ಸಕಲಬಲ ನುಗ್ಗಾಯ್ತು ಸಮಸ ಪ್ತಕರು ಮಡಿದರು ಪಾರ್ಥಶರದಲಿ ಶಕುನಿಯನು ಸಂಗ್ರಾಮದಲಿ ಸೀಳಿದನು ಸಹದೇವ
sakalabala nuggāytu samasa ptakaru maḍidaru pārthaśaradali śakuniyanu saṃgrāmadali sīḷidanu sahadēva
ಗದಾ ಪರ್ವ — ಸಂಧಿ ೨ · ಗದಾ ಪರ್ವ — ಸಂಧಿ ೨
gadā parva — saṃdhi 2
The complete gada parva · sandhi 2 in Kannada.
41 passagesKannada with transliteration
Invocation
ಸಕಲಬಲ ನುಗ್ಗಾಯ್ತು ಸಮಸ ಪ್ತಕರು ಮಡಿದರು ಪಾರ್ಥಶರದಲಿ ಶಕುನಿಯನು ಸಂಗ್ರಾಮದಲಿ ಸೀಳಿದನು ಸಹದೇವ
sakalabala nuggāytu samasa ptakaru maḍidaru pārthaśaradali śakuniyanu saṃgrāmadali sīḷidanu sahadēva
ಕೇಳು ಜನಮೇಜಯ ಧರಿತ್ರೀ ಪಾಲ ಸಂಜಯ ಬಂದು ಕುರುಭೂ ಪಾಲಕನನರಸಿದನು ಸಂಗರ ರಂಗಭೂಮಿಯಲಿ ಮೇಲುಸುಯಿಧಾನದ ತುರಂಗಮ ಜಾಲ ಸಹಿತಗಲದಲಿ ಕುರುಭೂ ಪಾಲನಾವೆಡೆಯೆನುತ ಬೆಸಗೊಳುತರಸಿದನು ನೃಪನ
kēḷu janamējaya dharitrī pāla saṃjaya baṃdu kurubhū pālakananarasidanu saṃgara raṃgabhūmiyali mēlusuyidhānada turaṃgama jāla sahitagaladali kurubhū pālanāveḍeyenuta besagoḷutarasidanu nr̥pana
ವಂದಿಗಳ ನಿಸ್ಸಾಳಬಡಿಕರ ಮಂದಿ ಹಡಪಿಗ ಚಾಹಿ ಸೂತರ ಸಂದಣಿಗಳೌಷಧಿಕ ಹಯಗಜಸಂವಿಧಾಯಕರು ನಿಂದುದದಸಂಖ್ಯಾತವಿನಿಬರ ನಂದು ಸಂಜಯ ಕರೆದು ಕೇಳಿದ ನಿಂದುಕುಲಸಂಭವನ ಕಂಡಿರೆ ಕೌರವೇಶ್ವರನ
vaṃdigaḷa nissāḷabaḍikara maṃdi haḍapiga cāhi sūtara saṃdaṇigaḷauṣadhika hayagajasaṃvidhāyakaru niṃdudadasaṃkhyātavinibara naṃdu saṃjaya karedu kēḷida niṃdukulasaṃbhavana kaṃḍire kauravēśvarana
ಕೂಡೆ ಸಂಜಯನರಸಿದನು ನಡೆ ಜೋಡಿನವು ನಾನೂರು ಕುದುರೆಯ ಕೂಡಿ ಕೌರವನೃಪನ ಕಾಣದೆ ಕಳನ ಚೌಕದಲಿ ನೋಡುತಿರೆ ಸಾತ್ಯಕಿ ಚತುರ್ಬಲ ಗೂಡಿ ಕವಿದನು ಹಯಬಲವ ಹುಡಿ ಮಾಡಿದನು ನಾನೂರ ಕೊಂದನು ಸರಳ ಸಾರದಲಿ
kūḍe saṃjayanarasidanu naḍe jōḍinavu nānūru kudureya kūḍi kauravanr̥pana kāṇade kaḷana caukadali nōḍutire sātyaki caturbala gūḍi kavidanu hayabalava huḍi māḍidanu nānūra koṃdanu saraḷa sāradali
ಹಿಡಿದು ಸಂಜಯನನು ವಿಭಾಡಿಸಿ ಕೆಡಹಿದನು ಬಲುರಾವುತರನವ ಗಡವ ಕೇಳಿದು ದ್ರೋಣಸುತ ಕೃತವರ್ಮ ಗೌತಮರು ಫಡಫಡೆಲವೊ ಸಂಜಯನ ಬಿಡು ಬಿಡು ಮದೀಯ ಮಹಾಶರಕೆ ತಲೆ ಗೊಡುವಡಿದಿರಾಗೆನುತ ತರುಬಿದರಿವರು ಸಾತ್ಯಕಿಯ
hiḍidu saṃjayananu vibhāḍisi keḍahidanu balurāvutaranava gaḍava kēḷidu drōṇasuta kr̥tavarma gautamaru phaḍaphaḍelavo saṃjayana biḍu biḍu madīya mahāśarake tale goḍuvaḍidirāgenuta tarubidarivaru sātyakiya
ದ್ರೋಣಸುತ ಕುರುಪತಿಯ ಸಮರಕೆ ಹೂಣಿಗನಲೇ ಬಲ್ಲೆವಿದರಲಿ ಬಾಣವಿದ್ಯೆಯ ಬೀರಿ ಬಿಡಿಸುವರಿವರು ಸಂಜಯನ ಕಾಣಲಹುದಂತಿರಲಿ ನಿಮಗೀ ಕೇಣದಲಿ ಫಲವಿಲ್ಲ ಕೃಪ ತ ನ್ನಾಣೆ ನೀ ಮರಳೆಂದು ಸಾತ್ಯಕಿ ಸುರಿದನಂಬುಗಳ
drōṇasuta kurupatiya samarake hūṇiganalē ballevidarali bāṇavidyeya bīri biḍisuvarivaru saṃjayana kāṇalahudaṃtirali nimagī kēṇadali phalavilla kr̥pa ta nnāṇe nī maraḷeṃdu sātyaki suridanaṃbugaḷa
ಕೋಡಕಯ್ಯಲಿ ತಿರುಗಿ ಕೃಪ ಕೈ ಮಾಡಿದನು ಕೃತವರ್ಮನೆಸುಗೆಯ ತೋಡುಬೀಡಿನ ಭರವ ಬಲ್ಲವನಾರು ಸಮರದಲಿ ನೋಡಲೀತನ ಗರುಡಿಯಲಿ ಶ್ರವ ಮಾಡಿದವರೇ ಮೂರು ಜಗವ ವಿ ಭಾಡಿಸುವರೆನೆ ಹೊಗಳ್ವನಾವನು ದ್ರೋಣನಂದನನ
kōḍakayyali tirugi kr̥pa kai māḍidanu kr̥tavarmanesugeya tōḍubīḍina bharava ballavanāru samaradali nōḍalītana garuḍiyali śrava māḍidavarē mūru jagava vi bhāḍisuvarene hogaḷvanāvanu drōṇanaṃdanana
ಎಚ್ಚನಶ್ವತ್ಥಾಮನಾ ಕೃಪ ನೆಚ್ಚನಾ ಕೃತವರ್ಮಕನು ಕವಿ ದೆಚ್ಚನೀ ಶರಜಾಲ ಜಡಿದವು ಕಿಡಿಯ ಗಡಣದಲಿ ಬೆಚ್ಚಿದನೆ ಬೆದರಿದನೆ ಕೈಕೊಂ ಡೆಚ್ಚು ಸಾತ್ಯಕಿ ರಿಪುಶರಾಳಿಯ ಕೊಚ್ಚಿದನು ಕೊಡಹಿದನು ಮಿಗೆ ಭಂಗಿಸಿ ವಿಭಾಡಿಸಿದ
eccanaśvatthāmanā kr̥pa neccanā kr̥tavarmakanu kavi deccanī śarajāla jaḍidavu kiḍiya gaḍaṇadali beccidane bedaridane kaikoṃ ḍeccu sātyaki ripuśarāḷiya koccidanu koḍahidanu mige bhaṃgisi vibhāḍisida
ಎಲೆಲೆ ಸಾತ್ಯಕಿಗಾಹವದ ಧುರ ಬಲುಹೆನಲು ಸೃಂಜಯರು ಸೋಮಕ ಬಲ ಶಿಖಂಡಿ ದ್ರುಪದನಂದನ ಪಾಂಡವಾತ್ಮಜರು ಚಳಪತಾಕೆಯ ವಿವಿಧವಾದ್ಯದ ಕಳಕಳದ ಕೈದುಗಳ ಹೊಳಹಿನ ತಳಪ ಝಳಪಿಸೆ ಜೋಡಿಸಿತು ಸಾತ್ಯಕಿಯ ಬಳಸಿನಲಿ
elele sātyakigāhavada dhura baluhenalu sr̥ṃjayaru sōmaka bala śikhaṃḍi drupadanaṃdana pāṃḍavātmajaru caḷapatākeya vividhavādyada kaḷakaḷada kaidugaḷa hoḷahina taḷapa jhaḷapise jōḍisitu sātyakiya baḷasinali
ಹರಿಯದಿಲ್ಲಿಯ ಬವರ ರಾಯನ ನರಸಬೇಹುದು ಕುರುಪತಿಯ ಮುಂ ದಿರಿದು ಮೆರೆವುದು ಕೀರ್ತಿ ನಿಷ್ಫಲವಿಲ್ಲಿ ಶರರಚನೆ ಅರಿವೆವೀ ಸಾತ್ಯಕಿಯ ಸಮರದ ಮುರುಕವನು ಬಳಿಕೆನುತ ಕೌರವ ನರಕೆಯಲಿ ತಿರುಗಿದರು ಕೃಪ ಕೃತವರ್ಮ ಗುರುಸುತರು
hariyadilliya bavara rāyana narasabēhudu kurupatiya muṃ diridu merevudu kīrti niṣphalavilli śararacane arivevī sātyakiya samarada murukavanu baḷikenuta kaurava narakeyali tirugidaru kr̥pa kr̥tavarma gurusutaru
ತೆರಳಿದರು ಗುರುನಂದನಾದಿಗ ಳರಿನೃಪಾಲನ ಕಾಣೆವಾತನ ನರಸಬೇಹುದು ಶಕುನಿ ದುರ್ಯೋಧನ ಸುಶರ್ಮಕರು ದೊರೆಗಳಿದು ಪರಿಶಿಷ್ಟರುಪಸಂ ಹರಣವೇ ಕರ್ತವ್ಯವಿದು ದು ಸ್ತರಣಶ್ರಮಫಲವೆಂದು ನುಡಿದನು ಧರ್ಮಸುತ ನಗುತ
teraḷidaru gurunaṃdanādiga ḷarinr̥pālana kāṇevātana narasabēhudu śakuni duryōdhana suśarmakaru doregaḷidu pariśiṣṭarupasaṃ haraṇavē kartavyavidu du staraṇaśramaphalaveṃdu nuḍidanu dharmasuta naguta
ಮಸಗಿದುದು ಪರಿವಾರ ಕೌರವ ವಸುಮತೀಶ್ವನರಕೆಯಲಿ ದಳ ಪಸರಿಸಿತು ಬಿಡದರಸಿ ಕಂಡರು ಕಳನ ಮೂಲೆಯಲಿ ಮಿಸುಪ ಸಿಂಧದ ಸೀಗುರಿಯ ಝಳ ಪಿಸುವಡಾಯ್ದ ಸಿತಾತಪತ್ರ ಪ್ರಸರದಲಿ ಹೊಳೆಹೊಳೆವ ಶಕುನಿಯ ಬಹಳ ಮೋಹರವ
masagidudu parivāra kaurava vasumatīśvanarakeyali daḷa pasarisitu biḍadarasi kaṃḍaru kaḷana mūleyali misupa siṃdhada sīguriya jhaḷa pisuvaḍāyda sitātapatra prasaradali hoḷehoḷeva śakuniya bahaḷa mōharava
ಅದೆ ಸುಯೋಧನನೊಡ್ಡು ನಸುದೂ ರದಲಿ ಕವಿಕವಿಯೆನುತ ಧಾಳಿ ಟ್ಟುದು ಚತುರ್ಬಲ ಭೀಮಪಾರ್ಥರ ರಥದ ಚೂಣಿಯಲಿ ಹೊದರು ಹಳಚಿತು ಭಟರು ಭುಜಗ ರ್ವದಲಿ ಗರುವರ ಗಾಢ ಶೌರ್ಯದ ಮದಕೆ ಮಡಮುರಿಯಾಯ್ತು ಸಿಲುಕಿತು ಮಾನ ಮೋನದಲಿ
ade suyōdhananoḍḍu nasudū radali kavikaviyenuta dhāḷi ṭṭudu caturbala bhīmapārthara rathada cūṇiyali hodaru haḷacitu bhaṭaru bhujaga rvadali garuvara gāḍha śauryada madake maḍamuriyāytu silukitu māna mōnadali
ಹೆಗಲ ಹಿರಿಯುಬ್ಬಣದ ಕೈತಳ ಮಗುಚಲಮ್ಮದು ವಾಘೆಯಲಿ ಕೈ ಬಿಗಿದುದಂಕಣೆದೊಡಕಿನಲಿ ಮರನಾದವಂಘ್ರಿಗಳು ಬಗೆಯ ಮಡಿ ಮಸುಳಿಸಿತು ವೀರಕೆ ಬೆಗಡು ಹುದುವನೆಯಾಯ್ತು ಕೈನಂ ಬುಗೆಗೆ ಮರಳಿದರೊಬ್ಬರೊಬ್ಬರು ರಾಯರಾವುತರು
hegala hiriyubbaṇada kaitaḷa magucalammadu vāgheyali kai bigidudaṃkaṇedoḍakinali maranādavaṃghrigaḷu bageya maḍi masuḷisitu vīrake begaḍu huduvaneyāytu kainaṃ bugege maraḷidarobbarobbaru rāyarāvutaru
ಬಂದುದಾ ಮೋಹರ ಸಘಾಡದಿ ನಿಂದುದೀ ಬಲ ಸೂಠಿಯಲಿ ಹಯ ವೃಂದ ಬಿಟ್ಟವು ತೂಳಿದವು ಹೇರಾನೆ ಸರಿಸದಲಿ ನೊಂದುದಾಚೆಯ ಭಟರು ಘಾಯದೊ ಳೊಂದಿತೀಚೆಯ ವೀರರುಭಯದ ಮಂದಿಬಿದ್ದುದು ಚೂಣಿಯದ್ದುದು ರುಧಿರಜಲಧಿಯಲಿ
baṃdudā mōhara saghāḍadi niṃdudī bala sūṭhiyali haya vr̥ṃda biṭṭavu tūḷidavu hērāne sarisadali noṃdudāceya bhaṭaru ghāyado ḷoṃditīceya vīrarubhayada maṃdibiddudu cūṇiyaddudu rudhirajaladhiyali
ಜಾರಿದನೆ ಕುರುಪತಿಯಕಟ ಮೈ ದೋರನೇ ನಮಗೂರುಗಳ ಕೊಡ ಲಾರದೇ ಕಾಳೆಗವ ಕೊಟ್ಟನು ಮತ್ತೆ ಕೊಂಡನಲಾ ತೋರುಸನೆ ಖಂಡೆಯದ ಸಿರಿ ಮೈ ದೋರಹೇಳೋ ಕರೆಯೆನುತ ತಲೆ ದೋರಿದರು ಭೀಮಾರ್ಜುನರು ಸೌಬಲನ ಥಟ್ಟಿನಲಿ
jāridane kurupatiyakaṭa mai dōranē namagūrugaḷa koḍa lāradē kāḷegava koṭṭanu matte koṃḍanalā tōrusane khaṃḍeyada siri mai dōrahēḷō kareyenuta tale dōridaru bhīmārjunaru saubalana thaṭṭinali
ಫಡಫಡೆಲವೋ ಪಾರ್ಥ ಕುರುಪತಿ ಯಡಗುವನೆ ನಿನ್ನಡಗ ತರಿದುಣ ಬಡಿಸನೇ ವೇತಾಳರಿಗೆ ವೈತಾಳಿಕನೆ ನೀನು ಗಡಬಡಿಸಿ ಪರರುನ್ನತಿಯ ಕೆಡೆ ನುಡಿದು ಫಲವೇನೆನುತ ಪಾರ್ಥನ ತಡೆದನಂದು ಸುಶರ್ಮ ಸಮಸಪ್ತಕರ ದಳ ಸಹಿತ
phaḍaphaḍelavō pārtha kurupati yaḍaguvane ninnaḍaga tariduṇa baḍisanē vētāḷarige vaitāḷikane nīnu gaḍabaḍisi pararunnatiya keḍe nuḍidu phalavēnenuta pārthana taḍedanaṃdu suśarma samasaptakara daḷa sahita
ಮುತ್ತಿದವು ರಥವೇಳನೂರರು ವತ್ತು ಹಯವೈನೂರು ಸಾವಿರ ಮತ್ತಗಜವಿಪ್ಪತ್ತು ಸಾವಿರ ಪಾಯದಳ ಸಹಿತ ತೆತ್ತಿಸಿದವಂಬುರವಣಿಸಿ ದೂ ಹತ್ತಿ ಹೊಳೆದವು ಸಮರದಲಿ ಮುಖ ಕೆತ್ತುದೆನೆ ಕೈದುಗಳ ರುಚಿ ವೇಢೈಸಿತರ್ಜುನನ
muttidavu rathavēḷanūraru vattu hayavainūru sāvira mattagajavippattu sāvira pāyadaḷa sahita tettisidavaṃburavaṇisi dū hatti hoḷedavu samaradali mukha kettudene kaidugaḷa ruci vēḍhaisitarjunana
ಶಕುನಿ ಸಹದೇವನನುಳೂಕನು ನಕುಲನನು ಕುರುರಾಯನನುಜರು ಚಕಿತ ಚಾಪನ ಕೆಣಕಿದರು ಪವಮಾನನಂದನನ ಅಕಟ ಫಲುಗುಣ ಎನುತ ಸಮಸ ಪ್ತಕರು ಕವಿದರು ನೂರು ಗಜದಲಿ ಸಕಲದಳಕೊತ್ತಾಗಿ ನಿಂದನು ಕೌರವರಾಯ
śakuni sahadēvananuḷūkanu nakulananu kururāyananujaru cakita cāpana keṇakidaru pavamānanaṃdanana akaṭa phaluguṇa enuta samasa ptakaru kavidaru nūru gajadali sakaladaḷakottāgi niṃdanu kauravarāya
ಏರಿದರು ಸಮಸಪ್ತಕರು ಕೈ ದೋರಿದರು ಫಲುಗುಣನ ಜೋಡಿನೊ ಳೇರು ತಳಿತುದು ನೊಂದವಡಿಗಡಿಗಾತನಶ್ವಚಯ ನೂರು ಶರದಲಿ ಬಳಿ ವಿಶಿಖ ನಾ ನೂರರಲಿ ಬಳಿಶರಕೆ ಬಳಿಶರ ವಾರು ಸಾವಿರದಿಂದ ತರಿದನು ಪಾರ್ಥನರಿಬಲವ
ēridaru samasaptakaru kai dōridaru phaluguṇana jōḍino ḷēru taḷitudu noṃdavaḍigaḍigātanaśvacaya nūru śaradali baḷi viśikha nā nūrarali baḷiśarake baḷiśara vāru sāviradiṃda taridanu pārthanaribalava
ಕಡಿವಡೆದವೇಳ್ನೂರು ರಥ ಮುರಿ ವಡಿದವೈನೂರಶ್ವಚಯ ಮುಂ ಗೆಡೆದವಂದೈನೂರು ಗಜವಿಪ್ಪತ್ತು ಸಾವಿರದ ಕಡುಗಲಿಗಳುದುರಿತು ತ್ರಿಗರ್ತರ ಪಡೆ ಕುರುಕ್ಷೇತ್ರದಲಿ ಪಾರ್ಥನ ಬಿಡದೆ ಬಳಲಿಸಿಯನಿಬರಳಿದುದು ಭೂಪ ಕೇಳೆಂದ
kaḍivaḍedavēḷnūru ratha muri vaḍidavainūraśvacaya muṃ geḍedavaṃdainūru gajavippattu sāvirada kaḍugaligaḷuduritu trigartara paḍe kurukṣētradali pārthana biḍade baḷalisiyanibaraḷidudu bhūpa kēḷeṃda
ದೊರೆಗಳವರಲಿ ಸತ್ಯಕರ್ಮನು ವರ ಸುಶರ್ಮನು ದ್ರೋಣಸಮರದೊ ಳೆರಡನೆಯ ದಿವಸದಲಿ ರಚಿಸಿದರಗ್ನಿ ಸಾಕ್ಷಿಕವ ಧುರದ ಶಪಥದೊಳರ್ಜುನನ ಸಂ ಗರಕೆ ಬೇಸರಿಸಿದ ಪರಾಕ್ರಮ ಪರಿಗತರು ಪವಡಿಸಿದರಂದು ಧನಂಜಯಾಸ್ತ್ರದಲಿ
doregaḷavarali satyakarmanu vara suśarmanu drōṇasamarado ḷeraḍaneya divasadali racisidaragni sākṣikava dhurada śapathadoḷarjunana saṃ garake bēsarisida parākrama parigataru pavaḍisidaraṃdu dhanaṃjayāstradali
ತರಿದನಗ್ಗದ ಸತ್ಯಕರ್ಮನ ಧುರವ ಸಂತೈಸುವ ತ್ರಿಗರ್ತರ ದೊರೆ ಸುಶರ್ಮನನವನ ಸಹಭವ ಗೋತ್ರ ಬಾಂಧವರ ಒರಸಿದನು ಕುರುರಾಯನಾವೆಡೆ ಬರಲಿ ತನ್ನಾಪ್ತರಿಗೆ ಕೊಟ್ಟೆನು ಹರಿವನಿನ್ನಾಹವ ವಿಲಂಬವ ಮಾಡಬೇಡೆಂದ
taridanaggada satyakarmana dhurava saṃtaisuva trigartara dore suśarmananavana sahabhava gōtra bāṃdhavara orasidanu kururāyanāveḍe barali tannāptarige koṭṭenu harivaninnāhava vilaṃbava māḍabēḍeṃda
ಇತ್ತ ಭೀಮನ ಕೂಡೆ ನೂರರು ವತ್ತು ಗಜ ಸಹಿತರಿಭಟರೊಳು ದ್ವೃತ್ತನಿದಿರಾದನು ಸುದರ್ಶನನಂಧನೃಪಸೂನು ಹೆತ್ತಳವ್ವೆ ವಿರೋಧಿಸೇನೆಯ ಮತ್ತ ಗಜಘಟೆಗೋಸುಗರವಿವು ಮತ್ತೆ ದೊರಕವು ಕೊಂದಡೆಂದುಮ್ಮಳಿಸಿದನು ಭೀಮ
itta bhīmana kūḍe nūraru vattu gaja sahitaribhaṭaroḷu dvr̥ttanidirādanu sudarśananaṃdhanr̥pasūnu hettaḷavve virōdhisēneya matta gajaghaṭegōsugaravivu matte dorakavu koṃdaḍeṃdummaḷisidanu bhīma
ಸೊಕ್ಕಿದಾನೆಯ ಕೈಯ ಕದಳಿಯ ನಿಕ್ಕಿ ಬಿಡಿಸುವನಾರು ಪವನಜ ನೆಕ್ಕತುಳದಲಿ ದಂತಿಘಟೆಗಳ ಮುರಿದನುರವಣಿಸಿ ಇಕ್ಕಡಿಯ ಬಸುರುಚ್ಚುಗಳ ನರ ಸುಕ್ಕುಗಳ ನಾಟಕದವೊಲು ಕೈ ಯಿಕ್ಕಿದಾನೆಯ ಹಿಂಡು ಮುರಿದುದು ನಿಮಿಷಮಾತ್ರದಲಿ
sokkidāneya kaiya kadaḷiya nikki biḍisuvanāru pavanaja nekkatuḷadali daṃtighaṭegaḷa muridanuravaṇisi ikkaḍiya basuruccugaḷa nara sukkugaḷa nāṭakadavolu kai yikkidāneya hiṃḍu muridudu nimiṣamātradali
ಕೆಡಹಿ ದರ್ಯೋಧನನ ತಮ್ಮನ ನಡಗುದರೆ ಮಾಡಿದನುಳೂಕನ ಕಡಿದು ಬಿಸುಟನು ನಕುಲನಿಪ್ಪತ್ತೈದು ಬಾಣದಲಿ ತುಡುಕಿದನು ಸಹದೇವನಂಬಿನ ಗಡಣದಲಿ ಸೌಬಲನ ಸೇನೆಯ ಕಡಲ ಮೊಗೆದನು ಮೋದಿದನು ಶರಜಾಲ ಝಂಕೃತಿಯ
keḍahi daryōdhanana tammana naḍagudare māḍidanuḷūkana kaḍidu bisuṭanu nakulanippattaidu bāṇadali tuḍukidanu sahadēvanaṃbina gaḍaṇadali saubalana sēneya kaḍala mogedanu mōdidanu śarajāla jhaṃkr̥tiya
ಎಲವೊ ಕಪಟದ್ಯೂತ ಬಂಧದೊ ಳಳಲಿಸಿದಲಾ ಪಾಪಿ ಕೌರವ ಕುಲದ ತಲೆ ಸೆಂಡಾಡಿದವ ನೀನೋ ಮದಗ್ರಜನೊ ಸಿಲುಕಿದೆಯಲಾ ನಮ್ಮ ಬಾಣದ ಬಲೆಗೆ ನಿನ್ನನು ಕಾವನಾವವ ನೆಲೆ ಕುಠಾರ ಎನುತ್ತ ನುಡಿದನು ನಗುತ ಸಹದೇವ
elavo kapaṭadyūta baṃdhado ḷaḷalisidalā pāpi kaurava kulada tale seṃḍāḍidava nīnō madagrajano silukideyalā namma bāṇada balege ninnanu kāvanāvava nele kuṭhāra enutta nuḍidanu naguta sahadēva
ವ್ಯರ್ಥವೆಲೆ ಸಹದೇವ ನಿನ್ನ ಕ ದರ್ಥನಕೆ ಫಲವಿಲ್ಲ ನೀ ಕದ ನಾರ್ಥಿಯೇ ದಿಟ ತೋರಿಸಾದರೆ ಬಾಹುವಿಕ್ರಮವ ಪಾರ್ಥ ಭೀಮರ ಮರೆಯೊಳಿರ್ದು ನಿ ರರ್ಥಕರನಿರಿದಿರಿದು ಜಯವ ಸ ಮರ್ಥಿಸುವೆ ಫಡ ಹೋಗೆನುತ ತೆಗೆದೆಚ್ಚನಾ ಶಕುನಿ
vyarthavele sahadēva ninna ka darthanake phalavilla nī kada nārthiyē diṭa tōrisādare bāhuvikramava pārtha bhīmara mareyoḷirdu ni rarthakaraniridiridu jayava sa marthisuve phaḍa hōgenuta tegedeccanā śakuni
ಮರುಗದಿರು ನಿನ್ನುಭಯ ಪಕ್ಷವ ತರಿದು ತುಂಡವ ಸೀಳುವೆನು ತಾ ಮರೆವೆನೇ ಭವದೀಯ ರಚಿತ ವಿಕಾರ ವಿಭ್ರಮವ ನೆರೆ ಪತತ್ರಿಗಳಿವೆ ಪತತ್ರಿಯ ಮರುವೆಸರು ನಿನಗಿವರ ಕೇಣಿಗೆ ತೆರಹುಗೊಡು ನೀನೆಂದು ಮಾದ್ರೀತನುಜ ಮಗುಳೆಚ್ಚ
marugadiru ninnubhaya pakṣava taridu tuṃḍava sīḷuvenu tā marevenē bhavadīya racita vikāra vibhramava nere patatrigaḷive patatriya maruvesaru ninagivara kēṇige terahugoḍu nīneṃdu mādrītanuja maguḷecca
ಎಸಲು ಸಹದೇವಾಸ್ತ್ರವನು ಖಂ ಡಿಸಿ ಶರೌಘದಿನಹಿತವೀರನ ಮುಸುಕಿದನು ಮೊನೆಗಣೆಗಳೀಡಿರಿದವು ರಥಾಗ್ರದಲಿ ಕುಸುರಿದರಿದತಿರಥನ ಬಾಣ ಪ್ರಸರವನು ರಥತುರಗವನು ಭಯ ರಸದೊಳದ್ದಿದನುದ್ದಿದನು ಸಹದೇವ ಸೌಬಲನ
esalu sahadēvāstravanu khaṃ ḍisi śaraughadinahitavīrana musukidanu monegaṇegaḷīḍiridavu rathāgradali kusuridaridatirathana bāṇa prasaravanu rathaturagavanu bhaya rasadoḷaddidanuddidanu sahadēva saubalana
ತೇರು ಹುಡಿಹುಡಿಯಾಗೆ ಹೊಯ್ದನು ವಾರುವನ ಮೇಲುಗಿದಡಾಯುಧ ದಾರುಭಟೆಯಲಿ ಬಿಟ್ಟನಾ ಸಹದೇವನಭಿಮುಖಕೆ ವೀರನಹೆಯೋ ಶಕುನಿ ಜೂಜಿನ ಚೋರವಿದ್ಯೆಯ ಬಿಟ್ಟೆಲಾ ಜ ಜ್ಝಾರನಹೆ ಮಝ ಪೂತೆನುತ ಖಂಡಿಸಿದನಾ ಹಯವ
tēru huḍihuḍiyāge hoydanu vāruvana mēlugidaḍāyudha dārubhaṭeyali biṭṭanā sahadēvanabhimukhake vīranaheyō śakuni jūjina cōravidyeya biṭṭelā ja jjhāranahe majha pūtenuta khaṃḍisidanā hayava
ಬಳಿಕ ಕಾಲಾಳಾಗಿ ಖಡುಗವ ಝಳಪಿಸುತ ಬರೆ ಶಕ್ತಿಯಲಿ ಕೈ ಚಳಕೆ ಮಿಗೆ ಸಹದೇವನಿಟ್ಟನು ಸುಬಲನಂದನನ ಖಳನೆದೆಯನೊದೆದಪರಭಾಗಕೆ ನಿಲುಕಿತದು ಗಾಂಧಾರಬಲ ಕಳ ವಳಿಸೆ ಸುಳಿದನು ಶಕುನಿ ಸುರತರುಣಿಯರ ತೋಳಿನಲಿ
baḷika kālāḷāgi khaḍugava jhaḷapisuta bare śaktiyali kai caḷake mige sahadēvaniṭṭanu subalanaṃdanana khaḷanedeyanodedaparabhāgake nilukitadu gāṃdhārabala kaḷa vaḷise suḷidanu śakuni surataruṇiyara tōḷinali
ಕವಿದುದಾ ಪರಿವಾರ ವಡಬನ ತಿವಿವ ತುಂಬಿಗಳಂತೆ ಶಕುನಿಯ ಬವರಿಗರು ಮಂಡಳಿಸೆ ಸಹದೇವನ ರಥಾಗ್ರದಲಿ ತೆವರಿಸಿದನನಿಬರ ಚತುರ್ಬಲ ನಿವಹವನು ನಿಮಿಷಾರ್ಧದಲಿ ಸಂ ತವಿಸಿದನು ಸಹದೇವ ಕೊಂದನು ಸೌಬಲನ ಬಲವ
kavidudā parivāra vaḍabana tiviva tuṃbigaḷaṃte śakuniya bavarigaru maṃḍaḷise sahadēvana rathāgradali tevarisidananibara caturbala nivahavanu nimiṣārdhadali saṃ tavisidanu sahadēva koṃdanu saubalana balava
ಹರಿಬದಲಿ ಹೊಕ್ಕೆರಡು ಸಾವಿರ ತುರಗ ಬಿದ್ದವು ನೂರು ಮದಸಿಂ ಧುರಕೆ ಖಂಡನವಾಯ್ತು ಪಯದಳವೆಂಟು ಸಾವಿರದ ಬರಹ ತೊಡೆದುದು ನೂರು ರಥ ರಿಪು ಶರದೊಳಕ್ಕಾಡಿತು ವಿಡಂಬದ ಕುರುಬಲಾಂಬುಧಿ ಕೂಡೆ ಬರತುದು ನೃಪತಿ ಕೇಳೆಂದ
haribadali hokkeraḍu sāvira turaga biddavu nūru madasiṃ dhurake khaṃḍanavāytu payadaḷaveṃṭu sāvirada baraha toḍedudu nūru ratha ripu śaradoḷakkāḍitu viḍaṃbada kurubalāṃbudhi kūḍe baratudu nr̥pati kēḷeṃda
ಓಡಿದವರಲ್ಲಲ್ಲಿ ಧೈರ್ಯವ ಮಾಡಿ ಹರಿಹಂಚಾದ ಸುಭಟರು ಕೂಡಿಕೊಂಡುದು ನೂರು ಮದದಾನೆಯಲಿ ಕುರುಪತಿಯ ಓಡಲೇಕಿನ್ನೊಂದು ಹಲಗೆಯ ನಾಡಿ ನೋಡುವೆನೆಂಬವೊಲು ಕೈ ಮಾಡಿದನು ಕುರುರಾಯನಾ ಸಹದೇವನಿದಿರಿನಲಿ
ōḍidavarallalli dhairyava māḍi harihaṃcāda subhaṭaru kūḍikoṃḍudu nūru madadāneyali kurupatiya ōḍalēkinnoṃdu halageya nāḍi nōḍuveneṃbavolu kai māḍidanu kururāyanā sahadēvanidirinali
ಧರಣಿಪನ ಧಟ್ಟಣೆಗೆ ನಿಲ್ಲದೆ ತೆರಳಿದನು ಸಹದೇವನಾತನ ಹಿರಿಯನಡ್ಡೈಸಿದಡೆ ಕೊಟ್ಟನು ಬೋಳೆಯಂಬಿನಲಿ ಶರಹತಿಗೆ ಸೆಡೆದಾ ನಕುಲ ಪೈ ಸರಿಸಿದನು ನೂರಾನೆಯಲಿ ಡಾ ವರಿಸಿದನು ಧರ್ಮಜನ ದಳದಲಿ ಧೀರ ಕುರುರಾಯ
dharaṇipana dhaṭṭaṇege nillade teraḷidanu sahadēvanātana hiriyanaḍḍaisidaḍe koṭṭanu bōḷeyaṃbinali śarahatige seḍedā nakula pai sarisidanu nūrāneyali ḍā varisidanu dharmajana daḷadali dhīra kururāya
ಎಲೆ ನಪುಂಸಕ ಧರ್ಮಸುತ ಫಡ ತೊಲಗು ಕರೆಯಾ ನಿನಗೆ ಭೀಮನ ಬಲುಹೆ ಬಲುಹರ್ಜುನನ ವಿಕ್ರಮ ವಿಕ್ರಮವು ನಿನಗೆ ಮಲೆತು ಮೆರೆಯಾ ಕ್ಷತ್ರಧರ್ಮವ ನಳುಕದಿರು ನೀ ನಿಲ್ಲೆನುತಲಿ ಟ್ಟಳಿಸಿ ಬರಲೂಳಿಗದ ಬೊಬ್ಬೆಯ ಕೇಳಿದನು ಭೀಮ
ele napuṃsaka dharmasuta phaḍa tolagu kareyā ninage bhīmana baluhe baluharjunana vikrama vikramavu ninage maletu mereyā kṣatradharmava naḷukadiru nī nillenutali ṭṭaḷisi baralūḷigada bobbeya kēḷidanu bhīma
ತೂಳಿ ತುಳಿದವು ನೂರು ಗಜ ಭೂ ಪಾಲಕನ ನೆರೆಗಡಿತದಡವಿಗೆ ಬಾಳೆ ಹೆಮ್ಮರನಾಯ್ತು ಗಡ ಫಡ ನೂಕು ನೂಕೆನುತ ಆಲಿ ಕಿಡಿಯಿಡೆ ಕುಣಿವ ಮೀಸೆ ಕ ರಾಳ ವದನದ ಬಿಗಿದ ಹುಬ್ಬಿನ ಮೇಲುಗೋಪದ ಭೀಮ ಬಂದನು ಬಿಟ್ಟ ಸೂಠಿಯಲಿ
tūḷi tuḷidavu nūru gaja bhū pālakana neregaḍitadaḍavige bāḷe hemmaranāytu gaḍa phaḍa nūku nūkenuta āli kiḍiyiḍe kuṇiva mīse ka rāḷa vadanada bigida hubbina mēlugōpada bhīma baṃdanu biṭṭa sūṭhiyali
ನೆತ್ತಿಯಗತೆಯೊಳೂರಿದಂಕುಶ ವೆತ್ತಿದಡೆ ತಲೆಗೊಡಹಿದವು ಬೆರ ಳೊತ್ತುಗಿವಿಗಳ ಡಾವರಿಪ ಡಾವರದ ಡಬ್ಬುಕದ ಕುತ್ತುವಾರೆಯ ಬಗೆಯದಾನೆಗ ಳಿತ್ತ ಮುರಿದವು ಸಿಂಹನಾದಕೆ ಮತ್ತಗಜ ಮೊಗದಿರುಹಿದವು ದಳವುಳಿಸಿದನು ಭೀಮ
nettiyagateyoḷūridaṃkuśa vettidaḍe talegoḍahidavu bera ḷottugivigaḷa ḍāvaripa ḍāvarada ḍabbukada kuttuvāreya bageyadānega ḷitta muridavu siṃhanādake mattagaja mogadiruhidavu daḷavuḷisidanu bhīma
ಮೆಟ್ಟಿದನು ಬಲವಂಕವನು ಹೊರ ಗಟ್ಟಿದನು ವಾಮದ ಗಜಂಗಳ ನಿಟ್ಟನೊಂದರೊಳೊಂದನಪ್ಪಳಿಸಿದನು ಪರಿಘದಲಿ ಘಟ್ಟಿಸಿದನೊಗ್ಗಿನ ಗಜಂಗಳ ಥಟ್ಟುಗೆಡಹಿದನಮಮ ಹೆಣಸಾ ಲಿಟ್ಟವೈ ಕುರುನೃಪನ ನೂರಾನೆಗಳು ನಿಮಿಷದಲಿ
meṭṭidanu balavaṃkavanu hora gaṭṭidanu vāmada gajaṃgaḷa niṭṭanoṃdaroḷoṃdanappaḷisidanu parighadali ghaṭṭisidanoggina gajaṃgaḷa thaṭṭugeḍahidanamama heṇasā liṭṭavai kurunr̥pana nūrānegaḷu nimiṣadali
ಉಳಿದುದಿದಿರಲಿ ಛತ್ರ ಚಮರಾ ವಳಿಯವರು ಹಡಪಿಗರು ಬಿರುದಾ ವಳಿಯವರು ಪಾಠಕರು ವಾದ್ಯದ ಮಲ್ಲಗಾಯಕರು ಸಲಿಲ ಭಕ್ಷ್ಯವಿದಾನಗಜಹಯ ಕುಲದ ರಕ್ಷವ್ರಣಚಿಕಿತ್ಸಕ ದಳಿತ ರಥಚಾರಕರು ಕರ್ಮುಕಬಾಣದಾಯಕರು
uḷidudidirali chatra camarā vaḷiyavaru haḍapigaru birudā vaḷiyavaru pāṭhakaru vādyada mallagāyakaru salila bhakṣyavidānagajahaya kulada rakṣavraṇacikitsaka daḷita rathacārakaru karmukabāṇadāyakaru
ಕುದುರೆ ರಾವ್ತರು ಜೋದಸಂತತಿ ಮದಗಜವ್ರಜವತಿರಥಾವಳಿ ಪದಚರರು ಚತುರಂಗಬಲವೊಂದುಳಿಯದಿದರೊಳಗೆ ಪದದಲೇ ಕೌರವನೃಪತಿ ಜಾ ರುದನು ಕುಂತೀಸುತರು ಬಹಳಾ ಭ್ಯುದಯರಾದರು ವೀರನಾರಾಯಣನ ಕರುಣದಲಿ
kudure rāvtaru jōdasaṃtati madagajavrajavatirathāvaḷi padacararu caturaṃgabalavoṃduḷiyadidaroḷage padadalē kauravanr̥pati jā rudanu kuṃtīsutaru bahaḷā bhyudayarādaru vīranārāyaṇana karuṇadali
Keys: ← → turn the page, J K step through the verses.
Illustration: Verse & Place (Project-owned).