ರಾಯ ಚೌಪಟಮಲ್ಲ ಮಲೆವರಿ ರಾಯ ಧೂಳೀಪಟ್ಟ ಗರ್ವಿತ ರಾಯ ಭೀಕರ ಭೀಮ ಕೊಂದನು ಕೌರವಾನುಜನ
rāya caupaṭamalla malevari rāya dhūḷīpaṭṭa garvita rāya bhīkara bhīma koṃdanu kauravānujana
ಕರ್ಣ ಪರ್ವ — ಸಂಧಿ ೧೯ · ಕರ್ಣ ಪರ್ವ — ಸಂಧಿ ೧೯
karṇa parva — saṃdhi 19
The complete karna parva · sandhi 19 in Kannada.
100 passagesKannada with transliteration
Invocation
ರಾಯ ಚೌಪಟಮಲ್ಲ ಮಲೆವರಿ ರಾಯ ಧೂಳೀಪಟ್ಟ ಗರ್ವಿತ ರಾಯ ಭೀಕರ ಭೀಮ ಕೊಂದನು ಕೌರವಾನುಜನ
rāya caupaṭamalla malevari rāya dhūḷīpaṭṭa garvita rāya bhīkara bhīma koṃdanu kauravānujana
ಕೇಳು ಧೃತರಾಷ್ಟ್ರಾವನಿಪ ನಿ ನ್ನಾಳು ತಲೆಕೆಳಗಾಯ್ತು ಭೀಮನ ಧಾಳಿ ಹೆಚ್ಚಿತು ಹೊಸತು ದಶಕದ ಮಸಕ ಮಿಗಿಲಾಯ್ತು ಮೇಲೆಮೇಲುಬ್ಬೇಳ್ವ ರಿಪುಶರ ಜಾಲ ಧಾರಾಧೂಮವಹ್ನಿ ಜ್ವಾಲೆಗುರೆ ತೇರೈಸಿ ಕೋರೈಸಿತು ಕುರುಸ್ತೋಮ
kēḷu dhr̥tarāṣṭrāvanipa ni nnāḷu talekeḷagāytu bhīmana dhāḷi heccitu hosatu daśakada masaka migilāytu mēlemēlubbēḷva ripuśara jāla dhārādhūmavahni jvālegure tēraisi kōraisitu kurustōma
ಉಲುಕಲಮ್ಮುವರಿಲ್ಲಲಾ ಭಟ ರಳುಕಿದರೆ ಭಾರಂಕದವರ ಗ್ಗಳೆಯ ಬಿರುದರು ಬೀತರೇ ಸೋತರೆ ಪಲಾಯನಕೆ ಹಲವು ಮಾತೇನೆಮ್ಮ ಮಾವನ ಕಳನ ಹರಿಬಕೆ ನಾವೆ ಇನ್ನೈ ಸಲೆ ಎನುತ ನೆರಹಿದನು ನಿನ್ನ ಕುಮಾರಕನು ದಳವ
ulukalammuvarillalā bhaṭa raḷukidare bhāraṃkadavara ggaḷeya birudaru bītarē sōtare palāyanake halavu mātēnemma māvana kaḷana haribake nāve innai sale enuta nerahidanu ninna kumārakanu daḷava
ಆ ವಿಗಡ ಪರಿವಾರದಲಿ ರಥ ಸಾವಿರವ ಮೇಳೈಸಿದರು ದಂ ತ್ಯಾವಳಿಯ ಬೇರೆಣಿಸಿ ನಿಲಿಸಿದರೈದುಸಾವಿರವ ರಾವುತರೊಳಗ್ಗಳೆಯರನು ದಶ ಸಾವಿರವ ಜೋಡಿಸಿದರಿನಿಬರು ಸಾವನೇ ನಿಶ್ಚೈಸಿ ಬಿಗಿದರು ವೀರಕಂಕಣವ
ā vigaḍa parivāradali ratha sāvirava mēḷaisidaru daṃ tyāvaḷiya bēreṇisi nilisidaraidusāvirava rāvutaroḷaggaḷeyaranu daśa sāvirava jōḍisidarinibaru sāvanē niścaisi bigidaru vīrakaṃkaṇava
ಕುಡಿತೆಯಲಿ ಕರ್ಪುರವ ಸುರಿಸುರಿ ದೊಡನೆ ಸಾದು ಜವಾಜಿಲೇಪವ ಮುಡಿವ ಹೊಸಹೂಗಳನು ವರಗಂಧಾನುಲೇಪನದ ಉಡುಗೊರೆಯ ವೀಳೆಯದ ರತ್ನದ ತೊಡಿಗೆಗಳಲಾ ಪಟುಭಟರ ವಂ ಗಡವ ಮನ್ನಿಸಿ ನಿನ್ನ ಮಗನನುವಾದನಾಹವಕೆ
kuḍiteyali karpurava surisuri doḍane sādu javājilēpava muḍiva hosahūgaḷanu varagaṃdhānulēpanada uḍugoreya vīḷeyada ratnada toḍigegaḷalā paṭubhaṭara vaṃ gaḍava mannisi ninna magananuvādanāhavake
ಬಲದೊಳಗೆ ಹೆಸರುಳ್ಳವರು ನೃಪ ತಿಲಕ ನೀ ಸಾಕಿದ ಕುಮಾರರು ಹಳೆಯರಲಿ ಮಿಕ್ಕವರು ಮಕ್ಕಳ ತಂಡದಲಿ ಕೆಲರು ಅಳಲಿಗರು ದುಶ್ಶಾಸನನ ಬಲ ದೊಳಗೆ ನಿಂದುದು ಸಾಲಸಿಡಿಲಿನ ಬಳಗವೋ ನಿನ್ನವರ ಬಣ್ಣಿಸಲರಿಯೆ ನಾನೆಂದ
baladoḷage hesaruḷḷavaru nr̥pa tilaka nī sākida kumāraru haḷeyarali mikkavaru makkaḷa taṃḍadali kelaru aḷaligaru duśśāsanana bala doḷage niṃdudu sālasiḍilina baḷagavō ninnavara baṇṇisalariye nāneṃda
ಸಾಲ ಸಿಂಧದ ಮಣಿವ ಗೋವಳಿ ಗೋಲ ತೂಕದ ತಳಿತ ಚೌರಿಯ ಜಾಲ ಮೋಹಿದ ಮೇಘಘಟೆಯೆನೆ ಜಡಿವ ಝಲ್ಲರಿಯ ಜಾಳಿಗೆಯ ಹೊಗರೊಗುವ ವಹ್ನಿ ಜ್ವಾಲೆಯೆನೆ ಝಳಪಿಸುವ ಕೈದುಗ ಳೋಳಿ ಹೊಳೆದುದು ಸೆಳೆದುದೀತನ ಗರ್ವವಿಭ್ರಮವ
sāla siṃdhada maṇiva gōvaḷi gōla tūkada taḷita cauriya jāla mōhida mēghaghaṭeyene jaḍiva jhallariya jāḷigeya hogaroguva vahni jvāleyene jhaḷapisuva kaiduga ḷōḷi hoḷedudu seḷedudītana garvavibhramava
ಹರೆದ ಬಲ ಹುರಿಗಟ್ಟಿ ಖತಿಯಲಿ ದೊರೆಯ ಕೂಡೊದಗಿದುದು ಬೀರುವ ಬಿರುದುಗಹಳೆಯ ದನಿಯ ಘಾಯದ ಭೂರಿ ಭೇರಿಗಳ ಮೊರೆವ ಬಹುವಿಧ ವಾದ್ಯರಭಸದ ಧರಧುರದ ಕೆಂಧೂಳಿಯಲಿ ಮೋ ಹರಿಸಿ ಮುಸುಕಿತು ಭೀಮಸೇನನ ರಥದ ಬಳಸಿನಲಿ
hareda bala hurigaṭṭi khatiyali doreya kūḍodagidudu bīruva birudugahaḷeya daniya ghāyada bhūri bhērigaḷa moreva bahuvidha vādyarabhasada dharadhurada keṃdhūḷiyali mō harisi musukitu bhīmasēnana rathada baḷasinali
ಸಾರಹೇಳೋ ರಾಯಕುವರ ಮು ರಾರಿ ದುಶ್ಶಾಸನ ಕಣಾ ಫಡ ವೈರಿ ಭೀಮ ದ್ವಿರದ ಕುಂಭಸ್ಥಳಕೆ ಪಂಚಮುಖ ವೀರಮನ್ಮಥ ತ್ರಿಪುರಹರ ಜ ಜ್ಝಾರ ಭಟ ಜಗಜಟ್ಟಿಗಿದಿರೆ ವಿ ಕಾರಿಯೇ ಫಡ ಭೀಮನೆನುತೈದಿತು ಭಟಸ್ತೋಮ
sārahēḷō rāyakuvara mu rāri duśśāsana kaṇā phaḍa vairi bhīma dvirada kuṃbhasthaḷake paṃcamukha vīramanmatha tripurahara ja jjhāra bhaṭa jagajaṭṭigidire vi kāriyē phaḍa bhīmanenutaiditu bhaṭastōma
ದಾಯವಿದು ಮಝ ಪೂತು ರಣದ ವಿ ಡಾಯಿಯಹುದೋ ಕಲಿ ಯುಧಿಷ್ಠಿರ ರಾಯನಾಣೆ ಸುಯೋಧನಾನುಜನೋಜೆ ಲೇಸೆನುತ ವಾಯುಸುತನಾಕರ್ಣಕರ್ಷಿತ ಸಾಯಕನು ರಿಪುಸುಭಟಕುಲ ಲಯ ದಾಯಕನು ದಳದುಳವ ಹಾಯ್ದನು ವೈರಿಮೋಹರವ
dāyavidu majha pūtu raṇada vi ḍāyiyahudō kali yudhiṣṭhira rāyanāṇe suyōdhanānujanōje lēsenuta vāyusutanākarṇakarṣita sāyakanu ripusubhaṭakula laya dāyakanu daḷaduḷava hāydanu vairimōharava
ನುಸಿಗಳೆನ್ನೆವು ನೀವು ಜಗಸಾ ಹಸಿಕರೈ ಕಾಲಾಳು ಜೋಧ ಪ್ರಸರದೆಸುಗೆಗೆ ಹೆದರುವೆವು ಹೇರಾಳದಂಬುಗಳ ದಶಕವುಳ್ಳವರಹಿರಿ ಸಮರಥ ವಿಷಮರಾವ್ತರು ನೋಡುತಿರಿ ಸರ ಳಿಸಲಿ ನಿಮ್ಮಯ ದೊರೆಗಳೆನುತುರವಣಿಸಿದನು ಭೀಮ
nusigaḷennevu nīvu jagasā hasikarai kālāḷu jōdha prasaradesugege hedaruvevu hērāḷadaṃbugaḷa daśakavuḷḷavarahiri samaratha viṣamarāvtaru nōḍutiri sara ḷisali nimmaya doregaḷenuturavaṇisidanu bhīma
ಸಾರಿರೈ ಕಾಲಾಳು ರಥಿಕರು ಸಾರಿರೈ ರಾವುತರು ಜೋಧರು ಭಾರಣೆಯಲಿರಿ ದೊರೆಯನರಸುವ ಬಯಲ ಬೊಬ್ಬೆಗಳ ಆರುಭಟೆಗಾರಳುಕುವರು ಪರಿ ವಾರ ಕೈಮಾಡದಿರೆನುತ ಕುರು ವೀರನನುಜರು ತರುಬಿದರು ಪವಮಾನನಂದನನ
sārirai kālāḷu rathikaru sārirai rāvutaru jōdharu bhāraṇeyaliri doreyanarasuva bayala bobbegaḷa ārubhaṭegāraḷukuvaru pari vāra kaimāḍadirenuta kuru vīrananujaru tarubidaru pavamānanaṃdanana
ಸಡಿಫಡೇನಿದು ತಮ್ಮ ತಲೆಗಳಿ ಗೊಡೆಯರಲ್ಲದೆ ಕೌರವಾನುಜ ರೊಡೆಯರೇ ಪರಿವಾರದಭಿಮಾನಾವಮಾನದಲಿ ಬಿಡುವವರು ನಾವಲ್ಲ ಭೀಮನ ಕಡಿಯೊಳಗೆ ಕಡಿವೆರಸಿ ನೆತ್ತರು ಗುಡಿಯೆವೇ ತಾವೆನುತ ದಳ ಮುಕ್ಕುಱುಕಿತನಿಲಜನ
saḍiphaḍēnidu tamma talegaḷi goḍeyarallade kauravānuja roḍeyarē parivāradabhimānāvamānadali biḍuvavaru nāvalla bhīmana kaḍiyoḷage kaḍiverasi nettaru guḍiyevē tāvenuta daḷa mukkuṟukitanilajana
ಏನ ಹೇಳುವೆನರಸ ತೂಳಿದ ವಾನೆಗಳು ನಾರಾಚನಿಚಯದ ಸೋನೆ ಸುರಿದುದು ಭೀಮಸೇನನ ರಥದ ಶಿಖರದಲಿ ಭಾನುಬಿಂಬವ ಮೊಗೆವ ಲೌಡೆಯ ಮಾನಸದ ಧಕ್ಕಡರು ಕಲಿ ಪವ ಮಾನ ತನಯನ ಮುತ್ತಿಕೊಂಡರು ರಾಯರಾವುತರು
ēna hēḷuvenarasa tūḷida vānegaḷu nārācanicayada sōne suridudu bhīmasēnana rathada śikharadali bhānubiṃbava mogeva lauḍeya mānasada dhakkaḍaru kali pava māna tanayana muttikoṃḍaru rāyarāvutaru
ಬಳಸಿನಲಿ ಚಾಚಿದವು ರಥಸಂ ಕುಳ ಪದಾತಿಯ ಕೈದು ಮೀರಿದ ವಳವಿಯಲಿ ಮೊನೆಗಾಣಿಸಿದರರಿಸೂತವಾಜಿಗಳ ಸಿಲುಕಿದನು ಫಡ ಸ್ವಾಮಿದ್ರೋಹಿಗೆ ಬಲೆಯ ಹಾಯಿಕೊ ಗಂಡುಮೀನ ಗ್ಗಳೆಯ ಗಾಣವ ಕೊಳ್ಳದೆನುತೌಕಿದರು ಬಳಸಿನಲಿ
baḷasinali cācidavu rathasaṃ kuḷa padātiya kaidu mīrida vaḷaviyali monegāṇisidararisūtavājigaḷa silukidanu phaḍa svāmidrōhige baleya hāyiko gaṃḍumīna ggaḷeya gāṇava koḷḷadenutaukidaru baḷasinali
ಧೂಳು ಮುಸುಕಿತು ಸುತ್ತುವಳಯದ ಲಾಳು ಹೊಕ್ಕುದು ಹೊಯ್ಲ ಹೊದರಿನ ಬಾಳುಗಿಡಿಗಳ ಖಣಿಖಟಿಲ ಘಲ್ಲಣೆಯ ಗರ್ಗರದ ಮೇಲುಮೇಲುಬ್ಬೇಳ್ವ ಬೊಬ್ಬೆಯ ತೂಳುವರೆ ಕಹಳೆಗಳ ಘೋಳಾ ಘೋಳಿ ಮಸಗಿತು ಭೀಮಸೇನನ ರಥದ ಬಳಸಿನಲಿ
dhūḷu musukitu suttuvaḷayada lāḷu hokkudu hoyla hodarina bāḷugiḍigaḷa khaṇikhaṭila ghallaṇeya gargarada mēlumēlubbēḷva bobbeya tūḷuvare kahaḷegaḷa ghōḷā ghōḷi masagitu bhīmasēnana rathada baḷasinali
ಅಳಲಿಗರಲೇ ಕೌರವಾನುಜ ರಳುಕದಿರಿದರಲೈ ವಿಘಾತಿಗೆ ಸಿಲುಕದಿರನೋ ಭೀಮನೆನುತುಬ್ಬಿದರು ನಿನ್ನವರು ಜಲನಿಧಿಯೊಳುಬ್ಬೆದ್ದ ತೆರೆಯಲಿ ಮುಳುಗುವುದೆ ಮಂದರವೆನುತ ಕಳ ವಳಿಸಿದವರೇನರಿಯರೇ ತಮ್ಮವನ ಕೈಗುಣವ
aḷaligaralē kauravānuja raḷukadiridaralai vighātige silukadiranō bhīmanenutubbidaru ninnavaru jalanidhiyoḷubbedda tereyali muḷuguvude maṃdaravenuta kaḷa vaḷisidavarēnariyarē tammavana kaiguṇava
ತೆಗಸಬೇಹುದೆ ಪವನಜನ ಮು ತ್ತಿಗೆಯನೆನುತುರವಣಿಪ ನಕುಲಾ ದಿಗಳ ಕಂಡನು ಕರೆದು ಮರುಳಾಡಿದನು ಕಲಿಪಾರ್ಥ ತೆಗಸಬೇಹುದು ತರಣಿಬಿಂಬವ ತಗುಳ್ವ ತಿಮಿರವ ನಿಮ್ಮ ಹಂಗಿನ ನುಗುಳಗಂಡಿಯ ನುಸುಳುದಲೆಗನೆ ಮರಳಿ ನೀವೆಂದ
tegasabēhude pavanajana mu ttigeyanenuturavaṇipa nakulā digaḷa kaṃḍanu karedu maruḷāḍidanu kalipārtha tegasabēhudu taraṇibiṃbava taguḷva timirava nimma haṃgina nuguḷagaṃḍiya nusuḷudalegane maraḷi nīveṃda
ಮಾತು ಹಿಂಚಿತ್ತಿದು ವಿಲಂಬಿಸ ದಾತ ಮುರಿದನು ಮುತ್ತಿದಿಭಸಂ ಘಾತವನು ಪಲ್ಲಟಿಸಿ ಕಡಿ ಕೊಚ್ಚಿದನು ತೇರುಗಳ ಆತು ತಾಗಿದ ರಾವುತರ ಸುರ ಜಾತಿಯಲಿ ಕಂಡೆನು ಪದಾತಿ ವ್ರಾತ ಪಾಣಿಗ್ರಹಣವನು ಗೀರ್ವಾಣವಧುಗಳಲಿ
mātu hiṃcittidu vilaṃbisa dāta muridanu muttidibhasaṃ ghātavanu pallaṭisi kaḍi koccidanu tērugaḷa ātu tāgida rāvutara sura jātiyali kaṃḍenu padāti vrāta pāṇigrahaṇavanu gīrvāṇavadhugaḷali
ಬಲನೆಡನ ಗದೆ ಖಡುಗದಲಿ ರಿಪು ಜಲನಿಧಿಯನೀಸಾಡಿದನು ಹೆ ಬ್ಬಲದ ಹೆಬ್ಬೆಳೆ ಸಾಲಕೊಯ್ಲಿನ ಮೆದೆಗಳೊಟ್ಟಿಲಲಿ ತಳಕುಗಳ ವರ ರಥ ಹಯದ ಹೊಸ ಮೆಳೆಯ ಕಡಿತದ ಕರಿಘಟಾಳಿಯ ಬಲುಮೊರಡಿಗಳ ಸವರಿ ತಳಪಟಮಾಡಿದನು ಭೀಮ
balaneḍana gade khaḍugadali ripu jalanidhiyanīsāḍidanu he bbalada hebbeḷe sālakoylina medegaḷoṭṭilali taḷakugaḷa vara ratha hayada hosa meḷeya kaḍitada karighaṭāḷiya balumoraḍigaḷa savari taḷapaṭamāḍidanu bhīma
ಅಸಿಯಲಿಟ್ಟರೆದಂತೆ ಬಲ ನಿ ಪ್ಪಸರದಲಿ ನುಗ್ಗಾಯ್ತು ನೀಗಿದ ರಸುವನೀ ದುಶ್ಶಾಸನನ ನಂಬುಗೆಯ ಪರಿವಾರ ಬಸಿವ ನೆತ್ತರ ಮೆಯ್ಯ ಕರುಳಿನ ಕುಸುರಿಗಳ ತಲೆಮಿದುಳ ಮೆತ್ತಿಗೆ ವಸೆಯ ತೊರಳೆಯ ತೊಂಗಲಲಿ ರಂಜಿಸಿತು ರಣಭೂಮಿ
asiyaliṭṭaredaṃte bala ni ppasaradali nuggāytu nīgida rasuvanī duśśāsanana naṃbugeya parivāra basiva nettara meyya karuḷina kusurigaḷa talemiduḷa mettige vaseya toraḷeya toṃgalali raṃjisitu raṇabhūmi
ಹೋರಿ ಹಂಗಿಗರಾದೆವೇ ಪರಿ ವಾರ ನೆರೆದುದು ನಾಕದಲಿ ತೆಗೆ ವೀರಕಂಕಣವೇಕೆನುತ ದುರಿಯೋಧನಾನುಜರು ತೇರ ಸೂತನ ಸೂಚನೆಯ ಚೀ ತ್ಕಾರ ಪರಿಧಾವನೆಯ ಧೂಳಿಯ ಲೋರಣದ ಭಾರಣೆಯಲೈದಿದರನಿಲನಂದನನ
hōri haṃgigarādevē pari vāra neredudu nākadali tege vīrakaṃkaṇavēkenuta duriyōdhanānujaru tēra sūtana sūcaneya cī tkāra paridhāvaneya dhūḷiya lōraṇada bhāraṇeyalaididaranilanaṃdanana
ಇಂದಲೇ ನೀವ್ ಗದೆಯ ಹಬ್ಬಕೆ ಬಂದಿರೈ ಲೇಸಾಯ್ತು ನೀವೇ ನೆಂದಿರೈ ನಿಮ್ಮಣ್ಣದೇವನ ಮುಂದೆ ಭಾಷೆಗಳ ತಂದಿರೈ ತಳ್ಳಂಕವನು ನಮ ಗೆಂದು ಕೊಡುವಿರಿ ಕೌರವನ ತ ಮ್ಮಂದಿರೈ ನೀವೆನುತ ಸುಳಿದನು ಸಿಂಹನಾದದಲಿ
iṃdalē nīv gadeya habbake baṃdirai lēsāytu nīvē neṃdirai nimmaṇṇadēvana muṃde bhāṣegaḷa taṃdirai taḷḷaṃkavanu nama geṃdu koḍuviri kauravana ta mmaṃdirai nīvenuta suḷidanu siṃhanādadali
ಗಿಡಿಗನೆತ್ತಲು ಗಿಣಿಯ ಮರಿಗಳ ಗಡಣವೆತ್ತಲು ತೋಳನೆತ್ತಲು ತೊಡಕುವರೆ ತಗರೆತ್ತಲಿವರಿಗೆ ಗೆಲವು ಸೋಲವನು ನುಡಿಯಲಮ್ಮೆನು ನಿನ್ನ ಮಕ್ಕಳ ಮಿಡುಕಿನಂತರವೇನು ಪ್ರಳಯದ ಸಿಡಿಲ ಬಲುಹೋ ಭೀಮನೋ ನಾವರಿಯೆವಿದನೆಂದ
giḍiganettalu giṇiya marigaḷa gaḍaṇavettalu tōḷanettalu toḍakuvare tagarettalivarige gelavu sōlavanu nuḍiyalammenu ninna makkaḷa miḍukinaṃtaravēnu praḷayada siḍila baluhō bhīmanō nāvariyevidaneṃda
ಥಟ್ಟುಗೆಡಹಿ ಕುಮಾರಕರನರೆ ಯಟ್ಟಿ ಹೊಯ್ದನು ಕೆಲಬಲದಲಡ ಗಟ್ಟಿದರನಪ್ಪಳಿಸಿದನು ಚಿಗಿದಾನೆವರಿವರಿದು ಇಟ್ಟಣಿಸಿ ಹೊಕ್ಕೆಸುವವರ ಹುಡಿ ಗುಟ್ಟಿದನು ಹೆಣಸಾಲಿನಲಿ ಮಡು ಗಟ್ಟಿ ನಿಂದುದು ರಕ್ತಜಲ ನರನಾಥ ಕೇಳೆಂದ
thaṭṭugeḍahi kumārakaranare yaṭṭi hoydanu kelabaladalaḍa gaṭṭidaranappaḷisidanu cigidānevarivaridu iṭṭaṇisi hokkesuvavara huḍi guṭṭidanu heṇasālinali maḍu gaṭṭi niṃdudu raktajala naranātha kēḷeṃda
ಒಂದು ಹಲಗೆಯಲೈದು ಹರಿಬಕೆ ಬಂದು ಹೊಕ್ಕವರೈದು ಖತಿಯಲಿ ಹಿಂದ ಕೆಣಕಿದರೆಂಟು ಮಗುಳಿಬ್ಬರನು ಕದನದಲಿ ಕೊಂದನಿಂತಿಪ್ಪತ್ತು ನಿನ್ನಯ ನಂದನರು ನೀಗಿದರು ನೆಲನನು ನಿಂದು ಕರೆದನು ಬಳಿಕ ದುಶ್ಶಾಸನನ ಕಲಿಭೀಮ
oṃdu halageyalaidu haribake baṃdu hokkavaraidu khatiyali hiṃda keṇakidareṃṭu maguḷibbaranu kadanadali koṃdaniṃtippattu ninnaya naṃdanaru nīgidaru nelananu niṃdu karedanu baḷika duśśāsanana kalibhīma
ಧಾರುಣೀಪತಿ ಕೇಳು ನಿನ್ನ ಕು ಮಾರರಲಿ ತೊಂಬತ್ತಯೆಂಟರ ಪಾರುಖಾಣೆಯ ಲೆಕ್ಕ ಸಂದುದು ನಿಮ್ಮ ಚಿತ್ತದಲಿ ಸಾರಭೂತರಲೇ ಸಮಸ್ತವಿ ಕಾರಿಗಳೊಳೀ ವಿಶ್ವನೃಪ ಸಂ ಹಾರರಿಬ್ಬರ ಬೀಯವನು ಮೇಲಿನ್ನು ಕೇಳೆಂದ
dhāruṇīpati kēḷu ninna ku mārarali toṃbattayeṃṭara pārukhāṇeya lekka saṃdudu nimma cittadali sārabhūtaralē samastavi kārigaḷoḷī viśvanr̥pa saṃ hāraribbara bīyavanu mēlinnu kēḷeṃda
ಮುರಿದುದಚ್ಚಾಳಚ್ಚುಕುದುರೆಗ ಳುರುಕುಗೊಂಡುದು ನಿನ್ನವರು ಹೊ ಕ್ಕಿರಿದು ಹೋಗಾಡಿದರು ತನ್ನ ಸಹೋದರವ್ರಜವ ಹೊರಗೆ ಕರ್ಣಕೃಪಾದಿಗಳು ಮೈ ಮರೆವ ಹೊತ್ತಾಯ್ತಿವನ ನೆತ್ತರ ಸುರಿಯದೆಡೆಯಲಿ ಬಿಡೆನೆನುತ ಪವನಜನು ಗರ್ಜಿಸಿದ
muridudaccāḷaccukudurega ḷurukugoṃḍudu ninnavaru ho kkiridu hōgāḍidaru tanna sahōdaravrajava horage karṇakr̥pādigaḷu mai mareva hottāytivana nettara suriyadeḍeyali biḍenenuta pavanajanu garjisida
ದೊರೆಯ ತಮ್ಮನ ತವಕ ತೋಟಿಗೆ ತಿರುಗುತದೆ ತಡವೇನು ನೂಕೆನು ತರಸ ಕೇಳೈ ತನತನಗೆ ದುಶ್ಶಾಸನನ ರಥವ ಪರಿಹರಿಸಿಕೊಂಡೇರಿತೀ ದಳ ದುರವಣೆಯ ಸೈರಿಸಿದಡವನೀ ಶ್ವರನಲೇ ಕಲಿಭೀಮನಲ್ಲದೆ ಧೀರನಾರೆಂದ
doreya tammana tavaka tōṭige tirugutade taḍavēnu nūkenu tarasa kēḷai tanatanage duśśāsanana rathava pariharisikoṃḍēritī daḷa duravaṇeya sairisidaḍavanī śvaranalē kalibhīmanallade dhīranāreṃda
ನೂಕದಿರಿ ಸಂಘಟಿಸಿ ಹೋಹೋ ಸಾಕು ಸಾಕಾ ಮೆಚ್ಚಿದೆನು ತಳು ವೇಕೆ ದುಶ್ಶಾಸನ ವೃಥಾ ನೀ ಹೊತ್ತುಗಳೆವೆಯಲಾ ನೀ ಕಳೆದುಕೊಳು ಧನುವ ನಮ್ಮ ವಿ ವೇಕವನು ದಳ ನೋಡುತಿರಲಿ ನಿ ರಾಕುಳದಲೆಚ್ಚಾಡುವೆವು ನಿಲ್ಲೆಂದನಾ ಭೀಮ
nūkadiri saṃghaṭisi hōhō sāku sākā meccidenu taḷu vēke duśśāsana vr̥thā nī hottugaḷeveyalā nī kaḷedukoḷu dhanuva namma vi vēkavanu daḷa nōḍutirali ni rākuḷadaleccāḍuvevu nilleṃdanā bhīma
ರೂಢಿಸಿದ ಭಟ ನೀನು ಹರಿಬವ ಬೇಡಿ ತೊಡಕಿದೆ ನಾನು ಖಾಡಾ ಖಾಡಿಯಲಿ ಸಿಗುರಿಲ್ಲ ತೆಗೆ ಹಂಗೇಕೆ ತೆತ್ತಿಗರ ನೋಡುತಿರಲೀ ಬಲವೆರಡು ಹೋ ಗಾಡು ನಮ್ಮನು ಮೇಣು ನಿನ್ನನು ಸೂಡುದರಿವೆನು ಸತ್ವದಳತೆಯ ಕಾಣಲಹುದೆಂದ
rūḍhisida bhaṭa nīnu haribava bēḍi toḍakide nānu khāḍā khāḍiyali sigurilla tege haṃgēke tettigara nōḍutiralī balaveraḍu hō gāḍu nammanu mēṇu ninnanu sūḍudarivenu satvadaḷateya kāṇalahudeṃda
ತೊಲಗಿರೈ ಪರಿವಾರ ಬಾಳೆಯ ತಳಿಯ ಮುರಿವತಿಸಹಸಿ ಗಡ ಮರಿ ಮೊಲನ ಬೇಟೆಯ ವೀರ ಗಡ ಬಾಣಪ್ರಯೋಗದಲಿ ಸಲೆ ಮೃಗದ ಸಾಹಸಿಕ ಗಡ ಕು ಟ್ಮಳಿತ ಕೇತಕಿ ತೀಕ್ಷ್ಣ ಗಡ ನೀ ವಳವಿಗೊಡದಿರಿ ಎನುತ ನಿನ್ನ ಕುಮಾರನನುವಾದ
tolagirai parivāra bāḷeya taḷiya murivatisahasi gaḍa mari molana bēṭeya vīra gaḍa bāṇaprayōgadali sale mr̥gada sāhasika gaḍa ku ṭmaḷita kētaki tīkṣṇa gaḍa nī vaḷavigoḍadiri enuta ninna kumārananuvāda
ಪೂತು ಸುಭಟ ಸುಯೋಧನನ ಸಹ ಜಾತನಲ್ಲಾ ಮತ್ತೆ ಕೆಲಬರಿ ಗೀ ತವಕವೀ ಶೌರ‍್ಯವೀ ಬಲುಹೀಸು ದಿಟ್ಟತನ ಸೋತುದುಂಟೇ ಹೊಳ್ಳುವಾತಿನ ಹೂತೊಡಬೆ ನಿನಗಿಲ್ಲ ಧೈರ‍್ಯದ ಧಾತುವೊಳ್ಳಿತು ಕೊಳ್ಳೆನುತ ತೆಗೆದೆಚ್ಚನಾ ಭೀಮ
pūtu subhaṭa suyōdhanana saha jātanallā matte kelabari gī tavakavī śauryavī baluhīsu diṭṭatana sōtuduṃṭē hoḷḷuvātina hūtoḍabe ninagilla dhairyada dhātuvoḷḷitu koḷḷenuta tegedeccanā bhīma
ಫಡ ಎನುತ ಪವನಜನ ಬಾಣವ ಕಡಿದು ಕೂರಂಬಿನಲಿ ಭೀಮನ ಕೆಡೆಯೆಸುತ ಮುರಿಯೆಚ್ಚು ಮಗುಳೆಚ್ಚಂಬ ಹರೆಗಡಿದು ಎಡೆಯಲೆಚ್ಚಂಬುಗಳನಿಬ್ಬರು ಕಡಿದರಂಬಂಬುಗಳ ಹೋರಟೆ ಕಿಡಿಗೆದರೆ ನಿಬ್ಬರದ ಕದನವ ಕಂಡೆನಿಬ್ಬರಲಿ
phaḍa enuta pavanajana bāṇava kaḍidu kūraṃbinali bhīmana keḍeyesuta muriyeccu maguḷeccaṃba haregaḍidu eḍeyaleccaṃbugaḷanibbaru kaḍidaraṃbaṃbugaḷa hōraṭe kiḍigedare nibbarada kadanava kaṃḍenibbarali
ಸವೆಯೆ ಸರಳೆಚ್ಚಾಡಿದರು ಕಲಿ ಪವನಸುತ ದುಶ್ಶಾಸನರ ರಣ ದವಕಿಗರ ಕೋಪಾಗ್ನಿ ಭುಗಿಭುಗಿಲೆಂದುದಡಿಗಡಿಗೆ ಅವನಿಗಿಳಿಬಿಡು ಧನುವ ತೆಗೆ ಖಡು ಗವನೆನುತ ರಥದಿಂದ ಹಾಯ್ದರು ಬವರಿಗರು ಬಿನ್ನಣದಿ ಹೊಯ್ದಾಡಿದರಡಾಯುಧದಿ
saveye saraḷeccāḍidaru kali pavanasuta duśśāsanara raṇa davakigara kōpāgni bhugibhugileṃdudaḍigaḍige avanigiḷibiḍu dhanuva tege khaḍu gavanenuta rathadiṃda hāydaru bavarigaru binnaṇadi hoydāḍidaraḍāyudhadi
ಚಾರಣದ ಚಮ್ಮಟದ ಖಡುಗದ ಪಾರಗದಲುಚ್ಚಟದ ಲುಳಿಯು ಖ್ಖಾರದೊಡ್ಡಿನ ಹೊಯ್ಲ ಹೋರಟೆಗಳ ಸುರೇಖೆಗಳ ಸಾರತರಶ್ರಮರೊದಗಿದರು ಜ ಜ್ಝಾರರುಬ್ಬಣ ಮುರಿಯೆ ಕಾದಿ ಕ ಠಾರಿಗಳಲೇ ತರುಬಿ ನಿಂದರು ದಂಡೆಮಂಡಿಯಲಿ
cāraṇada cammaṭada khaḍugada pāragadaluccaṭada luḷiyu khkhāradoḍḍina hoyla hōraṭegaḷa surēkhegaḷa sārataraśramarodagidaru ja jjhārarubbaṇa muriye kādi ka ṭhārigaḷalē tarubi niṃdaru daṃḍemaṃḍiyali
ಲುಳಿಯ ಪಯಪಾಡುಗಳ ದಂಡೆಯ ಬಳಿಯ ಲೋಹದ ಲವಣಿಗಳ ಮನ ಲಳಿಯ ಲಾಗಿನ ದೃಷ್ಟಿಯೋರೆಯ ಕೊಂಕಿದವಯವದ ಬಲಿದ ದಂಡೆಯ ಮರೆಯ ದೇಹದ ತಳಿತ ಠಾಣದ ಹಜ್ಜೆ ಹಜ್ಜೆಯ ನೆಲನ ಪಲ್ಲಟದರಿಭಟರು ಕಾದಿದರು ಖಾತಿಯಲಿ
luḷiya payapāḍugaḷa daṃḍeya baḷiya lōhada lavaṇigaḷa mana laḷiya lāgina dr̥ṣṭiyōreya koṃkidavayavada balida daṃḍeya mareya dēhada taḷita ṭhāṇada hajje hajjeya nelana pallaṭadaribhaṭaru kādidaru khātiyali
ಬಿಡಿಸಿದರೆ ಕುತ್ತುವ ವಿಘಾತಿಯ ಮಡಮುರಿಯಲೇ ಕಳೆವ ದಂಡೆಯ ತುಡುಕಿದಡೆ ನೋಡುವ ನಿವಾರಿಸಿ ಜಡಿದು ಝಳಪಿಸುವ ಪಡಿಮುಖದೊಳಂಘೈಸಿ ಬವರಿಯ ಲೊಡಲನೊಲೆವ ಕಠಾರಿಕಾಱರ ಬಿಡುಶ್ರಮದ ಬಿನ್ನಣಕೆ ಮಝ ಭಾಪೆಂದುದುಭಯಬಲ
biḍisidare kuttuva vighātiya maḍamuriyalē kaḷeva daṃḍeya tuḍukidaḍe nōḍuva nivārisi jaḍidu jhaḷapisuva paḍimukhadoḷaṃghaisi bavariya loḍalanoleva kaṭhārikāṟara biḍuśramada binnaṇake majha bhāpeṃdudubhayabala
ಕಣೆಯ ಕಾಲಾಟದಲಿ ಹಿರಿಯು ಬ್ಬಣದ ಹೋರಟೆಯಲಿ ಕಠಾರಿಯ ಕುಣಿಹದಲಿ ಮಸೆಗಾಣದಿದ್ದುದು ನಿನ್ನ ದೇಹದಲಿ ರಣಮುಖದೊಳಿದು ನಮ್ಮ ಪುಣ್ಯದ ರಿಣವಿಶೇಷ ಕಣಾ ಎನುತ ರಿಪು ಗಣಭಯಂಕರ ಭೀಮ ನುಡಿದನು ಕೌರವಾನುಜನ
kaṇeya kālāṭadali hiriyu bbaṇada hōraṭeyali kaṭhāriya kuṇihadali masegāṇadiddudu ninna dēhadali raṇamukhadoḷidu namma puṇyada riṇaviśēṣa kaṇā enuta ripu gaṇabhayaṃkara bhīma nuḍidanu kauravānujana
ಸಾಕಿದೇತಕೆ ಮಲ್ಲ ಶ್ರಮದಲಿ ನೂಕಿನೋಡುವೆವಿನ್ನು ಕೈದುಗ ಳೇಕೆ ದೃಢಮುಷ್ಠಿ ಪ್ರಹಾರ ಪ್ರಕಟಸತ್ವರಿಗೆ ಈ ಕುಮಾರಕರೊಳಗೆ ನೀನೇ ಜೋಕೆಯುಳ್ಳವನಹೆ ನಿಯುದ್ಧ ವ್ಯಾಕರಣಪಾಂಡಿತ್ಯವೆಮಗುಂಟೆಂದನಾ ಭೀಮ
sākidētake malla śramadali nūkinōḍuvevinnu kaiduga ḷēke dr̥ḍhamuṣṭhi prahāra prakaṭasatvarige ī kumārakaroḷage nīnē jōkeyuḷḷavanahe niyuddha vyākaraṇapāṃḍityavemaguṃṭeṃdanā bhīma
ಏಸನಗ್ಗಿಸಿಕೊಂಬೆ ನಿನಗಿ ನ್ನೈಸು ಕೈದುಗಳಲ್ಲಿ ಕೃತವ ಭ್ಯಾಸವಾ ಕೈದುಗಳ ಬಾಯಿಗೆ ನಿನ್ನ ಬೀರುವೆನು ಏಸು ಬೇಹುದು ಮಲ್ಲತನ ನಿನ ಗೈಸು ಬಿನ್ನಾಣದಲಿ ನಿನ್ನಯ ಸೀಸವಾಳವ ಹೊಯ್ವೆನೆಂದನು ನಿನ್ನ ಮಗ ನಗುತ
ēsanaggisikoṃbe ninagi nnaisu kaidugaḷalli kr̥tava bhyāsavā kaidugaḷa bāyige ninna bīruvenu ēsu bēhudu mallatana nina gaisu binnāṇadali ninnaya sīsavāḷava hoyveneṃdanu ninna maga naguta
ತರಿಸಿ ಬಿಗಿದರು ಚಲ್ಲಣವ ಠ ಪ್ಪರವನಳವಡೆಗಟ್ಟಿದರು ಕ ಸ್ತುರಿಯ ತಿಲಕವನೊಟ್ಟಿದರು ನೊಸಲಿನಲಿ ಮುಡುಹಿನಲಿ ಕರತಳವ ಮಾರುದ್ದಿ ಭುಜದಲಿ ಶಿರದಲಂದಕ್ಕಡದ ಮಣ್ಣನು ಬೆರಳಲುದುರಿಚಿ ಬಾಳುಗೆಂದರು ನೆನೆದು ನಿಂಬಜೆಯ
tarisi bigidaru callaṇava ṭha pparavanaḷavaḍegaṭṭidaru ka sturiya tilakavanoṭṭidaru nosalinali muḍuhinali karataḷava māruddi bhujadali śiradalaṃdakkaḍada maṇṇanu beraḷaludurici bāḷugeṃdaru nenedu niṃbajeya
ಸೂಳವಿಸಿದರು ಭುಜಶಿಖರ ನಿ ಸ್ಸಾಳವನು ನೆಲಕುಣಿಯೆ ದಿಕ್ಕಿನ ಮೂಲೆ ಬಿರಿಯೆ ಪಯೋಧಿಗಳಲಿ ಪಯೋಧಿ ಪಲ್ಲಟಿಸೆ ಘೀಳಿಡಲು ಕಿವಿಗಳಲಿ ಸೇನಾ ಜಾಳವೆರಡರೊಳುಭಯ ದಿಗು ಶುಂ ಡಾಲ ಕೈಯಿಕ್ಕುವವೊಲಿವರೊತ್ತಿದರು ತೋಳ್ಗಳಲಿ
sūḷavisidaru bhujaśikhara ni ssāḷavanu nelakuṇiye dikkina mūle biriye payōdhigaḷali payōdhi pallaṭise ghīḷiḍalu kivigaḷali sēnā jāḷaveraḍaroḷubhaya digu śuṃ ḍāla kaiyikkuvavolivarottidaru tōḷgaḷali
ತೆಗೆದು ಗಳಹತ್ತದಲಿ ಕೊರಳನು ಬಿಗಿಯೆ ಬಿಡಿಸುವ ತೋರಹತ್ತದ ಹೊಗುತೆಯನು ವಂಚಿಸುವ ತಳಹತ್ತದಲಿ ತವಕಿಸುವ ಲಗಡಿಯಲಿ ಲಟಕಟಿಸುವಂತರ ಲಗಡಿಯಲಿ ಲಾಲಿಸುವ ಡೊಕ್ಕರ ಣೆಗಳ ಬಿಗುಹಿನ ಬಿಡೆಯ ಬಿನ್ನಾಣದಲಿ ಹೆಣಗಿದರು
tegedu gaḷahattadali koraḷanu bigiye biḍisuva tōrahattada hoguteyanu vaṃcisuva taḷahattadali tavakisuva lagaḍiyali laṭakaṭisuvaṃtara lagaḍiyali lālisuva ḍokkara ṇegaḷa biguhina biḍeya binnāṇadali heṇagidaru
ಘಾಯವೇ ಜಗಜಟ್ಟಿ ಮಲ್ಲರಿ ಗಾಯಸವು ಚೊಕ್ಕೆಯವು ಬಿಡುವಡು ಪಾಯ ಕೇಳೆಂದೊದೆದು ದಂಡೆಯನೊಡ್ಡಿದನು ಭೀಮ ರಾಯ ಕೇಳೈ ಸಿಡಿಲ ತಿವಿಗುಳ ತಾಯಿಮನೆಯೋ ಪವನಜನ ಬಲು ಘಾಯವೋ ಘನ ತೋರಹತ್ತರು ತಿವಿದರುರವಣಿಸಿ
ghāyavē jagajaṭṭi mallari gāyasavu cokkeyavu biḍuvaḍu pāya kēḷeṃdodedu daṃḍeyanoḍḍidanu bhīma rāya kēḷai siḍila tiviguḷa tāyimaneyō pavanajana balu ghāyavō ghana tōrahattaru tividaruravaṇisi
ಮೈಗೆ ಮೇಣದ ಹಾಹೆ ಸರಿ ಮುಂ ಗೈಗೆ ಮೇರುವಿನಿರವು ದೊರೆ ಹೊರ ಕೈಗೆ ವಜ್ರದ ಹೊಯ್ಲು ಪಡಿಘಟ್ಟಣೆ ಮಹಾದೇವ ಕೈಗಡಿಯ ಪಟುಭಟರೊಳಗೆ ಬಲು ಗೈಗಳೆಂದಮರಾಳಿ ಹೊಗಳಲು ಹೊಯ್ಗುಳಿನ ಹೊಸನಾಟಕವನಭಿನಯಿಸಿ ಕಾದಿದರು
maige mēṇada hāhe sari muṃ gaige mēruviniravu dore hora kaige vajrada hoylu paḍighaṭṭaṇe mahādēva kaigaḍiya paṭubhaṭaroḷage balu gaigaḷeṃdamarāḷi hogaḷalu hoyguḷina hosanāṭakavanabhinayisi kādidaru
ಒಂದು ಭೀಮನ ಮೇಲೆ ನಿನ್ನಯ ನಂದನನ ಮೇಲೆರಡು ಕೊಂತೀ ನಂದನಗೆ ನಾಲ್ಕೆಂಟು ನಿನ್ನ ಕುಮಾರನಂಗದಲಿ ಸಂದಣಿಸಿದವು ಘಾಯ ಘಾಯದ ಮುಂದೆ ಹೊದರೆದ್ದವು ಸುಘಾಯದ ಬಂದಿಯಲಿ ಸಿಲುಕಿತ್ತು ನಿನ್ನ ಕುಮಾರನಂಘವಣೆ
oṃdu bhīmana mēle ninnaya naṃdanana mēleraḍu koṃtī naṃdanage nālkeṃṭu ninna kumāranaṃgadali saṃdaṇisidavu ghāya ghāyada muṃde hodareddavu sughāyada baṃdiyali silukittu ninna kumāranaṃghavaṇe
ತ್ರಾಣವೆಳದಾಯ್ತಖಿಳಶೌರ‍್ಯದ ಚೂಣಿ ಮುರಿದುದು ಘರ್ಮಜಲವು ಗ್ರಾಣಿಸಿತು ಭುಜಬಲವನಂಕುರಿಸಿತ್ತು ರಣಭೀತಿ ಪ್ರಾಣಪವನನ ಬೀಡುಬಿಟ್ಟುದು ಗೋಣಿನಲಿ ಗರುವಾಯಿಗೆಡೆ ರಣ ಹೂಣಿಗನು ಜವಗುಂದಿದನು ದುಶ್ಶಾಸನನು ಬಳಿಕ
trāṇaveḷadāytakhiḷaśauryada cūṇi muridudu gharmajalavu grāṇisitu bhujabalavanaṃkurisittu raṇabhīti prāṇapavanana bīḍubiṭṭudu gōṇinali garuvāyigeḍe raṇa hūṇiganu javaguṃdidanu duśśāsananu baḷika
ಹೊಯ್ದು ತುರುಬನು ಹಿಡಿದು ತಡಗಾ ಲ್ವೊಯ್ದು ಕೆಡಹಿದನಸಬಡಿದು ಹೊಯ್ ಹೊಯ್ದು ಬಿಡೆ ಖೊಪ್ಪರಿಸಿ ಡೊಕ್ಕರವಿಕ್ಕಿ ರಾಘೆಯಲಿ ಹಾಯ್ದವಾಲಿಗಳುಸುರ ಪಾಳೆಯ ವೆಯ್ದೆ ಬಿಟ್ಟುದು ಮೂಗಿನಲಿ ಕೈಗೆಯ್ದು ತುಡುಕಿದ ಶೋಣಿತಕೆ ಲಟಕಟಿಸಿದನು ಭೀಮ
hoydu turubanu hiḍidu taḍagā lvoydu keḍahidanasabaḍidu hoy hoydu biḍe khopparisi ḍokkaravikki rāgheyali hāydavāligaḷusura pāḷeya veyde biṭṭudu mūginali kaigeydu tuḍukida śōṇitake laṭakaṭisidanu bhīma
ಹರಿ ಮದೋತ್ಕಟ ದಂತಿಯನು ಡೊ ಕ್ಕರಿಸಿ ಡಾವರಿಸುವವೊಲಾ ನರ ಹರಿ ಹಿರಣ್ಯಕಶಿಪುವನಂಕದ ಮೇಲೆ ತೆಗೆವಂತೆ ಅರಸ ನಿನ್ನ ಕುಮಾರಕನ ನಡು ತರದೊಳಗೆ ಕೆಡಹಿದನು ಕೊಬ್ಬಿದ ಮರುಷ ಹರುಷ ನಿಯುದ್ಧದಕ್ಕಡನಾದನಾ ಭೀಮ
hari madōtkaṭa daṃtiyanu ḍo kkarisi ḍāvarisuvavolā nara hari hiraṇyakaśipuvanaṃkada mēle tegevaṃte arasa ninna kumārakana naḍu taradoḷage keḍahidanu kobbida maruṣa haruṣa niyuddhadakkaḍanādanā bhīma
ಸಿಕ್ಕಿದೆಯಲಾ ಸ್ವಾಮಿದ್ರೋಹಿಯೆ ಸೊಕ್ಕಿದೆಯಲಾ ಹಿಂದೆ ಜೂಜಿನ ಲಕ್ಕಜವ ಮಾಡಿದೆಯಲಾ ಮಾನಿನಿಯ ಮುಡಿವಿಡಿದು ಚುಕ್ಕಿಗಳಲಾ ನಿನ್ನವರು ಕೈ ಯಿಕ್ಕ ಹೇಳಾ ನಿನ್ನನೊಬ್ಬನ ನಿಕ್ಕಿ ನೋಡಿದರಕಟೆನುತ ಮೂದಲಿಸಿದನು ಭೀಮ
sikkideyalā svāmidrōhiye sokkideyalā hiṃde jūjina lakkajava māḍideyalā māniniya muḍiviḍidu cukkigaḷalā ninnavaru kai yikka hēḷā ninnanobbana nikki nōḍidarakaṭenuta mūdalisidanu bhīma
ಉಕ್ಕಿದುದು ತನಿಹರುಷ ಮೈಯೊಳ ಗೊಕ್ಕವಾ ಪುಳಕಾಂಬು ಕಂಗಳು ಮುಕ್ಕುಳಿಸಿದುವು ಮುನ್ನ ದುಶ್ಶಾಸನನ ಶೋಣಿತವ ಬಿಕ್ಕುವಹಿತನನಡಿಗಡಿಗೆ ಎವೆ ಯಿಕ್ಕದೀಕ್ಷಿಸಿ ತಣಿಯದಿನ್ನಕ ಸಿಕ್ಕಿ ಸಿಡಿಮಿಡಿಗೊಂಬ ರೋಷವೆ ರಾಜ್ಯಮಾಡೆಂದ
ukkidudu taniharuṣa maiyoḷa gokkavā puḷakāṃbu kaṃgaḷu mukkuḷisiduvu munna duśśāsanana śōṇitava bikkuvahitananaḍigaḍige eve yikkadīkṣisi taṇiyadinnaka sikki siḍimiḍigoṃba rōṣave rājyamāḍeṃda
ಎತ್ತಿ ಕಳೆದಿರಿ ವನಕೆ ನಾವ್ ನಿ ಮ್ಮೆತ್ತುಗಳಲಾ ಬೀದಿಯಲಿ ಬೆಂ ಬತ್ತಿ ಕೊಂಕಿನ ಬೆರಳಲೇಡಿಸಿ ಬಯ್ದು ಭಂಗಿಸಿದೈ ತೊತ್ತಲಾ ಪಾಂಚಾಲೆ ನಾವ್ ನಿ ಮ್ಮೆತ್ತುಗಳಲಾ ಹಿಂದೆ ಕಿಚ್ಚಿನ ತುತ್ತು ವಿಷದುಬ್ಬಟೆಗಳನು ನೆನೆಯೆಂದನಾ ಭೀಮ
etti kaḷediri vanake nāv ni mmettugaḷalā bīdiyali beṃ batti koṃkina beraḷalēḍisi baydu bhaṃgisidai tottalā pāṃcāle nāv ni mmettugaḷalā hiṃde kiccina tuttu viṣadubbaṭegaḷanu neneyeṃdanā bhīma
ಎರಗಿದನು ಕಟವಾಯ ಹಲುಗಳ ಮುರಿಯಲುಗುರಲಿ ಹೊಯ್ದು ಹೃದಯವ ನುರೆ ಬಗಿದು ಮೊಗೆಮೊಗೆದು ರಕ್ತವ ಕುಡಿತೆಕುಡಿತೆಯಲಿ ಸುರಿಸುರಿದು ಸುರಿದಡಿಗಡಿಗೆ ಚ ಪ್ಪಿರಿದು ಚಪ್ಪಿರಿದಿದರ ಮಧುರಕೆ ನೆರೆವವೇ ಸುಧೆಯಿಕ್ಷುರಸಗಿಸವೆಂದನಾ ಭೀಮ
eragidanu kaṭavāya halugaḷa muriyalugurali hoydu hr̥dayava nure bagidu mogemogedu raktava kuḍitekuḍiteyali surisuridu suridaḍigaḍige ca ppiridu cappirididara madhurake nerevavē sudheyikṣurasagisaveṃdanā bhīma
ಆಡಿದುದು ಹುಸಿಯಲ್ಲ ನೀ ಸವಿ ನೋಡು ಕರ್ಣ ನರೇಂದ್ರ ಕೌರವ ನೋಡು ಸವಿಯನು ಶಕುನಿ ಕೃಪಕೃತವರ್ಮ ಗುರುಸುತರು ನೋಡಿರೈ ಹೇವರಿಸುವರೆ ಕೈ ಮಾಡಿರೈ ನಿಮ್ಮಾತನಳಿವನು ನೋಡುತಿಹುದೇ ನಿಮಗೆ ನೀತಿಯೆ ಎಂದನಾ ಭೀಮ
āḍidudu husiyalla nī savi nōḍu karṇa narēṃdra kaurava nōḍu saviyanu śakuni kr̥pakr̥tavarma gurusutaru nōḍirai hēvarisuvare kai māḍirai nimmātanaḷivanu nōḍutihudē nimage nītiye eṃdanā bhīma
ಬಿಡಿಸಲಾಗದೆ ಕೈದುಕಾತಿಯ ರಡಬಳವನೀ ಹುಲಿಯ ಬಾಯಲಿ ಕೆಡವಿ ಕಳೆದಿರಲಾ ಸುಯೋಧನ ಕರ್ಣ ಗುರುಸುತರು ಸುಡಲಿ ನಿಮ್ಮನು ಮೊಲೆಗಳಿಲ್ಲದ ಕಡುಮುಹುಳಿ ನಿಮಗೇಕೆ ನಿಮ್ಮನು ನುಡಿಸುವವರಾವಲ್ಲೆನುತ ಮದವೇರಿದನು ಭೀಮ
biḍisalāgade kaidukātiya raḍabaḷavanī huliya bāyali keḍavi kaḷediralā suyōdhana karṇa gurusutaru suḍali nimmanu molegaḷillada kaḍumuhuḷi nimagēke nimmanu nuḍisuvavarāvallenuta madavēridanu bhīma
ಎಲೆಲೆ ಕೌರವ ಮೋಹರದ ಮಂ ಡಳಿಕರಿರ ದುಶ್ಶಾಸನನ ತೊ ಟ್ಟುಳಿಕೆಗಾಂತಿದೆ ಹರಣವಕಟಾ ಕಾಯಲೆಳಸಿರಲಾ ಸಲಹಿದವನೊಡಹುಟ್ಟಿದೀತನ ಕೊಲುವೆಡೆಗೆ ಮತವೇ ಮಹೀಶರ ಕುಲಕೆ ಪಂಥವಿದೇ ಎನುತ ಮೂದಲಿಸಿದನು ಭೀಮ
elele kaurava mōharada maṃ ḍaḷikarira duśśāsanana to ṭṭuḷikegāṃtide haraṇavakaṭā kāyaleḷasiralā salahidavanoḍahuṭṭidītana koluveḍege matavē mahīśara kulake paṃthavidē enuta mūdalisidanu bhīma
ಏನ ಹೇಳುವೆನರಸ ಕೌರವ ಸೇನೆ ಗರಹೊಡೆದಂತೆ ಬಹಳಾಂ ಭೋನಿಧಿಯಲದ್ದಂತೆ ಬೆಗಡಿನ ಸೊಗಡ ಸೆರೆವಿಡಿದು ಮೋನದಲಿ ಮನವಳುಕಿ ಯೋಗ ಧ್ಯಾನಪರರಾದಂತೆ ಚಿತ್ತ ಗ್ಲಾನಿಯೊಳಗೆಲೆಮಿಡುಕದಿದ್ದುದು ನಿನ್ನ ಪರಿವಾರ
ēna hēḷuvenarasa kaurava sēne garahoḍedaṃte bahaḷāṃ bhōnidhiyaladdaṃte begaḍina sogaḍa sereviḍidu mōnadali manavaḷuki yōga dhyānapararādaṃte citta glāniyoḷagelemiḍukadiddudu ninna parivāra
ಅಡಿಗಡಿಗೆ ಕದುಕಿರಿದು ರಕುತವ ಕುಡಿತೆಯಲಿ ಕುಡಿಕುಡಿದು ಬೆರಳಲಿ ಮಿಡಿದು ಕದನಸ್ಥಾನದೇವತೆಯರಿಗೆ ಕೈಕೊಳಿಸಿ ಕುಡಿದು ಮಿಕ್ಕುದನಖಿಳಭೂತಕೆ ಬಡಿಸಿ ಚಪ್ಪಿರಿದಾರಿ ಬೊಬ್ಬಿರಿ ದೊಡನೊಡನೆ ನೊರೆನೆತ್ತರೋಕುಳಿಯಾಡಿದನು ಭೀಮ
aḍigaḍige kadukiridu rakutava kuḍiteyali kuḍikuḍidu beraḷali miḍidu kadanasthānadēvateyarige kaikoḷisi kuḍidu mikkudanakhiḷabhūtake baḍisi cappiridāri bobbiri doḍanoḍane norenettarōkuḷiyāḍidanu bhīma
ಎಲವೆಲವೊ ಗುರುಸೂನು ಭೂಮಂ ಡಲದೊಳಗೆ ನಿಮ್ಮಯ್ಯನೂ ನೀ ನುಳಿಯೆ ಭಟರಿಲ್ಲೆಂಬ ಗರ‍್ವದ ಗಿರಿಯನೇರಿಹಿರಿ ನಿಲುಕಲಾಗದೆ ಕೌರವಾನುಜ ನುಳಿವು ಸೊಗಸದೆ ನಿನಗೆ ಬಿಲುವಿಡಿ ದುಳುಹಿರೈ ಲೇಸಹುದೆನುತ ಮೂದಲಿಸಿದನು ಭೀಮ
elavelavo gurusūnu bhūmaṃ ḍaladoḷage nimmayyanū nī nuḷiye bhaṭarilleṃba garvada giriyanērihiri nilukalāgade kauravānuja nuḷivu sogasade ninage biluviḍi duḷuhirai lēsahudenuta mūdalisidanu bhīma
ಎಲೆ ಕೃಪಾಚಾರಿಯ ಸುಯೋಧನ ನೊಳಗೆ ಸೇರುವೆ ಹಿರಿದು ನಿಮಗೀ ಖಳನ ಕೊಲೆಯನು ನೀವು ಮನಗೊಟ್ಟೊಲಿದು ನೋಡುವರೆ ಎಲೆ ಶಕುನಿಯೆಲೆ ಶಲ್ಯ ಎಲೆ ಬಾ ಹಿಲಿಕ ಕೃತವರ್ಮಾದಿ ವೀರರು ಸೆಳೆದುಕೊಳಿ ದುಶ್ಶಾಸನನನೆನುತೊರಲಿದನು ಭೀಮ
ele kr̥pācāriya suyōdhana noḷage sēruve hiridu nimagī khaḷana koleyanu nīvu managoṭṭolidu nōḍuvare ele śakuniyele śalya ele bā hilika kr̥tavarmādi vīraru seḷedukoḷi duśśāsanananenutoralidanu bhīma
ಪತಿಗೆ ಮಲೆವರಗಂಡನಾಳ್ದಗೆ ಹಿತವ ಕೌರವಕುಲಕೆ ಕಣು ಗತಿ ಮತಿಯೆನಿಸಿ ನೀ ಕರ್ಣನೆಂಬುದು ಸಕಲಜನಜನಿತ ಪತಿಯ ಸಹಸಂಭವನ ಮರಣ ವ್ಯತಿಕರವ ನೋಡಿದಡೆ ದುಷ್ಕೀ ರಿತಿಯ ಮೊಳೆ ಹೊಮ್ಮುವವಲೇ ರವಿಸುತನೆ ಕೇಳೆಂದ
patige malevaragaṃḍanāḷdage hitava kauravakulake kaṇu gati matiyenisi nī karṇaneṃbudu sakalajanajanita patiya sahasaṃbhavana maraṇa vyatikarava nōḍidaḍe duṣkī ritiya moḷe hommuvavalē ravisutane kēḷeṃda
ಕರೆದು ಮೂದಲಿಸಿದರೆ ರಣಭೀ ಕರರು ಮರಳುವರವರಿಗೆತ್ತಿದ ಬಿರುದಿನಗ್ಗದವೀರ ನೋಡುತ್ತಿಹರೆ ಕಲಿಕರ್ಣ ಹರಣವಿದೆ ದುಶ್ಶಾಸನನ ತೆಗೆ ಬರಸೆಳೆವ ಬಲುಹುಳ್ಳಡೆನುತು ಬ್ಬರಿಸಿ ಗಜರಿನ ಗರುವನೊರಲಿದನಹಿತವೀರರಿಗೆ
karedu mūdalisidare raṇabhī kararu maraḷuvaravarigettida birudinaggadavīra nōḍuttihare kalikarṇa haraṇavide duśśāsanana tege baraseḷeva baluhuḷḷaḍenutu bbarisi gajarina garuvanoralidanahitavīrarige
ಆಕೆವಾಳರು ಕರ್ಣಗುರುಸುತ ರೀ ಕೃಪಾಚಾರಿಯರು ತಾವೇ ಕೈಕವೀರರು ನಿನ್ನನೊಬ್ಬನನೊಪ್ಪುಗೊಟ್ಟರಲಾ ಏಕೆ ತರುಬಿದಿರಿವರನಾಹವ ಭೀಕರರನವಿವೇಕಿಗಳು ಇವ ರೇಕೆ ನೀವೇಕೆಂದು ದುಶ್ಶಾಸನನ ನೋಡಿದನು
ākevāḷaru karṇagurusuta rī kr̥pācāriyaru tāvē kaikavīraru ninnanobbananoppugoṭṭaralā ēke tarubidirivaranāhava bhīkararanavivēkigaḷu iva rēke nīvēkeṃdu duśśāsanana nōḍidanu
ಮರಣ ನೆರೆಹೊರೆಯಾಯ್ತು ನಿನ್ನಯ ಹರಣವೆನ್ನಂಗಯ್ಯಲಿದೆ ನಿ ಮ್ಮರಸನನು ಕರೆಸೆಲವೊ ಕಾದಿಸು ನಿನ್ನ ರಕ್ಷಿಸಲಿ ಅರಿಬಲದೊಳಿದಿರಿಲ್ಲ ನಿಜಮೋ ಹರದೊಳಗೆ ಮಿಡುಕುಳ್ಳ ವೀರರು ಮರಳಿಚಲಿ ನಿನ್ನುವನೆನುತ ನೋಡಿದನು ತನ್ನವರ
maraṇa nerehoreyāytu ninnaya haraṇavennaṃgayyalide ni mmarasananu kareselavo kādisu ninna rakṣisali aribaladoḷidirilla nijamō haradoḷage miḍukuḷḷa vīraru maraḷicali ninnuvanenuta nōḍidanu tannavara
ಎಲವೊ ಧೃಷ್ಟದ್ಯುಮ್ನ ಸಾತ್ಯಕಿ ಎಲೆ ಶಿಖಂಡಿಪ್ರಮುಖನಾಯಕ ರಳುಕದಿಹ ಮನವುಳ್ಳಡಿದಿರಾಗಿವನ ಸಲಹುವುದು ಹಲಬರಲಿ ಫಲವೇನು ದಾನವ ಕುಲದಿಶಾಪಟಕೃಷ್ಣ ಮುನಿದಡೆ ಕಳೆದುಕೊಳು ಕೌಮೋದಕಿಯನೆಂದೊದರಿದನು ಭೀಮ
elavo dhr̥ṣṭadyumna sātyaki ele śikhaṃḍipramukhanāyaka raḷukadiha manavuḷḷaḍidirāgivana salahuvudu halabarali phalavēnu dānava kuladiśāpaṭakr̥ṣṇa munidaḍe kaḷedukoḷu kaumōdakiyaneṃdodaridanu bhīma
ಕೇಳು ಫಲುಗುಣ ಲೋಕಮೂರರೊ ಳಾಳು ನೀನೆಂದೆಂಬ ಗರ‍್ವವ ಪಾಲಿಸುವೊಡಿದಿರಾಗು ತೊಡು ಗಾಂಡಿವದಲಂಬುಗಳ ಆಳುತನ ನಿನಗುಳ್ಳೊಡಹಿತನ ಪಾಲಿಸುವೊಡೇಳೆಂದೆನಲು ಜಯ ಲೋಲ ಸುಗತಿಯೊಳಿಳಿದನರ್ಜುನನಮಳಮಣಿರಥವ
kēḷu phaluguṇa lōkamūraro ḷāḷu nīneṃdeṃba garvava pālisuvoḍidirāgu toḍu gāṃḍivadalaṃbugaḷa āḷutana ninaguḷḷoḍahitana pālisuvoḍēḷeṃdenalu jaya lōla sugatiyoḷiḷidanarjunanamaḷamaṇirathava
ಅಹುದಹುದು ತಪ್ಪೇನು ತಪ್ಪೇ ನಹಿತದುಶ್ಶಾಸನನ ಸಲಹುವೆ ನಹಿತಬಲವೆನಗನಿಲಸುತನೆನುತೈದೆ ಬರೆ ಕಂಡು ಬಹಳ ಭೀತಿಯೊಳಸುರರಿಪು ಸ ನ್ನಿಹಿತ ಚಾಪವ ಹಿಡಿದು ಮನದು ಮ್ಮಹವ ಕೆಡಿಸಿ ಕಿರೀಟಿಯನು ನಿಲಿಸಿದನು ರಥದೊಳಗೆ
ahudahudu tappēnu tappē nahitaduśśāsanana salahuve nahitabalavenaganilasutanenutaide bare kaṃḍu bahaḷa bhītiyoḷasuraripu sa nnihita cāpava hiḍidu manadu mmahava keḍisi kirīṭiyanu nilisidanu rathadoḷage
ಅಹುದು ಭೀಮನ ಗೆಲುವ ಭಟನೀ ನಹೆಯಲೇ ನಾವಂಜುವೆವು ನಿ ರ್ವಹಿಸಬಹುದೇ ಕಾಲರುದ್ರನ ಕೆಣಕಿ ಕದನದಲಿ ಸಹಜವಿದು ಸಾಕ್ಷಾದುಮಾಪತಿ ಯಹ ಕಣಾ ಪವನಜನ ನೋಡಲು ಬಹಡೆ ನೋಡೆಂದಸುರರಿಪು ನುಡಿದನು ಧನಂಜಯಗೆ
ahudu bhīmana geluva bhaṭanī naheyalē nāvaṃjuvevu ni rvahisabahudē kālarudrana keṇaki kadanadali sahajavidu sākṣādumāpati yaha kaṇā pavanajana nōḍalu bahaḍe nōḍeṃdasuraripu nuḍidanu dhanaṃjayage
ಕಂಡನರ್ಜುನ ತ್ರಿಪುರದಹನದ ಖಂಡಪರಶುವೊಲಿರ್ದ ಭೀಮನ ದಂಡಿಯನು ಥಟ್ಟೈಸಿ ಭೂತಗಳೆಡಬಲದೊಳಿರಲು ಚಂಡಬಲನಹನೈ ವೃಕೋದರ ಗಂಡುಗಲಿಗಿದಿರಾವನೆನುತಾ ಖಂಡಲಾತ್ಮಜನೆರಗಿದನು ಮುರವೈರಿಯಂಘ್ರಿಯಲಿ
kaṃḍanarjuna tripuradahanada khaṃḍaparaśuvolirda bhīmana daṃḍiyanu thaṭṭaisi bhūtagaḷeḍabaladoḷiralu caṃḍabalanahanai vr̥kōdara gaṃḍugaligidirāvanenutā khaṃḍalātmajaneragidanu muravairiyaṃghriyali
ಉಭಯ ವೀರರ ನೋಡಿ ಸಂಗರ ರಭಸದಲಿ ಮೂದಲಿಸಿ ಚಾಪ ಪ್ರಭವ ಚಪಲರ ಚದುರುಗೆಡಿಸಿದ ಭುಜಬಲೋನ್ನತಿಯ ಸಭೆಯೊಳಾದವಮಾನದಹನ ಪ್ರಭೆಯ ನಂದಿಸಲಾಯ್ತಲಾ ರಿಪು ಸುಭಟನುರವೆಂಬಭ್ರಸಂಭವ ರುಧಿರಜಲವೆಂದ
ubhaya vīrara nōḍi saṃgara rabhasadali mūdalisi cāpa prabhava capalara cadurugeḍisida bhujabalōnnatiya sabheyoḷādavamānadahana prabheya naṃdisalāytalā ripu subhaṭanuraveṃbabhrasaṃbhava rudhirajalaveṃda
ಕೆಡೆದ ಹಗೆಯೊರಲಿನಲಿ ಕಿವಿ ಎಡೆ ಯುಡುಗದೀಕ್ಷಿಸಿ ಕಂಗಳಾ ಖಳ ನೊಡಲ ಕಡಿಗೆಡಹಿನಲಿ ಮೈ ರಿಪುಮಾಂಸಗಂಧದಲಿ ಬಿಡದೆ ನಾಸಿಕ ಖಳನ ರಕುತವ ಕುಡಿದು ನಾಲಗೆ ಸೊಗಸೆ ಸೊಕ್ಕಿದ ನೊಡನೊಡನೆ ಪಂಚೇಂದ್ರಿಯ ಪ್ರೀತಿಯಲಿ ಕಲಿಭೀಮ
keḍeda hageyoralinali kivi eḍe yuḍugadīkṣisi kaṃgaḷā khaḷa noḍala kaḍigeḍahinali mai ripumāṃsagaṃdhadali biḍade nāsika khaḷana rakutava kuḍidu nālage sogase sokkida noḍanoḍane paṃcēṃdriya prītiyali kalibhīma
ಘನಪರಾಕ್ರಮಿ ಭೀಮಸೇನಗೆ ವಿನುತ ಭುಜಗೇಂದ್ರಂಗೆ ದುಶ್ಶಾ ಸನನ ಜೀವಾನಿಳನ ಪಾರಣೆ ಸಮರಭೂಮಿಯಲಿ ಮುನಿವನಾರಿವನೊಳಗೆ ಕರುಳಿನ ಘನ ನಿಶಾಕರಬಿಂಬದುದಯದೊ ಳನಿಲಜನ ಮುಖ ಕುಮುದ ನಸುನಗೆಯೆಸಳು ಪಸರಿಸಿತು
ghanaparākrami bhīmasēnage vinuta bhujagēṃdraṃge duśśā sanana jīvāniḷana pāraṇe samarabhūmiyali munivanārivanoḷage karuḷina ghana niśākarabiṃbadudayado ḷanilajana mukha kumuda nasunageyesaḷu pasarisitu
ಉಕ್ಕಿದುದು ಕಡುಗೋಪ ರಕುತದ ಸೊಕ್ಕಿನಲಿ ಸೊಗಡೇರಿ ಕಂಗಳ ಲುಕ್ಕಿದುದು ಕಡುಗೆಂಪು ತೊದಳಿನ ಗಜರು ಘಾಡಿಸಿತು ಮಿಕ್ಕ ರಕುತವ ಮೊಗೆದು ಬದಿಗಳೊ ಳೊಕ್ಕ ಕರುಳ್ಗಳನಾಯ್ದು ಮೂಳೆಗ ಳೊಕ್ಕಿನಲಿ ಕೈಯಿಕ್ಕಿ ರಿಂಗಣಗುಣಿದನಾ ಭೀಮ
ukkidudu kaḍugōpa rakutada sokkinali sogaḍēri kaṃgaḷa lukkidudu kaḍugeṃpu todaḷina gajaru ghāḍisitu mikka rakutava mogedu badigaḷo ḷokka karuḷgaḷanāydu mūḷega ḷokkinali kaiyikki riṃgaṇaguṇidanā bhīma
ಬಳಿಕ ಪರಿತೋಷದಲಿ ಮಾರುತಿ ಲಲನೆಯಲ್ಲಿಗೆ ಕಳುಹಿದನು ತ ನ್ನೊಲವಿನಾಹವವಾದುದೈತಹುದೆನಲು ಬೇಗದಲಿ ನಳಿನಮುಖಿ ನಲವೇರಿ ಮೇಳದ ಕೆಳದಿಯರು ಕೈಗೊಡಲು ನೇವುರ ದೆಳಮೊಳಗು ಮೋಹಿಸಲು ಮಾನಿನಿ ಬಂದಳಾಯೆಡೆಗೆ
baḷika paritōṣadali māruti lalaneyallige kaḷuhidanu ta nnolavināhavavādudaitahudenalu bēgadali naḷinamukhi nalavēri mēḷada keḷadiyaru kaigoḍalu nēvura deḷamoḷagu mōhisalu mānini baṃdaḷāyeḍege
ಮನಸಿಜನ ಮದದಾನೆ ಮೊಗಸಿದ ಳನುವರಕೆ ಮಝ ಮಾಯೆ ಮೆಚ್ಚಿನ ಮನದ ಕಡುಹಿನ ಖಾತಿಯೆಂತುಟೊ ಕೌರವನ ಮೇಲೆ ಎನಲು ದಿವಿಜರು ಝಣಝಣಾಯಿತ ನಿನದದುರವಣೆ ಮಿಗಲು ಘನಸಂ ಜನಿತ ಪದತಳಚಲನಕೃತಿಯಿಂದೈದಿದಳು ರಣವ
manasijana madadāne mogasida ḷanuvarake majha māye meccina manada kaḍuhina khātiyeṃtuṭo kauravana mēle enalu divijaru jhaṇajhaṇāyita ninadaduravaṇe migalu ghanasaṃ janita padataḷacalanakr̥tiyiṃdaididaḷu raṇava
ಅರರೆ ಭೀಮನ ವಿಜಯಲಕ್ಷ್ಮಿಯ ಬರವೊ ಕೌರವನೃಪನ ಮರಣಾಂ ಕುರವ ಸೂಚಿಸುವಾತುರಶ್ರೀಸತಿಯ ಸಂಭ್ರಮವೊ ಅರಿಭಟರಿಗದ್ಭುತವೆನಲು ಭೀ ಕರರು ದುರ್ಧರವೆಂದೆನಲು ಪಂ ಕರುಹಮುಖಿ ನಡೆತಂದಳಾ ಪವಮಾನಜನ ಹೊರೆಗೆ
arare bhīmana vijayalakṣmiya baravo kauravanr̥pana maraṇāṃ kurava sūcisuvāturaśrīsatiya saṃbhramavo aribhaṭarigadbhutavenalu bhī kararu durdharaveṃdenalu paṃ karuhamukhi naḍetaṃdaḷā pavamānajana horege
ಬರುತ ಕಂಡಳು ಭೀಮಸೇನನ ಧುರಪರಾಕ್ರಮವಹ್ನಿ ಭುಗಿಲೆಂ ದರಿಭಯಂಕರ ರೌದ್ರರೂಪಿನೊಳಿರಲು ಬರಲಂಜಿ ತಿರುಗೆ ಕಂಡನು ಪವನಸುತ ಪಂ ಕರುಹಮುಖಿಯನು ಕರೆದು ನಿನ್ನಯ ಭರದ ಬಯಕೆಯಿದಾಯ್ತೆ ದಿಟ ನೋಡೆಂದು ತೋರಿಸಿದ
baruta kaṃḍaḷu bhīmasēnana dhuraparākramavahni bhugileṃ daribhayaṃkara raudrarūpinoḷiralu baralaṃji tiruge kaṃḍanu pavanasuta paṃ karuhamukhiyanu karedu ninnaya bharada bayakeyidāyte diṭa nōḍeṃdu tōrisida
ಆರಿವನು ನೀ ಕೊಟ್ಟ ಭಾಷೆಯ ಕಾರಣಿಕ ಖಳರೊಳಗಿದಾವನು ವೀರ ದುಶ್ಶಾಸನ ಕಣಾ ಅಂತಾದಡಾಯ್ತೆನುತ ಸಾರಿದಳು ಸರಸಿಜವದನೆ ಭ ರ್ತಾರನನು ನಸುನಗುತ ಚರಣದ ಚಾರು ನೇವುರವುಲಿಯಲೊದೆದಳು ಖಳನ ಮಸ್ತಕವ
ārivanu nī koṭṭa bhāṣeya kāraṇika khaḷaroḷagidāvanu vīra duśśāsana kaṇā aṃtādaḍāytenuta sāridaḷu sarasijavadane bha rtārananu nasunaguta caraṇada cāru nēvuravuliyalodedaḷu khaḷana mastakava
ನುಡಿವುದರಿದೇ ನುಡಿದ ಭಾಷೆಯ ಕಡೆತನಕ ಪೂರೈಸಿ ಮಾಡುವ ಕಡುಗಲಿಗಳಾರುಂಟು ಜಗದೊಳು ನಿನ್ನ ಹೋಲುವರು ಮೃಡಪರಾಕ್ರಮಿ ನನ್ನ ಹೋಲುವ ಮಡದಿಯರು ನಿನ್ನಂದದೊಡೆಯರ ಪಡೆವುದೇ ಪರಮೈಕಸೌಖ್ಯವಿದೆಂದಳಿಂದುಮುಖಿ
nuḍivudaridē nuḍida bhāṣeya kaḍetanaka pūraisi māḍuva kaḍugaligaḷāruṃṭu jagadoḷu ninna hōluvaru mr̥ḍaparākrami nanna hōluva maḍadiyaru ninnaṃdadoḍeyara paḍevudē paramaikasaukhyavideṃdaḷiṃdumukhi
ತರುಣಿ ಕುಳ್ಳಿರು ಸ್ವಾಮಿದ್ರೋಹಿಯ ಕರುಳ ಮುಡಿ ಬಾ ನಿನ್ನ ಖಾತಿಯ ಪರಿಹರಿಸುವೆನು ಖಳನ ರುಧಿರಸ್ನಾನಕೆಳಸುವರೆ ಸರಸಿಜಾನನೆ ಕೊಳ್ಳೆನುತ ಖಳ ನುರವನಿಬ್ಬಗಿಮಾಡಿ ಕುಡಿತೆಯ ಲರುಣಜಲವನು ಮೊಗೆದು ಮಾನಿನಿಗಿತ್ತನಾ ಭೀಮ
taruṇi kuḷḷiru svāmidrōhiya karuḷa muḍi bā ninna khātiya pariharisuvenu khaḷana rudhirasnānakeḷasuvare sarasijānane koḷḷenuta khaḷa nuravanibbagimāḍi kuḍiteya laruṇajalavanu mogedu māninigittanā bhīma
ಶೋಣಿತಾಂಬುವಿನಿಂದ ತರುಣಿಯ ವೇಣಿಯನು ನಾದಿದನು ದಂತ ಶ್ರೇಣಿಯಲಿ ಬಾಚಿದನು ಬೈತಲೆದೆಗೆದು ಚೆಲುವಿನಲಿ ರಾಣಿ ಹುಸಿಯದೆ ಹೇಳು ಹೇಳೆ ನ್ನಾಣೆ ಸೊಗಸೇ ಖಳನ ದಂತ ಶ್ರೇಣಿ ತವೆ ಪಾವನವೆಯೆಂದನು ಪವನಸುತ ನಗುತ
śōṇitāṃbuviniṃda taruṇiya vēṇiyanu nādidanu daṃta śrēṇiyali bācidanu baitaledegedu celuvinali rāṇi husiyade hēḷu hēḷe nnāṇe sogasē khaḷana daṃta śrēṇi tave pāvanaveyeṃdanu pavanasuta naguta
ಮುಡಿಗೆ ಹಾಯ್ದವನುದರರಕ್ತವ ತೊಡೆದು ಕಬರಿಯ ಕಟ್ಟೆ ಕಟ್ಟುವೆ ನುಡಿಯನುಡಿದನ ಚರ್ಮವನು ನೀನುಡಿಸಲುಟ್ಟಪೆನು ಎಡೆಯಲೊಯ್ಯಾರದಲಿ ಕಟ್ಟೆನು ಮುಡಿಯ ಮಡಿಯುಡೆನೆಂಬ ತೇಜದಿ ನುಡಿದ ನುಡಿ ಸಲೆ ಸಂದುದೇ ತನ್ನಾಣೆ ಹೇಳೆಂದ
muḍige hāydavanudararaktava toḍedu kabariya kaṭṭe kaṭṭuve nuḍiyanuḍidana carmavanu nīnuḍisaluṭṭapenu eḍeyaloyyāradali kaṭṭenu muḍiya maḍiyuḍeneṃba tējadi nuḍida nuḍi sale saṃdudē tannāṇe hēḷeṃda
ಖಳನ ತೆಳುದೊಗಲುಗಿದು ವಾಸ ಚ್ಛಲವ ಸಲಿಸಿದನವನ ಜಠರದೊ ಳೊಳಗರುಳನುಗಿದಬುಜವದನೆಯ ಮುಡಿಗೆ ಮುಡಿಸಿದನು ತಳುಕಿದನು ಖಳನುರದ ರಕ್ತದ ತಿಳಕವನು ರಚಿಸಿದನು ಹರುಷದೊ ಳುಲಿದು ಕೀಚಕವೈರಿ ನೋಡಿದನೊಲಿದು ನಿಜಸತಿಯ
khaḷana teḷudogalugidu vāsa cchalava salisidanavana jaṭharado ḷoḷagaruḷanugidabujavadaneya muḍige muḍisidanu taḷukidanu khaḷanurada raktada tiḷakavanu racisidanu haruṣado ḷulidu kīcakavairi nōḍidanolidu nijasatiya
ಪಸರಿಸಿದ ಪರಿವಾರ ಶರಧಿಯ ಮಸಕ ಮಸುಳಿತು ತೊಡೆಯಲಡಗೆಡೆ ದಸುಹೃದನ ದರುಶನದೊಳಗೆ ಮಸಗಿದವು ಮುಡುಹುಗಳು ಶಶಿವದನೆಯುತ್ಸಾಹವತಿ ಢಾ ಳಿಸಿತು ಭೀಮನ ಹರುಷಜಲನಿಧಿ ವಿಸಟವರಿದುದು ಕೇಳು ಜನಮೇಜಯ ಮಹೀಪಾಲ
pasarisida parivāra śaradhiya masaka masuḷitu toḍeyalaḍageḍe dasuhr̥dana daruśanadoḷage masagidavu muḍuhugaḷu śaśivadaneyutsāhavati ḍhā ḷisitu bhīmana haruṣajalanidhi visaṭavaridudu kēḷu janamējaya mahīpāla
ಎಡದ ತೊಡೆಯಲಿ ಮಡದಿ ಬಲುವಗೆ ಯೊಡಲು ಬಲವಂಕದಲಿ ನೆಗಹಿದ ಕುಡಿವೆರಳ ನಿಡುಗರುಳ ಮಾಲೆಯ ರೌದ್ರರಚನೆಯಲಿ ಕಡುಮನದ ಖತಿಗಾರ ಭೀಮನ ಕಡುಹು ಹೋಲುವೆಯಾಯ್ತು ಕಂಭದೊ ಳೊಡೆದು ಮೂಡಿದ ಮೃಗದ ಮೊಗದ ಮಹಾಸುರಾಂತಕನ
eḍada toḍeyali maḍadi baluvage yoḍalu balavaṃkadali negahida kuḍiveraḷa niḍugaruḷa māleya raudraracaneyali kaḍumanada khatigāra bhīmana kaḍuhu hōluveyāytu kaṃbhado ḷoḍedu mūḍida mr̥gada mogada mahāsurāṃtakana
ಕೆಲದ ತಲೆಯದ್ರಿಗಳ ಮೂಳೆಯ ಹೊಳೆವ ಸಾಲಿನ ಸುಂಟಗೆಯ ತೊಂ ಗಲಿನ ತೋರಣದೊಟ್ಟಿಲಟ್ಟೆಯ ಕರುಳ ಮಾಲೆಗಳ ತಿಳಿದ ರಕುತದ ಕೊಳನ ಘನಕೊಳು ಗುಳದ ತೋಪಿನ ನಡುವೆ ಮಾರುತಿ ಲಲನೆ ಸಹಿತಾಡಿದನು ಶೋಣಿತವಾರಿಯೋಕುಳಿಯ
kelada taleyadrigaḷa mūḷeya hoḷeva sālina suṃṭageya toṃ galina tōraṇadoṭṭilaṭṭeya karuḷa mālegaḷa tiḷida rakutada koḷana ghanakoḷu guḷada tōpina naḍuve māruti lalane sahitāḍidanu śōṇitavāriyōkuḷiya
ಕೊಳುಗುಳದ ಜಯಲಕ್ಷ್ಮಿಗಾಯಿತು ಚಲನಸುತನಲಿ ಮದುವೆಯೆನೆ ಮಂ ಗಳಮುಹೂರ್ತಕದೊಳಗೆ ಮುಳುಗಿದ ಘಳಿಗೆವಟ್ಟಲೆನೆ ತಲೆ ಕಪಾಲದ ಸಾಲಶೋಣಿತ ಜಲದಲಂದೊಪ್ಪಿದವು ರಣದೊಳು ಕಳದೊಳದ್ಭುತರಚನೆ ಮಿಗೆ ಸೌರಂಭ ರಂಜಿಸಿತು
koḷuguḷada jayalakṣmigāyitu calanasutanali maduveyene maṃ gaḷamuhūrtakadoḷage muḷugida ghaḷigevaṭṭalene tale kapālada sālaśōṇita jaladalaṃdoppidavu raṇadoḷu kaḷadoḷadbhutaracane mige sauraṃbha raṃjisitu
ಉಡಿದು ಕೆಡೆದ ಸಿತಾತಪತ್ರದ ನಡುವೆ ಹರಿಸಾಲಿನ ಕಪಾಲದ ಗಡಣವಿರೆ ಚೆಲುವಾಯ್ತು ಜನಮೇಜಯಮಹೀಪಾಲ ಅಡಗನಂತಕಗಗಲ ತಂದುಣ ಬಡಿಸಲಿಕ್ಕಿದ ತಳಿಗೆಯೊಳು ಸಂ ಗಡಿಸಿದವು ಕೆಲವಟ್ಟಲೆನೆ ರಂಜಿಸಿತು ರಣಭೂಮಿ
uḍidu keḍeda sitātapatrada naḍuve harisālina kapālada gaḍaṇavire celuvāytu janamējayamahīpāla aḍaganaṃtakagagala taṃduṇa baḍisalikkida taḷigeyoḷu saṃ gaḍisidavu kelavaṭṭalene raṃjisitu raṇabhūmi
ಸರಳ ತುದಿಹಿಳುಕಿನಲಿ ಸಬಳದ ಸುರಗಿಗಳ ಸೂನಗಿಯ ಬಂಡಿಯ ಶರಗಳಲಿ ಸಿಲುಕಿರ್ದ ಸುಭಟರ ಕಡಿಕು ಮೆರೆದಿರಲು ಅರರೆ ಜವನಂಗಡಿಯೊಳಿಕ್ಕಿದ ತರತರದೊಳಿಹ ಪಸರವೆನೆ ಸಿಂ ಗರಿಸಿತೈ ರಣಭೂಮಿ ಜನಮೇಜಯ ಮಹೀಪಾಲ
saraḷa tudihiḷukinali sabaḷada suragigaḷa sūnagiya baṃḍiya śaragaḷali silukirda subhaṭara kaḍiku merediralu arare javanaṃgaḍiyoḷikkida tarataradoḷiha pasaravene siṃ garisitai raṇabhūmi janamējaya mahīpāla
ಸಿಡಿದ ಕಣ್ಣಾಲಿಗಳು ಜವನಂ ಗಡಿಯ ನೀಲದ ಹಸರದಂತಿರ ಲಡಗು ಮೆರೆದುದು ಸೂನೆಗಾರರ ಹಸರದಂದದಲಿ ಹೊಡೆಗೆಡೆದ ಗಜದಟ್ಟೆ ರಕುತದ ಕಡಲೊಳದ್ದವು ಬೀತರಸುಗಳ ಪಡಗು ಜವಲೋಕಕ್ಕೆ ಜಂಗುಳಿಸಿರ್ದುವೆಂಬಂತೆ
siḍida kaṇṇāligaḷu javanaṃ gaḍiya nīlada hasaradaṃtira laḍagu meredudu sūnegārara hasaradaṃdadali hoḍegeḍeda gajadaṭṭe rakutada kaḍaloḷaddavu bītarasugaḷa paḍagu javalōkakke jaṃguḷisirduveṃbaṃte
ಬಂದ ತೊರೆಗಳ ಕುಡಿದೆನತಿ ಢಗೆ ಯಿಂದ ಸಕಲ ಸರೋರುಹಾಂಬುವ ನೊಂದೆ ಶ್ವಾಸದಲೀಂಟಿದೆನು ಶಂಕಿಸದು ಕೋಪಾಗ್ನಿ ಇಂದು ದುಶ್ಶಾಸನನ ಶೋಣಿತ ದೊಂದು ಕುಡಿತೆಯಲಾ ಮಹಾಶಿಖಿ ನಂದಿತೇನಿದು ಚಿತ್ರವಲ್ಲಾ ಸೂತ ಹೇಳೆಂದ
baṃda toregaḷa kuḍidenati ḍhage yiṃda sakala sarōruhāṃbuva noṃde śvāsadalīṃṭidenu śaṃkisadu kōpāgni iṃdu duśśāsanana śōṇita doṃdu kuḍiteyalā mahāśikhi naṃditēnidu citravallā sūta hēḷeṃda
ಇವನ ನೆತ್ತರ ಕುಡಿವ ರಿಪುಕೌ ರವರ ನೂರ್ವರ ಕಡಿವ ಭಾಷೆಗ ಳೆವಗೆ ಪೂರಾಯವು ಸುಯೋಧನಹರಣವೊಂದುಳಿಯೆ ಅವನಿ ಜಳ ಶಿಖಿ ಪವನ ಪುಷ್ಕರ ದಿವಿಜ ದನುಜೋರಗಮುಖಾಖಿಳ ಭುವನಜನ ನೀವ್ ಕೇಳಿಯೆಂದನು ಭೀಮ ಮೊಗನೆಗಹಿ
ivana nettara kuḍiva ripukau ravara nūrvara kaḍiva bhāṣega ḷevage pūrāyavu suyōdhanaharaṇavoṃduḷiye avani jaḷa śikhi pavana puṣkara divija danujōragamukhākhiḷa bhuvanajana nīv kēḷiyeṃdanu bhīma moganegahi
ಮಡದಿಯನು ಕಳುಹಿದನು ಕೆಳದಿಯ ರೊಡನೆ ನಡೆತರೆ ನಾಕುಕಡೆಯಲಿ ಹಿಡಿದ ಜವನಿಕೆಗಳಲಿ ಜಲರುಹವದನೆ ಗಮಿಸಿದಳು ತುಡುಕಿ ವಾಮಾಂಘ್ರಿಯಲಿ ಹಗೆಯನು ಮಡದಲೊದೆದನು ಬಳಿಕ ಕೌರವ ಪಡೆಯ ಪವನಜ ಕೊಟ್ಟನಂತಕಪುರವರಾಂತರಕೆ
maḍadiyanu kaḷuhidanu keḷadiya roḍane naḍetare nākukaḍeyali hiḍida javanikegaḷali jalaruhavadane gamisidaḷu tuḍuki vāmāṃghriyali hageyanu maḍadalodedanu baḷika kaurava paḍeya pavanaja koṭṭanaṃtakapuravarāṃtarake
ಅರಿಯ ಹೆಣನನು ಹಾಯ್ಕಿ ನೊರೆನೆ ತ್ತರಲಿ ಬೊಟ್ಟಿಟ್ಟನು ವರೂಥದ ಹೊರೆಗೆ ಬಂದನು ಕಳಶಜಲದಲಿ ತೊಳೆದು ಕರಪದವ ಪರಿಹೃತಶ್ರಮನಾಗಿ ವರಕ ರ್ಪುರದ ಕಸ್ತುರಿಗಂಧಲೇಪವ ನೊರಸಿ ಹೊಸಮಡಿವರ್ಗದಲಿ ರಂಜಿಸಿದನಾ ಭೀಮ
ariya heṇananu hāyki norene ttarali boṭṭiṭṭanu varūthada horege baṃdanu kaḷaśajaladali toḷedu karapadava parihr̥taśramanāgi varaka rpurada kasturigaṃdhalēpava norasi hosamaḍivargadali raṃjisidanā bhīma
ವೀಳೆಯವ ಕೊಂಡನು ವರೂಥದ ಮೇಲುವಲಗೆಯ ಗದ್ದುಗೆಗೆ ರಿಪು ಕಾಲಭೈರವನಡರಿದನು ತುಡುಕಿದನು ನಿಜಧನುವ ಕಾಳೆಗಕೆ ಕಡೆಹಾರವೇ ತೆಗೆ ಯಾಳನಾಗಲಿ ಬಂದು ಕುರುಭೂ ಪಾಲ ಬೀಳಲಿ ಧರ್ಮರಾಯನ ಚರಣಕಮಲದಲಿ
vīḷeyava koṃḍanu varūthada mēluvalageya gaddugege ripu kālabhairavanaḍaridanu tuḍukidanu nijadhanuva kāḷegake kaḍehāravē tege yāḷanāgali baṃdu kurubhū pāla bīḷali dharmarāyana caraṇakamaladali
ಎನುತ ಬಿಟ್ಟನು ರಥವ ದುರಿಯೋ ಧನನ ಮೋಹರಕಾಗಿ ಬಂಡಿಯ ಬಿನುಗುಗಳು ಕೈದೋರಿರೈ ಪುನ್ನಾಮನಾರಿಯರು ಅನುಜರಾವೆಡೆ ಕರೆಸು ಕೌರವ ಜನಪ ಕರ್ಣಾದಿಗಳ ಬಿಂಕವ ನೆನಗೆ ತೋರಾಯೆನುತ ಮೊಳಗಿದನರಸನಿದಿರಿನಲಿ
enuta biṭṭanu rathava duriyō dhanana mōharakāgi baṃḍiya binugugaḷu kaidōrirai punnāmanāriyaru anujarāveḍe karesu kaurava janapa karṇādigaḷa biṃkava nenage tōrāyenuta moḷagidanarasanidirinali
ನಿಯತ ಜಯಲುಬ್ಧಕನು ರಣಭೂ ಮಿಯಲಿ ಹರಿಸಲು ಜಯದ ಸಿರಿಯನು ಭಯವಿಹೀನರು ಬೆರಗುಗೊಂಡರು ಭೀಮನುರವಣೆಗೆ ಹಯದ ವಾಘೆಯನಿಳುಹಿದರು ಮ ನ್ನೆಯರು ಮನಗುಂದಿದರು ಕುರುಸೇ ನೆಯಲಿ ಕಾಣಿಸಲಾದುದಪಜಯಸಿರಿಯ ಸಂಭ್ರಮವು
niyata jayalubdhakanu raṇabhū miyali harisalu jayada siriyanu bhayavihīnaru beragugoṃḍaru bhīmanuravaṇege hayada vāgheyaniḷuhidaru ma nneyaru managuṃdidaru kurusē neyali kāṇisalādudapajayasiriya saṃbhramavu
ಬೆಟ್ಟವಾದವು ಬಿಸುಟ ಕೈದುಗ ಳೊಟ್ಟಿಲಾದುವು ಸಿಂಧಸೆಳೆ ರಥ ವಿಟ್ಟೆಡೆಗಳಲಿ ಮಿಸುಕಲಸದಳವಾದುದನಿಲಂಗೆ ಥಟ್ಟು ಮುರಿದುದು ಪಟುಭಟರು ಧೃತಿ ಗೆಟ್ಟು ದೆಸೆದೆಸೆಗಳಲಿ ಮಿಗೆ ಸಾ ಲಿಟ್ಟು ಸರಿದುದು ಕೇಳು ಜನಮೇಜಯ ಮಹೀಪಾಲ
beṭṭavādavu bisuṭa kaiduga ḷoṭṭilāduvu siṃdhaseḷe ratha viṭṭeḍegaḷali misukalasadaḷavādudanilaṃge thaṭṭu muridudu paṭubhaṭaru dhr̥ti geṭṭu desedesegaḷali mige sā liṭṭu saridudu kēḷu janamējaya mahīpāla
ಬಿಸುಟರಮಲಚ್ಛತ್ರವನು ಕೂ ರಸಿಯನೀಡಾಡಿದರು ರಾಯರು ಮುಸುಡ ತಿರುಹುತ ಮಕುಟವರ್ಧನಕೋಟಿ ಸಮರದಲಿ ಜಸವ ಮಾರಿದರಾಯುಧಂಗಳ ಹೆಸರ ವೀರರು ಬಾಹುಬಲಸಾ ಹಸರು ಕಂಗೆಟ್ಟೋಡಿದರು ಪವನಜನ ಸಮರದಲಿ
bisuṭaramalacchatravanu kū rasiyanīḍāḍidaru rāyaru musuḍa tiruhuta makuṭavardhanakōṭi samaradali jasava māridarāyudhaṃgaḷa hesara vīraru bāhubalasā hasaru kaṃgeṭṭōḍidaru pavanajana samaradali
ಬಲ ಮುರಿದು ಬರುತಿರ್ದುದೈ ಕಡೆ ಜಲಧಿಯ ತೆರೆ ತಿರುಗಿದಂತಿರೆ ತಲೆಮುಸುಕಿನಲಿ ನೋಟದುರವಣೆಕಾರ ನಾಯಕರು ನೆಲೆದೆಗೆದು ನಮ್ಮವರು ನೃಪನರ ನೆಲೆಗೆ ಸೇರದೆ ಸರಿಯೆ ಕಂಡನು ನಳಿನಮಿತ್ರನ ಮೊಮ್ಮ ತಡೆದನು ಭೀಮನುರವಣೆಯ
bala muridu barutirdudai kaḍe jaladhiya tere tirugidaṃtire talemusukinali nōṭaduravaṇekāra nāyakaru neledegedu nammavaru nr̥panara nelege sērade sariye kaṃḍanu naḷinamitrana momma taḍedanu bhīmanuravaṇeya
Keys: ← → turn the page, J K step through the verses.
Illustration: Verse & Place (Project-owned).