Skip to content

ವಿರಾಟ ಪರ್ವ — ಸಂಧಿ ೧ · ವಿರಾಟ ಪರ್ವ — ಸಂಧಿ ೧

Virata Parva · Sandhi 1

virāṭa parva — saṃdhi 1

The complete virata parva · sandhi 1 in Kannada.

32 passagesKannada with transliteration

An original emblem for Virata Parva.

Invocation

4.1.opening

ಕಾಯಿದರು ಸತ್ಯವನು ವನವಾ ಸಾಯತವ ನೆರೆಗೆಲಿದು ಪಾಂಡವ ರಾಯರೋಲೈಸಿದರು ಬಂದು ವಿರಾಟನಗರಿಯಲಿ

kāyidaru satyavanu vanavā sāyatava neregelidu pāṃḍava rāyarōlaisidaru baṃdu virāṭanagariyali

ಕೇಳು ಜನಮೇಜಯ ಧರಿತ್ರೀ ಪಾಲ ಮುನಿಜನ ನೃಪಜನಂಗಳ ಬೀಳುಗೊಟ್ಟನು ಭೂಮಿಪತಿ ಬಲವಂದು ಹುತವಹನ ಮೇಲು ಶಕುನದ ಚಾರುನಿನದವ ನಾಲಿಸುತ ಸೋದರರು ಸಹಿತ ವ ನಾಲಯವ ಹೊರವಂಟು ಸೇರಿದರೊಂದು ವಟಕುಜವ

kēḷu janamējaya dharitrī pāla munijana nr̥pajanaṃgaḷa bīḷugoṭṭanu bhūmipati balavaṃdu hutavahana mēlu śakunada cāruninadava nālisuta sōdararu sahita va nālayava horavaṃṭu sēridaroṃdu vaṭakujava

Report an error

ಬಂದು ವಟಕುಜದಡಿಯಲನಿಬರು ನಿಂದು ದುರುಪದಿ ಸಹಿತ ಬಳಲಿಕೆ ಯಿಂದ ವಿಶ್ರಮಿಸಿದರು ಚಿಂತಿಸಿ ಧರ್ಮನಂದನನು ಹಿಂದೆ ಹನ್ನೆರಡಬುದ ಸವೆದವು ಮುಂದಣನುವಿನ ಹದನು ತಮಗಿ ನ್ನೊಂದಬುದವಜ್ಞಾತವುತ್ಕಟವಾಯ್ತುಲಾಯೆಂದ

baṃdu vaṭakujadaḍiyalanibaru niṃdu durupadi sahita baḷalike yiṃda viśramisidaru ciṃtisi dharmanaṃdananu hiṃde hanneraḍabuda savedavu muṃdaṇanuvina hadanu tamagi nnoṃdabudavajñātavutkaṭavāytulāyeṃda

Report an error

ಬಡಗಲವರದು ಮೂಡಣರಸುಗ ಳೆಡೆಗೆಣೆಯರಾತಂಗೆ ತೆಂಕಣ ಕಡೆಯವರು ಕಂಡಿಹರು ಕೆಲಬಲದವರು ಕೊಂಡೆಯರು ಪಡುವಣವರತಿ ಕೃಶರು ನಮಗಿ ನ್ನಡಗಿರಲು ತೆರನಾವುದೆಂದೆನೆ ನುಡಿದನರ್ಜುನ ದೇವನವನೀಪತಿಗೆ ವಿನಯದಲಿ

baḍagalavaradu mūḍaṇarasuga ḷeḍegeṇeyarātaṃge teṃkaṇa kaḍeyavaru kaṃḍiharu kelabaladavaru koṃḍeyaru paḍuvaṇavarati kr̥śaru namagi nnaḍagiralu teranāvudeṃdene nuḍidanarjuna dēvanavanīpatige vinayadali

Report an error

ವಳಿತವನು ಹೊಕ್ಕಿರಿದು ಕೌರವ ರೊಳಗೆ ಹಗೆಯಾಗಿಹನು ಕೀಚಕ ಬಲವಿರಾಟಂಗವನ ದೆಸೆಯಿಂ ಭಯವಿಹೀನವದು ಮುಳಿದು ಹೇಳಿಕೆಯಾದ ರವಿಸುತ ಕಲಿತ್ರಿಗರ್ತಾದಿಗಳೆನಿಪ ಮಂ ಡಳಿಕರನು ಕೈಕೊಳ್ಳದಾಳುವರವರು ಪಶ್ಚಿಮವ

vaḷitavanu hokkiridu kaurava roḷage hageyāgihanu kīcaka balavirāṭaṃgavana deseyiṃ bhayavihīnavadu muḷidu hēḷikeyāda ravisuta kalitrigartādigaḷenipa maṃ ḍaḷikaranu kaikoḷḷadāḷuvaravaru paścimava

Report an error

ನೃಪತಿ ನಿಶ್ಚೈಸಿದನು ಮತ್ಸ್ಯಾ ಧಿಪನ ನಗರಿಯೊಳಲ್ಲಿ ಸೈರಿಸಿ ಕೃಪಣತನದಲಿ ನೂಕಬೇಹುದು ನುಡಿದ ವತ್ಸರವ ಗುಪಿತವೆಂತಳವಡುವುದಾಶ್ರಯ ದಪದೆಸೆಯನೆಂತಾನುವಿರಿ ನಿ ಷ್ಕೃಪೆಯೊಳೆಂತಾನೆಂಬೆನೆಂದನು ಧರ್ಮನಂದನನು

nr̥pati niścaisidanu matsyā dhipana nagariyoḷalli sairisi kr̥paṇatanadali nūkabēhudu nuḍida vatsarava gupitaveṃtaḷavaḍuvudāśraya dapadeseyaneṃtānuviri ni ṣkr̥peyoḷeṃtāneṃbeneṃdanu dharmanaṃdananu

Report an error

ದೇವ ನಿಮ್ಮಯ ಮತವೆ ಮತವೆಮ ಗಾವ ವೇಷದ ವಿವರ ನಿಮಗದ ನೀವು ಬೆಸಸುವುದೆಂದು ಭೀಮಾರ್ಜುನರು ಬಿನ್ನವಿಸೆ ನಾವು ಭೂಸುರವೇಷದಲಿ ಸಂ ಭಾವಿತರು ಮತ್ತಲ್ಲಿ ಸನ್ಯಾ ಸಾವಲಂಬನ ಕಂಕನೆಂಬಭಿಧಾನ ತನಗೆಂದ

dēva nimmaya matave matavema gāva vēṣada vivara nimagada nīvu besasuvudeṃdu bhīmārjunaru binnavise nāvu bhūsuravēṣadali saṃ bhāvitaru mattalli sanyā sāvalaṃbana kaṃkaneṃbabhidhāna tanageṃda

Report an error

ವಲಲನೆಂಬಭಿದಾನದಲಿ ನೃಪ ನಿಳಯವನು ಸಾರುವೆನು ತಾನೆಂ ದುಲಿಯೆ ಮಾರುತಿ ನುಡಿದ ವರನಾಟ್ಯವಿದ ವೇಷವನು ಫಲುಗುಣನು ಹಯ ಗೋ ನಿವಾಸ ಸ್ಥಳ ವಿಳಾಸಿತರೆನಲು ಯಮಳರು ಲಲನೆ ಬಿನ್ನಹ ಮಾಡಿದಳು ಸೈರಂಧ್ರಿ ವೇಷವನು

valalaneṃbabhidānadali nr̥pa niḷayavanu sāruvenu tāneṃ duliye māruti nuḍida varanāṭyavida vēṣavanu phaluguṇanu haya gō nivāsa sthaḷa viḷāsitarenalu yamaḷaru lalane binnaha māḍidaḷu sairaṃdhri vēṣavanu

Report an error

ತೊಳಲಿದಿರಿ ಹನ್ನೆರಡು ವರುಷವು ಹಳುವದಲಿ ಸೊಂಪಡಗಿ ಪರರೊಡ ನುಳಿಗೆಲಸದೋಲಗವಿದೆಂತೈ ಸಾರ್ವಭೌಮರಿಗೆ ಬಳಲಿದಿರಿ ಹಿರಿದಾಗಿ ನಿಮ್ಮುವ ನಳಲಿಸಿದೆನೆನ್ನಿಂದ ಪಾಪಿಗ ಳೊಳರೆ ಭುವನದೊಳೆಂದು ಕುಂತೀಸೂನು ಬಿಸುಸುಯ್ದ

toḷalidiri hanneraḍu varuṣavu haḷuvadali soṃpaḍagi pararoḍa nuḷigelasadōlagavideṃtai sārvabhaumarige baḷalidiri hiridāgi nimmuva naḷalisidenenniṃda pāpiga ḷoḷare bhuvanadoḷeṃdu kuṃtīsūnu bisusuyda

Report an error

ಒಡಲ ಬಳಿ ನೆಳಲಿಂಗೆ ಗತಿ ಬೇ ರ್ಪಡಿಸಿಹುದೆ ಸುಖದುಃಖವಿವು ನಿ ಮ್ಮಡಿಗಳಲಿ ತನು ನಾಲ್ಕರಲಿ ಜೀವಾತ್ಮ ನೀವೆಮಗೆ ಅಡವಿಯೇ ಸಾಮ್ರಾಜ್ಯ ನಿಮ್ಮಡಿ ಯೊಡನಿರಲು ನೀವಿಲ್ಲದಾ ಪುರ ವಡವಿ ನಮಗಹುದೆಂದು ಬಿನ್ನವಿಸಿದರು ಭೂಪತಿಗೆ

oḍala baḷi neḷaliṃge gati bē rpaḍisihude sukhaduḥkhavivu ni mmaḍigaḷali tanu nālkarali jīvātma nīvemage aḍaviyē sāmrājya nimmaḍi yoḍaniralu nīvilladā pura vaḍavi namagahudeṃdu binnavisidaru bhūpatige

Report an error

ತುಷ್ಟನಾದನು ನೃಪತಿ ಕೃತ ಪರಿ ಶಿಷ್ಟಪಾಲನು ಜಗದೊಳತ್ಯು ತ್ಕೃಷ್ಟ ಚರಿತನು ತೆಂಕದೆಸೆಗೆ ಸಹೋದರರು ಸಹಿತ ದುಷ್ಟಮೃಗಗಳ ಬೇಂಟೆಯಾಡಿ ವ ಸಿಷ್ಠ ಮುನಿಯಾಶ್ರಮದ ಸುಜನರ ರಿಷ್ಟವನು ಪರಿಹರಿಸುತೈತಂದನು ಸರಾಗದಲಿ

tuṣṭanādanu nr̥pati kr̥ta pari śiṣṭapālanu jagadoḷatyu tkr̥ṣṭa caritanu teṃkadesege sahōdararu sahita duṣṭamr̥gagaḷa bēṃṭeyāḍi va siṣṭha muniyāśramada sujanara riṣṭavanu pariharisutaitaṃdanu sarāgadali

Report an error

ಬಂದು ಮತ್ಸ್ಯಪುರೋಪಕಂಠದ ನಂದನದ ಕೆಲಕಡೆಯಲನಿಬರು ನಿಂದು ನಾಲಕು ದೆಸೆಯನೀಕ್ಷಿಸಿ ನಿಜನಿವಾಸದಲಿ ತಂದ ಚರ್ಮದಲಖಿಳ ಕೈದುವ ನೊಂದು ಹೆಣನಾಕಾರದಲಿ ಬಿಗಿ ದೊಂದು ಬನ್ನಿಯ ಮರನ ತುದಿಯಲಿ ಕಟ್ಟಲೇರಿದರು

baṃdu matsyapurōpakaṃṭhada naṃdanada kelakaḍeyalanibaru niṃdu nālaku deseyanīkṣisi nijanivāsadali taṃda carmadalakhiḷa kaiduva noṃdu heṇanākāradali bigi doṃdu banniya marana tudiyali kaṭṭalēridaru

Report an error

ಕಾಳಿ ಪರಮಕರಾಳಿ ಸುರಮುನಿ ಮೌಳಿ ಮಂಡಿತ ಚರಣೆ ಖಳದನು ಜಾಳಿ ಮರ್ದಿನಿ ಘನ ಕಪರ್ದಿ ವರಾರ್ಧತನುಯುತಳೆ ಶೂಲ ಪರಶು ಪರಶ್ವಧಾದಿಗ ಳಾಳುತೊಪ್ಪುವ ಕರಚತುಷ್ಟಯೆ ಪಾಲಿಸೆಮ್ಮನೆನುತ್ತ ದುರ್ಗೆಯನಂದು ನುತಿಸಿದರು

kāḷi paramakarāḷi suramuni mauḷi maṃḍita caraṇe khaḷadanu jāḷi mardini ghana kapardi varārdhatanuyutaḷe śūla paraśu paraśvadhādiga ḷāḷutoppuva karacatuṣṭaye pālisemmanenutta durgeyanaṃdu nutisidaru

Report an error

ತೆಗೆಯದಿರಿ ನೀವೆಂದು ತುರುಗಾ ಹಿಗಳನಂಜಿಸಿ ಧರ್ಮಸುತ ದೃಗು ಯುಗವ ಮುಚ್ಚಿ ಸುರೇಂದ್ರ ಯಮ ವರುಣಾದಿಗಳಿಗೆರಗಿ ವಿಗಡನೀ ಕಲಿ ಭೀಮನೀ ಕೈ ದುಗಳನೀತಂಗೀಯದಿರಿ ಕೈ ಮುಗಿದು ಬೇಡಿದೆನೆಂದು ಸುರರಿಗೆ ನುಡಿದನವನೀಶ

tegeyadiri nīveṃdu turugā higaḷanaṃjisi dharmasuta dr̥gu yugava mucci surēṃdra yama varuṇādigaḷigeragi vigaḍanī kali bhīmanī kai dugaḷanītaṃgīyadiri kai mugidu bēḍideneṃdu surarige nuḍidanavanīśa

Report an error

ಈವುದಾ ಬೇಡಿದರೆ ಪಾರ್ಥಂ ಗೀವುದೀಯಜ್ಞಾತ ವಾಸದೊ ಳೀ ವಿಗಡ ಭೀಮಂಗೆ ಕೊಡದಿರಿಯೆನಲು ಖತಿಗೊಂಡು ನೀವು ಕುಂತಿಯ ಮಕ್ಕಳಾದಿರಿ ನಾವು ದುರ್ಯೋಧನನವರು ತ ಪ್ಪಾವುದಿದಕೆಂದನಿಲಸುತನೌಡೊತ್ತಿ ಗರ್ಜಿಸಿದ

īvudā bēḍidare pārthaṃ gīvudīyajñāta vāsado ḷī vigaḍa bhīmaṃge koḍadiriyenalu khatigoṃḍu nīvu kuṃtiya makkaḷādiri nāvu duryōdhananavaru ta ppāvudidakeṃdanilasutanauḍotti garjisida

Report an error

ಸುರನಿಕರ ಕಾದಿರಲಿ ಮೇಣೀ ಧರಣಿಕೊಡೆನೆಂದೆನಲಿ ಹಸ್ತಿನ ಪುರಿಗೆ ದಾಳಿಯನಿಡುವೆನಮರರ ಮೋರೆಗಳ ತಿವಿದು ಉರುತರಾಸ್ತ್ರವನೊಯ್ವೆನೆಂದ ಬ್ಬರಿಸಿ ಮಾರುತಿ ನುಡಿಯೆ ತಮ್ಮನ ಬರಸೆಳೆದು ಬಿಗಿಯಪ್ಪಿ ಮೈದಡವಿದನು ಭೂಪಾಲ

suranikara kādirali mēṇī dharaṇikoḍeneṃdenali hastina purige dāḷiyaniḍuvenamarara mōregaḷa tividu urutarāstravanoyveneṃda bbarisi māruti nuḍiye tammana baraseḷedu bigiyappi maidaḍavidanu bhūpāla

Report an error

ಅವಧಿಯೊಂದೇ ವರುಷವಿದರೊಳ ಗೆವಗೆ ಸೈರಣೆಯುಂಟು ನೀ ಮುನಿ ದವಗಡಿಸಿದೊಡೆ ಬಳಿಕ ಸೈರಿಸಲರಿಯೆ ಮನ ಮುಳಿದು ಅವನಿಯಲಿ ಹನ್ನೆರಡು ವರುಷವು ನವೆದುದದು ನಿಷ್ಫಲವಲಾ ಕೌ ರವರಿಗತಿಲಾಗಹುದು ನೀನೇ ಬಲ್ಲೆ ಹೋಗೆಂದ

avadhiyoṃdē varuṣavidaroḷa gevage sairaṇeyuṃṭu nī muni davagaḍisidoḍe baḷika sairisalariye mana muḷidu avaniyali hanneraḍu varuṣavu navedudadu niṣphalavalā kau ravarigatilāgahudu nīnē balle hōgeṃda

Report an error

ಹದುಳವಿಟ್ಟನು ಭೀಮನನು ನಿ ರ್ಮದನು ಮತ್ಸ್ಯನಪುರಿಗೆ ಯತಿವೇ ಷದಲಿ ಬಂದನು ಹೊನ್ನಸಾರಿಯ ಚೀಲ ಕಕ್ಷದಲಿ ಇದಿರೊಳಾನತರಾಯ್ತು ಕಂಡವ ರುದಿತ ತೇಜಃಪುಂಜದಲಿ ಸೊಂ ಪೊದವಿ ಬರಲು ವಿರಾಟ ಕಾಣಿಸಿಕೊಂಡು ಬೆಸಗೊಂಡ

haduḷaviṭṭanu bhīmananu ni rmadanu matsyanapurige yativē ṣadali baṃdanu honnasāriya cīla kakṣadali idiroḷānatarāytu kaṃḍava rudita tējaḥpuṃjadali soṃ podavi baralu virāṭa kāṇisikoṃḍu besagoṃḍa

Report an error

ಇತ್ತ ಬಿಜಯಂಗೈಯಿ ಹಿರಿಯರಿ ದೆತ್ತಣಿಂದೈತಂದಿರೈ ಅ ತ್ಯುತ್ತಮದ ವೇಷದ ಮಹಾತ್ಮರ ಕಂಡು ಬದುಕಿದೆವು ಇತ್ತಪೆವು ಬೇಡಿದುದ ನಾವೆನೆ ಸುತ್ತ ಬಳಸೆವು ರಾಜಸೇವೆ ನಿ ಮಿತ್ತ ಬಂದೆವು ಮುನ್ನಿನೋಲಗವಂತರಿಸಿತಾಗಿ

itta bijayaṃgaiyi hiriyari dettaṇiṃdaitaṃdirai a tyuttamada vēṣada mahātmara kaṃḍu badukidevu ittapevu bēḍiduda nāvene sutta baḷasevu rājasēve ni mitta baṃdevu munninōlagavaṃtarisitāgi

Report an error

ಕೆಟ್ಟುದಿಂದ್ರಪ್ರಸ್ಥ ಪಾಂಡವ ರುಟ್ಟುಹೋದರು ನಾರ ಸೀರೆಯ ನಟ್ಟಡವಿ ಮನೆಯಾಯ್ತು ಹಿಮಕರಕುಲದ ರಾಯರಿಗೆ ಬಿಟ್ಟರೆಮ್ಮನು ಜಠರ ಭರಣಕೆ ನೆಟ್ಟನಾಶ್ರಯವಿಲ್ಲದಿರೆ ಕಂ ಗೆಟ್ಟು ಬಂದೆವು ಕಂಕನೆಂಬಭಿದಾನ ತನಗೆಂದ

keṭṭudiṃdraprastha pāṃḍava ruṭṭuhōdaru nāra sīreya naṭṭaḍavi maneyāytu himakarakulada rāyarige biṭṭaremmanu jaṭhara bharaṇake neṭṭanāśrayavilladire kaṃ geṭṭu baṃdevu kaṃkaneṃbabhidāna tanageṃda

Report an error

ಓಲಗಕೆ ಬಂದಖಿಳರಾಯರ ಮೌಳಿ ಮೌಕ್ತಿಕ ಮಣಿ ಮಯೂಖ ನಿ ವಾಳಿಯಲಿ ನೆರೆ ಮೆರೆವುದಾತನ ಪಾದ ಪದ್ಮಯುಗ ಕಾಲವಾವನನಾವಪರಿಯಲಿ ಕೀಳು ಮಾಡದು ಧರ್ಮಪುತ್ರನ ನಾಳುಗೊಂಡನು ಮತ್ಸ್ಯನೆಲೆ ಜನಮೇಜಯ ಕ್ಷಿತಿಪ

ōlagake baṃdakhiḷarāyara mauḷi mauktika maṇi mayūkha ni vāḷiyali nere merevudātana pāda padmayuga kālavāvananāvapariyali kīḷu māḍadu dharmaputrana nāḷugoṃḍanu matsyanele janamējaya kṣitipa

Report an error

ಆದುದೈ ನಿರ್ವಾಹ ಕಂಕಂ ಗಾದುದಾ ಮತ್ಸ್ಯೇಶನಿಂದ ವಿ ವಾದವಿಲ್ಲದೆ ಸೇವೆ ನಿಜವಾದಂತೆಯಿರುತಿರಲು ಹೋದವಿತ್ತಲು ಕೆಲವು ದಿನ ತನ ಗಾದ ಸಾಹಾಯ್ಯದಲಿ ರಿಪು ಬಲ ಭೇದಿ ಮಾರುತಿ ಬಂದುಕಂಡನು ಮತ್ಸ್ಯಭೂಪತಿಯ

ādudai nirvāha kaṃkaṃ gādudā matsyēśaniṃda vi vādavillade sēve nijavādaṃteyirutiralu hōdavittalu kelavu dina tana gāda sāhāyyadali ripu bala bhēdi māruti baṃdukaṃḍanu matsyabhūpatiya

Report an error

ಏನು ಪರಿಣತಿ ನಿನಗೆ ಬಾಣಸಿ ಯಾನು ಭೀಮನ ಮನೆಯವನು ಮ ತ್ತೇನು ಭುಜಬಲವರಿವೆನಗ್ಗದ ಮಲ್ಲವಿದ್ಯೆಯಲಿ ನೀನಧಿಕನೆಂದಾ ಸಮೀರನ ಸೂನುವನು ಮನ್ನಿಸಿದನಿತ್ತಲು ಮಾನನಿಧಿ ಮರುದಿವಸ ಹೊಕ್ಕನು ಪಾರ್ಥನಾ ಹೊಳಲ

ēnu pariṇati ninage bāṇasi yānu bhīmana maneyavanu ma ttēnu bhujabalavarivenaggada mallavidyeyali nīnadhikaneṃdā samīrana sūnuvanu mannisidanittalu mānanidhi marudivasa hokkanu pārthanā hoḷala

Report an error

ಸುರಪನರಸಿಯ ಶಾಪದಲಿ ಸಿತ ತುರಗನರೆವೆಣ್ಣಾಗಿ ಮತ್ಸ್ಯೇ ಶ್ವರನ ಮಗಳಿಗೆ ನಾಟ್ಯ ವಿದ್ಯಾಭ್ಯಾಸ ಸಂಗದಲಿ ಇರಲು ಯಮಳರು ತುರಗ ಗೋವ್ರಜ ಭರಣರಾದರು ಬಳಿಕ ಪಾಂಡವ ರರಸಿ ಸಾರಿದಳೊಲವಿನಲಿ ವೈರಾಟ ಪಟ್ಟಣವ

surapanarasiya śāpadali sita turaganareveṇṇāgi matsyē śvarana magaḷige nāṭya vidyābhyāsa saṃgadali iralu yamaḷaru turaga gōvraja bharaṇarādaru baḷika pāṃḍava rarasi sāridaḷolavinali vairāṭa paṭṭaṇava

Report an error

ತರಣಿಗಂಜಿದಡಿಂದು ತಲೆಗಾ ಯ್ದಿರಿಸಿದನೊ ಮರೆಯಾಗಿ ತಿಮಿರದ ಹೊರಳಿಗಳನೆನೆ ಮುಡಿಗೆ ಮೋಹಿದ ವೇಣಿವಲ್ಲರಿಯ ಹಿರಿದು ಸೈರಿಸಲಾರೆನೆಂದೊಡ ನಿರಿಸಿದನೊ ಕೈರವವನೆನಲೆಂ ದರರೆ ಕಂಗಳಢಾಳವೊಪ್ಪಿರೆ ಬಂದಳಬುಜಮುಖಿ

taraṇigaṃjidaḍiṃdu talegā ydirisidano mareyāgi timirada horaḷigaḷanene muḍige mōhida vēṇivallariya hiridu sairisalāreneṃdoḍa nirisidano kairavavanenaleṃ darare kaṃgaḷaḍhāḷavoppire baṃdaḷabujamukhi

Report an error

ಮೊಲೆಯ ಮೇಲುದು ಜಾರೆ ಜಾರಿದ ರಳಿಮನರು ಕಂಗಳಿನ ಮಿಂಚಿನ ಹಿಳುಕಿನೆಡೆ ನಡೆಗೆಟ್ಟುನಿಂದರು ಚಿತ್ತವಿಹ್ವಲರು ತೆಳುವಸುರು ತಲೆದೋರೆ ತೋರಿದು ದಲಗು ಮರುಮೊನೆಯೆನುತ ವಿಟರಳ ವಳಿಯೆ ನಡೆತರುತಿರ್ದಳಂಗನೆ ರಾಜವೀಧಿಯಲಿ

moleya mēludu jāre jārida raḷimanaru kaṃgaḷina miṃcina hiḷukineḍe naḍegeṭṭuniṃdaru cittavihvalaru teḷuvasuru taledōre tōridu dalagu marumoneyenuta viṭaraḷa vaḷiye naḍetarutirdaḷaṃgane rājavīdhiyali

Report an error

ಎಲೆಲೆ ಮದನನಗಜವು ತೊತ್ತಳ ದುಳಿದುದೋ ಕಾಮುಕರನೆನೆ ಗಾ ವಳಿಯೊಳಗೆ ಗಾರಾಯ್ತು ಗರುವಿಕೆ ವಿಟವಿದೂಷಕರ ಅಳುಕಿದರು ಮನುಮಥನ ಗರುಡಿಯ ಬಲುಮೆಗಾರರು ಬಂದಳಗ್ಗದ ನಳಿನಮುಖಿ ಬಹುಜನದ ಮನಕಚ್ಚರಿಯನೊದವಿಸುತ

elele madananagajavu tottaḷa duḷidudō kāmukaranene gā vaḷiyoḷage gārāytu garuvike viṭavidūṣakara aḷukidaru manumathana garuḍiya balumegāraru baṃdaḷaggada naḷinamukhi bahujanada manakaccariyanodavisuta

Report an error

ಜನರ ಜಾಣಕ್ಕಾಡಲಾ ಮೋ ಹನ ಮಹಾಂಬುಧಿಯೊಳಗೆ ನೃಪನಂ ಗನೆಯ ಭವನಕೆ ಬರಲು ಬೆರಗಾಯ್ತಖಿಳ ನಾರಿಯರು ವನಿತೆ ಮಾನಿಸೆಯಲ್ಲ ಮನುಜರಿ ಗಿನಿತು ರೂಪೆಲ್ಲಿಯದು ವಿಸ್ಮಯ ವೆನುತ ಮನದೊಳಗಳುಕಿದರು ಮತ್ಸ್ಯೇಶನರಸಿಯರು

janara jāṇakkāḍalā mō hana mahāṃbudhiyoḷage nr̥panaṃ ganeya bhavanake baralu beragāytakhiḷa nāriyaru vanite māniseyalla manujari ginitu rūpelliyadu vismaya venuta manadoḷagaḷukidaru matsyēśanarasiyaru

Report an error

ಬರವ ಕಂಡು ಸುದೇಷ್ಣೆ ಮನದಲಿ ಹರುಷಮಿಗೆ ಹೊಂಗಿದಳು ಕರೆ ಕರೆ ತರುಣಿಯಾರೆಂದಟ್ಟಿದಳು ಕೆಳದಿಯರನಿನಿಬರನು ಸರಸಿಜಾಯತದಂದವನು ಮೋ ಹರಿಸಿ ಮುಂಚುವ ಪರಿಮಳವನಂ ದರಸಿ ಬೀರುತ ಬಂದು ಹೊಕ್ಕಳು ರಾಜಮಂದಿರವ

barava kaṃḍu sudēṣṇe manadali haruṣamige hoṃgidaḷu kare kare taruṇiyāreṃdaṭṭidaḷu keḷadiyaraninibaranu sarasijāyatadaṃdavanu mō harisi muṃcuva parimaḷavanaṃ darasi bīruta baṃdu hokkaḷu rājamaṃdirava

Report an error

ಕೆಳದಿಯರು ಕಾಣಿಸಿದರರಸನ ಲಲನೆಯನು ಪರಿಯಂಕ ಪೀಠದ ಕೆಲಕೆ ಕರೆದಳು ಕಮಲವದನೆಯನುಚಿತ ವಚನದಲಿ ನಳಿನಮುಖಿ ನೀನಾರು ನಿನಗಾ ರೊಳರು ರಮಣರು ಮಾಸಿಕೊಂಡಿಹ ಮಲಿನವೃತ್ತಿಯಿದೇಕೆನುತ ಬೆಸಗೊಂಡಳಂಗನೆಯ

keḷadiyaru kāṇisidararasana lalaneyanu pariyaṃka pīṭhada kelake karedaḷu kamalavadaneyanucita vacanadali naḷinamukhi nīnāru ninagā roḷaru ramaṇaru māsikoṃḍiha malinavr̥ttiyidēkenuta besagoṃḍaḷaṃganeya

Report an error

ಅತುಳಬಲ ಗಂಧರ್ವರೈವರು ಪತಿಗಳೆನಗುಂಟೆನ್ನ ಚಿತ್ತಕೆ ಖತಿಯಮಾಡಿದರೊಂದು ವರುಷವು ಬಿಡುವೆನವರುಗಳ ಸತತವಾ ಕುಂತೀಕುಮಾರರ ಸತಿಯನೋಲೈಸಿದ್ದೆ ಬಳಿಕವ ರತಿಗಹನದಲಿ ನಿಷ್ಠರಾಗಲು ತನಗೆ ಬರವಾಯ್ತು

atuḷabala gaṃdharvaraivaru patigaḷenaguṃṭenna cittake khatiyamāḍidaroṃdu varuṣavu biḍuvenavarugaḷa satatavā kuṃtīkumārara satiyanōlaisidde baḷikava ratigahanadali niṣṭharāgalu tanage baravāytu

Report an error

ಏನ ಮಾಡಲು ಬಲ್ಲೆಯೆಂದರೆ ಮಾನಿನಿಯ ಸಿರಿಮುಡಿಯ ಕಟ್ಟುವೆ ಸೂನ ಮುಡಿಸುವೆ ವರಕಟಾಕ್ಷಕೆ ಕಾಡಿಯನಿಡುವೆ ಏನ ಹೇಳಿದ ಮಾಡಬಲ್ಲೆನು ಸಾನುರಾಗದೊಳೆಂದೆನಲು ವರ ಮಾನಿನಿಯ ನಸುನಗುತ ನುಡಿಸಿದಳಂದು ವಿನಯದಲಿ

ēna māḍalu balleyeṃdare māniniya sirimuḍiya kaṭṭuve sūna muḍisuve varakaṭākṣake kāḍiyaniḍuve ēna hēḷida māḍaballenu sānurāgadoḷeṃdenalu vara māniniya nasunaguta nuḍisidaḷaṃdu vinayadali

Report an error

ಎನಲು ಮೆಚ್ಚಿದಳಾ ವಿರಾಟನ ವನಿತೆ ವೀರರ ವಧುವನಾ ಸಖಿ ಜನದೊಳಗೆ ನೇಮಿಸಿದಳನಿಬರಿಗಾಯ್ತು ನಿರ್ವಾಹ ಮನದ ಢಗೆಯಡಗಿದವು ಮತ್ಸ್ಯೇ ಶನ ಪುರಾಂತರದೊಳಗೆ ಮೈಮರೆ ಸನುಪಮಿತ ಭುಜ ಸತ್ವರಿದ್ದರು ಭೂಪ ಕೇಳೆಂದ

enalu meccidaḷā virāṭana vanite vīrara vadhuvanā sakhi janadoḷage nēmisidaḷanibarigāytu nirvāha manada ḍhageyaḍagidavu matsyē śana purāṃtaradoḷage maimare sanupamita bhuja satvariddaru bhūpa kēḷeṃda

Report an error

Illustration: Verse & Place (Project-owned).