Skip to content

ಆದಿ ಪರ್ವ — ಸಂಧಿ ೧೯ · ಆದಿ ಪರ್ವ — ಸಂಧಿ ೧೯

Adi Parva · Sandhi 19

ādi parva — saṃdhi 19

The complete adi parva · sandhi 19 in Kannada.

51 passagesKannada with transliteration

An original emblem for Adi Parva.

Invocation

1.19.opening

ಆ ಸುರಾರಿ ವಿರೋಧಿ ಪುರದಲಿ ವಾಸವಾತ್ಮಜ ಮದುವೆಯಾಗಿ ವಿ ಲಾಸದಲಿ ಹೊಕ್ಕನು ಸುಭದ್ರಾ ಸಹಿತ ನಿಜಪುರವ

ā surāri virōdhi puradali vāsavātmaja maduveyāgi vi lāsadali hokkanu subhadrā sahita nijapurava

ಕೇಳು ಜನಮೇಜಯ ಧರಿತ್ರೀ ಪಾಲ ನಾರದಮುನಿ ನರೇಂದ್ರನ ಬೀಳುಕೊಂಡನು ಚಪಲಗತಿಯಲಿ ಚಿಗಿದನಂಬರಕೆ ಮೇಲೆ ಬಳಿಕೊಂದವಗಡವನೇ ವೇಳುವೆನು ಪಾರ್ಥಂಗೆ ಬಂದುದ ಕಾಲಗತಿಯೈಸಲೆ ವಿದೇಶ ಭ್ರಮಣವಾಯ್ತೆಂದ

kēḷu janamējaya dharitrī pāla nāradamuni narēṃdrana bīḷukoṃḍanu capalagatiyali cigidanaṃbarake mēle baḷikoṃdavagaḍavanē vēḷuvenu pārthaṃge baṃduda kālagatiyaisale vidēśa bhramaṇavāyteṃda

Report an error

ನರನ ವಳಿತದೊಳೊಂದು ಸಮಯದೊ ಳಿರುಳು ತಸ್ಕರ ಬಾಧೆಯಲಿ ಭೂ ಸುರರು ಬಾಯ್ಬಿಡುತೈದೆಯಿಂದ್ರಪ್ರಸ್ಥ ಪುರವರವ ಮೊರೆಯಬಾಯ್ಗಳ ಹುಲ್ಲು ಕೈಗಳ ಹರಿದ ಮೈಗಳ ಸೆಕೆಯ ಸುಯ್ಗಳ ತರದ ಬೈಗಳ ಕಳಕಳವ ಕೇಳಿದನು ಕಲಿ ಪಾರ್ಥ

narana vaḷitadoḷoṃdu samayado ḷiruḷu taskara bādheyali bhū suraru bāybiḍutaideyiṃdraprastha puravarava moreyabāygaḷa hullu kaigaḷa harida maigaḷa sekeya suygaḷa tarada baigaḷa kaḷakaḷava kēḷidanu kali pārtha

Report an error

ಕರೆಸಿ ವಿಪ್ರರ ಬಾಧೇಗಳನಾ ದರಿಸಿ ಕೇಳಿದು ಸಂತವಿಸಿ ಪರಿ ಹರಿಸಿ ಕೊಡುವೆನು ದುಷ್ಟ ಪಾಟಚ್ಚರಪರಿಪ್ಲವವ ಮರಳಿ ನೀವೆಂದವರ ಬೀಳ್ಕೊಂ ಡರಿ ನಿವಾರಣ ಬಂದನಗ್ಗದ ಶರಧನುವ ಕೊಳಲೆಂದು ರಾಯನ ಸೆಜ್ಜೆಯರಮನೆಗೆ

karesi viprara bādhēgaḷanā darisi kēḷidu saṃtavisi pari harisi koḍuvenu duṣṭa pāṭaccarapariplavava maraḷi nīveṃdavara bīḷkoṃ ḍari nivāraṇa baṃdanaggada śaradhanuva koḷaleṃdu rāyana sejjeyaramanege

Report an error

ಸಮಯವೇನೆನೆ ಜೀಯ ರಾಯನು ರಮಣಿಯೊಡನೇಕಾಂತವೆನಲ ಸ್ತಮಿತ ಹರುಷನು ನಿಂದು ನೆನೆದನು ತನ್ನ ಮನದೊಳಗೆ ಅಮರಮುನಿ ಮತವೊಂದು ಮಂಚದ ರಮಣಿ ರಮಣರ ದರುಶನವಿದ ಕ್ರಮವೆನಿಪುದೀ ವಚನ ಸಂಘಟಿಸಿತ್ತು ತನಗೆಂದ

samayavēnene jīya rāyanu ramaṇiyoḍanēkāṃtavenala stamita haruṣanu niṃdu nenedanu tanna manadoḷage amaramuni matavoṃdu maṃcada ramaṇi ramaṇara daruśanavida kramavenipudī vacana saṃghaṭisittu tanageṃda

Report an error

ಈಗಲೀ ವಿಪ್ರರಲಿ ಖಳರಭಿ ಯೋಗವಾರ್ತಾಶ್ರವಣ ಬಹು ದುರಿ ತಾಗಮವು ತನಗಾವುದೋ ಕರ್ತವ್ಯವೆಂದೆನುತ ಈಗಲೀ ಸಂದಿಗ್ಧ ಸಮಯ ತ್ಯಾಗ ಧರ್ಮ ವಿರೊಧ ಕೃತ್ಯವಿ ಭಾಗವಾವುದೊ ಶಾಸ್ತ್ರದೃಷ್ಟಿಯೊಳೆಂದು ಚಿಂತಿಸಿದ

īgalī viprarali khaḷarabhi yōgavārtāśravaṇa bahu duri tāgamavu tanagāvudō kartavyaveṃdenuta īgalī saṃdigdha samaya tyāga dharma virodha kr̥tyavi bhāgavāvudo śāstradr̥ṣṭiyoḷeṃdu ciṃtisida

Report an error

ಎರಡು ಪಾತಕವಿವೆ ಬಲಾಬಲ ವೆರಡರೊಳು ಸಾಮಾನ್ಯ ಪಕ್ಷಾಂ ತರ ವಿಶೇಷವದಾವುದದರೊಳಗೆಂದು ಚಿತ್ತದಲಿ ಒರೆದೊರೆದು ನೋಡಿದನು ತೂಕವ ಬರೆಸಿ ಕಾಹಿನ ಕಂದುಕುಂದನು ಪರಿಕಿಸುತ ನಿಶ್ಬೈಸಿ ತಿಳಿದನು ತನ್ನ ಮನದೊಳಗೆ

eraḍu pātakavive balābala veraḍaroḷu sāmānya pakṣāṃ tara viśēṣavadāvudadaroḷageṃdu cittadali oredoredu nōḍidanu tūkava baresi kāhina kaṃdukuṃdanu parikisuta niśbaisi tiḷidanu tanna manadoḷage

Report an error

ಅರಸನರಸಿಯರೊಂದು ಮಂಚದೊ ಳಿರಲು ಕಂಡರೆ ಭೂಪ್ರದಕ್ಷಿಣ ವರುಷವೊಂದರೊಳಿದಕೆ ಪ್ರಾಯಶ್ಚಿತ್ತ ವಿಧಿಯುಂಟು ಧರಣಿಯಮರರುಪಪ್ಲವವ ಪರಿ ಹರಿಸದಿರಲಾ ಪಾತಕಕೆ ಸಂ ಹರಣವುಂಟೇ ಶಾಸ್ತ್ರ ದೃಷ್ಟಿಯೊಳೆಂದು ಚಿಂತಿಸಿದ

arasanarasiyaroṃdu maṃcado ḷiralu kaṃḍare bhūpradakṣiṇa varuṣavoṃdaroḷidake prāyaścitta vidhiyuṃṭu dharaṇiyamararupaplavava pari harisadiralā pātakake saṃ haraṇavuṃṭē śāstra dr̥ṣṭiyoḷeṃdu ciṃtisida

Report an error

ಎನುತ ನರನೊಳಹೊಕ್ಕು ತನ್ನಯ ಧನು ಶರಂಗಳ ಕೊಂಡು ನುಡಿದನು ಮುನಿವಚನ ಸಂಘಟಿತ ನೃಪದಂಪತಿ ವಿಲೋಕನದ ಘನ ದುರಿತ ನಿಷ್ಕೃತಿಗೆ ವರುಷದೊ ಳೆನಗೆ ದೇಶಭ್ರಮಣವಾಯ್ತೆಲೆ ಜನಪ ಚಿಂತಿಸಬೇಡೆನುತ ಹೊರವಂಟನಾ ಪಾರ್ಥ

enuta naranoḷahokku tannaya dhanu śaraṃgaḷa koṃḍu nuḍidanu munivacana saṃghaṭita nr̥padaṃpati vilōkanada ghana durita niṣkr̥tige varuṣado ḷenage dēśabhramaṇavāytele janapa ciṃtisabēḍenuta horavaṃṭanā pārtha

Report an error

ಇರಿದು ಕಳ್ಳರವಳ್ಳಿಗಳ ಕುರಿ ದರಿದು ಭೂಸುರರೂರುಗಳ ಸೆರೆ ತುರುಗಳನು ತಂದಿತ್ತನರ್ಜುನನಾ ಮಹೀಸುರರ ತುರುಗಿದಾಶೀರ್ವಾದ ಮಳೆಗಳು ಕರೆಯೆ ಹೆಚ್ಚಿದ ವೀರಕೀರ್ತಿಯ ತೊರೆಗಳೊಳು ತೇಕಾಡುತಿರ್ದುದು ಸಕಲ ಜನನಿಕರ

iridu kaḷḷaravaḷḷigaḷa kuri daridu bhūsurarūrugaḷa sere turugaḷanu taṃdittanarjunanā mahīsurara turugidāśīrvāda maḷegaḷu kareye heccida vīrakīrtiya toregaḷoḷu tēkāḍutirdudu sakala jananikara

Report an error

ಧಾರುಣೀಪತಿ ಕೇಳಿ ಗಂಗಾ ತೀರಕೈದಿದನರ್ಜುನನು ಭಾ ಗೀರಥೀ ಸ್ನಾನಾವಗಾಹ ವಿಶುದ್ಧ ವಿಗ್ರಹನ ದೂರದಲಿ ಕಂಡುರಗ ರಾಜಕು ಮಾರಿ ವರಿಸಿದಳೊಲವಿನಲಿ ಜಂ ಭಾರಿತನಯನನಿಳುಹಿದಳು ಪಾತಾಳಮಂದಿರಕೆ

dhāruṇīpati kēḷi gaṃgā tīrakaididanarjunanu bhā gīrathī snānāvagāha viśuddha vigrahana dūradali kaṃḍuraga rājaku māri varisidaḷolavinali jaṃ bhāritanayananiḷuhidaḷu pātāḷamaṃdirake

Report an error

ವಿಭವದಲಿ ವಾಸುಕಿಯ ತಂಗಿಯ ನುಭಯ ವಂಶ ವಿಶುದ್ಧೆಯನು ಹರಿ ನಿಭನು ಪಾಣಿಗ್ರಹಣವನು ಮಾಡಿದನು ವೊಲವಿನಲಿ ಅಭಿಮತ ಕ್ರೀಡಾವಿನೋದದ ರಭಸದಲಿ ದಿನ ಸವೆಯೆ ಗರ್ಭ ಪ್ರಭವವಾಯ್ತು ಕುಮಾರ ಜನಿಸಿದನುರಗ ನಾರಿಯಲಿ

vibhavadali vāsukiya taṃgiya nubhaya vaṃśa viśuddheyanu hari nibhanu pāṇigrahaṇavanu māḍidanu volavinali abhimata krīḍāvinōdada rabhasadali dina saveye garbha prabhavavāytu kumāra janisidanuraga nāriyali

Report an error

ಸುತನಿರಾವಾನೆನಿಸಿ ತೊಳಗಿದ ನತಿ ಬಹಳ ಬಲನಾತನನು ನಿಜ ಸತಿಯನಲ್ಲಿಯೆ ನಿಲಿಸಿ ಕಳುಹಿಸಿಕೊಂಡನುಚಿತದಲಿ ಕ್ಷಿತಿಗೆ ಬಂದನು ಜಾಹ್ನವೀ ಸಂ ಗತ ಸಮುದ್ರದ ತೀರದಲಿ ಸೇ ವಿತ ಸಕಲ ತೀರ್ಥೌಘನೈದಿದನಿಂದ್ರ ದಿಙ್ಮುಖವ

sutanirāvānenisi toḷagida nati bahaḷa balanātananu nija satiyanalliye nilisi kaḷuhisikoṃḍanucitadali kṣitige baṃdanu jāhnavī saṃ gata samudrada tīradali sē vita sakala tīrthaughanaididaniṃdra diṅmukhava

Report an error

ಅರಸ ಕೇಳುತ್ತರದ ಪೂರ್ವದ ಪರಮ ತೀರ್ಥವ್ರಾತವನು ವಿ ಸ್ತರಿಸಿ ಸಾಗರ ತೀರದಲಿ ದಕ್ಷಿಣ ದಿಶಾವರಕೆ ತಿರುಗಿದನು ತತ್ಪಂಚ ಗೋದಾ ವರಿಯ ತೀರಕೆ ತುಂಗಭದ್ರಾ ವರ ನದಿಯನುತ್ತರಿಸಿ ಕಾಂಚೀನಗರಕೈತಂದ

arasa kēḷuttarada pūrvada parama tīrthavrātavanu vi starisi sāgara tīradali dakṣiṇa diśāvarake tirugidanu tatpaṃca gōdā variya tīrake tuṃgabhadrā vara nadiyanuttarisi kāṃcīnagarakaitaṃda

Report an error

ಆ ನಗರದಧಿದೈವ ನಿಕರಕೆ ತಾ ನಮಿಸಿ ತತ್ಸಕಲ ತೀರ್ಥ ಸ್ನಾನ ಕರ್ಮವ ರಚಿಸಿ ಬಂದನು ಜಲಧಿ ತೀರದಲಿ ವಾನರರ ಭುಜಬಲಸಮಾಖ್ಯಾ ನೂನ ಶಾಸನವನು ಸುರಾರಿ ವಿ ತಾನ ರವಿ ರಾಹುವನು ಕಂಡನು ಸೇತುಬಂಧನವ

ā nagaradadhidaiva nikarake tā namisi tatsakala tīrtha snāna karmava racisi baṃdanu jaladhi tīradali vānarara bhujabalasamākhyā nūna śāsanavanu surāri vi tāna ravi rāhuvanu kaṃḍanu sētubaṃdhanava

Report an error

ಧನುಷ್ಕೋಟಿಯಲಿ ಮಿಂದೀ ಶ್ವರಪದಾಂಬುಜಕೆರಗಿ ತತ್ಪರಿ ಸರದ ಪಂಚತಟಾಕದಲಿ ಘನಮಕರರೂಪದಲಿ ಸುರವಧುಗಳಿರಲವರ ಶಾಪವ ಪರಿಹರಿಸಿ ತತ್ತೀರ್ಥಸೇವಾ ಪರಮ ಪಾವನ ಕರಣನಾದನು ಭೂಪ ಕೇಳೆಂದ

dhanuṣkōṭiyali miṃdī śvarapadāṃbujakeragi tatpari sarada paṃcataṭākadali ghanamakararūpadali suravadhugaḷiralavara śāpava pariharisi tattīrthasēvā parama pāvana karaṇanādanu bhūpa kēḷeṃda

Report an error

ಈತನನು ಕಂಡರಿದು ಪಾಂಡ್ಯ ಮ ಹೀತಳಾಧಿಪ ನಿಜ ಕುಮಾರಿಯ ನೀತಗಿತ್ತನು ಬಭ್ರುವಾಹನನಾದನಾಕೆಯಲಿ ಈತ ಕಳುಹಿಸಿಕೊಂಡು ದೈತ್ಯಾ ರಾತಿಗೆರಗಿಯನಂತಶಯನ ಖ್ಯಾತಿಗೆರಗಿಯನಂತಶಯನ ಖ್ಯಾತಿ ವಿಭವವನೀಕ್ಷಿಸುತ ಹರುಷದಲಿ ನಡೆತಂದ

ītananu kaṃḍaridu pāṃḍya ma hītaḷādhipa nija kumāriya nītagittanu babhruvāhananādanākeyali īta kaḷuhisikoṃḍu daityā rātigeragiyanaṃtaśayana khyātigeragiyanaṃtaśayana khyāti vibhavavanīkṣisuta haruṣadali naḍetaṃda

Report an error

ನದಿ ನದವನುತ್ತರಿಸಿ ಹರಿಹರ ಪದಯುಗಳಕಭಿನಮಿಸಿ ತದ್ದೇ ಶದ ಸುತೀರ್ಥಕ್ಷೇತ್ರವೆನಿತುಳ್ಳನಿತನಾದರಿಸಿ ಮುದದ ಮುರವಿನ ಹಂಸೆಗಳ ತನಿ ಮದದ ಚಾತಕವಕ್ಕಿಗಳ ಮೇ ಘದ ಸಘಾಡದ ಮೇಳವವ ನೋಡುತ್ತ ನಡೆತಂದ

nadi nadavanuttarisi harihara padayugaḷakabhinamisi taddē śada sutīrthakṣētravenituḷḷanitanādarisi mudada muravina haṃsegaḷa tani madada cātakavakkigaḷa mē ghada saghāḍada mēḷavava nōḍutta naḍetaṃda

Report an error

ಒಡ್ಡು ಮೆರೆದುದು ಮೇಘಘಟೆ ಬಿಸಿ ಲೊಡ್ಡು ಮುರಿದುದು ಚಂದ್ರಸೂರ್ಯರ ನಡ್ಡವಿಸಿ ಹಿಡಿಯಾಳ ಹಿಡಿದವು ಮುಗಿಲ ಚೂಣಿಗಳು ಖಡ್ಡಿ ತಡೆವುದೆ ಕಡಲನುಡುಗಣ ದೊಡ್ಡ ಕಾಣೆನು ಮುಗಿಲ ಬೆನಕಗೆ ಲಡ್ಡುಗೆಗಳಾದವು ಸಮಸ್ತಗ್ರಹ ಸುತಾರೆಗಳು

oḍḍu meredudu mēghaghaṭe bisi loḍḍu muridudu caṃdrasūryara naḍḍavisi hiḍiyāḷa hiḍidavu mugila cūṇigaḷu khaḍḍi taḍevude kaḍalanuḍugaṇa doḍḍa kāṇenu mugila benakage laḍḍugegaḷādavu samastagraha sutāregaḷu

Report an error

ಆಳ ಕರೆ ಕಟಕವನು ಸೂರ್ಯನ ಮೇಲೆ ಬರ ಹೇಳೆಂಬ ಮೇಘ ನೃ ಪಾಲಕನ ಡಂಗುರವೊ ಮೊಳಗುವ ಸಿಡಿಲಿನಬ್ಬರವೊ ಆಲಿಕಲ್ಗಳೊ ಮುಗಿಲ ಮುಂಗುಡಿ ಯಾಳ ಯೊಯ್ಲಲಿ ಬೀಳ್ವ ತಾರಾ ಮಾಲೆಗಳೊ ಜೀಮೂತ ಲತೆ ಲಂಬಿಸಿದುದಂಬರವ

āḷa kare kaṭakavanu sūryana mēle bara hēḷeṃba mēgha nr̥ pālakana ḍaṃguravo moḷaguva siḍilinabbaravo ālikalgaḷo mugila muṃguḍi yāḷa yoylali bīḷva tārā mālegaḷo jīmūta late laṃbisidudaṃbarava

Report an error

ಮಿಂಚಿದವು ದೆಸೆಗಳಲಿ ಗಮನಕೆ ಮುಂಚಿದವು ಹಂಸೆಗಳು ನಭದಲಿ ಹೊಂಚಿದುದು ಜೀವನಕೆ ಜೀವನ ವಿರಹಿ ನಿಕುರುಂಬ ಪಂಚಪತಿಯರೊ ಮೇಣಿವರು ಪತಿ ವಂಚಕಿಯರೋ ಗ್ರೀಷ್ಮಕಾಲದ ಪಂಚತೆಯೊಳಾಲಿಂಗಿಸಿತು ದಿಗ್ವಧುಗಳಂಬುದವ

miṃcidavu desegaḷali gamanake muṃcidavu haṃsegaḷu nabhadali hoṃcidudu jīvanake jīvana virahi nikuruṃba paṃcapatiyaro mēṇivaru pati vaṃcakiyarō grīṣmakālada paṃcateyoḷāliṃgisitu digvadhugaḷaṃbudava

Report an error

ಜನಪ ಕೇಳೈ ಕಾರ್ಮುಗಿಲ ಮುಂ ಬನಿಗಳೊಳು ವಹಿಲದಲಿ ಕೇರಳ ಜನಪದದ ತೌಳವದ ಕೊಂಕಣ ವಿಷಮವೀಧಿಯಲಿ ಜಿನುಗಿನಲಿ ಬಹು ಮಳೆಗಳಲಿ ನೆನೆ ನೆನೆದು ಸಾಗರ ತೀರದಲಿ ಬಂ ದನು ಕಿರೀಟಿ ವಿಚಾರಿಸುತ ಮುರಹರನ ಪಟ್ಟಣವ

janapa kēḷai kārmugila muṃ banigaḷoḷu vahiladali kēraḷa janapadada tauḷavada koṃkaṇa viṣamavīdhiyali jinuginali bahu maḷegaḷali nene nenedu sāgara tīradali baṃ danu kirīṭi vicārisuta muraharana paṭṭaṇava

Report an error

ಪುರವ ಹೊರವಂಟೆಂಟು ತಿಂಗಳು ಪರಿಹರಿಸಿತೀ ಕೃಷ್ಣರಾಯನ ಪುರದೊಳಗೆ ನೂಕುವೆನು ವರ್ಷಾಕಾಲ ವಿಭ್ರಮವ ವರುಷವೊಂದು ಸಮಾಪ್ತಿ ಬಳಿಕಿನೊ ಳರಸನಂಘ್ರಿ ವಿಲೋಕನಾ ವಿ ಸ್ತರಣವಹುದೆಂದಾತ ನಿಶ್ಬೈಸಿದನು ಮನದೊಳಗೆ

purava horavaṃṭeṃṭu tiṃgaḷu pariharisitī kr̥ṣṇarāyana puradoḷage nūkuvenu varṣākāla vibhramava varuṣavoṃdu samāpti baḷikino ḷarasanaṃghri vilōkanā vi staraṇavahudeṃdāta niśbaisidanu manadoḷage

Report an error

ಅರಸ ಕೇಳ್ ಸಂನ್ಯಾಸಿ ವೇಷದ ಪರಿಕರವನಳವಡಿಸಿ ಶೌರಿಯ ಪುರದ ಹೊರ ಬಾಹೆಯಲಿ ಹೆಚ್ಚಿದ ಬನದ ಮಧ್ಯದಲಿ ಇರುಳು ಕಗ್ಗತ್ತಲೆಯೊಳೌಕುವ ಸರಿವಳೆಗೆ ಸಲೆ ಸೇಡುಗೊಳುತು ಬ್ಬರಿಸಿ ಕೃಷ್ಣನ ನೆನೆವುತಿದ್ದನು ಮರನ ಹೊಳ್ಳಿನಲಿ

arasa kēḷ saṃnyāsi vēṣada parikaravanaḷavaḍisi śauriya purada hora bāheyali heccida banada madhyadali iruḷu kaggattaleyoḷaukuva sarivaḷege sale sēḍugoḷutu bbarisi kr̥ṣṇana nenevutiddanu marana hoḷḷinali

Report an error

ದೇವನೆತ್ತಲು ಸತ್ಯಭಾಮಾ ದೇವಿಯರ ಮೇಳದಲಿಯಿರುತಿ ರ್ದೀ ವಿಲಾಸವ ನೆನೆದು ನಕ್ಕನು ಶಕ್ರನಂದನನ ಆವಳೋ ನೆನಹಿನಲಿ ಸುಳಿದಳು ಭಾವದಲಿ ಸುಮ್ಮಾನವೇನೆನೆ ದೇವಿ ಬೇರೊಂದಿಲ್ಲ ಮನ ನಿನ್ನಾಣೆ ಕೇಳೆಂದ

dēvanettalu satyabhāmā dēviyara mēḷadaliyiruti rdī vilāsava nenedu nakkanu śakranaṃdanana āvaḷō nenahinali suḷidaḷu bhāvadali summānavēnene dēvi bēroṃdilla mana ninnāṇe kēḷeṃda

Report an error

ನರನ ನೀ ಕೇಳ್ದರಿಯಲಾ ಸೋ ದರದ ಮೈದುನನೆನಗೆ ಕುಂತಿಯ ವರ ಕುಮಾರಕನಾತನೀ ದ್ವಾರಾವತಿಯ ಹೊರಗೆ ಮರದ ಹೊಳ್ಳೊಳು ಹೊಕ್ಕು ಸಿಕ್ಕಿದ ನರಿಯವೊಲೈದಾನೆ ನಾನುಪ ಚರಿಸಿ ಬಹೆನೆಂದೆನುತ ಮಂಚವನಿಳಿದನಸುರಾರಿ

narana nī kēḷdariyalā sō darada maidunanenage kuṃtiya vara kumārakanātanī dvārāvatiya horage marada hoḷḷoḷu hokku sikkida nariyavolaidāne nānupa carisi baheneṃdenuta maṃcavaniḷidanasurāri

Report an error

ಅರಸಿ ಕೇಳೀ ಬಂದ ಪಾರ್ಥನ ಕರೆದುಪಾಯಾಂತರದೊಳೀವೆನು ಸರಸಿಜಾನನೆಯನು ಸುಭದ್ರೆಯನಿಂದು ತಪ್ಪಿದರೆ ಕರೆಸಿ ದುರ್ಯೋಧನಗೆ ಕೊಡಿಸುವ ಭರವು ಬಲಭದ್ರನದು ಪಾರ್ಥನ ಬರವು ಲೇಸಾಯ್ತೆನುತ ಹೊರವಂಟನು ನಿಜಾಲಯವ

arasi kēḷī baṃda pārthana karedupāyāṃtaradoḷīvenu sarasijānaneyanu subhadreyaniṃdu tappidare karesi duryōdhanage koḍisuva bharavu balabhadranadu pārthana baravu lēsāytenuta horavaṃṭanu nijālayava

Report an error

ಬಂದನಲ್ಲಿಗೆ ಫಲುಗುಣನ ಕಂ ಡೆಂದನೀ ಶೈಲದ ಸಮೀಪದೊ ಳಿಂದು ನಿಲು ಬಲಭದ್ರನೈತಹನುಚಿತ ವಚನದಲಿ ಮಂದಿರಕೆ ಬರ ಹೇಳಿದರೆ ಬಾ ಮುಂದೆ ನಿನ್ನಿಷ್ಟಾರ್ಥ ಸಿದ್ಧಿಪು ದೆಂದು ಪಾರ್ಥನ ಸಂತವಿಸಿ ಮರಳಿದನು ಮುರವೈರಿ

baṃdanallige phaluguṇana kaṃ ḍeṃdanī śailada samīpado ḷiṃdu nilu balabhadranaitahanucita vacanadali maṃdirake bara hēḷidare bā muṃde ninniṣṭārtha siddhipu deṃdu pārthana saṃtavisi maraḷidanu muravairi

Report an error

ಪರಮಹಂಸನ ಸುಳಿವು ಸಾಕ್ಷಾ ತ್ಸರಸಿಜಾಕ್ಷನ ಲೀಲೆ ಗಡ ನ ಮ್ಮ ರಸನಭ್ಯುದಯ ಪ್ರಪಂಚವಿದೆಂದು ನಗರದಲಿ ಹರಹಿದನು ಹರಿ ವಾರ್ತೆಯನು ತಾ ನರಿಯದಂತಿರೆ ಬಳಿಕ ನೀಲಾಂ ಬರನು ಬಹಳೋತ್ಸವದೊಳೈದಿದನಾತನಿದ್ದೆಡೆಗೆ

paramahaṃsana suḷivu sākṣā tsarasijākṣana līle gaḍa na mma rasanabhyudaya prapaṃcavideṃdu nagaradali harahidanu hari vārteyanu tā nariyadaṃtire baḷika nīlāṃ baranu bahaḷōtsavadoḷaididanātaniddeḍege

Report an error

ವಂದಿಸಿದನಾ ಮುನಿಪತಿಯನಭಿ ವಂದಿತಾಶೀರ್ವಾದ ಸಂಗತಿ ಯಿಂದ ವಿವರಿಸಿದನು ಚತುರ್ದಶವಿದ್ಯೆಗಳ ಗತಿಯ ನಿಂದು ಮೂಗಿನ ಬೆರಳಿನಲಿ ಸಾ ನಂದ ಮಿಗೆ ಬೆರಗಾಗಿ ನಮ್ಮಯ ಮಂದಿರಕೆ ನೀವ್ ಬಿಜಯ ಮಾಡುವುದೆನುತ ಕೈಮುಗಿದ

vaṃdisidanā munipatiyanabhi vaṃditāśīrvāda saṃgati yiṃda vivarisidanu caturdaśavidyegaḷa gatiya niṃdu mūgina beraḷinali sā naṃda mige beragāgi nammaya maṃdirake nīv bijaya māḍuvudenuta kaimugida

Report an error

ನಾವು ಭಿಕ್ಷುಕರೆಮಗೆ ರಾಜ ಗೃ ಹಾವಲಂಬನವೇಕೆ ಶೈಲ ವ ನಾವಳಿಗಳಲಿ ವರ ನದೀತೀರದಲಿ ವಾಸಿಪೆವು ಭಾವಿತ ಪ್ರಾರಬ್ಧಕರ್ಮ ಫ ಲಾವಳಿಯನುಪಭೋಗಿಸುತ ದೇ ಹಾವಸಾನವನೀಕ್ಷಿಸುತ್ತಿಹೆವೆಂದನಾ ಪಾರ್ಥ

nāvu bhikṣukaremage rāja gr̥ hāvalaṃbanavēke śaila va nāvaḷigaḷali vara nadītīradali vāsipevu bhāvita prārabdhakarma pha lāvaḷiyanupabhōgisuta dē hāvasānavanīkṣisuttiheveṃdanā pārtha

Report an error

ಅಹುದು ನೀವೇಕಾಂತ ಭವನದೊ ಳಿಹುದು ಚಾತುರ್ಮಾಸವಿದು ಸಂ ನಿಹಿತವಾಯ್ತದ ನೂಕಿ ಬಿಜಯಂಗೈವುದಿಚ್ಛೆಯಲಿ ವಿಹಿತ ಚರಿತರು ನೀವಲಾ ನಿ ರ್ವಹಿಸುವೆನು ಶುಶ್ರೂಷೆಯನು ಕಿಂ ಗಹನ ಮಾಡದಿರೆಂದು ತಂದನು ಯತಿಯನರಮನೆಗೆ

ahudu nīvēkāṃta bhavanado ḷihudu cāturmāsavidu saṃ nihitavāytada nūki bijayaṃgaivudiccheyali vihita caritaru nīvalā ni rvahisuvenu śuśrūṣeyanu kiṃ gahana māḍadireṃdu taṃdanu yatiyanaramanege

Report an error

ಇವರನರಮನೆಯೊಳಗೆ ಕನ್ಯಾ ಭವನ ಮಧ್ಯದೊಳಿರಿಸಿ ಬಳಿಕಿನೊ ಳಿವರ ಶುಶ್ರೂಷೆಗೆ ಸುಭದ್ರಾದೇವಿಯನು ಕರೆಸಿ ಇವರ ಪೂರ್ವ ಮಹಾತ್ಮಕರು ನೀ ನಿವರ ದೇವಾರ್ಚನೆ ಸಮಾಧಿ ಪ್ರವರದಲಿ ಬೆಸಸಿದನು ಮಾಡುವುದೆಂದು ನೇಮಿಸಿದ

ivaranaramaneyoḷage kanyā bhavana madhyadoḷirisi baḷikino ḷivara śuśrūṣege subhadrādēviyanu karesi ivara pūrva mahātmakaru nī nivara dēvārcane samādhi pravaradali besasidanu māḍuvudeṃdu nēmisida

Report an error

ಹೊರಗೆ ಕೃಷ್ಣನ ಕರೆದಿವೆಲ್ಲವ ನರುಹಿದಡೆ ಮರುಳಾಡಿದನು ಮೈ ಮರೆದು ತಂಗಿಯನೊಯ್ದು ಬಿಸುಟಿರೆ ಬಣಗು ತಿರುಕನಲಿ ಅರಸು ಮಗಳನು ತೊತ್ತುಗೆಲಸಕೆ ಪರುಠವಿಸಿದಿರೆ ಶಿವಶಿವಾ ನಾ ವರಿಯೆವಲ್ಲಿಯ ಲೇಸು ಹೊಲ್ಲೆಹವೆಮ್ಮದಲ್ಲೆಂದ

horage kr̥ṣṇana karedivellava naruhidaḍe maruḷāḍidanu mai maredu taṃgiyanoydu bisuṭire baṇagu tirukanali arasu magaḷanu tottugelasake paruṭhavisidire śivaśivā nā variyevalliya lēsu hollehavemmadalleṃda

Report an error

ಮರುಳೆ ನೀ ಹೋಗಾರನೇನೆಂ ದರಿಯೆ ಹತಿ ಸರ್ವಜ್ಞನೀತನು ತಿರುಕನೇ ಸಾಕ್ಷಾತು ಲಕ್ಷ್ಮೀಕಾಂತ ಸನ್ನಿಭನು ಬರಲಿ ಮಾಣಲಿ ಹಾನಿ ವೃದ್ಧಿಯ ಹರಿಬವೆನ್ನನು ಯತಿ ಮಹಾತ್ಮರ ನರಿಯದವರೇ ನಾವೆನುತ ಗಜರಿದನು ಬಲರಾಮ

maruḷe nī hōgāranēneṃ dariye hati sarvajñanītanu tirukanē sākṣātu lakṣmīkāṃta sannibhanu barali māṇali hāni vr̥ddhiya haribavennanu yati mahātmara nariyadavarē nāvenuta gajaridanu balarāma

Report an error

ಆದರೊಳ್ಳಿತು ತಂಗಿ ಬೆಸಗೈ ದಾದರಿಸಲೀ ಯತಿಪತಿಯ ನಿಮ ಗೀ ದುರಾಗ್ರಹವೇಕೆ ಕಾಂಬಿರಿ ಫಲವನಗ್ರದಲಿ ಹೋದೆವಿದೆ ಮೌನದೊಳೆನುತ್ತ ಬು ಜೋದರನು ಹಿಂಗಿದನು ಹರಿಯ ವಿ ನೋದ ರಚನೆಯನೇನನೆಂಬೆನು ಭೂಪ ಕೇಳೆಂದ

ādaroḷḷitu taṃgi besagai dādarisalī yatipatiya nima gī durāgrahavēke kāṃbiri phalavanagradali hōdevide maunadoḷenutta bu jōdaranu hiṃgidanu hariya vi nōda racaneyanēnaneṃbenu bhūpa kēḷeṃda

Report an error

ಬಾಲಕಿಗೆ ಸಂನ್ಯಾಸಿ ದೇವರ ಮೇಲೆ ಮನವಾಯ್ತವರಿಗೀಕೆಯ ಮೇಲೆ ನೆಲಸಿತು ಚಿತ್ತ ಕಾಣೆನು ಜಪ ಸಮಾಧಿಗಳ ಮೇಳವಿಸಿತನ್ಯೋನ್ಯ ರಾಗ ಛ ಡಾಳಿಸಿದುದಭಿಲಾಷೆ ಕಾಮನ ಬೇಳುವೆಗೆ ಬೆಂಡಾದುದಿಬ್ಬರ ಧೈರ್ಯವಡಿಗಡಿಗೆ

bālakige saṃnyāsi dēvara mēle manavāytavarigīkeya mēle nelasitu citta kāṇenu japa samādhigaḷa mēḷavisitanyōnya rāga cha ḍāḷisidudabhilāṣe kāmana bēḷuvege beṃḍādudibbara dhairyavaḍigaḍige

Report an error

ಮಿಡುಕುವುದು ಬಾಯ್ ಚಿತ್ತವವಳಲಿ ತೊಡಕಿಹುದು ಜಪಮಾಲೆ ಬೆರಳಲಿ ನಡೆವುತಿಹುದಕ್ಷಿಗಳು ಮುಕ್ಕುಳಿಸಿಹವು ಮಾನಿನಿಯ ಮೃಡನ ಪೂಜೆಗೆ ಕೈ ಸುಭದ್ರೆಯ ಹಿಡಿಹಿನಲಿ ಮನ ವರ ಸಮಾಧಿಯ ತೊಡಹು ಹೊರಗೊಳಗಿಂದುಮುಖಿ ನರನಾಥ ಕೇಳೆಂದ

miḍukuvudu bāy cittavavaḷali toḍakihudu japamāle beraḷali naḍevutihudakṣigaḷu mukkuḷisihavu māniniya mr̥ḍana pūjege kai subhadreya hiḍihinali mana vara samādhiya toḍahu horagoḷagiṃdumukhi naranātha kēḷeṃda

Report an error

ಜಾರಿದುದು ಮಳೆಗಾಲವತಿ ಬೆಳು ಪೇರಿದವು ಮುಗಿಲುಗಳು ಕತ್ತಲೆ ಸೂರೆವೋದುದು ಹಗಲಿರುಳು ರವಿಶಸಿಗಳುಪಟಳಕೆ ತಾರಿದವು ನದಿ ನಗದಳಭ್ರಕೆ ಹಾರಿದವು ಕಳಹಂಸೆಗಳು ತಲೆ ದೋರಿದವು ತಾವರೆಗಳೆನೆ ಬಂದುದು ಶರತ್ಸಮಯ

jāridudu maḷegālavati beḷu pēridavu mugilugaḷu kattale sūrevōdudu hagaliruḷu raviśasigaḷupaṭaḷake tāridavu nadi nagadaḷabhrake hāridavu kaḷahaṃsegaḷu tale dōridavu tāvaregaḷene baṃdudu śaratsamaya

Report an error

ಸುದತಿಯನು ಶುಭದಿವಸ ಸುಮುಹೂ ರ್ತದೊಳಿರುಳು ವೈವಾಹವನು ಮಾ ಡಿದರು ಹರಿ ವಸುದೇವ ದೇವಕಿಯುಗ್ರಸೇನ ನೃಪ ಮದುವೆಯಾಯಿತು ಬಲನರಿಯದಂ ದದಲಿ ವೂಡಿದ ರಥವನೇರಿಸಿ ಮದವಳಿಗೆ ಸಹಿತರ್ಜುನನ ಕಳುಹಿದನು ಮುರವೈರಿ

sudatiyanu śubhadivasa sumuhū rtadoḷiruḷu vaivāhavanu mā ḍidaru hari vasudēva dēvakiyugrasēna nr̥pa maduveyāyitu balanariyadaṃ dadali vūḍida rathavanērisi madavaḷige sahitarjunana kaḷuhidanu muravairi

Report an error

ಪುರವ ಹೊರವಂಟವರು ಬರಲ ಬ್ಬರಣೆಯಾಯ್ತರಮನೆಯೊಳಗೆ ಸಂ ಕರುಷಣಂಗರುಹಿದರು ಸಂನ್ಯಾಸಿಯ ಸಮಾಧಿಗಳ ಅರಸು ಮಗಳನು ಕೊಂಡು ಹಾಯ್ದನೆ ತಿರುಕ ಮುನಿ ಮಝಭಾಪು ಸುಭಟರ ಕರೆ ಮುರಾರಿಯ ಮಾತು ತಾಗಿತೆನುತ್ತ ಗರ್ಜಿಸಿದ

purava horavaṃṭavaru barala bbaraṇeyāytaramaneyoḷage saṃ karuṣaṇaṃgaruhidaru saṃnyāsiya samādhigaḷa arasu magaḷanu koṃḍu hāydane tiruka muni majhabhāpu subhaṭara kare murāriya mātu tāgitenutta garjisida

Report an error

ಹೇಳವೇ ನಾವ್ ಮುನ್ನ ನೀವ್ ನೀ ಲಾಳಕಿಯ ಕೆಡಿಸಿದಿರಲಾ ನೀ ವಾಳ ನೆರಹಿದಡಿನ್ನು ಮಾಡುವುದೇನು ಕಡು ಮುಳಿದು ಚಾಳಿಸಿದುದಪಕೀರ್ತಿಯಕಟ ವಿ ಕಾಳಿಸಿತು ಯದುವಂಶವೆನೆ ಕರ ವಾಳ ಜಡಿದೈದಿದನು ಹಲಧರನರ್ಜುನನ ರಥವ

hēḷavē nāv munna nīv nī lāḷakiya keḍisidiralā nī vāḷa nerahidaḍinnu māḍuvudēnu kaḍu muḷidu cāḷisidudapakīrtiyakaṭa vi kāḷisitu yaduvaṃśavene kara vāḷa jaḍidaididanu haladharanarjunana rathava

Report an error

ಮುಸುಕಿದನು ನಾರಾಚದಲಿ ನಿ ಪ್ಪಸರದಲಿ ಹಲಧರನ ಸೇನೆಯ ಕುಸುರಿದರಿದನು ಕೊಂದನಗಣಿತ ಬಲವನಾ ಪಾರ್ಥ ಎಸೆವನೇ ಸಂನ್ಯಾಸಿ ಮಾಡಿದ ಹುಸಿಯುಪನ್ಯಾಸಕ್ಕೆ ಕೊಯ್ವೆನು ರಸನೆಯನು ದೇವಕಿಯ ಮೇಲಾಣೆನುತ ಗರ್ಜಿಸಿದ

musukidanu nārācadali ni ppasaradali haladharana sēneya kusuridaridanu koṃdanagaṇita balavanā pārtha esevanē saṃnyāsi māḍida husiyupanyāsakke koyvenu rasaneyanu dēvakiya mēlāṇenuta garjisida

Report an error

ಬಳಿಕ ಹರಿದನು ಕೃಷ್ಣ ನೀತನ ಕೆಲಕೆ ಕರೆದನು ಬಹಳ ರೋಷವ ನಿಲಿಸಿರೇ ಸಾಕಿನ್ನು ವಸುದೇವಂಗೆ ದೇವಕಿಗೆ ಮುಳಿವುದೀತನ ದೋಷವಲ್ಲಿದ ತಿಳಿದೆವಾವರ್ಜುನನು ಗಡ ನಾ ವಳುಕಲಿನ್ನೇಕೆನುತ ಬೊಧಿಸಿದನು ಹಲಾಯುಧನ

baḷika haridanu kr̥ṣṇa nītana kelake karedanu bahaḷa rōṣava nilisirē sākinnu vasudēvaṃge dēvakige muḷivudītana dōṣavallida tiḷidevāvarjunanu gaḍa nā vaḷukalinnēkenuta bodhisidanu halāyudhana

Report an error

ಅಕಟ ದುರ್ಯೋಧನಗೆ ತಪ್ಪಿಸಿ ಸಕಲ ಯಾದವರಿಲ್ಲಿಗೈದರೆ ವಿಕಳಮತಿ ನಾನೈಸಲೇ ಕೃಷ್ಣನ ಕುಮಂತ್ರವಿದು ಅಕುಟಿಲಾಂತಃಕರಣತನ ಬಾ ಧಕವಲೇ ಗರುವರಿಗೆನುತ ಸ ಭ್ರುಕುಟಿ ರೌದ್ರಾನನನು ಮುರಿದನು ಪುರಕೆ ಬಲರಾಮ

akaṭa duryōdhanage tappisi sakala yādavarilligaidare vikaḷamati nānaisalē kr̥ṣṇana kumaṃtravidu akuṭilāṃtaḥkaraṇatana bā dhakavalē garuvarigenuta sa bhrukuṭi raudrānananu muridanu purake balarāma

Report an error

ಹರಿಸಹಿತ ಬಲರಾಮನತ್ತಲು ತಿರುಗಿದನು ಪವಮಾನ ಜವದಲಿ ಪುರಕೆ ಬಂದನು ಪಾರ್ಥ ಪಯಣದ ಮೇಲೆ ಪಯಣದಲಿ ಪುರದ ಬಹಿರೋದ್ಯಾನದಲಿ ಸಂ ವರಿಸಿ ರಥವನು ನಿಲಿಸಿ ನೆಳಲಲಿ ಪರಿಗತ ಶ್ರಮನಾಗಿ ನಗುತ ಸುಭದ್ರೆಗಿಂತೆಂದ

harisahita balarāmanattalu tirugidanu pavamāna javadali purake baṃdanu pārtha payaṇada mēle payaṇadali purada bahirōdyānadali saṃ varisi rathavanu nilisi neḷalali parigata śramanāgi naguta subhadregiṃteṃda

Report an error

ಅರಮನೆಗೆ ನಡೆ ದ್ರುಪದ ನಂದನೆ ಕರೆಸಿದರೆ ನೀ ಹೋಗು ನಿರುತವ ನರುಹದಿರು ತುರುಗಾಹಿಗಳ ಮಗಳೆಂದು ನುಡಿ ಸಾಕು ಅರಸಿ ಮಿಗೆ ಮನ್ನಿಸುವಳಲ್ಲಿರು ಕರೆಸಿಕೊಂಬೆನು ಬಳಿಕಲೆಂದೀ ಸರಸಿಜಾಕ್ಷಿಯ ಕಳುಹಿದನು ನಿಜ ರಾಜಮಂದಿರಕೆ

aramanege naḍe drupada naṃdane karesidare nī hōgu nirutava naruhadiru turugāhigaḷa magaḷeṃdu nuḍi sāku arasi mige mannisuvaḷalliru karesikoṃbenu baḷikaleṃdī sarasijākṣiya kaḷuhidanu nija rājamaṃdirake

Report an error

ಬಂದಳಬಲೆ ಸಮಸ್ತಪುರಜನ ವಿಂದುವದನೆಯ ನೋಡುತಿದ್ದುದು ಮಂದಿ ಕವಿದುದು ಮನುಜೆಯೇ ಸುರಲೋಕ ವಧುವೆನುತ ಮಂದಿರಕೆ ಬರೆ ಬಾಗಿಲವದಿರು ನಿಂದರಲ್ಲಿಯದಲ್ಲಿ ಬಳಿಕರ ವಿಂದಮುಖಿಯರು ಕಂಡು ದ್ರೌಪದಿಗರುಹಿದರು ಹದನ

baṃdaḷabale samastapurajana viṃduvadaneya nōḍutiddudu maṃdi kavidudu manujeyē suralōka vadhuvenuta maṃdirake bare bāgilavadiru niṃdaralliyadalli baḷikara viṃdamukhiyaru kaṃḍu draupadigaruhidaru hadana

Report an error

ಕರೆಸಿ ಕಾಣಿಸಿಕೊಂಡು ಪಾಂಡವ ರರಸಿ ಬೆಸಗೊಳಲೀಕೆ ಪಾರ್ಥನ ಪರುಠವದ ಮಾತುಗಳನೆಂದಳು ನಗೆಯ ಮೊಳೆ ಮಿನುಗೆ ಸುರ ಭುಜಂಗಮ ವಧುವೊ ನೀ ಮೇ ಣರಸು ಮಗಳೋ ತಂಗಿ ನೀ ಗೊ ಲ್ಲರ ಮಗಳೆ ಪುಸಿಯೆನುತ ತಲೆದೂಗಿದಳು ಪಾಂಚಾಲಿ

karesi kāṇisikoṃḍu pāṃḍava rarasi besagoḷalīke pārthana paruṭhavada mātugaḷaneṃdaḷu nageya moḷe minuge sura bhujaṃgama vadhuvo nī mē ṇarasu magaḷō taṃgi nī go llara magaḷe pusiyenuta taledūgidaḷu pāṃcāli

Report an error

ಮಸಗಿದವು ನಿಸ್ಸಾಳ ತತಿ ಗ ರ್ಜಿಸಿದವರ್ಜುನ ಬಂದನಿದೆಯೆಂ ದೊಸಗೆವಾತಿನೊಳೂರ ಸುಳಿದರು ದೂತರಲ್ಲಲ್ಲಿ ಶಶಿಮುಖಿಯರುಪ್ಪಾರತಿಯ ಮಿಗಿ ಲೆಸೆವ ರತುನಾವಳಿಯ ಕಾಂತಾ ವಿಸರ ನೂಕಿತು ಪಾರ್ಥ ಹೊಕ್ಕನು ರಾಜಮಂದಿರವ

masagidavu nissāḷa tati ga rjisidavarjuna baṃdanideyeṃ dosagevātinoḷūra suḷidaru dūtarallalli śaśimukhiyaruppāratiya migi leseva ratunāvaḷiya kāṃtā visara nūkitu pārtha hokkanu rājamaṃdirava

Report an error

ಅರಸ ಭೀಮರಿಗೆರಗಿ ನಕುಲಾ ದ್ಯರನು ಕಾಣಿಸಿಕೊಂಡು ದೇಶಾಂ ತರದ ತೀರ್ಥೋನ್ನತಿಯನಾ ವೃತ್ತಾಂತ ಸಂಗತಿಯ ಮುರಹರನ ಸೌಹೃದವನಾತನ ಕರುಣ ಕನ್ಯಾಲಾಭವನು ವಿ ಸ್ತರಿಸಿ ಹರುಷಾಂಬುಧಿಯೊಳದ್ದಿದನಗ್ರಜಾನುಜರ

arasa bhīmarigeragi nakulā dyaranu kāṇisikoṃḍu dēśāṃ tarada tīrthōnnatiyanā vr̥ttāṃta saṃgatiya muraharana sauhr̥davanātana karuṇa kanyālābhavanu vi starisi haruṣāṃbudhiyoḷaddidanagrajānujara

Report an error

ಅರಸ ಕೇಳೈ ದ್ರೌಪದಿಯ ಮನ ಬರಿಸಿ ಬೇರರಮನೆಯೊಳೀಕೆಯ ನಿರಿಸಿದನು ಹರುಷದಲಿ ಕಳೆದರು ಕಾಲ ವಿಭ್ರಮವ ಇರಲಿರಲು ಪಾರ್ಥಗೆ ಸುಭದ್ರೆಗೆ ವರ ಕುಮಾರಕನುದಿಸಿದನು ವಿ ಸ್ತರಣವಾಯ್ತಭಿಮನ್ಯುವಿನ ಜನನೋತ್ಸವಾಭ್ಯುದಯ

arasa kēḷai draupadiya mana barisi bēraramaneyoḷīkeya nirisidanu haruṣadali kaḷedaru kāla vibhramava iraliralu pārthage subhadrege vara kumārakanudisidanu vi staraṇavāytabhimanyuvina jananōtsavābhyudaya

Report an error

Illustration: Verse & Place (Project-owned).