Skip to content

ಅರಣ್ಯ ಪರ್ವ — ಸಂಧಿ ೧೯ · ಅರಣ್ಯ ಪರ್ವ — ಸಂಧಿ ೧೯

Aranya Parva · Sandhi 19

araṇya parva — saṃdhi 19

The complete aranya parva · sandhi 19 in Kannada.

59 passagesKannada with transliteration

An original emblem for Aranya Parva.

Invocation

3.19.opening

ರಾಯ್ದಳವನು ಮುರಿದು ಕೌರವ ರಾಯನನುಜರು ಶೈತ ಗಗನಕೆ ಹಾಯಿದನು ಗಂಧರ್ವಪತಿ ಸುರಪತಿಯ ನೇಮದಲಿ

rāydaḷavanu muridu kaurava rāyananujaru śaita gaganake hāyidanu gaṃdharvapati surapatiya nēmadali

ಕೇಳು ಜನಮೇಜಯ ಧರಿತ್ರೀ ಪಾಲ ವನಪಾಲಕರ ಜಗಳದೊ ಳಾಳು ನೊಂದುದು ಧರೆಗೆ ಬಿದ್ದುದು ತೋಟಿ ತೋಹಿನಲಿ ಆಲಿಗಳ ಕೀಳ್ನೋಟದೊಲಹಿನ ಮೌಳಿಯುಬ್ಬೆಯ ಸುಯ್ಲುದುಗುಡದ ಜಾಳಿಗೆಯ ಜಡಮನದಲಿದ್ದನು ಕೌರವರ ರಾಯ

kēḷu janamējaya dharitrī pāla vanapālakara jagaḷado ḷāḷu noṃdudu dharege biddudu tōṭi tōhinali āligaḷa kīḷnōṭadolahina mauḷiyubbeya suyluduguḍada jāḷigeya jaḍamanadaliddanu kauravara rāya

Report an error

ಜೀಯ ದುಗುಡವಿದೇಕೆ ದಿವಿಜರ ರಾಯ ಶಿಖಿ ಯಮ ನಿರುತಿ ಜಲಧಿಪ ವಾಯು ಧನದ ಶಿವಾದಿಗಳ ಸಾಹಸಕೆ ಮೂವಡಿಯ ರಾಯ ಭಟರಿದೆ ನೇಮಿಸಾ ಸುರ ರಾಯನೂರಿನ ಹಾಡುಗರ ಹುಲು ನಾಯಕರಿಗಿನಿತೇಕೆ ಖತಿ ಬೆಸಸೆಂದನಾ ಕರ್ಣ

jīya duguḍavidēke divijara rāya śikhi yama niruti jaladhipa vāyu dhanada śivādigaḷa sāhasake mūvaḍiya rāya bhaṭaride nēmisā sura rāyanūrina hāḍugara hulu nāyakariginitēke khati besaseṃdanā karṇa

Report an error

ನೇಮವಾಯಿತು ಸುಭಟರೊಳಗೆ ಸ ನಾಮರೆದ್ದರು ಕರ್ಣ ಸೌಬಲ ಭೂಮಿಪತಿಯನುಜಾತ ಬಾಹ್ಲಿಕ ಶಲ್ಯನಂದನರು ಸೋಮದತ್ತನ ಮಗ ಕಳಿಂಗ ಸು ಧಾಮ ಚಿತ್ರ ಮಹಾರಥಾದಿಮ ಹಾಮಹಿಮರನುವಾಯ್ತು ಗಜಹಯರಥನಿಕಾಯದಲಿ

nēmavāyitu subhaṭaroḷage sa nāmareddaru karṇa saubala bhūmipatiyanujāta bāhlika śalyanaṃdanaru sōmadattana maga kaḷiṃga su dhāma citra mahārathādima hāmahimaranuvāytu gajahayarathanikāyadali

Report an error

ನೂಕಿದರು ಮುಂಗುಡಿಯವರು ಬನ ದಾಕೆಯಲಿ ಹೊಯ್ದರು ವಿರೋಧಿ ದಿ ವೌಕಸರನಿಕ್ಕಿದರು ಸಿಕ್ಕಿದರುರುವ ಸಬಳದಲಿ ಆಕೆವಾಳರು ಕರ್ಣ ಶಕುನಿಗ ಳೇಕೆ ನಿಲುವರು ಬಿರಿದು ಪಾಡಿನ ನೇಕ ಭಟರೊಳಹೊಕ್ಕು ತಿವಿದರು ಬೆರಸಿ ಸುರಬಲವ

nūkidaru muṃguḍiyavaru bana dākeyali hoydaru virōdhi di vaukasaranikkidaru sikkidaruruva sabaḷadali ākevāḷaru karṇa śakuniga ḷēke niluvaru biridu pāḍina nēka bhaṭaroḷahokku tividaru berasi surabalava

Report an error

ಮತ್ತೆ ಮುರಿದುದು ದೇವಬಲ ಬೆಂ ಬತ್ತಿ ತಿವಿದರು ಕೌರವನ ಭಟ ರೆತ್ತಿ ಹಾಯ್ಕಿದರದಟ ಗಂಧರ್ವರ ಭಟ ವ್ರಜವ ತೆತ್ತಿಸಿದ ಸರಳೇರಿ ಸುರಿಗರು ಳೊತ್ತುಗೈಗಳ ತಾಳಿಗೆಯ ತಲೆ ಹೊತ್ತು ರಕ್ತದ ರಹಿಯಲೋಡಿತು ಸೇನೆ ಸುರಪುರಕೆ

matte muridudu dēvabala beṃ batti tividaru kauravana bhaṭa retti hāykidaradaṭa gaṃdharvara bhaṭa vrajava tettisida saraḷēri surigaru ḷottugaigaḷa tāḷigeya tale hottu raktada rahiyalōḍitu sēne surapurake

Report an error

ಹೊಯ್ಯಲಾದುದು ಚಿತ್ರಸೇನನ ಬಯ್ಯಲೇತಕೆ ಬೇರೆಗಾಯದ ಮೈಯಬಿಸುಟಾಯುಧದ ಬೆನ್ನಲಿ ಬಿಟ್ಟಮಂಡೆಗಳ ಸುಯ್ಯ ಬಹಳದ ಭಟರು ತೊದಳಿಸು ತೊಯ್ಯನೆಂದರು ಜೀಯ ಕರ್ಣನ ಕೈಯಲಮರರ ಜೀವವಿದೆ ಜಾರುವುದು ಹಿತ ನಿಮಗೆ

hoyyalādudu citrasēnana bayyalētake bēregāyada maiyabisuṭāyudhada bennali biṭṭamaṃḍegaḷa suyya bahaḷada bhaṭaru todaḷisu toyyaneṃdaru jīya karṇana kaiyalamarara jīvavide jāruvudu hita nimage

Report an error

ಸುರಪನಾ ನುಡಿಗೇಳಿ ಶಿವ ಶಿವ ನರರ ಕೈಯಲಿ ಘಾಸಿಯಾದರೆ ಸುರರೆನುತ್ತವೆ ಚಿತ್ರಸೇನನ ನೋಡಲವನಂದು ಅರಸ ನೇಮವೆ ತನಗೆ ತಂದಾ ಕುರುಪತಿಯನೊಡಹುಟ್ಟಿದರ ಸಹಿ ತೊರಗಿಸುವೆ ನಿಮ್ಮಡಿಯ ಚರಣದೊಳೆನುತ ಬೀಳ್ಕೊಂಡ

surapanā nuḍigēḷi śiva śiva narara kaiyali ghāsiyādare surarenuttave citrasēnana nōḍalavanaṃdu arasa nēmave tanage taṃdā kurupatiyanoḍahuṭṭidara sahi toragisuve nimmaḍiya caraṇadoḷenuta bīḷkoṃḍa

Report an error

ಕಳವಳಿಸದಿರಿ ಧನುವ ತಾ ಹೆ ಬ್ಬಲವ ಕರೆಕರೆ ಹುಲುಮನುಷ್ಯರ ಬಲುಹು ಗಡ ಬಯಲಾಯ್ತು ಗಡ ಗಂಧರ್ವರಾಟೋಪ ನೆಲದೊಳೊಕ್ಕೊಡೆ ಶೋಣಿತಕೆ ರಾ ಟಳವ ಹಿಡಿ ಬರಹೇಳು ಶಾಕಿನಿ ಕುಲವ ಡಾಕಿನಿಯರನು ನೆತ್ತರಗುಡುಹಿಗೈನೆಯರ

kaḷavaḷisadiri dhanuva tā he bbalava karekare hulumanuṣyara baluhu gaḍa bayalāytu gaḍa gaṃdharvarāṭōpa neladoḷokkoḍe śōṇitake rā ṭaḷava hiḍi barahēḷu śākini kulava ḍākiniyaranu nettaraguḍuhigaineyara

Report an error

ಏನ ಹೇಳುವೆನರಸ ದಿವಿಜರ ಸೇನೆಯಲ್ಲಾ ಛತ್ರ ಚಮರವಿ ತಾನದಲಿ ನಭವಿಲ್ಲ ನೆಗಹಿದ ಸಬಳ ಸೆಲ್ಲಹಕೆ ಮೈನುಸುಳ ಕಾಣೆನು ಸಮೀರನ ಭಾನು ಕಿರಣದ ಸುಳಿವನೀಶ್ವರ ತಾನೆ ಬಲ್ಲನು ಶಿವ ಶಿವೆನೆ ಜೋಡಿಸಿತು ನಿಮಿಷದಲಿ

ēna hēḷuvenarasa divijara sēneyallā chatra camaravi tānadali nabhavilla negahida sabaḷa sellahake mainusuḷa kāṇenu samīrana bhānu kiraṇada suḷivanīśvara tāne ballanu śiva śivene jōḍisitu nimiṣadali

Report an error

ತಿನ್ನಡಗ ಕೊಯ್ನೆಣನ ಮನುಜರ ಬೆನ್ನಲುಗಿ ತನಿಗರುಳನಕಟಾ ಕುನ್ನಿಗಳಿರುದ್ಯಾನವನು ನೆರೆಕೆಡಿಸಿ ಕಳೆದಿರಲಾ ಮುನ್ನ ಮುರಿದವರಾರೆನುತಲಾ ಪನ್ನರನು ತೊಲಗಿಸುತ ಸುರಪನ ಮನ್ನಣೆಯ ಗಂಧರ್ವಬಲ ಬೆರೆಸಿದುದು ಪರಬಲವ

tinnaḍaga koyneṇana manujara bennalugi tanigaruḷanakaṭā kunnigaḷirudyānavanu nerekeḍisi kaḷediralā munna muridavarārenutalā pannaranu tolagisuta surapana mannaṇeya gaṃdharvabala beresidudu parabalava

Report an error

ಹೊಯ್ದರೊಳಬಿದ್ದವರ ಮುಂದಲೆ ವಾಯ್ದು ತಿವಿದರು ಮುರಿದ ಮೂಳೆಯ ಹಾಯ್ದ ಕರುಳಿನ ಮಿದುಳ ಜೋಡಿನ ಬಸಿವ ಶೋಣಿತದ ಕೈದುಗಳ ಖಣಿಖಟಿಲ ಹೊಯ್ಲಿನ ಬಾಯ್ದಣಿಯ ಬೈಗುಳಿನಲುಭಯದ ಕೈದುಗಾರರು ನೀಗಿದರು ನಿಜಪತಿಯ ಹಣ ಋಣವ

hoydaroḷabiddavara muṃdale vāydu tividaru murida mūḷeya hāyda karuḷina miduḷa jōḍina basiva śōṇitada kaidugaḷa khaṇikhaṭila hoylina bāydaṇiya baiguḷinalubhayada kaidugāraru nīgidaru nijapatiya haṇa r̥ṇava

Report an error

ಬಿಟ್ಟ ಸೂಟಿಯ ಕುದುರೆಗಾರರ ನಿಟ್ಟೆಡೆಯಲೌಕುವ ಮದೇಭದ ಥಟ್ಟುಗಳನುಬ್ಬೆದ್ದು ಗಗನವನಡರ್ವ ತೇರುಗಳ ಬಿಟ್ಟನಾರಾಚದ ವಿಘಾತದೊ ಳಿಟ್ಟ ಸೆಲ್ಲೆಹ ಸಬಳ ಬಿಟ್ಟೇ ರಿಟ್ಟೆಗಳ ಮಳೆ ನಾದಿದವು ಕಾದಿದರು ಚೂಣಿಯಲಿ

biṭṭa sūṭiya kuduregārara niṭṭeḍeyalaukuva madēbhada thaṭṭugaḷanubbeddu gaganavanaḍarva tērugaḷa biṭṭanārācada vighātado ḷiṭṭa selleha sabaḷa biṭṭē riṭṭegaḷa maḷe nādidavu kādidaru cūṇiyali

Report an error

ಮುರಿದು ಚೂಣಿಯ ಭಟರು ತಂದರು ಬಿರುಸಿ ನರನೆಲೆಗಿದು ನಿಹಾರದೊ ಳಿರಿದು ನೆರೆ ಸೊಪ್ಪಾಗಿ ಸಾರಿತು ಸರಿದು ಹಿನ್ನೆಲೆಗೆ ಸುರಿಯಲರುಣಾಂಬುಗಳ ನದಿ ಹೊರಮರಿಯೆ ದೊರೆಗಿಕ್ಕಿದರು ಬೊ ಬ್ಬಿರಿದಿರವ ಧನ ಧಟ್ಟಿಸಿತು ನಿಸ್ಸಾಳಹತಿ ದನಿಯ

muridu cūṇiya bhaṭaru taṃdaru birusi naranelegidu nihārado ḷiridu nere soppāgi sāritu saridu hinnelege suriyalaruṇāṃbugaḷa nadi horamariye doregikkidaru bo bbiridirava dhana dhaṭṭisitu nissāḷahati daniya

Report an error

ನೂಕಿದರೆ ಕರ್ಣಾದಿ ದೊರೆಗಳ ಡಾಕನಾನುವರಾರು ದಿವಿಜಾ ನೀಕದಲಿ ಧಕ್ಕಡರು ದೂವಾಳಿಸಿತು ಯಮಪುರಕೆ ತೋಕಿದವು ನಾರಾಚ ದಶದಿಶೆ ಯೋಕರಿಸಿದವೊ ಸರಳನೆನೆ ಸ ವ್ಯಾಕುಳರ ಹಿಂದಿಕ್ಕಿ ಹಿಂಡಿದವಸುವನತಿಬಲರ

nūkidare karṇādi doregaḷa ḍākanānuvarāru divijā nīkadali dhakkaḍaru dūvāḷisitu yamapurake tōkidavu nārāca daśadiśe yōkarisidavo saraḷanene sa vyākuḷara hiṃdikki hiṃḍidavasuvanatibalara

Report an error

ಮುರಿದುದಾ ಗಂಧರ್ವ ಬಲ ಹೊ ಕ್ಕಿರಿದು ಕೌರವರಾಯ ದಳದಲಿ ಕುರುಹಿನವರಪ್ಪಿದರು ಖಚರೀಜನದ ಕುಚಯುಗವ ಉರುಬಿತರನೆಲೆ ಚಿತ್ರಸೇನನ ಸೆರಗ ಹಿಡಿದರು ಸಮರ್ ಅಹೊಯ್ ಹೊಯ್ ಕುರಿಮನದ ಕುನ್ನಿಗಳನೆನುತೇರಿದನು ಮಣಿರಥವ

muridudā gaṃdharva bala ho kkiridu kauravarāya daḷadali kuruhinavarappidaru khacarījanada kucayugava urubitaranele citrasēnana seraga hiḍidaru samar ahoy hoy kurimanada kunnigaḷanenutēridanu maṇirathava

Report an error

ಧನುವ ಕೊಂಡನು ತನ್ನ ತೂಕದ ವಿನುತ ಭಟರೊಗ್ಗಾಯ್ತು ವಾದ್ಯ ಧ್ವನಿಯ ಧಟ್ಟಣೆ ಧಾತುಗೆಡಿಸಿತು ಜಗದ ಜೋಡಿಗಳ ಮನುಜರಿವದಿರ ಮುರಿದು ಬಹ ಭಟ ರನಿಮಿಷರು ಬಯಲಾಯಿತಕಟಾ ದನುಜರಿಪುಗಳ ದೆಸೆಗಳಳಿದವೆ ಶಿವ ಶಿವಾಯೆಂದ

dhanuva koṃḍanu tanna tūkada vinuta bhaṭaroggāytu vādya dhvaniya dhaṭṭaṇe dhātugeḍisitu jagada jōḍigaḷa manujarivadira muridu baha bhaṭa ranimiṣaru bayalāyitakaṭā danujaripugaḷa desegaḷaḷidave śiva śivāyeṃda

Report an error

ನೂಕಿದನು ಗಂಧರ್ವ ಸೇನೆಯೊ ಳಾಕೆವಾಳರ ಮುಂದೆ ತಾನವಿ ವೇಕಿಯೇ ದೊರೆತನದಲಿದ್ದನು ಸಕಲ ದಳ ಸಹಿತ ಸೋಕಬಹುದೇ ಕರ್ಣ ಕೆಲಬಲ ದಾಕೆವಾಳರ ಕೊಂಬನೇ ನೆರೆ ತೋಕಿದನು ಗಂಧರ್ವ ಬಲಜಲಧಿಯನು ನಿಮಿಷದಲಿ

nūkidanu gaṃdharva sēneyo ḷākevāḷara muṃde tānavi vēkiyē doretanadaliddanu sakala daḷa sahita sōkabahudē karṇa kelabala dākevāḷara koṃbanē nere tōkidanu gaṃdharva balajaladhiyanu nimiṣadali

Report an error

ಗಾಯವಡೆದರು ಕೆಲರು ನೆಲದಲಿ ಲಾಯ ನೀಡಿತು ಕೆಲಬರಿಗೆ ಪೂ ರಾಯದೆಸುಗೆಗೆ ಹಸುಗೆಯಾದರು ಭಟರು ದೆಸೆದೆಸೆಗೆ ಆಯುಧದ ಮೆದೆಯೊಡ್ಡಿತಾಕ ರ್ಣಾಯತಾಸ್ತ್ರವ ಕೆಣಕಿ ಖೇಚರ ರಾಯದಳ ನುಗ್ಗಾಯ್ತು ದೊರೆಹೊಕ್ಕನು ಮಹಾಹವವ

gāyavaḍedaru kelaru neladali lāya nīḍitu kelabarige pū rāyadesugege hasugeyādaru bhaṭaru desedesege āyudhada medeyoḍḍitāka rṇāyatāstrava keṇaki khēcara rāyadaḷa nuggāytu dorehokkanu mahāhavava

Report an error

ತೊಲಗು ಮರ್ತ್ಯರಿಗೀಸು ದರ್ಪದ ಗೆಲವುತನವೇ ನಿಮಿಷ ಸೈರಿಸು ಹುಲುಭಟರ ಹುರಿದೀ ಪ್ರತಾಪಾನಳನ ಸೆಗಳಿನಲಿ ಅಳುಕುವುದೆ ಖಚರೇಂದ್ರ ಜಲಧರ ನೆಲವೊ ತೋರಾ ಚಾಪವಿದ್ಯಾ ಕಲೆಯ ನೋಡುವೆನೆನುತ ಬೊಬ್ಬಿರಿದೆಚ್ಚನಿನಸುತನ

tolagu martyarigīsu darpada gelavutanavē nimiṣa sairisu hulubhaṭara huridī pratāpānaḷana segaḷinali aḷukuvude khacarēṃdra jaladhara nelavo tōrā cāpavidyā kaleya nōḍuvenenuta bobbirideccaninasutana

Report an error

ಹೇಳಬಹುದೆ ಸುರೇಂದ್ರಭವನದ ಸೂಳೆಯರ ಸೂಳಾಯತಾ ವಾ ಚಾಳತನಕೇನೊರೆವೆ ನಟರಿಗೆ ಮುಖ್ಯವಿದ್ಯೆಯಲ ಆಳುತನದಂಗದಲಿ ಬಹೊಡೆ ಶ ರಾಳಿಯಲಿ ಮಾತಾಡೆನುತ ಕೆಂ ಗೋಲಿನಲಿ ಸಲೆ ಹೂಳಿದನು ಉದ್ಯಾನವನ ತಳವ

hēḷabahude surēṃdrabhavanada sūḷeyara sūḷāyatā vā cāḷatanakēnoreve naṭarige mukhyavidyeyala āḷutanadaṃgadali bahoḍe śa rāḷiyali mātāḍenuta keṃ gōlinali sale hūḷidanu udyānavana taḷava

Report an error

ಪೂತು ಮಝ ಮರ್ತ್ಯರಲಿ ಬಿಲ್ವಿ ದ್ಯಾತಿಶಯ ಕಿರಿದುಂಟಲಾ ತಾ ನೀತ ಕರ್ಣನೆ ಕೌರವೇಂದ್ರಗೆ ಬೇಹ ಭಟನಿವನೆ ಆತುಕೊಳ್ಳಾದಡೆಯೆನುತ ದಿಗು ಜಾತವಂಬಿನಲಡಗೆರಿಪುಶರ ಜಾತವನು ಹರೆಗಡಿದು ಕರ್ಣನ ಧನುವ ಖಂಡಿಸಿದ

pūtu majha martyarali bilvi dyātiśaya kiriduṃṭalā tā nīta karṇane kauravēṃdrage bēha bhaṭanivane ātukoḷḷādaḍeyenuta digu jātavaṃbinalaḍageripuśara jātavanu haregaḍidu karṇana dhanuva khaṃḍisida

Report an error

ಇದು ಶರಾವಳಿಯಹುದು ಸರಿಗಮ ಪದನಿಗಳ ಸರವಲ್ಲಲಾ ಸೇ ರಿದ ಧನುರ್ವಿದ್ಯಾತಿಶಯ ಯೋಗ್ಯತೆ ವಿಶೇಷವಲ ಇದು ಮನುಷ್ಯರ ಕಲುಹೆ ನೋಡೆನು ತೊದರಿ ಹೊಸ ಚಾಪದಲಿ ಕಲಿ ಚಿ ಮ್ಮಿದನು ಚಾಮೀಕರ ಸುರೇಖಾವಳಿ ಶಿಲೀಮುಖವ

idu śarāvaḷiyahudu sarigama padanigaḷa saravallalā sē rida dhanurvidyātiśaya yōgyate viśēṣavala idu manuṣyara kaluhe nōḍenu todari hosa cāpadali kali ci mmidanu cāmīkara surēkhāvaḷi śilīmukhava

Report an error

ಕಡಿದು ಗಂಧರ್ವನ ಶರೌಘವ ನಡಸಿ ನೆಟ್ಟವು ಕರ್ಣಶರ ಸೈ ಹೆಡಹಿದವು ಕಿಂಪುರುಷ ಗುಹ್ಯಕ ಯಕ್ಷರಾಕ್ಷಸರ ಹೊಡಕರಿಸಿ ಹೊದರೆದ್ದು ಬಲ ಸಂ ಗಡಸಿ ತಲೆವರಿಗೆಯಲಿ ಕರ್ಣನ ಬಿಡು ಸರಳ ಬೀದಿಯಲಿ ಬೆದರದೆ ನೂಕಿತಳವಿಯಲಿ

kaḍidu gaṃdharvana śaraughava naḍasi neṭṭavu karṇaśara sai heḍahidavu kiṃpuruṣa guhyaka yakṣarākṣasara hoḍakarisi hodareddu bala saṃ gaḍasi talevarigeyali karṇana biḍu saraḷa bīdiyali bedarade nūkitaḷaviyali

Report an error

ಸಂಧಿಸಿತು ಪಡೆ ಚಿತ್ರಸೇನನ ಹಿಂದೆ ನಿಲಿಸಿ ವಿರೋಧಿಶರ ಹತಿ ಗಂದವಳಿಯದೆ ಮುತ್ತಿದುದು ಕಟ್ಟಲವಿಯಲಿ ರಥವ ಮುಂದುಗೆಟ್ಟನು ಕರ್ಣನೆನೆ ಕೈ ಗುಂದಿದರು ಸೌಬಲ ಸುಯೋಧನ ನಂದನರು ದುಶ್ಯಾಸನಾದಿ ಸಮಸ್ತ ಪರಿವಾರ

saṃdhisitu paḍe citrasēnana hiṃde nilisi virōdhiśara hati gaṃdavaḷiyade muttidudu kaṭṭalaviyali rathava muṃdugeṭṭanu karṇanene kai guṃdidaru saubala suyōdhana naṃdanaru duśyāsanādi samasta parivāra

Report an error

ನೊರಜಿನೆರಕೆಯ ಗಾಳಿಯಲಿ ಹೆ ಮ್ಮರದ ಮೊದಲಳುಕುವುದೆ ಘಡಕಾ ತರಿಸದಿರಿ ಕೌರವರೆನುತ ಕಲಿಕರ್ಣ ಬೊಬ್ಬಿರಿದು ಶರನಿಧಿಗೆ ಬಡಬಾಗ್ನಿ ಮುನಿವವೊ ಲುರವಣಿಪ ಹೆಬ್ಬಲವನೊಂದೇ ಸರಳಿನಲಿ ಸವರಿದನು ಸುಳಿಸಿದನೌಕಿ ನಿಜರಥವ

norajinerakeya gāḷiyali he mmarada modalaḷukuvude ghaḍakā tarisadiri kauravarenuta kalikarṇa bobbiridu śaranidhige baḍabāgni munivavo luravaṇipa hebbalavanoṃdē saraḷinali savaridanu suḷisidanauki nijarathava

Report an error

ಗೆದ್ದುದೇ ರಣವೆಲವೊ ದಿವಿಜರ ದೊದ್ದೆಯಲಿ ಸೂಳೆಯರ ಜಾತಿಯ ಬಿದ್ದಿನರ ವೀಳೆಯದ ಬದೆಗರು ಭಟರ ಮೋಡಿಯಲಿ ಹೊದ್ದಿದರೆ ಹುರುಳಹುದೆ ಭಯರಸ ದದ್ದುಗೆಯ ಮಂಜಿಡಿಕೆ ಮನದವ ರಿದ್ದು ಫಲವೇನೆನುತ ಕೈ ಮಾಡಿದನು ಕಲಿ ಕರ್ಣ

geddudē raṇavelavo divijara doddeyali sūḷeyara jātiya biddinara vīḷeyada badegaru bhaṭara mōḍiyali hoddidare huruḷahude bhayarasa daddugeya maṃjiḍike manadava riddu phalavēnenuta kai māḍidanu kali karṇa

Report an error

ನೊಂದುದಾತನ ಪೊರೆಯ ಸುಭಟರ ಸಂದಣಿಗಳಿಕ್ಕಲಿಸಿ ಬಿದ್ದುದು ಮುಂದೆ ಬಲು ಗಂಧರ್ವಬಲವಿನಸುತನ ಶರಹತಿಗೆ ಒಂದು ನಿಮಿಷಕೆ ಮತ್ತೆ ಪಡಿಬಲ ಬಂದುದಗಣಿತ ಯಕ್ಷರಾಕ್ಷಸ ವೃಂದ ಮುಕ್ಕುರುಕಿದುದು ಕರ್ಣನ ರಥದ ಮುಂಕಣಿಯ

noṃdudātana poreya subhaṭara saṃdaṇigaḷikkalisi biddudu muṃde balu gaṃdharvabalavinasutana śarahatige oṃdu nimiṣake matte paḍibala baṃdudagaṇita yakṣarākṣasa vr̥ṃda mukkurukidudu karṇana rathada muṃkaṇiya

Report an error

ಅರಸ ಕೇಳೀಚೆಯಲಿ ಕೌರವ ರರಸ ಬಂದನು ಸರ್ವದಳ ಸಹಿ ತೆರಡು ಬಲದುಬ್ಬರದ ಬೊಬ್ಬೆಗೆ ಬಿರಿದುದವನಿತಳ ನರ ವೃಕೋದರ ನಕುಲ ಸಹದೇ ವರು ಕುತೂಹಲದಿಂದ ಸುತ್ತಣ ಮೊರಡಿಗಳ ಮೇಲಿದ್ದು ನೋಡಿದರಾ ಮಹಾಹವವ

arasa kēḷīceyali kaurava rarasa baṃdanu sarvadaḷa sahi teraḍu baladubbarada bobbege biridudavanitaḷa nara vr̥kōdara nakula sahadē varu kutūhaladiṃda suttaṇa moraḍigaḷa mēliddu nōḍidarā mahāhavava

Report an error

ತೆಗೆಸಿದನು ನೃಪನಿನಸುತನ ಮು ತ್ತಿಗೆಯನೆರಡೊಡ್ಡಿನಲಿ ಸೂಸುವ ಹೊಗರಗಣೆಗಳ ಹೊಯ್ವಡಾಯುಧ ಕಡಿವ ಪರಶುಗಳ ಬಗಿವ ಸಬಳದ ಲೋಟಿಸುವ ಲೌ ಡಿಗಳ ಚಿಮ್ಮುವ ಸುರಗಿಗಳ ಕಾ ಳಗದ ರೌದ್ರಾಟೋಪವಂಜಿಸಿತಮರರಾಲಿಗಳ

tegesidanu nr̥paninasutana mu ttigeyaneraḍoḍḍinali sūsuva hogaragaṇegaḷa hoyvaḍāyudha kaḍiva paraśugaḷa bagiva sabaḷada lōṭisuva lau ḍigaḷa cimmuva suragigaḷa kā ḷagada raudrāṭōpavaṃjisitamararāligaḷa

Report an error

ನೂಕಿದುದು ತೋಪಿನ ತುದಿಗೆ ಮಗು ಳೌಕಿದುದು ಪಾಳೆಯಕೆ ಮುರಿದು ದಿ ವೌಕಸರು ಜಾರುವರು ಜೋಡಿಸಿ ಮತ್ತೆ ಕುರುಬಲವ ತೋಕುವರು ಗಂಧರ್ವರು ಭಯಾ ನೀಕದೋಹರಿ ಸಾಹರಿಯ ಸ ವ್ಯಾಕುಲರ ನೀಕ್ಷಿಸುತಲಿದ್ದುದು ಪವನಜಾದಿಗಳು

nūkidudu tōpina tudige magu ḷaukidudu pāḷeyake muridu di vaukasaru jāruvaru jōḍisi matte kurubalava tōkuvaru gaṃdharvaru bhayā nīkadōhari sāhariya sa vyākulara nīkṣisutaliddudu pavanajādigaḷu

Report an error

ಈಸು ಕೊಂಡಾಡಿದರೆ ಸುರರುಪ ಹಾಸ ಮಾಡುವರೆಮ್ಮ ನೆನುತ ಮ ಹಾಸಗರ್ವರು ಚಿತ್ರಸೇನನ ಮನ್ನಣೆಯ ಭಟರು ಪಾಶ ಚಕ್ರ ಮುಸುಂಡಿ ಪರಿಘ ಪ್ರಾಸ ಪರಶು ಕೈಪಾಣ ಸಬಳ ಶ ರಾಸನಾದಿಯ ಕೈದುಗಾರರು ಕದನಕನುವಾಯ್ತು

īsu koṃḍāḍidare surarupa hāsa māḍuvaremma nenuta ma hāsagarvaru citrasēnana mannaṇeya bhaṭaru pāśa cakra musuṃḍi parigha prāsa paraśu kaipāṇa sabaḷa śa rāsanādiya kaidugāraru kadanakanuvāytu

Report an error

ಜೋಡುಮಾಡಿತು ಖಚರ ಬಲ ಕೈ ಮಾಡಿ ಕವಿದುದು ಚಿತ್ರಸೇನನ ಜೋಡಿಯಲಿ ಜರ್ಝಾರರಿರಿದರು ಮುಂದೆ ಮುಂಗುಡಿಯ ಓಡಿದರೆ ಹಾವಿಂಗೆ ಹದ್ದಿನ ಕೂಡೆ ಮರುಕವೆ ಫಡಯೆನುತ ಕೈ ಮಾಡಿದರು ರಿಪುಭಟರು ನಿಂದರು ನಿಮಿಷ ಮಾತ್ರದಲಿ

jōḍumāḍitu khacara bala kai māḍi kavidudu citrasēnana jōḍiyali jarjhārariridaru muṃde muṃguḍiya ōḍidare hāviṃge haddina kūḍe marukave phaḍayenuta kai māḍidaru ripubhaṭaru niṃdaru nimiṣa mātradali

Report an error

ಗಿಳಿಯ ಹಿಂಡಿನ ಮೇಲೆ ಗಿಡುಗನ ಬಳಗ ಕವಿವಂದದಲಿ ಸೂಟಿಯೊ ಳಳವಿಗೊಡ್ಡಿನ ಚಾತುರಂಗವನಿಕ್ಕಡಿಯ ಮಾಡಿ ಎಲೆ ಸುಯೋಧನ ಬೀಳು ಕೈದುವ ನಿಳುಹಿ ಖೇಚರರಾಯನಂಘ್ರಿಯೊ ಳೆಲವೊ ರವಿಸುತ ಹೋಗೆನುತ ಹೊಕ್ಕಿರಿದರುರವಣಿಸಿ

giḷiya hiṃḍina mēle giḍugana baḷaga kavivaṃdadali sūṭiyo ḷaḷavigoḍḍina cāturaṃgavanikkaḍiya māḍi ele suyōdhana bīḷu kaiduva niḷuhi khēcararāyanaṃghriyo ḷelavo ravisuta hōgenuta hokkiridaruravaṇisi

Report an error

ಹೊಡಕರಿಸಿ ಹೊದರೆದ್ದು ಬಲ ಸಂ ಗಡಿಸಿ ತಲೆವರಿಗೆಯಲಿ ಕರ್ಣನ ಬಿಡುಸರಳ ಬೆದರಿಕೆಗೆ ಬೆದರದೆ ನೂಕಿತಳವಿಯಲಿ ಫಡ ಸುಯೋಧನ ತೊಲಗು ಕರ್ಣನ ಕಡುಹಿನಲಿ ಫಲವೇನು ನಿನ್ನಯ ಪಡೆಯು ಬಂದರೆ ಕೆಡದೆಯೆಂದುದು ಕೂಡೆ ಸುರಸೇನೆ

hoḍakarisi hodareddu bala saṃ gaḍisi talevarigeyali karṇana biḍusaraḷa bedarikege bedarade nūkitaḷaviyali phaḍa suyōdhana tolagu karṇana kaḍuhinali phalavēnu ninnaya paḍeyu baṃdare keḍadeyeṃdudu kūḍe surasēne

Report an error

ಗರುವರೇ ನೀವೆಲವೊ ಸುರಪನ ಪುರದ ನಟ್ಟವಿಗರು ಸುಯೋಧನ ನರಮನೆಯನಟ್ಟವಿಗಳಿಗೆ ಪಾಡಹಿರಿ ತುಡುಕುವೊಡೆ ಅರಸು ಪರಿಯಂತೇಕೆ ನಿಮಗೆನು ತರಿಭಟರಿಗಾಗ್ನೇಯ ವಾರುಣ ನಿರುತಿ ಮೊದಲಾದಸ್ತ್ರಚಯವನು ಕವಿಸಿದನು ಕರ್ಣ

garuvarē nīvelavo surapana purada naṭṭavigaru suyōdhana naramaneyanaṭṭavigaḷige pāḍahiri tuḍukuvoḍe arasu pariyaṃtēke nimagenu taribhaṭarigāgnēya vāruṇa niruti modalādastracayavanu kavisidanu karṇa

Report an error

ಸವೆದವಿನಸುತನಂಬು ಖೇಚರ ನವಗಡಿಸಿ ಕವಿದೆಚ್ಚನೀತನ ಸವಗ ಸೀಸಕ ಜೋಡು ತೊಟ್ಟವು ಸರಳ ಜೋಡುಗಳ ಕವಿದುದೆಡ ಬಲವಂಕದಲಿ ಸುರ ನಿವಹ ಸೂಟಿಯ ಸರಳ ಸೋನೆಯ ಲವಗಡಿಸಿತಡಿಗಡಿಗೆ ಕರ್ಣನ ರಥದ ವಾಜಿಗಳು

savedavinasutanaṃbu khēcara navagaḍisi kavideccanītana savaga sīsaka jōḍu toṭṭavu saraḷa jōḍugaḷa kavidudeḍa balavaṃkadali sura nivaha sūṭiya saraḷa sōneya lavagaḍisitaḍigaḍige karṇana rathada vājigaḷu

Report an error

ಜೋಡು ಹರಿದುದು ಸೀಸಕದ ದಡಿ ಬೀಡೆ ಬಿರಿದುದು ತಲೆಯ ಚಿಪ್ಪಿನ ಜೋಡು ಜರಿದುದು ಮನಕೆ ಸುರಿದುದು ಸೊಗಡು ರಣರಸದ ಖೋಡಿ ಖೊಪ್ಪರಿಸಿದುದು ಧೈರ್ಯವ ನೀಡಿರಿದುದಪದೆಸೆ ವಿಟಾಳಿಸಿ ಖೇಡತನ ಭುಲ್ಲವಿಸುತಿರ್ದುದು ಭಾನುನಂದನನ

jōḍu haridudu sīsakada daḍi bīḍe biridudu taleya cippina jōḍu jaridudu manake suridudu sogaḍu raṇarasada khōḍi khopparisidudu dhairyava nīḍiridudapadese viṭāḷisi khēḍatana bhullavisutirdudu bhānunaṃdanana

Report an error

ಮತ್ತೆಕೊಂಡನು ಬಿಲು ಸರಳ ನಭ ಕೊತ್ತಿದನು ರಣಭಯವನಹಿತನ ಕುತ್ತಿದನು ಕಣ್ಣಿನಲಿ ಕಡಿದನು ಮನದೊಳರಿಭಟನ ಕೆತ್ತಿದನು ಕೂರಲಗಿನಲಿ ಮುಳು ಮುತ್ತ ಹೂತಂದದಲಿ ಹುದುಗಿದ ನೆತ್ತರಿನ ನೆಣವಸೆಯೊಳೆಸೆದನು ರಥದೊಳಾ ಖಚರ

mattekoṃḍanu bilu saraḷa nabha kottidanu raṇabhayavanahitana kuttidanu kaṇṇinali kaḍidanu manadoḷaribhaṭana kettidanu kūralaginali muḷu mutta hūtaṃdadali hudugida nettarina neṇavaseyoḷesedanu rathadoḷā khacara

Report an error

ನೊಂದದುಬ್ಬಿತು ದರ್ಪಶಿಖಿ ಖತಿ ಯಿಂದ ಮನದುಬ್ಬಿನಲಿ ಘಾತದ ಕಂದುಕದವೋಲ್ ಕುಣಿದುದಂತಃಖೇದ ಕೊಬ್ಬಿನಲಿ ನೊಂದುದಿನಿಸಿಲ್ಲಕಟ ದೈತ್ಯರ ದಂದುಗದಲಾವಿಮ್ದು ಮರ್ತ್ಯರು ಬಂದಿವಿಡಿದರೆ ಬಲುಹನೆನುತೋರಂತೆ ಚಿಂತಿಸಿದ

noṃdadubbitu darpaśikhi khati yiṃda manadubbinali ghātada kaṃdukadavōl kuṇidudaṃtaḥkhēda kobbinali noṃdudinisillakaṭa daityara daṃdugadalāvimdu martyaru baṃdiviḍidare baluhanenutōraṃte ciṃtisida

Report an error

ಖತಿಯಲುಗಿದನು ದಿವ್ಯ ಬಾಣ ಪ್ರತತಿಯನು ರಥಸೂತ ಹಯ ಸಂ ತತಿ ಶರಾಸನ ಕೇತು ದಂಡಚ್ಛತ್ರ ಚಾಮರವ ಹುತವಹನೊಳೊಟ್ಟಿದನು ಸಮರ ವ್ಯತಿಕರದೊಳಾಗ್ನೇಯ ಶರ ಚಿ ಮ್ಮಿತು ಛಡಾಳಿಸಿ ಕೆಂಡಗೆದರಲು ಕರ್ಣ ಬೆರಗಾದ

khatiyalugidanu divya bāṇa pratatiyanu rathasūta haya saṃ tati śarāsana kētu daṃḍacchatra cāmarava hutavahanoḷoṭṭidanu samara vyatikaradoḷāgnēya śara ci mmitu chaḍāḷisi keṃḍagedaralu karṇa beragāda

Report an error

ವಿರಥನಾದನು ಹಲಗೆ ಖಡ್ಗದ ಲರಿಭಟನ ಪಡಿಮುಖಕೆ ಚಿಮ್ಮಿದ ನೆರಡನೊಂದಂಬಿನಲಿ ಕಡಿದನು ಜಡಿದನಿನಸುತನ ತಿರುಗಿ ಹಾಯ್ದನು ಕರ್ಣನಾತನ ಮುರಿವ ಕಂಡು ವಿಕರ್ಣ ತನ್ನಯ ವರ ರಥವ ಚಾಚಿದನು ಬೋಳೈಸಿದನು ಭಾನುಜನ

virathanādanu halage khaḍgada laribhaṭana paḍimukhake cimmida neraḍanoṃdaṃbinali kaḍidanu jaḍidaninasutana tirugi hāydanu karṇanātana muriva kaṃḍu vikarṇa tannaya vara rathava cācidanu bōḷaisidanu bhānujana

Report an error

ಪೈಸರಿಸಿತೋ ಕುರು ಚತುರ್ಬಲ ಘಾಸಿಯಾದನು ಕರ್ನನಿದು ದೊರೆ ಗೈಸಲೇ ದುಮ್ಮಾನವೆನುತಲ್ಲಲ್ಲಿ ಕುರುಸೇನೆ ಓಸರಿಸಿದುದು ಸಮರಮುಖದಲಿ ಸೂಸಿದರು ಸಮರಥರು ಸೋಲವ ನಾ ಸುಯೋಧನ ನಗುತ ಕಂಡನು ನೋಡಿ ಕೆಲಬಲನ

paisarisitō kuru caturbala ghāsiyādanu karnanidu dore gaisalē dummānavenutallalli kurusēne ōsarisidudu samaramukhadali sūsidaru samaratharu sōlava nā suyōdhana naguta kaṃḍanu nōḍi kelabalana

Report an error

ಅವನಿಪನ ಮೊಗಸನ್ನೆಯಲಿ ಸೂ ಳವಿಸಿದವು ನಿಸ್ಸಾಳಕೋಟಿಗ ಳವಚಿದುದು ಬಹುವಿಧದ ವಾದ್ಯಧ್ವನಿ ದಿಶಾಮುಖವ ತವತವಗೆ ಧುರ ತೋರಹತ್ತರು ತವಕಿಸುತ ಹುರಿಯೇರಿದರು ಕೌ ರವರು ಕರ್ಣನ ಹರಿಬದಾಹವವೆನಗೆ ತನಗೆನುತ

avanipana mogasanneyali sū ḷavisidavu nissāḷakōṭiga ḷavacidudu bahuvidhada vādyadhvani diśāmukhava tavatavage dhura tōrahattaru tavakisuta huriyēridaru kau ravaru karṇana haribadāhavavenage tanagenuta

Report an error

ಮುರಿದ ಬಲ ಸಂವರಿಸಿ ಪಡಿಮುಖ ಕುರುಬಿದುದು ದುರ್ಯೋಧನಾನುನ ರರಸಿದರು ಗಂಧರ್ವನಾವೆಡೆ ತೋರು ತೋರೆನುತ ತರುಬುವುದು ಜಯವೊಮ್ಮೆ ಮನದಲಿ ಕರುಬುವುದು ಮತ್ತೊಮ್ಮೆ ತಪ್ಪೇ ನಿರಿದಸಹಸವ ತೋರೆನುತ ಬೆರಸಿದರು ಪರಬಲವ

murida bala saṃvarisi paḍimukha kurubidudu duryōdhanānuna rarasidaru gaṃdharvanāveḍe tōru tōrenuta tarubuvudu jayavomme manadali karubuvudu mattomme tappē niridasahasava tōrenuta berasidaru parabalava

Report an error

ಅರಸನನುಜರೆ ನೀವು ಕರ್ಣನ ಹರಿಬದವರೇ ಹರಹರೆಮಗಿ ನ್ನರಿದಲೈ ನಿಮಗೀಸು ಖತಿ ಝೋಂಪಿಸಿತು ಬಳಿಕೇನು ತರಹರವು ತಮಗಿಲ್ಲಲಾ ಪೂ ತುರೆಯೆನುತ ಪಡಿತಳಿಸಿ ಗಂಧ ರ್ವರ ಚಮೂಪರು ನೂಕಿದರು ತರುಬಿದರು ಪರಬಲವ

arasananujare nīvu karṇana haribadavarē haraharemagi nnaridalai nimagīsu khati jhōṃpisitu baḷikēnu taraharavu tamagillalā pū tureyenuta paḍitaḷisi gaṃdha rvara camūparu nūkidaru tarubidaru parabalava

Report an error

ಎಚ್ಚರಿರಿದರು ಹೊಯ್ದರಿಟ್ಟರು ಚುಚ್ಚಿದರು ಸೀಳಿದರು ನೂಕಿದ ನಿಚ್ಚಟರ ಸೇದಿದರು ದಡಿವಲೆ ಕಣ್ಣಿವಲೆಗಳಲಿ ಕೊಚ್ಚಿದರು ನುಗ್ಗಿದರು ಕೊಯಿದರು ನುಚ್ಚುನುರಿ ಮಾಡಿದರು ಹರಿಬಕೆ ಹೆಚ್ಚಿ ಹೊಗುವ ಮಹೀಶನನುಜರ ಮನ್ನಣೆಯ ಭಟರ

eccariridaru hoydariṭṭaru cuccidaru sīḷidaru nūkida niccaṭara sēdidaru daḍivale kaṇṇivalegaḷali koccidaru nuggidaru koyidaru nuccunuri māḍidaru haribake hecci hoguva mahīśananujara mannaṇeya bhaṭara

Report an error

ಗಾಯವಡೆಯದರಿಲ್ಲ ಸಾಯದೆ ನೋಯದವರಿಲ್ಲೆರಡು ಬಲದಲಿ ಬೀಯವಾದರು ಸುಭಟರೆನೆ ಗಂಧರ್ವಪತಿ ಮುಳಿದು ರಾಯನನುಜರನಟ್ಟಿದನು ದೀ ರ್ಘಾಯುವನು ಹಿಡಿದನು ವಿಕರ್ಣನ ನೋಯಲೆಚ್ಚನು ಕೆದರಿದನು ಕೌರವ ಚತುರ್ಬಲವ

gāyavaḍeyadarilla sāyade nōyadavarilleraḍu baladali bīyavādaru subhaṭarene gaṃdharvapati muḷidu rāyananujaranaṭṭidanu dī rghāyuvanu hiḍidanu vikarṇana nōyaleccanu kedaridanu kaurava caturbalava

Report an error

ಫಡಯೆನುತ ಕುರುರಾಯನಾತನ ಪಡಿಮುಖಕೆ ನೂಕಿದನು ಜೋಡಿಸಿ ಜಡಿವ ನಿಸ್ಸಾಳಾಯತದ ಕಹಲೆಗಳ ಕಳಕಳದ ಬಿಡುರಥದ ಧಟ್ಟಣೆಯ ಧಾಳಿಯ ಕಡುಗುದುರೆಗಳ ನೆತ್ತಿಯಂಕುಶ ದೆಡೆಯಘಟೆಯಾನೆಗಳ ದಳ ಸಂದಣಿಸಿತೊಗ್ಗಿನಲಿ

phaḍayenuta kururāyanātana paḍimukhake nūkidanu jōḍisi jaḍiva nissāḷāyatada kahalegaḷa kaḷakaḷada biḍurathada dhaṭṭaṇeya dhāḷiya kaḍuguduregaḷa nettiyaṃkuśa deḍeyaghaṭeyānegaḷa daḷa saṃdaṇisitogginali

Report an error

ನುಗ್ಗನಿವ ಕೈಕೊಂಬನೇ ರಣ ದಗ್ಗಳದ ಮೌಳಿಯಲಿ ಕದನದ ಹುಗ್ಗಿಗರ ಸಾಕಿದನು ಶಾಕಿನಿ ಡಾಕಿನೀ ಜನವ ಒಗ್ಗಿಕವಿದರನಿಂದ್ರಲೋಕದ ಸುಗ್ಗಿಯಲಿ ಸೇರಿಸಿದನಾಹವ ದುಗ್ಗಡವನೇನೆಂಬೆನೈ ಗಾಂಧರ್ವ ವಿಕ್ರಮದ

nugganiva kaikoṃbanē raṇa daggaḷada mauḷiyali kadanada huggigara sākidanu śākini ḍākinī janava oggikavidaraniṃdralōkada suggiyali sērisidanāhava duggaḍavanēneṃbenai gāṃdharva vikramada

Report an error

ಮೀಟೆನಿಪ ಗಂಧರ್ವರೊಂದೇ ಕೋಟಿ ಕವಿದುದು ಕುರುಬಲಕೆ ಪಡಿ ಕೋಟೆಯಾದುದು ನೃಪತಿ ಸಿಲುಕಿದನವರ ವೇಡೆಯಲಿ ದಾಟಿತರಸನ ಧೈರ್ಯ ಕೈದುಗ ಳಾಟ ನಿಂದುದು ಕರದ ಹೊಯ್ಲಲಿ ನೋಟಕರು ಘೋಳೆಂದರಿತ್ತಲು ಪಾಂಡವರ ವನದ

mīṭenipa gaṃdharvaroṃdē kōṭi kavidudu kurubalake paḍi kōṭeyādudu nr̥pati silukidanavara vēḍeyali dāṭitarasana dhairya kaiduga ḷāṭa niṃdudu karada hoylali nōṭakaru ghōḷeṃdarittalu pāṃḍavara vanada

Report an error

ಮುತ್ತಿದರಿಬಲ ಜಾಲವನು ನಭ ಕೊತ್ತಿ ದಿವ್ಯಾಸ್ತ್ರದಲಿ ಸೀಳಿದ ನೆತ್ತ ಮುರಿದೋಡಿದರೆ ರಥವನು ಹರಿಸಿ ಬೇಗದಲಿ ಒತ್ತಿ ಹರಿತಹ ರಥತುರಂಗಮ ಮುತ್ತಿದಿಭಸಂಘಾತವನು ನೃಪ ನೊತ್ತಿ ಕಡಿದನು ಹಯವ ಗಜರಥವುಳಿದ ಕಾಲಾಳ

muttidaribala jālavanu nabha kotti divyāstradali sīḷida netta muridōḍidare rathavanu harisi bēgadali otti haritaha rathaturaṃgama muttidibhasaṃghātavanu nr̥pa notti kaḍidanu hayava gajarathavuḷida kālāḷa

Report an error

ಇತ್ತ ಕೌರವರಾಯ ರಥವನು ಎತ್ತಿ ಬಿಟ್ಟನು ಖಚರರಾಯನು ಸುತ್ತಣಿನ ಚತುರಂಗ ಸೇನೆಯನಸಮಬಾಣದಲಿ ತೆತ್ತಿಗರ ಕರೆ ನಿನಗೆ ನೂಕದೆ ನುತ್ತ ಶರಸಂಧಾನ ಚಯದಲಿ ಮೆತ್ತಿದನು ಮೊನೆಗಣೆಗಳಲಿ ಖಚರೇಂದ್ರ ಕೈಮರೆಯ

itta kauravarāya rathavanu etti biṭṭanu khacararāyanu suttaṇina caturaṃga sēneyanasamabāṇadali tettigara kare ninage nūkade nutta śarasaṃdhāna cayadali mettidanu monegaṇegaḷali khacarēṃdra kaimareya

Report an error

ಮುರಿದ ಬಲಗರಿಗಟ್ಟಿ ನೋಡಿತು ಧರಣಿಪನ ಮುಂಗುಡಿಯಲೇರಿತು ತುರಗ ಗಜ ರಥ ಹರಿಗೆ ಸಬಳ ಮುಸುಂಡಿ ಪರಿಘದಲಿ ಉರುಬಿದನು ಖಚರೇಂದ್ರ ಕೌರವ ರರಸನನು ಶಕುನಿ ಸೈಂಧವ ರಿರದೆ ಹಿಂಗಿತು ಕೌರವೇಶ್ವರ ಸಿಲುಕಿದನು ಹಗೆಗೆ

murida balagarigaṭṭi nōḍitu dharaṇipana muṃguḍiyalēritu turaga gaja ratha harige sabaḷa musuṃḍi parighadali urubidanu khacarēṃdra kaurava rarasananu śakuni saiṃdhava rirade hiṃgitu kauravēśvara silukidanu hagege

Report an error

ಇಟ್ಟಣಿಸಿದರು ಮುಟ್ಟಿ ರಾಯನ ನಟ್ಟಲೀಸದೆ ಕುರುಚತುರ್ಬಲ ಹೊಟ್ಟುಗಳ ತೂರಿದರು ಹಿಡಿದರು ಕೌರವಾನುಜರ ಮುಟ್ಟಿ ಬಂದುದು ಕೇಡು ರಾಯನ ನಟ್ಟಿಹಿಡಿದುದು ದಿವಿಜ ಬಲ ಜಗ ಜಟ್ಟಿ ಚಿತ್ರಾಂಗದನು ನೋಡಿದ ಕೌರವೇಶ್ವರನ

iṭṭaṇisidaru muṭṭi rāyana naṭṭalīsade kurucaturbala hoṭṭugaḷa tūridaru hiḍidaru kauravānujara muṭṭi baṃdudu kēḍu rāyana naṭṭihiḍidudu divija bala jaga jaṭṭi citrāṃgadanu nōḍida kauravēśvarana

Report an error

ಹಯದ ಪಡಿವಾಘೆಯಲಿ ಬಾಹು ದ್ವಯವ ಬಿಗಿದನು ತನ್ನ ರಥದಲಿ ಜಯ ವಿಹೀನನ ನಿರಿಸಿದನು ಕುರುರಾಯ ವಲ್ಲಭನ ಭಯ ಭರಿತ ದುಶ್ಯಾಸನನ ದು ರ್ಜಯನ ಚಿತ್ರಾಂಗದ ವಿಕರ್ಣನ ನಯವಿದೂರರ ತಂದರಿಪ್ಪತ್ತೈದು ಸಹಭವರ

hayada paḍivāgheyali bāhu dvayava bigidanu tanna rathadali jaya vihīnana nirisidanu kururāya vallabhana bhaya bharita duśyāsanana du rjayana citrāṃgada vikarṇana nayavidūrara taṃdarippattaidu sahabhavara

Report an error

ಮುಟ್ಟದಿರಿ ಪರಿವಾರ ಕೈದುವ ಕೊಟ್ಟು ಹೋಗಲಿ ದೊರೆಗಳಾದರ ಬಿಟ್ಟವರಿಗಮರೇಂದ್ರನಾಣೆಯೆನುತ್ತ ಸಾರಿದರು ಕೆಟ್ಟುದೀ ಕುರುಪತಿಯ ದಳ ಜಗ ಜಟ್ಟಿಗಳು ಕರ್ಣಾದಿಗಳು ಮುಸು ಕಿಟ್ಟು ಜಾರಿತು ಕಂಡದೆಸೆಗವನೀಶ ಕೇಳೆಂದ

muṭṭadiri parivāra kaiduva koṭṭu hōgali doregaḷādara biṭṭavarigamarēṃdranāṇeyenutta sāridaru keṭṭudī kurupatiya daḷa jaga jaṭṭigaḷu karṇādigaḷu musu kiṭṭu jāritu kaṃḍadesegavanīśa kēḷeṃda

Report an error

ಖಿನ್ನನಾದನು ಪಾರ್ಥನನಿಲಜ ನುನ್ನತೋತ್ಸವನಾದನತಿ ಸಂ ಪನ್ನ ಸಮ್ಮದರಾದರಾ ಮಾದ್ರೀಕುಮಾರಕರು ಇನ್ನು ಪಾಂಡವರಾಜ್ಯಸಿರಿಯೆಮ ಗಿನ್ನು ಲೇಸಹುದಕಟ ದೈವದ ಗನ್ನಗತಕವೆಯೆನುತ ಹಿಗ್ಗಿತು ಮುನಿಜನಸ್ತೋಮ

khinnanādanu pārthananilaja nunnatōtsavanādanati saṃ panna sammadarādarā mādrīkumārakaru innu pāṃḍavarājyasiriyema ginnu lēsahudakaṭa daivada gannagatakaveyenuta higgitu munijanastōma

Report an error

ಭಾವನವರರ್ತಿಯಲಿ ಜಲಕೇ ಳೀವಿನೋದಕೆ ಬಂದು ಗಂಧ ರ್ವಾವಳಿಯ ಕೇಳಿಯಲಿ ಚಿತ್ತೈಸಿದರಲಾಯೆನುತ ದೇವಿಯರು ನಸುನಗುತ ಚಿತ್ತದ ಚಾವಡಿಯಲೋಲೈಸಿಕೊಂಡರು ಭೂವಳಯದೇಕಾಧಿಪತ್ಯದ ಸೌಖ್ಯ ಸಂಪದವ

bhāvanavarartiyali jalakē ḷīvinōdake baṃdu gaṃdha rvāvaḷiya kēḷiyali cittaisidaralāyenuta dēviyaru nasunaguta cittada cāvaḍiyalōlaisikoṃḍaru bhūvaḷayadēkādhipatyada saukhya saṃpadava

Report an error

ಕೇಳಿದನು ಯಮಸೂನು ದುಗುಡವ ತಾಳಿದನು ನಳನಹುಷ ಭರತ ನೃ ಪಾಲ ಪಾರಂಪರೆಯಲುದಿಸಿದ ಸೋಮವಂಶದಲಿ ಕೋಳುವೋದುದೆ ಕೀರ್ತಿಯೆಮ್ಮೀ ಬಾಳಿಕೆಯ ಸುಡಲೆನುತ ಚಿಂತಾ ಲೋಲನಿದ್ದನು ವೀರ ನಾರಾಯಣನ ನೆನೆಯುತ್ತ

kēḷidanu yamasūnu duguḍava tāḷidanu naḷanahuṣa bharata nr̥ pāla pāraṃpareyaludisida sōmavaṃśadali kōḷuvōdude kīrtiyemmī bāḷikeya suḍalenuta ciṃtā lōlaniddanu vīra nārāyaṇana neneyutta

Report an error

Illustration: Verse & Place (Project-owned).