ಸಮರದನುಸಂಧಾನದಲಿ ಸಂ ಭ್ರಮಿಸಿ ಶೌರಿ ಸಮೀರಸುತನಲಿ ಸಮತೆಯನು ಸೇರಿಸಿದನಂದು ಸಮಗ್ರ ಸೂಕ್ತಿಯಲಿ
samaradanusaṃdhānadali saṃ bhramisi śauri samīrasutanali samateyanu sērisidanaṃdu samagra sūktiyali
ಉದ್ಯೋಗ ಪರ್ವ — ಸಂಧಿ ೬ · ಉದ್ಯೋಗ ಪರ್ವ — ಸಂಧಿ ೬
udyōga parva — saṃdhi 6
The complete udyoga parva · sandhi 6 in Kannada.
30 passagesKannada with transliteration
Invocation
ಸಮರದನುಸಂಧಾನದಲಿ ಸಂ ಭ್ರಮಿಸಿ ಶೌರಿ ಸಮೀರಸುತನಲಿ ಸಮತೆಯನು ಸೇರಿಸಿದನಂದು ಸಮಗ್ರ ಸೂಕ್ತಿಯಲಿ
samaradanusaṃdhānadali saṃ bhramisi śauri samīrasutanali samateyanu sērisidanaṃdu samagra sūktiyali
ಕೇಳು ಜನಮೇಜಯ ಧರಿತ್ರೀ ಪಾಲ ಧರ್ಮಜನಹಿತ ಮಂತ್ರಿಯ ಬೀಳುಕೊಟ್ಟನು ಬಂದನಸುರಾರಾತಿಯಿದ್ದೆಡೆಗೆ ಮೇಲಣನುವಿನ್ನೇನು ಲಕ್ಷ್ಮೀ ಲೋಲ ಕರುಣಿಸು ಕೌರವ ಕ್ಷಿತಿ ಪಾಲಕರಲೆನಗೇನು ಘಟಿಸುವುದೆಂದ ಯಮಸೂನು
kēḷu janamējaya dharitrī pāla dharmajanahita maṃtriya bīḷukoṭṭanu baṃdanasurārātiyiddeḍege mēlaṇanuvinnēnu lakṣmī lōla karuṇisu kaurava kṣiti pālakaralenagēnu ghaṭisuvudeṃda yamasūnu
ಕ್ಷಮೆಗೆ ಸೇರುವರಲ್ಲ ಮೂರ್ಖರು ಕುಮತಿಗಳು ಮುಂದರಿಯದವರ ಕ್ರಮವ ನೆಗಳಿದಡಳಿವುದನ್ವಯದಮಳ ಕೀರ್ತಿಗಳು ನಮಗೆ ಹದನೇನಿನ್ನು ಸಂಧಿಯೊ ಸಮರವೋ ಚಿತ್ತೈಸಬೇಹುದು ಕಮಲಲೋಚನಯೆಂದು ಬಿನ್ನೈಸಿದನು ಯಮಸೂನು
kṣamege sēruvaralla mūrkharu kumatigaḷu muṃdariyadavara kramava negaḷidaḍaḷivudanvayadamaḷa kīrtigaḷu namage hadanēninnu saṃdhiyo samaravō cittaisabēhudu kamalalōcanayeṃdu binnaisidanu yamasūnu
ಏನು ನಿನ್ನಭಿಮತವು ವರಸಂ ಧಾನವೋ ಸಂಗ್ರಾಮವೋ ನಯ ವೇನು ಮನದೋವರಿಯೊಳಿರಿಸದೆ ಹೇಳು ನಿಶ್ಚಯವ ನೀನೊಲಿದ ಹದನಾವುದದನೊಲಿ ದಾನು ಘಟಿಸುವೆನೆಂದು ಕುಂತೀ ಸೂನುವನು ಬೆಸಗೊಂಡನಸುರವಿರೋಧಿ ನಸುನಗುತ
ēnu ninnabhimatavu varasaṃ dhānavō saṃgrāmavō naya vēnu manadōvariyoḷirisade hēḷu niścayava nīnolida hadanāvudadanoli dānu ghaṭisuveneṃdu kuṃtī sūnuvanu besagoṃḍanasuravirōdhi nasunaguta
ಅಳಿವುವೊಡಲುಗಳವನಿ ಸಾಗರ ವುಳಿಯಲುಳಿವುದು ಕೀರ್ತಿ ಸೋದರ ರೊಳಗೊಳಗೆ ಹೊಯ್ದಾಡಿ ಕೆಟ್ಟರುಯೆಂಬ ದುರಿಯಶದ ಹಳಿವು ಹೊರುವುದು ದೇವ ಸುಡಲಾ ನೆಲನನಾ ಕೌರವನ ಕೈಯಲಿ ಕೆಲವು ನಗರಿಯ ಕೊಡಿಸಿ ನಮ್ಮನು ಸಂತವಿಡಿಯೆಂದ
aḷivuvoḍalugaḷavani sāgara vuḷiyaluḷivudu kīrti sōdara roḷagoḷage hoydāḍi keṭṭaruyeṃba duriyaśada haḷivu horuvudu dēva suḍalā nelananā kauravana kaiyali kelavu nagariya koḍisi nammanu saṃtaviḍiyeṃda
ವರ ಕುಶಸ್ಥಳವನು ವೃಕಸ್ಥಳ ಪುರವನಾವಂತಿಯನು ಕೌರವ ಧರಣಿಪಾಲನಲೀಸಿಕೊಡುವುದು ವಾರಣಾವತವ ಶರಧಿ ಮೇರೆಯೊಳೈದನೆಯಪುರ ವರವನೊಲಿದುದ ಕೊಡಲಿ ಮನಮ ತ್ಸರವ ಮರೆದೋಲೈಸುವೆವು ಧೃತರಾಷ್ಟ್ರನಂಘ್ರಿಗಳ
vara kuśasthaḷavanu vr̥kasthaḷa puravanāvaṃtiyanu kaurava dharaṇipālanalīsikoḍuvudu vāraṇāvatava śaradhi mēreyoḷaidaneyapura varavanoliduda koḍali manama tsarava maredōlaisuvevu dhr̥tarāṣṭranaṃghrigaḷa
ನೀವು ಬಿಜಯಂಗೈದು ಸಂಧಿಯ ನಾವ ಪರಿಯಲಿ ಘಟಿಸಿ ಕುರುಭೂ ಪಾವಳಿಯೊಳೆಮ್ಮಿರವು ಸಂಭವಿಸುವವೊಲೆಸಗುವುದು ಲಾವಕರ ನುಡಿಗಳಲಿ ಕೆಡುವುದು ಕೋವಿದರ ಮತವವರ ಮೇಲೆಮ ಗಾವ ಮನಮುನಿಸಿಲ್ಲ ಸಂಧಿಯ ಘಟಿಸಿ ಸಾಕೆಂದ
nīvu bijayaṃgaidu saṃdhiya nāva pariyali ghaṭisi kurubhū pāvaḷiyoḷemmiravu saṃbhavisuvavolesaguvudu lāvakara nuḍigaḷali keḍuvudu kōvidara matavavara mēlema gāva manamunisilla saṃdhiya ghaṭisi sākeṃda
ಎನೆ ಮುರಾಂತಕನಳುಕಿ ಯಮನಂ ದನನ ನುಡಿ ಸಂಧಾನದಲಿ ಸಂ ಜನಿಸಿತಾದೊಡೆ ಕಾಣೆನವನಿಯ ಹೊರಗೆ ಹರಿವುಗಳ ಮನದೊಳನುಸಂಧಾನವಂತಕ ತನುಜನಲಿ ತೊಳಸಾಯ್ತು ತೋಟಿಯ ನೆನಹು ತಾನೇನೆನುತ ಚಿಂತಿಸುತಿರ್ದನಸುರಾರಿ
ene murāṃtakanaḷuki yamanaṃ danana nuḍi saṃdhānadali saṃ janisitādoḍe kāṇenavaniya horage harivugaḷa manadoḷanusaṃdhānavaṃtaka tanujanali toḷasāytu tōṭiya nenahu tānēnenuta ciṃtisutirdanasurāri
ಎಲೆ ಕೃತಾಂತಜ ವೈರಿಭೂಮಿಪ ಕುಲ ಕೃತಾಂತ ಸರಾಗನಹೆನಿ ರ್ಮಲಿನ ಧರ್ಮದಲಾ ಸುಯೋಧನನಧಿಕ ಕಲ್ಮಷನು ನೆಲವ ಕೊಡಲರಿಯನು ವೃಥಾಕ ಕ್ಕುಲಿತೆಯಲ್ಲದೆ ಕಾಣೆನಿದರಲಿ ಫಲವನೆನುತಸುರಾರಿ ನುಡಿದನು ಧರ್ಮತನಯಂಗೆ
ele kr̥tāṃtaja vairibhūmipa kula kr̥tāṃta sarāganaheni rmalina dharmadalā suyōdhananadhika kalmaṣanu nelava koḍalariyanu vr̥thāka kkuliteyallade kāṇenidarali phalavanenutasurāri nuḍidanu dharmatanayaṃge
ಅರಸನಭಿಮತವಿಂದು ಸಂಧಿಗೆ ಮರಳಿತೆಲೆ ಪವಮಾನಸುತ ನಿ ನ್ನರಿತವಾವುದು ಮನವ ವಂಚಿಸಬೇಡ ಹೇಳೆನಲು ಧರಣಿಪತಿ ತಪ್ಪುವನೆ ಕರ್ಕಶ ಭರದ ಕದನದಲೇನು ಫಲ ಸೋ ದರರ ವಧೆಗೊಡಬಡುವನಲ್ಲಸುರಾರಿ ಕೇಳೆಂದ
arasanabhimataviṃdu saṃdhige maraḷitele pavamānasuta ni nnaritavāvudu manava vaṃcisabēḍa hēḷenalu dharaṇipati tappuvane karkaśa bharada kadanadalēnu phala sō darara vadhegoḍabaḍuvanallasurāri kēḷeṃda
ಹಗೆಯೊಳೆಮ್ಮವರೊಳಗೆ ಎದೆಗಿ ಚ್ಚುಗಳ ಖುಲ್ಲ ಕುಠಾರರಪನಂ ಬುಗೆಯ ಬಳಸಿದರದು ಪುರಾಕೃತ ಕರ್ಮದವಶೇಷ ಬಗೆಯೆನವಮಾನವನು ಕೌರವ ರಗಡು ಮಾಡಿದರೆಂಬ ಚಿತ್ತದ ದುಗುಡವಿಂದೆಮಗಿಲ್ಲ ಸಂಧಿಯ ರಚಿಸಿ ಸಾಕೆಂದ
hageyoḷemmavaroḷage edegi ccugaḷa khulla kuṭhārarapanaṃ bugeya baḷasidaradu purākr̥ta karmadavaśēṣa bageyenavamānavanu kaurava ragaḍu māḍidareṃba cittada duguḍaviṃdemagilla saṃdhiya racisi sākeṃda
ಎಲೆ ಮಹಾದೇವಾಯ್ತು ಹಾಲಾ ಹಲ ಸುಧಾರಸ ಉಕ್ಕಿದುರಿಯ ಗ್ಗಳದ ಶೀತಳವಾಯ್ತು ಸಿಡಿಲಾಟೋಪ ನಯವಾಯ್ತು ಕೊಳೂಗುಳಕೆ ಪವಮಾನನಂದನ ನಳುಕಿದನು ಮಝಮಾಯೆ ಕುಂತೀ ಲಲನೆ ಹೆತ್ತಳು ಸುತರನೆಂದನು ಶೌರಿ ನಸುನಗುತ
ele mahādēvāytu hālā hala sudhārasa ukkiduriya ggaḷada śītaḷavāytu siḍilāṭōpa nayavāytu koḷūguḷake pavamānanaṃdana naḷukidanu majhamāye kuṃtī lalane hettaḷu sutaraneṃdanu śauri nasunaguta
ಈತನಭಿಮತವಿದು ಜಗದ್ವಿ ಖ್ಯಾತ ಸಾಹಸಿ ಪಾರ್ಥ ಹೇಳೈ ನೂತನಾಳಾಪವನು ಕೇಳ್ವೆವು ಶ್ರುತಿರಸಾಯನವ ಭೀತಿ ಬೇಡೆಂದೆನಲು ನಮಗಿ ನ್ನೇತರಭಿಮತವೇನ ಹೇಳಿದೊ ಡಾತುಕೊಳ್ವೆನು ಶಿರದೊಳೆಂದನು ಪಾರ್ಥ ಕೈಮುಗಿದು
ītanabhimatavidu jagadvi khyāta sāhasi pārtha hēḷai nūtanāḷāpavanu kēḷvevu śrutirasāyanava bhīti bēḍeṃdenalu namagi nnētarabhimatavēna hēḷido ḍātukoḷvenu śiradoḷeṃdanu pārtha kaimugidu
ನಕುಲ ನೀ ಹೇಳೇನು ಹದನಿ ನ್ನುಕುತಿ ಸಾಮವೊ ಮೇಣು ಸಮರವೊ ಸುಕರ ಮಂತ್ರವನರುಹು ನೀನೆಮಗಂಜಬೇಡೆನಲು ಯುಕುತಿ ನಮಗಿನ್ನೇನುಭಯರಾ ಜಕವ ಸಂತೈಸುವುದು ಬೇರೆ ಮ್ಮುಕುತಿಯೆಲ್ಲಿಯದೆಂದನಾ ಮಾದ್ರೇಯ ವಿನಯದೊಳು
nakula nī hēḷēnu hadani nnukuti sāmavo mēṇu samaravo sukara maṃtravanaruhu nīnemagaṃjabēḍenalu yukuti namaginnēnubhayarā jakava saṃtaisuvudu bēre mmukutiyelliyadeṃdanā mādrēya vinayadoḷu
ಆವುದಭಿಮತವೇನು ಹದ ಸಹ ದೇವ ನೀ ಹೇಳೆನಲು ಬಿನ್ನಹ ದೇವ ಸೇರದು ಸಂಧಿ ಸಂಗರವೆಮಗೆ ಸೇರುವುದು ಆವ ವಿಧದಲಿ ಸಮರವನೆ ಸಂ ಭಾವಿಸುವುದೆನೆ ನಗುತ ವರರಾ ಜೀವನಾಭನು ಕಳುಹಿದನು ದ್ರೌಪದಿಗೆ ಚರರುಗಳ
āvudabhimatavēnu hada saha dēva nī hēḷenalu binnaha dēva sēradu saṃdhi saṃgaravemage sēruvudu āva vidhadali samaravane saṃ bhāvisuvudene naguta vararā jīvanābhanu kaḷuhidanu draupadige cararugaḷa
ದೇವಿ ಚಿತ್ತೈಸುವುದು ವರವಸು ದೇವನಂದನಟ್ಟಿದನು ಸಂ ಭಾವಿಸುವುದರಿರಾಯರಲಿ ಸಂಧಾನ ಸಂರಂಭ ನೀವು ಬಿಜಯಂಗೈದು ಚಿತ್ತದೊ ಳಾವ ಹದನಾ ಹದನನಾ ರಾ ಜೀವನಾಭಾದಿಗಳಿಗರುಹುವುದೆಂದರಾ ಚರರು
dēvi cittaisuvudu varavasu dēvanaṃdanaṭṭidanu saṃ bhāvisuvudarirāyarali saṃdhāna saṃraṃbha nīvu bijayaṃgaidu cittado ḷāva hadanā hadananā rā jīvanābhādigaḷigaruhuvudeṃdarā cararu
ಏನು ಹದನೇನೆಲವೊ ವರ ಸಂ ಧಾನವೇ ಕೌರವರೊಳದು ಸು ಮ್ಮಾನವೇ ಪತಿಗಳಿಗೆ ಪಾಪಿಗಳಿರಿದರೋ ಸತಿಯ ದಾನವಾಂತಕನೆಸಗುವನೆ ತಪ್ಪೇನು ತಪ್ಪೇನೆನುತ ನಸು ಮಸು ಳ್ದಾನನಾಂಬುಜವದನೆ ಬಂದಳು ಕೃಷ್ಣನೋಲಗಕೆ
ēnu hadanēnelavo vara saṃ dhānavē kauravaroḷadu su mmānavē patigaḷige pāpigaḷiridarō satiya dānavāṃtakanesaguvane tappēnu tappēnenuta nasu masu ḷdānanāṃbujavadane baṃdaḷu kr̥ṣṇanōlagake
ಭ್ರೂಲತೆಯ ಸುರಚಾಪದುರುಕೇ ಶಾಳಿಗಳ ಕಾರ್ಮುಗಿಲಪಾಂಗದ ಸಾಲ ಕುಡಿಮಿಂಚುಗಳ ನೂಪುರರವದ ಮೊಳಗುಗಳ ಆ ಲತಾಂಗಿಯ ಗಮನವೇ ಮಳೆ ಗಾಲದಂತಿರೆ ಧಾರ್ತರಾಷ್ಟ್ರ ಕು ಲಾಳಿ ನಿಲುವುದೆ ಪವನಜನ ಸಂಪ್ರತಿಯ ಸೇರುವೆಗೆ
bhrūlateya suracāpadurukē śāḷigaḷa kārmugilapāṃgada sāla kuḍimiṃcugaḷa nūpuraravada moḷagugaḷa ā latāṃgiya gamanavē maḷe gāladaṃtire dhārtarāṣṭra ku lāḷi niluvude pavanajana saṃpratiya sēruvege
ಕವಿದ ಚಿತ್ರಾವಳಿಯ ದಡ್ಡಿಯ ವಿವಿಧ ಭಟರುಗ್ಗಡಣೆಯಲಿ ವರ ಯುವತಿ ಬಂದಳು ಸಖಿಯರೊಯ್ಯಾರದಲಿ ನೃಪಸಭೆಗೆ ನವ ಬಲಾಹಕದೊಳಗೆ ಮಿಂಚಿನ ಗವಿ ಸಹಿತ ಮರಿಮೋಡವಾವಿ ರ್ಭವಿಸಿತೆನೆ ದಂಡಿಗೆಯ ನಿಳಿದಳು ಹೊಕ್ಕಳೋಲಗವ
kavida citrāvaḷiya daḍḍiya vividha bhaṭaruggaḍaṇeyali vara yuvati baṃdaḷu sakhiyaroyyāradali nr̥pasabhege nava balāhakadoḷage miṃcina gavi sahita marimōḍavāvi rbhavisitene daṃḍigeya niḷidaḷu hokkaḷōlagava
ಎಲೆ ಸಮೀರಕುಮಾರ ಸಂಪ್ರತಿ ಗೆಳಸಿದೈ ಕಲಿತನವ ನೀರೊಳು ಕಲಕಿದೈ ಕೈವಾರವಾದುದೆ ಕೌರವೇಂದ್ರನಲಿ ಕಲಿಸಿದೈ ಕೃಷ್ಣಂಗೆ ನೀತಿಯ ಬಳಸಿದೈ ಬಹುಮತವ ನರಕದೊ ಳಿಳಿಸಿದೈ ಶಶಿಕುಲವನೆಂದನಿಲಜನ ನೋಡಿದಳು
ele samīrakumāra saṃprati geḷasidai kalitanava nīroḷu kalakidai kaivāravādude kauravēṃdranali kalisidai kr̥ṣṇaṃge nītiya baḷasidai bahumatava narakado ḷiḷisidai śaśikulavaneṃdanilajana nōḍidaḷu
ಬೇಡಲಟ್ಟುವನೇ ಮಹೀಪತಿ ನಾಡೊಳೈದೂರುಗಳನವರಲಿ ಮಾಡುವಾತನು ಕೃಷ್ಣನೇ ಸಂಧಾನವನು ನಿಮಗೆ ಕೇಡಿಗರ ಕೌರವ ನೃಪಾಲರ ಕೂಡಿಬದುಕುವ ಭೀಮಸೇನನೆ ರೂಢಿಸಿತಲಾ ನಿಮ್ಮ ಸಿರಿ ಸೋದರರ ಸೇರುವೆಗೆ
bēḍalaṭṭuvanē mahīpati nāḍoḷaidūrugaḷanavarali māḍuvātanu kr̥ṣṇanē saṃdhānavanu nimage kēḍigara kaurava nr̥pālara kūḍibadukuva bhīmasēnane rūḍhisitalā nimma siri sōdarara sēruvege
ಯತಿಗಳಾದಿರಿ ನೀವು ರೋಷ ಚ್ಯುತರಲೇ ಬಳಿಕೇನು ಧರ್ಮ ಜ್ಞತೆಯ ನೆಲೆಗಳನರಿದ ಮನವೆರಗುವುದೆ ಕಾಳಗಕೆ ಕ್ಷಿತಿಯ ಪಾಲಿಸುವುದು ವಿರೋಧ ವ್ಯತಿಕರವ ಬಿಸುಡುವುದು ಕುಂತೀ ಸುತರು ಕೌರವನೊಡನೆ ಸುಖದೊಳು ರಾಜ್ಯವಾಳುವುದು
yatigaḷādiri nīvu rōṣa cyutaralē baḷikēnu dharma jñateya nelegaḷanarida manaveraguvude kāḷagake kṣitiya pālisuvudu virōdha vyatikarava bisuḍuvudu kuṃtī sutaru kauravanoḍane sukhadoḷu rājyavāḷuvudu
ಭೀಮ ಬಲವದರಾತಿ ಸೇನಾ ಭೀಮ ಕುರುಕುಲ ಕುಸುಮ ಮಾರ್ಗಣ ಭೀಮ ಮರೆದೈ ಮಾನಿನಿಯ ಘನಮಾನಹಾನಿಗಳ ರಾಮನಬಲೆಗೆ ಕುದಿದ ಬಲು ಸಂ ಗ್ರಾಮವನು ನೀ ಕೇಳಿದರಿಯಾ ಪ್ರೇಮದಲಿ ನೋಡೆನ್ನನೆಂದಳು ದ್ರೌಪದೀ ದೇವಿ
bhīma balavadarāti sēnā bhīma kurukula kusuma mārgaṇa bhīma maredai māniniya ghanamānahānigaḷa rāmanabalege kudida balu saṃ grāmavanu nī kēḷidariyā prēmadali nōḍennaneṃdaḷu draupadī dēvi
ಧರೆಗೆ ಕಟ್ಟಭಿಮಾನ ಹೆಂಡಿರ ಹರಿಬವಾ ಹರಿಬದಲಿ ಕೆಡಹುವು ದರಿಯನವಗಡಿಸಿದರೆ ಸಾವರು ಪಂಥವುಳ್ಳವರು ಸುರನರೋರಗರೊಳಗೆ ನಿಮ್ಮೈ ವರಿಗೆ ಸರಿಯಿಲ್ಲಬಲೆಯೊಬ್ಬಳ ಹರಿಬದಲಿ ಹಂಗಾದಿರೆಂಬಪದೆಸೆಯ ನೋನುವರೆ
dharege kaṭṭabhimāna heṃḍira haribavā haribadali keḍahuvu dariyanavagaḍisidare sāvaru paṃthavuḷḷavaru suranarōragaroḷage nimmai varige sariyillabaleyobbaḷa haribadali haṃgādireṃbapadeseya nōnuvare
ಸೋಲ ಗೆಲ್ಲವದೇಕೆ ಕುರುವಂ ಶಾಳಿಯೊಳು ಸೋದರರು ನೀವ್ ಪಾಂ ಚಾಲರಾವೇ ಹೊರಗು ನಿಮ್ಮೊಳು ಸಲುಗೆ ನಮಗೇಕೆ ಮೇಳವೇ ಸಿರಿಗಳಿಸಲರಿದು ಜ ನಾಳಿ ಹೆಂಡಿರಪೂರ್ವವೇ ಕ್ಷಿತಿ ಪಾಲಕರು ನೀವಾಗಲೆಮಗದು ಪರಮ ಪರಿಣಾಮ
sōla gellavadēke kuruvaṃ śāḷiyoḷu sōdararu nīv pāṃ cālarāvē horagu nimmoḷu saluge namagēke mēḷavē sirigaḷisalaridu ja nāḷi heṃḍirapūrvavē kṣiti pālakaru nīvāgalemagadu parama pariṇāma
ಮುಂದಲೆಯ ಹಿಡಿದೆಳೆದು ಸಭೆಯಲಿ ತಂದು ಸೀರೆಯ ಸುಲಿದಡವದಿರ ಮುಂದೆ ಮೌನದೊಳಿದ್ದರಲ್ಲದೆ ಪತಿಗಳುಸುರಿದಿರೆ ಅಂದು ನೀ ಹಿಂದಿಕ್ಕಿಕೊಂಡುದ ನಿಂದು ಮರೆದೈ ಸಂಧಿಗೋಸುಗ ಮುಂದುವರಿದೈ ಕೃಷ್ಣಯೆಂದಳು ದ್ರೌಪದೀ ದೇವಿ
muṃdaleya hiḍideḷedu sabheyali taṃdu sīreya sulidaḍavadira muṃde maunadoḷiddarallade patigaḷusuridire aṃdu nī hiṃdikkikoṃḍuda niṃdu maredai saṃdhigōsuga muṃduvaridai kr̥ṣṇayeṃdaḷu draupadī dēvi
ತನಯರೈವರು ವೀರ ಸಹದೇ ವನು ಘಟೋತ್ಕಚನೀ ಸುಭದ್ರಾ ತನಯನೆಮ್ಮಯ ತಂದೆ ಮೂರಕ್ಷೋಹಿಣಿಯ ಸೇನೆ ಇನಿಬರೇಕಾದುವರು ದುಶ್ಯಾ ಸನನ ರಕುತವ ಕುಡಿದು ಕುರುಕುಲ ವನವ ಸುಡುವರು ನಿಮ್ಮ ಹಂಗೇಕೆಂದಳಿಂದುಮುಖಿ
tanayaraivaru vīra sahadē vanu ghaṭōtkacanī subhadrā tanayanemmaya taṃde mūrakṣōhiṇiya sēne inibarēkāduvaru duśyā sanana rakutava kuḍidu kurukula vanava suḍuvaru nimma haṃgēkeṃdaḷiṃdumukhi
ವರಸತಿಯ ಬಿಸುಸುಯ್ಲ ಗಾಳಿಗೊ ಳುರಿ ಚಡಾಳಿಸಿ ರೋಷಮಯದು ಬ್ಬರದೊಳೌಡೊತ್ತಿದನು ಹಿಡಿದನು ಖತಿಯ ನಹಿತರೊಳು ತರುಣಿ ಸೈರಿಸು ಸೈರಿಸಿನ್ನೀ ಸುರಿವ ಕಂಬನಿಗಳಿಗೆ ಶತ ಸಾ ವಿರಮಡಿಯ ಕಂಬನಿಯ ಸುರಿಸುವೆ ಹಗೆಯ ಹೆಂಡಿರಲಿ
varasatiya bisusuyla gāḷigo ḷuri caḍāḷisi rōṣamayadu bbaradoḷauḍottidanu hiḍidanu khatiya nahitaroḷu taruṇi sairisu sairisinnī suriva kaṃbanigaḷige śata sā viramaḍiya kaṃbaniya surisuve hageya heṃḍirali
ಉರಿಯೊಗುವ ಮೀಸೆಯನು ಬೆರಳೊಳು ಮುರಿದು ನೆಗಹಿದ ವಾಮಕರದೊಳು ತರುಣಿಯನು ಸಂತೈಸಿ ಕಿಡಿಕಿಡಿಯಾಗಿ ಖಾತಿಯೊಳು ನರಕಮರ್ದನ ಕೇಳು ಕೌರವ ನರಿಗಳಿದಿರೇ ಕೀಳುವೆನು ಕುಲ ಗಿರಿಗಳನು ತೊಡೆವೆನು ಕೃತಾಂತನ ಭಾಳದಕ್ಕರವ
uriyoguva mīseyanu beraḷoḷu muridu negahida vāmakaradoḷu taruṇiyanu saṃtaisi kiḍikiḍiyāgi khātiyoḷu narakamardana kēḷu kaurava narigaḷidirē kīḷuvenu kula girigaḷanu toḍevenu kr̥tāṃtana bhāḷadakkarava
ಯಮಸುತನ ಬಗೆಯೆಂತುಟೆಂದಾ ಕ್ರಮಕೆ ಮೊಗದಿರುಹಿದೆನು ದಿಟವೀ ಕಮಲವದನೆಯ ಹರಿಬವೆನ್ನದು ಪತಿಗಳನಿಬರೊಳು ಎಮಗೆ ಸಂಪ್ರತಿಗಿಲ್ಲಮನ ಘನ ಸಮರವೇ ಸರ್ವಾರ್ಥ ಕೋಪ ಶ್ರಮಕೆ ರಿಪುರುಧಿರಾಂಬುಪಾನವೆ ವಿಪುಳ ಫಲವೆಂದ
yamasutana bageyeṃtuṭeṃdā kramake mogadiruhidenu diṭavī kamalavadaneya haribavennadu patigaḷanibaroḷu emage saṃpratigillamana ghana samaravē sarvārtha kōpa śramake ripurudhirāṃbupānave vipuḷa phalaveṃda
ಕೆಡಹಿರಿಪುವನು ಕರುಳದಂಡೆಯ ಮುಡಿಸುವೆನು ಮಾನಿನಿಗೆ ರಕುತವ ಕುಡ್ಯಲೆರೆವೆನು ಶಾಕಿನಿಯರಿಗೆ ತತ್ಸಹೋದರರ ನಡೆದು ಸಂಧಿಯ ಮಾಡು ಮುರರಿಪು ಕೊಡಿಸು ನಾಲ್ಕೂರುಗಳನಿವರಿಗೆ ತಡೆಯದೆರಡೂರುಗಳ ಕೊಳ್ವೆನು ಕೌರವೇಂದ್ರನೊಳು
keḍahiripuvanu karuḷadaṃḍeya muḍisuvenu māninige rakutava kuḍyalerevenu śākiniyarige tatsahōdarara naḍedu saṃdhiya māḍu muraripu koḍisu nālkūrugaḷanivarige taḍeyaderaḍūrugaḷa koḷvenu kauravēṃdranoḷu
Keys: ← → turn the page, J K step through the verses.
Illustration: Verse & Place (Project-owned).