Skip to content

ಆದಿ ಪರ್ವ — ಸಂಧಿ ೨ · ಆದಿ ಪರ್ವ — ಸಂಧಿ ೨

Adi Parva · Sandhi 2

ādi parva — saṃdhi 2

The complete adi parva · sandhi 2 in Kannada.

38 passagesKannada with transliteration

An original emblem for Adi Parva.

Invocation

1.2.opening

ರಾಯ ಜನಮೇಜಯಗೆ ವೈಶಂ ಪಾಯನನು ಹೇಳಿದನು ಮುನಿ ದ್ವೈ ಪಾಯನನುವರ್ಣಿಸಿದ ಭಾರತ ವರಕಥಾಮೃತವ

rāya janamējayage vaiśaṃ pāyananu hēḷidanu muni dvai pāyananuvarṇisida bhārata varakathāmr̥tava

ಸೂತನೈತಂದನು ಜಗದ್ವಿ ಖ್ಯಾತ ಶೌನಕಮುಖ್ಯ ಮುನಿ ಸಂ ಘಾತ ಪಾವನ ನೈಮಿಶಾರಣ್ಯಕ ವರಾಶ್ರಮಕೆ ಆತನನು ಕಂಡುದು ತಪಸ್ವಿ ವ್ರಾತ ಕುಶಲಕ್ಷೇಮ ಮಧುರ ಪ್ರೀತಿ ವಚನಾಮೃತದಿ ಸಂಭಾವನೆಯ ಮಾಡಿದರು

sūtanaitaṃdanu jagadvi khyāta śaunakamukhya muni saṃ ghāta pāvana naimiśāraṇyaka varāśramake ātananu kaṃḍudu tapasvi vrāta kuśalakṣēma madhura prīti vacanāmr̥tadi saṃbhāvaneya māḍidaru

Report an error

ಪರಮಪೌರಾಣಿಕ ಶಿರೋಮಣಿ ಬರವಿದೆತ್ತಣದಾಯ್ತು ಕೌತುಕ ವರಕಥಾ ಪೀಯೂಷಸಾರ ವಿಶೇಷವೇನುಂಟು ಚರಿತ ಚತುರಾಶ್ರಮ ತಪೋ ನಿ ಷ್ಠರಿಗೆ ವಿಶ್ರಮವೈ ಭವಾದೃಶ ದರುಶನವು ನಮಗೆಂದು ನುಡಿದರು ರೋಮಹರ್ಷಣಿಯ

paramapaurāṇika śirōmaṇi baravidettaṇadāytu kautuka varakathā pīyūṣasāra viśēṣavēnuṃṭu carita caturāśrama tapō ni ṣṭharige viśramavai bhavādr̥śa daruśanavu namageṃdu nuḍidaru rōmaharṣaṇiya

Report an error

ವಂದಿಸಿದೆನೈ ವರ ತಪೋಧನ ವೃಂದ ಚಿತ್ತೈಸುವುದು ತಾನೇ ನೆಂದು ನುಡಿವೆನು ಕೌತುಕಾಮೃತಸರದ ಕಡುಗಡಲ ಹಿಂದೆ ಕೇಳಿದುದಲ್ಲ ಹೇಳ್ವುದು ಮುಂದೆ ಹುಸಿ ವರ ನಿಗಮ ಶತವಿದ ರೊಂದೊರೆಗೆ ಬರಲರಿಯದೆಂದನು ಸೂತ ಕೈಮುಗಿದು

vaṃdisidenai vara tapōdhana vr̥ṃda cittaisuvudu tānē neṃdu nuḍivenu kautukāmr̥tasarada kaḍugaḍala hiṃde kēḷidudalla hēḷvudu muṃde husi vara nigama śatavida roṃdorege baralariyadeṃdanu sūta kaimugidu

Report an error

ಕೇಳಿದನು ಜನಮೇಜಯ ಕ್ಷಿತಿ ಪಾಲಕನು ವರ ಸರ್ಪಯಜ್ಞ ಸ್ಥೂಲ ಪಾಪವಿಘಾತಿಗೋಸುಗವೀ ಮಹಾಕಥೆಯ ಕೇಳಿದೆನು ತಾನಲ್ಲಿ ಮುನಿಜನ ಮೌಳಿ ಮಂಡಿತ ಚರಣಕಮಲ ವಿ ಶಾಲ ವೇದವ್ಯಾಸಕೃತ ಭಾರತಕಥಾಮೃತವ

kēḷidanu janamējaya kṣiti pālakanu vara sarpayajña sthūla pāpavighātigōsugavī mahākatheya kēḷidenu tānalli munijana mauḷi maṃḍita caraṇakamala vi śāla vēdavyāsakr̥ta bhāratakathāmr̥tava

Report an error

ಹಾ ಮಹಾದೇವಾಯಿದೆಂತೈ ರೋಮಹರ್ಷಣಿ ನಾವು ಮಾಡಿದ ಸೋಮಪಾನಾದಿಗಳ ಪುಣ್ಯಸ್ತೋಮ ತರುಗಳಿಗೆ ಈ ಮಹಾಭಾರತ ಕಥಾಮೃತ ರಾಮಣೀಯಕ ಫಲವಲಾ ನಿ ಸ್ಸೀಮ ಪುಣ್ಯರು ಧನ್ಯರಾವೆಂದುದು ಮುನಿಸ್ತೋಮ

hā mahādēvāyideṃtai rōmaharṣaṇi nāvu māḍida sōmapānādigaḷa puṇyastōma tarugaḷige ī mahābhārata kathāmr̥ta rāmaṇīyaka phalavalā ni ssīma puṇyaru dhanyarāveṃdudu munistōma

Report an error

ಹೇಳು ಸಾಕೆಲೆ ಸೂತ ದುರಿತ ವ್ಯಾಳ ವಿಷಜಾಂಗುಳಿಕವನು ನೀ ಕೇಳಿದಂದದೊಳಂದು ಜನಮೇಜಯನ ಯಾಗದಲಿ ಮೌಳಿಗಳಲಾನುವೆವು ನಿನ್ನಯ ಹೇಳಿಕೆಯನೆನೆ ನಿಖಿಳ ಮುನಿಗಳ ನೋಲಗಿಸುವೆನು ನಿಮ್ಮನುಜ್ಞೆಯಲೆಂದು ಕೈಮುಗಿದ

hēḷu sākele sūta durita vyāḷa viṣajāṃguḷikavanu nī kēḷidaṃdadoḷaṃdu janamējayana yāgadali mauḷigaḷalānuvevu ninnaya hēḷikeyanene nikhiḷa munigaḷa nōlagisuvenu nimmanujñeyaleṃdu kaimugida

Report an error

ಸರ್ಪಯಜ್ಞದಲಾದ ದುರಿತದ ದರ್ಪವನು ಕೆಡೆಬೀಳಲೊದೆಯಲು ತರ್ಪಣಾದಿ ಕ್ರಿಯೆಗಳಲಿ ಸಾಮರ್ಥ್ಯವಿಲ್ಲೆಂದು ದರ್ಪಕಾಹಿತ ಮೂರ್ತಿ ಮುನಿಮುಖ ದರ್ಪಣನು ಶಿಷ್ಯನನು ಕರೆದು ಸ ಮರ್ಪಿಸಿದನರಸಂಗೆ ವೇದವ್ಯಾಸಮುನಿರಾಯ

sarpayajñadalāda duritada darpavanu keḍebīḷalodeyalu tarpaṇādi kriyegaḷali sāmarthyavilleṃdu darpakāhita mūrti munimukha darpaṇanu śiṣyananu karedu sa marpisidanarasaṃge vēdavyāsamunirāya

Report an error

ರಾಯ ಕೇಳೈ ನಿಮ್ಮ ಪಾಂಡವ ರಾಯಚರಿತವನೆಂದು ವೈಶಂ ಪಾಯನಿಗೆ ಬೆಸಸಿದನು ಕೊಟ್ಟನು ಬಳಿಕ ಪುಸ್ತಕವ ರಾಯನತಿ ಭಕ್ತಿಯಲಿ ವೈಶಂ ಪಾಯನಿಗೆ ವಂದಿಸಿ ನಿಜಾಭಿ ಪ್ರಾಯವನು ಕೇಳಿದನು ಚಿತ್ತೈಸುವುದು ಮುನಿನಿಕರ

rāya kēḷai nimma pāṃḍava rāyacaritavaneṃdu vaiśaṃ pāyanige besasidanu koṭṭanu baḷika pustakava rāyanati bhaktiyali vaiśaṃ pāyanige vaṃdisi nijābhi prāyavanu kēḷidanu cittaisuvudu muninikara

Report an error

ವಿತತ ಪುಸ್ತಕವನು ಸುಗಂಧಾ ಕ್ಷತೆಯೊಳರ್ಚಿಸಿ ಸೋಮ ಸೂರ್ಯ ಕ್ಷಿತಿ ಜಲಾನಲ ವಾಯು ಗಗನಾದಿಗಳಿಗಭಿನಮಿಸಿ ಶತಮಖಾದಿ ಸಮಸ್ತ ದೇವ ಪ್ರತತಿಗೆರಗಿ ಸರೋಜಭವ ಪಶು ಪತಿಗಳಿಗೆ ಕೈಮುಗಿದು ವಿಮಲ ಜ್ಞಾನಮುದ್ರೆಯಲಿ

vitata pustakavanu sugaṃdhā kṣateyoḷarcisi sōma sūrya kṣiti jalānala vāyu gaganādigaḷigabhinamisi śatamakhādi samasta dēva pratatigeragi sarōjabhava paśu patigaḷige kaimugidu vimala jñānamudreyali

Report an error

ಮನದೊಳಾದ್ಯಂಪುರುಷಮೀಶಾ ನನನು ಪುರುಹೂತನ ಪುರಸ್ಕೃತ ನನಘನೇಕಾಕ್ಷರ ಪರಬ್ರಹ್ಮನ ಸನಾತನನ ದನುಜರಿಪು ಸುವ್ಯಕ್ತನವ್ಯ ಕ್ತನನು ಸದಸದ್ರೂಪನವ್ಯಯ ನೆನಿಪ ವಿಷ್ಣುವ ನೆನೆದು ಮುನಿ ವಿಸ್ತರಿಸಿದನು ಕಥೆಯ

manadoḷādyaṃpuruṣamīśā nananu puruhūtana puraskr̥ta nanaghanēkākṣara parabrahmana sanātanana danujaripu suvyaktanavya ktananu sadasadrūpanavyaya nenipa viṣṇuva nenedu muni vistarisidanu katheya

Report an error

ವೇದ ನಾಲ್ಕದರಂಗವಾರ ಷ್ಟಾದಶಾದಿ ಪುರಾಣ ಸ್ಮೃತಿಗಳೊ ಳಾದಪೂರ್ವೋತ್ತರದ ಮೀಮಾಂಸದ ಪರಿಕ್ರಮದ ವಾದ ವಿಲಸನ್ನ್ಯಾಯವನು ಶ ಬ್ದೋದಧಿಯನಳವಡಿಸಿ ರಚಿಸಿದ ಬಾದರಾಯಣನಂಘ್ರಿಯನು ಭಜಿಸಿದನು ಮನದೊಳಗೆ

vēda nālkadaraṃgavāra ṣṭādaśādi purāṇa smr̥tigaḷo ḷādapūrvōttarada mīmāṃsada parikramada vāda vilasannyāyavanu śa bdōdadhiyanaḷavaḍisi racisida bādarāyaṇanaṃghriyanu bhajisidanu manadoḷage

Report an error

ಅರಸ ಕೇಳೈ ನಾರದಾದ್ಯರು ಸರಸಿರುಹ ಸಂಭವನ ಸಭೆಯೊಳು ವರಮಹಾಭಾರತವ ಕೊಂಡಾಡಿದರು ಭಕ್ತಿಯಲಿ ವರ ಮಹತ್ವದಿ ಭಾರವತ್ವದಿ ವರಮಹಾಭಾರತವಿದೊಂದೇ ದುರಿತದುರ್ಗ ವಿಭೇದಕರವೀರೇಳು ಲೋಕದಲಿ

arasa kēḷai nāradādyaru sarasiruha saṃbhavana sabheyoḷu varamahābhāratava koṃḍāḍidaru bhaktiyali vara mahatvadi bhāravatvadi varamahābhāratavidoṃdē duritadurga vibhēdakaravīrēḷu lōkadali

Report an error

ಹೇಳಿದನು ಪೌಲೋಮ ಚರಿತೋ ದ್ಧಾಲಕಾಖ್ಯರ ಚರಿತವನು ಮುನಿ ಹೇಳಿದನು ಫಣಿನಿಕರ ಗರುಡಾಸ್ತಿಕರ ಸಂಭವವ ಮೇಲೆ ಬಳಿಕ ಪರೀಕ್ಷಿದವನೀ ಪಾಲ ಶಾಪದ ಮರಣವನು ನೆರೆ ಹೇಳಿದನು ಮುನಿಗಳಿಗೆ ಸರ್ಪಾಧ್ವರದ ಸಂಗತಿಯ

hēḷidanu paulōma caritō ddhālakākhyara caritavanu muni hēḷidanu phaṇinikara garuḍāstikara saṃbhavava mēle baḷika parīkṣidavanī pāla śāpada maraṇavanu nere hēḷidanu munigaḷige sarpādhvarada saṃgatiya

Report an error

ಕೇಳಿದನು ಜನಮೇಜಯಕ್ಷಿತಿ ಪಾಲ ವೈಶಂಪಾಯನನು ತಾ ಕೀಳು ದುರಿತಂಗಳಿಗೆ ಪ್ರಾಯಶ್ಚಿತ್ತ ರೂಪದಲಿ ಕೇಳಿರೈ ಮುನಿನಿಕರವೀ ಕಲಿ ಕಾಲದಲಿ ಫಲಿಸುವುದು ಲಕ್ಷ್ಮೀ ಲೋಲ ನಾಮಸ್ತುತಿಮಹಾಭಾರತ ಕಥಾಶ್ರವಣ

kēḷidanu janamējayakṣiti pāla vaiśaṃpāyananu tā kīḷu duritaṃgaḷige prāyaścitta rūpadali kēḷirai muninikaravī kali kāladali phalisuvudu lakṣmī lōla nāmastutimahābhārata kathāśravaṇa

Report an error

ರಾಯ ಚಿತ್ತೈಸೆಂದು ವೈಶಂ ಪಾಯಮುನಿ ಹೇಳಿದನು ಕಮಲದ ಳಾಯತಾಕ್ಷನ ಬಾಲಕೇಳಿ ವಿಧೂತ ಕಿಲ್ಬಿಷವ ಕಾಯ ಕಲ್ಮಷಹರವಖಿಳ ನಿ ಶ್ರೇಯಸದ ಸದ್ರೂಪುವಿನ ಸಂ ದಾಯಕವ ನಿರ್ಮಲ ಮಹಾಭಾರತ ಕಥಾಮೃತವ

rāya cittaiseṃdu vaiśaṃ pāyamuni hēḷidanu kamalada ḷāyatākṣana bālakēḷi vidhūta kilbiṣava kāya kalmaṣaharavakhiḷa ni śrēyasada sadrūpuvina saṃ dāyakava nirmala mahābhārata kathāmr̥tava

Report an error

ಆದಿ ಸೃಷ್ಟಿಯೊಳುದಿಸಿದರು ದ ಕ್ಷಾದಿ ವಿಮಲ ನವಪ್ರಜೇಶ್ವರ ರಾದರಂಬುಜಭವನ ಲೀಲಾಮಾತ್ರ ಸೂತ್ರದಲಿ ಆದನವರೊಳಗತ್ರಿಮುನಿ ಬಳಿ ಕಾದನಾ ಮುನಿಪತಿಗೆ ಜಗದಾ ಹ್ಲಾದಕರ ಹಿಮಕಿರಣನಾತನಲಾಯ್ತು ಶಶಿವಂಶ

ādi sr̥ṣṭiyoḷudisidaru da kṣādi vimala navaprajēśvara rādaraṃbujabhavana līlāmātra sūtradali ādanavaroḷagatrimuni baḷi kādanā munipatige jagadā hlādakara himakiraṇanātanalāytu śaśivaṃśa

Report an error

ಸೋಮನಿಂ ಬುಧನಾ ಬುಧಂಗೆಯು ಭೂಮಿಯಲ್ಲಿ ಪುರೂರವನು ಬಳಿ ಕಾ ಮಹೀಪತಿಗೂರ್ವಶಿಯೊಳಾಯುಃ ಕುಮಾರಕನು ಆ ಮಹೀಶಗೆ ನಹುಷ ನಹುಷಂ ಗಾ ಮಹಾತ್ಮ ಯಯಾತಿ ಬಳಿಕೀ ಸೋಮಕುಲವೆರಡಾಯ್ತು ಯದು ಪೂರುಗಳ ದೆಸೆಯಿಂದ

sōmaniṃ budhanā budhaṃgeyu bhūmiyalli purūravanu baḷi kā mahīpatigūrvaśiyoḷāyuḥ kumārakanu ā mahīśage nahuṣa nahuṣaṃ gā mahātma yayāti baḷikī sōmakulaveraḍāytu yadu pūrugaḷa deseyiṃda

Report an error

ಯದುಪರಂಪರೆಯಿಂದ ಯಾದವ ರುದಿಸಿದರು ಪೂರುವಿನ ದೆಸೆಯಿಂ ದಿದುವೆ ಕೌರವ ವಂಶವಾಯ್ತು ಯಯಾತಿ ಪೌತ್ರರಲಿ ವಿದಿತ ಪೂರ್ವೋತ್ತರದ ಯದು ವಂ ಶದ ಕಥಾವಿಸ್ತಾರವನು ಹೇ ಳಿದನು ದುಷ್ಯಂತನಲಿ ಶಾಕುಂತಲೆಯ ಕಥೆ ಸಹಿತ

yaduparaṃpareyiṃda yādava rudisidaru pūruvina deseyiṃ diduve kaurava vaṃśavāytu yayāti pautrarali vidita pūrvōttarada yadu vaṃ śada kathāvistāravanu hē ḷidanu duṣyaṃtanali śākuṃtaleya kathe sahita

Report an error

ಭರತನಾ ದುಷ್ಯಂತನಿಂದವ ತರಿಸಿದನು ತತ್ಪೂರ್ವ ನೃಪರಿಂ ಹಿರಿದು ಸಂದನು ಬಳಿಕ ಭಾರತವಂಶವಾಯ್ತಲ್ಲಿ ಭರತಸೂನು ಸುಹೋತ್ರನಾತನ ವರಕುಮಾರಕ ಹಸ್ತಿ ಹಸ್ತಿನ ಪುರಿಗೆ ಹೆಸರಾಯ್ತಾತನಿಂದವೆ ನೃಪತಿ ಕೇಳೆಂದ

bharatanā duṣyaṃtaniṃdava tarisidanu tatpūrva nr̥pariṃ hiridu saṃdanu baḷika bhāratavaṃśavāytalli bharatasūnu suhōtranātana varakumāraka hasti hastina purige hesarāytātaniṃdave nr̥pati kēḷeṃda

Report an error

ವರಕುಮಾರರ ಪಂಕ್ತಿಯಲಿ ಸಂ ವರಣನಾತಗೆ ಸೂರ್ಯಪುತ್ರಿಗೆ ಕುರು ಮಹೀಪತಿ ಜನಿಸಿದನು ಬಳಿಕಾಯ್ತು ಕುರುವಂಶ ವರ ಪರಂಪರೆಯೋಳ್ ಪ್ರತೀಪನು ಧರಣಿಪತಿಯಾತನಲಿ ಸಂತನು ಧರೆಗಧೀಶ್ವರನಾಗಿ ಬೆಳಗಿದನರಸ ಕೇಳೆಂದ

varakumārara paṃktiyali saṃ varaṇanātage sūryaputrige kuru mahīpati janisidanu baḷikāytu kuruvaṃśa vara paraṃpareyōḷ pratīpanu dharaṇipatiyātanali saṃtanu dharegadhīśvaranāgi beḷagidanarasa kēḷeṃda

Report an error

ಸರಸಿಜಾಸನ ಕೊಟ್ಟ ಶಾಪದಿ ಯರಸಿಯಾದಳು ಗಂಗೆ ಬಳಿಕಿ ಬ್ಬರಿಗೆ ಮಕ್ಕಳು ವಸುಗಳೆಂಟು ವಸಿಷ್ಠ ಶಾಪದಲಿ ನಿರಪರಾಧಿಗಳೇಳು ಜನನಾಂ ತರಕೆ ಮರಣವ ಕಂಡರುಳಿದಂ ಗಿರವು ಭೂಲೋಕದಲಿ ಬಲಿದುದು ಭೀಷ್ಮನಾಮದಲಿ

sarasijāsana koṭṭa śāpadi yarasiyādaḷu gaṃge baḷiki bbarige makkaḷu vasugaḷeṃṭu vasiṣṭha śāpadali niraparādhigaḷēḷu jananāṃ tarake maraṇava kaṃḍaruḷidaṃ giravu bhūlōkadali balidudu bhīṣmanāmadali

Report an error

ಶಾಪ ಹಿಂಗಿತು ಸುರನದಿಗೆ ಬಳಿ ಕಾ ಪರಾಕ್ರಮಿ ಭೀಷ್ಮ ಶಂತನು ಭೂಪತಿಗೆ ಮಗನಾಗಿ ಬೆಳಗಿನಖಿಳ ದಿಕ್ತಟವ ಭೂಪ ಕೇಳೈ ಉಪರಿಚರ ವಸು ರೂಪಗರ್ಭವು ಮೀನ ಬಸುರಲಿ ವ್ಯಾಪಿಸಿತು ಜನಿಸಿದುದು ಮಿಥುನವು ಮತ್ಸ್ಯ ಜಠರದಲಿ

śāpa hiṃgitu suranadige baḷi kā parākrami bhīṣma śaṃtanu bhūpatige maganāgi beḷaginakhiḷa diktaṭava bhūpa kēḷai uparicara vasu rūpagarbhavu mīna basurali vyāpisitu janisidudu mithunavu matsya jaṭharadali

Report an error

ಬಳಿಕ ಮತ್ಸ್ಯದ ಬಸಿರಲುದಿಸಿದ ನಳಿನಲೋಚನೆ ಮತ್ಸ್ಯಗಂಧಿನಿ ಬೆಳೆವುತಿರ್ದಳು ಸಂಗವಾಯ್ತು ಪರಾಶರವ್ರತಿಯ ಬಳಿಕ ಯೋಜನಗಂಧಿಯಲ್ಲಿಂ ದಿಳಿದನಭ್ರಶ್ಯಾಮನುರು ಪಿಂ ಗಳ ಜಟಾಪರಿಬದ್ಧ ವೇದವ್ಯಾಸ ಮುನಿರಾಯ

baḷika matsyada basiraludisida naḷinalōcane matsyagaṃdhini beḷevutirdaḷu saṃgavāytu parāśaravratiya baḷika yōjanagaṃdhiyalliṃ diḷidanabhraśyāmanuru piṃ gaḷa jaṭāparibaddha vēdavyāsa munirāya

Report an error

ನೆನೆ ವಿಪತ್ತಿನೊಳೆಂದು ತಾಯನು ತನುಜ ಬೀಳ್ಕೊಂಡನು ಪರಾಶರ ಮುನಿ ಪುನಃ ಕನ್ಯತ್ವವನು ಕರುಣಿಸಿದನಾ ಸತಿಗೆ ವಿನುತ ಯಮುನಾ ತೀರದಲಿ ಮಾ ನಿನಿಯ ಕಂಡನು ಬೇಂಟೆಯಾಡುತ ಜನಪ ಶಂತನು ಮರುಳುಗೊಂಡನು ಮದನನೆಸುಗೆಯಲಿ

nene vipattinoḷeṃdu tāyanu tanuja bīḷkoṃḍanu parāśara muni punaḥ kanyatvavanu karuṇisidanā satige vinuta yamunā tīradali mā niniya kaṃḍanu bēṃṭeyāḍuta janapa śaṃtanu maruḷugoṃḍanu madananesugeyali

Report an error

ಪರಿಮಳದ ಬಳಿವಿಡಿದು ಬಂದೀ ತರುಣಿಯನು ಕಂಡಾರು ನೀನೆಂ ದರಸ ಬೆಸಗೊಳುತೆಸುವ ಕಾಮನ ಶರಕೆ ಮೈಯೊಡ್ಡಿ ಅರಮನೆಗೆ ನಡೆಯೆನಲು ತಂದೆಯ ಪರಮ ವಚನವಲಂಘ್ಯವೆನೆ ಕಾ ತರಿಸಿ ಭಗ್ನ ಮನೋರಥನು ಮರಳಿದನು ಮಂದಿರಕೆ

parimaḷada baḷiviḍidu baṃdī taruṇiyanu kaṃḍāru nīneṃ darasa besagoḷutesuva kāmana śarake maiyoḍḍi aramanege naḍeyenalu taṃdeya parama vacanavalaṃghyavene kā tarisi bhagna manōrathanu maraḷidanu maṃdirake

Report an error

ವಿರಹದಾವುಗೆ ಕಿಚ್ಚು ಭೂಮೀ ಶ್ವರನ ಮುಸುಕಿತು ಬಲಿದವಸ್ಥೆಯ ನರಸ ಬಣ್ಣಿಸಲರಿಯೆನೇಳೆಂಟೊಂಬತರ ಬಳಿಯ ಮರಣವೀತಂಗೆಂಬ ಜನದು ಬ್ಬರದ ಗುಜುಗುಜುವರಿದು ಯಮುನಾ ವರನದಿಯ ತೀರಕ್ಕೆ ಬಂದನು ಭೀಷ್ಮ ವಹಿಲದಲಿ

virahadāvuge kiccu bhūmī śvarana musukitu balidavastheya narasa baṇṇisalariyenēḷeṃṭoṃbatara baḷiya maraṇavītaṃgeṃba janadu bbarada gujugujuvaridu yamunā varanadiya tīrakke baṃdanu bhīṣma vahiladali

Report an error

ಕರೆಸಿದನು ಧೀವರನನಯ್ಯಂ ಗರಸಿಯಾಗಲಿ ನಿನ್ನ ಮಗಳೆನ ಲರಸಿಯಾದರೆ ಮಗಳ ಮಕ್ಕಳು ರಾಜ್ಯವಾಳುವರೆ ಅರಿದು ಸಲಿಸುವಡಿದನು ನೇ ಬರಿ ಯರಸುತನ ನಮಗೇಕೆನಲು ಧೀ ವರನ ಮಾತಿಂಗೀತನೆಂದನು ರಾಯ ಕೇಳೆಂದ

karesidanu dhīvarananayyaṃ garasiyāgali ninna magaḷena larasiyādare magaḷa makkaḷu rājyavāḷuvare aridu salisuvaḍidanu nē bari yarasutana namagēkenalu dhī varana mātiṃgītaneṃdanu rāya kēḷeṃda

Report an error

ಆದರಿಲ್ಲಿಂ ಮೇಲೆ ನಾರಿಯ ರಾದವರು ಭಾಗೀರಥಿಗೆ ಸರಿ ಮೇದಿನಿಯ ಸಲಿಸುವೆನು ನಿನ್ನಯ ಮಗಳ ಮಕ್ಕಳಿಗೆ ಈ ದಿವಿಜರೀ ಹರಿ ಹರ ಬ್ರ ಹ್ಮಾದಿ ದೇವರು ಸಾಕ್ಷಿ ಹೋಗೆಂ ದಾ ದಯಾಂಬುಧಿ ನಗುತ ನಿನ್ನಯ ಮಗಳ ಕರೆಸೆಂದ

ādarilliṃ mēle nāriya rādavaru bhāgīrathige sari mēdiniya salisuvenu ninnaya magaḷa makkaḷige ī divijarī hari hara bra hmādi dēvaru sākṣi hōgeṃ dā dayāṃbudhi naguta ninnaya magaḷa kareseṃda

Report an error

ತರಿಸಿದನು ದಂಡಿಗೆಯ ದಂಡಿಯ ಚರರ ನೆಲನುಗ್ಗಡಣೆಯಲಿ ಸರ ಸಿರುಹಮುಖಿಯನು ತಂದು ಮದುವೆಯ ಮಾಡಿದನು ಪಿತಗೆ ಉರವಣಿಸಿ ಮಗ ನುಡಿದ ಭಾಷೆಯ ನರಸ ಕೇಳಿದು ಬಳಿಕ ಭೀಷ್ಮಗೆ ವರವನಿತ್ತನು ಮರಣವದು ನಿನ್ನಿಚ್ಛೆ ಹೋಗೆಂದ

tarisidanu daṃḍigeya daṃḍiya carara nelanuggaḍaṇeyali sara siruhamukhiyanu taṃdu maduveya māḍidanu pitage uravaṇisi maga nuḍida bhāṣeya narasa kēḷidu baḷika bhīṣmage varavanittanu maraṇavadu ninnicche hōgeṃda

Report an error

ಬಳಿಕ ಯೋಜನಗಂಧಿಯಲಿ ಮ ಕ್ಕಳುಗಳವತರಿಸಿದರು ದೀಪ್ತ ಜ್ವಲನತೇಜನರು ಕಲ್ಪಭೂಜರು ಹಿಮಕರಾನ್ವಯಕೆ ಲಲಿತ ಮಂಗಳ ಜಾತಕರ್ಮಾ ವಳಿಯ ಚಿತ್ರಾಂಗದನನಾ ನೃಪ ತಿಲಕ ನೆಗಳೆ ವಿಚಿತ್ರವೀರ್ಯನ ನಾಮಕರಣದಲಿ

baḷika yōjanagaṃdhiyali ma kkaḷugaḷavatarisidaru dīpta jvalanatējanaru kalpabhūjaru himakarānvayake lalita maṃgaḷa jātakarmā vaḷiya citrāṃgadananā nr̥pa tilaka negaḷe vicitravīryana nāmakaraṇadali

Report an error

ಇರಲಿರಲು ಶಂತನು ಮಹೀಪತಿ ಸುರರೊಳಗೆ ಸೇರಿದನು ಬಳಿಕೀ ಧರಣಿಯೊಡೆತನವಾಯ್ತು ಚಿತ್ರಾಂಗದ ಕುಮಾರಂಗೆ ಅರಸ ಕೇಳೈ ಕೆಲವು ಕಾಲಾಂ ತರದಲಾತನು ಕಾದಿ ಗಂಧ ರ್ವರಲಿ ಮಡಿದನು ಪಟ್ಟವಾಯ್ತು ವಿಚಿತ್ರವೀರ್ಯಂಗೆ

iraliralu śaṃtanu mahīpati suraroḷage sēridanu baḷikī dharaṇiyoḍetanavāytu citrāṃgada kumāraṃge arasa kēḷai kelavu kālāṃ taradalātanu kādi gaṃdha rvarali maḍidanu paṭṭavāytu vicitravīryaṃge

Report an error

ರಾಯ ಕೇಳೈ ಸಕಲ ರಾಜ್ಯ ಶ್ರೀಯನಾತಂಗಿತ್ತು ಭೀಷ್ಮನು ತಾಯ ಚಿತ್ತವ ಪಡೆದು ಮೆಚ್ಚಿಸಿದನು ಜಗತ್ರಯವ ರಾಯ ಕುವರನ ಮದುವೆಗಬ್ಜದ ಳಾಯತಾಕ್ಷಿಯರನು ವಿಚಾರಿಸಿ ಹಾಯಿದನು ದಳದುಳದೊಳೊಂದು ವಿವಾಹ ಮಂಟಪಕೆ

rāya kēḷai sakala rājya śrīyanātaṃgittu bhīṣmanu tāya cittava paḍedu meccisidanu jagatrayava rāya kuvarana maduvegabjada ḷāyatākṣiyaranu vicārisi hāyidanu daḷaduḷadoḷoṃdu vivāha maṃṭapake

Report an error

ಅಲ್ಲಿ ನೆರೆದಾ ಕ್ಷತ್ರವರ್ಗವ ಚೆಲ್ಲಬಡಿದು ವಿವಾಹ ಶಾಲೆಯ ಚೆಲ್ಲೆಗಂಗಳ ಕಮಲಮುಖಿಯರ ಮೂವರನು ಪಿಡಿದು ಘಲ್ಲಣೆಯ ಖಂಡೆಯದ ಚೌಪಟ ಮಲ್ಲ ಭೀಷ್ಮನು ಪುರಕೆ ತಂದವ ರೆಲ್ಲರನು ತಮ್ಮಂಗೆ ಮದುವೆಯ ಮಾಡಲನುವಾದ

alli neredā kṣatravargava cellabaḍidu vivāha śāleya cellegaṃgaḷa kamalamukhiyara mūvaranu piḍidu ghallaṇeya khaṃḍeyada caupaṭa malla bhīṣmanu purake taṃdava rellaranu tammaṃge maduveya māḍalanuvāda

Report an error

ಆ ಕಮಲಲೋಚನೆಯರೊಳು ಮೊದ ಲಾಕೆ ಭೀಷ್ಮನ ಗಂಡನೆಂದೇ ನೂಕಿ ಭಾಷೆಯ ಮಾಡಿ ನಿಂದಳು ಛಲದ ಬಿಗುಹಿನಲಿ ಆಕೆ ಮಾಣಲಿ ಮಿಕ್ಕವರು ಬರ ಲೀ ಕುಮಾರಂಗೆಂದು ವೈದಿಕ ಲೌಕಿಕೋತ್ಸವದಿಂದ ಮದುವೆಯ ಮಾಡಿದನು ಭೀಷ್ಮ

ā kamalalōcaneyaroḷu moda lāke bhīṣmana gaṃḍaneṃdē nūki bhāṣeya māḍi niṃdaḷu chalada biguhinali āke māṇali mikkavaru bara lī kumāraṃgeṃdu vaidika laukikōtsavadiṃda maduveya māḍidanu bhīṣma

Report an error

ಅರಸ ಚಿತ್ತೈಸಂಬೆಯೆಂಬಳು ದುರುಳೆ ಭೀಷ್ಮನ ಕೂಟವಲ್ಲದೆ ಮರಣದೆಡೆಯಲಿ ಬೆರಸಿದಲ್ಲದೆ ಪಂಥವಿಲ್ಲೆಂದು ಪರಶುರಾಮನ ಭಜಿಸಿ ಹಸ್ತಿನ ಪುರಕೆ ತಂದಳು ಹೇಳಿಸಿದಳೀ ಸುರನದೀನಂದನನು ಮಾಡಿದ ಪರಿಯ ಕೇಳೆಂದ

arasa cittaisaṃbeyeṃbaḷu duruḷe bhīṣmana kūṭavallade maraṇadeḍeyali berasidallade paṃthavilleṃdu paraśurāmana bhajisi hastina purake taṃdaḷu hēḷisidaḷī suranadīnaṃdananu māḍida pariya kēḷeṃda

Report an error

ಸತಿಯನೊಲ್ಲೆನು ಬ್ರಹ್ಮಚರ್ಯ ಸ್ಥಿತಿಗೆ ತಪ್ಪುವನಲ್ಲ ನೀವನು ಚಿತವ ನೆನೆದರೆ ನಡೆಯಿ ಕೊಟ್ಟೆನು ಕಾಳಗವ ನಿಮಗೆ ವ್ರತದನಿಧಿ ಕುರುಭೂಮಿಯಲಿ ಶರ ತತಿಯಲಿಪ್ಪತ್ತೊಂದು ದಿನ ಭೃಗು ಸುತನೊಡೆನೆ ಕಾದಿದನು ವಿರಥನ ಮಾಡಿದನು ಭೀಷ್ಮ

satiyanollenu brahmacarya sthitige tappuvanalla nīvanu citava nenedare naḍeyi koṭṭenu kāḷagava nimage vratadanidhi kurubhūmiyali śara tatiyalippattoṃdu dina bhr̥gu sutanoḍene kādidanu virathana māḍidanu bhīṣma

Report an error

ನುಡಿಯ ಭಂಗಿಸಲೆಂದು ಗುರುವವ ಗಡಿಸಿ ಹೊಕ್ಕರೆ ಸರಳಮೊನೆಯಲಿ ಕೊಡಹಿ ಬಿಸುಟನು ಬಿಟ್ಟುದಿಲ್ಲ ಮಹಾವ್ರತಸ್ಥಿತಿಯ ನುಡಿಯ ಮೀರದ ನಮ್ಮ ಶಿಷ್ಯನ ನೊಡಬಡಿಸಿಕೊಳ್ಳೆಂದು ನಾರಿಗೆ ನುಡಿದು ತನ್ನಾಶ್ರಮಕೆ ಸರಿದನು ಪರಶುರಾಮಮುನಿ

nuḍiya bhaṃgisaleṃdu guruvava gaḍisi hokkare saraḷamoneyali koḍahi bisuṭanu biṭṭudilla mahāvratasthitiya nuḍiya mīrada namma śiṣyana noḍabaḍisikoḷḷeṃdu nārige nuḍidu tannāśramake saridanu paraśurāmamuni

Report an error

ಅಂಬೆ ಭೀಷ್ಮನ ಬೈದು ಕಂಬನಿ ದುಂಬಿ ಹೋದಳು ತಪಕೆ ಬಳಕೀ ಯಂಬಿಕೆಯನಂಬಾಲೆಯನು ರಮಿಸಿದನು ನೃಪಸೂನು ಬೆಂಬಲಕೆ ಕಲಿಭೀಷ್ಮನಿರೆ ಚತು ರಂಬುಧಿಯ ಮಧ್ಯದ ನೃಪಾಲ ಕ ದಂಬವೀತಂಗಿದಿರೆ ಸಲಹಿದನಖಿಳ ಭೂತಳವ

aṃbe bhīṣmana baidu kaṃbani duṃbi hōdaḷu tapake baḷakī yaṃbikeyanaṃbāleyanu ramisidanu nr̥pasūnu beṃbalake kalibhīṣmanire catu raṃbudhiya madhyada nr̥pāla ka daṃbavītaṃgidire salahidanakhiḷa bhūtaḷava

Report an error

Illustration: Verse & Place (Project-owned).