ವಿಮಲಮುನಿ ಪಾಂಚಾಲ ಚಿತ್ರ ಭ್ರಮೆಯನಪಹರಿಸಿದನು ದ್ರೌಪದಿ ರಮಣಿಯಾದಳು ಹರನ ವರದಲಿ ಪಾಂಡು ತನಯರಿಗೆ
vimalamuni pāṃcāla citra bhrameyanapaharisidanu draupadi ramaṇiyādaḷu harana varadali pāṃḍu tanayarige
ಆದಿ ಪರ್ವ — ಸಂಧಿ ೧೬ · ಆದಿ ಪರ್ವ — ಸಂಧಿ ೧೬
ādi parva — saṃdhi 16
The complete adi parva · sandhi 16 in Kannada.
67 passagesKannada with transliteration
Invocation
ವಿಮಲಮುನಿ ಪಾಂಚಾಲ ಚಿತ್ರ ಭ್ರಮೆಯನಪಹರಿಸಿದನು ದ್ರೌಪದಿ ರಮಣಿಯಾದಳು ಹರನ ವರದಲಿ ಪಾಂಡು ತನಯರಿಗೆ
vimalamuni pāṃcāla citra bhrameyanapaharisidanu draupadi ramaṇiyādaḷu harana varadali pāṃḍu tanayarige
ಕೇಳು ಜನಮೇಜಯ ಧರಿತ್ರೀ ಪಾಲ ಕೌರವನೃಪತಿ ಪಯಣದ ಮೇಲೆ ಪಯಣದಲೈದಿ ಹೊಕ್ಕನು ಹಸ್ತಿನಾಪುರವ ಹೇಳಲೇನುಳಿದಖಿಳ ಧರಣೀ ಪಾಲಕರ ದುಮ್ಮಾನವನು ಪಾಂ ಚಾಲ ದೇಶವ ಕಳೆದು ಹೊಕ್ಕರು ತಮ್ಮ ನಗರಿಗಳ
kēḷu janamējaya dharitrī pāla kauravanr̥pati payaṇada mēle payaṇadalaidi hokkanu hastināpurava hēḷalēnuḷidakhiḷa dharaṇī pālakara dummānavanu pāṃ cāla dēśava kaḷedu hokkaru tamma nagarigaḷa
ಭೀತಿ ಹರಿದುದು ರಾಯದಳ ಸಂ ಘಾತ ಸರಿದುದು ಮತ್ತೆ ಸುಜನ ವ್ರಾತ ನೆರೆದುದು ಮೆರೆದುದವನೀ ದೇವರಗ್ಗಳಿಕೆ ವಾತಜನು ಮರಗೊಂಬಿನಲಿ ಮಾ ರಾತನನು ಮನ್ನಿಸಿ ಕುಲಾಲ ನಿ ಕೇತನಕೆ ಬಂದೆರಗಿದನು ಧರ್ಮಜನ ಚರಣದಲಿ
bhīti haridudu rāyadaḷa saṃ ghāta saridudu matte sujana vrāta neredudu meredudavanī dēvaraggaḷike vātajanu maragoṃbinali mā rātananu mannisi kulāla ni kētanake baṃderagidanu dharmajana caraṇadali
ಇತ್ತಲರ್ಜುನನಿನಸುತನ ಬೆಂ ಬತ್ತಿ ಮರಳಿದನವನಿಪಾಲರ ಮುತ್ತಿಗೆಯ ತೆಗೆಸಿದನು ಜಯಲಕ್ಷ್ಮಿಯ ಕಟಾಕ್ಷದಲಿ ಮತ್ತ ರಾಯರ ಬೆನ್ನಕಪ್ಪವ ನೆತ್ತಿದುತ್ಸಹ ವದನದಲಿ ಹೊಗ ರೆತ್ತಿದಕ್ಷಿಯ ಹೊಳಹಿನಲಿ ಹೊಕ್ಕನು ನೃಪಾಲಯವ
ittalarjunaninasutana beṃ batti maraḷidanavanipālara muttigeya tegesidanu jayalakṣmiya kaṭākṣadali matta rāyara bennakappava nettidutsaha vadanadali hoga rettidakṣiya hoḷahinali hokkanu nr̥pālayava
ಈತನುದಯದೊಳಿಂದು ಭೂಸುರ ಜಾತಿಗಾಯ್ತಗ್ಗಳಿಕೆ ಪಾರ್ಥಿವ ರಾತರಿಂದುಬ್ಬಟೆಯ ಧನುವಿಂದಿವನ ವಶವಾಯ್ತು ಸೋತು ತೆಗೆದ ಮಹೀಶ್ವರರ ಮಾ ತೇತಕದು ಮಝ ಪೂತೆನುತ ಜನ ವೀತನನು ಕೊಂಡಾಡುತಿರ್ದದು ನೆರವಿ ನೆರವಿಯಲಿ
ītanudayadoḷiṃdu bhūsura jātigāytaggaḷike pārthiva rātariṃdubbaṭeya dhanuviṃdivana vaśavāytu sōtu tegeda mahīśvarara mā tētakadu majha pūtenuta jana vītananu koṃḍāḍutirdadu neravi neraviyali
ಬಂದನೀತನು ಗತಿಯ ಗರುವಿಕೆ ಯಿಂದ ತರುಣಿಯ ಹೊರೆಗೆ ಬಾ ನೀ ನೆಂದು ಕರೆದನು ಸತಿಸಹಿತ ತಿರುಗಿದನು ವಹಿಲದಲಿ ಇಂದುಮುಖಿಯನು ಕುಂಭಕಾರನ ಮಂದಿರದ ಹೊರಗಿರಿಸಿ ಫಲುಗುಣ ಬಂದು ಮೈಯಿಕ್ಕಿದನು ಕುಂತಿಯ ಚರಣಕಮಲದಲಿ
baṃdanītanu gatiya garuvike yiṃda taruṇiya horege bā nī neṃdu karedanu satisahita tirugidanu vahiladali iṃdumukhiyanu kuṃbhakārana maṃdirada horagirisi phaluguṇa baṃdu maiyikkidanu kuṃtiya caraṇakamaladali
ತಾಯೆ ಬಿನ್ನಹವಿಂದು ಧರಣೀ ರಾಯರೆಲ್ಲರ ಗೆಲಿದು ತಂದೆನು ನಾಯಕವನನುಪಮಿತ ಮೌಲ್ಯವನಮಲ ಮೌಕ್ತಿಕವ ತಾಯೆ ಚಿತ್ತೈಸಿದಿರೆಯೆನೆ ಕಡೆ ವಾಯಿದಳು ತನಿ ಹರುಷದಲಿ ಲೇ ಸಾಯಿತೈವರು ಕೂಡಿ ಭೋಗಿಪುದೆಂದಳಾ ಕುಂತಿ
tāye binnahaviṃdu dharaṇī rāyarellara gelidu taṃdenu nāyakavananupamita maulyavanamala mauktikava tāye cittaisidireyene kaḍe vāyidaḷu tani haruṣadali lē sāyitaivaru kūḍi bhōgipudeṃdaḷā kuṃti
ಎನೆ ಹಸಾದವೆನುತ್ತ ಕಮಲಾ ನನೆಯ ಹೊಡವಂಡಿಸಿದನವ್ವೆಗೆ ತನುಜ ನೀ ತಂದಮಲಮೌಕ್ತಿಕವಿದೆಯೊ ಶಿವಯೆನುತ ತನಗೆ ನುಡಿ ತೊದಲಿಸಿತಲಾ ನೀ ವಿನಿಬರುಪಭೋಗಿಸುವುದೆಂದೆನು ವನಿತೆಯೈವರಿಗರಸಿಯೇ ಲೇಸೆಂದಳಾ ಕುಂತಿ
ene hasādavenutta kamalā naneya hoḍavaṃḍisidanavvege tanuja nī taṃdamalamauktikavideyo śivayenuta tanage nuḍi todalisitalā nī vinibarupabhōgisuvudeṃdenu vaniteyaivarigarasiyē lēseṃdaḷā kuṃti
ಜನನಿ ತಪ್ಪದು ನಿಮ್ಮ ನುಡಿಯಿ ವನಜಮುಖಿಯೆಮ್ಮೈವರಿಗೆ ಸತಿವಿನುತಗುರುವಚನಾಂಬುನಿಧಿ ಮಕ್ಕಳಿಗಲಂಘ್ಯವಲೆ ಎನೆ ಯುಧಿಷ್ಠಿರ ನೃಪತಿ ಪಾರ್ಥನ ಕನಲಿದನು ಕಲಿ ಭೀಮನಲ್ಲೆಂ ದನು ನಕುಲ ಸಹದೇವರನುಚಿತವೆಂದರರ್ಜುನಗೆ
janani tappadu nimma nuḍiyi vanajamukhiyemmaivarige sativinutaguruvacanāṃbunidhi makkaḷigalaṃghyavale ene yudhiṣṭhira nr̥pati pārthana kanalidanu kali bhīmanalleṃ danu nakula sahadēvaranucitaveṃdararjunage
ಎಲ್ಲ ಧರ್ಮದ ಸಾರವನು ನೀವ್ ಬಲ್ಲಿರೈ ಸಲೆ ಹೇಳ್ಪುದಾವುದು ನಿಲ್ಲಿ ನೀವ್ ಸಹದೇವ ನಕುಲರು ನಿಮಗೆ ಮಾತೇಕೆ ಬಲ್ಲಿರಖಿಳಾಮ್ನಾಯ ಭಾಷಿತ ದಲ್ಲಿ ನೋಡಲು ಧರ್ಮಶಾಸ್ತ್ರದೊ ಳೆಲ್ಲ ತಾಯಿಂದಧಿಕ ಗುರುವಿಲ್ಲೆಂದನಾ ಪಾರ್ಥ
ella dharmada sāravanu nīv ballirai sale hēḷpudāvudu nilli nīv sahadēva nakularu nimage mātēke ballirakhiḷāmnāya bhāṣita dalli nōḍalu dharmaśāstrado ḷella tāyiṃdadhika guruvilleṃdanā pārtha
ಮಾತೃವಚನವಲಂಘ್ಯವಿದು ವಿ ಖ್ಯಾತ ಪದ್ಧತಿ ಲೋಕ ಯಾತ್ರಾ ಭೀತಿಯಲಿ ಭಯವೇಕೆ ಧರ‍್ಮ ರಹಸ್ಯನಿಷ್ಠರಿಗೆ ಏತಕೀ ಲೋಕಾನುಸರಣೆ ವಿ ಧೂತ ಕಿಲ್ಬಿಷವಾವುದದು ಧ ಮಾತಿಶಯವಿಹಪರಕೆ ಕಡುಹಿತವೆಂದನಾ ಪಾರ್ಥ
mātr̥vacanavalaṃghyavidu vi khyāta paddhati lōka yātrā bhītiyali bhayavēke dharma rahasyaniṣṭharige ētakī lōkānusaraṇe vi dhūta kilbiṣavāvudadu dha mātiśayavihaparake kaḍuhitaveṃdanā pārtha
ರಾಗ ಲೋಭವ್ಯಾಪ್ತಿಯಲಿ ನೀ ವೀ ಗುರುವಿಗಳುಪುವರೆ ಸಲೆಧ ರ‍್ಮಾಗಮವನಾಚರಿಸುವದಲೇ ನಮ್ಮ ನುಷ್ಠಾನ ಈಗಳೀ ಗುರುವಚನ ಧರ್ಮ ತ್ಯಾಗವೇನಿದು ಧರ್ಮವೇ ಉಪ ಭೋಗವೈವರಿಗೆಂದು ತಿಳುಹಿದನವರನಾ ಪಾರ್ಥ
rāga lōbhavyāptiyali nī vī guruvigaḷupuvare saledha rmāgamavanācarisuvadalē namma nuṣṭhāna īgaḷī guruvacana dharma tyāgavēnidu dharmavē upa bhōgavaivarigeṃdu tiḷuhidanavaranā pārtha
ಮಾಡದಿರಿ ಸಂದೇಹಗಳ ಖಯ ಖೋಡಿಯಿದರೊಳಗಿಲ್ಲ ಧರ್ಮದ ಮೂಡಿಗೆಯೊಳಂಬಿರಲಿ ಬಹಿರಂಗದಲಿ ಬಳಸದಿರಿ ಗೂಡು ಹಲವಿಹ ಪಕ್ಷಿಯೊಂದಿದ ನಾಡಬಾರದು ಸಾಕು ಚಿಂತಿಸ ಬೇಡಿ ನೀವೆಂದನಿಬರನು ತಿಳುಹಿದನು ಕಲಿಪಾರ್ಥ
māḍadiri saṃdēhagaḷa khaya khōḍiyidaroḷagilla dharmada mūḍigeyoḷaṃbirali bahiraṃgadali baḷasadiri gūḍu halaviha pakṣiyoṃdida nāḍabāradu sāku ciṃtisa bēḍi nīveṃdanibaranu tiḷuhidanu kalipārtha
ಅದುದನುಮತ ತಮ್ಮೊಳಗೆ ತಹೋದ ರರು ಸೌಹಾರ್ದದಿಂದ ತ ಳೋದರಿಯನೊಲಿದೈವರಂಗೀಕರಿಸಿದರು ಬಳಿಕ ಆದರಣೆಯಲಿ ಕುಂತಿ ಸೊಸೆಗೆ ವೃ ಕೋದರನ ಭಿಕ್ಷಾನ್ನ ಭಾಗದ ಭೇದವನು ತಿಳುಹಿದಳು ತೊಡೆಯಲಿ ತೆಗೆದು ಕುಳ್ಳಿರಿಸಿ
adudanumata tammoḷage tahōda raru sauhārdadiṃda ta ḷōdariyanolidaivaraṃgīkarisidaru baḷika ādaraṇeyali kuṃti sosege vr̥ kōdarana bhikṣānna bhāgada bhēdavanu tiḷuhidaḷu toḍeyali tegedu kuḷḷirisi
ಇಳಿದನಸ್ತಾಚಲಕೆ ರವಿ ನೃಪ ತಿಲಕರೈವರು ವಿಹಿತಕೃತ್ಯಾ ವಳಿಗಳನು ವಿಸ್ತರಿಸಿ ಕುಂತಿಯ ಚರಣಕಭಿನಮಿಸಿ ಜಲರುಹಾಕ್ಷನ ನಾಮಕೀರ್ತನ ಲುಳಿತ ಪರಮಾನಂದರಸದಲಿ ಮುಳುಗಿ ಮೂಡುತ್ತಿರ್ದರಂದು ಕುಲಾಲ ಭವನದಲಿ
iḷidanastācalake ravi nr̥pa tilakaraivaru vihitakr̥tyā vaḷigaḷanu vistarisi kuṃtiya caraṇakabhinamisi jalaruhākṣana nāmakīrtana luḷita paramānaṃdarasadali muḷugi mūḍuttirdaraṃdu kulāla bhavanadali
ಸಿಲುಕಿದುದು ಜನದೃಷ್ಟಿ ಬಲುಗ ತ್ತಲೆಯ ಬಂಧದೊಳಂಧಕಾರದ ಜಲಧಿಯಲಿ ಜಗವದ್ದುದೇನೆಂಬೆನು ಮಹಾದ್ಭುತವ ನಳಿನಮಿತ್ರನ ಬೇಹುಕಾರರ ಸುಳಿವೊ ತಿಮಿರದ ಪಾಳೆಯದೊಳೆನೆ ನಿಳಯದ ಸೊಡರು ತಳಿತುದು ಕೂಡೆ ನಗರಿಯಲಿ
silukidudu janadr̥ṣṭi baluga ttaleya baṃdhadoḷaṃdhakārada jaladhiyali jagavaddudēneṃbenu mahādbhutava naḷinamitrana bēhukārara suḷivo timirada pāḷeyadoḷene niḷayada soḍaru taḷitudu kūḍe nagariyali
ಇವರಿಗುಂಟೇ ದೀಪ ತೈಲ ದ್ರವಿಣವಿಲ್ಲ ಕುಲಾಲ ಭವನಕೆ ಕವಿವ ಕಗ್ಗತ್ತಲೆಯ ನುಗ್ಗೊತ್ತಿದುದು ಬೇರೊಂದು ನವ ಯುವತಿಯಾಭರಣ ಮಣಿರುಚಿ ನಿವಹವಾಕೆಯ ನಯನಕಾಂತಿಗ ಳವನಿಪತಿ ಕೇಳ್ ನಿನ್ನ ಪಿತನ ಪಿತಾಮಹರ ಪರಿಯ
ivariguṃṭē dīpa taila draviṇavilla kulāla bhavanake kaviva kaggattaleya nuggottidudu bēroṃdu nava yuvatiyābharaṇa maṇiruci nivahavākeya nayanakāṃtiga ḷavanipati kēḷ ninna pitana pitāmahara pariya
ಜನಪ ನಂದನೆಗೊಂದು ಕೃಷ್ಣಾ ಜಿನವನಿತ್ತರು ಶಯನ ಭಾಗಕೆ ಜನನಿಯಂಘ್ರಿಯ ಬಳಿಯಲೊರಗಿದರೈವರೊಂದಾಗಿ ವನಿತೆಯವರಂಘ್ರಿಗಳ ತಲೆಗಿಂ ಬಿನಲಿ ಮಲಗಿದಳಂದಿನಾಹವ ಜನಿತ ಕೃತಿಯನು ನುಡಿವುತಿರ್ದನು ಪಾರ್ಥನರಸಂಗೆ
janapa naṃdanegoṃdu kr̥ṣṇā jinavanittaru śayana bhāgake jananiyaṃghriya baḷiyaloragidaraivaroṃdāgi vaniteyavaraṃghrigaḷa talegiṃ binali malagidaḷaṃdināhava janita kr̥tiyanu nuḍivutirdanu pārthanarasaṃge
ಗೆಲಿದ ಪರಿಯನು ಕೌರವೇಂದ್ರನ ದಳವ ಮುರಿದಂದವನು ಕರ್ಣನ ನಳುಕದೆಚ್ಚ ಶರಪ್ರಯೋಗದ ಚಾಪ ಕೌಶಲವ ಬಲಜಲಧಿ ಮುಕ್ಕುರಿಕಿದರೆ ಮಂ ಡಲಿಸಿ ಮೊಗದಂದವನು ಶಸ್ತ್ರಾ ವಳಿಯ ಸಂಹರಣವನು ವಿವರಿಸಿದನು ಮಹೀಪತಿಗೆ
gelida pariyanu kauravēṃdrana daḷava muridaṃdavanu karṇana naḷukadecca śaraprayōgada cāpa kauśalava balajaladhi mukkurikidare maṃ ḍalisi mogadaṃdavanu śastrā vaḷiya saṃharaṇavanu vivarisidanu mahīpatige
ಕುದುರೆಯೇರಾಟವನು ಮಾತಂ ಗದ ಸುಶಿಕ್ಷಾಭೇದವನು ರಥ ವಿದಿತ ಕೌಶಲವನು ಶರಾಸನವೇದಸಂಗತಿಯ ಮದವದರಿ ಭಂಜನವ ದಿವ್ಯಾ ಸ್ತ್ರದಲಿ ಮುಕ್ತಾಮುಕ್ತ ಸಮರಂ ಗದ ಸುಸಂಗತಿಯಿಂದ ನೂಕಿದರಿವರು ಯಾಮಿನಿಯ
kudureyērāṭavanu mātaṃ gada suśikṣābhēdavanu ratha vidita kauśalavanu śarāsanavēdasaṃgatiya madavadari bhaṃjanava divyā stradali muktāmukta samaraṃ gada susaṃgatiyiṃda nūkidarivaru yāminiya
ಆಯುಧದ ಲಕ್ಷಣವನಾ ದಿ ವ್ಯಾಯುಧದ ಮಂತ್ರಪ್ರಭಾವವ ನಾಯುಧದ ವಿವಿಧ ಪ್ರಯೋಗವನದರ ಪರಿವಿಡಿಯ ರಾಯರಂಗದ ಶಕ್ತಿವರ್ಗದ ಪಾಯಗುಣ ವಿಕ್ರಮ ಪರಾಕ್ರಮ ನಾಯಕರ ಗುಣಕಥನದಲಿ ನೂಕಿದರು ಯಾಮಿನಿಯ
āyudhada lakṣaṇavanā di vyāyudhada maṃtraprabhāvava nāyudhada vividha prayōgavanadara pariviḍiya rāyaraṃgada śaktivargada pāyaguṇa vikrama parākrama nāyakara guṇakathanadali nūkidaru yāminiya
ಮುನಿವಳೀ ಸತಿಯೆಂದು ನಿದ್ರಾಂ ಗನೆಯ ನೂಕಿದರವನಿಪರು ಭಾ ಮಿನಿ ಸಹಿತಲಿರಲಿತ್ತಲೀ ಪಾಂಚಾಲ ಭೂಪತಿಯ ತನುಜನಿವರ ಪರೀಕ್ಷೆಗೋಸುಗ ಮುನಿಪ ಕಾಶ್ಯಪಗೂಡಿ ಕೇಳಿದ ನನಿತು ಮಾತೆಲ್ಲವನು ಮರೆಯಲಿ ನಿಂದು ರಜನಿಯಲಿ
munivaḷī satiyeṃdu nidrāṃ ganeya nūkidaravaniparu bhā mini sahitaliralittalī pāṃcāla bhūpatiya tanujanivara parīkṣegōsuga munipa kāśyapagūḍi kēḷida nanitu mātellavanu mareyali niṃdu rajaniyali
ಬಂದು ಧೃಷ್ಟದ್ಯುಮ್ನನಯ್ಯಂ ಗೆಂದನಿನನಸ್ತಮಯ ಸಂಧ್ಯಾ ವಂದನೆಯ ತರುವಾಯ ಶಸ್ತ್ರಾಸ್ತ್ರಪ್ರಸಂಗದಲಿ ಸಂದ ಗಜ ಹಯ ರಥದ ಪರಿವಿಡಿ ಯಿಂದವರು ನೃಪನೀತಿ ಸಂಗತಿ ಯಿಂದ ರಾತ್ರಿಯ ಕಳೆದರಾರೆಂದರಿಯೆ ನಾನೆಂದ
baṃdu dhr̥ṣṭadyumnanayyaṃ geṃdaninanastamaya saṃdhyā vaṃdaneya taruvāya śastrāstraprasaṃgadali saṃda gaja haya rathada pariviḍi yiṃdavaru nr̥panīti saṃgati yiṃda rātriya kaḷedarāreṃdariye nāneṃda
ಧರಣಿಪತಿ ಕೇಳ್ ವಿಪ್ರರಾದರೆ ಸರಸನವ ಭೋಜನದ ಕಥೆ ಮೇಣ್ ನಿರತಿಶಯವೇದಾಂಗವೇದ ತದರ್ಥ ತರ್ಕಗಳು ಅರಸುಗಳಿಗಾಯುಧದ ಗಜ ರಥ ತುರಗದೇರಾಟದ ಮಹಾಸ್ತ್ರದ ವಿರಚನೆಗಳಿವು ಜಾತಿವಿದ್ಯಗಳೆಂದನಾ ಮುನಿಪ
dharaṇipati kēḷ viprarādare sarasanava bhōjanada kathe mēṇ niratiśayavēdāṃgavēda tadartha tarkagaḷu arasugaḷigāyudhada gaja ratha turagadērāṭada mahāstrada viracanegaḷivu jātividyagaḷeṃdanā munipa
ಭೂರಿ ಧನವರ್ಧನ ಸದಾವ್ಯವ ಹಾರ ಲಾಭಾಲಾಭ ಚಿಂತೆಗ ಳೂರುಜನಿತರಿಗಂತ್ಯವರ್ಣಕೆ ಕೃಷಿಯ ಮಾತುಗಳು ಆರನಾದರು ಜಾತಿಧರ್ಮದ ಸೇರುವೆಗಳೇ ಹೇಳುವುವು ನ ಮ್ಮಾರಯಿಕೆಗಿವರಿಂದು ಕ್ಷತ್ರಿಯರೆಂದು ಮುನಿ ನುಡಿದ
bhūri dhanavardhana sadāvyava hāra lābhālābha ciṃtega ḷūrujanitarigaṃtyavarṇake kr̥ṣiya mātugaḷu āranādaru jātidharmada sēruvegaḷē hēḷuvuvu na mmārayikegivariṃdu kṣatriyareṃdu muni nuḍida
ಇವರು ಪಾರ್ಥಿವರೊಳಗೆ ಕೇಳ್ ಪಾಂ ಡವರು ನಿಸ್ಸಂದೇಹವೆಂದೇ ನಿವಗೆ ನಾವೆನ್ನೆವೆ ವಿವಾಹದ ಪೂರ್ವಕಾಲದಲಿ ಅವರನುಪಚರಿಸೇಳು ರಚಿಸು ತ್ಸವವನಾಯ್ತಿದೆ ಪೂರ್ವಗಿರಿಯಲಿ ರವಿಯುದಯವೆಂದಾ ಪುರೋಹಿತ ತಿಳುಹಿದನು ನೃಪನ
ivaru pārthivaroḷage kēḷ pāṃ ḍavaru nissaṃdēhaveṃdē nivage nāvenneve vivāhada pūrvakāladali avaranupacarisēḷu racisu tsavavanāytide pūrvagiriyali raviyudayaveṃdā purōhita tiḷuhidanu nr̥pana
ಒಸಗೆಯಾಯಿತು ಮತ್ತೆ ಗುಡಿಯೆ ತ್ತಿಸಿತು ನಗರಿಯೊಳಧಿಕ ಹರುಷ ಪ್ರಸರದಲಿ ರೋಮಾಳಿ ಪಲ್ಲವಿಸಿದುದು ನರಪತಿಯ ಬಿಸಜಬಂಧುವಿನುದಯದಲಿ ನೃಪ ವಿಸರಸಹಿತ ಕುಲಾಲಭವನದ ವಸುಮತೀವಲ್ಲಭರ ಕಂಡನು ಬಂದು ಪಾಂಚಾಲ
osageyāyitu matte guḍiye ttisitu nagariyoḷadhika haruṣa prasaradali rōmāḷi pallavisidudu narapatiya bisajabaṃdhuvinudayadali nr̥pa visarasahita kulālabhavanada vasumatīvallabhara kaṃḍanu baṃdu pāṃcāla
ಏಳಿ ಬಿಜಯಂಗೈವುದೆಂದು ನೃ ಪಾಲಕರನುಚಿತದಲಿ ನಿಜ ರಾ ಜಾಲಯಕೆ ತಂದನು ನಿರೀಕ್ಷಿಸುತನಿಬರಿಂಗಿತವ ಮೇಲು ಮೊಗದ ಗಭೀರಗತಿಯ ಛ ಡಾಳವನು ಕಂಡಿವರು ರಾಯರ ಪೀಳಿಗೆಗಳಹುದೆಂದು ನಿಶ್ಚೈಸಿದನು ಮನದೊಳಗೆ
ēḷi bijayaṃgaivudeṃdu nr̥ pālakaranucitadali nija rā jālayake taṃdanu nirīkṣisutanibariṃgitava mēlu mogada gabhīragatiya cha ḍāḷavanu kaṃḍivaru rāyara pīḷigegaḷahudeṃdu niścaisidanu manadoḷage
ಮುದದಿ ಮಂಗಳ ಮಜ್ಜನವ ಮಾ ಡಿದರು ದಿವ್ಯಾಂಬರವನುಟ್ಟರು ಸುದತಿಯರ ಹರಿವಾಣದಾರತಿಗಳನು ಕೈಗೊಳುತ ಪದಕ ಕರ್ಣಾಭರಣ ಹಾರಾಂ ಗದದಿನೊಪ್ಪಂಬಡೆದಿವರು ಪೂ ಸಿದರು ಸಾದು ಜವಾಜಿ ಕತ್ತುರಿ ಯಕ್ಷಕರ್ದಮವ
mudadi maṃgaḷa majjanava mā ḍidaru divyāṃbaravanuṭṭaru sudatiyara harivāṇadāratigaḷanu kaigoḷuta padaka karṇābharaṇa hārāṃ gadadinoppaṃbaḍedivaru pū sidaru sādu javāji katturi yakṣakardamava
ಬಾಸಿಗದ ನೊಸಲಿನಲಿ ಮೆರೆವ ಮ ಹೀಶರೈವರು ಮಂಟಪದ ನೆಲ ವಾಸಿನಲಿ ಕುಳ್ಳಿರ್ದರನುಪಮ ರಾಜತೇಜದಲಿ ಆ ಸೊಸೆಯ ಸಂಗಾತ ಕುಂತಿ ವಿ ಲಾಸದಲಿ ಕುಳ್ಳಿರ್ದಳಾ ವಿ ನ್ಯಾಸವನು ಜನ ನೋಡುತಿರ್ದುದು ಬಿಗಿದ ಬೆರಗಿನಲಿ
bāsigada nosalinali mereva ma hīśaraivaru maṃṭapada nela vāsinali kuḷḷirdaranupama rājatējadali ā soseya saṃgāta kuṃti vi lāsadali kuḷḷirdaḷā vi nyāsavanu jana nōḍutirdudu bigida beraginali
ಜಲವನಂಜುಳಿಯಿಂದ ದ್ರುಪದನು ಸೆಳೆದು ಮೆರೆದವ ಬರಲಿ ಯಂತ್ರವ ಗೆಲಿದ ಗರುವನು ನಿಮ್ಮ ಪಂಚಕರೊಳಗೆಯೆನೆ ನಗುತ ಇಳಿದನವನಿಪ ಭೀಮನೊಯ್ಯನೆ ಸುಳಿದನರ್ಜುನ ಹಿಂದೆ ಯಮಳರು ನಳಿನವದನೆಯ ಹೊರೆಗೆ ಬಂದರು ಭೂಪ ಕೇಳೆಂದ
jalavanaṃjuḷiyiṃda drupadanu seḷedu meredava barali yaṃtrava gelida garuvanu nimma paṃcakaroḷageyene naguta iḷidanavanipa bhīmanoyyane suḷidanarjuna hiṃde yamaḷaru naḷinavadaneya horege baṃdaru bhūpa kēḷeṃda
ಬಿಸುಟನಂಜುಳಿಯುದಕವನು ನಿ ಪ್ಪಸರದಲಿ ಬೆರಗಾಗಿ ಭೂಪರ ಮುಸುಡನೆವೆಯಿಕ್ಕದೆ ನಿರೀಕ್ಷಿಸುತೆಂದನಾ ದ್ರುಪದ ಅಸುರರೋ ಸುರರೋ ಭುಜಂಗರೊ ವಸುಮತೀಶರೊ ನೀವು ದಿಟ ಮಾ ನಿಸರ ಪರುಠವವಲ್ಲ ನೀವಾರೆಂದು ಬೆಸಗೊಂಡ
bisuṭanaṃjuḷiyudakavanu ni ppasaradali beragāgi bhūpara musuḍaneveyikkade nirīkṣisuteṃdanā drupada asurarō surarō bhujaṃgaro vasumatīśaro nīvu diṭa mā nisara paruṭhavavalla nīvāreṃdu besagoṃḍa
ಈತನಗ್ಗದ ಭೀಮನರ್ಜುನ ನೀತನಿವರೈ ಯಮಳರೆಂಬವ ರೀತಗಳು ನಮ್ಮಿಂದ ಕಿರಿಯರು ನಾವು ಪಾಂಡವರು ಮಾತೆಯೆಮ್ಮೈವರಿಗೆ ಜಗ ವಿ ಖ್ಯಾತೆ ಕುಂತೀದೇವಿ ತಾನಿಂ ದೀ ತಳೋದರಿಯಾದಳೆಮ್ಮೈವರಿಗೆ ವಧುವೆಂದ
ītanaggada bhīmanarjuna nītanivarai yamaḷareṃbava rītagaḷu nammiṃda kiriyaru nāvu pāṃḍavaru māteyemmaivarige jaga vi khyāte kuṃtīdēvi tāniṃ dī taḷōdariyādaḷemmaivarige vadhuveṃda
ಕೊಂಡು ಹರಿದುದು ಹರುಷವಾ ಬ್ರ ಹ್ಮಾಂಡದಗ್ರಕೆ ಮಗಳಿಗೈವರು ಗಂಡರೆನೆ ಮಗುಳದ್ದು ದಾತನ ಮನ ರಸಾತಳಕೆ ಕಂಡು ಬಲ್ಲರೆ ಕಂಗಳಲಿ ಕಿವಿ ಕೊಂಡು ಕೇಳ್ದಿರೆ ಮುನ್ನ ನಮಗೀ ಭಂಡತನವನು ಮಾಡುವರೆ ನೀವೆಂದನಾದ್ರುಪದ
koṃḍu haridudu haruṣavā bra hmāṃḍadagrake magaḷigaivaru gaṃḍarene maguḷaddu dātana mana rasātaḷake kaṃḍu ballare kaṃgaḷali kivi koṃḍu kēḷdire munna namagī bhaṃḍatanavanu māḍuvare nīveṃdanādrupada
ಲೋಕಸಂಮತವಲ್ಲ ಶಾಸ್ತ್ರ ನೀಕದಭಿಮತವಲ್ಲ ಕಾಪಥ ವೇಕೆ ನಿಮಗಿದು ಪಾಂಡುಪುತ್ರರು ನೀವು ಧಾರ್ಮಿಕರು ಪ್ರಾಕೃತರೆ ನೀವಕಟ ನಿಮ್ಮ ವಿ ವೇಕವೇನಾಯ್ತಿಲ್ಲಿ ಇಹ ಪರ ಲೋಕಕಿದು ಸಾಧನವೆಯೆಂದನು ದ್ರುಪದ ಭೂಪಾಲ
lōkasaṃmatavalla śāstra nīkadabhimatavalla kāpatha vēke nimagidu pāṃḍuputraru nīvu dhārmikaru prākr̥tare nīvakaṭa nimma vi vēkavēnāytilli iha para lōkakidu sādhanaveyeṃdanu drupada bhūpāla
ಕಾಮ ಮೋಹಿತರಲ್ಲ ವಿಷಯ ಸ್ತೋಮ ಭಂಗಿತರಲ್ಲ ಧರ್ಮದ ಸೀಮೆಯೊಳಗಳ್ಳೆನಿತನವಮಾನಿಸುವರಾವಲ್ಲ ಈ ಮಹಾಸತಿಯೆಮಗೆ ಜನನಿಯ ನೇಮದಲಿ ವಧುವಾದಳಿಂದು ವಿ ರಾಮವೇಕೆ ವಿವೇಕಕೆಂದನು ಧರ್ಮಸುತ ನಗುತ
kāma mōhitaralla viṣaya stōma bhaṃgitaralla dharmada sīmeyoḷagaḷḷenitanavamānisuvarāvalla ī mahāsatiyemage jananiya nēmadali vadhuvādaḷiṃdu vi rāmavēke vivēkakeṃdanu dharmasuta naguta
ಏಕಪತಿ ಬಹುಸತಿಯರೆಂಬುದು ಲೋಕಪದ್ಧತಿ ಕಂಡೆವಾವಿಂ ದೇಕ ಪತ್ನಿಗೆ ಪುರುಷಪಂಚಕವನು ಮಹಾದೇವ ಲೋಕಶಾಸ್ತ್ರ ವಿರುದ್ಧವನು ಕಿವಿ ಯೋಕರಿಸುತಿವೆ ಕಣ್ಮನಕೆ ಸು ವ್ಯಾಕುಲತೆ ಹಿರಿದಾದುದೆಂದನು ದ್ರುಪದ ಭೂಪಾಲ
ēkapati bahusatiyareṃbudu lōkapaddhati kaṃḍevāviṃ dēka patnige puruṣapaṃcakavanu mahādēva lōkaśāstra viruddhavanu kivi yōkarisutive kaṇmanake su vyākulate hiridādudeṃdanu drupada bhūpāla
ಆ ಸಮಯದಲಿ ದೇವ ವೇದ ವ್ಯಾಸಮುನಿಯೈತಂದನಲ್ಲಿ ಮ ಹೀಶಸಭೆಯಿದಿರೆದ್ದು ಕಂಡುದು ಕಾಣಿಕೆಯ ನೀಡಿ ದೋಷಗರ್ಭಿತಧರ್ಮವನು ನಿ ಣೈಸಲರಿಯದ ಮೂಢಮತಿಗೆ ಮು ನೀಶ ಕೃಪೆ ಮಾಡೆಂದು ಮೈಯಿಕ್ಕಿದನು ಪಾಂಚಾಲ
ā samayadali dēva vēda vyāsamuniyaitaṃdanalli ma hīśasabheyidireddu kaṃḍudu kāṇikeya nīḍi dōṣagarbhitadharmavanu ni ṇaisalariyada mūḍhamatige mu nīśa kr̥pe māḍeṃdu maiyikkidanu pāṃcāla
ನೆಗಹಿದನು ದ್ರುಪದನನು ಯಮಜಾ ದಿಗಳನೆತ್ತಿದನೊಬ್ಬರೊಬ್ಬರ ತೆಗೆದು ತಕ್ಕೈಸಿದನು ಮುದದಲಿ ಪಾಂಡುನಂದನರ ದುಗುಡವೇಕೈ ದ್ರುಪದ ನಿನ್ನಯ ಮಗಳ ಸೌಭಾಗ್ಯದಲರುಂಧತಿ ಸೊಗಸಿ ರಂಜಿಸಲರಿಯಳೆಂದನು ಕೃಷ್ಣ ಮುನಿ ನಗುತ
negahidanu drupadananu yamajā digaḷanettidanobbarobbara tegedu takkaisidanu mudadali pāṃḍunaṃdanara duguḍavēkai drupada ninnaya magaḷa saubhāgyadalaruṃdhati sogasi raṃjisalariyaḷeṃdanu kr̥ṣṇa muni naguta
ಅಹುದಲೇ ಬಳಿಕೇನು ತಂಗಿಯ ಬಹಳ ಸುಕೃತೋದಯದಲರಗಿನ ಗೃಹದ ಗಂಟಲನೊದೆದು ಸುಳಿದರು ಪಾಂಡುನಂದನರು ಗಹನ ಯಂತ್ರವನೆಚ್ಚ ಪಾರ್ಥನ ಮಹಿಳೆಗೆನ್ನ ಕುಮಾರಿಗೀಗಲು ಬಹುಪತಿಗಳಾಯ್ತಿದನು ನೀವ್ ನಿರ್ಣೈಸಬೇಕೆಂದ
ahudalē baḷikēnu taṃgiya bahaḷa sukr̥tōdayadalaragina gr̥hada gaṃṭalanodedu suḷidaru pāṃḍunaṃdanaru gahana yaṃtravanecca pārthana mahiḷegenna kumārigīgalu bahupatigaḷāytidanu nīv nirṇaisabēkeṃda
ದ್ರುಪದ ಧೃಷ್ಟದ್ಯುಮ್ನ ಪಾಂಡವ ನೃಪರು ಕಾಶ್ಯಪಗೂಡಿ ಹೊಕ್ಕರು ವಿಪುಳತರ ಕಾರುಣ್ಯದಿಂದೇಕಾಂತ ಮಂದಿರವ ನೃಪತಿ ಸಂಶಯವೇಕೆ ನಾವಿದ ನಪಹರಿಸುವೆವು ಪಾಂಡುಪುತ್ರರ ನುಪಚರಿಸು ವೈವಾಹವನು ವಿಸ್ತರಿಸು ಸಾಕೆಂದ
drupada dhr̥ṣṭadyumna pāṃḍava nr̥paru kāśyapagūḍi hokkaru vipuḷatara kāruṇyadiṃdēkāṃta maṃdirava nr̥pati saṃśayavēke nāvida napaharisuvevu pāṃḍuputrara nupacarisu vaivāhavanu vistarisu sākeṃda
ವಿಧಿವಿಹಿತ ಲೋಕಾಪವಾದವ ನಧಿಕರಿಸಿ ವರ್ಣಾಶ್ರಮಕೆ ಸು ವ್ಯಧಿಕರಣ ಹುಗದಂತೆ ಸದ್ವ್ಯವಹಾರ ಮಾರ್ಗದಲಿ ವಿಧಿಸಿದರೆ ನಿಮ್ಮಂಘ್ರಿಗಳ ಸಂ ನಿಧಿಯಲೇ ಪಾಣಿಗ್ರಹಣವನು ವಿಧುಮುಖಿಗೆ ಮುದದಿಂದ ಮಾಡುವೆನೆಂದನಾ ದ್ರುಪದ
vidhivihita lōkāpavādava nadhikarisi varṇāśramake su vyadhikaraṇa hugadaṃte sadvyavahāra mārgadali vidhisidare nimmaṃghrigaḷa saṃ nidhiyalē pāṇigrahaṇavanu vidhumukhige mudadiṃda māḍuveneṃdanā drupada
ಧರಣಿಪತಿ ಕೆಳಿವರ ತಾಯ್ಮುಂ ದರಿಯದಾಡಿದಳಾ ನುಡಿಯನು ತ್ತರಿಸಬಾರದು ಧರ್ಮವಿದು ವರಮಾತೃಭಕ್ತರಿಗೆ ಗುರುವಚನದ ನಿಮಿತ್ತವರ ಪತಿ ಕರಿಸಿ ಚರಿಸಿದ ಪೂರ್ವ ಜನ್ಮದ ಸರಸಿಜಾಕ್ಷಿಯ ಕಥೆಯನರುಪುವೆನಿನ್ನು ಕೇಳೆಂದ
dharaṇipati keḷivara tāymuṃ dariyadāḍidaḷā nuḍiyanu ttarisabāradu dharmavidu varamātr̥bhaktarige guruvacanada nimittavara pati karisi carisida pūrva janmada sarasijākṣiya katheyanarupuveninnu kēḷeṃda
ಮುನ್ನ ನಾರಾಯಣಿಯೆನಿಪುದೀ ಕನ್ನಿಕೆಯ ಪೆಸರೊಬ್ಬ ಗುಣ ಸಂ ಪನ್ನ ಮುನಿಪನ ವಧು ಪತಿವ್ರತೆಯರಿಗೆ ಗುರುವೆನಿಸಿ ಉನ್ನತೋನ್ನತ ಭಕ್ತಿ ಭಯದಲಿ ತನ್ನ ಪತಿ ಪರದೈವವೆಂದು ವಿ ಪನ್ನನನು ಕೊಂಡಾಡುತಿರ್ದಳು ರಾಯ ಕೇಳೆಂದ
munna nārāyaṇiyenipudī kannikeya pesarobba guṇa saṃ panna munipana vadhu pativrateyarige guruvenisi unnatōnnata bhakti bhayadali tanna pati paradaivaveṃdu vi pannananu koṃḍāḍutirdaḷu rāya kēḷeṃda
ಆ ತಪೋ ನಿಧಿ ಕುಷ್ಠರೋಗ ಪ ರೀತ ಬೀಭತ್ಸೆಯಲಿ ಹುದುಗಿರ ಲೀತಳೋದರಿ ಭಜಿಸುತಿರ್ದಳು ಭಾವಶುದ್ಧಿಯಲಿ ಆತನೀಕೆಯ ಕೃತ್ಯದಲಿ ಭಾ ವಾತಿಶಯದಲಿ ಖೋಡಿಯನು ಹಿಡಿ ವಾತನಾಗಿರಲೊಂದು ದಿನವಿಂತಾಯ್ತು ಕೇಳೆಂದ
ā tapō nidhi kuṣṭharōga pa rīta bībhatseyali hudugira lītaḷōdari bhajisutirdaḷu bhāvaśuddhiyali ātanīkeya kr̥tyadali bhā vātiśayadali khōḍiyanu hiḍi vātanāgiraloṃdu dinaviṃtāytu kēḷeṃda
ಕೊಳೆತ ಬೆರಳನು ಭುಕ್ತ ಶೇಷದೊ ಳಿಳುಹಿದರೆ ಕಂಡೀಕೆ ಚಿತ್ತದೊ ಳಳುಕದುಪಭೋಗಿಸೆ ಮುನೀಶ್ವರನದಕೆ ಹರುಷದಲಿ ಎಲೆಗೆ ಮೆಚ್ಚಿದೆನಿನ್ನು ನೀ ಮನ ವೊಲಿದುದನು ಬೇಡೆನಲು ಬಳಿಕಾ ಲಲನೆ ನುಡಿದಳು ದಿವ್ಯರೂಪಿನೊಳೆನ್ನ ನೆರೆಯೆಂದು
koḷeta beraḷanu bhukta śēṣado ḷiḷuhidare kaṃḍīke cittado ḷaḷukadupabhōgise munīśvaranadake haruṣadali elege meccideninnu nī mana volidudanu bēḍenalu baḷikā lalane nuḍidaḷu divyarūpinoḷenna nereyeṃdu
ದ್ರುಪದ ಕೇಳಾ ಕುಷ್ಠ ದೇಹವ ನಪಹರಿಸಿ ಕಂದರ್ಪರೂಪಿನೊ ಳುಪಚರಿಸಿ ಕಾಮಿನಿಯನವನತಿ ಕಾಮಕೇಳಿಯಲಿ ತಪಸಿ ದಣಿದನು ತನ್ನ ಮುನ್ನಿನ ತಪವ ನೆನೆದನು ದಣಿಯದಿರೆಯಿ ಚಪಲಲೋಚನೆ ಸೆರಗ ಹಿಡಿದಳು ಹೋಗದಿರಿಯೆನುತ
drupada kēḷā kuṣṭha dēhava napaharisi kaṃdarparūpino ḷupacarisi kāminiyanavanati kāmakēḷiyali tapasi daṇidanu tanna munnina tapava nenedanu daṇiyadireyi capalalōcane seraga hiḍidaḷu hōgadiriyenuta
ದಿಟ್ಟ ಹೆಂಗುಸೆ ನೃಪರ ಬಸುರಲಿ ಹುಟ್ಟು ನೀ ಹೋಗೆಂದು ಶಾಪವ ಕೊಟ್ಟ ನೀಕೆಗೆ ಹಾಯ್ದ ನಾ ಮುನಿಪತಿ ತಪೋವನಕೆ ನಟ್ಟಡವಿಯಲಿ ನಳಿನಮುಖಿ ಕಂ ಗೆಟ್ಟು ಭಜಿಸಿದಳಖಿಳದುರಿತಘ ರಟ್ಟನನು ದಿವಿಜೇಂದ್ರವಂದ್ಯನನಿಂದು ಶೇಖರನ
diṭṭa heṃguse nr̥para basurali huṭṭu nī hōgeṃdu śāpava koṭṭa nīkege hāyda nā munipati tapōvanake naṭṭaḍaviyali naḷinamukhi kaṃ geṭṭu bhajisidaḷakhiḷaduritagha raṭṭananu divijēṃdravaṃdyananiṃdu śēkharana
ಹಲವು ಕಾಲದಿ ತಪದೊಳಕಟಾ ಬಳಲಿದಳಲಾ ಮುನಿಯ ವಧುವೆಂ ದಿಳಿದನೀಶ್ವರನಾ ತಪೋವನಕಾಕೆಯೆದುರಿನಲಿ ಸುಳಿಯೆ ಕಂದೆರೆದಬಲೆ ಕಂಡಳು ಸುಲಭನನು ಭಕ್ತರಿಗೆ ತರ್ಕಾ ವಳಿಗೆ ದುರ್ಲಭನನು ದುರಾಸದ ಮಹಿಮ ಧೂರ್ಜಟಿಯ
halavu kāladi tapadoḷakaṭā baḷalidaḷalā muniya vadhuveṃ diḷidanīśvaranā tapōvanakākeyedurinali suḷiye kaṃderedabale kaṃḍaḷu sulabhananu bhaktarige tarkā vaḷige durlabhananu durāsada mahima dhūrjaṭiya
ತರುಣಿ ಮೈಯಿಕ್ಕಿದಳು ಕರದಲಿ ಶಿರವ ನೆಗಹಿದಳಬುಜಲೋಚನೆ ವರವ ಕೊಟ್ಟೆನು ಬೇಡಿಕೊಳ್ಳೆನೆ ತರುಣಿ ತಲೆವಾಗಿ ಹರಪತಿಂದೇಹಿ ಪ್ರಭೋ ಶಂ ಕರ ಪತಿಂ ದೇಹಿ ಪ್ರಭೋ ಯೆಂ ದರಸಿ ಬೇಡಿದಳೈದು ಬಾರಿ ಮಹೇಶನಲಿ ವರವ
taruṇi maiyikkidaḷu karadali śirava negahidaḷabujalōcane varava koṭṭenu bēḍikoḷḷene taruṇi talevāgi harapatiṃdēhi prabhō śaṃ kara patiṃ dēhi prabhō yeṃ darasi bēḍidaḷaidu bāri mahēśanali varava
ಆದಡೈವರು ಪತಿಗಳಹರುತ ಳೋದರಿಯೆ ನಿನಗೆನಲು ಬೆಚ್ಚಿದ ಳೀ ದುರಿತ ತನಗೇಕೆನುತ ಸತಿ ಮುಚ್ಚಿದಳು ಕಿವಿಯ ಆದಡಂಜದಿರಂಜದಿರು ವರ ವೇದಬಾಹಿರವಲ್ಲ ಸತಿಯರೊ ಳಾದಿ ಪಾತಿವ್ರತ್ಯ ನಿನಗೆಂದನು ಮಖಧ್ವಂಸಿ
ādaḍaivaru patigaḷaharuta ḷōdariye ninagenalu beccida ḷī durita tanagēkenuta sati muccidaḷu kiviya ādaḍaṃjadiraṃjadiru vara vēdabāhiravalla satiyaro ḷādi pātivratya ninageṃdanu makhadhvaṃsi
ಶ್ರುತಿಗಳೆಂಬುದೆಯೆಮ್ಮ ನುಡಿ ಸಂ ಸೃತಿಗಳೆಮ್ಮಯ ಚೇಷ್ಟೆ ಧರ್ಮದ ಗತಿ ವಿಚಾರಿಸಲೆಮ್ಮ ನೇಮವು ವಿಹಿತ ವಿಧಿಯೆಂದು ಕ್ರತುಗಳೀ ಮನ್ವಾದಿಗಳು ಸುರ ತತಿಗಳಬುಜಭವಾದಿ ದೇವ ಪ್ರತತಿಯೆನ್ನಾಜ್ಞೆಯೊಳಗೆಂದಾ ಸತಿಗೆ ಶಿವ ನುಡಿದ
śrutigaḷeṃbudeyemma nuḍi saṃ sr̥tigaḷemmaya cēṣṭe dharmada gati vicārisalemma nēmavu vihita vidhiyeṃdu kratugaḷī manvādigaḷu sura tatigaḷabujabhavādi dēva pratatiyennājñeyoḷageṃdā satige śiva nuḍida
ನಿನ್ನ ಕಥನವೆ ಪುಣ್ಯ ಕಥನವು ನಿನ್ನ ಚರಿತವೆ ಪುಣ್ಯ ಚರಿತವು ನಿನ್ನ ನೆನೆದಂಗನೆಗೆ ಬಹುದು ಪತಿವ್ರತಾಭಾವ ಎನ್ನನುಜ್ಞೆಗೆ ಧರ್ಮಚಿಂತಾ ಪನ್ನೆಯಾಗದಿರೆಂದು ಕೃಪೆಯಲಿ ತನ್ನ ಸಿರಿ ಕರತಳವನಿರಿಸಿದನುತ್ತ ಮಾಂಗದಲಿ
ninna kathanave puṇya kathanavu ninna caritave puṇya caritavu ninna nenedaṃganege bahudu pativratābhāva ennanujñege dharmaciṃtā panneyāgadireṃdu kr̥peyali tanna siri karataḷavanirisidanutta māṃgadali
ಹರನ ನುಡಿಯೇ ವೇದ ಹರನಾ ಚರಣೆಯೇ ಸನ್ಮಾರ್ಗ ಹರ ಪತಿ ಕರಿಸಿ ನುಡಿದುದೆ ಪರಮ ಪಾವನ ಧರ್ಮ ತತ್ವವದು ಬರಹ ಸಹಿತಾ ವಿಧಿಯನೊರಸಲು ಹರ ಸಮರ್ಥನು ಹರನ ಬರಹವ ನೊರಸಲಾಪರ ತೋರಿಸಾ ಬ್ರಹ್ಮಾದಿ ದೇವರಲಿ
harana nuḍiyē vēda haranā caraṇeyē sanmārga hara pati karisi nuḍidude parama pāvana dharma tatvavadu baraha sahitā vidhiyanorasalu hara samarthanu harana barahava norasalāpara tōrisā brahmādi dēvarali
ಅದರಿನೈವರಿಗೇಕೆ ವಧುವೆಂ ಬುದು ಮಹೇಶ್ವರನಾಜ್ಜ್ಞೇನೀನಿಂ ದಿದಕೆ ಚಿಂತಿಸಬೇಡ ಬಳಿಕಾ ಪಾಂಡುನಂದನರ ಹದನನರುಹುವೆ ಕೇಳು ನೃಪ ಪೂ ರ್ವದಲಿ ಸುರಪತಿ ಶಂಕರನ ಶಾ ಪದಲಿ ನವೆದನು ಹಲವು ಯುಗ ಕೈಲಾಸ ಕುಹರದಲಿ
adarinaivarigēke vadhuveṃ budu mahēśvaranājjñēnīniṃ didake ciṃtisabēḍa baḷikā pāṃḍunaṃdanara hadananaruhuve kēḷu nr̥pa pū rvadali surapati śaṃkarana śā padali navedanu halavu yuga kailāsa kuharadali
ಬಳಿಕಲಿಂದ್ರನು ಮರವೆಯಲಿ ಕಳ ವಳಿಸಲಾತಂಗೀತನಂದದಿ ಹಲವು ಯುಗ ಸೆರೆಯಾಯ್ತು ರಜತಾಚಲದ ಕುಹರದಲಿ ಬಿಲದಲೀ ಪರಿಯೈವರಿಂದ್ರರು ಸಿಲುಕಿದರು ಶಂಕರನ ಖತಿಯಲಿ ಬಳಿಕ ಬಿಡುಗಡೆಯಾಯ್ತು ಕಾತ್ಯಾಯನಿಯ ದೆಸೆಯಿಂದ
baḷikaliṃdranu maraveyali kaḷa vaḷisalātaṃgītanaṃdadi halavu yuga sereyāytu rajatācalada kuharadali biladalī pariyaivariṃdraru silukidaru śaṃkarana khatiyali baḷika biḍugaḍeyāytu kātyāyaniya deseyiṃda
ಎನಿಸುವುದು ನೀವೈವರಿಂದ್ರರು ಮನುಜಲೋಕದೊಳರಸು ಕುಲದಲಿ ವನಿತೆ ನಿಮ್ವೈರಿಗೆಯಹಳೊಬ್ಬಳೆ ನಿಧಾನವಿದು ಎನಲು ನಡುಗಿದರಕಟ ಮೊದಲಲಿ ಮನುಜ ಜನ್ಮವೆ ಕಷ್ಟವದರೊಳು ವನಿತೆಯೊಡಹುಟ್ಟಿದರಿಗೊಬ್ಬಳೆ ಶಿವಶಿವಾಯೆಂದ
enisuvudu nīvaivariṃdraru manujalōkadoḷarasu kuladali vanite nimvairigeyahaḷobbaḷe nidhānavidu enalu naḍugidarakaṭa modalali manuja janmave kaṣṭavadaroḷu vaniteyoḍahuṭṭidarigobbaḷe śivaśivāyeṃda
ಹರಹರ ತ್ರಾಯಸ್ವ ಕರುಣಾ ಕರ ಮಹಾದೇವೀ ದುರಂತದ ನರಕಭಾಜನಮುಚಿತವೇ ನಿಮ್ಮಂಘ್ರಿದರ್ಶನಕೆ ಕರುಣಿಸೈ ಮತ್ತೊಂದು ಪರಿಯಲಿ ವರವನೆನೆ ನಸುನಗುತ ಗೌರೀ ವರನು ತಿಳುಹಿದನೈವರಿಂದ್ರರಿಗರಸ ಕೇಳೆಂದ
harahara trāyasva karuṇā kara mahādēvī duraṃtada narakabhājanamucitavē nimmaṃghridarśanake karuṇisai mattoṃdu pariyali varavanene nasunaguta gaurī varanu tiḷuhidanaivariṃdrarigarasa kēḷeṃda
ಖೇಡತನವೇಕೆಳ್ಳನಿತು ಖಯ ಖೋಡಿಯಿದರೊಳಗಿಲ್ಲ ಮುನಿವಧು ಬೇಡಿದಳು ಪೂರ್ವದಲಿ ವರವನು ಪಂಚವಾಕ್ಯದಲಿ ಜೋಡೆನಿಸಿದಳು ನಾರಿ ಧರ್ಮಕೆ ಕೇಡುಬಾರದು ನಿಮ್ಮ ನೆರೆ ಕೆ ಟ್ಟಾಡಿದರ ಬಾಯ್ ಹುಳುವುದೆಂದನು ಬಾಲಶಶಿಮೌಳಿ
khēḍatanavēkeḷḷanitu khaya khōḍiyidaroḷagilla munivadhu bēḍidaḷu pūrvadali varavanu paṃcavākyadali jōḍenisidaḷu nāri dharmake kēḍubāradu nimma nere ke ṭṭāḍidara bāy huḷuvudeṃdanu bālaśaśimauḷi
ಎನೆ ಹಸಾದದಲಿಂದುಶೇಖರ ನನು ಸುರೇಂದ್ರರು ಬೀಳುಕೊಂಡರು ಜನಿಸಿದರು ಬಳಿಕಿವರು ಮಹಿಯಲಿ ಮರ್ತ್ಯರೂಪಾಗಿ ನಿನಗೆ ಮಗಳೀವನಿತೆ ಕುಂತಿಯ ತನುಜರಿವರಳಿಯಂದಿರೇ ನೀ ನೆನಿತು ಧನ್ಯನೊ ಶಿವಯೆನುತ ತಲೆದೂಗಿದನು ಮುನಿಪ
ene hasādadaliṃduśēkhara nanu surēṃdraru bīḷukoṃḍaru janisidaru baḷikivaru mahiyali martyarūpāgi ninage magaḷīvanite kuṃtiya tanujarivaraḷiyaṃdirē nī nenitu dhanyano śivayenuta taledūgidanu munipa
ಎಲೆ ಮರುಳೆ ಪೂರ್ವದಲಿ ತಾವ್ ತ ಮ್ಮೊಳಗೆಯೈವರು ಜನಿಸೆ ನಿನ್ನೀ ನಳಿನಮುಖಿಗಿವರೆಲ್ಲ ವರಗಳು ಪಾಂಡುನಂದನರು ತಿಳಿಯದಿರೆ ನೋಡಾದೊಡೆನುತ ಗ್ಗಳೆಯ ಮುನಿಪತಿ ದಿವ್ಯದೃಷ್ಟಿಯ ಸಲಿಸಿದಡೆ ನೋಡಿದನು ದ್ರುಪದನು ಪಾಂಡುನಂದನರ
ele maruḷe pūrvadali tāv ta mmoḷageyaivaru janise ninnī naḷinamukhigivarella varagaḷu pāṃḍunaṃdanaru tiḷiyadire nōḍādoḍenuta ggaḷeya munipati divyadr̥ṣṭiya salisidaḍe nōḍidanu drupadanu pāṃḍunaṃdanara
ಮೆರೆವ ದೇಹಪ್ರಭೆಗಳಲಿ ಮಿರು ಮಿರುಪ ದಿವ್ಯಾಭರಣ ಕಿರಣದ ತುರುಗಿನಲಿ ತನಿ ಹೊಳೆವ ದಿವ್ಯಾಂಬರದ ಕಾಂತಿಯಲಿ ಅರಿವಡಾಯ್ತೆಲ್ಲವಯವದ ಕಂ ದರೆವ ತೇಜಃಪುಂಜ ರಸಮಯ ದೆರಕವೆನಲಿವರೈವರೊಪ್ಪಿದರಿಂದ್ರ ತೇಜದಲಿ
mereva dēhaprabhegaḷali miru mirupa divyābharaṇa kiraṇada turuginali tani hoḷeva divyāṃbarada kāṃtiyali arivaḍāytellavayavada kaṃ dareva tējaḥpuṃja rasamaya derakavenalivaraivaroppidariṃdra tējadali
ಮನದ ಝೊಮ್ಮಿನ ಝಡಿವ ರೋಮಾಂ ಚನದ ಹುದುಗುವ ಹೊದರುಗಂಗಳ ಜಿನುಗುವಾತಿನ ಹೂತ ಹರುಷದ ಹೊಂಗಿದುತ್ಸವದ ಕೊನರೊ ಬೆವರಿನ ಕಳಿದ ಚಿಂತೆಯ ಮನದ ಭಾವದ ರಾಗರಸದು ಬ್ಬಿನಲಿ ಹೊಂಪುಳಿ ಹೋದನವರನು ಕಂಡು ಪಾಂಚಾಲ
manada jhommina jhaḍiva rōmāṃ canada huduguva hodarugaṃgaḷa jinuguvātina hūta haruṣada hoṃgidutsavada konaro bevarina kaḷida ciṃteya manada bhāvada rāgarasadu bbinali hoṃpuḷi hōdanavaranu kaṃḍu pāṃcāla
ಅರಸ ಕಂಡೈ ನರಪತಿಗಳೊ ಸುರಪತಿಗಳೋ ಮನದ ಸಂಶಯಲ ಹರಿದುದೇ ಹಳಿವಿಲ್ಲಲೇ ಲೇಸಾಗಿ ನೋಡೆನಲು ಪರಮಋಷಿ ನೀ ಪುಣ್ಯದಲಿ ಗೋಚ ಚರಿಸಿದೈ ನಿಮ್ಮಡಿಯ ನೇಮವ ಶಿರದೊಳಾಂತೆನು ಧನ್ಯ ತಾನೆಂದರಸ ಕೈ ಮುಗಿದ
arasa kaṃḍai narapatigaḷo surapatigaḷō manada saṃśayala haridudē haḷivillalē lēsāgi nōḍenalu paramar̥ṣi nī puṇyadali gōca carisidai nimmaḍiya nēmava śiradoḷāṃtenu dhanya tāneṃdarasa kai mugida
ನಂಬಿದೈ ಲೇಸಾಗಿ ಲಗ್ನ ವಿ ಲಂಬವಾಗದೆ ಧಾರೆಯೆರೆ ಕಲ ಶಾಂಬುವಿದೆ ನೀ ಹೋಗು ಕಾಶ್ಯಪ ಹೋಮ ಸಾಧನವ ತುಂಬು ವಹಿಲದಲವನಿಯಮರ ಕ ದಂಬ ನೆರೆಯಲಿಯೆನಲು ದ್ರುಪದನ ಹೊಂಬೆಳೆಯ ತನಿ ಹರುಷ ಹೊಡೆದೋರಿದುದು ಪುಳಕದಲಿ
naṃbidai lēsāgi lagna vi laṃbavāgade dhāreyere kala śāṃbuvide nī hōgu kāśyapa hōma sādhanava tuṃbu vahiladalavaniyamara ka daṃba nereyaliyenalu drupadana hoṃbeḷeya tani haruṣa hoḍedōridudu puḷakadali
ಸಾರಿದರು ಮೆಟ್ಟಕ್ಕಿಗಳ ಗುಡ ಜೀರಿಗೆಗಳೊದಗಿದವು ಲಗ್ನ ವಿ ಹಾರದಾಶೀರ್ವಾದದಾಯತರವದ ರಭಸದಲಿ ಧಾರೆಯೆರೆದನು ದ್ರುಪದ ಪಾಂಡು ಕು ಮಾರರಿಗೆ ನಿಜಸುತೆಯನತಿ ವಿ ಸ್ತಾರಿಸಿತು ವೈವಾಹರಚನೆ ವಿಶಾಲವಿಭವದಲಿ
sāridaru meṭṭakkigaḷa guḍa jīrigegaḷodagidavu lagna vi hāradāśīrvādadāyataravada rabhasadali dhāreyeredanu drupada pāṃḍu ku mārarige nijasuteyanati vi stārisitu vaivāharacane viśālavibhavadali
ಹೋಮ ಸಮನಂತರದಲಖಿಳ ಧ ರಾಮರರ ಪೂಜೆಯಲಿ ಭೂಸ್ತೋಮ ತುಷ್ಟಿಯ ಮಾಡಿದುದು ಸನ್ಮಾನ ದಾನದಲಿ ಆ ಮುನೀಂದ್ರಂಗೆರಗಿದರು ನೃಪ ರೀ ಮಹಾಸತಿಸಹಿತ ವಿಮಲ ಪ್ರೇಮದಲಿ ಮೈ ಮುಳುಗಿ ತೆಗೆದಪ್ಪಿದನು ಪಾಂಡವರ
hōma samanaṃtaradalakhiḷa dha rāmarara pūjeyali bhūstōma tuṣṭiya māḍidudu sanmāna dānadali ā munīṃdraṃgeragidaru nr̥pa rī mahāsatisahita vimala prēmadali mai muḷugi tegedappidanu pāṃḍavara
ಪರಮ ವೈಭವದಲಿ ಚತುರ್ಥಿಯ ಮರುದಿವಸದೋಕುಳಿಯ ಪುರಜನ ಪರಿಜನದ ಸುಮ್ಮಾನ ಶರಧಿಯ ಸಾರ ಸಂಪದವ ವರ ಮುನಿಪನೀಕ್ಷಿಸಿದನನಿಬರ ಹರಸಿ ನಯನೀತಿಗಳ ಹೇಳಿದು ಮರಳಿ ಬಿಜಯಂಗೈದು ಹೊಕ್ಕನು ಬದರಿಕಾಶ್ರಮವ
parama vaibhavadali caturthiya marudivasadōkuḷiya purajana parijanada summāna śaradhiya sāra saṃpadava vara munipanīkṣisidananibara harasi nayanītigaḷa hēḷidu maraḷi bijayaṃgaidu hokkanu badarikāśramava
Keys: ← → turn the page, J K step through the verses.
Illustration: Verse & Place (Project-owned).