Skip to content

ಕರ್ಣ ಪರ್ವ — ಸಂಧಿ ೬ · ಕರ್ಣ ಪರ್ವ — ಸಂಧಿ ೬

Karna Parva · Sandhi 6

karṇa parva — saṃdhi 6

The complete karna parva · sandhi 6 in Kannada.

33 passagesKannada with transliteration

An original emblem for Karna Parva.

Invocation

8.6.opening

: ನಗರ ಮೂರರ ದೂರುಕಾರರ ದುಗುಡವನು ಪರಿಹರಿಸಿ ಕರುಣಾ ಳುಗಳರಸ ಶಿವ ಸಂತವಿಟ್ಟನು ಸುರಕದಂಬಕವ

: nagara mūrara dūrukārara duguḍavanu pariharisi karuṇā ḷugaḷarasa śiva saṃtaviṭṭanu surakadaṃbakava

ಕೇಳು ಜನಮೇಜಯ ಧರಿತ್ರೀ ಪಾಲ ಕೌರವನೃಪತಿ ಶಲ್ಯಗೆ ಹೇಳಿದನು ಸಾರಥ್ಯ ಸಂಯೋಜನ ಸಮಾಹಿತವ ಲೋಲನಾಪರಿಕರ‍್ಮತರು ನಿ ರ್ಮೂಲನೈಕಕ್ಷಮ ಸುಧಾಕರ ಮೌಳಿ ಕೇಳೀಕಲಿತ ವಿಸ್ತರ ವರಕಥಾಂತರವ

kēḷu janamējaya dharitrī pāla kauravanr̥pati śalyage hēḷidanu sārathya saṃyōjana samāhitava lōlanāparikarmataru ni rmūlanaikakṣama sudhākara mauḷi kēḷīkalita vistara varakathāṃtarava

Report an error

ತಾರಕನ ಮಕ್ಕಳುಗಳೆನಿಸುವ ತಾರಕಾಕ್ಷನು ಕಮಳಲೋಚನ ವೀರ ವಿದ್ಯುನ್ಮಾಲಿಯೆಂಬೀ ಮೂವರತಿಬಳರು ಘೋರತರ ಸುತಪಃಪ್ರಭಾವಿ ಸ್ತಾರಿಗಳಸಂಖ್ಯಾತಯುಗದಲಿ ವಾರಿಜೋದ್ಭವನನು ವಶೀಕರಿಸಿದರು ಭಕುತಿಯಲಿ

tārakana makkaḷugaḷenisuva tārakākṣanu kamaḷalōcana vīra vidyunmāliyeṃbī mūvaratibaḷaru ghōratara sutapaḥprabhāvi stārigaḷasaṃkhyātayugadali vārijōdbhavananu vaśīkarisidaru bhakutiyali

Report an error

ಬಂದು ಕಮಲಜನಿವದಿರಿದಿರಲಿ ನಿಂದನೆಲೆ ಋಷಿಗಳಿರ ಸಾಕಿ ನ್ನೆಂದು ಪರಿಯಂತೀ ತಪೋನುಷ್ಠಾನದಾಯಾಸ ನಿಂದು ಬೇಡುವುದೊಲಿದುದನು ನಾ ವಿಂದು ಸಲಿಸುವೆವೆನಲು ನಿಮಿಷಕೆ ಕಂದೆರೆದು ಕಮಳಾಸನಂಗೆರಗಿದರು ಭಕ್ತಿಯಲಿ

baṃdu kamalajanivadiridirali niṃdanele r̥ṣigaḷira sāki nneṃdu pariyaṃtī tapōnuṣṭhānadāyāsa niṃdu bēḍuvudolidudanu nā viṃdu salisuvevenalu nimiṣake kaṃderedu kamaḷāsanaṃgeragidaru bhaktiyali

Report an error

ಎನಿತನೊಲಿದಡೆ ಏನಹುದು ದು ರ್ಜನರು ಪುರುಷಾರ್ಥಿಗಳೆ ಹಾವಿಂ ಗನಿಲವೇ ಆಹಾರವಾದಡೆ ಬಿಟ್ಟುದೇ ವಿಷವ ದನುಜರದ್ಭುತ ತಪವ ಮಾಡಿದ ರನಿಮಿಷಾವಳಿ ಬೇಂಟೆಯಾಡಲು ನೆನೆದು ಬಿನ್ನೈಸಿದರು ಕಮಲಭವಂಗೆ ನಿಜಮತವ

enitanolidaḍe ēnahudu du rjanaru puruṣārthigaḷe hāviṃ ganilavē āhāravādaḍe biṭṭudē viṣava danujaradbhuta tapava māḍida ranimiṣāvaḷi bēṃṭeyāḍalu nenedu binnaisidaru kamalabhavaṃge nijamatava

Report an error

ರಚಿಸುವೆವು ಪುರಮೂರನಗ್ಗದ ಖಚರ ಕಿನ್ನರ ಸಿದ್ಧ ನಿರ್ಜರ ನಿಚಯವೆಮಗೋಲೈಸಿ ಹೋಗಲಿ ಹಲವು ಮಾತೇನು ಉಚಿತದಲಿ ನಿಮ್ಮಡಿಗಳನು ಪರಿ ರಚಿಸಲಾವೋಲೈಸುವೆವು ವರ ವಚನ ನಿಮ್ಮದು ಕರುಣಿಸುವುದಮರತ್ವವನು ನಮಗೆ

racisuvevu puramūranaggada khacara kinnara siddha nirjara nicayavemagōlaisi hōgali halavu mātēnu ucitadali nimmaḍigaḷanu pari racisalāvōlaisuvevu vara vacana nimmadu karuṇisuvudamaratvavanu namage

Report an error

ಹಾ ಮಹಾದೇವೀ ಕುಠಾರರ ತಾಮಸದ ನೆನಹಿದ್ದ ಪರಿಯಿಂ ತೀ ಮಹಾನುಷ್ಠಾನವಿದರಲಿ ಶಾಂತಿ ಲವವಿಲ್ಲ ಕಾಮಿತವನಿವದಿರಿಗೆ ಕೊಟ್ಟರೆ ಕಾಮಹರ ಕಮಳಾಕ್ಷರಿಗೆ ಸಂ ಗ್ರಾಮದಲಿ ಜಯವಾಗದೆಂದಡಿಗಡಿಗೆ ಬೆರಗಾದ

hā mahādēvī kuṭhārara tāmasada nenahidda pariyiṃ tī mahānuṣṭhānavidarali śāṃti lavavilla kāmitavanivadirige koṭṭare kāmahara kamaḷākṣarige saṃ grāmadali jayavāgadeṃdaḍigaḍige beragāda

Report an error

ಹುಲಿಗೆ ಧೈರ್ಯವನೆರಕೆಗಳನಹಿ ಗಳಿಗೆ ಖಳರಿಗೆ ಲಕ್ಷ್ಮಿಯನು ಕ ತ್ತಲೆಗೆ ಕಾಠಿಣ್ಯವನು ಚೈತನ್ಯವನು ಗಿರಿಗಳಿಗೆ ಕೊಲೆಗಡಿಕರಿಗೆ ನಿತ್ಯದೇಹವ ನೊಲಿದು ಕೊಟ್ಟರೆ ಲೇಸು ಬಳಿಕೇ ನೆಲೆ ಮಹಾದೇವೇನ ನೆನೆದರೊ ಶಿವಶಿವಾ ಎಂದ

hulige dhairyavanerakegaḷanahi gaḷige khaḷarige lakṣmiyanu ka ttalege kāṭhiṇyavanu caitanyavanu girigaḷige kolegaḍikarige nityadēhava nolidu koṭṭare lēsu baḷikē nele mahādēvēna nenedaro śivaśivā eṃda

Report an error

ಪುರವ ವಿರಚಿಸಿ ದಿವ್ಯ ಸಾಸಿರ ವರುಷ ಕೈಗೂಡಿದರೆ ಒಂದೇ ಸರಳಲಾವವನೆಚ್ಚಡಾಗಳೆ ನಿಮಗೆ ಕಡೆಗಾಲ ಬರಲಿ ಬಳಿಕಿಂದ್ರಾದಿ ನಿರ್ಜರ ನೊರಜುಗಳ ನೀವ್ ಸದೆಯಿ ಹೋಗೆಂ ದರಸ ಕೇಳೈ ಕೊಟ್ಟನವರಿಗೆ ಕಮಲಭವ ವರವ

purava viracisi divya sāsira varuṣa kaigūḍidare oṃdē saraḷalāvavaneccaḍāgaḷe nimage kaḍegāla barali baḷikiṃdrādi nirjara norajugaḷa nīv sadeyi hōgeṃ darasa kēḷai koṭṭanavarige kamalabhava varava

Report an error

ಕರುಣವಿನಿತೇ ಸಾಕು ನಮಗೇ ನುರದಲೊಗೆದವೆ ಮೊಲೆಗಳೆಮ್ಮಯ ಪುರವನೊಂದಂಬಿನಲಿ ಗೆಲುವನ ತಾಯಿ ಹುಸಿಯೆನುತ ದುರುಳರೀತನ ಬೀಳುಕೊಂಡು ಬ್ಬರದ ಹರುಷದಿ ಹೆಚ್ಚಿ ಮಯನನು ಕರೆಸಿ ಮಾಡಿಸಿದರು ಮಹಾ ವಿಭವದಲಿ ನಗರಗಳ

karuṇavinitē sāku namagē nuradalogedave molegaḷemmaya puravanoṃdaṃbinali geluvana tāyi husiyenuta duruḷarītana bīḷukoṃḍu bbarada haruṣadi hecci mayananu karesi māḍisidaru mahā vibhavadali nagaragaḷa

Report an error

ಕನಕದಲಿ ರಜತದಲಿ ಬಲುಗ ಬ್ಬುನದಲೊಂದೊಂದಕ್ಕೆ ಶತ ಯೋ ಜನದ ತೆರಹುಗಳೆಡೆಗೆ ಹಬ್ಬಿಸುವಮಳ ತೋರಣದ ವಿನುತ ನಗರಿಗಳಾದುವಲ್ಲಿಯ ದನುಜರೆರೆಗಳ ಹಾಯ್ಕಿ ಗಾಣದ ಲನಿಮಿಷರನೀಡಾಡಿಕೊಂಡರು ದುರ್ಗವನು ಸುರರ

kanakadali rajatadali baluga bbunadaloṃdoṃdakke śata yō janada terahugaḷeḍege habbisuvamaḷa tōraṇada vinuta nagarigaḷāduvalliya danujareregaḷa hāyki gāṇada lanimiṣaranīḍāḍikoṃḍaru durgavanu surara

Report an error

ಸೂರೆವೋಯಿತು ಸುರಪತಿಯ ಭಂ ಡಾರ ಹೆಂಡಿರುಸಹಿತ ನಿರ್ಜರ ನಾರಿಯರು ತೊತ್ತಾದರಮರಾರಿಗಳ ಮನೆಗಳಿಗೆ ಮೂರು ಭುವನದೊಳಿವದಿರಾಣೆಯ ಮೀರಿ ಬದುಕುವರಿಲ್ಲ ಕಡೆಯಲಿ ತಾರಕನ ಮಕ್ಕಳಿಗೆ ಕೈವರ್ತಿಸಿತು ಜಗವೆಂದ

sūrevōyitu surapatiya bhaṃ ḍāra heṃḍirusahita nirjara nāriyaru tottādaramarārigaḷa manegaḷige mūru bhuvanadoḷivadirāṇeya mīri badukuvarilla kaḍeyali tārakana makkaḷige kaivartisitu jagaveṃda

Report an error

ನೆರೆದುದಮರರು ಹಾಳುಹರಿ ಸಾ ಗರದ ಕಡೆಯಲಿ ರೂಹುಗಳೆದು ಟ್ಟರುವೆಗಳ ಕಾಳಿಕೆಯ ಮೋರೆಯ ತಾರಿದೊಡಲುಗಳ ಹುರಿದ ಧೈರ‍್ಯದ ತಳ್ಳವಾರುವ ತರಳ ಹೃದಯದ ದೇವರಿಂದ್ರನ ನರಸಿ ಕಂಡರು ತಮ್ಮೊಳಾಳೋಚನೆಯ ಮಾಡಿದರು

neredudamararu hāḷuhari sā garada kaḍeyali rūhugaḷedu ṭṭaruvegaḷa kāḷikeya mōreya tāridoḍalugaḷa hurida dhairyada taḷḷavāruva taraḷa hr̥dayada dēvariṃdrana narasi kaṃḍaru tammoḷāḷōcaneya māḍidaru

Report an error

ತಾರಕನ ಮಕ್ಕಳುಗಳೇ ಹಿಂ ದಾರ ಗೆಲಿದರು ತಪವ ಮಾಡಿ ವಿ ಕಾರಿಗಳು ಬ್ರಹ್ಮಂಗೆ ಬಂದಿಯನಿಕ್ಕಿದರು ಬಳಿಕ ವಾರಿಜೋದ್ಭವ ಮೇಲನರಿಯ ಕು ಠಾರನಾಯ್ಗಳ ಹೆಚ್ಚಿಸಿದನಿದ ನಾರಿಗರುಪುವುವೆವೆಂದು ಸುಯ್ದರು ಬಯ್ದು ಕಮಲಜನ

tārakana makkaḷugaḷē hiṃ dāra gelidaru tapava māḍi vi kārigaḷu brahmaṃge baṃdiyanikkidaru baḷika vārijōdbhava mēlanariya ku ṭhāranāygaḷa heccisidanida nārigarupuvuveveṃdu suydaru baydu kamalajana

Report an error

ಆದರೆಯು ನಮಗಾತನೇ ಗತಿ ಯೀ ದುರಾತ್ಮರಿಗೆಂದು ಹರಿವೆಂ ದಾದರಿಸಿ ಕೇಳುವೆವೆನುತ ಕಮಲಜನ ಹೊರೆಗೈದಿ ಖೇದವನುಸುರಿದರು ಪಿತಾಮಹ ನಾ ದಿವಿಜಗಣ ಸಹಿತ ಬಂದನು ವೇದಸಿದ್ಧ ವಿಶುದ್ಧ ದೈವವ ಕಾಬ ತವಕದಲಿ

ādareyu namagātanē gati yī durātmarigeṃdu hariveṃ dādarisi kēḷuvevenuta kamalajana horegaidi khēdavanusuridaru pitāmaha nā divijagaṇa sahita baṃdanu vēdasiddha viśuddha daivava kāba tavakadali

Report an error

ಬಂದು ಕೈಲಾಸಾದ್ರಿಯಲಿ ಗಿರಿ ನಂದನಾವಕ್ಷೋಜ ಘುಸೃಣ ಸ್ಕಂಧತನು ಚಿನ್ಮಯನಿರಂಜನ ಭೂರಿಪಂಜರನ ವಂದ್ಯಮಾನ ಸುರಾಸುರೋರಗ ವೃಂದ ಮಣಿಮಕುಟ ಪ್ರಭಾ ನಿ ಷ್ಯಂದ ಭೂಯಸ್ತಿಮಿತಕಾಯನ ಕಂಡನಬುಜಭವ

baṃdu kailāsādriyali giri naṃdanāvakṣōja ghusr̥ṇa skaṃdhatanu cinmayaniraṃjana bhūripaṃjarana vaṃdyamāna surāsurōraga vr̥ṃda maṇimakuṭa prabhā ni ṣyaṃda bhūyastimitakāyana kaṃḍanabujabhava

Report an error

ಕೊರಳ ಕಪ್ಪಿನ ಚಾರುಚಂದ್ರಾ ಭರಣ ಮೂರ್ಧದ ಭಾಳನಯನದ ಭರಿತ ಪರಿಮಳದಂಗವಟ್ಟದ ಜಡಿದ ಕೆಂಜೆಡೆಯ ಕರಗಿ ಕಾಸಿದವಿದ್ಯೆಯನು ಬೇ ರಿರಿಸಿ ಶುದ್ಧಬ್ರಹ್ಮವನು ಕಂ ಡರಿಸಿದಂತಿರಲೆಸೆವ ಶಿವನನು ಕಂಡನಬುಜಭವ

koraḷa kappina cārucaṃdrā bharaṇa mūrdhada bhāḷanayanada bharita parimaḷadaṃgavaṭṭada jaḍida keṃjeḍeya karagi kāsidavidyeyanu bē ririsi śuddhabrahmavanu kaṃ ḍarisidaṃtiraleseva śivananu kaṃḍanabujabhava

Report an error

ವೇದವರಿಯದ ತರ್ಕವಿದ್ಯಾ ವಾದ ನಿಲುಕದ ಬುಧರ ಮತಿ ಸಂ ಪಾದನೆಗೆ ಮುಖಗೊಡದ ವಾಚ್ಯಾಯನರ ಚೇತನಕೆ ಹೋದ ಹೊಲಬಳವಡದ ಬ್ರಹ್ಮೇಂ ದ್ರಾದಿ ಸುರರುಬ್ಬಟೆಗೆ ಸೋಲದ ನಾದಿ ದೇವರದೇವ ಶಿವನನು ಕಂಡನಬುಜಭವ

vēdavariyada tarkavidyā vāda nilukada budhara mati saṃ pādanege mukhagoḍada vācyāyanara cētanake hōda holabaḷavaḍada brahmēṃ drādi surarubbaṭege sōlada nādi dēvaradēva śivananu kaṃḍanabujabhava

Report an error

ಕಂತುಹರನನು ವಿಮಳನನು ವೇ ದಾಂತವೇದ್ಯನನದ್ವಿತೀಯನ ಚಿಂತ್ಯ ಮಹಿಮನ ಸಚ್ಚಿದಾನಂದೈಕರಸಮಯನ ಅಂತ್ಯರಹಿತನನಪ್ರಮೇಯನ ನಂತರೂಪನನಂಘ್ರಿಭಜಕ ಭ ವಾಂತಕನನುದ್ದಂಡ ದೈವವ ಕಂಡನಬುಜಭವ

kaṃtuharananu vimaḷananu vē dāṃtavēdyananadvitīyana ciṃtya mahimana saccidānaṃdaikarasamayana aṃtyarahitananapramēyana naṃtarūpananaṃghribhajaka bha vāṃtakananuddaṃḍa daivava kaṃḍanabujabhava

Report an error

ಇದ್ದುದಗಣಿತ ರುದ್ರ ಕೋಟಿಗ ಳಿದ್ದುದನುಪಮ ವಿಷ್ಣು ಕೋಟಿಗ ಳಿದ್ದುದಂಬುಜಭವ ಸುರೇಂದ್ರಾದಿಗಳು ಶತಕೋಟಿ ಇದ್ದುದಮಳಾಮ್ನಾಯ ಕೋಟಿಗ ಳಿದ್ದುದಗಣಿತ ಮಂತ್ರಮಧ್ಯದೊ ಳಿದ್ದ ನಿರ್ಮಳ ಖಂಡಪರಶುವ ಕಂಡನಬುಜಭವ

iddudagaṇita rudra kōṭiga ḷiddudanupama viṣṇu kōṭiga ḷiddudaṃbujabhava surēṃdrādigaḷu śatakōṭi iddudamaḷāmnāya kōṭiga ḷiddudagaṇita maṃtramadhyado ḷidda nirmaḷa khaṃḍaparaśuva kaṃḍanabujabhava

Report an error

ಪುಳಕಜಲವುಬ್ಬರಿಸೆ ಕುಸುಮಾಂ ಜಳಿಯನಂಘ್ರಿದ್ವಯಕೆ ಹಾಯಿಕಿ ನಳಿನಭವ ಮೆಯ್ಯಿಕ್ಕಿದನು ಭಯಭರಿತ ಭಕ್ತಿಯಲಿ ಬಳಿಯಲಮರೇಂದ್ರಾದಿ ದಿವಿಜಾ ವಳಿಗಳವನಿಗೆ ಮೆಯ್ಯ ಚಾಚಿದ ರುಲಿವುತಿರ್ದುದು ಜಯಜಯ ಧ್ವಾನದಲಿ ಸುರಕಟಕ

puḷakajalavubbarise kusumāṃ jaḷiyanaṃghridvayake hāyiki naḷinabhava meyyikkidanu bhayabharita bhaktiyali baḷiyalamarēṃdrādi divijā vaḷigaḷavanige meyya cācida rulivutirdudu jayajaya dhvānadali surakaṭaka

Report an error

ಪರಮಕರುಣ ಕಟಾಕ್ಷರಸದಲಿ ಹೊರೆದು ಕಮಳಾಸನನ ಹತ್ತಿರೆ ಕರೆದು ಮನ್ನಿಸಿ ನಿಖಿಳ ನಿರ್ಜರ ಜನವ ಸಂತೈಸಿ ಬರವಿದೇನಿದ್ದಂತೆ ವಿಶ್ವಾ ಮರ ಕದಂಬಕ ಸಹಿತ ಎಂದಂ ಬುರುಹಭವನನು ನಸುನಗುತ ನುಡಿಸಿದನು ಶಶಿಮೌಳಿ

paramakaruṇa kaṭākṣarasadali horedu kamaḷāsanana hattire karedu mannisi nikhiḷa nirjara janava saṃtaisi baravidēniddaṃte viśvā mara kadaṃbaka sahita eṃdaṃ buruhabhavananu nasunaguta nuḍisidanu śaśimauḷi

Report an error

ತಾರಕನ ಮಕ್ಕಳುಗಳಿಗೆ ನೆರೆ ಸೂರೆವೋದುದು ಸುರರ ಸಿರಿ ಮು ಮ್ಮಾರುವೋದುದು ಸುರರ ಸತಿಯರು ಖಳರ ಮನೆಗಳಿಗೆ ಚಾರುವೈದಿಕ ಹವ್ಯಕವ್ಯ ವಿ ಹಾರವೃತ್ತಿಗಳಳಿದವಿದನವ ಧಾರಿಸೆಂದಬುಜಾಸನನು ಮಾಡಿದನು ಬಿನ್ನಹವ

tārakana makkaḷugaḷige nere sūrevōdudu surara siri mu mmāruvōdudu surara satiyaru khaḷara manegaḷige cāruvaidika havyakavya vi hāravr̥ttigaḷaḷidavidanava dhāriseṃdabujāsananu māḍidanu binnahava

Report an error

ನಗೆಯ ಮೊಳೆ ನಸುಹೊಳೆಯೆ ಬೊಮ್ಮನ ಮೊಗವ ನೋಡಿದನಭವನೀಶನ ಬಗೆಯ ಭಾವವನರಿದು ತಲೆಗುತ್ತಿದನು ಕಮಲಭವ ದುಗುಡವನು ಬಿಡಿ ನಿಖಿಳ ದಿವಿಜಾ ಳಿಗಳು ಪಶುಗಳಲಾ ವಿರಿಂಚನ ವಿಗಡತನದಲಿ ಕೆಟ್ಟಿರಕಟಿನ್ನಂಜಬೇಡೆಂದ

nageya moḷe nasuhoḷeye bommana mogava nōḍidanabhavanīśana bageya bhāvavanaridu taleguttidanu kamalabhava duguḍavanu biḍi nikhiḷa divijā ḷigaḷu paśugaḷalā viriṃcana vigaḍatanadali keṭṭirakaṭinnaṃjabēḍeṃda

Report an error

ಪಶುಪತಿತ್ವವ ನಮಗೆ ಕೊಡಿ ನೀವ್ ಪಶುಗಳಾಗಿರಿ ಪಾಶುಪತ ವರ ನಿಶಿತ ಶರದಲಿ ದೈತ್ಯ ದುರ್ಗವನುರುಹಿ ತೋರುವೆವು ದೆಸೆದೆಸೆಗೆ ಹರೆದಖಿಳದೇವ ಪ್ರಸರವನು ನೀವ್ ನೆರಹಿ ಮೇಲಿ ನ್ನಸಮಸೆಗೆ ಹೆದರದಿರಿ ಎಂದನು ನಗುತ ಮದನಾರಿ

paśupatitvava namage koḍi nīv paśugaḷāgiri pāśupata vara niśita śaradali daitya durgavanuruhi tōruvevu desedesege haredakhiḷadēva prasaravanu nīv nerahi mēli nnasamasege hedaradiri eṃdanu naguta madanāri

Report an error

ಜಾರಿದುಬ್ಬಿನ ಹೊತ್ತ ದುಗುಡದ ಮೋರೆಗಳ ಮೋನದ ನಿಹಾರದ ದೂರುಗಂಗಳ ದೇವನಿಕರವ ಕಂಡು ಕರುಣದಲಿ ಏರುವಡೆದುದು ಮನವವಿದ್ಯೆಗೆ ಮಾರುವೋದಿರಲಾ ಎನುತ ಶಿವ ತೋರಿ ನುಡಿದನು ಪಾಶುಪತ್ಯದ ಸಾರ ಸಂಗತಿಯ

jāridubbina hotta duguḍada mōregaḷa mōnada nihārada dūrugaṃgaḷa dēvanikarava kaṃḍu karuṇadali ēruvaḍedudu manavavidyege māruvōdiralā enuta śiva tōri nuḍidanu pāśupatyada sāra saṃgatiya

Report an error

ಕರ್ಮಕಿಂಕರರಾಗಿ ಕೃತ ದು ಷ್ಕರ್ಮವಾಸನೆವಿಡಿದು ತಾನೇ ಕರ್ಮಕರ್ತನು ಭೋಗಿ ತಾನೇ ದುಃಖಿ ಸುಖಿಯೆಂದು ನಿರ್ಮಳಾತ್ಮನೊಳೀಯಹಂಕೃತಿ ಧರ್ಮವನೆ ನೇವರಿಸಿ ಮರುಗುವ ದುರ್ಮತಿಗಳನು ಪಶುಗಳೆಂದರೆ ಖೇದವೇಕೆಂದ

karmakiṃkararāgi kr̥ta du ṣkarmavāsaneviḍidu tānē karmakartanu bhōgi tānē duḥkhi sukhiyeṃdu nirmaḷātmanoḷīyahaṃkr̥ti dharmavane nēvarisi maruguva durmatigaḷanu paśugaḷeṃdare khēdavēkeṃda

Report an error

ಪಂಚವಿಂಶತಿ ತತ್ವರೂಪದ ಸಂಚವರಿಯದೆ ನೀತಿಮುಖದಲಿ ರಂಚೆಗಾಣದೆ ಸಗುಣಮಯ ನೀಹಾರದಲಿ ಮುಳುಗಿ ಮಿಂಚುವೆಳಗಿನ ಬಳಕೆಯಲಿ ಮನ ಮುಂಚಿ ಮೈಗೊಂಡಳಲುವಾತುಮ ವಂಚಕರು ನೀವ್ ಪಶುಗಳೆಂದರೆ ಖೇದವೇಕೆಂದ

paṃcaviṃśati tatvarūpada saṃcavariyade nītimukhadali raṃcegāṇade saguṇamaya nīhāradali muḷugi miṃcuveḷagina baḷakeyali mana muṃci maigoṃḍaḷaluvātuma vaṃcakaru nīv paśugaḷeṃdare khēdavēkeṃda

Report an error

ತೋರುವೀ ಜಗವೆಲ್ಲ ಬೊಮ್ಮವೆ ತೋರುತಿದೆಯೆನಿಪರ್ಥದಲಿ ಸಲೆ ತೋರುವೀ ಜಗಕೆಲ್ಲ ಪರತತ್ವದಲಿ ಪರಿಣಾಮ ತೋರುವೀ ತೋರಿಕೆಯೊಳಗೆ ಸಲೆ ಮೀರಿ ತೋರುವ ನಿಜವನರಿಯದ ಗಾರುಗಳು ನೀವ್ ಪಶುಗಳೆಂದರೆ ಖೇದವೇಕೆಂದ

tōruvī jagavella bommave tōrutideyeniparthadali sale tōruvī jagakella paratatvadali pariṇāma tōruvī tōrikeyoḷage sale mīri tōruva nijavanariyada gārugaḷu nīv paśugaḷeṃdare khēdavēkeṃda

Report an error

ಆಧಿಭೌತಿಕದಿಂದ ನೊಂದು ವಿ ರೋಧಿ ಷಡ್ವರ್ಗದ ವಿಕಾರ ವ್ಯಾಧಿಯಲಿ ಬೆಂಡಾಗಿ ಭವಪಾಶದಲಿ ಬಿಗಿವಡೆದು | ವಾದ ರಚನೆಯ ಬಲೆಗೆ ಸಿಲುಕಿ ವಿ ರೋಧಗೊಂಬೀ ಮೋಹವಿದ್ಯಾ ಸಾಧಕರು ನೀವ್ ಪಶುಗಳೆಂದರೆ ಖೇದವೇಕೆಂದ

ādhibhautikadiṃda noṃdu vi rōdhi ṣaḍvargada vikāra vyādhiyali beṃḍāgi bhavapāśadali bigivaḍedu | vāda racaneya balege siluki vi rōdhagoṃbī mōhavidyā sādhakaru nīv paśugaḷeṃdare khēdavēkeṃda

Report an error

ಪಶುಪತಿಯೆ ಪರಮಾತ್ಮ ಜೀವರು ಪಶುಗಳೀಪರಿ ಜೀವಭಾವದೊ ಳೆಸಗುವರು ನೀವ್ ಪಶುಗಳೀಗಳು ನಿಮ್ಮ ರಕ್ಷಣವ ಪಸರಿಸುವ ಪರಮಾತ್ಮ ತಾನೀ ಘಸಣಿ ನಿಮಗೇಕೆಂದು ದೇವ ಪ್ರಸರವನು ತಿಳುಹಿದನು ಕಾರುಣ್ಯದಲಿ ಕಾಮಾರಿ

paśupatiye paramātma jīvaru paśugaḷīpari jīvabhāvado ḷesaguvaru nīv paśugaḷīgaḷu nimma rakṣaṇava pasarisuva paramātma tānī ghasaṇi nimagēkeṃdu dēva prasaravanu tiḷuhidanu kāruṇyadali kāmāri

Report an error

ತುಬ್ಬಿ ಕೊಟ್ಟುದವಿದ್ಯೆಯನು ಸುಧೆ ಗೊಬ್ಬುಗಳ ಗಂಡಿಗರ ಗಾಢದ ಗರ್ಭವನು ಹೊಳ್ಳಿಸಿತು ಗರಳಗ್ರೀವನುಪದೇಶ ಹುಬ್ಬಿನಲಿ ಮಾತಾಡಿ ತಮ್ಮೊಳ ಗೊಬ್ಬರೊಬ್ಬರು ತಿಳಿದು ಸಕಳ ಸು ಪರ್ಬಜನವೆರಗಿದುದು ಜಯಜಯ ಎನುತ ಪಶುಪತಿಗೆ

tubbi koṭṭudavidyeyanu sudhe gobbugaḷa gaṃḍigara gāḍhada garbhavanu hoḷḷisitu garaḷagrīvanupadēśa hubbinali mātāḍi tammoḷa gobbarobbaru tiḷidu sakaḷa su parbajanaveragidudu jayajaya enuta paśupatige

Report an error

ಜಗವುಘೇ ಎಂದುದು ಜಯಧ್ವನಿ ಜಗವ ಝೊಂಪಿಸಿತೊಗ್ಗಿನಂಜುಳಿ ಗಗನದಗಲಕೆ ಕುಣಿವುತಿದ್ದುದು ಸುರರ ಭಾಳದಲಿ ಬೆಗಡು ಬೀತುದು ಬೇಸರಿನ ಬಲು ದೆಗಹು ಸೋತುದು ಶಿವಗೆ ದೈತ್ಯಾ ರಿಗಳು ಮುದದಲಿ ಮಾಡಿದರು ಮೂರ್ಧಾಭಿಷೇಚನವ

jagavughē eṃdudu jayadhvani jagava jhoṃpisitogginaṃjuḷi gaganadagalake kuṇivutiddudu surara bhāḷadali begaḍu bītudu bēsarina balu degahu sōtudu śivage daityā rigaḷu mudadali māḍidaru mūrdhābhiṣēcanava

Report an error

ಪಾಶುಪತ್ಯದ ಪಟ್ಟವಾಯ್ತು ಮ ಹೇಶನಲಿ ಬ್ರಹ್ಮಾದಿ ದೇವರು ವಾಸಿವಟ್ಟವ ಬಿಟ್ಟರೋಲೈಸಿದರು ಪಶುಪತಿಯ ಪಾಶುಪತ ಸುವ್ರತವ ಧರಿಸಿದು ದಾ ಸುಪರ್ವಸ್ತೋಮ ವಿಶ್ವಾ ಧೀಶನೆಸೆದನು ಕೋಟಿ ಶತಸೂರ‍್ಯಪ್ರಕಾಶದಲಿ

pāśupatyada paṭṭavāytu ma hēśanali brahmādi dēvaru vāsivaṭṭava biṭṭarōlaisidaru paśupatiya pāśupata suvratava dharisidu dā suparvastōma viśvā dhīśanesedanu kōṭi śatasūryaprakāśadali

Report an error

Illustration: Verse & Place (Project-owned).