ರಾಯಪರಬಲ ಮದನಹರ ರಿಪು ರಾಯಕುವರರು ಸಹಿತ ಪಾಂಡವ ರಾಯಕಟಕವ ಕೊಂದನಶ್ವತ್ಥಾಮ ರಜನಿಯಲಿ
rāyaparabala madanahara ripu rāyakuvararu sahita pāṃḍava rāyakaṭakava koṃdanaśvatthāma rajaniyali
ಗದಾ ಪರ್ವ — ಸಂಧಿ ೯ · ಗದಾ ಪರ್ವ — ಸಂಧಿ ೯
gadā parva — saṃdhi 9
The complete gada parva · sandhi 9 in Kannada.
44 passagesKannada with transliteration
Invocation
ರಾಯಪರಬಲ ಮದನಹರ ರಿಪು ರಾಯಕುವರರು ಸಹಿತ ಪಾಂಡವ ರಾಯಕಟಕವ ಕೊಂದನಶ್ವತ್ಥಾಮ ರಜನಿಯಲಿ
rāyaparabala madanahara ripu rāyakuvararu sahita pāṃḍava rāyakaṭakava koṃdanaśvatthāma rajaniyali
ಕೇಳು ಧೃತರಾಷ್ಟ್ರಾವನಿಪ ನಿ ನ್ನಾಳ ಚಿತ್ತದ ಚಟುಳಪಣದ ಚ ಡಾಳತನವನು ಸಂಗರದೊಳುದ್ದಾಮ ಸತ್ವದಲಿ ಪಾಳೆಯವ ಸಾರಿದರು ವಿಟಪ ಲ ತಾಳಿ ವಿಶ್ರಮ ತಿಮಿರಗಹನವಿ ಶಾಲವಟಕುಜವಿರಲು ಕಂಡರು ನಿಲಿಸಿದರು ರಥವ
kēḷu dhr̥tarāṣṭrāvanipa ni nnāḷa cittada caṭuḷapaṇada ca ḍāḷatanavanu saṃgaradoḷuddāma satvadali pāḷeyava sāridaru viṭapa la tāḷi viśrama timiragahanavi śālavaṭakujaviralu kaṃḍaru nilisidaru rathava
ನಿಲುವೆವಿಲ್ಲಿ ವಿರೋಧಿಸಂತತಿ ಯುಲುಹನಾಲಿಸಬಹುದು ಕೋಟಾ ವಳಯವಿದೆ ಹತ್ತಿರೆಯೆನುತ ಗುರುಸೂನು ರಥವಿಳಿಯೆ ಇಳಿದರಿಬ್ಬರು ಸೂತರಿಗೆ ಕೈ ಕೊಳಿಸಿದರು ಕುದುರೆಗಳನಾ ಕಲು ನೆಲದೊಳೊರಗಿದರವರು ಸಮರಶ್ರಮದ ಭಾರದಲಿ
niluvevilli virōdhisaṃtati yuluhanālisabahudu kōṭā vaḷayavide hattireyenuta gurusūnu rathaviḷiye iḷidaribbaru sūtarige kai koḷisidaru kuduregaḷanā kalu neladoḷoragidaravaru samaraśramada bhāradali
ಒಳಗೆ ತೊಳಲಿಕೆಯುಕ್ಕಡಕೆ ಕಳ ವಳಿಸಿ ಹಾಯಿದರೊಮ್ಮೆ ಮತ್ತಂ ತೆಲೆಮಿಡುಕದಾಲಿಸಿ ನಿಧಾನಿಸಿ ಸಾರಿದರು ಮರನ ಬಳಲಿಕೆಯ ಬೇಸರಿನೊಳಾ ಕೃಪ ಮಲಗಿದನು ಕೃತವರ್ಮನೊಲೆದಾ ಗುಳಿಸಿ ತೂಕಡಿಸಿದನು ತೆಗೆದುದು ನಿದ್ರೆ ತನುಮನವ
oḷage toḷalikeyukkaḍake kaḷa vaḷisi hāyidaromme mattaṃ telemiḍukadālisi nidhānisi sāridaru marana baḷalikeya bēsarinoḷā kr̥pa malagidanu kr̥tavarmanoledā guḷisi tūkaḍisidanu tegedudu nidre tanumanava
ಕುಸಿದು ಜೊಮ್ಮಿನ ಜಾಡ್ಯದಲಿ ಝೊಂ ಪಿಸಿದರಿಬ್ಬರು ರಾಯಗರುಡಿಯ ಜಸದ ರಹಿಯಲಿ ಸ್ವಾಮಿಕಾರ‍್ಯದ ಹೊತ್ತಹೊರಿಗೆಯಲಿ ಉಸುರು ಮಿಡುಕದೆ ನಿದ್ರೆ ನೆನಹಿನ ಮುಸುಕನುಗಿಯದೆಯಿಷ್ಟಸಿದ್ಧಿಯ ವಿಷಮ ಸಮಸಂಧಿಗಳ ಸರಿವಿನೊಳಿರ್ದನಾ ದ್ರೌಣಿ
kusidu jommina jāḍyadali jhoṃ pisidaribbaru rāyagaruḍiya jasada rahiyali svāmikāryada hottahorigeyali usuru miḍukade nidre nenahina musukanugiyadeyiṣṭasiddhiya viṣama samasaṃdhigaḷa sarivinoḷirdanā drauṇi
ಭಾಗ ಬೀತುದು ರಜನಿಯಲಿ ಸರಿ ಭಾಗವಿದ್ದುದು ಮೇಲೆ ತತ್‌ಕ್ಷಣ ಗೂಗೆ ಬಂದುದದೊಂದು ವಟಕುಜದಗ್ರಭಾಗದಲಿ ಕಾಗೆಗಳ ಗೂಡುಗಳ ಹೊಯ್ದು ವಿ ಭಾಗಿಸಿತು ತುಂಡದಲಿ ಬಿದ್ದವು ಕಾಗೆ ಸುಭಟನ ಸಮ್ಮುಖದಲಿ ಸಹಸ್ರಸಂಖ್ಯೆಯಲಿ
bhāga bītudu rajaniyali sari bhāgaviddudu mēle tatkṣaṇa gūge baṃdudadoṃdu vaṭakujadagrabhāgadali kāgegaḷa gūḍugaḷa hoydu vi bhāgisitu tuṃḍadali biddavu kāge subhaṭana sammukhadali sahasrasaṃkhyeyali
ಇದು ಮದೀಯ ಮನೋರಥದ ಸೌ ಹೃದದವೊಲು ಸಂಕಲ್ಪಕರ‍್ಯಾ ಭ್ಯುದಯ ಸೂಚಕವಾಯ್ತು ನಿದ್ರಾಮುದ್ರಿತೇಕ್ಷಣರ ಪದವ ಹಿಡಿದಲ್ಲಾಡಿಸಿದಡೆ ಮೈ ಬೆದರುತೇನೇನೆನುತ ನಿದ್ರಾ ಮದ ವಿಘೂರ್ಣನವಡಗಿ ಕುಳ್ಳಿರ್ದರು ಮಹಾರಥರು
idu madīya manōrathada sau hr̥dadavolu saṃkalpakaryā bhyudaya sūcakavāytu nidrāmudritēkṣaṇara padava hiḍidallāḍisidaḍe mai bedarutēnēnenuta nidrā mada vighūrṇanavaḍagi kuḷḷirdaru mahāratharu
ಏನು ಗುರುಸುತ ಕಾರ‍್ಯದನುಸಂ ಧಾನವೇನೆನೆ ವಾಯಸಂಗಳ ನಾ ನಿಶಾಟನನಿರಿವುತದೆ ಗೂಡುಗಳ ಗಬ್ಬರಿಸಿ ಈ ನಿದರುಶನದಿಂದ ಪಾಂಡವ ಸೇನೆಯನು ಕಗ್ಗೊಲೆಯೊಳಗೆ ಕೊಲ ಲೇನು ಹೊಲ್ಲೆಹ ಮಾವ ಎಂದನು ಗುರುಸುತನು ಕೃಪಗೆ
ēnu gurusuta kāryadanusaṃ dhānavēnene vāyasaṃgaḷa nā niśāṭananirivutade gūḍugaḷa gabbarisi ī nidaruśanadiṃda pāṃḍava sēneyanu kaggoleyoḷage kola lēnu holleha māva eṃdanu gurusutanu kr̥page
ಲೇಸಲೈ ಕೃತವರ್ಮ ಬಳಿಕೇ ನಾಸುರದ ಕಗ್ಗೊಲೆಗೆ ರಾಜಾ ದೇಶದಲಿ ನಾವ್ ಬಂದೆವೀ ಪಾಂಡವರ ಪಾಳೆಯಕೆ ಘಾಸಿಯಾಗರು ಪಾಂಡುಸುತರಿಗೆ ವಾಸುದೇವನ ಕಾಹು ಘನ ಕಾ ಳಾಸ ತಪ್ಪಿದ ಬಳಿಕ ನಮಗಪಕೀರ್ತಿ ಬಹುದೆಂದ
lēsalai kr̥tavarma baḷikē nāsurada kaggolege rājā dēśadali nāv baṃdevī pāṃḍavara pāḷeyake ghāsiyāgaru pāṃḍusutarige vāsudēvana kāhu ghana kā ḷāsa tappida baḷika namagapakīrti bahudeṃda
ಕ್ರತುಹರನ ಸಮಜೋಳಿ ಗಂಗಾ ಸುತನ ಜಯಿಸಿದರವರ ತೂಕದ ವಿತತಬಲರೈ ಭಾವನವರೊಗ್ಗಿದರು ದಿವಿಜರಲಿ ಅತಿರಥರೊಳಗ್ಗಳೆಯ ರಾಧಾ ಸುತ ಸುಯೋಧನ ಮಾದ್ರಪತಿಯೀ ವ್ಯತಿಕರದೊಳೇನಾದರಿದು ಮುರಹರನ ಕೃತಿಯೆಂದ
kratuharana samajōḷi gaṃgā sutana jayisidaravara tūkada vitatabalarai bhāvanavaroggidaru divijarali atiratharoḷaggaḷeya rādhā suta suyōdhana mādrapatiyī vyatikaradoḷēnādaridu muraharana kr̥tiyeṃda
ಇರಿಸನಿಲ್ಲಿ ಮುರಾರಿ ಕೌಂತೇ ಯರನಿದೊಂದು ನಿಧಾನ ಮೇಣಿ ಲ್ಲಿರಿಸಿದಡೆ ಕೊಲಲೀಯನಡ್ಡೈಸುವನು ಚಕ್ರದಲಿ ಇರುಳು ಹಗಲಡವಿಯಲಿ ಮನೆಯಲಿ ಶರಧಿಯಲಿ ಪರ್ವತದಲಗ್ನಿಯ ಲಿರಲಿ ತನ್ನವರಲ್ಲಿ ಹರಿಗವಧಾನ ಬಲುಹೆಂದ
irisanilli murāri kauṃtē yaranidoṃdu nidhāna mēṇi llirisidaḍe kolalīyanaḍḍaisuvanu cakradali iruḷu hagalaḍaviyali maneyali śaradhiyali parvatadalagniya lirali tannavaralli harigavadhāna baluheṃda
ಮರಹಿನಲಿ ಮುಡುಹುವುದು ಧರ್ಮದ ಹೊರಿಗೆಯಲ್ಲದು ನಿದ್ರೆಗೈದರ ನಿರಿವುದೇನಿದು ಪಂಥವೇ ಪೌರಾಣಮಾರ್ಗದಲಿ ಅರಿಯದಾರಂಭಿಸಿದೆವಿದರಲಿ ಪರಿಸಮಾಪ್ತಿಯ ಕಂಡೆವಾದಡೆ ನೆರೆ ಕೃತಾರ್ಥರು ವಿಘ್ನಶತವಡ್ಡೈಸದಿರವೆಂದ
marahinali muḍuhuvudu dharmada horigeyalladu nidregaidara nirivudēnidu paṃthavē paurāṇamārgadali ariyadāraṃbhisidevidarali parisamāptiya kaṃḍevādaḍe nere kr̥tārtharu vighnaśatavaḍḍaisadiraveṃda
ತಪ್ಪದಾಚಾರಿಯನ ನುಡಿ ಮೇ ಲಪ್ಪುದನು ದೈವಾಭಿಯೋಗದೊ ಳೊಪ್ಪವಿಡುವುದು ರಜನಿಯಲಿ ಕಳ್ಳೇರ ಕದನದಲಿ ಒಪ್ಪದಿದು ಸೌಭಟ ವಿಧಾನಕೆ ನೊಪ್ಪಿತಹುದಿದರಿಂದ ರಿಪುಗಳ ತಪ್ಪಿಸುವನಸುರಾರಿಯೆಂದನು ನಗುತ ಕೃತವರ್ಮ
tappadācāriyana nuḍi mē lappudanu daivābhiyōgado ḷoppaviḍuvudu rajaniyali kaḷḷēra kadanadali oppadidu saubhaṭa vidhānake noppitahudidariṃda ripugaḷa tappisuvanasurāriyeṃdanu naguta kr̥tavarma
ಆದಡಿರಿ ನೀವಿಬ್ಬರಿಲ್ಲಿ ವಿ ವಾದ ನಿಮ್ಮೊಡನೇಕೆ ಜನಪರಿ ವಾದ ಭಯವೆಮಗಿಲ್ಲ ಸಾರಥಿ ರಥವ ತಾಯೆನುತ ಕೈದುಗಳ ಸಂವರಿಸಿ ರಥದಲಿ ಹಾಯ್ದು ಹೊರವಡೆ ಭೋಜಕೃಪರನು ವಾದರೆಮಗೇನೆನುತ ಬಂದರು ಪಾಳೆಯದ ಹೊರಗೆ
ādaḍiri nīvibbarilli vi vāda nimmoḍanēke janapari vāda bhayavemagilla sārathi rathava tāyenuta kaidugaḷa saṃvarisi rathadali hāydu horavaḍe bhōjakr̥paranu vādaremagēnenuta baṃdaru pāḷeyada horage
ಮುರಿದು ಕೋಟೆಯನೊಂದು ಕಡೆಯಲಿ ತೆರಹುಮಾಡಿ ಮಹಾರಥರು ಜನ ವರಿಯದವೊಲೊಳಹೊಕ್ಕು ಹೆಬ್ಬಾಗಿಲಲಿ ರಥವಿಳಿದು ತರವಳರ ತೊಳಲಿಕೆಯ ಮೇಲೆ ಚ್ಚರಿಕೆ ಮಸುಳಿಸೆ ಮಧ್ಯರಾತ್ರಿಯೊ ಳಿರಿತದಂಘವಣೆಯಲಿ ಪರುಠವಿಸಿದನು ಗುರುಸೂನು
muridu kōṭeyanoṃdu kaḍeyali terahumāḍi mahāratharu jana variyadavoloḷahokku hebbāgilali rathaviḷidu taravaḷara toḷalikeya mēle ccarike masuḷise madhyarātriyo ḷiritadaṃghavaṇeyali paruṭhavisidanu gurusūnu
ಎರಡು ಬಾಗಿಲ ಪಾಳೆಯಕೆ ಕೃಪ ನಿರಲಿ ಮೂಡಲು ಪಶ್ಚಿಮಾಂಗದೊ ಳಿರಲಿ ಕೃತವರ್ಮಕನು ಬಾಗಿಲೊಳಾಂತ ರಿಪುಜನವ ಕರಿ ತುರಗ ರಥ ಪತ್ತಿಗಳ ಸಂ ಹರಿಸುವುದು ನೀವಿಲ್ಲಿ ಮಧ್ಯದೊ ಳರಸು ಮೊತ್ತಕೆ ಮಿತ್ತು ತಾನಹೆನೆಂದು ಕೈಗೊಂಡ
eraḍu bāgila pāḷeyake kr̥pa nirali mūḍalu paścimāṃgado ḷirali kr̥tavarmakanu bāgiloḷāṃta ripujanava kari turaga ratha pattigaḷa saṃ harisuvudu nīvilli madhyado ḷarasu mottake mittu tānaheneṃdu kaigoṃḍa
ಎರಡು ಬಾಗಿಲೊಳಿವರನಿಬ್ಬರ ನಿರಿಸಿ ಚಾಪವ ಮಿಡಿದು ಬಾಣವ ತಿರುಹುತೊಬ್ಬನೆ ರಥವ ಬಿಟ್ಟನು ರಾಜಬೀದಿಯಲಿ ಅರಸ ಕೇಳದುಭುತವನಾ ನಡು ವಿರುಳು ನೃಪವೀಥಿಯಲಿ ನಿಂದುದು ಧರೆಗೆ ಗಗನಕೆ ಕೀಲನಿಕ್ಕಿದವೊಲು ಮಹಾಭೂತ
eraḍu bāgiloḷivaranibbara nirisi cāpava miḍidu bāṇava tiruhutobbane rathava biṭṭanu rājabīdiyali arasa kēḷadubhutavanā naḍu viruḷu nr̥pavīthiyali niṃdudu dharege gaganake kīlanikkidavolu mahābhūta
ನಿಟಿಲನಯನದ ಜಡಿವ ಜೂಟದ ಜಟೆಯ ಫೂತ್ಕೃತಿಯುರಿಯ ನಾಸಾ ಪುಟದ ವೈಕಕ್ಷಕದ ವಿಷಧರಪತಿಯ ವಾಸುಗಿಯ ಚಟುಳ ಚಪಳಪ್ರಭೆಯ ಘನಸಂ ಘಟಿತವೆನೆ ಗರ್ಗರದ ಘೋರ ಸ್ಫುಟರವದ ರೌದ್ರಾಭಿರತಿಯಲಿ ರಂಜಿಸಿತು ಭೂತ
niṭilanayanada jaḍiva jūṭada jaṭeya phūtkr̥tiyuriya nāsā puṭada vaikakṣakada viṣadharapatiya vāsugiya caṭuḷa capaḷaprabheya ghanasaṃ ghaṭitavene gargarada ghōra sphuṭaravada raudrābhiratiyali raṃjisitu bhūta
ಬೆಚ್ಚಿದನೆ ಭಾರಣೆಯ ಭೂತವ ನೆಚ್ಚು ಬೊಬ್ಬಿರಿದಾರಿದನು ಮಗು ಳೆಚ್ಚನೈದರೇಳುನೂರೈನೂರು ಸಾವಿರವ ಎಚ್ಚು ಹಾಯ್ದಂಬುಗಳು ಭೂತದ ಬಿಚ್ಚುಗಂಗಳ ಕೊಂಡದುರಿಯಲಿ ಬಚ್ಚಿಸಿದ ಗರಿ ಸೀದು ಸೀಕರಿಯೋಗಿ ನಿಮಿಷದಲಿ
beccidane bhāraṇeya bhūtava neccu bobbiridāridanu magu ḷeccanaidarēḷunūrainūru sāvirava eccu hāydaṃbugaḷu bhūtada biccugaṃgaḷa koṃḍaduriyali baccisida gari sīdu sīkariyōgi nimiṣadali
ಉಗಿದು ಮಂತ್ರಾಸ್ತ್ರವನು ತಿರುವಿಂ ದುಗುಳಿಚಿದಡಾ ಭೂತದಂಘ್ರಿಗೆ ಮುಗಿದ ಕೈಗಳಲೆರಗಿದರು ಶಸ್ತ್ರಾಧಿದೇವಿಯರು ಉಗಿದನೊರೆಯಲಡಾಯುಧವನು ಬ್ಬೆಗದಲಪ್ಪಳಿಸಿದಡೆ ಕಯ್ಯಿಂ ಜಗುಳ್ದು ಬಿದ್ದುದು ಝಂಕೆಯದ್ದುದು ಭಯದ ಝಾಡಿಯಲಿ
ugidu maṃtrāstravanu tiruviṃ duguḷicidaḍā bhūtadaṃghrige mugida kaigaḷaleragidaru śastrādhidēviyaru ugidanoreyalaḍāyudhavanu bbegadalappaḷisidaḍe kayyiṃ jaguḷdu biddudu jhaṃkeyaddudu bhayada jhāḍiyali
ಕಾಕಮುಖದ ಮಯೂರ ಟಿಟ್ಟಿಭ ಕೋಕವದನದ ಹಂಸ ಕಂಕ ಬ ಳಾಕವಕ್ತ್ರದ ಗೌಜು ಗೀಜಗ ಚಾತಕಾನನದ ಘೂಕಮುಖದ ಸೃಗಾಲ ಶಾರ್ದೂ ಲಾಕೃತಿಯ ಬಹುವಿಧದ ರೂಪದ ನೇಕ ಭೂತವ್ರಾತ ನೆರೆದುದು ಭೂಪ ಕೇಳೆಂದ
kākamukhada mayūra ṭiṭṭibha kōkavadanada haṃsa kaṃka ba ḷākavaktrada gauju gījaga cātakānanada ghūkamukhada sr̥gāla śārdū lākr̥tiya bahuvidhada rūpada nēka bhūtavrāta neredudu bhūpa kēḷeṃda
ಇದು ವಿರೂಪಾಕ್ಷನ ಮನಃಕ್ಷೋ ಭದ ವಿಕಾರವಲಾ ಪಿನಾಕಿಯ ಪದವ ಹಿಡಿದೋಲೈಸುವೆನು ರ‍್ವಾಂಗಯಜ್ಞದಲಿ ಇದಕುಪಾಯವ ಬಲ್ಲೆನೆಂದು ಬ್ಬಿದನು ಬೊಬ್ಬಿರಿದಾರಿ ತೋಡಿದ ನುದರವಹ್ನಿಯನಿದಿರೊಳಗ್ನಿತ್ರಯವ ನಿರ‍್ಮಿಸಿದ
idu virūpākṣana manaḥkṣō bhada vikāravalā pinākiya padava hiḍidōlaisuvenu rvāṃgayajñadali idakupāyava balleneṃdu bbidanu bobbiridāri tōḍida nudaravahniyanidiroḷagnitrayava nirmisida
ಸೆರೆನರಂಗಳ ದರ್ಭೆ ಮಿದುಳಿನ ಚರು ಕಪಾಲದ ಪಾತ್ರೆಯೆಲುವಿನ ಬೆರಳ ಸಮಿಧೆ ವಿಶಾಳದನುಮಜ್ಜೆಗಳ ಪೃಷದಾಜ್ಯ ಅರುಣಜಲದಾಜ್ಯಾಹುತಿಯ ವಿ ಸ್ತರವ ವಿರಚಿಸಿ ನಿಗಮಮಂತ್ರೋ ಚ್ಚರಣೆಯಲಿ ಪೂರ್ಣಾಹುತಿಗೆ ತನ್ನೊಡಲನೊಪ್ಪಿಸಿದ
serenaraṃgaḷa darbhe miduḷina caru kapālada pātreyeluvina beraḷa samidhe viśāḷadanumajjegaḷa pr̥ṣadājya aruṇajaladājyāhutiya vi starava viracisi nigamamaṃtrō ccaraṇeyali pūrṇāhutige tannoḍalanoppisida
ಮೆಚ್ಚಿದನು ಮದನಾರಿ ಹೋಮದ ಕಿಚ್ಚು ತುಡುಕದ ಮುನ್ನ ತೆಗೆದನು ಬಿಚ್ಚುಜಡೆಗಳ ಜಹ್ನುಸುತೆಯಲಿ ನಾದಿದನು ಭಟನ ಎಚ್ಚ ಶರವಿದೆ ಖಡ್ಗವಿದೆ ಕೋ ಮುಚ್ಚುಮರೆಯೇಕಿನ್ನು ಸುತರಲಿ ಚೊಚ್ಚಿಲವ ನೀನೆಂದು ಮೈದಡವಿದನು ಶಶಿಮೌಳಿ
meccidanu madanāri hōmada kiccu tuḍukada munna tegedanu biccujaḍegaḷa jahnusuteyali nādidanu bhaṭana ecca śaravide khaḍgavide kō muccumareyēkinnu sutarali coccilava nīneṃdu maidaḍavidanu śaśimauḷi
ಸಾರಥಿಗಳೊಳಗೆನಿಸಿದನು ಭೂ ಭಾರಭಂಜಕನಸುರಹರನೀ ಭಾರ ಬಿದ್ದುದು ನಮಗೆ ಪಾಂಚಾಲಪ್ರಭದ್ಧಕರ ತೀರಿತಿದು ನಿಮ್ಮಲ್ಲಿ ನಮ್ಮ ವಿ ಹಾರವೊಡಬೆಚ್ಚಿತು ರಿಪುವ್ರಜ ಮಾರಣಾಧ್ವರಕೃತಿಯ ನೀ ಕೈಕೊಳಿಸು ಹೋಗೆಂದ
sārathigaḷoḷagenisidanu bhū bhārabhaṃjakanasuraharanī bhāra biddudu namage pāṃcālaprabhaddhakara tīritidu nimmalli namma vi hāravoḍabeccitu ripuvraja māraṇādhvarakr̥tiya nī kaikoḷisu hōgeṃda
ಎನೆ ಪುರಾರಿಯ ಪದಯುಗಕೆ ಗುರು ತನುಜ ಮೈಯಿಕ್ಕಿದನು ಬೀಳ್ಕೊಂ ಡನು ತಿರೋಹಿತನಾದನೀಶ್ವರನೀತನನು ಕಳುಹಿ ಧನುವ ಕೊಂಡನು ಧೂರ್ಜಟಿಯ ರೂ ಹಿನ ಮಹಾರಥ ರಥವನೇರಿದ ನನುವರದ ರೌರವವನಂಘೈಸಿದನು ರಜನಿಯಲಿ
ene purāriya padayugake guru tanuja maiyikkidanu bīḷkoṃ ḍanu tirōhitanādanīśvaranītananu kaḷuhi dhanuva koṃḍanu dhūrjaṭiya rū hina mahāratha rathavanērida nanuvarada rauravavanaṃghaisidanu rajaniyali
ಧರಣಿಪತಿ ಕೇಳ್ ರಾಜಬೀದಿಯೊ ಳುರವಣಿಸಿ ಗುರುಸೂನು ರಥದಲಿ ಬರುತ ಕಂಡನಲೈ ಯುಧಿಷ್ಠಿರ ರಾಜಮಂದಿರವ ಇರರು ಪಾಂಡವರಿಲ್ಲಿ ಮೇಣವ ರಿರಲಿ ಬಳಿಕಾರೈವೆನಯ್ಯನ ಹರಿಬ ಹೋಗಲಿ ಮುನ್ನ ಕೊಲುವೆನು ದ್ರುಪದನಂದನನ
dharaṇipati kēḷ rājabīdiyo ḷuravaṇisi gurusūnu rathadali baruta kaṃḍanalai yudhiṣṭhira rājamaṃdirava iraru pāṃḍavarilli mēṇava rirali baḷikāraivenayyana hariba hōgali munna koluvenu drupadanaṃdanana
ಎಂದು ರಾಯನ ಗುಡಿಯ ಗೂಢದ ಮಂದಿರದ ಬಲವಂಕವೀಧಿಯ ಮುಂದೆ ಧೃಷ್ಟದ್ಯುಮ್ನನರಮನೆಗಾಗಿ ವಹಿಲದಲಿ ಬಂದು ಬಾಗಿಲ ಮುರಿದು ಕಾಹಿನ ಮಂದಿಯನು ನಿಡುನಿದ್ರೆಗೈಸಿದ ನಂದು ಮಿಣ್ಣನೆ ಹೊಕ್ಕನಾತನ ಸೆಜ್ಜೆಯೋವರಿಯ
eṃdu rāyana guḍiya gūḍhada maṃdirada balavaṃkavīdhiya muṃde dhr̥ṣṭadyumnanaramanegāgi vahiladali baṃdu bāgila muridu kāhina maṃdiyanu niḍunidregaisida naṃdu miṇṇane hokkanātana sejjeyōvariya
ತೊಳತೊಳಗುವಿಕ್ಕೆಲದ ದೀಪದ ಬೆಳಗಿನಲಿ ಮಣಿರುಚಿಯ ಚಿತ್ರಾ ವಳಿಯ ಮೇಲ್ಕಟ್ಟಿನಲಿ ಲಲಿತಸ್ತರಣ ಮಧ್ಯದಲಿ ಹೊಳೆಹೊಳೆವ ನವರತ್ನಭೂಷಣ ಕಳಿತಕಾಯನ ಕಂಡು ರೋಷ ಪ್ರಳಯ ಭೈರವರೂಪನೊದೆದನು ವಾಮಪಾದದಲಿ
toḷatoḷaguvikkelada dīpada beḷaginali maṇiruciya citrā vaḷiya mēlkaṭṭinali lalitastaraṇa madhyadali hoḷehoḷeva navaratnabhūṣaṇa kaḷitakāyana kaṃḍu rōṣa praḷaya bhairavarūpanodedanu vāmapādadali
ಘಳಿಲನೆದ್ದನಿದಾರು ನಿದ್ರೆಯ ನಳಿದವನ ತಿವಿಯೆನುತ ಮುಂದಣ ವಿಳಯರುದ್ರನ ರಹಿಯ ರೌದ್ರದ ರಣಭಯಂಕರನ ನಿಲವ ಕಂಡನಡಾಯುಧವ ತಾ ಹಲಗೆಯಾವೆಡೆಯೆಂಬವನ ಮುಂ ದಲೆಯ ಹಿಡಿದಡಗೆಡಹಿ ಕುಸುಕಿರಿದರಿಯನಸಬಡಿದ
ghaḷilaneddanidāru nidreya naḷidavana tiviyenuta muṃdaṇa viḷayarudrana rahiya raudrada raṇabhayaṃkarana nilava kaṃḍanaḍāyudhava tā halageyāveḍeyeṃbavana muṃ daleya hiḍidaḍageḍahi kusukiridariyanasabaḍida
ಉಗಿದು ಬಿಲ್ಲಿನ ತಿರುವ ಕೊರಳಲಿ ಬಿಗಿಯೆ ಭಯದಲಿ ದ್ರುಪದಸುತ ಬೆರ ಳುಗಳ ಬಾಯಲಿ ಬೇಡಿಕೊಂಡನು ದ್ರೋಣನಂದನನ ಉಗಿದಡಾಯ್ದದಲೆನ್ನ ಶಿರವನು ತೆಗೆದು ಕಳೆಯೈ ಶಸ್ತ್ರಘಾತದಿ ನುಗುಳಿಸಸುವನು ತನಗೆ ವೀರಸ್ವರ್ಗವಹುದೆಂದ
ugidu billina tiruva koraḷali bigiye bhayadali drupadasuta bera ḷugaḷa bāyali bēḍikoṃḍanu drōṇanaṃdanana ugidaḍāydadalenna śiravanu tegedu kaḷeyai śastraghātadi nuguḷisasuvanu tanage vīrasvargavahudeṃda
ಅಕಟ ಗುರುಹತ್ಯಾ ಮಹಾಪಾ ತಕಿಯೆ ನಿನಗೇ ಸ್ವರ್ಗ ದೇವ ಪ್ರಕರ ನಿನ್ನನು ಹೊಗಿಸಿದಡೆ ಸುಡುವೆನು ಸುರಾಲಯವ ಕ್ರಕಚ ಕುಂಭೀಪಾಕಮುಖ ನಾ ರಕದೊಳರಮನೆ ನಿನಗೆ ಕೌಕ್ಷೇ ಯಕದ ಹತಿ ಗಡ ತನಗೆನುತ ಕಟ್ಟಿದನು ತಿರುವಿನಲಿ
akaṭa guruhatyā mahāpā takiye ninagē svarga dēva prakara ninnanu hogisidaḍe suḍuvenu surālayava krakaca kuṃbhīpākamukha nā rakadoḷaramane ninage kaukṣē yakada hati gaḍa tanagenuta kaṭṭidanu tiruvinali
ಉರಲ ಹತ್ತಿಸಿ ಸೆಳೆಯೆ ಗೋಣಲಿ ಗುರುಗುರಿಸಲಸು ಜಾರಿದುದು ಬೊ ಬ್ಬಿರಿದು ಹೊಕ್ಕನು ಕದವನೊದೆದು ಶಿಖಂಡಿಯರಮನೆಯ ತರಿದನಾತನನುತ್ತಮೌಂಜಸ ನರಸಿ ಹೊಯ್ದನು ಹೊಕ್ಕು ಬಾಗಿಲ ಮುರಿದು ಮೈಯರಿಹಿಸಿ ಯುಧಾಮನ್ಯುವ ವಿದಾರಿಸಿದ
urala hattisi seḷeye gōṇali gurugurisalasu jāridudu bo bbiridu hokkanu kadavanodedu śikhaṃḍiyaramaneya taridanātananuttamauṃjasa narasi hoydanu hokku bāgila muridu maiyarihisi yudhāmanyuva vidārisida
ಗಜಬಜವಿದೇನೆನುತ ನಿದ್ರೆಯ ಮಜಡರೊಳಗೊಳಗರಿದರೀತನ ಭುಜಬಲಕೆ ಮಲೆತವರ ಕಾಣೆನು ಸೃಂಜಯಾದಿಗಳ ರಜನಿಯಲಿ ರೌಕುಳವ ಮಾಡಿದ ನಜಿತಸಾಹಸನಿತ್ತ ದ್ರುಪದಾ ತ್ಮಜೆಯ ಭವನದ ಹೊರೆಗೆ ಬಂದನು ಪಾಂಡವರನರಸಿ
gajabajavidēnenuta nidreya majaḍaroḷagoḷagaridarītana bhujabalake maletavara kāṇenu sr̥ṃjayādigaḷa rajaniyali raukuḷava māḍida najitasāhasanitta drupadā tmajeya bhavanada horege baṃdanu pāṃḍavaranarasi
ಇದು ಯುಧಿಷ್ಠಿರ ರಾಜಗೃಹವೆಂ ದೊದೆದು ಕದವನು ಕಾಹಿನವರನು ಸದೆದು ಹೊಕ್ಕನು ಸೆಜ್ಜೆಯಲಿ ಧರ‍್ಮಜನ ನಂದನನ ಒದೆದಡೆದ್ದನು ಸುರಗಿಯಲಿ ಕಾ ದಿದನು ಖಡುಗವ ಜಡಿದು ನಿಮಿಷಾ ರ್ಧದಲಿ ತಲೆಯನು ನೆಗಹಿ ಪ್ರತಿವಿಂಧ್ಯಕನನಸುಗಳೆದ
idu yudhiṣṭhira rājagr̥haveṃ dodedu kadavanu kāhinavaranu sadedu hokkanu sejjeyali dharmajana naṃdanana odedaḍeddanu suragiyali kā didanu khaḍugava jaḍidu nimiṣā rdhadali taleyanu negahi prativiṃdhyakananasugaḷeda
ಜನಪ ಕೇಳೈ ಬಳಿಕ ಸುತಸೋ ಮನನು ಶ್ರುತಕೀರ್ತಿಯ ಶತಾನೀ ಕನನು ಶ್ರುತವರ್ಮನನು ತರಿದನು ದ್ರೌಪದೀಸುತರ ಜನಪರೈವರ ತಲೆಗಳೆಂದೇ ಕನಕರಥದೊಳಗಿರಿಸಿ ಹೊಕ್ಕನು ಮನೆಮನೆಗಳಲಿ ಸವರಿದನು ಸೋಮಪ್ರಭದ್ಧಕರ
janapa kēḷai baḷika sutasō mananu śrutakīrtiya śatānī kananu śrutavarmananu taridanu draupadīsutara janaparaivara talegaḷeṃdē kanakarathadoḷagirisi hokkanu manemanegaḷali savaridanu sōmaprabhaddhakara
ಸೀಳ ಬಡಿದನು ಸಮರಥರ ಪಾಂ ಚಾಳ ರಾವುತರನು ಮಹಾರಥ ಜಾಲವನು ಜೋದರನು ಭಾರಿಯ ಪಾರಕವ್ರಜದ ಸಾಲ ಹೊಯ್ದನು ಹುಯ್ಯಲಿಗೆ ಹೊಗು ವಾಳ ತರಿದನು ಖಡ್ಗಮುಷ್ಟಿಯ ಕಾಲಭೈರವ ಬೀದಿವರಿದನು ಕೇರಿಕೇರಿಯಲಿ
sīḷa baḍidanu samarathara pāṃ cāḷa rāvutaranu mahāratha jālavanu jōdaranu bhāriya pārakavrajada sāla hoydanu huyyalige hogu vāḷa taridanu khaḍgamuṣṭiya kālabhairava bīdivaridanu kērikēriyali
ಎಲೆಲೆ ಕವಿ ಕಳ್ಳೇರುಕಾರನ ತಲೆಯ ಹೊಯ್‌ಹೊಯ್ಯೆನುತ ನಿದ್ರಾ ಕುಳರು ಗರ್ಜಿಸುತಾಗುಳಿಸಿ ತೂಕಡಿಸಿದರು ಮರಳಿ ಕೆಲಕೆಲಬರರೆನಿದ್ರೆಗಳ ಕಳ ವಳಿಗರೊರೆಗಳ ಕೊಂಡಡಾಯ್ದವ ನೆಲಕೆ ಬಿಸುಟರು ಬತ್ತಳಿಕೆಯಲಿ ಹೂಡಿದರು ಧನುವ
elele kavi kaḷḷērukārana taleya hoyhoyyenuta nidrā kuḷaru garjisutāguḷisi tūkaḍisidaru maraḷi kelakelabararenidregaḷa kaḷa vaḷigaroregaḷa koṃḍaḍāydava nelake bisuṭaru battaḷikeyali hūḍidaru dhanuva
ಗಜವ ಹಲ್ಲಣಿಸಿದರು ವಾಜಿ ವ್ರಜಕೆ ರಂಚೆಯ ಹಾಯ್ಕಿದರು ಗಜ ಬಜವಿದೇನೇನುತ ಗಾಲಿಗೆ ಬಿಗಿದು ಕುದುರೆಗಳ ರಜನಿ ಬಂದುದೆ ಹಗಲು ಹೋಯಿತೆ ಗಜಬಜದೊಳಕಟೆನುತ ಸುಭಟ ವ್ರಜಸುವಿಹ್ವಳಕರಣರಿರಿದಾಡಿದರು ತಮ್ಮೊಳಗೆ
gajava hallaṇisidaru vāji vrajake raṃceya hāykidaru gaja bajavidēnēnuta gālige bigidu kuduregaḷa rajani baṃdude hagalu hōyite gajabajadoḷakaṭenuta subhaṭa vrajasuvihvaḷakaraṇariridāḍidaru tammoḷage
ಲಾಯದಲಿ ಹೊಕ್ಕಿರಿದು ಕುದುರೆಯ ಬೀಯ ಮಾಡಿದನಂತಕಂಗೆಯ ಡಾಯುಧದ ಧಾರೆಯಲಿ ಕೊಟ್ಟನು ಕುಂಜರವ್ರಜವ ರಾಯದಳ ಧರೆಯಂತೆ ನವಖಂ ಡಾಯಮಾನವಿದಾಯ್ತು ಪಾಂಡವ ರಾಯ ಕಟಕವ ಕೊಂದನಶ್ವತ್ಥಾಮ ಬೇಸರದೆ
lāyadali hokkiridu kudureya bīya māḍidanaṃtakaṃgeya ḍāyudhada dhāreyali koṭṭanu kuṃjaravrajava rāyadaḷa dhareyaṃte navakhaṃ ḍāyamānavidāytu pāṃḍava rāya kaṭakava koṃdanaśvatthāma bēsarade
ದೊರೆಗಳೇನಾದರೊ ಯುಧಿಷ್ಠಿರ ನರ ವೃಕೋದರ ನಕುಲ ಸಹದೇ ವರು ಮುರಾಂತಕ ಸಾತ್ಯಕಿಗಳೊಳಗಿಹರೆ ರೌರವಕೆ ಹರನ ಖತಿಯೋ ಲಯಕೃತಾಂತನ ವಿರಸಕೃತಿಯೋ ಸರ‍್ವದಳಸಂ ಹರಣಕೇನು ನಿಮಿತ್ತವೆಂದುದು ಭೂಸುರವ್ರಾತ
doregaḷēnādaro yudhiṣṭhira nara vr̥kōdara nakula sahadē varu murāṃtaka sātyakigaḷoḷagihare rauravake harana khatiyō layakr̥tāṃtana virasakr̥tiyō sarvadaḷasaṃ haraṇakēnu nimittaveṃdudu bhūsuravrāta
ಉಳಿದುದೇಳಕ್ಷೋಹಿಣೀದಳ ದೊಳಗೆ ನಾರೀನಿಕರ ವಿಪ್ರಾ ವಳಿ ಕುಶೀಲವ ಸೂತ ಮಾಗಧ ವಂದಿಸಂದೋಹ ಸುಳಿವ ಕಾಣೆನು ಕೈದುವಿಡಿದರ ನುಳಿದು ಜೀವಿಸಿದಾನೆ ಕುದುರೆಗ ಳೊಳಗೆ ಜವಿಯಿಲ್ಲೇನನಂಬೆನು ಜನಪ ಕೇಳೆಂದ
uḷidudēḷakṣōhiṇīdaḷa doḷage nārīnikara viprā vaḷi kuśīlava sūta māgadha vaṃdisaṃdōha suḷiva kāṇenu kaiduviḍidara nuḷidu jīvisidāne kudurega ḷoḷage javiyillēnanaṃbenu janapa kēḷeṃda
ಕೂಡೆ ಕಟ್ಟಿತು ಕಿಚ್ಚು ತೆರಪಿನ ಲೋಡುವಡೆ ಗುರುಸುತನ ಶರ ಮಿ ಕ್ಕೋಡುವಡೆ ಬಾಗಿಲುಗಳಲಿ ಕೃತವರ್ಮ ಕೃಪರೆಸುಗೆ ಕೂಡೆ ಮುಮ್ಮಳಿಯೋದುದೀ ಶರ ಝಾಡಿಯಲಿ ಚತುರಂಗಬಲವ ಕ್ಕಾಡಿತೇನೆಂಬೆನು ಯುಧಿಷ್ಠಿರನೃಪನ ಪರಿವಾರ
kūḍe kaṭṭitu kiccu terapina lōḍuvaḍe gurusutana śara mi kkōḍuvaḍe bāgilugaḷali kr̥tavarma kr̥paresuge kūḍe mummaḷiyōdudī śara jhāḍiyali caturaṃgabalava kkāḍitēneṃbenu yudhiṣṭhiranr̥pana parivāra
ಬಸಿವ ರಕುತದಡಾಯುಧದ ನೆಣ ವಸೆಯ ತೊಂಗಲುಗರುಳ ಬಂಧದ ವಸನ ಕೈಮೈಗಳ ಕಠೋರಭ್ರುಕುಟಿ ಭೀಷಣದ ಮುಸುಡ ಹೊಗರಿನ ದಂತದಂಶಿತ ದಶನವಾಸದ ವೈರಿಹಿಂಸಾ ವ್ಯಸನ ವೀರಾವೇಶಿ ಬಂದನು ಕೃಪನ ಸಮ್ಮುಖಕೆ
basiva rakutadaḍāyudhada neṇa vaseya toṃgalugaruḷa baṃdhada vasana kaimaigaḷa kaṭhōrabhrukuṭi bhīṣaṇada musuḍa hogarina daṃtadaṃśita daśanavāsada vairihiṃsā vyasana vīrāvēśi baṃdanu kr̥pana sammukhake
ಹೇಳಿದನು ಸೃಂಜಯವಧೆಯ ಪಾಂ ಚಾಲ ರಾಜಕುಮಾರವರ್ಗದ ಮೌಳಿಗಳ ಬಲಿಗೊಟ್ಟ ಪರಿಯನು ಖಡ್ಗಪೂತನಿಗೆ ಪಾಳೆಯದೊಳರಸಿದನು ಪಾಂಡುನೃ ಪಾಲತನುಜರನವರು ಕೆಡುವರೆ ಮೇಲುಗಾಹಿನ ವೀರನಾರಾಯಣನ ಕರುಣದಲಿ
hēḷidanu sr̥ṃjayavadheya pāṃ cāla rājakumāravargada mauḷigaḷa baligoṭṭa pariyanu khaḍgapūtanige pāḷeyadoḷarasidanu pāṃḍunr̥ pālatanujaranavaru keḍuvare mēlugāhina vīranārāyaṇana karuṇadali
Keys: ← → turn the page, J K step through the verses.
Illustration: Verse & Place (Project-owned).