Skip to content

ಆದಿ ಪರ್ವ — ಸಂಧಿ ೧೪ · ಆದಿ ಪರ್ವ — ಸಂಧಿ ೧೪

Adi Parva · Sandhi 14

ādi parva — saṃdhi 14

The complete adi parva · sandhi 14 in Kannada.

34 passagesKannada with transliteration

An original emblem for Adi Parva.

Invocation

1.14.opening

ತಮತಮಗೆ ತವಕದಲಿ ಭೂಪೋ ತ್ತಮರು ಹೋರಿದು ಬಳಲಿ ಜಾತ ಶ್ರಮರು ಹಿಮ್ಮೆಟ್ಟಿದರು ಗೆಲಿದುದು ಧನು ಮಹಾರಥರ

tamatamage tavakadali bhūpō ttamaru hōridu baḷali jāta śramaru himmeṭṭidaru gelidudu dhanu mahārathara

ಕೇಳು ಜನಮೇಜಯನೃಪತಿ ಪಾಂ ಚಾಲೆ ಪೊಕ್ಕಳು ಭದ್ರಮಂಟಪ ಶಾಲೆಯನು ಮರಳಿದುದು ಮನ್ಮಥನೊಡ್ಡು ಸತಿಯೊಡನೆ ಬಾಲೆಯನು ನಿಜರೂಪದರ್ಪದೊ ಳಾಳಲರಿದಿರೆ ಬಾಹುಬಲದಲಿ ಸೋಲಿಸುವಡನುವಾಗಿಯೆಂದರು ಹೊಯ್ದು ಡಂಗುರವ

kēḷu janamējayanr̥pati pāṃ cāle pokkaḷu bhadramaṃṭapa śāleyanu maraḷidudu manmathanoḍḍu satiyoḍane bāleyanu nijarūpadarpado ḷāḷalaridire bāhubaladali sōlisuvaḍanuvāgiyeṃdaru hoydu ḍaṃgurava

Report an error

ಇದೆ ಮಹಾಧನು ಬಾಣಪಂಚಕ ವಿದೆ ನಭೋಗ್ರದ ಯಂತ್ರ ಹೊಳವು ತ್ತಿದೆ ವಿಭಾಡಿಸಿ ಮೆರೆವನಾವನು ಬಾಹು ವಿಕ್ರಮವ ಇದುವೆ ಕಬ್ಬಿನ ಬಿಲು ಶರಾವಳಿ ಯಿದು ಕುಸುಮಮಯ ಯಂತ್ರವಬಲೆಯ ಹೃದಯವಾತನೆ ರಮಣನಾತನೆ ಕುಸುಮ ಶರನೆಂದ

ide mahādhanu bāṇapaṃcaka vide nabhōgrada yaṃtra hoḷavu ttide vibhāḍisi merevanāvanu bāhu vikramava iduve kabbina bilu śarāvaḷi yidu kusumamaya yaṃtravabaleya hr̥dayavātane ramaṇanātane kusuma śaraneṃda

Report an error

ಎಂದು ಸಾರಿದು ಭಾರಿ ಧನುವನು ತಂದು ಧರೆಗಿಳುಹಿದರು ಯಂತ್ರವ ನಂದವಿಟ್ಟರು ಗಗನದಲಿ ಗವಸಣಿಗೆಗಳನುಗಿದು ಮುಂದೆ ಕೂರಂಬುಗಳ ಥರಥರ ದಿಂದ ನಿಲಿಸಿ ಸುಗಂಧದಕ್ಷತೆ ಯಿಂದ ಪೂಜೆಯ ರಚಿಸಿದರು ವೈದಿಕ ವಿಧಾನದಲಿ

eṃdu sāridu bhāri dhanuvanu taṃdu dharegiḷuhidaru yaṃtrava naṃdaviṭṭaru gaganadali gavasaṇigegaḷanugidu muṃde kūraṃbugaḷa tharathara diṃda nilisi sugaṃdhadakṣate yiṃda pūjeya racisidaru vaidika vidhānadali

Report an error

ಮಸಗಿದುದು ಬಹು ವಾದ್ಯರವ ನಿ ಪ್ಪಸರದಲಿ ನಿಸ್ಸಾಳತತಿ ಗ ರ್ಜಿಸಿದವಾವರ್ಜಿಸುವವೋಲ್ ಘನಯಂತ್ರ ಭೇದಿಗಳ ಒಸಗೆಯಾಟವೊ ಬಿಲ್ಲ ಹೊಯ್ಲಿನ ಹಸುಗೆಯಾಟವೊ ಗರುವರಿಗೆ ಗಂ ಗಸೆಯ ಮಾಡಿತು ಚಾಪವಿತ್ತಲು ಭೂಪ ಕೇಳೆಂದ

masagidudu bahu vādyarava ni ppasaradali nissāḷatati ga rjisidavāvarjisuvavōl ghanayaṃtra bhēdigaḷa osageyāṭavo billa hoylina hasugeyāṭavo garuvarige gaṃ gaseya māḍitu cāpavittalu bhūpa kēḷeṃda

Report an error

ನೆರವಿಯಲಿ ನಾನಾ ದಿಗಂತದ ಧರಣಿಪತಿಗಳ ಹಮ್ಮಿಕೆಯಲು ಬ್ಬರಿಸಿ ಹೊಕ್ಕರು ಬೇರೆ ಬೇರೊಬ್ಬೊಬ್ಬರುರವಣಿಸಿ ಹರಗಿರಿಗೆ ಹುಲು ರಕ್ಕಸರು ಮ ತ್ಸರಿಸುವಂತಾಯ್ತೇನನೆಂಬೆನು ಧರೆಯ ಬಿಡದೀ ಧನು ವಿಭಾಡಿಸಿ ಕೆಡಹಿತವನಿಪರ

neraviyali nānā digaṃtada dharaṇipatigaḷa hammikeyalu bbarisi hokkaru bēre bērobbobbaruravaṇisi haragirige hulu rakkasaru ma tsarisuvaṃtāytēnaneṃbenu dhareya biḍadī dhanu vibhāḍisi keḍahitavanipara

Report an error

ಹಾರ ಹರಿದುದು ಕರ್ಣಪೂರದ ಚಾರು ಮಣಿಗಳು ಸಡಲಿದುವು ಪದ ವೀರ ನೇವುರ ನೆಗ್ಗಿದವು ಕುಗ್ಗಿದವು ನೆನಹುಗಳು ನಾರಿಯರ ಕೈಹೊಯ್ಲ ನಗೆಯ ನಿ ಹಾರ ಜಡಿದುದು ಮುಸುಕದಲೆಯ ಮ ಹೀರಮಣರೋಸರಿಸಿ ಸಿಂಹಾಸನವ ಸಾರಿದರು

hāra haridudu karṇapūrada cāru maṇigaḷu saḍaliduvu pada vīra nēvura neggidavu kuggidavu nenahugaḷu nāriyara kaihoyla nageya ni hāra jaḍidudu musukadaleya ma hīramaṇarōsarisi siṃhāsanava sāridaru

Report an error

ಮಿಡುಕದೀ ಧನು ನಮ್ಮ ಝಾಡಿಸಿ ಕೆಡಹಿತದನಿನ್ನಾರು ಕೊರಳಲಿ ತೊಡಿಸಿ ತಿರುವನು ಸೆಳೆದು ಬಿಡುವರೊ ಯಂತ್ರದಲಿ ಶರವ ಕಡುಹಿನಣ್ಣನ ಕಾಂಬೆವೈಸಲೆ ನುಡಿದು ಮಾಡುವುದೇನೆನುತ ಸಿರಿ ಮುಡಿಯ ಮುಸುಕಿನ ರಾಯರಿದ್ದರು ಬಯಲ ಬಿಂಕದಲಿ

miḍukadī dhanu namma jhāḍisi keḍahitadaninnāru koraḷali toḍisi tiruvanu seḷedu biḍuvaro yaṃtradali śarava kaḍuhinaṇṇana kāṃbevaisale nuḍidu māḍuvudēnenuta siri muḍiya musukina rāyariddaru bayala biṃkadali

Report an error

ಐಸಲೇ ಸೌಭಾಗ್ಯವೆಮಗೆ ಶ ರಾಸನಾಕರುಷಣದೊಳತಿ ಡೊ ಳ್ಳಾಸದಲಿ ಡಾವರಿಸಿ ಗೆಲಿದಳು ದ್ರುಪದಸುತೆ ನೃಪರ ಲೇಸು ತಪ್ಪೇನಿದಕೆನುತ ಭ ದ್ರಾಸನವನಿಳಿದುಲಿವ ತೊಡರಿನ ಘೋಷಣೆಯ ಘಳಿಲುಗಳ ಮಗಧ ನೃಪಾಲನೈತಂದ

aisalē saubhāgyavemage śa rāsanākaruṣaṇadoḷati ḍo ḷḷāsadali ḍāvarisi gelidaḷu drupadasute nr̥para lēsu tappēnidakenuta bha drāsanavaniḷiduliva toḍarina ghōṣaṇeya ghaḷilugaḷa magadha nr̥pālanaitaṃda

Report an error

ಬಿಲ್ಲ ಹೊರೆಗೈದಿದನು ಚೌಪಟ ಮಲ್ಲ ನೋಡಿದನೈಸಲೇ ತ ಪ್ಪಲ್ಲೆನುತ ಮೇಲ್ದಿರುಹಿದನು ಮುಂಗೈಯ ಸರಪಣಿಯ ಬಿಲ್ಲನೆತ್ತಿದರಿವನನಂಗನೆ ಯೊಲ್ಲಳೋ ಮೇಣೊಲಿವಳೋ ಮಿಗೆ ಬಲ್ಲಿದನು ತಾನೀತನೆನುತಿರ‍್ದುದು ಸಖೀನಿವಹ

billa horegaididanu caupaṭa malla nōḍidanaisalē ta ppallenuta mēldiruhidanu muṃgaiya sarapaṇiya billanettidarivananaṃgane yollaḷō mēṇolivaḷō mige ballidanu tānītanenutirdudu sakhīnivaha

Report an error

ಈತ ಕುಸಿದೆತ್ತಿದಡೆ ಧನು ಮಾ ರಾತುದಿವನೌಕಿದಡೆ ಕಾರ್ಮುಕ ವೀತನಾರೆಂದರಿಯದಿವನೌಡೊತ್ತಿ ಮೈಬಲಿದ ಘಾತಿಯಲಿ ಘಲ್ಲಿಸಿದಡಾ ಧನು ಸೋತುದೆವೆಯಂತರಕೆ ತೊಲಗದು ಧಾತುಗುಂದಿದನಳ್ಳಿರಿದವಳ್ಳೆಗಳು ಮಾಗಧನ

īta kusidettidaḍe dhanu mā rātudivanaukidaḍe kārmuka vītanāreṃdariyadivanauḍotti maibalida ghātiyali ghallisidaḍā dhanu sōtudeveyaṃtarake tolagadu dhātuguṃdidanaḷḷiridavaḷḷegaḷu māgadhana

Report an error

ಬೆಮರನಾರಿಸಿಕೊಂಡು ವಿಗತ ಶ್ರಮನು ಮೊಳಕಾಲಿಕ್ಕಿ ದಂಡೆಯೊ ಳಮರಿ ದೇಹವ ಬಲಿದು ವಕ್ಷದೊಳೌಂಕಿ ಗಾಢದಲಿ ಕುಮತಿಯಲ್ಲಾಡಿದರೆ ಬಿಟ್ಟುದು ಅಮಮ ಜವೆ ಮಾತ್ರಕ್ಕೆ ಘನ ವಿ ಕ್ರಮವನೊಡೆದುದು ಸದೆದುದಾತನ ಗರ್ವವಿಭ್ರಮವ

bemaranārisikoṃḍu vigata śramanu moḷakālikki daṃḍeyo ḷamari dēhava balidu vakṣadoḷauṃki gāḍhadali kumatiyallāḍidare biṭṭudu amama jave mātrakke ghana vi kramavanoḍedudu sadedudātana garvavibhramava

Report an error

ಕೇಳಿದನು ಕಾಂತಾ ಕದಂಬದ ಘೋಳುಗಳ ಘೋಳೆಂಬ ನಗೆಗಳ ಕಾಳು ಮಾಡಿದನೇಕೆ ಧನು ತಾನೇಕೆ ಸುಡುಯೆನುತ ಬೇಳುವೆಯಲುಡಿದಂಕದವೊಲು ಬ್ಬಾಳುತನ ಪೈಸರಿಸೆ ಮುಸುಕಿನ ಮೌಳಿ ಹಿಮ್ಮೆಟ್ಟಿದನು ಕಡೆಯವ ತಿರುಗಿ ಕಿರುದೊಡೆಗೆ

kēḷidanu kāṃtā kadaṃbada ghōḷugaḷa ghōḷeṃba nagegaḷa kāḷu māḍidanēke dhanu tānēke suḍuyenuta bēḷuveyaluḍidaṃkadavolu bbāḷutana paisarise musukina mauḷi himmeṭṭidanu kaḍeyava tirugi kirudoḍege

Report an error

ಕೆರಳಿದನು ದಮಘೋಷನಂದನ ನರರೆ ದಿಟ್ಟನ ಧನು ವಿಭಾಡಿಸಿ ತೆರಳಿಚಿತಲಾ ವಿಗಡ ಚಕ್ರಾಯುಧನ ಮಾಗಧನ ಹರಿಬವೆನ್ನದು ಹೊಳ್ಳುಗಳೆವೆನು ದುರುಳ ಧನುವನು ನಗುವ ಕನ್ನೆಯ ತುರುಬ ಕೊಯ್ಸುವೆನೆನುತ ಕಲಿ ಶಿಶುಪಾಲನೈತಂದ

keraḷidanu damaghōṣanaṃdana narare diṭṭana dhanu vibhāḍisi teraḷicitalā vigaḍa cakrāyudhana māgadhana haribavennadu hoḷḷugaḷevenu duruḷa dhanuvanu naguva kanneya turuba koysuvenenuta kali śiśupālanaitaṃda

Report an error

ಇವನಲೇ ರಾವಣನು ಮುನ್ನಿನ ಭವದೊಳಗೆ ತಪ್ಪಿಲ್ಲೆನುತ ಜನನಿವಹ ನಡುಗಿತು ಕೋಮಲಾಂಗಿಯ ಪುಣ್ಯವೆಂತೆನುತ ಅವನಿಪತಿ ಕೇಳನೆದನಿವ ಚಾ ಪವನು ಬೋಳೈಸಿದನು ಬಲುಹೋ ಶಿವಯೆನುತ ಸೀವರಿಸಿದನು ಡಾವರಿಸಿದನು ಧನುವ

ivanalē rāvaṇanu munnina bhavadoḷage tappillenuta jananivaha naḍugitu kōmalāṃgiya puṇyaveṃtenuta avanipati kēḷanedaniva cā pavanu bōḷaisidanu baluhō śivayenuta sīvarisidanu ḍāvarisidanu dhanuva

Report an error

ಏನನೆಂಬೆನು ಧನು ಸಘಾಡದ ಮಾನಭಂಗದ ಮೊದಲ ಮನೆಯೆನೆ ಮಾನಿನಿಯರಪಹಾಸ್ಯವೀ ಜನರೀ ನೃಪಾಲಕರ ಹೀನ ನುಡಿಗಳ ಕಂಡು ದೈತ್ಯಸ ಮಾನ ಮನದಲಿ ನೊಂದು ತಿರುಗಿದ ನೇನನೆಂಬೆನು ಸದೆದುದಾತನ ಗರ್ವವಿಭ್ರಮವ

ēnaneṃbenu dhanu saghāḍada mānabhaṃgada modala maneyene māniniyarapahāsyavī janarī nr̥pālakara hīna nuḍigaḷa kaṃḍu daityasa māna manadali noṃdu tirugida nēnaneṃbenu sadedudātana garvavibhramava

Report an error

ಕಂಡು ಮಾಗಧ ಕರೆದನೀ ಧನು ಚಂಡಿಯಿದು ನಮಗಲ್ಲ ನಾವ್ ಮುಂ ಕೊಂಡು ತಪ್ಪಿತು ನೊಪ್ಪಿತಾದುದು ಭಾರಿಯಗ್ಗಳಿಕೆ ಭಂಡರೀ ಭೂಮಿಪರು ದ್ರುಪದನ ಗುಂಡುದೊತ್ತಿರು ನಗೆಯನಾನಲ ಮಂಡೆಗಳಲಿವರೆನುತ ಹಾಯ್ದರು ತಮ್ಮ ಪಟ್ಟಣಕೆ

kaṃḍu māgadha karedanī dhanu caṃḍiyidu namagalla nāv muṃ koṃḍu tappitu noppitādudu bhāriyaggaḷike bhaṃḍarī bhūmiparu drupadana guṃḍudottiru nageyanānala maṃḍegaḷalivarenuta hāydaru tamma paṭṭaṇake

Report an error

ಗರುವರಲ್ಲಾ ಚೈದ್ಯ ಮಾಗಧ ರಿರದೆ ತಮ್ಮಯ ಪುರಕೆ ಗಮಿಸಿರರಸುಗಳೆ ಮಿಕ್ಕವರ ವಿಧಿಯನು ಕೇಳು ನರನಾಥ ಧರಧುರದೊಳಭಿಮಾನಹಾನಿಯ ಹುರುಳಹುದು ಬಿಲು ಹೋರಟೆಗೆ ನಿಲರಿದೆನುತ್ತಂಗದಣೆಗುಂದಿತು ನೆರೆದ ನೃಪನಿಕರ

garuvarallā caidya māgadha rirade tammaya purake gamisirarasugaḷe mikkavara vidhiyanu kēḷu naranātha dharadhuradoḷabhimānahāniya huruḷahudu bilu hōraṭege nilaridenuttaṃgadaṇeguṃditu nereda nr̥panikara

Report an error

ಮರುಳೆ ಪಾಂಚಾಲನ ಕುಮಾರಿಯ ವರ ಕಟಾಕ್ಷದ ಬೀಸುವಲೆಯಲಿ ಶರಮಹಾಧನುವೆಂಬ ಬಲುದಡಿವಲೆಯನಳವಡಿಸಿ ಧರಣಿಪಾಲ ಮೃಗಂಗಳನು ಸಲೆ ಬರಿಸಿ ಸದೆದನು ಹೊಲ್ಲೆಹೇನಂ ತಿರಲಿ ನೋಡುವೆನೆನುತ ಶಲ್ಯನೃಪಾಲನೈತಂದ

maruḷe pāṃcālana kumāriya vara kaṭākṣada bīsuvaleyali śaramahādhanuveṃba baludaḍivaleyanaḷavaḍisi dharaṇipāla mr̥gaṃgaḷanu sale barisi sadedanu hollehēnaṃ tirali nōḍuvenenuta śalyanr̥pālanaitaṃda

Report an error

ಅಗ್ಗಳೆಯನಾ ಮಗಧ ಮಾತಿನ ಲಗ್ಗಿಗನು ಶಿಶುಪಾಲ ಸೋಲದ ಸುಗ್ಗಿಯಿಬ್ಬರಿಗಾಯ್ತು ಹಲಬರಿಗಾಯ್ತು ರಣಧೂಳಿ ತಗ್ಗುವುದೊ ಧನು ಧನುವಿಘಾತಿಗೆ ಮುಗ್ಗುವನೊ ಮಾದ್ರೇಶನಿವರೊಳ ಗಗ್ಗಳೆಯನಹನೆಂದು ನೋಡಿದರಂದು ನಾರಿಯರು

aggaḷeyanā magadha mātina laggiganu śiśupāla sōlada suggiyibbarigāytu halabarigāytu raṇadhūḷi tagguvudo dhanu dhanuvighātige mugguvano mādrēśanivaroḷa gaggaḷeyanahaneṃdu nōḍidaraṃdu nāriyaru

Report an error

ಬಂದನೀತನು ಧನುವ ಸಾರಿದು ನಿಂದು ಸಂವರಿಸಿದನು ಕಾಂತಾ ವೃಂದವನು ನೋಡಿದನು ಮನದಲಿ ಧಿಕ್ಕುಧಿಗಿಲೆನುತ ಸಂದಣಿಯ ನಭಕೊತ್ತಿ ಫಣಿಯಲಿ ಮಂದರವ ಬಿಗಿವಂತೆ ಭುಜದಲಿ ಮುಂದುವರಿದವುಚಿದನು ದಂಡೆಯನಿಕ್ಕಿ ಕೋಪದಲಿ

baṃdanītanu dhanuva sāridu niṃdu saṃvarisidanu kāṃtā vr̥ṃdavanu nōḍidanu manadali dhikkudhigilenuta saṃdaṇiya nabhakotti phaṇiyali maṃdarava bigivaṃte bhujadali muṃduvaridavucidanu daṃḍeyanikki kōpadali

Report an error

ಕೊಳ್ಳದೀ ಧನುವೀತನುಬ್ಬಿನೊ ಳಳ್ಳೆಗೊಬ್ಬಿನೊಳೌಕಿ ತೊಡರಿನ ಘಲ್ಲಣೆಯ ಘನಕುಲಿಯೆ ಪಂಟಿಸಿ ನಿಮಿಷ ಮಾತ್ರದಲಬಿಲ್ಲು ಬಿಡದವನಿಯಲಿ ಬಿದ್ದನು ಡೊಳ್ಳು ಮೇಲಾಗಿತ್ತ ಸತಿಯರಘೊಳ್ಳೆನಲು ಸುಡು ಘೋರಧನುವನೆನುತ್ತ ಹೊರದೆಗೆದ

koḷḷadī dhanuvītanubbino ḷaḷḷegobbinoḷauki toḍarina ghallaṇeya ghanakuliye paṃṭisi nimiṣa mātradalabillu biḍadavaniyali biddanu ḍoḷḷu mēlāgitta satiyaraghoḷḷenalu suḍu ghōradhanuvanenutta horadegeda

Report an error

ಹಿಂಗಿದನು ಮಾದ್ರೇಶನೀ ಧನು ಭಂಗಿಸಿತು ಮಾನ್ಯರನು ಜಡವಿದು ಜಂಗಮತ್ವದಲೇನಹುದೊ ಝೋಂಪಿಸಿತಲೈ ಜಗವ ಅಂಗನಾ ಪಾಣಿಗ್ರಹಣ ರಾ ಯಂಗೆ ತಾನೀ ದುಷ್ಟ ಧನುವನು ಭಂಗಬಡಿಸದೆ ಬಿಡೆನೆನುತ ಕಲಿ ಕರ್ಣನೈತಂದ

hiṃgidanu mādrēśanī dhanu bhaṃgisitu mānyaranu jaḍavidu jaṃgamatvadalēnahudo jhōṃpisitalai jagava aṃganā pāṇigrahaṇa rā yaṃge tānī duṣṭa dhanuvanu bhaṃgabaḍisade biḍenenuta kali karṇanaitaṃda

Report an error

ಈತನರ್ಜುನನಲ್ಲಲೇ ರೂ ಪಾತಿಶಯವುಳ್ಳಾತ ಯಂತ್ರವ ನೀತ ಗೆಲಿದರೆ ಪುಣ್ಯವೈಸಲೆ ತಂಗಿಗನುಸಾರಈತ ವರನಹುದೆನುತ ಲಲನಾ ಜಾತವಾತನನೀಕ್ಷಿಸುತ ಸಂ ಪ್ರೀತಿಯಲಿ ಕೊಂಡಾಡುತಿರ್ದುದು ರಾಯ ಕೇಳೆಂದ

ītanarjunanallalē rū pātiśayavuḷḷāta yaṃtrava nīta gelidare puṇyavaisale taṃgiganusāraīta varanahudenuta lalanā jātavātananīkṣisuta saṃ prītiyali koṃḍāḍutirdudu rāya kēḷeṃda

Report an error

ತುಡುಕಿದನು ಚಾಪವನು ಮಹಿಯಿಂ ಮಿಡುಕದಿರೆ ಮಂಡಳಿಸಿ ಝಾಡಿಸಿ ಜಡಿದು ಜರೆದೌಂಕಿದನು ದಂಡೆಯನಿಕ್ಕಿ ಕೋಪದಲಿ ಹೊಡಕರಿಸಿ ಸತ್ವಾತಿಶಯವಿ ಮ್ಮಡಿಸೆ ಸರ್ಷಪಮಾತ್ರ ತಿರುವನು ತೊಡಿಸಲರಿಯದೆ ಹಿಂಗಿ ಮೌನದೊಳಿರ್ದನಾ ಕರ್ಣ

tuḍukidanu cāpavanu mahiyiṃ miḍukadire maṃḍaḷisi jhāḍisi jaḍidu jaredauṃkidanu daṃḍeyanikki kōpadali hoḍakarisi satvātiśayavi mmaḍise sarṣapamātra tiruvanu toḍisalariyade hiṃgi maunadoḷirdanā karṇa

Report an error

ಇವರು ನಾಲ್ವರಿಗೊಂದೆ ಪಥ ಹಲ ರವಗಡಿಸಿ ಮುನ್ನಳುಕಿದರು ಬಹು ಭುವನಪತಿಗಳು ಭಾರಿಧನುವಿದೆ ಭಾಮಿನಿಯ ಮುಂದೆ ಎವಗೆ ತವಗಿದು ವಶವೆ ಬಾವ ನ್ನವನು ವೇಷ್ಟಿಸಿ ಭುಜಗವಿದೆಯೆಂ ದವನಿಪರು ಹೊರಗುಂದಿದರು ಭಯಮುಖದ ದುಗುಡದಲಿ

ivaru nālvarigoṃde patha hala ravagaḍisi munnaḷukidaru bahu bhuvanapatigaḷu bhāridhanuvide bhāminiya muṃde evage tavagidu vaśave bāva nnavanu vēṣṭisi bhujagavideyeṃ davaniparu horaguṃdidaru bhayamukhada duguḍadali

Report an error

ಕ್ಷಿತಿಪ ಕೇಳೈ ವಿಗಡ ಚಾಪ ವ್ಯತಿಕರಕೆ ದುರ್ಯೋಧನಾದಿ ಕ್ಷಿತಿಪತಿಗಳಂಜಿದುದ ಕಂಡನು ನಗುತ ಬಲರಾಮ ಕೃತಕ ಧನುವನು ಮುರಿದು ದ್ರುಪದನ ಸುತೆಯ ಮುಂದಲೆವಿಡಿದು ತಹೆನು ದ್ಧತನಲಾ ಪಾಂಚಾಲನೆನುತಿಳಿದನು ವರಾಸನವ

kṣitipa kēḷai vigaḍa cāpa vyatikarake duryōdhanādi kṣitipatigaḷaṃjiduda kaṃḍanu naguta balarāma kr̥taka dhanuvanu muridu drupadana suteya muṃdaleviḍidu tahenu ddhatanalā pāṃcālanenutiḷidanu varāsanava

Report an error

ಹಲಧರನ ಮಸಕವನು ಕಂಡನು ನಳಿನನಾಭನಿದೇನು ಪೀಠವ ನಿಳಿದಿರೆಲ್ಲಿಗೆ ಗಮನವಾವುದು ಕಾರ್ಯಗತಿ ನಿಮಗೆ ತಿಳುಹಿಯೆನೆ ಬೇರೇನು ಯಂತ್ರವ ಕಳಚಿ ಬಿಸುಟು ಲತಾಂಗಿಯನು ಹಿಡಿ ದೆಳೆದು ತಹೆನೆನಲೈಸಲೇ ಕೇಳೆಂದನಸುರಾರಿ

haladharana masakavanu kaṃḍanu naḷinanābhanidēnu pīṭhava niḷidirellige gamanavāvudu kāryagati nimage tiḷuhiyene bērēnu yaṃtrava kaḷaci bisuṭu latāṃgiyanu hiḍi deḷedu tahenenalaisalē kēḷeṃdanasurāri

Report an error

ಏನಹರು ನಿಮಗಿಂದು ಕುಂತೀ ಮಾನಿನಿಯರತ್ತೆಯರಲೇ ತ ತ್ಸೂನುಗಳು ಮೈದುನರು ತತ್ಪತ್ನಿಯರು ತಂಗಿಯರು ಸಾನುರಾಗವೆ ಮನಕೆ ಸಂಶಯ ವೇನಿದಕೆ ತಪ್ಪಿಲ್ಲ ಕುಂತೀ ಸೂನುಗಳು ದ್ರೌಪತಿಗೆ ರಮಣರು ನೋಡಿ ನೀವೆಂದ

ēnaharu nimagiṃdu kuṃtī māniniyaratteyaralē ta tsūnugaḷu maidunaru tatpatniyaru taṃgiyaru sānurāgave manake saṃśaya vēnidake tappilla kuṃtī sūnugaḷu draupatige ramaṇaru nōḍi nīveṃda

Report an error

ಮೂಗಿನಲಿ ಬೆರಳಿಟ್ಟು ಮಕುಟವ ತೂಗಿದನು ಬಲರಾಮನವನಿಯ ನೀಗಿ ಹೋದರ ಮಾತು ಪಾಂಡವರೆತ್ತಲಿವಳೆತ್ತ ಬೇಗುದಿಯೊಳುರಿಯರ ಮನೆಯೊಳೊಂ ದಾಗಿ ಬೆಂದರು ಲೋಕವರಿಯೆ ಶ ಠಾಗಮಿಕ ನಿನಗಂಜುವೆನು ತಾನೆನುತ ಕೈಮುಗಿದ

mūginali beraḷiṭṭu makuṭava tūgidanu balarāmanavaniya nīgi hōdara mātu pāṃḍavarettalivaḷetta bēgudiyoḷuriyara maneyoḷoṃ dāgi beṃdaru lōkavariye śa ṭhāgamika ninagaṃjuvenu tānenuta kaimugida

Report an error

ಕ್ಷಿತಿಯೊಳವರಿಲ್ಲೆಂದು ದ್ರುಪದನ ಸುತೆಗೆ ಪತಿ ಪರರೆಂದು ಯಂತ್ರ ಚ್ಯುತಿಗೆ ನೀವುಂಟೆಂದು ತೋರಿತೆ ನಿಮ್ಮ ಚಿತ್ತದಲಿ ಕ್ಷಿತಿಗೆ ಪಾಂಡವರಲ್ಲದಿಲ್ಲೀ ಸತಿಗೆ ಪತಿ ಪೆರರಿಲ್ಲ ಕುಂತೀ ಸುತರನೀಗಳೆ ತೋರುವೆನು ವಸುದೇವನಾಣೆಂದ

kṣitiyoḷavarilleṃdu drupadana sutege pati parareṃdu yaṃtra cyutige nīvuṃṭeṃdu tōrite nimma cittadali kṣitige pāṃḍavaralladillī satige pati perarilla kuṃtī sutaranīgaḷe tōruvenu vasudēvanāṇeṃda

Report an error

ಇದು ವಿಚಿತ್ರವಲಾ ಗತಾಸುಗ ಳುದಿಸಿದರೆ ಲೇಸೈಸಲೇ ದ್ರೌ ಪದಿಯನವರನುರಾಗಿಸಲಿ ಭೋಗಿಸಲಿ ಭೂತಳವ ಇದುವೆ ನಿಶ್ಚಯವಾದರವರ ಭ್ಯುದಯನವರನುರಾಗಿಸಲಿ ಭೋಗಿಸಲಿ ಭೂತಳವ ಇದುವೆ ನಿಶ್ಚಯವಾದರವರ ಭ್ಯುದಯವೆಮ್ಮಭ್ಯುದಯವೆಂದಾ ಪದುಮನಾಭನ ಹೊಗಳಿ ಕುಳ್ಳಿರ್ದನು ಸರಾಗದಲಿ

idu vicitravalā gatāsuga ḷudisidare lēsaisalē drau padiyanavaranurāgisali bhōgisali bhūtaḷava iduve niścayavādaravara bhyudayanavaranurāgisali bhōgisali bhūtaḷava iduve niścayavādaravara bhyudayavemmabhyudayaveṃdā padumanābhana hogaḷi kuḷḷirdanu sarāgadali

Report an error

ಈಕೆಯನು ಮೆಚ್ಚಿಸದು ರಾಜಾ ನೀಕ ಸೌಂದರ್ಯದಲಿ ಚಾಪ ವ್ಯಾಕರಣ ಪಾಂಡಿತ್ಯವೆಂಬಡೆ ಕಾಣೆ ನಾನೀಗ ಈಕೆಗಿನ್ನಾರೊಡೆಯರೋ ಕುಂ ತೀ ಕುಮಾರಕರಿಲ್ಲಲೇ ಸುಡ ಲೇಕೆ ನೆರಹಿದೆನಿವರನೆನುತಾ ದ್ರುಪದ ಚಿಂತಿಸಿದ

īkeyanu meccisadu rājā nīka sauṃdaryadali cāpa vyākaraṇa pāṃḍityaveṃbaḍe kāṇe nānīga īkeginnāroḍeyarō kuṃ tī kumārakarillalē suḍa lēke nerahidenivaranenutā drupada ciṃtisida

Report an error

ಹರಾ ಹರಾ ಇನ್ನಾರೊ ತಂಗಿಗೆ ವರನು ವಾರಿಧಿವಲಯದವನೀ ಶ್ವರರು ನೆರೆದಿದೆ ರೂಪು ವಿಕ್ರಮವೆರಡು ಹೊರತಾಗಿ ನರಪತಿಗಳಿವರೈಸಲೇಯಿ ನ್ನರಸಿಗಾವುದು ಹರಸೆನುತ ವಿ ಸ್ತರದ ಗುಜುಗುಜು ಮಸಗಿದುದು ಕಾಂತಾಕದಂಬದಲಿ

harā harā innāro taṃgige varanu vāridhivalayadavanī śvararu neredide rūpu vikramaveraḍu horatāgi narapatigaḷivaraisalēyi nnarasigāvudu harasenuta vi starada gujuguju masagidudu kāṃtākadaṃbadali

Report an error

ಅವನಿಪತಿಗಳು ಹೊಳ್ಳುವಾರಿದ ರಿವರೊಳಿಲ್ಲಲೆ ದಕ್ಷಿಣೆಯ ಹಾ ರುವ ಮಹಾಜನವಿದೆ ಸಮುದ್ರಕೆ ಪಡಿ ಸಮುದ್ರವೆನೆ ಇವರೊಳಗೆ ಮುಂಗೈಯ ಬಲುಹು ಳ್ಳವರು ನೆಗಹಲಿ ಧನುವನೀ ಯಂ ತ್ರವನು ಜಯಿಸಲಿಯೆಂದು ಧೃಷ್ಟದ್ಯುಮ್ನ ಸಾರಿಸಿದ

avanipatigaḷu hoḷḷuvārida rivaroḷillale dakṣiṇeya hā ruva mahājanavide samudrake paḍi samudravene ivaroḷage muṃgaiya baluhu ḷḷavaru negahali dhanuvanī yaṃ travanu jayisaliyeṃdu dhr̥ṣṭadyumna sārisida

Report an error

Illustration: Verse & Place (Project-owned).