ನಕುಲ ಪಶ್ಚಿಮ ದೆಸೆಯ ಭೂಪಾ ಲಕರ ಗೆಲಿದನು ನೆರೆದ ರತ್ನ ಪ್ರಕರದಿಂದಳಕಾಪುರಿಗೆ ಮಿಗಿಲಾಯ್ತು ನೃಪನಗರ
nakula paścima deseya bhūpā lakara gelidanu nereda ratna prakaradiṃdaḷakāpurige migilāytu nr̥panagara
ಸಭಾ ಪರ್ವ — ಸಂಧಿ ೬ · ಸಭಾ ಪರ್ವ — ಸಂಧಿ ೬
sabhā parva — saṃdhi 6
The complete sabha parva · sandhi 6 in Kannada.
26 passagesKannada with transliteration
Invocation
ನಕುಲ ಪಶ್ಚಿಮ ದೆಸೆಯ ಭೂಪಾ ಲಕರ ಗೆಲಿದನು ನೆರೆದ ರತ್ನ ಪ್ರಕರದಿಂದಳಕಾಪುರಿಗೆ ಮಿಗಿಲಾಯ್ತು ನೃಪನಗರ
nakula paścima deseya bhūpā lakara gelidanu nereda ratna prakaradiṃdaḷakāpurige migilāytu nr̥panagara
ಕೇಳು ಜನಮೇಜಯ ಧರಿತ್ರೀ ಪಾಲ ಪಶ್ಚಿಮ ದೆಸೆಯ ಭೂಮೀ ಪಾಲಕರ ಮೇಲೆತ್ತಿ ನಡೆದನು ನಕುಲನೊಲವಿನಲಿ ಧಾಳಿ ಹರಿದುದು ಮರು ಯವನ ನೇ ಪಾಳ ರೋಹಿತರೆಂದೆನಿಪ ಭೂ ಪಾಲಕರ ಮುರಿದವರ ಸಪ್ತಾಂಗವ ವಿಭಾಡಿಸಿದ
kēḷu janamējaya dharitrī pāla paścima deseya bhūmī pālakara mēletti naḍedanu nakulanolavinali dhāḷi haridudu maru yavana nē pāḷa rōhitareṃdenipa bhū pālakara muridavara saptāṃgava vibhāḍisida
ಹೇಮಕನ ಸೈರಿಭಕನೆಂಬ ಸ ನಾಮರನು ಮುರಿದನು ಕಳಿಂಗದ ಭೂಮಿಪರ ಸದೆದನು ತ್ರಿಗರ್ತರ ಶಿಬಿಯ ಸಂತತಿಯ ಹೇಮ ಮಾತ್ರವನುಳುಹದವದಿರ ಭೂಮಿಗಳನವರ್ಗಿತ್ತು ವಸ್ತು ಸ್ತೋಮವನು ನೆರಹಿದನು ನಡೆದನು ಮುಂದೆ ಪಶ್ಚಿಮಕೆ
hēmakana sairibhakaneṃba sa nāmaranu muridanu kaḷiṃgada bhūmipara sadedanu trigartara śibiya saṃtatiya hēma mātravanuḷuhadavadira bhūmigaḷanavargittu vastu stōmavanu nerahidanu naḍedanu muṃde paścimake
ಮುರಿದನಗ್ಗದ ಚೇಕಿತಾನರ ನೆರಗಿದನು ಬರ್ಬರ ತುರುಷ್ಕರ ನೊರಗಿಸಿದನಾಹವದೊಳಾಭೀರಕರ ಬಾಹ್ಲಿಕರ ಸೆರೆಯ ಹಿಡಿದನು ಪಾರ್ವತೇಯರ ನುರುಕುಗೊಳಿಸಿದ ಜೀನರಂಬ ಷ್ಠರನು ಸಿಂಧು ಸರಸ್ವತೀ ತೀರದ ಮಹೀಶ್ವರರ
muridanaggada cēkitānara neragidanu barbara turuṣkara noragisidanāhavadoḷābhīrakara bāhlikara sereya hiḍidanu pārvatēyara nurukugoḷisida jīnaraṃba ṣṭharanu siṃdhu sarasvatī tīrada mahīśvarara
ರಣದ ಸಂಕೇತಗಳೊಳುತ್ಸವ ರಣಸಮರ್ಥರ ಹಿಂಡಿದನು ಚಾ ರಣರ ಖುರಸಾಣರನು ಪುಷ್ಕರ ವರ ನಿವಾಸಿಗಳ ಹಣಿದನಲ್ಲಿಂದಿತ್ತ ಮಿಗೆ ಪಡು ವಣ ದಿಗಂತದಲದಟರಸ ಪ ಟ್ಟಣದವರ ಪಂಚನದ ಭೂಮಿಯ ಭೂಮಿಪರ ಗೆಲಿದ
raṇada saṃkētagaḷoḷutsava raṇasamarthara hiṃḍidanu cā raṇara khurasāṇaranu puṣkara vara nivāsigaḷa haṇidanalliṃditta mige paḍu vaṇa digaṃtadaladaṭarasa pa ṭṭaṇadavara paṃcanada bhūmiya bhūmipara gelida
ಜ್ಯೋತಿಕರ ವಣ್ಣಕಟಕರ ಕೃತ ಯಾತಿಕರ ಯೌಧೇಯ ಸಂವೀ ರಾತಿಶಯ ಬಡಹಾರರಮಳ ದ್ವಾರಪಾಲಕರ ಘಾತಿಸಿದನವರುಗಳ ವಿತ್ತ ವ್ರಾತವನು ಹೇರಿಸಿದನೆಡ ಬಲ ದಾತಗಳನಪ್ಪಳಿಸಿ ತೆಗೆದನು ಸಕಲ ವಸ್ತುಗಳ
jyōtikara vaṇṇakaṭakara kr̥ta yātikara yaudhēya saṃvī rātiśaya baḍahāraramaḷa dvārapālakara ghātisidanavarugaḷa vitta vrātavanu hērisidaneḍa bala dātagaḷanappaḷisi tegedanu sakala vastugaḷa
ಮಾವನಲ್ಲಿಗೆ ಬಂದಡಾ ಮಾ ದ್ರಾವನೀಪತಿ ಶಲ್ಯ ಮಿಗೆ ಸಂ ಭಾವಿಸಿದನೊಲಿದಿತ್ತ ನೀತಂಗಖಿಳ ವಸ್ತುಗಳ ತೀವಿದರು ಭಂಡಿಯಲಿ ಮುಂದಣ ಜಾವಟೆಯ ಚಪಳರಿಗೆ ಹರಿಯೆ ನೃ ಪಾವಳಿಗಳಲ್ಲಲ್ಲಿ ತೆತ್ತರು ಕಂಡ ವಸ್ತುಗಳ
māvanallige baṃdaḍā mā drāvanīpati śalya mige saṃ bhāvisidanoliditta nītaṃgakhiḷa vastugaḷa tīvidaru bhaṃḍiyali muṃdaṇa jāvaṭeya capaḷarige hariye nr̥ pāvaḷigaḷallalli tettaru kaṃḍa vastugaḷa
ತಳಿತು ಬಿಟ್ಟುದು ಸೇನೆ ಪಡುವಣ ಜಲಧಿಯ ಕರಾವಳಿಗಳಲಿ ಕೇ ವಳಿಸಿದರು ಕೊಲ್ಲಣಿಗೆಯಲಿ ಕೊಂಡರು ಸುವಸ್ತುಗಳ ಕಳಿವರಿದು ಹಿಮಗಿರಿಯ ಮೂಲೆಗೆ ನಿಲುಕಿ ಸಕಲ ಮ್ಲೇಚ್ಛ ಭೂಪಾ ವಳಿಯ ಭಂಗಿಸಿ ಹೇರಿಸಿದನೊಂಟೆಗಳಲಾ ಧನವ
taḷitu biṭṭudu sēne paḍuvaṇa jaladhiya karāvaḷigaḷali kē vaḷisidaru kollaṇigeyali koṃḍaru suvastugaḷa kaḷivaridu himagiriya mūlege niluki sakala mlēccha bhūpā vaḷiya bhaṃgisi hērisidanoṃṭegaḷalā dhanava
ಹೇರಿದವು ಬಹು ಧನವನೊಂಟೆಗ ಳಾರು ಸಾವಿರ ಮಿಕ್ಕ ವಸ್ತುವ ಹೇರಿದವುಯೆತ್ತುಗಳ ಹೂಡಿದ ಭಂಡಿ ಸಾವಿರವು ಆರು ಲಕ್ಷ ತುರಂಗ ಉಷ್ಟ್ರಗ ಳಾರು ಕೋಟಿಗಳಾನೆ ಗಣನೆಯ ಮೀರಿದವು ಮೃಗ ಪಕ್ಷಿ ಕೋಣನ ಕುರಿಯ ಹಿಂಡುಗಳ
hēridavu bahu dhanavanoṃṭega ḷāru sāvira mikka vastuva hēridavuyettugaḷa hūḍida bhaṃḍi sāviravu āru lakṣa turaṃga uṣṭraga ḷāru kōṭigaḷāne gaṇaneya mīridavu mr̥ga pakṣi kōṇana kuriya hiṃḍugaḷa
ಮರಳಿತೀತನ ಸೇನೆ ಬಂದನು ಪುರಕೆ ಕಂಡನು ಧರ್ಮಪುತ್ರನ ಚರಣಕೆರಗಿದನಖಿಳ ವಸ್ತುವ ಬೇರೆ ತೋರಿಸಿದ ಅರಸನುತ್ಸವವನು ವೃಕೋದರ ನರ ನಕುಲ ಸಹದೇವನಂತಃ ಪುರದ ಹರುಷದ ಸಿರಿಯನದನೇವಣ್ಣಿಸುವೆನೆಂದ
maraḷitītana sēne baṃdanu purake kaṃḍanu dharmaputrana caraṇakeragidanakhiḷa vastuva bēre tōrisida arasanutsavavanu vr̥kōdara nara nakula sahadēvanaṃtaḥ purada haruṣada siriyanadanēvaṇṇisuveneṃda
ಕಳವು ಹುಸಿ ಹಾದರ ವಿರೋಧ ಸ್ಖಲಿತವಾರಡಿ ಬಂದಿ ದಳದುಳ ಬೆಳುಗವತೆಯನ್ಯಾಯ ಪರಿಭವ ಠಕ್ಕು ಡೊಳ್ಳಾಸ ಹಳಿವು ವಂಚನೆ ಜಾತಿ ಸಂಕರ ಕೊಲೆಯು ಡಾವರ ವಿಕೃತಿ ಮಾಯಾ ವಳಿಗಳಡಗಿದವೀ ಯುಧಿಷ್ಠಿರ ನೃಪನ ರಾಜ್ಯದಲಿ
kaḷavu husi hādara virōdha skhalitavāraḍi baṃdi daḷaduḷa beḷugavateyanyāya paribhava ṭhakku ḍoḷḷāsa haḷivu vaṃcane jāti saṃkara koleyu ḍāvara vikr̥ti māyā vaḷigaḷaḍagidavī yudhiṣṭhira nr̥pana rājyadali
ನೃಗನ ಭರತನ ದುಂದುಮಾರನ ಸಗರ ಪೂರೂರವ ಸನಾತನ ಮಗನ ನಹುಷನ ಕಾರ್ತವೀರ್ಯನ ನಳನ ದಶರಥನ ಹಗಲಿರುಳ ವಲ್ಲಭರ ವಂಶದ ವಿಗಡರಲಿ ಯಮಸೂನು ಸರಿಯೋ ಮಿಗಿಲೊ ಬಲ್ಲವನಾರೆನಲು ಸಲಹಿದನು ಭೂತಳವ
nr̥gana bharatana duṃdumārana sagara pūrūrava sanātana magana nahuṣana kārtavīryana naḷana daśarathana hagaliruḷa vallabhara vaṃśada vigaḍarali yamasūnu sariyō migilo ballavanārenalu salahidanu bhūtaḷava
ದ್ವಾಪರದ ಮರೆ ಜವನಿಕೆಯಲೀ ದ್ವಾಪರವೊ ಕೃತಯುಗವೊ ಧರ್ಮದ ರೂಪು ನಾನಾ ಮುಖದಲವತರಿಸಿತೊ ದಿಗಂತದಲಿ ಸ್ಥಾಪಿಸಿತು ವರ್ಣಾಶ್ರಮದ ಧ ರ್ಮೋಪಚಯವೆರಡಂಘ್ರಿ ಮುರಿದು ವಿ ರೂಪವಾದುದಧರ್ಮವೀ ಧರ್ಮಜನ ರಾಜ್ಯದಲಿ
dvāparada mare javanikeyalī dvāparavo kr̥tayugavo dharmada rūpu nānā mukhadalavatarisito digaṃtadali sthāpisitu varṇāśramada dha rmōpacayaveraḍaṃghri muridu vi rūpavādudadharmavī dharmajana rājyadali
ಬಡಗಲುತ್ತರ ಕುರುಗಳಿತ್ತಲು ಪಡುವಲುದಧಿ ವಿಭೀಷಣನ ಪುರ ಗಡಿ ಕೃತಾಂತನ ದೆಸೆಗೆ ಮೂಡಲು ದಿನಪನುದಯಾದ್ರಿ ಪೊಡವಿಯದರಲಿ ಯಮಜನಾಟಗೆ ನಡುಗುವುದು ರಾಯಂಗೆ ತೆತ್ತುದು ಗಡ ಸುವಸ್ತುವನೇನಸಾಧ್ಯವು ಕೈಷ್ಣನೊಲಿದರಿಗೆ
baḍagaluttara kurugaḷittalu paḍuvaludadhi vibhīṣaṇana pura gaḍi kr̥tāṃtana desege mūḍalu dinapanudayādri poḍaviyadarali yamajanāṭage naḍuguvudu rāyaṃge tettudu gaḍa suvastuvanēnasādhyavu kaiṣṇanolidarige
ಕಳನ ಸವೆದರು ಮೂರು ಯೋಜನ ವಳಯದಲಿ ಪಡಿಯಗಳು ಕೋಟಾ ವಳಯ ಸುಯ್ಧಾನದಲಿ ಹೊಯ್ದರು ರತ್ನ ಕಾಂಚನವ ಕೆಲದೊಳೈಗಾವುದದೊಳಿಕ್ಕಿದ ತಳಿಯ ಮಧ್ಯದೊಳಖಿಳ ವಸ್ತ್ರಾ ವಳಿಯನೊಟ್ಟಿದರದರ ಕೆಲದಲಿ ರಾಯಕೇಳೆಂದ
kaḷana savedaru mūru yōjana vaḷayadali paḍiyagaḷu kōṭā vaḷaya suydhānadali hoydaru ratna kāṃcanava keladoḷaigāvudadoḷikkida taḷiya madhyadoḷakhiḷa vastrā vaḷiyanoṭṭidaradara keladali rāyakēḷeṃda
ಹತ್ತು ಯೋಜನ ವಳಯದಲಿ ಮಿಗೆ ಸುತ್ತು ಬೇಲಿಯ ಮಧ್ಯದಲಿ ಹಯ ಮತ್ತಗಜ ರಥ ಗೋಮಹಿಷಿ ವರ ಸೈರಿಭದ ಚಯಕೆ ಉತ್ತಮಾಂಗನೆಯರಿಗೆ ಭವನಗ ಳಿತ್ತ ಬೇರಿರವಾಯ್ತು ನೃಪ ಯಾ ಗೋತ್ತಮಕೆ ಪರುಠವಿಸಿದರು ಭೂಪಾಲ ಕೇಳೆಂದ
hattu yōjana vaḷayadali mige suttu bēliya madhyadali haya mattagaja ratha gōmahiṣi vara sairibhada cayake uttamāṃganeyarige bhavanaga ḷitta bēriravāytu nr̥pa yā gōttamake paruṭhavisidaru bhūpāla kēḷeṃda
ಬಳಿದ ಸೊದೆಗಳ ಬಾವಿನೂರರ ವಳಯ ತುಂಬಿತು ತೈಲ ಘೃತ ಮಧು ಗಳಲಿ ವರ ಗುಡ ಶರ್ಕರಾದಿಯ ಕಣಜ ಕೋಟಿಗಳು ಕಳವೆಯಕ್ಕಿಯ ಗೋಧಿ ಕಡಲೆಯ ವಿಳಸ ರಾಶಿಯದೇಸು ಯೋಜನ ದಳತೆಯೆಂದಾರರಿವರೆಂದನು ಮುನಿ ನೃಪಾಲಂಗೆ
baḷida sodegaḷa bāvinūrara vaḷaya tuṃbitu taila ghr̥ta madhu gaḷali vara guḍa śarkarādiya kaṇaja kōṭigaḷu kaḷaveyakkiya gōdhi kaḍaleya viḷasa rāśiyadēsu yōjana daḷateyeṃdārarivareṃdanu muni nr̥pālaṃge
ನೆರೆದುದರ್ಥವನಂತವವನೀ ಶ್ವರರು ವಶವಾದರು ಚತುಸ್ಸಾ ಗರದ ಮಧ್ಯದಲಾಣೆ ಸಂದುದು ಧರ್ಮನಂದನನ ಕರೆಸು ಬೇಹವರನು ಮಹೀಶಾ ಧ್ವರಕೆ ಸಮಯವಿದೆಂದು ಪಾರಾ ಶರಿಯ ಧೌಮ್ಯರು ಮಂತ್ರ ಶಾಲೆಯೊಳೆಂದರವನಿಪಗೆ
neredudarthavanaṃtavavanī śvararu vaśavādaru catussā garada madhyadalāṇe saṃdudu dharmanaṃdanana karesu bēhavaranu mahīśā dhvarake samayavideṃdu pārā śariya dhaumyaru maṃtra śāleyoḷeṃdaravanipage
ಹೋಗು ಫಲುಗುಣ ಕಂಸಮಥನನ ಬೇಗ ಬಿಜಯಂಗೈಸಿ ತಾ ನೃಪ ಯಾಗವಾತನ ಹೊರೆ ಮದೀಯ ಜಯಾಭಿವೃದ್ಧಿಗಳು ಆಗ ಹೋಗಾತನದು ತಟ್ಟಯ ವಾಗದೀ ಕ್ಷಣವೆನಲು ಮನದನು ರಾಗದಲಿ ಕಲಿಪಾರ್ಥ ಬಂದನು ಕಂಡನಚ್ಯುತನ
hōgu phaluguṇa kaṃsamathanana bēga bijayaṃgaisi tā nr̥pa yāgavātana hore madīya jayābhivr̥ddhigaḷu āga hōgātanadu taṭṭaya vāgadī kṣaṇavenalu manadanu rāgadali kalipārtha baṃdanu kaṃḍanacyutana
ಬಿನ್ನವಿಸಿದನು ದಿಗ್ವಿಜಯ ಸಂ ಪನ್ನ ವಸ್ತು ವಿಧಾನವನು ಮೇ ಲಿನ್ನು ದೇವರು ಬಲ್ಲಿರುತ್ತರ ಕಾರ್ಯ ಸಂಗತಿಯ ನಿನ್ನ ಕೃಪೆಯಲಿ ರಾಜಮಖನಿ ಷ್ಪನ್ನವಾದರೆ ಬೊಪ್ಪನಿಂದ್ರನ ಮನ್ನಣೆಯ ಮೈ ಸೋಂಕಿನೋಲಗ ಸುಲಭವಹುದೆಂದ
binnavisidanu digvijaya saṃ panna vastu vidhānavanu mē linnu dēvaru balliruttara kārya saṃgatiya ninna kr̥peyali rājamakhani ṣpannavādare boppaniṃdrana mannaṇeya mai sōṃkinōlaga sulabhavahudeṃda
ಕರೆಸಿ ಯಾದವ ನಾಯಕರ ಸಂ ಹರಣೆಯನು ನಿಜಪುರದ ಕಾಹಿಂ ಗಿರಿಸಿ ಬಲದೇವಂಗೆ ನೇಮಿಸಿ ಸಕಲ ರಕ್ಷಣವ ತರಿಸಿ ಭಂಡಾರದಲಿ ವಿವಿಧಾ ಭರಣ ವಸನಾದಿಗಳ ಹೇರಿಸಿ ಹರಿ ಧನಂಜಯನೊಡನೆ ಬಂದನು ಬಂಧುಜನ ಸಹಿತ
karesi yādava nāyakara saṃ haraṇeyanu nijapurada kāhiṃ girisi baladēvaṃge nēmisi sakala rakṣaṇava tarisi bhaṃḍāradali vividhā bharaṇa vasanādigaḷa hērisi hari dhanaṃjayanoḍane baṃdanu baṃdhujana sahita
ಇದಿರುವಂದನು ಧರ್ಮಸುತ ಪದ ಪಯೋಜದಲೆರಗಿದನು ನಿನ ಗಿದು ವಿನೋದವಲೇ ವಿಮುಕ್ತಗೆ ಭಕ್ತಸಂಸ್ತರಣ ಕುದಿದು ಮರುಗಿದವರಸಿ ನಿನ್ನಯ ಪದವ ಕಾಣದೆ ಶ್ರುತಿಗಳೆಮ್ಮಯ ಸದನವಖಿಳಾಮ್ನಾಯ ನಿಕರವನೇಡಿಸುವದೆಂದ
idiruvaṃdanu dharmasuta pada payōjadaleragidanu nina gidu vinōdavalē vimuktage bhaktasaṃstaraṇa kudidu marugidavarasi ninnaya padava kāṇade śrutigaḷemmaya sadanavakhiḷāmnāya nikaravanēḍisuvadeṃda
ನಗುತ ಸಾಕೇಳೆಂದು ರಾಯನ ತೆಗೆದು ತಳ್ಕಿಸಿ ಕೈಯ್ಯ ತಳುಕಿನೊ ಳಗಧರನು ನೃಪಸಭೆಗೆ ಬಿಜಯಂಗೈದನೊಲವಿನಲಿ ಮುಗಿದ ಕರದಲಿ ವ್ಯಾಸ ಧೌಮ್ಯಾ ದಿಗಳು ಮೈಯಿಕ್ಕಿದರಖಿಳ ಮಂ ತ್ರಿಗಳು ಸಚಿವರು ನೆರೆದುದಾಳೋಚನೆಯ ಭವನದಲಿ
naguta sākēḷeṃdu rāyana tegedu taḷkisi kaiyya taḷukino ḷagadharanu nr̥pasabhege bijayaṃgaidanolavinali mugida karadali vyāsa dhaumyā digaḷu maiyikkidarakhiḷa maṃ trigaḷu sacivaru neredudāḷōcaneya bhavanadali
ಕಳುಹಿದನು ನಾನಾ ನೃಪರ ಮಂ ಡಲಕೆ ದೂತರನಖಿಳ ಋಷಿ ಸಂ ಕುಳಕೆ ಶಿಷ್ಟರ ಪರುಠವಿಸಿದನು ಹಸ್ತಿನಾಪುರಿಗೆ ಕಳುಹಿದನು ನಕುಲನನು ಬಳಿಕಿ ತ್ತಲು ನೃಪಾಧ್ವರ ಶಾಲೆಗಲ್ಲಿಯ ನೆಲನ ಶೋಧಿಸೆ ಕರೆಸಿದರು ಬಹುವಿಧದ ಶಿಲ್ಪಿಗರ
kaḷuhidanu nānā nr̥para maṃ ḍalake dūtaranakhiḷa r̥ṣi saṃ kuḷake śiṣṭara paruṭhavisidanu hastināpurige kaḷuhidanu nakulananu baḷiki ttalu nr̥pādhvara śālegalliya nelana śōdhise karesidaru bahuvidhada śilpigara
ಮಯನ ಮತದಲಿ ವಿಶ್ವಕರ್ಮನ ನಯ ವಿವೇಕದಲಮಲ ಮಖಶಾ ಲೆಯನು ನಿರ್ಮಿಸಿದರು ಸುಲಕ್ಷಣ ಶಾಸ್ತ್ರ ಸೂತ್ರದಲಿ ನಿಯತ ಪತ್ನೀ ಶಾಲೆ ಜನವೇ ದಿಯ ವರಾಂತರ‍್ವೇದಿ ಮಖವೇ ದಿಯ ಬಹಿರ್ವೇದಿಗಳನಳವಡಿಸಿದರು ವಹಿಲದಲಿ
mayana matadali viśvakarmana naya vivēkadalamala makhaśā leyanu nirmisidaru sulakṣaṇa śāstra sūtradali niyata patnī śāle janavē diya varāṃtarvēdi makhavē diya bahirvēdigaḷanaḷavaḍisidaru vahiladali
ಬಿಗಿದ ಬಿಂಗಾರಿಗಳ ಮೇಲ್ಕ ಟ್ಟುಗಳ ಮಣಿಮಯ ಸೂಸಕದ ಲೋ ವೆಗಳ ಮುಖಮಂಟಪ ಚೌರಿಯ ನವ ಫಲಾವಳಿಯ ಹೊಗರ ನೀಲದ ಸರಿಯ ನೆಲಗ ಟ್ಟುಗಳ ಚಪ್ಪರದೆಡೆಯೆಡೆಯ ಚೌ ಕಿಗೆಯ ಚತುರಂಗದ ವಿಚಿತ್ರದ ರಚನೆ ಚೆಲುವಾಯ್ತು
bigida biṃgārigaḷa mēlka ṭṭugaḷa maṇimaya sūsakada lō vegaḷa mukhamaṃṭapa cauriya nava phalāvaḷiya hogara nīlada sariya nelaga ṭṭugaḷa capparadeḍeyeḍeya cau kigeya caturaṃgada vicitrada racane celuvāytu
ಪುರದ ಹೊರವಳಯದಲಿ ಯಮುನಾ ವರನದಿಯ ತೀರದಲಿ ಧರಣೀ ಶ್ವರರಿಗರಮನೆ ಮಾಡಿದರು ನವ ರತುನಮಯಮಾಗಿ ಸುರಪುರದ ಮಾರಾಂಕ ಭುಜಗೇ ಶ್ವರನ ಭೋಗಾವತಿಯ ಶಿಲ್ಪದ ಗರುವೆನಿಸಿತೀ ನಗರ ನಾರಾಯಣನ ಕರುಣದಲಿ
purada horavaḷayadali yamunā varanadiya tīradali dharaṇī śvararigaramane māḍidaru nava ratunamayamāgi surapurada mārāṃka bhujagē śvarana bhōgāvatiya śilpada garuvenisitī nagara nārāyaṇana karuṇadali
Keys: ← → turn the page, J K step through the verses.
Illustration: Verse & Place (Project-owned).