Skip to content

ಗದಾ ಪರ್ವ — ಸಂಧಿ ೧೧ · ಗದಾ ಪರ್ವ — ಸಂಧಿ ೧೧

Gada Parva · Sandhi 11

gadā parva — saṃdhi 11

The complete gada parva · sandhi 11 in Kannada.

73 passagesKannada with transliteration

An original emblem for Gada Parva.

Invocation

10.11.opening

ರಾಯನಯ್ಯನ ತಿಳುಹಿದನು ದ್ವೈ ಪಾಯನನು ಸಾಮದಲಿ ಕಮಳದ ಳಾಯತಾಕ್ಷಿಯು ಶಾಪವಿತ್ತಳು ಮುಳಿದು ಗಾಂಧಾರಿ

rāyanayyana tiḷuhidanu dvai pāyananu sāmadali kamaḷada ḷāyatākṣiyu śāpavittaḷu muḷidu gāṃdhāri

ಕೇಳು ಜನಮೇಜಯ ಧರಿತ್ರೀ ಪಾಲ ಕುರುಪತಿ ವಿಳಯವಾರ್ತಾ ವ್ಯಾಳವಿಷ ವೇಢೈಸಿದುದು ಗಜಪುರದ ಜನಮನವ ಹೂಳಿದುಬ್ಬಿನ ಹುದಿದ ಮೋನದ ಸೂಳುಚಿಂತೆಯ ಬಲಿದ ಭೀತಿಯ ಮೇಲು ದುಗುಡದ ದಡಿಯ ವದನದಲಿದ್ದುದಖಿಳಜನ

kēḷu janamējaya dharitrī pāla kurupati viḷayavārtā vyāḷaviṣa vēḍhaisidudu gajapurada janamanava hūḷidubbina hudida mōnada sūḷuciṃteya balida bhītiya mēlu duguḍada daḍiya vadanadaliddudakhiḷajana

Report an error

ಆ ಸಮಯದಲಿ ದೇವ ವೇದ ವ್ಯಾಸಮುನಿ ಬಂದನು ಗತಾಕ್ಷಮ ಹೀಶನನು ಚರಣದಲಿ ಹೊರಳಿದಡೆತ್ತಿದನು ಹಿಡಿದು ಆ ಸತಿಯ ಕರಸಿದನು ರಾಣೀ ವಾಸವೆಲ್ಲವ ಬರಿಸಿ ಧರ್ಮವಿ ಲಾಸವನು ವಿಸ್ತರಿಸಿದನು ವೈದಿಕವಿಧಾನದಲಿ

ā samayadali dēva vēda vyāsamuni baṃdanu gatākṣama hīśananu caraṇadali horaḷidaḍettidanu hiḍidu ā satiya karasidanu rāṇī vāsavellava barisi dharmavi lāsavanu vistarisidanu vaidikavidhānadali

Report an error

ನಿನ್ನ ಸುತನುದ್ದಂಡತನದಲಿ ನಿನ್ನ ತಮ್ಮನ ತನುಜರನು ಪರಿ ಖಿನ್ನರನು ಮಾಡಿದನು ಕಪಟದ್ಯೂತಕೇಳಿಯಲಿ ನಿನ್ನ ಮತ ವಿದುರೋಕ್ತಿಗಳ ಮೇಣ್ ಮನ್ನಿಸಿದನೇ ಜಗವರಿಯೆ ಸಂ ಪನ್ನಶಠನಹನೈ ಸುಯೋಧನನೆಂದನಾ ಮುನಿಪ

ninna sutanuddaṃḍatanadali ninna tammana tanujaranu pari khinnaranu māḍidanu kapaṭadyūtakēḷiyali ninna mata vidurōktigaḷa mēṇ mannisidanē jagavariye saṃ pannaśaṭhanahanai suyōdhananeṃdanā munipa

Report an error

ಸೈರಿಸಿದರೇ ಪಾಂಡುಸುತರಂ ಭೋರುಹಾಕ್ಷಿ ರಜಸ್ವಲೆಯ ಸುಲಿ ಸೀರೆಯಲಿ ತತ್ಪೂರ್ವಕೃತ ಜತುಗೇಹದಾಹದಲಿ ವೈರಬಂಧದ ವಿವಿಧ ವಿಷಮ ವಿ ಕಾರದಲಿ ವಿಗ್ರಹಮುಖವ ವಿ ಸ್ತಾರಿಸಿದರೇ ಪಾಂಡುಸುತರುತ್ತಮರೆ ಹೇಳೆಂದ

sairisidarē pāṃḍusutaraṃ bhōruhākṣi rajasvaleya suli sīreyali tatpūrvakr̥ta jatugēhadāhadali vairabaṃdhada vividha viṣama vi kāradali vigrahamukhava vi stārisidarē pāṃḍusutaruttamare hēḷeṃda

Report an error

ಅವರು ಸುಚರಿತರೆಂದಲೇ ಮಾ ಧವನು ನೆರೆ ಮರುಳಾದನವರಿಗೆ ಶಿವನು ಮೆಚ್ಚಿದು ಶರವನಿತ್ತನು ನರನ ಪತಿಕರಿಸಿ ಭುವನವೆರಡಾದಲ್ಲಿ ಸಾಧುಗ ಳವರ ದೆಸೆ ದುಸ್ಸಾಧುಗಳು ನಿ ನ್ನವರ ದೆಸೆಯಾಯ್ತರ್ಜುನನ ಸೂತಜನ ಸಮರದಲಿ

avaru sucaritareṃdalē mā dhavanu nere maruḷādanavarige śivanu meccidu śaravanittanu narana patikarisi bhuvanaveraḍādalli sādhuga ḷavara dese dussādhugaḷu ni nnavara deseyāytarjunana sūtajana samaradali

Report an error

ಅಹುದು ನಿಮ್ಮ ಯುಧಿಷ್ಠಿರನು ಗುಣಿ ಯಹನು ಭೀಮಾರ್ಜುನರು ಬಲ್ಲಿದ ರಹರು ಕೃಷ್ಣನ ಕೂರ್ಮೆಯಲ್ಲಿ ಕಪರ್ದಿಯೊಲವಿನಲಿ ಕುಹಕಿಯೆನ್ನವನವನೊಳಗೆ ನಿ ಸ್ಪೃಹರು ವಿದುರಪ್ರಮುಖ ಸುಜನರು ವಿಹಿತವೆನಗಿನ್ನಾವುದದ ನೀವ್ ಬೆಸಸಿ ಸಾಕೆಂದ

ahudu nimma yudhiṣṭhiranu guṇi yahanu bhīmārjunaru ballida raharu kr̥ṣṇana kūrmeyalli kapardiyolavinali kuhakiyennavanavanoḷage ni spr̥haru vidurapramukha sujanaru vihitavenaginnāvudada nīv besasi sākeṃda

Report an error

ಧರ್ಮವೆಲ್ಲಿಹುದಲ್ಲಿ ಜಯ ಸ ತ್ಕರ್ಮವೆಲ್ಲಿಹುದಲ್ಲಿ ಸಿರಿ ಸ ದ್ಧರ್ಮಸಂರಕ್ಷಕರು ಹರಿ ಧೂರ್ಜಟಿ ಪಿತಾಮಹರು ಧರ್ಮದೂರನು ನಿನ್ನವನು ಸ ತ್ಕರ್ಮಬಾಹಿರನಾತ್ಮರಚಿತ ವಿ ಕರ್ಮದೋಷದಲಳಿದನಿನ್ನೇನೆಂದನಾ ಮುನಿಪ

dharmavellihudalli jaya sa tkarmavellihudalli siri sa ddharmasaṃrakṣakaru hari dhūrjaṭi pitāmaharu dharmadūranu ninnavanu sa tkarmabāhiranātmaracita vi karmadōṣadalaḷidaninnēneṃdanā munipa

Report an error

ಎನಲು ಬಿದ್ದನು ನೆಲಕೆ ಸಿಂಹಾ ಸನದಿನಾ ಮುನಿವಚನಶರ ಮರು ಮೊನೆಗೆ ಬಂದುದು ಬಹಳ ಮೂರ್ಛಾಪಾರವಶ್ಯದಲಿ ಜನಪನಿರೆ ಗಾಂಧಾರಿ ನೃಪ ಮಾ ನಿನಿಯರೊರಲಿತು ರಾಜಗೃಹ ರೋ ದನ ಮಹಾಧ್ವನಿ ಮೀರಿ ಮೊಗೆದುದು ಹಸ್ತಿನಾಪುರವ

enalu biddanu nelake siṃhā sanadinā munivacanaśara maru monege baṃdudu bahaḷa mūrchāpāravaśyadali janapanire gāṃdhāri nr̥pa mā niniyaroralitu rājagr̥ha rō dana mahādhvani mīri mogedudu hastināpurava

Report an error

ಆರು ಸಂತೈಸುವರು ಲೋಚನ ವಾರಿ ಹೊನಲಾಯ್ತರಮನೆಯ ನೃಪ ನಾರಿಯರ ಬಹಳ ಪ್ರಳಾಪವ್ಯಥೆಯ ಬೇಳುವೆಗೆ ಆರು ಮರುಗರು ಶೋಕಪನ್ನಗ ಘೋರವಿಷ ಮುನಿವರನ ಹೃದಯವ ಗೋರಿತೇನೆಂಬೆನು ಲತಾಂಗಿಯರಳಲ ಕಳವಳವ

āru saṃtaisuvaru lōcana vāri honalāytaramaneya nr̥pa nāriyara bahaḷa praḷāpavyatheya bēḷuvege āru marugaru śōkapannaga ghōraviṣa munivarana hr̥dayava gōritēneṃbenu latāṃgiyaraḷala kaḷavaḷava

Report an error

ಎತ್ತಿದರು ಧರಣಿಪನ ಕಂಗಳೊ ಳೊತ್ತಿದರು ಪನ್ನೀರನುಸುರಿನ ತತ್ತಳವನಾರೈದರೊಯ್ಯನೆ ತಾಳವೃಂತದಲಿ ಬಿತ್ತಿ ತಂಗಾಳಿಯನು ಶೋಕದ ಹತ್ತುಗೆಗೆ ಹೊರೆದೆಗೆದು ಮರವೆಯ ಚಿತ್ತವನು ಚೇತರಿಸಿ ಮೆಲ್ಲನೆ ನುಡಿಸಿದನು ಮುನಿಪ

ettidaru dharaṇipana kaṃgaḷo ḷottidaru pannīranusurina tattaḷavanāraidaroyyane tāḷavr̥ṃtadali bitti taṃgāḷiyanu śōkada hattugege horedegedu maraveya cittavanu cētarisi mellane nuḍisidanu munipa

Report an error

ಏನನೆಂದೆವು ಹಿಂದೆ ಧರ್ಮ ನಿ ಧಾನವನು ಕಯ್ಯೊಡನೆ ಮರೆದೆಯಿ ದೇನು ನಿನ್ನಯ ಮತಿಯ ವಿಭ್ರಮೆ ನಮ್ಮ ಹೇಳಿಕೆಗೆ ಭಾನುಮತಿಯನು ತಿಳುಹು ನಿನ್ನಯ ಮಾನಿನಿಯ ಸಂತೈಸು ಸಂಸಾ ರಾನುಗತಿ ತಾನಿದು ಚತುರ್ದಶ ಜಗದ ಜೀವರಿಗೆ

ēnaneṃdevu hiṃde dharma ni dhānavanu kayyoḍane maredeyi dēnu ninnaya matiya vibhrame namma hēḷikege bhānumatiyanu tiḷuhu ninnaya māniniya saṃtaisu saṃsā rānugati tānidu caturdaśa jagada jīvarige

Report an error

ಬಹ ವಿಪತ್ತಿನ ಶರಕೆ ಜೋಡೆಂ ದಿಹುದಲಾ ಸುವಿವೇಕಗತಿ ನಿ ರ್ದಹಿಸದೇ ಶೋಕಾಗ್ನಿ ಧರ್ಮದ್ರುಮದ ಬೇರುಗಳ ಅಹಿತರೇ ಜನಿಸಿದಡೆ ಸುತರೆನ ಬಹುದೆ ದರ‍್ಯೋಧನನು ಹಗೆ ನಿನ ಗಿಹಪರದ ಸುಖಗತಿಗೆ ಸಾಧನ ಧರ್ಮಸುತನೆಂದ

baha vipattina śarake jōḍeṃ dihudalā suvivēkagati ni rdahisadē śōkāgni dharmadrumada bērugaḷa ahitarē janisidaḍe sutarena bahude daryōdhananu hage nina gihaparada sukhagatige sādhana dharmasutaneṃda

Report an error

ಕೇಳು ಮುನಿಭಾಷಿತವ ನೃಪ ನೀ ನಾಲಿಸುವುದಾತ್ಮಜರನಿಲ್ಲಿಂ ಮೇಲೆ ಸಲಿಲಾಂಜಲಿಗಳನು ವೈದಿಕವಿಧಾನದಲಿ ಪಾಲಿಸುವುದಾ ಪಾಂಡುಸುತರ ಸ ಮೇಳದಲಿ ಸೇರುವುದು ಚಿತ್ತಕೆ ತಾಳದಿರು ರಾಜಸ ವಿಕಾರವನೆಂದನಾ ವಿದುರ

kēḷu munibhāṣitava nr̥pa nī nālisuvudātmajaranilliṃ mēle salilāṃjaligaḷanu vaidikavidhānadali pālisuvudā pāṃḍusutara sa mēḷadali sēruvudu cittake tāḷadiru rājasa vikāravaneṃdanā vidura

Report an error

ತಾಯೆ ಹದುಳಿಸು ದೇವಲೋಕದ ಲಾಯದಲಿ ಸಲಿಸಾ ಕುಮಾರರ ನಾಯುಷದ ಲಿಪಿ ಹಣೆಯಲೊರಸಿದಡಾರ ವಶವಿದಕೆ ರಾಯನಲಿ ಸೊಸೆಯರಿಗೆ ಮಿಕ್ಕಬು ಜಾಯತಾಕ್ಷಿಯರಿಗೆ ವಿಶೋಕದ ಬಾಯಿನವ ಕೊಡಿಸೆಂದನಾ ಮುನಿ ಸುಬಲನಂದನೆಗೆ

tāye haduḷisu dēvalōkada lāyadali salisā kumārara nāyuṣada lipi haṇeyalorasidaḍāra vaśavidake rāyanali soseyarige mikkabu jāyatākṣiyarige viśōkada bāyinava koḍiseṃdanā muni subalanaṃdanege

Report an error

ಧರಣಿಪತಿ ಹೊರವಂಟನಂತಃ ಪುರವ ಬಿಸುಟರು ಭಾನುಮತಿ ಸಹಿ ತರಸಿಯರು ಹೊರವಂಟರೇಕಾಂಬರದ ಬಿಡುಮುಡಿಯ ಕರದ ಬಸುರಿನ ಹೊಯ್ಲ ಕಜ್ಜಳ ಪರಿಲುಳಿತ ನಯನಾಂಬುಗಳ ಕಾ ತರಿಪ ಕಮಲಾಕ್ಷಿಯರು ನೆರೆದುದು ಲಕ್ಕ ಸಂಖ್ಯೆಯಲಿ

dharaṇipati horavaṃṭanaṃtaḥ purava bisuṭaru bhānumati sahi tarasiyaru horavaṃṭarēkāṃbarada biḍumuḍiya karada basurina hoyla kajjaḷa pariluḷita nayanāṃbugaḷa kā taripa kamalākṣiyaru neredudu lakka saṃkhyeyali

Report an error

ವಣಿಜಸತಿಯರು ಶಿಲ್ಪಜನವುಪ ವಣಿಜದಬಲಾಜನವಘಾಟದ ಗಣಿಕೆಯರು ನಾನಾದಿಗಂತದ ರಾಜಪತ್ನಿಯರು ಹಿಣಿಲ ಕಬರಿಯ ಹೊಳೆವ ಮುಂದಲೆ ವಣಿಯ ಮುಕುರ ಮುಖಾಂಬುಜದ ಪದ ಝಣಝಣತ್ಕೃತಿ ಜಡಿಯೆ ನಡೆದುದು ಬೀದಿಬೀದಿಯಲಿ

vaṇijasatiyaru śilpajanavupa vaṇijadabalājanavaghāṭada gaṇikeyaru nānādigaṃtada rājapatniyaru hiṇila kabariya hoḷeva muṃdale vaṇiya mukura mukhāṃbujada pada jhaṇajhaṇatkr̥ti jaḍiye naḍedudu bīdibīdiyali

Report an error

ಎಸಳುಗಂಗಳ ಬೆಳಗನಶ್ರು ಪ್ರಸರ ತಡೆದುದು ಶೋಕಮಯಶಿಖಿ ಮುಸುಡ ಕಾಂತಿಯ ಕುಡಿದುದೊಸರುವ ಬಿಸಿಲ ಬೇಗೆಗಳು ಮಿಸುಪ ಲಾವಣ್ಯಾಂಬುವನು ಬ ತ್ತಿಸಿದವಂಗುಲಿಯುಪಹತಿಯ ಕೈ ಬಿಸಜ ಸೆಳೆದುದು ಕುಚದ ಚೆಲುವನು ಕೋಮಲಾಂಗಿಯರ

esaḷugaṃgaḷa beḷaganaśru prasara taḍedudu śōkamayaśikhi musuḍa kāṃtiya kuḍidudosaruva bisila bēgegaḷu misupa lāvaṇyāṃbuvanu ba ttisidavaṃguliyupahatiya kai bisaja seḷedudu kucada celuvanu kōmalāṃgiyara

Report an error

ತಮ್ಮೊಳೇಕತ್ವದ ಸಖಿತ್ವದ ಸೊಮ್ಮಿನಲಿ ಶ್ರುತಿಯಶ್ರುಜಲವನು ನಿರ್ಮಿಸಿದವೆನೆ ಕರ್ಣಪೂರದ ಮುತ್ತು ಸೂಸಿದವು ನೆಮ್ಮಿತತಿಶಯ ಶೋಕವಹ್ನಿಯ ದೊಮ್ಮಿಗೆಯ ಕರಣಂಗಳಲಿ ನೃಪ ಧರ್ಮಪತ್ನಿಯರಳುತ ಹೊರವಂಟರು ಪುರಾಂತರವ

tammoḷēkatvada sakhitvada somminali śrutiyaśrujalavanu nirmisidavene karṇapūrada muttu sūsidavu nemmitatiśaya śōkavahniya dommigeya karaṇaṃgaḷali nr̥pa dharmapatniyaraḷuta horavaṃṭaru purāṃtarava

Report an error

ಉಡಿದು ಬಿದ್ದವು ಸೂಡಗವು ಬಿಗು ಹಡಗಿ ಕಳೆದವು ತೋಳಬಂದಿಗ ಳೊಡನೊಡನೆ ಚೆಲ್ಲಿದವು ಮುತ್ತಿನ ಹಾರಚಯ ಹರಿದು ಬಿಡುಮುಡಿಯ ಕಡುತಿಮಿರ ಕಾರಿದು ದುಡುಗಣವನೆನೆ ಸೂಸಕದ ಮು ತ್ತಡಿಸಿ ಸುರಿದವು ನೆಲಕೆ ನೃಪವನಿತಾಕದಂಬದಲಿ

uḍidu biddavu sūḍagavu bigu haḍagi kaḷedavu tōḷabaṃdiga ḷoḍanoḍane cellidavu muttina hāracaya haridu biḍumuḍiya kaḍutimira kāridu duḍugaṇavanene sūsakada mu ttaḍisi suridavu nelake nr̥pavanitākadaṃbadali

Report an error

ಗಾಳಿಯರಿಯದು ಮುನ್ನ ರವಿಕಿರ ಣಾಳಿ ಸೋಂಕದಪೂರ‍್ವರೂಪಿನ ಮೇಲೆ ಬೀಳುವವೆಂಬವೊಲು ಕಡುವಿಸಿಲು ಬಿರುಗಾಳಿ ತೂಳಿದವು ತರುಣಿಯರನಾವವ ರಾಲಿಯರಿಯದ ನೆಲೆಯನಾ ಚಾಂ ಡಾಲ ಜನಪರಿಯಂತ ಕಂಡುದು ರಾಯ ರಾಣಿಯರ

gāḷiyariyadu munna ravikira ṇāḷi sōṃkadapūrvarūpina mēle bīḷuvaveṃbavolu kaḍuvisilu birugāḷi tūḷidavu taruṇiyaranāvava rāliyariyada neleyanā cāṃ ḍāla janapariyaṃta kaṃḍudu rāya rāṇiyara

Report an error

ಅರಸ ಚಿತ್ತೈಸವರು ಹಸ್ತಿನ ಪುರವ ಹೊರವಡೆ ದೂರದಲಿ ಕೃಪ ಗುರುಜ ಕೃತವರ್ಮಕರು ಕಂಡರು ಕೌರವೇಶ್ವರನ ಅರಸಿಯರ ನಾನಾದಿಗಂತದ ಧರಣಿಪರ ಭಗದತ್ತ ಮಾದ್ರೇ ಶ್ವರ ಜಯದ್ರಥ ಕರ್ಣ ದುಶ್ಶಾಸನರ ರಾಣಿಯರ

arasa cittaisavaru hastina purava horavaḍe dūradali kr̥pa guruja kr̥tavarmakaru kaṃḍaru kauravēśvarana arasiyara nānādigaṃtada dharaṇipara bhagadatta mādrē śvara jayadratha karṇa duśśāsanara rāṇiyara

Report an error

ಗಣಿಕೆಯರನೇಕಾದಶಾಕ್ಷೋ ಹಿಣಿಯ ನೃಪರಾಣಿಯರನಾ ಪ ಟ್ಟಣ ಜನದ ಪರಿಜನದ ಬಹುಕಾಂತಾ ಕದಂಬಕವ ರಣಮಹೀದರುಶನಕೆ ಬಹ ಸಂ ದಣಿಯ ಕಂಡರು ಧರ್ಮಸುತನಿ ನ್ನುಣಲಿ ಧರಣಿಯನೆಂದು ಸುಯ್ದರು ಬಯ್ದು ಕಮಲಜನ

gaṇikeyaranēkādaśākṣō hiṇiya nr̥parāṇiyaranā pa ṭṭaṇa janada parijanada bahukāṃtā kadaṃbakava raṇamahīdaruśanake baha saṃ daṇiya kaṃḍaru dharmasutani nnuṇali dharaṇiyaneṃdu suydaru baydu kamalajana

Report an error

ಬಂದು ಧೃತರಾಷ್ಟ್ರಾವನೀಶನ ಮುಂದೆ ನಿಂದರು ರಾಯಕಟಕವ ಕೊಂದ ರಜನಿಯ ರಹವನಭಿವರ್ಣಿಸಿದರರಸಂಗೆ ಸಂದುದೇ ಛಲವೆನ್ನ ಮಗನೇ ನೆಂದನೈ ಹರಿಬದಲಿ ಹರುಷವ ತಂದಿರೈ ತಮಗಿನ್ನು ಲೇಸಾಯ್ತೆಂದನಂಧನೃಪ

baṃdu dhr̥tarāṣṭrāvanīśana muṃde niṃdaru rāyakaṭakava koṃda rajaniya rahavanabhivarṇisidararasaṃge saṃdudē chalavenna maganē neṃdanai haribadali haruṣava taṃdirai tamaginnu lēsāyteṃdanaṃdhanr̥pa

Report an error

ಪತಿಕರಿಸಿದನು ನಮ್ಮನಹಿತ ಸ್ಥಿತಿಯನೆಲ್ಲವ ತಿಳಿದನಮರಾ ವತಿಯ ಸತಿಯರ ಸೋಂಕಿನಲಿ ಸೇರಿದನು ನಿಮಿಷದಲಿ ಕ್ಷಿತಿಪನಂತ್ಯದೊಳಲ್ಲಿ ಶಸ್ತ್ರ ಚ್ಯುತಿಯಮಾಡಿ ವಿರಾಗದಲಿ ವನ ಗತಿಕರಾವೈತಂದೆವೆಂದರು ಗುರುಸುತಾದಿಗಳು

patikarisidanu nammanahita sthitiyanellava tiḷidanamarā vatiya satiyara sōṃkinali sēridanu nimiṣadali kṣitipanaṃtyadoḷalli śastra cyutiyamāḍi virāgadali vana gatikarāvaitaṃdeveṃdaru gurusutādigaḷu

Report an error

ಲೇಸು ಮಾಡಿದಿರಿನ್ನು ನಿಮಗಿ ನ್ನೈಸಲೇ ಕರ್ತವ್ಯವೆನೆ ಧರ ಣೀಶನನು ಬೀಳ್ಕೊಂಡರವರಗಲಿದರು ತಮ್ಮೊಳಗೆ ವ್ಯಾಸಮುನಿಯಾಶ್ರಮವ ಗಂಗಾ ದೇಶವನು ತದ್ದ್ವಾರಕಿಯ ಸಂ ವೇಶಿಸಿದರೈ ಗುರುಜ ಕೃಪ ಕೃತವರ್ಮರೊಲವಿನಲಿ

lēsu māḍidirinnu nimagi nnaisalē kartavyavene dhara ṇīśananu bīḷkoṃḍaravaragalidaru tammoḷage vyāsamuniyāśramava gaṃgā dēśavanu taddvārakiya saṃ vēśisidarai guruja kr̥pa kr̥tavarmarolavinali

Report an error

ತಿರುಗಿದರು ಬಳಿಕಿತ್ತಲೀ ಮೋ ಹರದ ಕಾಂತಾಕೋಟಿ ಬಂದುದು ಹರಳುಮುಳ್ಳುಗಳೊತ್ತುಗಾಲಿನ ದೂರತರಪಥರ ಉರಿಯ ಜಠರದ ಬಿಸಿಲ ಝಳದಲಿ ಹುರಿದ ಕದಪುಗಳೆರಡು ಕಡೆಯಲಿ ಸುರಿವ ನಯನಾಂಬುಗಳ ರಾಜನಿತಂಬಿನೀನಿಕರ

tirugidaru baḷikittalī mō harada kāṃtākōṭi baṃdudu haraḷumuḷḷugaḷottugālina dūratarapathara uriya jaṭharada bisila jhaḷadali hurida kadapugaḷeraḍu kaḍeyali suriva nayanāṃbugaḷa rājanitaṃbinīnikara

Report an error

ಬಂದುದೀ ಗಜಪುರದ ನಾರೀ ವೃಂದ ಧೃತರಾಷ್ಟ್ರಾವನೀಶನ ಮುಂದೆ ವೇದವ್ಯಾಸ ಸಂಜಯ ವಿದುರ ಪೌರಜನ ಮುಂದಣಾಹವರಗಧಾರುಣಿ ಯೊಂದು ಕೆಲದುಪವನದ ನೆಳಲಲಿ ನಿಂದುದಿವರಾಗಮನವನು ಕೇಳಿದನು ಯಮಸೂನು

baṃdudī gajapurada nārī vr̥ṃda dhr̥tarāṣṭrāvanīśana muṃde vēdavyāsa saṃjaya vidura paurajana muṃdaṇāhavaragadhāruṇi yoṃdu keladupavanada neḷalali niṃdudivarāgamanavanu kēḷidanu yamasūnu

Report an error

ಮುರಮಥನ ಸಾತ್ಯಕಿ ಯುಧಿಷ್ಠಿರ ಧರಣಿಪತಿ ನರ ಭೀಮ ಮಾದ್ರೇ ಯರುಗಳೈವರ ಸಾರಥಿಗಳು ಯುಯುತ್ಸು ದಾರುಕರು ತೆರಳಿತೇಳಕ್ಷೋಹಿಣಿಯ ನೃಪ ರರಸಿಯರು ದ್ರೌಪದಿಯ ರೋದನ ಸರದ ಗಾನದ ಜಠರತಾಡನ ತಾಳಮೇಳದಲಿ

muramathana sātyaki yudhiṣṭhira dharaṇipati nara bhīma mādrē yarugaḷaivara sārathigaḷu yuyutsu dārukaru teraḷitēḷakṣōhiṇiya nr̥pa rarasiyaru draupadiya rōdana sarada gānada jaṭharatāḍana tāḷamēḷadali

Report an error

ಇವರು ಬಂದರು ದೂರದಲಿ ಮಾ ಧವನ ಮತದಲಿ ನಿಂದರಾಚೆಯ ಯುವತಿಜನ ಗಾಂಧಾರಿ ಕುಂತೀ ಭಾನುಮತಿ ಸಹಿತ ವಿವಿಧವಿಕೃತವಿಳಾಸನಯನೋ ದ್ಭವಪಯಸ್ತಿಮಿರಾಂಶುಕೆಯರಂ ದವನಿಯಲಿ ಕೆಡೆದೊರಲುತಿರ್ದರು ತಾರುಥಟ್ಟಿನಲಿ

ivaru baṃdaru dūradali mā dhavana matadali niṃdarāceya yuvatijana gāṃdhāri kuṃtī bhānumati sahita vividhavikr̥taviḷāsanayanō dbhavapayastimirāṃśukeyaraṃ davaniyali keḍedoralutirdaru tāruthaṭṭinali

Report an error

ಅರಸ ಕೇಳ್ ಧೃತರಾಷ್ಟ್ರ ಸಂಜಯ ವರ ಮುನಿಪ ವಿದುರಾದಿ ಪರಿಜನ ಪುರಜನಾವಳಿಯಿದ್ದುದುಪವನದೊಂದು ಬಾಹೆಯಲಿ ನೆರೆದುದೀಚೆಯಲೊಂದೆಸೆಯಲು ತ್ತರೆ ಸುಭದ್ರೆಯರಾದಿ ಯಾದವ ರರಸಿಯರುಸಹಿತೊರಲುತಿರ್ದಳು ದ್ರೌಪದೀದೇವಿ

arasa kēḷ dhr̥tarāṣṭra saṃjaya vara munipa vidurādi parijana purajanāvaḷiyiddudupavanadoṃdu bāheyali neredudīceyaloṃdeseyalu ttare subhadreyarādi yādava rarasiyarusahitoralutirdaḷu draupadīdēvi

Report an error

ಹರಿಸಹಿತ ಪಾಂಡವರದೊಂದೆಸೆ ಯಿರೆ ಚತುರ್ವಿಧವಾದುದೀ ಮೋ ಹರದೊಳಾಯ್ತೆಡೆಯಾಟ ವೇದವ್ಯಾಸ ವಿದುರರಿಗೆ ಧರಣಿಪನ ಕಾಣಿಸುವುದಂಧನ ನಿರುಪಮಿತ ಶೋಕಾನಳನ ಸಂ ಹರಿಸುವುದು ನಯವೆಂದು ವೇದವ್ಯಾಸಮುನಿ ನುಡಿದ

harisahita pāṃḍavaradoṃdese yire caturvidhavādudī mō haradoḷāyteḍeyāṭa vēdavyāsa vidurarige dharaṇipana kāṇisuvudaṃdhana nirupamita śōkānaḷana saṃ harisuvudu nayaveṃdu vēdavyāsamuni nuḍida

Report an error

ಇದಕೆ ಸಂಶಯವೇನು ಬೊಪ್ಪನ ಪದಯುಗವ ಕಾಣಿಸುವುದೆಮ್ಮನು ಹದುಳವಿಡುವುದು ಹಸ್ತಿನಾಪುರದರಸುತನ ತನಗೆ ಒದೆದು ನೂಕಿದ ಹದನ ಮಕುಟಾ ಗ್ರದಲಿ ಧರಿಸುವೆವೆಂದು ಬಿನ್ನವಿ ಪುದು ಮಹೀಪತಿಗೆಂದು ಮುನಿಗರುಹಿದನು ಯಮಸೂನು

idake saṃśayavēnu boppana padayugava kāṇisuvudemmanu haduḷaviḍuvudu hastināpuradarasutana tanage odedu nūkida hadana makuṭā gradali dharisuveveṃdu binnavi pudu mahīpatigeṃdu munigaruhidanu yamasūnu

Report an error

ಲೇಸನಾಡಿದೆ ಮಗನೆ ಧರ್ಮದ ಮೀಸಲಲ್ಲಾ ನಿನ್ನ ಮತಿ ಬಳಿ ಕೈಸಲೇಯೆನುತವರು ಬಂದರು ಭೂಪತಿಯ ಹೊರೆಗೆ ಆ ಸುಯೋಧನ ನಿನ್ನ ಮಗನ ಲ್ಲೀ ಸಮಂಜಸ ಧರ್ಮಜನ ಹಿಡಿ ದೀಸುವುದು ಭವಜಲನಿಧಿಯನೆಂದಮಳಮುನಿ ನುಡಿದ

lēsanāḍide magane dharmada mīsalallā ninna mati baḷi kaisalēyenutavaru baṃdaru bhūpatiya horege ā suyōdhana ninna magana llī samaṃjasa dharmajana hiḍi dīsuvudu bhavajalanidhiyaneṃdamaḷamuni nuḍida

Report an error

ನೃಪನ ಕಾಣಿಸಿಕೊಂಬುದನಿಬರ ನುಪಚರಿಸುವುದು ನಿನ್ನ ಮಕ್ಕಳ ಕೃಪಣತೆಯನಾರೈವರಲ್ಲವರೈವರುತ್ತಮರು ಉಪಹತಿಯ ನೆನೆಯದಿರು ದುರ್ಜನ ರಪಕೃತಿಗೆ ಫಲವಾಯ್ತು ಧರ್ಮವೆ ರಪಣವಿಹಪರಲೋಕಕೆಲೆ ಧೃತರಾಷ್ಟ್ರ ಕೇಳೆಂದ

nr̥pana kāṇisikoṃbudanibara nupacarisuvudu ninna makkaḷa kr̥paṇateyanāraivarallavaraivaruttamaru upahatiya neneyadiru durjana rapakr̥tige phalavāytu dharmave rapaṇavihaparalōkakele dhr̥tarāṣṭra kēḷeṃda

Report an error

ಹೈ ಹಸಾದವು ನಿಮ್ಮ ಚಿತ್ತಕೆ ಬೇಹ ಹದನೇ ಕಾರ‍್ಯಗತಿ ಸಂ ದೇಹವೇ ಪಾಂಡುವಿನ ಮಕ್ಕಳು ಮಕ್ಕಳವರೆಮಗೆ ಕಾಹುರರು ಕಲ್ಮಷರು ಬಂಧು ದ್ರೋಹಿಗಳು ಗತವಾಯ್ತು ನಿಷ್ಪ್ರ ತ್ಯೂಹವಿನ್ನೇನವರಿಗೆಂದನು ಮುನಿಗೆ ಧೃತರಾಷ್ಟ್ರ

hai hasādavu nimma cittake bēha hadanē kāryagati saṃ dēhavē pāṃḍuvina makkaḷu makkaḷavaremage kāhuraru kalmaṣaru baṃdhu drōhigaḷu gatavāytu niṣpra tyūhavinnēnavarigeṃdanu munige dhr̥tarāṣṭra

Report an error

ಖಳನ ಹೃದಯದ ಕಾಳಕೂಟದ ಗುಳಿಗೆಗಳನಿವರೆತ್ತ ಬಲ್ಲರು ತಿಳುಹಿ ನುಡಿದೊಡಬಡಿಸಿದರು ನಾನಾ ಪ್ರಕಾರದಲಿ ಘಳಿಲನೀಚೆಗೆ ಬಂದು ಹದನನು ನಳಿನನಾಭಂಗರುಹೆ ನಸುನಗು ತೊಳಗೊಳಗೆ ಹರಿ ವಿಶ್ವಕರ್ಮನ ನೆನೆದು ನೇಮಿಸಿದ

khaḷana hr̥dayada kāḷakūṭada guḷigegaḷanivaretta ballaru tiḷuhi nuḍidoḍabaḍisidaru nānā prakāradali ghaḷilanīcege baṃdu hadananu naḷinanābhaṃgaruhe nasunagu toḷagoḷage hari viśvakarmana nenedu nēmisida

Report an error

ನೆನೆದ ಘಳಿಗೆಯೊಳಾತ ಕಟ್ಟು ಕ್ಕಿನಲಿ ರ‍್ವಾವಯವವನು ಸಂ ಜನಿಸಿದನು ಪ್ರತಿರೂಪವನು ಪವಮಾನನಂದನನ ದನುಜರಿಪುಸಹಿತವರು ಬಂದರು ಮುನಿಯೊಡನೆ ಬಳಿಕಂಧನೃಪತಿಗೆ ವಿನಯದಲಿ ಮೆಯ್ಯಿಕ್ಕಿದನು ಭಕ್ತಿಯಲಿ ಯಮಸೂನು

neneda ghaḷigeyoḷāta kaṭṭu kkinali rvāvayavavanu saṃ janisidanu pratirūpavanu pavamānanaṃdanana danujaripusahitavaru baṃdaru muniyoḍane baḷikaṃdhanr̥patige vinayadali meyyikkidanu bhaktiyali yamasūnu

Report an error

ಬಾ ಮಗನೆ ಕುರುರಾಜವಂಶ ಶಿ ರೋಮಣಿಯೆ ನಿರ್ಧೂತ ರಾಜಸ ತಾಮಸನೆ ಸತ್ಯೈಕನಿಧಿ ಬಾ ಕಂದ ಬಾ ಎನುತ ಭೂಮಿಪನ ತೆಗೆದಪ್ಪಿ ಬಹಳ ಪ್ರೇಮದಲಿ ಮುಂಡಾಡಿದನು ಕಲಿ ಭೀಮನೋ ಬಾ ಮಗನೆ ಬಾರೈ ಕಂದ ಬಾ ಎಂದ

bā magane kururājavaṃśa śi rōmaṇiye nirdhūta rājasa tāmasane satyaikanidhi bā kaṃda bā enuta bhūmipana tegedappi bahaḷa prēmadali muṃḍāḍidanu kali bhīmanō bā magane bārai kaṃda bā eṃda

Report an error

ಭೀಮನನು ಹಿಂದಿಕ್ಕಿ ಲೋಹದ ಭೀಮನನು ಮುಂದಿರಿಸಿದಡೆ ಸು ಪ್ರೇಮನಪ್ಪಿದಡೇನನೆಂಬೆನು ಮೋಹವನು ಮಗನ ಆ ಮಹಾವಜ್ರಾಯತ ಪ್ರೋ ದ್ದಾಮದಾಯಸ ಭೀಮತನು ನಿ ರ್ನಾಮವೆನೆ ನುಗ್ಗಾಗಿ ಬಿದ್ದುದು ನೃಪನ ತಕ್ಕೆಯಲಿ

bhīmananu hiṃdikki lōhada bhīmananu muṃdirisidaḍe su prēmanappidaḍēnaneṃbenu mōhavanu magana ā mahāvajrāyata prō ddāmadāyasa bhīmatanu ni rnāmavene nuggāgi biddudu nr̥pana takkeyali

Report an error

ಮಗನೆ ಹಾ ಹಾ ಭೀಮ ನೊಂದೈ ಮಗನೆ ಕೆಟ್ಟೆನು ಕೆಟ್ಟೆನಕಟೆಂ ದೊಗುಮಿಗೆಯ ಶೋಕದಲಿ ನೆರೆ ಮರುಗಿದನು ಧೃತರಾಷ್ಟ್ರ ದುಗುಡ ಬೇಡೊಮ್ಮಿಂಗೆ ನಿಮ್ಮಯ ಮಗನುಳಿದ ನಿಮ್ಮಧಿಕರೋಷದ ಹಗರಣದ ಹಗೆ ಹೋಯಿತೆಂದನು ನಗುತ ಮುರವೈರಿ

magane hā hā bhīma noṃdai magane keṭṭenu keṭṭenakaṭeṃ dogumigeya śōkadali nere marugidanu dhr̥tarāṣṭra duguḍa bēḍommiṃge nimmaya maganuḷida nimmadhikarōṣada hagaraṇada hage hōyiteṃdanu naguta muravairi

Report an error

ತ್ರಾಣವಿಮ್ಮಡಿಸಿತ್ತು ಕೋಪದ ಕೇಣವೆಚ್ಚರಿಸಿದಡೆ ನೃಪ ಸ ತ್ರಾಣದಲಿ ತನಿ ಬಿಗಿಯೆ ನುಗ್ಗಾಯ್ತಾಯಸಪ್ರತಿಮೆ ಮಾಣು ಭಯವನು ಭೀಮ ಭೂಪನ ಕಾಣು ಹೋಗೆನೆ ನಡುಗಿ ಭುವನ ಪ್ರಾಣನಾತ್ಮಜ ಬಿದ್ದನಾ ಧೃತರಾಷ್ಟ್ರನಂಘ್ರಿಯಲಿ

trāṇavimmaḍisittu kōpada kēṇaveccarisidaḍe nr̥pa sa trāṇadali tani bigiye nuggāytāyasapratime māṇu bhayavanu bhīma bhūpana kāṇu hōgene naḍugi bhuvana prāṇanātmaja biddanā dhr̥tarāṣṭranaṃghriyali

Report an error

ಪವನಸುತನೇ ಬಾ ಎನುತ ತ ಕ್ಕವಿಸಿದನು ಬಳಿಕೆರಗಿದಡೆ ವಾ ಸವನ ಸುತ ಬಾ ಕಂದ ಎಂದಪ್ಪಿದನು ಫಲುಗುಣನ ತವಕದಿಂದೆರಗಿದಡೆ ಮಾದ್ರಿಯ ಜವಳಿಮಕ್ಕಳನಪ್ಪಿದನು ಕೌ ರವಕುಲಾಗ್ರಣಿಗಳಿರ ಕುಳ್ಳಿರಿಯೆಂದನಂಧನೃಪ

pavanasutanē bā enuta ta kkavisidanu baḷikeragidaḍe vā savana suta bā kaṃda eṃdappidanu phaluguṇana tavakadiṃderagidaḍe mādriya javaḷimakkaḷanappidanu kau ravakulāgraṇigaḷira kuḷḷiriyeṃdanaṃdhanr̥pa

Report an error

ಕುರುಮಹೀಪತಿ ನಮ್ಮ ಪೂರ್ವಜ ರರಸು ತತ್ಸಂತಾನ ಪಾರಂ ಪರೆಯನಳಿವಡೆ ಕೆಲಬರಾದರು ಹೋದರವರಿಂದು ಭರತಕುಲವನು ಹೊರೆದು ಮಿಗೆ ವಿ ಸ್ತರಿಸು ಮಗನೆ ಸುಯೋಧನಾದ್ಯರ ದುರುಳುತನದವಗುಣವನೆಮ್ಮನು ನೋಡಿ ಮರೆಯೆಂದ

kurumahīpati namma pūrvaja rarasu tatsaṃtāna pāraṃ pareyanaḷivaḍe kelabarādaru hōdaravariṃdu bharatakulavanu horedu mige vi starisu magane suyōdhanādyara duruḷutanadavaguṇavanemmanu nōḍi mareyeṃda

Report an error

ಅವರೊಳವಗುಣವೇ ಚಿರಂತನ ಭವದ ಕಿಲ್ಬಿಷ ಕರ‍್ಮಪಾಕ ಪ್ರವರ ದುರಿಯೋಧನನ ಸವ್ಯಪದೇಶಮಾತ್ರದಲಿ ಎವಗೆ ರಚಿಸಿತು ರಾಜ್ಯವಿಭ್ರಂ ಶವನು ತತ್ಸುಕೃತೋದಯಪ್ರಾ ಭವವೆ ತಿರುಗಿಸಿತೆಂದು ನಯದಲಿ ಧರ್ಮಸುತ ನುಡಿದ

avaroḷavaguṇavē ciraṃtana bhavada kilbiṣa karmapāka pravara duriyōdhanana savyapadēśamātradali evage racisitu rājyavibhraṃ śavanu tatsukr̥tōdayaprā bhavave tirugisiteṃdu nayadali dharmasuta nuḍida

Report an error

ಸಾಕಿದಂತಿರಲಬಲೆಯರೊಳು ದ್ರೇಕಿ ನಿಮ್ಮಯ ಹಿರಿಯ ತಾಯು ದ್ರೇಕವನು ಪರಿಹರಿಸು ಶೋಕಕ್ರೋಧದುಪಟಳಕೆ ಆಕೆ ಸೈರಿಸಲರಿಯಳರಿವಿನೊ ಳಾಕೆವಾಳರು ತಿಳಿಹಿ ತಮ್ಮನ ನಾಕೆಯನು ಕಾಣಿಸುವುದೆಂದನು ವ್ಯಾಸ ವಿದುರರಿಗೆ

sākidaṃtiralabaleyaroḷu drēki nimmaya hiriya tāyu drēkavanu pariharisu śōkakrōdhadupaṭaḷake āke sairisalariyaḷarivino ḷākevāḷaru tiḷihi tammana nākeyanu kāṇisuvudeṃdanu vyāsa vidurarige

Report an error

ವಿದುರ ವೇದವ್ಯಾಸ ಮುನಿಯೀ ಹದನನರುಹುವೆವೆಂದು ರಾಯನ ಸುದತಿಯಲ್ಲಿಗೆ ಬಂದು ನುಡಿದರು ಮಧುರವಚನದಲಿ ಕದಪನಂಗೈಗಿತ್ತು ತಲೆಗು ತ್ತಿದಳು ನಯನೋದಕದ ಪರಿವಾ ಹದಲಿ ನನೆದಳು ಮಹಿಳೆಯಿದ್ದಳು ಬಹಳ ಮೋನದಲಿ

vidura vēdavyāsa muniyī hadananaruhuveveṃdu rāyana sudatiyallige baṃdu nuḍidaru madhuravacanadali kadapanaṃgaigittu talegu ttidaḷu nayanōdakada parivā hadali nanedaḷu mahiḷeyiddaḷu bahaḷa mōnadali

Report an error

ದುಗುಡವನು ಬಿಡು ಮೋಹಬಂಧ ಸ್ಥಗಿತ ಚಿತ್ತದ ಕದಡು ಹಣಿಯಲಿ ಮಗಳೆ ಮರುಳಾದೌ ವಿಳಾಸದ ವಿಹಿತವಿಹಪರಕೆ ಅಗಡುಮಕ್ಕಳ ತಾಯ್ಗೆ ತಪ್ಪದು ಬೆಗಡುಬೇಗೆ ಸುಯೋಧನಾದ್ಯರ ವಿಗಡತನವನು ನೆನೆದು ನೀ ನೋಡೆಂದನಾ ಮುನಿಪ

duguḍavanu biḍu mōhabaṃdha sthagita cittada kadaḍu haṇiyali magaḷe maruḷādau viḷāsada vihitavihaparake agaḍumakkaḷa tāyge tappadu begaḍubēge suyōdhanādyara vigaḍatanavanu nenedu nī nōḍeṃdanā munipa

Report an error

ಮುನಿಯದಿರು ಗಾಂಧಾರಿ ದಿಟ ನಿ ನ್ನನುಜನಿಕ್ಕಿದ ಸಾರಿ ನಿನ್ನಯ ತನುಜರನು ನಿನ್ನಖಿಳಮಿತ್ರಜ್ಞಾತಿಬಾಂಧವರ ಮನುಜಪತಿಗಳನಂತವನು ರಿಪು ಜನಪ ಶರವಹ್ನಿಯಲಿ ಬೇಳಿದು ದಿನಿತು ಶೋಕೋದ್ರೇಕ ನಿನಗೇಕೆಂದನಾ ಮುನಿಪ

muniyadiru gāṃdhāri diṭa ni nnanujanikkida sāri ninnaya tanujaranu ninnakhiḷamitrajñātibāṃdhavara manujapatigaḷanaṃtavanu ripu janapa śaravahniyali bēḷidu dinitu śōkōdrēka ninagēkeṃdanā munipa

Report an error

ಅಳಿದವರಿಗಳಲುವುದು ಸಲ್ಲದು ನಿಲಲಿ ಸಾಕದು ನಿಮ್ಮ ಚಿತ್ತದ ನೆಲೆಯ ಬಯಕೆಯ ಬೆಸಸಿರೇ ಕರ್ತವ್ಯವೇನೆಮಗೆ ಕಳವಳಿಪ ಕುಂತೀಸುತರ ಕಣು ವಳೆಗವಗ್ರಹವಾಗು ನಿರ್ಜರ ರೊಳಗೆ ಮಕ್ಕಳ ಮಾನ್ಯರನು ಮಾಡೆಂದನಾ ಮುನಿಪ

aḷidavarigaḷaluvudu salladu nilali sākadu nimma cittada neleya bayakeya besasirē kartavyavēnemage kaḷavaḷipa kuṃtīsutara kaṇu vaḷegavagrahavāgu nirjara roḷage makkaḷa mānyaranu māḍeṃdanā munipa

Report an error

ಅರ್ಥನಂಬಿಸುವುದೈವರನು ಕಾಣಿಸಿ ಕೊಂಬುದನಿಬರ ಕರಣವೃತ್ತಿಗೆ ತುಂಬುವುದು ತನಿಹರುಷವನು ಸೌಹಾರ್ದಶೋಭೆಯಲಿ ಝೊಂಬಿಸಲಿ ಕೌರವರು ನಾಕ ನಿ ತಂಬಿನಿಯರಳಕವನು ಮಗಳೆ ವಿ ಡಂಬಿಸುವ ಖಳರಭಿಮತಕೆ ಮನವೀಯಬೇಡೆಂದ

arthanaṃbisuvudaivaranu kāṇisi koṃbudanibara karaṇavr̥ttige tuṃbuvudu taniharuṣavanu sauhārdaśōbheyali jhoṃbisali kauravaru nāka ni taṃbiniyaraḷakavanu magaḷe vi ḍaṃbisuva khaḷarabhimatake manavīyabēḍeṃda

Report an error

ರಾಯನನು ಕಾಣಿಸಿದಿರೇ ಪ್ರ ಜ್ಞಾಯತಾಕ್ಷನ ತಿಳಿಹಿ ಬಂದಿರೆ ತಾಯಿಗಳು ನಾವೈಸಲೇ ಬಲುಹುಂಟೆ ನಮಗಿನ್ನು ಸಾಯೆ ಸಾವೆನು ಕುರುಕುಲಾಗ್ರಣಿ ನೋಯೆ ನೋವೆನು ತನಗೆ ದುರಭಿ ಪ್ರಾಯವುಂಟೇ ಮಾವ ಎಂದಳು ಮುನಿಗೆ ಗಾಂಧಾರಿ

rāyananu kāṇisidirē pra jñāyatākṣana tiḷihi baṃdire tāyigaḷu nāvaisalē baluhuṃṭe namaginnu sāye sāvenu kurukulāgraṇi nōye nōvenu tanage durabhi prāyavuṃṭē māva eṃdaḷu munige gāṃdhāri

Report an error

ಐಸಲೇ ಗುಣಮಯವಚೋವಿ ನ್ಯಾಸವಿದು ಸಾರೆನುತ ಮರಳಿದು ಭೂಸುರಾಗ್ರಣಿ ಬಂದು ನುಡಿದನು ಧರ್ಮನಂದನಗೆ ರೋಷವಹ್ನಿಯನುಪಶಮಾಂಬು ವಿ ಳಾಸದಲಿ ನಿಲಿಸೇಳು ನೃಪನ ಮ ಹಾಸತಿಯ ಖತಿ ಹಿರಿದು ನಮಗೊಳಗಾಗಿ ಭಯವೆಂದ

aisalē guṇamayavacōvi nyāsavidu sārenuta maraḷidu bhūsurāgraṇi baṃdu nuḍidanu dharmanaṃdanage rōṣavahniyanupaśamāṃbu vi ḷāsadali nilisēḷu nr̥pana ma hāsatiya khati hiridu namagoḷagāgi bhayaveṃda

Report an error

ಹರಿ ವಿದುರ ಪಾರಾಶರಾತ್ಮಜ ವರಮಹೀಪತಿ ಭೀಮ ಮಾದ್ರೇ ಯರು ಧನಂಜಯ ಸಹಿತ ಬಂದರು ಬಹಳ ವಿನಯದಲಿ ಚರಣದಲಿ ಮೆಯ್ಯಿಕ್ಕಿದರೆ ನೃಪ ವರನ ನೆಗಹಿದಳನಿಲಸುತ ಸಿತ ತುರಗ ಮಾದ್ರೀಸುತರು ಪದಕೆರಗಿದರು ಭೀತಿಯಲಿ

hari vidura pārāśarātmaja varamahīpati bhīma mādrē yaru dhanaṃjaya sahita baṃdaru bahaḷa vinayadali caraṇadali meyyikkidare nr̥pa varana negahidaḷanilasuta sita turaga mādrīsutaru padakeragidaru bhītiyali

Report an error

ಏಳಿರೈ ಸಾಕೇಳಿ ಮಕ್ಕಳಿ ರೇಳಿರೈ ದೇಸಿಗರು ನಾವ್ ಭೂ ಪಾಲಕರು ನೀವೀಸು ನಮ್ಮಲಿ ಭೀತಿ ನಿಮಗೇಕೆ ಬಾಲೆಯರು ನಾವಂಧಕರು ನಿ ಮ್ಮಾಳಿಕೆಯೊಳೇ ನಿಮ್ಮ ಹಂತಿಯ ಕೂಳಿನಲಿ ಬೆಂದೊಡಲ ಹೊರೆವವರೆಂದಳಿಂದುಮುಖಿ

ēḷirai sākēḷi makkaḷi rēḷirai dēsigaru nāv bhū pālakaru nīvīsu nammali bhīti nimagēke bāleyaru nāvaṃdhakaru ni mmāḷikeyoḷē nimma haṃtiya kūḷinali beṃdoḍala horevavareṃdaḷiṃdumukhi

Report an error

ತಾಯೆ ಖತಿಬೇಡಿನ್ನು ಧರಣಿಗೆ ರಾಯನೇ ಧೃತರಾಷ್ಟ್ರನಾತನ ಬಾಯ ತಂಬುಲ ಬೀಳುಡೆಯ ಬಲದಿಂದ ಬದುಕುವೆವು ತಾಯಿ ನೀವಿನ್ನೆಮಗೆ ಕುಂತಿಯ ತಾಯಿತನವಂತಿರಲಿ ಕರುಣಿಸಿ ಕಾಯಬೇಕೆಂದರಸ ಮಗುಳೆರಗಿದನು ಚರಣದಲಿ

tāye khatibēḍinnu dharaṇige rāyanē dhr̥tarāṣṭranātana bāya taṃbula bīḷuḍeya baladiṃda badukuvevu tāyi nīvinnemage kuṃtiya tāyitanavaṃtirali karuṇisi kāyabēkeṃdarasa maguḷeragidanu caraṇadali

Report an error

ಧರ್ಮ ನಿಮ್ಮದು ಮಗನೆ ಬರಿಯ ವಿ ಕರ್ಮವೆಮ್ಮದು ತನ್ನ ಮಕ್ಕಳು ದುರ್ಮತಿಗಳನ್ಯಾಯಶೀಲರಸಾಧುಸಂಗತರು ನಿರ್ಮಳರು ನೀವೈವರಾಹವ ಧರ್ಮಕುಶಲರು ಲೋಕ ಮೆಚ್ಚಲು ಧರ್ಮ ನಿಮಗಿನ್ನೆನುತ ತಲೆಗುತ್ತಿದಳು ಗಾಂಧಾರಿ

dharma nimmadu magane bariya vi karmavemmadu tanna makkaḷu durmatigaḷanyāyaśīlarasādhusaṃgataru nirmaḷaru nīvaivarāhava dharmakuśalaru lōka meccalu dharma nimaginnenuta taleguttidaḷu gāṃdhāri

Report an error

ಧರ್ಮವಾಗಲಿ ಮೇಣು ರಣದಲ ಧರ್ಮವಾಗಲಿ ಖಾತಿಯಲಿ ಪರ ಮರ್ಮಘಾತಕವಾಯ್ತು ಸಾಕಿನ್ನೆಂದು ಫಲವೇನು ನಿರ್ಮಳಾಂತಃಕರಣಕೃತಪರಿ ಕರ್ಮವಿಳಸಿತೆ ತಾಯೆ ಸೈರಿಪು ದುಮ್ಮಳವು ಬೇಡೆಂದು ಮೆಯ್ಯಿಕ್ಕಿದನು ಕಲಿಭೀಮ

dharmavāgali mēṇu raṇadala dharmavāgali khātiyali para marmaghātakavāytu sākinneṃdu phalavēnu nirmaḷāṃtaḥkaraṇakr̥tapari karmaviḷasite tāye sairipu dummaḷavu bēḍeṃdu meyyikkidanu kalibhīma

Report an error

ಏಳು ತಮ್ಮ ವೃಥಾ ವಿಡಂಬನ ದಾಳಿಯಾಟವಿದೇಕೆ ಸೈರಿಸ ಹೇಳಿದೈ ಸೈರಿಸದೆ ಮುನಿದಡೆ ನಿಮಗೆ ಕೇಡಹುದೆ ಕಾಳೆಗದ ಕೃತಸಮಯ ಸತ್ಯವ ಪಾಲಿಸಿದವರು ನೀವಲೇ ದಿಟ ಖೂಳರಾವೈಸಲೆ ಎನುತ ಗಜರಿದಳು ಗಾಂಧಾರಿ

ēḷu tamma vr̥thā viḍaṃbana dāḷiyāṭavidēke sairisa hēḷidai sairisade munidaḍe nimage kēḍahude kāḷegada kr̥tasamaya satyava pālisidavaru nīvalē diṭa khūḷarāvaisale enuta gajaridaḷu gāṃdhāri

Report an error

ಹೊರಿಸುವಡೆ ದುಷ್ಕೀರ್ತಿ ನಮ್ಮಲಿ ಹೊರಿಗೆಯಾಯಿತು ನಾಭಿಯಿಂ ಕೆಳ ಗೆರಗುವುದು ಗದೆಯಿಂದ ಸಲ್ಲದು ಶಸ್ತ್ರವಿದ್ಯೆಯಲಿ ಅರಿಕೆಯಿಂದನ್ಯಾಯವೀ ಜಗ ವರಿಯೆ ನಮ್ಮದು ತಾಯೆ ನೀ ಮನ ಮುರಿಯದವಧರಿಸುವಡೆ ಬಿನ್ನಹವೆಂದನಾ ಭೀಮ

horisuvaḍe duṣkīrti nammali horigeyāyitu nābhiyiṃ keḷa geraguvudu gadeyiṃda salladu śastravidyeyali arikeyiṃdanyāyavī jaga variye nammadu tāye nī mana muriyadavadharisuvaḍe binnahaveṃdanā bhīma

Report an error

ಅರಗಿನರಮನೆ ಕೊಂಡವೆಮ್ಮೈ ವರು ಸಮಿತ್ತುಗಳಾ ಸುಯೋಧನ ಪರಮಯಜಮಾನನು ಜಯಾಧ್ವರ ವಿಧಿಯ ಪೂರ‍್ವವನು ಕುರುನೃಪತಿಯನುಭವಿಸಿದನು ತ ಚ್ಚರಿತವೇನನ್ಯಾಯಪಥವೇ ಧುರದೊಳೆಮಗನ್ಯಾಯವೈಸಲೆ ದೈವಕೃತವೆಂದ

araginaramane koṃḍavemmai varu samittugaḷā suyōdhana paramayajamānanu jayādhvara vidhiya pūrvavanu kurunr̥patiyanubhavisidanu ta ccaritavēnanyāyapathavē dhuradoḷemaganyāyavaisale daivakr̥taveṃda

Report an error

ಕಪಟದಲಿ ಜೂಜಾಡಿ ರಾಜ್ಯವ ನಪಹರಿಸಿದಡೆ ಧರ್ಮ ನಿಮ್ಮದು ಕೃಪಣತೆಯ ನಾನೇನ ಹೇಳುವೆನಾ ಸುಯೋಧನನ ದ್ರುಪದಪುತ್ರಿಯ ಗಾಢ ಗರುವಿಕೆ ಗುಪಹತಿಯ ಮಾಡುವುದು ಧರ್ಮದ ವಿಪುಳ ಪಥ ನಿಮ್ಮದು ಮಹಾಧರ್ಮಜ್ಞರಹಿರೆಂದ

kapaṭadali jūjāḍi rājyava napaharisidaḍe dharma nimmadu kr̥paṇateya nānēna hēḷuvenā suyōdhanana drupadaputriya gāḍha garuvike gupahatiya māḍuvudu dharmada vipuḷa patha nimmadu mahādharmajñarahireṃda

Report an error

ಲಲನೆ ಋತುಮತಿಯೆಂದಡೆಯು ಸಭೆ ಗೆಳೆದು ತಂದವರಧಿಕಸಜ್ಜನ ರಳಿಕುಳಾಳಿಕೆಯುಟ್ಟ ಸೀರೆಯನೂರ ಮಧ್ಯದಲಿ ಸುಲಿಸಿದರು ಧಾರ್ಮಿಕರು ತಾವೇ ಖಳರು ನೀವೇ ಸುಜನರೆಮ್ಮೀ ಸ್ಖಲಿತವನು ನೀವಿನ್ನು ಸೈರಿಸಿ ತಾಯೆ ನಮಗೆಂದ

lalane r̥tumatiyeṃdaḍeyu sabhe geḷedu taṃdavaradhikasajjana raḷikuḷāḷikeyuṭṭa sīreyanūra madhyadali sulisidaru dhārmikaru tāvē khaḷaru nīvē sujanaremmī skhalitavanu nīvinnu sairisi tāye namageṃda

Report an error

ಕದನವಿಜಯದ ಭಂಗಿ ತಲೆಗೇ ರಿದುದೊ ಮೇಲಂಕಣದಲೊಡವು ಟ್ಟಿದನ ನೆತ್ತರುಗುಡಿಹಿ ನಿನ್ನೊಡನೆನಗೆ ಮಾತೇನು ಇದಿರಲಿರದಿರು ಸಾರು ಕರೆ ಧ ರ್ಮದ ವಿಡಂಬದ ಧರ್ಮಪುತ್ರನ ಹದನ ಕೇಳುವೆನೆನುತ ಕಳವಳಿಸಿದಳು ಗಾಂಧಾರಿ

kadanavijayada bhaṃgi talegē ridudo mēlaṃkaṇadaloḍavu ṭṭidana nettaruguḍihi ninnoḍanenage mātēnu idiraliradiru sāru kare dha rmada viḍaṃbada dharmaputrana hadana kēḷuvenenuta kaḷavaḷisidaḷu gāṃdhāri

Report an error

ಧರಣಿಪತಿ ಕೇಳ್ ಸುಬಲಜೆಯ ನಿ ಷ್ಠುರದ ನುಡಿಯಲಿ ನಡುಗಿ ಭೂಪತಿ ಕರವ ಮುಗಿದತಿವಿನಯಭರದಲಿ ಬಾಗಿ ಭೀತಿಯಲಿ ಕರುಣಿಸೌ ಗಾಂಧಾರಿ ನಿರ್ಮಳ ಕುರುಕುಲಾನ್ವಯಜನನಿ ಕೋಪ ಸ್ಫುರಣದಲಿ ಶಪಿಸೆನಗೆ ಶಾಪಾರುಹನು ತಾನೆಂದ

dharaṇipati kēḷ subalajeya ni ṣṭhurada nuḍiyali naḍugi bhūpati karava mugidativinayabharadali bāgi bhītiyali karuṇisau gāṃdhāri nirmaḷa kurukulānvayajanani kōpa sphuraṇadali śapisenage śāpāruhanu tāneṃda

Report an error

ಶಾಪವನು ನೀ ಹೆಸರಿಸೌ ಸ ರ್ವಾಪರಾಧಿಗಳಾವು ನಿಮ್ಮಯ ಕೋಪ ತಿಳಿಯಲಿ ತಾಯೆ ಫಲಿಸಲಿ ಬಂಧುವಧೆ ನಮಗೆ ನೀ ಪತಿವ್ರತೆ ನಿನ್ನ ಖತಿ ಜೀ ವಾಪಹಾರವು ತಮಗೆ ನಿಮ್ಮನು ತಾಪವಡಗಲಿ ತನ್ನನುರುಹೆಂದೆರಗಿದನು ಪದಕೆ

śāpavanu nī hesarisau sa rvāparādhigaḷāvu nimmaya kōpa tiḷiyali tāye phalisali baṃdhuvadhe namage nī pativrate ninna khati jī vāpahāravu tamage nimmanu tāpavaḍagali tannanuruheṃderagidanu padake

Report an error

ನನೆದುದಂತಃಕರಣ ಕರುಣಾ ವಿನುತ ರಸದಲಿ ಖತಿಯ ಝಳ ಝೊ ಮ್ಮಿನಲಿ ಜಡಿದುದು ಜಾರಿತಗ್ಗದ ಪುತ್ರಶತಶೋಕ ಜನಪ ಕೇಳೈ ರಾಜಸದ ಸಂ ಜನಿತ ತಾಮಸಬೀಜಶೇಷದ ವನಜಮುಖಿ ನೋಡಿದಳು ನಖಪಂಕ್ತಿಗಳನವನಿಪನ

nanedudaṃtaḥkaraṇa karuṇā vinuta rasadali khatiya jhaḷa jho mminali jaḍidudu jāritaggada putraśataśōka janapa kēḷai rājasada saṃ janita tāmasabījaśēṣada vanajamukhi nōḍidaḷu nakhapaṃktigaḷanavanipana

Report an error

ಉರಿದವರಸನ ನಖನಿಕರ ಹೊಗೆ ವೆರಸಿ ಕೌರಿಡಲೋಡಿ ಹೊಕ್ಕರು ನರವೃಕೋದರರಸುರರಿಪುವಿನ ಪಶ್ಚಿಮಾಂಗದಲಿ ಹರಿಯಭಯಕರವೆತ್ತಿ ಯಮಜಾ ದ್ಯರನು ಸಂತೈಸಿದನು ರೋಷ ಸ್ಫುರಣವಡಗಿತು ಸುಬಲಸುತೆಗಿನ್ನಂಜಬೇಡೆಂದ

uridavarasana nakhanikara hoge verasi kauriḍalōḍi hokkaru naravr̥kōdararasuraripuvina paścimāṃgadali hariyabhayakaravetti yamajā dyaranu saṃtaisidanu rōṣa sphuraṇavaḍagitu subalasuteginnaṃjabēḍeṃda

Report an error

ಕೃತಕ ಭೀಮನ ಕೊಂಡು ಮುಳುಗಿತು ಕ್ಷಿತಿಪತಿಯ ರೋಷಾಗ್ನಿಯಾತನ ಸತಿಯ ಖತಿ ಮಗ್ಗಿತು ಮಹೀಶನ ನಖಮರೀಚಿಯಲಿ ಜಿತವಿರೋಧವ್ಯಾಪ್ತಿ ಬಹಳ ವ್ಯತಿಕರದೊಳಾಯ್ತೆಂದು ಲಕ್ಷ್ಮೀ ಪತಿ ನರೇಂದ್ರನ ಸಂತವಿಟ್ಟನು ಸಾರವಚನದಲಿ

kr̥taka bhīmana koṃḍu muḷugitu kṣitipatiya rōṣāgniyātana satiya khati maggitu mahīśana nakhamarīciyali jitavirōdhavyāpti bahaḷa vyatikaradoḷāyteṃdu lakṣmī pati narēṃdrana saṃtaviṭṭanu sāravacanadali

Report an error

ಭೀತಿ ಬೇಡೆಲೆ ಮಕ್ಕಳಿರ ನಿ ರ್ಧೂತ ಧರ್ಮಸ್ಥಿತಿಗಳನ್ವಯ ಘಾತಕರು ತಮ್ಮಿಂದ ತಾವಳಿದರು ರಣಾಗ್ರದಲಿ ನೀತಿಯಲಿ ನೀವಿನ್ನು ಪಾಲಿಸಿ ಭೂತಳವನುರೆ ಕಳಿದ ಬಂಧು ವ್ರಾತಕುದಕವನೀವುದೆಂದಳು ನೃಪಗೆ ಗಾಂಧಾರಿ

bhīti bēḍele makkaḷira ni rdhūta dharmasthitigaḷanvaya ghātakaru tammiṃda tāvaḷidaru raṇāgradali nītiyali nīvinnu pālisi bhūtaḷavanure kaḷida baṃdhu vrātakudakavanīvudeṃdaḷu nr̥page gāṃdhāri

Report an error

ಅನುನಯವ ರಚಿಸಿದಳು ಕೌರವ ಜನನಿ ಲೇಸಾಯ್ತೆನುತ ಬಂದರು ವಿನಯದಲಿ ಮೆಯ್ಯಿಕ್ಕಿದರು ನಿಜಮಾತೆಯಂಘ್ರಿಯಲಿ ನನೆದಳಕ್ಷಿಪಯಃಪ್ರವಾಹದೊ ಳನಿಬರನು ತೆಗೆದಪ್ಪಿ ಕುಂತೀ ವನಿತೆ ಸಂತೈಸಿದಳು ನಯದಲಿ ತನ್ನ ನಂದನರ

anunayava racisidaḷu kaurava janani lēsāytenuta baṃdaru vinayadali meyyikkidaru nijamāteyaṃghriyali nanedaḷakṣipayaḥpravāhado ḷanibaranu tegedappi kuṃtī vanite saṃtaisidaḷu nayadali tanna naṃdanara

Report an error

ಏಳು ಧರ್ಮಜ ಪುತ್ರಶೋಕ ವ್ಯಾಳವಿಷಮೂರ್ಛಿತೆಯಲಾ ಪಾಂ ಚಾಲಸುತೆಯನು ತಿಳುಹಿ ಕಾಣಿಸು ಸುಬಲನಂದನೆಯ ಬಾಲೆಯರನಾ ಭಾನುಮತಿಯ ಛ ಡಾಳದುಃಖವನಪಹರಿಸು ಪಡಿ ತಾಳ ಬೇಡೆನೆ ಬಂದರನಿಬರು ದ್ರೌಪದಿಯ ಹೊರೆಗೆ

ēḷu dharmaja putraśōka vyāḷaviṣamūrchiteyalā pāṃ cālasuteyanu tiḷuhi kāṇisu subalanaṃdaneya bāleyaranā bhānumatiya cha ḍāḷaduḥkhavanapaharisu paḍi tāḷa bēḍene baṃdaranibaru draupadiya horege

Report an error

ಕರೆದು ತಂದರು ವಿಗತಲೋಚನ ನರಸಿಯನು ಕಾಣಿಸಿದರತ್ತೆಯ ಚರಣಯುಗಳದೊಳೆರಗೆ ಹಿಡಿದೆತ್ತಿದಳು ಗಾಂಧಾರಿ ಮರುಳು ಮಗಳೆ ಕುಮಾರ ವರ್ಗದ ಮರಣ ಸೊಸೆಯತ್ತೆಯರಿಗೊಂದೇ ಪರಿ ವೃಥಾ ವ್ಯಥೆಯೇಕೆನುತ ಸಂತೈಸಿದಳು ಸತಿಯ

karedu taṃdaru vigatalōcana narasiyanu kāṇisidaratteya caraṇayugaḷadoḷerage hiḍidettidaḷu gāṃdhāri maruḷu magaḷe kumāra vargada maraṇa soseyatteyarigoṃdē pari vr̥thā vyatheyēkenuta saṃtaisidaḷu satiya

Report an error

ಸರಿಯಲೌ ಸುತಶೋಕ ನಮ್ಮಿ ಬ್ಬರಿಗೆ ನಮ್ಮೊಳುವೆರಸಿ ವೈರೋ ತ್ಕರವಿಸಂಸ್ಥುಳರಣವಿಧಾನವ ನಮ್ಮೊಳಗೆ ರಚಿಸಿ ಎರಡು ಬಲದಲಿ ಸಕಲ ಭೂಮೀ ಶ್ವರರ ಚಾತುರ್ಬಲವನುಪಸಂ ಹರಿಸಿದಾತನು ತಾನೆ ಗದುಗಿನ ವೀರನಾರಯಣ

sariyalau sutaśōka nammi bbarige nammoḷuverasi vairō tkaravisaṃsthuḷaraṇavidhānava nammoḷage racisi eraḍu baladali sakala bhūmī śvarara cāturbalavanupasaṃ harisidātanu tāne gadugina vīranārayaṇa

Report an error

Illustration: Verse & Place (Project-owned).