavanu nere buddhigalisuvenīga maraḷeṃda
ಎನೆ ಹಸಾದವೆನುತ್ತ ಯಮನಂ ದನನು ಕಳುಹಿಸಿಕೊಂಡು ಗಂಗಾ ತನುಜನುಚಿತೋಕ್ತಿಗಳ ನೆನೆದಡಿಗಡಿಗೆ ಪುಳಕಿಸುತ ವಿನುತಮತಿ ನಡೆತರಲು ಸುಭಟರು ತನತನಗೆ ತೊಲಗಿದರು ಪಾಂಡವ ಜನಪ ಮೈಯಿಕ್ಕಿದನು ದ್ರೋಣನ ಚರಣ ಕಮಲದಲಿ
ene hasādavenutta yamanaṃ dananu kaḷuhisikoṃḍu gaṃgā tanujanucitōktigaḷa nenedaḍigaḍige puḷakisuta vinutamati naḍetaralu subhaṭaru tanatanage tolagidaru pāṃḍava janapa maiyikkidanu drōṇana caraṇa kamaladali
ಅರಸ ಬಂದನಪೂರ್ವವಾಯಿತು ದರುಶನವು ತನಗೆನುತ ಗರುಡಿಯ ಗುರು ಮಹೀಪಾಲಕನ ಮಕುಟವನೆತ್ತಿದನು ಬಳಿಕ ಬರಸೆಳೆದು ಬಿಗಿಯಪ್ಪಿದನು ಸಂ ಗರದ ಸಮಯದಲೇಕೆ ಬಂದಿರಿ ಭರವಸದ ಬಗೆಯೇನು ಬಿನ್ನಹ ಮಾಡು ಸಾಕೆಂದ
arasa baṃdanapūrvavāyitu daruśanavu tanagenuta garuḍiya guru mahīpālakana makuṭavanettidanu baḷika baraseḷedu bigiyappidanu saṃ garada samayadalēke baṃdiri bharavasada bageyēnu binnaha māḍu sākeṃda
ಎವಗೆ ದೈವವು ನೀನು ಗುರು ನೀ ನೆವಗೆ ತಾತನು ನೀನು ಮಹದಾ ಹವದೊಳಗೆ ಪತಿಕರಿಸಿ ರಕ್ಷಿಸಲೊಡೆಯ ನೀನೆಮಗೆ ಅವನಿಯಭಿಲಾಷೆಯಲಿ ತೆತ್ತುದು ಬವರವೆಮಗಿನ್ನೇನು ಗತಿ ಕೌ ರವ ಜಯೋಪಾಯಕ್ಕೆ ಹದನೇನೆಂದು ನೃಪ ನುಡಿದ
evage daivavu nīnu guru nī nevage tātanu nīnu mahadā havadoḷage patikarisi rakṣisaloḍeya nīnemage avaniyabhilāṣeyali tettudu bavaravemaginnēnu gati kau rava jayōpāyakke hadanēneṃdu nr̥pa nuḍida
ಅರಸ ಕೇಳರ್ಥಕ್ಕೆ ಧರಣೀ ಶ್ವರರ ಕಿಂಕರರರ್ಥ ತಾ ಕಿಂ ಕರತೆಯನು ಮಾಡುವುದು ಜಗದಲಿ ವರ್ತಮಾನವಿದು ನಿರುತ ಕೌರವನರ್ಥದಲಿ ಕಿಂ ಕರತೆಯೆಮಗಾಯಿತ್ತು ರಾಜ್ಯೈ ಶ್ವರಿಯ ಸೇವಾಪರರಿಗೀ ಸ್ವಾತಂತ್ರ್ಯವಿಲ್ಲೆಂದ
arasa kēḷarthakke dharaṇī śvarara kiṃkararartha tā kiṃ karateyanu māḍuvudu jagadali vartamānavidu niruta kauravanarthadali kiṃ karateyemagāyittu rājyai śvariya sēvāpararigī svātaṃtryavilleṃda
ಆದರೆಮಗಿನ್ನೇನು ಗತಿ ರಣ ವಾದಸಿದ್ಧಿಯದೆಂತು ಜಯಸಂ ಪಾದಕರು ನಮಗಾರೆನಲು ಗುರು ಕೇಳಿ ನಸುನಗುತ ಕಾದುವಾ ಸಮಯದೊಳಗಪ್ರಿಯ ವಾದ ನುಡಿಗಳ ಕೇಳಿದಾಕ್ಷಣ ಮೇದಿನಿಯೊಳಾವಿರೆವು ಚಿಂತಿಸಬೇಡ ಹೋಗೆಂದ
ādaremaginnēnu gati raṇa vādasiddhiyadeṃtu jayasaṃ pādakaru namagārenalu guru kēḷi nasunaguta kāduvā samayadoḷagapriya vāda nuḍigaḷa kēḷidākṣaṇa mēdiniyoḷāvirevu ciṃtisabēḍa hōgeṃda
ಎನಲು ಪರಿತೋಷದಲಿ ಯಮನಂದ ನನು ಕಳುಹಿಸಿಕೊಂಡು ನಡೆತಂ ದನು ಮಹಾಹವರಂಗಮಧ್ಯದ ಕೃಪನ ಹೊರೆಗಾಗಿ ವಿನಯದಲಿ ಬಿನ್ನಯಿಸೆ ಕೃಪನೆಂ ದನು ನಿಧಾನಿಸಲಾವವಧ್ಯರು ಜನಪ ನಿನ್ನನು ನಾವು ಕೊಲ್ಲೆವು ಮರಳು ನೀನೆಂದ
enalu paritōṣadali yamanaṃda nanu kaḷuhisikoṃḍu naḍetaṃ danu mahāhavaraṃgamadhyada kr̥pana horegāgi vinayadali binnayise kr̥paneṃ danu nidhānisalāvavadhyaru janapa ninnanu nāvu kollevu maraḷu nīneṃda
ಕೃಪನ ಬೀಳ್ಕೊಂಡತುಳಜಯಲೋ ಲುಪನು ಶಲ್ಯನ ಬಂದು ಕಂಡನು ವಿಪುಳಮತಿ ಮಾತಾಡಿದನು ನಿಜರಾಜಕಾರಿಯವ ಕೃಪೆಯ ಮಾಡುವುದೆವಗೆ ರಣದಲಿ ತಪನತನಯನ ತೇಜವನು ನಿ ಷ್ಕೃಪೆಯೊಳವಗಡಿಸೆಂದು ಶಲ್ಯನೊಳಭಯವನು ಪಡೆದ
kr̥pana bīḷkoṃḍatuḷajayalō lupanu śalyana baṃdu kaṃḍanu vipuḷamati mātāḍidanu nijarājakāriyava kr̥peya māḍuvudevage raṇadali tapanatanayana tējavanu ni ṣkr̥peyoḷavagaḍiseṃdu śalyanoḷabhayavanu paḍeda
ಬಲದೊಳಗೆ ಬೇಹವರ ನಾಲ್ವರ ನೊಳಗುಮಾಡಿ ಧರಾಧಿಪನು ಮನ ಗೆಲವಿನಲಿ ಮರಳಿದನು ಕೌರವ ಮೋಹರವನುಳಿದು ತಿಳಿದು ತನ್ನೊಳು ಭೀಮಸೇನನ ಬಲು ಗದಾಘಾತದಲಿ ಕುರುಕುಲ ವಳಿವುದೆಂದು ಯುಯುತ್ಸು ರಥದಿಂದಿಳಿದು ನಡೆತಂದ
baladoḷage bēhavara nālvara noḷagumāḍi dharādhipanu mana gelavinali maraḷidanu kaurava mōharavanuḷidu tiḷidu tannoḷu bhīmasēnana balu gadāghātadali kurukula vaḷivudeṃdu yuyutsu rathadiṃdiḷidu naḍetaṃda
ಎರಡು ಬಲ ಬೆರಗಾಗಿ ನೋಡು ತ್ತಿರೆ ಯುಯುತ್ಸು ಮಹೀಶನಂಘ್ರಿಗೆ ಕರವ ಮುಗಿದೆರಗಿದರೆ ಹಿಡಿದೆತ್ತಿದನು ಕರುಣದಲಿ ಧರಣಿಪತಿ ನೀನಾರೆನಲು ಕೇ ಳರಸ ಕೌರವನನುಜ ನಿಮ್ಮನು ಶರಣುವೊಗಲೈತಂದೆಯಭಯವನಿತ್ತು ಸಲಹೆಂದ
eraḍu bala beragāgi nōḍu ttire yuyutsu mahīśanaṃghrige karava mugideragidare hiḍidettidanu karuṇadali dharaṇipati nīnārenalu kē ḷarasa kauravananuja nimmanu śaraṇuvogalaitaṃdeyabhayavanittu salaheṃda
ಹಿಂದೆ ರಾವಣನನುಜನಿರದೈ ತಂದು ಶರಣಾಗತರ ರಕ್ಷಿಪ ನೆಂದು ರಾಘವನಂಘ್ರಿಕಮಲವ ಕಂಡು ಬದುಕಿದನು ಇಂದು ನಿಮ್ಮಂಘ್ರಿಗಳ ಮರೆವೊಗ ಬಂದೆನೆನ್ನನು ಪತಿಕರಿಸಬೇ ಕೆಂದು ಕೌರವನನುಜ ಬಿನ್ನಯಿಸಿದನು ಭೂಪತಿಗೆ
hiṃde rāvaṇananujaniradai taṃdu śaraṇāgatara rakṣipa neṃdu rāghavanaṃghrikamalava kaṃḍu badukidanu iṃdu nimmaṃghrigaḷa marevoga baṃdenennanu patikarisabē keṃdu kauravananuja binnayisidanu bhūpatige
ಎನಗೆ ಭೀಮಾರ್ಜುನರವೊಲು ನೀ ನನುಜನಲ್ಲದೆ ಬೇರೆ ನಿನ್ನಲಿ ಮನವಿಭೇದವ ಬಲ್ಲೆನೇ ಬಾಯೆನುತ ಕೈವಿಡಿದು ಜನಪನಭಯವನಿತ್ತು ಕೌರವ ನನುಜನನುಕೊಂಡೊಯ್ದನಾಹವ ದನುಕರಣೆಯಲಿ ಸೇನೆ ಗಜಬಜಿಸಿತ್ತು ಬೊಬ್ಬೆಯಲಿ
enage bhīmārjunaravolu nī nanujanallade bēre ninnali manavibhēdava ballenē bāyenuta kaiviḍidu janapanabhayavanittu kaurava nanujananukoṃḍoydanāhava danukaraṇeyali sēne gajabajisittu bobbeyali
Keys: ← → turn the page, J K step through the verses.
Illustration: Verse & Place (Project-owned).