ರಾಯಕಟಕವ ಬೆದರಿಸಿದ ನಾ ರಾಯಣಾಸ್ತ್ರದ ಬಾಧೆಯನು ಕಮಲಾಯತಾಂಬಕ ನಿಲಿಸಿ ಸಂತೈಸಿದನು ಪಾಂಡವರ
rāyakaṭakava bedarisida nā rāyaṇāstrada bādheyanu kamalāyatāṃbaka nilisi saṃtaisidanu pāṃḍavara
ದ್ರೋಣ ಪರ್ವ — ಸಂಧಿ ೧೯ · ದ್ರೋಣ ಪರ್ವ — ಸಂಧಿ ೧೯
drōṇa parva — saṃdhi 19
The complete drona parva · sandhi 19 in Kannada.
56 passagesKannada with transliteration
Invocation
ರಾಯಕಟಕವ ಬೆದರಿಸಿದ ನಾ ರಾಯಣಾಸ್ತ್ರದ ಬಾಧೆಯನು ಕಮಲಾಯತಾಂಬಕ ನಿಲಿಸಿ ಸಂತೈಸಿದನು ಪಾಂಡವರ
rāyakaṭakava bedarisida nā rāyaṇāstrada bādheyanu kamalāyatāṃbaka nilisi saṃtaisidanu pāṃḍavara
ಕೇಳು ಧೃತರಾಷ್ಟ್ರಾವನಿಪ ಗುರು ಬೀಳುಕೊಟ್ಟನು ದೇಹವನು ನ ಮ್ಮಾಳ ವಿಧಿಯೇನಪಜಯದ ತವನಿಧಿಯಲೇ ನಮಗೆ ಮೇಲೆ ಬಂದುದು ಕಷ್ಟವರಿ ಭೂ ಪಾಲರಿಗೆ ಕೇಳಿದನು ಖಳ ಪಾಂ ಚಾಲಸುತನೈತಂದನಲ್ಲಿಗೆ ಜಡಿವಡಾಯುಧದಿ
kēḷu dhr̥tarāṣṭrāvanipa guru bīḷukoṭṭanu dēhavanu na mmāḷa vidhiyēnapajayada tavanidhiyalē namage mēle baṃdudu kaṣṭavari bhū pālarige kēḷidanu khaḷa pāṃ cālasutanaitaṃdanallige jaḍivaḍāyudhadi
ಐದಿ ಮುಂದಲೆವಿಡಿದು ಬಾಗಿಸಿ ಕೊಯ್ದನಾತನ ಕೊರಳನೆಡದಲಿ ಹೊಯ್ದು ಮುರಿದನು ಬರಿಯಲಪ್ಪಳಿಸಿದನು ಬೆನ್ನೆಲುವ ಕೈದಣಿಯೆ ಕಡಿಖಂಡಮಯವೆನೆ ಹೊಯ್ದು ರಥದಲಿ ಕೆದರಿ ಜಡಿದನ ಡಾಯ್ದವನು ಕಡುಗೋಪದಲಿ ನೋಡಿದನು ರಿಪುಶಿರವ
aidi muṃdaleviḍidu bāgisi koydanātana koraḷaneḍadali hoydu muridanu bariyalappaḷisidanu benneluva kaidaṇiye kaḍikhaṃḍamayavene hoydu rathadali kedari jaḍidana ḍāydavanu kaḍugōpadali nōḍidanu ripuśirava
ಎಲೆಲೆ ಪಾತಕಿ ಹೆಣನ ಹೊಯ್ದರೆ ಬಲುಗಡಿಯ ನೀನೆಂಬರೇ ಸುಡು ಹೊಲೆಯರಿದಕಂಗೈಸುವರೆ ತಾ ರಾಜಸೂನು ಗಡ ಅಳಿದನಾದರೆ ನಿನ್ನ ಭಾಗ್ಯವು ಉಳಿದಡೀತನ ಮಗನು ನಿನ್ನಯ ಕುಲದ ತಲೆ ಚೆಂಡಾಡಿದಲ್ಲದೆ ಬರಿದೆ ಬಿಡನೆಂದ
elele pātaki heṇana hoydare balugaḍiya nīneṃbarē suḍu holeyaridakaṃgaisuvare tā rājasūnu gaḍa aḷidanādare ninna bhāgyavu uḷidaḍītana maganu ninnaya kulada tale ceṃḍāḍidallade baride biḍaneṃda
ಎಂದ ಸೂತನ ಬಾಯ ಹೊರಕ ಯ್ಯಿಂದ ಹೊಯ್ದನು ಹಡಪದವರನು ಹಿಂದಣಾಪ್ತರನಖಿಳ ಚಮರಚ್ಛತ್ರಧಾರಿಗಳ ಮುಂದುವರಿದೊಡೆ ತಿವಿದು ಮುರಿದನು ಮಂದಮತಿ ಬಳಿಕವನ ಸುಡು ಸುಡ ಲೆಂದು ಧೃಷ್ಟದ್ಯುಮ್ನನನು ನೆರೆ ಬೈದುದಖಿಳಜನ
eṃda sūtana bāya horaka yyiṃda hoydanu haḍapadavaranu hiṃdaṇāptaranakhiḷa camaracchatradhārigaḷa muṃduvaridoḍe tividu muridanu maṃdamati baḷikavana suḍu suḍa leṃdu dhr̥ṣṭadyumnananu nere baidudakhiḷajana
ಕಡಿಕುಗಳನಾಯ್ದರಸಿ ರಥದೊಳು ಗುಡಿಸಿ ಸಿಂಧವನೆತ್ತಿ ಸಾರಥಿ ತುಡುಕಿ ವಾಘೆಯ ಮುರುಹಿ ಮರಳಿಚಿ ರಥದ ಕುದುರೆಗಳ ತಡೆಯದಶ್ವತ್ಥಾಮನಲ್ಲಿಗೆ ನಡೆದು ಬರುತಿರೆ ಕಂಡು ಮನದಲಿ ಕಡು ನಿರೋಧವ ಹಿಡಿದು ಚಿಂತಿಸುತಿರ್ದನಾ ದ್ರೌಣಿ
kaḍikugaḷanāydarasi rathadoḷu guḍisi siṃdhavanetti sārathi tuḍuki vāgheya muruhi maraḷici rathada kuduregaḷa taḍeyadaśvatthāmanallige naḍedu barutire kaṃḍu manadali kaḍu nirōdhava hiḍidu ciṃtisutirdanā drauṇi
ಏನಿದಚ್ಚರಿ ಕೌರವೇಂದ್ರನ ಸೇನೆ ತಲೆಕೆಳಗಾಗುತಿದೆ ರಿಪು ಸೇನೆ ಬೊಬ್ಬಿರಿದಾರುತಿದೆ ಮಡಿದಾತನಾವವನೊ ಸೇನೆಗೊಡೆಯನು ಬೊಪ್ಪನಿದು ತಾ ನೇನು ರಥವೇ ಬರಿದೆ ಬರುತಿದೆ ಹಾನಿ ಜನಕಂಗಾಯ್ತೊ ಶಿವ ಶಿವ ಎಂದನಾ ದ್ರೌಣಿ
ēnidaccari kauravēṃdrana sēne talekeḷagāgutide ripu sēne bobbiridārutide maḍidātanāvavano sēnegoḍeyanu boppanidu tā nēnu rathavē baride barutide hāni janakaṃgāyto śiva śiva eṃdanā drauṇi
ತಂದು ಸಾರಥಿ ರಥವನೀತನ ಮುಂದೆ ನಿಲಿಸಿದ ಬಿದ್ದನಂಘ್ರಿಯೊ ಳಂದು ಗೋಳಿಟ್ಟೊರಲಿದುದು ಕಳಶಜನ ಪರಿವಾರ ತಂದೆಯೈದನೆ ಚಾಪವೇದ ಮು ಕುಂದನೈದನೆ ನಿನ್ನ ಕಾಣಲು ಬಂದನಯ್ಯನನಪ್ಪಿಕೊಳು ಮಾತಾಡಿ ನೋಡೆಂದ
taṃdu sārathi rathavanītana muṃde nilisida biddanaṃghriyo ḷaṃdu gōḷiṭṭoralidudu kaḷaśajana parivāra taṃdeyaidane cāpavēda mu kuṃdanaidane ninna kāṇalu baṃdanayyananappikoḷu mātāḍi nōḍeṃda
ಕೂಡೆ ಹರಿಹಂಚಾದ ತಂದೆಯ ಗೂಡ ನೋಡದ ಮುನ್ನ ಕಂಬನಿ ಮೂಡಿ ಮುಳುಗಿದವಾಲಿ ಕಾಣವು ಪಿತೃಕಳೇವರವ ನೋಡಲೆಳಸದ ಮುನ್ನ ಕಿಡಿಗಳ ಝಾಡಿಯನು ಕಣ್ಣುಗುಳಿದವು ಮಿಗೆ ನೋಡಿದಶ್ವತ್ಥಾಮ ಕಾಣನು ಮುಂದೆ ಪರಬಲವ
kūḍe harihaṃcāda taṃdeya gūḍa nōḍada munna kaṃbani mūḍi muḷugidavāli kāṇavu pitr̥kaḷēvarava nōḍaleḷasada munna kiḍigaḷa jhāḍiyanu kaṇṇuguḷidavu mige nōḍidaśvatthāma kāṇanu muṃde parabalava
ಅದ್ದನಳಲಿನ ಜಲಧಿಯೊಳು ಮುರಿ ದೆದ್ದು ಕೋಪಾನಳನ ಝಳದಲಿ ಬಿದ್ದು ನನೆದನು ನೀರಿನಲಿ ಕಾಹೇರಿ ಕಿಚ್ಚಿನಲಿ ಗೆದ್ದುದುದಕವನನಲನನಲನ ನದ್ದಿತುದಕವದೊಂದನೊಂದನು ಕದ್ದುವೆರಡರ ಹೋರಟೆಗೆ ಗುರುಸೂನು ಬೆಂಡಾದ
addanaḷalina jaladhiyoḷu muri deddu kōpānaḷana jhaḷadali biddu nanedanu nīrinali kāhēri kiccinali geddududakavananalananalana nadditudakavadoṃdanoṃdanu kadduveraḍara hōraṭege gurusūnu beṃḍāda
ಕೆದರಿ ಹೊರಳುವ ಸಾರಥಿಯನೆ ತ್ತಿದನು ರಣವೃತ್ತಾಂತವನು ಕೇ ಳಿದನು ಶಮೆ ಸೈರಣೆವಿವೇಕವ ನೂಕಿದನು ಸೆರೆಗೆ ಒದೆದನಳಲನು ರೋಮ ಹರುಷವ ಹೊದೆದು ಹೊರೆ ಹೆಚ್ಚಿದನು ಕಾಹೇ ರಿದನು ಕಲಿ ಮನವಳುಕಿ ತಗ್ಗಿತು ರೋಷಭಾವದಲಿ
kedari horaḷuva sārathiyane ttidanu raṇavr̥ttāṃtavanu kē ḷidanu śame sairaṇevivēkava nūkidanu serege odedanaḷalanu rōma haruṣava hodedu hore heccidanu kāhē ridanu kali manavaḷuki taggitu rōṣabhāvadali
ಚಟುಳಕೋಪಾಗ್ನಿಯಲಿ ನಾಸಾ ಪುಟದ ಸುಯ್ಲಲಿ ವಿಸ್ಫುಲಿಂಗೋ ತ್ಕಟಸಮಾಧಿಗಳಿದ್ದಿಲಲಿ ನಿಗ್ರಹಕಟಾಹದಲಿ ಪಟುತರದ ಬಾಹುಪ್ರತಾಪದ ಪುಟವನೆತ್ತದೆ ಮಾಣನೆನಲು ತ್ಕಟಿಸುತಿರ್ದುದು ರೌದ್ರವೀರಾಭ್ಯುದಯ ಸನ್ನಾಹ
caṭuḷakōpāgniyali nāsā puṭada suylali visphuliṃgō tkaṭasamādhigaḷiddilali nigrahakaṭāhadali paṭutarada bāhupratāpada puṭavanettade māṇanenalu tkaṭisutirdudu raudravīrābhyudaya sannāha
ನೊಂದ ಜವನೋ ಜಗವನುರುಹಲು ಬಂದ ಶಿವನೋ ಕಂಬದಿಂದೊಗೆ ತಂದ ರೌದ್ರಾಟೋಪ ಮಾನವರೂಪ ಕೇಸರಿಯೊ ತಂದೆಯಳಲಿಗನಿರವು ವಿಶ್ವವ ನೊಂದು ನಿಮಿಷಕೆ ಸುಡುವುದೋ ಹಾ ಯೆಂದುದಮರಾನೀಕವೆಲೆ ಭೂಪಾಲ ಕೇಳೆಂದ
noṃda javanō jagavanuruhalu baṃda śivanō kaṃbadiṃdoge taṃda raudrāṭōpa mānavarūpa kēsariyo taṃdeyaḷaliganiravu viśvava noṃdu nimiṣake suḍuvudō hā yeṃdudamarānīkavele bhūpāla kēḷeṃda
ಮುರುಹಿದನು ಮೀಸೆಯನು ಕಣ್ಣುಗ ಳರಳಿದವು ಹೊಗೆ ಸುತ್ತಿ ಸುಯ್ಲಲಿ ಸುರಿದುದುರಿ ಹುಬ್ಬುಗಳನುರೆ ಬಿಗಿದೌಡನೊಡೆಯೊತ್ತಿ ಬೆರಳ ತುದಿಯಲಿ ಬೊಬ್ಬಿರಿದು ಹರಿ ಶರಕೆ ಕೈನೀಡಿದನು ಕಲ್ಪದ ಹರನವೊಲು ಹರರೂಪ ಹೊಂಗಿದನಧಿಕ ರೋಷದಲಿ
muruhidanu mīseyanu kaṇṇuga ḷaraḷidavu hoge sutti suylali suriduduri hubbugaḷanure bigidauḍanoḍeyotti beraḷa tudiyali bobbiridu hari śarake kainīḍidanu kalpada haranavolu hararūpa hoṃgidanadhika rōṣadali
ದನುಜಹರ ಮಂತ್ರವನು ಮನದಲಿ ನೆನೆದು ಕೈನೀಡಿದನು ತುದಿಯಂ ಬಿನಲಿ ತುರುಗಿದ ಕಿಡಿಯ ಬಿರುಕೇಸುರಿಯ ಧಾಳಿಗಳ ತನಿವೊಗರ ಬಲುವೊಗೆಯ ಹೊರಳಿಯ ಕನಕರಸ ರೇಖಾವಳಿಯ ಮೈ ಮಿನುಗುಗಳ ಹೊಂಗರಿಯ ನಾರಾಯಣ ಮಹಾಶರಕೆ
danujahara maṃtravanu manadali nenedu kainīḍidanu tudiyaṃ binali turugida kiḍiya birukēsuriya dhāḷigaḷa tanivogara baluvogeya horaḷiya kanakarasa rēkhāvaḷiya mai minugugaḷa hoṃgariya nārāyaṇa mahāśarake
ಪ್ರಳಯ ಮೇಘವನೊಡೆವ ರವಿಮಂ ಡಲ ಸಹಸ್ರದ ರಶ್ಮಿಯೋ ಜಗ ದಳವಿನಲಿ ಝೊಂಪಿಸುವ ಹರನುರಿಗಣ್ಣ ದೀಧಿತಿಯೊ ಮುಳಿದ ನರಕೇಸರಿಯ ದಾಡೆಯ ಥಳಥಳತ್ಕಾರವೊ ಮಹಾಸ್ತ್ರದ ಬೆಳಗೊ ಹೆಸರಿಡಲಾರು ಬಲ್ಲರು ಭೂಪ ಕೇಳೆಂದ
praḷaya mēghavanoḍeva ravimaṃ ḍala sahasrada raśmiyō jaga daḷavinali jhoṃpisuva haranurigaṇṇa dīdhitiyo muḷida narakēsariya dāḍeya thaḷathaḷatkāravo mahāstrada beḷago hesariḍalāru ballaru bhūpa kēḷeṃda
ಸರಳ ಚೂಳಿಯ ಝಳದೊಳಗೆ ಸಾ ವಿರ ನಿದಾಘದ ಸೂರ‍್ಯರುಬ್ಬಟೆ ಕರಗಿ ಹೋಯಿತು ಬಾಯಿಧಾರೆಯ ಕಿಡಿಯ ಧಾಳಿಯಲಿ ಬರಸಿಡಿಲ ಶತಕೋಟಿ ಸೀದವು ನಿರಿವೊಗರ ಕಬ್ಬೊಗೆಯ ಕಿಡಿಯಲಿ ನೆರೆದವಂತ್ಯದ ಮೇಘವೆನೆ ಝಗಝಗಿಸಿತಮಳಾಸ್ತ್ರ
saraḷa cūḷiya jhaḷadoḷage sā vira nidāghada sūryarubbaṭe karagi hōyitu bāyidhāreya kiḍiya dhāḷiyali barasiḍila śatakōṭi sīdavu nirivogara kabbogeya kiḍiyali neredavaṃtyada mēghavene jhagajhagisitamaḷāstra
ಒಳಗೆ ಜಲಚರವೊದರಿ ಕುದಿದುದು ಜಲಧಿ ಕಾದುದು ಧರಣಿ ಸೀದುದು ಕುಲಗಿರಿಗಳುರೆ ಸಿಡಿದು ಸೀಕರಿವೋಯ್ತು ವನನಿಕರ ನೆಲಕೆ ದಾಡೆಯ ಕೊಟ್ಟು ಕುಂಭ ಸ್ಥಳವ ತೆಗೆದವು ದಿಗಿಭತತಿ ಹೆಡೆ ನಳಿಯೆ ಮಣಿಗಳಲಾಂತನವನಿಯನುರಗಪತಿಯಂದು
oḷage jalacaravodari kudidudu jaladhi kādudu dharaṇi sīdudu kulagirigaḷure siḍidu sīkarivōytu vananikara nelake dāḍeya koṭṭu kuṃbha sthaḷava tegedavu digibhatati heḍe naḷiye maṇigaḷalāṃtanavaniyanuragapatiyaṃdu
ಗುಳವ ಕೊಯ್ದಿಳುಹಿದರು ಕರಿ ಸಂ ಕುಳದಲಾರೋಹಕರು ಜೋಡನು ಕಳಚಿ ಬಿಸುಟರು ರಾವುತರು ಹಕ್ಕರಿಕೆಗಳು ಸಹಿತ ಝಳದ ಝಾಡಿಗೆ ಬೆವರಿ ವಸನಾಂ ಚಲದ ಗಾಳಿಗೆ ಮೊಗವನೆತ್ತಿದ ರಳುಕಿ ಕಣ್ ಕೋರೈಸಿ ಮಮ್ಮಲ ಮರುಗಿತುಭಯಬಲ
guḷava koydiḷuhidaru kari saṃ kuḷadalārōhakaru jōḍanu kaḷaci bisuṭaru rāvutaru hakkarikegaḷu sahita jhaḷada jhāḍige bevari vasanāṃ calada gāḷige mogavanettida raḷuki kaṇ kōraisi mammala marugitubhayabala
ಮೇಲು ಜಗವೇಳೋಡಿದವು ಧ್ರುವ ನಾಲಯಕೆ ನೆಲೆದಪ್ಪಿದುದು ಗ್ರಹ ಮಾಲೆ ತಾರಾರಾಸಿ ಜೋಯಿಸರೋದು ಹುಸಿಯಾಯ್ತು ಧಾಳಿಡುವ ಸೆಗಳಿಯಲಿ ತಳ ಪಾ ತಾಳಕದ್ದುದು ಕಮಲಜಾಂಡದ ಮೇಲಣಾವರಣಾಂಬು ಕುದಿದುದು ಹೇಳಲೇನೆಂದ
mēlu jagavēḷōḍidavu dhruva nālayake neledappidudu graha māle tārārāsi jōyisarōdu husiyāytu dhāḷiḍuva segaḷiyali taḷa pā tāḷakaddudu kamalajāṃḍada mēlaṇāvaraṇāṃbu kudidudu hēḷalēneṃda
ಒಡೆಯರಿಲ್ಲಾ ಜಗಕೆ ಲೋಗರ ಸುಡುವರೊಪ್ಪಿಸಿ ಕೊಡುವರೇ ನಾ ನೊಡೆಯ ಫಡ ತಾನೊಡೆಯರೆಂಬರು ಮೂವರೀ ಜಗಕೆ ನುಡಿಯರೀ ಹೊತ್ತಿನಲಿ ನಮಗಿ ನ್ನೊಡೆಯರಾರಿನ್ನಾರ ಬಸುರೊಳ ಗಡಗುವೆವು ಶಿವ ಶಿವ ಎನುತ ತಲ್ಲಣಿಸಿತಮರಗಣ
oḍeyarillā jagake lōgara suḍuvaroppisi koḍuvarē nā noḍeya phaḍa tānoḍeyareṃbaru mūvarī jagake nuḍiyarī hottinali namagi nnoḍeyarārinnāra basuroḷa gaḍaguvevu śiva śiva enuta tallaṇisitamaragaṇa
ಕವಿದ ಕೌರವ ಬಲದ ಸುಮ್ಮಾ ನವನು ತಮ್ಮಂಜಿಕೆಯನಾ ಭೈ ರವನ ಭಾರಿಯ ಸರಳ ಸೊಗಡಿಗೆ ಬೇವ ಮೂಜಗವ ಅವರು ಕಂಡರು ಖಾತಿಯಲಿ ಪಾಂ ಡವರು ಧೃಷ್ಟದ್ಯುಮ್ನನನು ತವ ತವಗೆ ಬೈದರು ಪಾಪಿ ಲೋಕವ ಕೊಂದೆ ನೀನೆನುತ
kavida kaurava balada summā navanu tammaṃjikeyanā bhai ravana bhāriya saraḷa sogaḍige bēva mūjagava avaru kaṃḍaru khātiyali pāṃ ḍavaru dhr̥ṣṭadyumnananu tava tavage baidaru pāpi lōkava koṃde nīnenuta
ಅಕಟ ಗುರುಹತ್ಯಾ ಮಹಾ ಪಾ ತಕವನೇ ನೆರೆ ಮಾಡಿತಲ್ಲದೆ ಸಕಲ ಲೋಕದ ಬೇರುಗೊಲೆಗೆಲೆ ಪಾಪಿ ನೀನಾದೈ ವಿಕಟ ವಿಕ್ರಮ ವಿಸ್ಫುಲಿಂಗ ಪ್ರಕರದಲಿ ಧಗಧಗಿಸುತಿದೆ ಸಾ ಯಕವ ನಿಲಿಸಾ ನೀನೆನುತ ಭಂಗಿಸಿತು ಪರಿವಾರ
akaṭa guruhatyā mahā pā takavanē nere māḍitallade sakala lōkada bērugolegele pāpi nīnādai vikaṭa vikrama visphuliṃga prakaradali dhagadhagisutide sā yakava nilisā nīnenuta bhaṃgisitu parivāra
ಅವನ ಗುರುತನವೇನು ವಿಪ್ರಾ ಧಮನಲಾ ಶಸ್ತ್ರೋಪಜೀವನ ನಿವನು ಋಷಿಯೇ ದ್ರೋಣವಧೆಯನ್ಯಾಯವೇ ತನಗೆ ಇವನು ತಮ್ಮಯ್ಯನನು ನೆರೆ ಪರಿ ಭವಿಸನೇ ಚಿಕ್ಕಂದು ನಿಮಗೇ ಕಿವನನಿರಿದರೆ ಖಾತಿಯೆಂದನು ದ್ರುಪದಸುತ ಮುಳಿದು
avana gurutanavēnu viprā dhamanalā śastrōpajīvana nivanu r̥ṣiyē drōṇavadheyanyāyavē tanage ivanu tammayyananu nere pari bhavisanē cikkaṃdu nimagē kivananiridare khātiyeṃdanu drupadasuta muḷidu
ಅವಗಡಿಸಲೇಕಗ್ರ ಜನ್ಮ ಬ್ರುವನು ಕಟಕಾಚಾರ‍್ಯನೆಲೆ ನೀ ನವರಿವರನೆಂಬಂತೆ ನುಡಿವರೆ ಗುರುವಲಾ ನಿನಗೆ ಇವರಿಗೀ ನುಡಿಯುರಿಸಿತೇನಿದು ಶಿವ ಶಿವಾ ಗುರುನಿಂದೆಯನು ಕೇ ಳುವರು ನಾವಲ್ಲೆನುತ ಸಾತ್ಯಕಿ ಮುಚ್ಚಿದನು ಕಿವಿಯ
avagaḍisalēkagra janma bruvanu kaṭakācāryanele nī navarivaraneṃbaṃte nuḍivare guruvalā ninage ivarigī nuḍiyurisitēnidu śiva śivā guruniṃdeyanu kē ḷuvaru nāvallenuta sātyaki muccidanu kiviya
ಗುರುವಿಘಾತಕರಾವು ತಾನತಿ ಗುರುಪದೋಪಾಸಕನು ತನ್ನನು ಕರೆದರಾರಿದಕೆಂದು ಧೃಷ್ಟದ್ಯುಮ್ನನುರಿದೇಳೆ ದುರುಳತನವಾರೊಡನೆಯೋ ಬಾ ಹಿರ ಮಹಾಪಾತಕಿಯನೊದೆದಿ ಟ್ಟೊರಸುವೆನು ತಾನೆನುತ ಸಾತ್ಯಕಿ ಖಂಡೆಯವನುಗಿದ
guruvighātakarāvu tānati gurupadōpāsakanu tannanu karedarāridakeṃdu dhr̥ṣṭadyumnanuridēḷe duruḷatanavāroḍaneyō bā hira mahāpātakiyanodedi ṭṭorasuvenu tānenuta sātyaki khaṃḍeyavanugida
ಎಲೆಲೆ ಹಿಡಿಹಿಡಿ ಸಾತ್ಯಕಿಯನೊಳ ಗೊಳಗೆ ತೋಟಿಯೆ ಜಾಗು ಕೌರವ ಬಲದವರ ಬೂತಾಟವಾಯಿತೆ ನಮ್ಮ ಥಟ್ಟಿನಲಿ ನಿಲಿಸೆನುತ ನೃಪನೊರಲೆ ಕವಿದೆಡೆ ಗಲಿಸಿ ಹಿಡಿದನು ಭೀಮನೀತನ ಬಲುಭುಜವನೌಚಿದನು ಕೊಂಡನು ಕಯ್ಯ ಖಂಡೆಯವ
elele hiḍihiḍi sātyakiyanoḷa goḷage tōṭiye jāgu kaurava baladavara būtāṭavāyite namma thaṭṭinali nilisenuta nr̥panorale kavideḍe galisi hiḍidanu bhīmanītana balubhujavanaucidanu koṃḍanu kayya khaṃḍeyava
ಸೆಳೆದನೊರೆಯಲಡಾಯುಧವನ ವ್ವಳಿಸಿದನು ಪಾಂಚಾಲಸುತನೀ ಗಳಹನನು ಬಿಡು ಭೀಮ ಕೊಡು ಸಾತ್ಯಕಿಯ ಖಂಡೆಯವ ಎಲವೊ ಸಾತ್ಯಕಿ ಕೃಷ್ಣ ದೇವರಿ ಗಳುಕಿ ಸೈರಿಸಿದರೆ ದೊಠಾರಿಸಿ ಗೆಲನುಡಿವೆ ಹೆಡತಲೆಯಲುಗಿವೆನು ನಿನ್ನ ನಾಲಗೆಯ
seḷedanoreyalaḍāyudhavana vvaḷisidanu pāṃcālasutanī gaḷahananu biḍu bhīma koḍu sātyakiya khaṃḍeyava elavo sātyaki kr̥ṣṇa dēvari gaḷuki sairisidare doṭhārisi gelanuḍive heḍataleyalugivenu ninna nālageya
ತನ್ನೊಳಿದ್ದವಗುಣವ ನೋಡದೆ ಚುನ್ನವಾಡುವನಿದಿರನೆಲವೋ ನಿನ್ನ ಹೋಲುವರಾರು ಬಾಹಿರ ಭಂಡರವನಿಯಲಿ ನಿನ್ನೆ ಶಸ್ತ್ರವ ಬಿಸುಟ ಯೋಗ ವಿ ಪನ್ನನನು ನೀನೇನ ಮಾಡಿದೆ ನಿನ್ನ ಶೋಧಿಸಿ ಬಳಿಕ ಪರರನು ಹಳಿವುದೇನೆಂದ
tannoḷiddavaguṇava nōḍade cunnavāḍuvanidiranelavō ninna hōluvarāru bāhira bhaṃḍaravaniyali ninne śastrava bisuṭa yōga vi pannananu nīnēna māḍide ninna śōdhisi baḷika pararanu haḷivudēneṃda
ಮಿಡುಕಿದನು ಸಾತ್ಯಕಿ ವೃಕೋದರ ನೊಡೆಯವಚಿದನು ಮತ್ತೆ ಪವನಜ ಬಿಡು ನಿನಗೆ ನೃಪನಾಣೆ ಕುಡಿವೆನು ಖಳನ ಶೋಣಿತವ ಬಿಡು ಬಿಡಕಟಾ ಭೀಮ ಸಾತ್ಯಕಿ ಹಿಡಿಹಿಡಿಯ ಹಮ್ಮೈಸುವನು ಬಿಡು ತೊಡಕಿ ನೋಡಲಿಯೆನುತ ಧೃಷ್ಟದ್ಯುಮ್ನನಳ್ಳಿರಿದ
miḍukidanu sātyaki vr̥kōdara noḍeyavacidanu matte pavanaja biḍu ninage nr̥panāṇe kuḍivenu khaḷana śōṇitava biḍu biḍakaṭā bhīma sātyaki hiḍihiḍiya hammaisuvanu biḍu toḍaki nōḍaliyenuta dhr̥ṣṭadyumnanaḷḷirida
ಮುಳಿದು ಯಾದವ ಸೇನೆ ಕೈದುವ ಸೆಳೆದುದಾ ಪಾಂಚಾಲನಾಯಕ ರುಲಿದು ನಿಂದುದು ಕಂಡನಸುರಧ್ವಂಸಿ ನಸುನಗುತ ಎಲೆಲೆ ಪಾಪಿಗಳಿರ ವೃಥಾ ತ ಮ್ಮೊಳಗೆ ತೋಟಿ ಶರಾಗ್ನಿಯಿತ್ತಲು ಮೊಳಗುತದೆ ಕೆಡೆಬೀಳಹೊಯ್ ಹೊಯ್ ಕುನ್ನಿಗಳನೆಂದ
muḷidu yādava sēne kaiduva seḷedudā pāṃcālanāyaka rulidu niṃdudu kaṃḍanasuradhvaṃsi nasunaguta elele pāpigaḷira vr̥thā ta mmoḷage tōṭi śarāgniyittalu moḷagutade keḍebīḷahoy hoy kunnigaḷaneṃda
ಬೇರೆ ತಮಗೊಂದಾಳುತನವುರಿ ಸೂರೆಗೊಳುತಿದೆ ಜಗವನಿತ್ತಲು ಕೌರಿಡುವ ಕಾಲಾಗ್ನಿಯಿದೆ ಕಬ್ಬೊಗೆಯ ಕವಚದಲಿ ತೋರಲಾಪರೆ ಬಾಹು ಸತ್ವವ ತೋರಿರೈ ದಿಟ ಪಂಥದೋಲೆಯ ಕಾರರಹಿರೆನುತಸುರರಿಪು ಗಜಬಜವ ನಿಲಿಸಿದನು
bēre tamagoṃdāḷutanavuri sūregoḷutide jagavanittalu kauriḍuva kālāgniyide kabbogeya kavacadali tōralāpare bāhu satvava tōrirai diṭa paṃthadōleya kārarahirenutasuraripu gajabajava nilisidanu
ಇತ್ತ ಲೋಕದ ಕಂಗಳೆವೆಗಳು ಕೆತ್ತವಳ್ಳಿರಿವುರಿಯ ಜಾಳಿಗೆ ತೆತ್ತಿಸಿತು ಹರಿದಶ್ವ ಶತವನು ಶಿವ ಮಹಾದೇವ ಕಿತ್ತು ಶರವನು ತೂಗಿ ಬಿಲ್ಲಿಗೆ ತೆತ್ತಿಸಿದನುರೆ ಸೇದಿ ತೋರಿಹ ತುತ್ತು ನಿನಗರಿಸೇನೆ ಹೋಗೆನುತೆಚ್ಚು ಬೊಬ್ಬಿರಿದ
itta lōkada kaṃgaḷevegaḷu kettavaḷḷirivuriya jāḷige tettisitu haridaśva śatavanu śiva mahādēva kittu śaravanu tūgi billige tettisidanure sēdi tōriha tuttu ninagarisēne hōgenuteccu bobbirida
ಜಗದ ಹುಯ್ಯಲು ಜಡಿಯಲಭ್ರದ ಲಗಿದು ಕೌರವಸೇನೆ ಹರುಷದ ಸೊಗಸಿನಲಿ ಮೈಮರೆಯೆ ಕೃಷ್ಣಾದಿಗಳು ಕೈಮರೆಯೆ ಹೊಗೆಯ ಹೊರಳಿಯ ಕಿಡಿಯ ಥಟ್ಟಿನ ತಗೆದುರಿಯ ತೆಕ್ಕೆಯಲಿ ಧಗಧಗ ಧಗಿಸಿ ಧಾಳಿಟ್ಟುದು ಮಹಾಶರವಹಿತ ಮೋಹರಕೆ
jagada huyyalu jaḍiyalabhrada lagidu kauravasēne haruṣada sogasinali maimareye kr̥ṣṇādigaḷu kaimareye hogeya horaḷiya kiḍiya thaṭṭina tageduriya tekkeyali dhagadhaga dhagisi dhāḷiṭṭudu mahāśaravahita mōharake
ಹಾ ಮುರಾಂತಕ ಹಾ ಯುಧಿಷ್ಠಿರ ಹಾ ಮರುತ್ಸುತ ಹಾ ಧನಂಜಯ ಹಾ ಮಗನೆ ಹಾ ತಂದೆ ಹಾ ಒಡವುಟ್ಟಿದನೆಯೆನುತ ಭೂಮಿ ತೆರೆಯಳೆ ಬಾಯನಕಟಕ ಟಾ ಮಹೋದಧಿ ದೂರವಿನ್ನೇ ನೀ ಮಹಾಸ್ತ್ರಕೆ ಸಿಕ್ಕಿದೆವೆಯೆಂದೊರಲಿತರಿಸೇನೆ
hā murāṃtaka hā yudhiṣṭhira hā marutsuta hā dhanaṃjaya hā magane hā taṃde hā oḍavuṭṭidaneyenuta bhūmi tereyaḷe bāyanakaṭaka ṭā mahōdadhi dūravinnē nī mahāstrake sikkideveyeṃdoralitarisēne
ಕಳವಳಿಸಿತರಿಸೇನೆ ಚೂಣಿಯ ಕೊಳುಗಿಡಿಯ ಸೆಖೆ ತಾಗಿ ಸುಭಟಾ ವಳಿಯ ಮೀಸೆಗಳುರಿಯೆ ನೆರೆ ಕಂದಿದವು ಮೋರೆಗಳು ಬಲದ ಸುತ್ತಲು ಕಟ್ಟಿತುರಿ ಕೆಂ ಬೆಳಗು ಕುಡಿದವು ಕರ್ಬೊಗೆಗಳ ಗ್ಗಳದ ಬಾಣದ ಬಂದಿಯಲಿ ಸಿಲುಕಿತ್ತು ರಿಪುಸೇನೆ
kaḷavaḷisitarisēne cūṇiya koḷugiḍiya sekhe tāgi subhaṭā vaḷiya mīsegaḷuriye nere kaṃdidavu mōregaḷu balada suttalu kaṭṭituri keṃ beḷagu kuḍidavu karbogegaḷa ggaḷada bāṇada baṃdiyali silukittu ripusēne
ಝಳಕೆ ಘೀಳಿಟ್ಟೊರಲಿದವು ಕರಿ ಕುಳ ತುರಂಗದ ಥಟ್ಟು ಖುರದಲಿ ನೆಲನ ಹೊಯ್ದವ್ವಳಿಸಿದವು ರಾವುತರನೀಡಾಡಿ ಬಲು ರಥವನಸಬಡಿದು ಸೂತನ ನಿಳುಹಿ ಹಯವೋಡಿದವು ಮು ಮ್ಮುಳಿಸಿ ತನಿಗುದಿಗುದಿದು ಕೋಟಲೆಗೊಂಡುದರಿಸೇನೆ
jhaḷake ghīḷiṭṭoralidavu kari kuḷa turaṃgada thaṭṭu khuradali nelana hoydavvaḷisidavu rāvutaranīḍāḍi balu rathavanasabaḍidu sūtana niḷuhi hayavōḍidavu mu mmuḷisi tanigudigudidu kōṭalegoṃḍudarisēne
ವಾಯಕಂಜದಿರಂಜದಿರಿ ಫಡ ಬಾಯ ಬಿಟ್ಟರೆ ಹೋಹುದೇ ನಿ ಮ್ಮಾಯುಷಕೆ ಹೊಣೆ ತಾನು ಹೇಳಿತ ಮಾಡಿ ಬೇಗದಲಿ ಆಯುಧಂಗಳ ಬಿಸುಟು ಕರಿ ರಥ ಜಾಯಿಲಂಗಳನಿಳಿದು ಬದುಕುವು ಪಾಯವೆಂದಸುರಾರಿ ಸಾರಿದನಂದು ಕೈ ನೆಗಹಿ
vāyakaṃjadiraṃjadiri phaḍa bāya biṭṭare hōhudē ni mmāyuṣake hoṇe tānu hēḷita māḍi bēgadali āyudhaṃgaḷa bisuṭu kari ratha jāyilaṃgaḷaniḷidu badukuvu pāyaveṃdasurāri sāridanaṃdu kai negahi
ಕಳಿದ ಹೂವಿನ ತೊಡಬೆಯೋ ಕುಸಿ ದಲೆಯ ಬಿಟ್ಟಿಯ ಭಾರವೋ ನಿ ರ್ಮಳನ ಚಿತ್ತದ ಖತಿಯೊ ದಾನವ್ಯಸನಿಯೊಡವೆಗಳೊ ನಳಿನನಾಭನ ಮಾತು ಹಿಂಚಿತು ಕಳಚಿದವು ಕೈದುಗಳು ಕೈಗಳ ಲುಳಿವು ಪಾಯದ ಜೋಡ ತೊಟ್ಟುದು ಪಾಂಡುಸುತಸೇನೆ
kaḷida hūvina toḍabeyō kusi daleya biṭṭiya bhāravō ni rmaḷana cittada khatiyo dānavyasaniyoḍavegaḷo naḷinanābhana mātu hiṃcitu kaḷacidavu kaidugaḷu kaigaḷa luḷivu pāyada jōḍa toṭṭudu pāṃḍusutasēne
ಬೀತ ಕೈದುಗಳಖಿಳದಳ ಸಂ ಘಾತವನು ಬಾಣಾಗ್ನಿ ಬೆರಸಿತು ಪೂತು ಭಂಡರಿರೆನುತ ಬಿಟ್ಟುದು ಬಾಣವರಿಭಟರ ಆತನಾವೆಡೆ ಧರ್ಮಜನು ವಿ ಖ್ಯಾತನರ್ಜುನನನಿಲಸುತ ಮಾ ದ್ರೀತನುಜರೆಂದೆನುತ ಹೊಕ್ಕುದು ರಾಜ ಮೋಹರವ
bīta kaidugaḷakhiḷadaḷa saṃ ghātavanu bāṇāgni berasitu pūtu bhaṃḍarirenuta biṭṭudu bāṇavaribhaṭara ātanāveḍe dharmajanu vi khyātanarjunananilasuta mā drītanujareṃdenuta hokkudu rāja mōharava
ಹರಿಯ ಬಯ್ಗುಳು ಬೆದರಿಸಲು ನೃಪ ನಿರೆ ನಿರಾಯುಧನಾಗಿ ಮಾದ್ರೇ ಯರು ಶಿಖಂಡಿ ಯುಯುತ್ಸು ಸಾತ್ಯಕಿ ಸೃಂಜಯಾದಿಗಳು ಕರದ ಕದಪಿನ ತಳಿತ ಮುಸುಕಿನ ಮುರಿದ ಮೋರೆಯ ಮುಂದೆ ಹರಹಿದ ತರತರದ ಕೈದುಗಳ ಸುಭಟರ ಕಂಡುದಮಳಾಸ್ತ್ರ
hariya bayguḷu bedarisalu nr̥pa nire nirāyudhanāgi mādrē yaru śikhaṃḍi yuyutsu sātyaki sr̥ṃjayādigaḷu karada kadapina taḷita musukina murida mōreya muṃde harahida taratarada kaidugaḷa subhaṭara kaṃḍudamaḷāstra
ಏಕೆ ನಾಚಿಕೆ ಧರ‍್ಮಹಾನಿ ವ್ಯಾಕುಳತೆಯಿನ್ನೇಕೆ ವೈದಿಕ ಲೌಕಿಕವದೇಗುವುವು ಜೀವವ್ರಯಕೆ ಕುಲವುಂಟೆ ಏಕೆ ಭಯ ನಮಗಿನ್ನು ಕೈದುವ ನೂಕಿದವರನು ಹೆಂಗುಸನು ತಾ ಸೋಕಿದರೆ ಮುರಹರನ ಪದದಾಣೆಂದುದಮಳಾಸ್ತ್ರ
ēke nācike dharmahāni vyākuḷateyinnēke vaidika laukikavadēguvuvu jīvavrayake kulavuṃṭe ēke bhaya namaginnu kaiduva nūkidavaranu heṃgusanu tā sōkidare muraharana padadāṇeṃdudamaḷāstra
ಇವರೊಳುಂಟೇ ಕೈದುವೊತ್ತವ ರವರನರಸುವೆನೆನುತ ಬರಲಾ ಪವನಸುತನನು ಥಟ್ಟಿಸಿದನಾ ದನುಜರಿಪು ಮುಳಿದು ಅವನಿಗಿಳಿದೀಡಾಡಿ ಕಳೆ ಕೈ ದುವನು ತಾ ಮೊದಲಾಗಿ ನಿಂದಂ ದವನು ನೋಡೆನಲನಿಲಸುತ ನಸುನಗುತಲಿಂತೆಂದ
ivaroḷuṃṭē kaiduvottava ravaranarasuvenenuta baralā pavanasutananu thaṭṭisidanā danujaripu muḷidu avanigiḷidīḍāḍi kaḷe kai duvanu tā modalāgi niṃdaṃ davanu nōḍenalanilasuta nasunagutaliṃteṃda
ದೇಹ ಕೀರ್ತಿಗಳೊಳಗೆ ನಿಲುವುದು ದೇಹವೋ ಕೀರ್ತಿಯೊ ಮುರಾಂತಕ ಬೇಹುದನು ಬೆಸಸಿದಡೆ ಮಾಡೆನು ಬಲ್ಲಿರೆನ್ನನುವ ಗಾಹುಗತಕದಲುಳಿವ ಧರ‍್ಮ ದ್ರೋಹಿ ತಾನಲ್ಲಿನ್ನು ನೋಡಾ ಸಾಹಸವನೆನುತಿತ್ತ ಮುರಿದನು ಸರಳ ಸಮ್ಮುಖಕೆ
dēha kīrtigaḷoḷage niluvudu dēhavō kīrtiyo murāṃtaka bēhudanu besasidaḍe māḍenu ballirennanuva gāhugatakadaluḷiva dharma drōhi tānallinnu nōḍā sāhasavanenutitta muridanu saraḷa sammukhake
ಪೂತು ಪಾಯಿಕು ಭೀಮ ನೆರೆದೀ ಬೂತು ಬಲದಲಿ ವೀರ ನೀನಹೆ ಯೇತಕಿವದಿರು ಗಂಡು ಜೋಹದ ಗರುವ ಸೂಳೆಯರು ಸೋತಡೆಯು ಜಯ ನಿನ್ನದೆನುತ ವಿ ಧೂತಧೂಮದಿ ಕಿಡಿಯ ಝಾಡಿಗ ಳೀತನನು ಮುಸುಕಿದವು ಚುಂಬಿಸಿತಂಬು ಪವನಜನ
pūtu pāyiku bhīma neredī būtu baladali vīra nīnahe yētakivadiru gaṃḍu jōhada garuva sūḷeyaru sōtaḍeyu jaya ninnadenuta vi dhūtadhūmadi kiḍiya jhāḍiga ḷītananu musukidavu cuṃbisitaṃbu pavanajana
ಗಿರಿಯ ಮುತ್ತಿದ ಮುಗಿಲವೊಲು ಹೊಗೆ ಹೊರಳಿಗಟ್ಟಿತು ಮೇಲೆ ದಳ್ಳುರಿ ಧರಧುರದಲೊಳಬೀಳುತಿದ್ದವು ಕಿಡಿಯ ಚೂಣಿಯಲಿ ಉರಿಯೊಳದ್ದೈ ತಮ್ಮ ಹಾಯೆಂ ದರಸ ಮೊದಲಾದಖಿಳಭೂಪರು ಕರದ ಬಿರುವೊಯ್ಲುಗಳ ಬಾಯವರೊರಲಿ ಹೊರಳಿದರು
giriya muttida mugilavolu hoge horaḷigaṭṭitu mēle daḷḷuri dharadhuradaloḷabīḷutiddavu kiḍiya cūṇiyali uriyoḷaddai tamma hāyeṃ darasa modalādakhiḷabhūparu karada biruvoylugaḷa bāyavarorali horaḷidaru
ವಾಯುಸುತ ಹಾಯೆನುತ ಫಲುಗುಣ ಬಾಯಿಬಿಡೆ ಹರಿ ಜರೆದನಳುವನ ಬಾಯ ನೋಡಾ ಬೇಗ ತೊಡು ತೊಡು ವರುಣಮಾರ್ಗಣವ ಸಾಯಲರಿಯನು ಭೀಮನೆನೆ ನಾ ರಾಯಣನ ನುಡಿಯಿಂದ ಮುನ್ನ ಜ ಲಾಯತಾಸ್ತ್ರವನರ್ಜುನನು ಗಾಂಡಿವದಲುಗುಳಿಸಿದ
vāyusuta hāyenuta phaluguṇa bāyibiḍe hari jaredanaḷuvana bāya nōḍā bēga toḍu toḍu varuṇamārgaṇava sāyalariyanu bhīmanene nā rāyaṇana nuḍiyiṃda munna ja lāyatāstravanarjunanu gāṃḍivadaluguḷisida
ಹೊಗೆಯನೊದೆದೊಳಬಿದ್ದು ಕಿಡಿಗಳ ನುಗಿದು ದಳ್ಳುರಿದುರುಗಲನು ತನಿ ಬಿಗಿದು ಭೀಮನ ರಥದ ಸುತ್ತಲು ಸೂಸಿ ತೆರೆ ಮಸಗೆ ಹಗೆಯನೆನಗಿದಿರೊಡ್ಡಿ ಜುಣುಗಲು ಬಗೆದರೇ ಖಂಡೆಯದ ಮೊನೆಯಲಿ ಮಗುಳಿಚುವರೇ ತನ್ನನೆನುತುರವಣಿಸಿತಮಳಾಸ್ತ್ರ
hogeyanodedoḷabiddu kiḍigaḷa nugidu daḷḷuridurugalanu tani bigidu bhīmana rathada suttalu sūsi tere masage hageyanenagidiroḍḍi juṇugalu bagedarē khaṃḍeyada moneyali maguḷicuvarē tannanenuturavaṇisitamaḷāstra
ಉರುಬಿದವು ಕೇಸುರಿಗಳುದಕವ ಸುರಿದುವೊಣಗಿಲುಗಿಡಿಯ ಹಬ್ಬುಗೆ ಹೊರಗೆ ಮಸಗಿತು ಮುಸುಕಿತುದಕದ ಬಾಣವಕ್ಕುಡಿಸೆ ಒರತೆಯಾರಿತು ವರುಣಶರ ಬಾ ಯರತು ನೀರಡಿಸಿದುದು ಭೀಮನ ಸೆರಗ ಹಿಡಿದಳು ಮೃತ್ಯುವವನೀಪಾಲ ಕೇಳೆಂದ
urubidavu kēsurigaḷudakava suriduvoṇagilugiḍiya habbuge horage masagitu musukitudakada bāṇavakkuḍise orateyāritu varuṇaśara bā yaratu nīraḍisidudu bhīmana seraga hiḍidaḷu mr̥tyuvavanīpāla kēḷeṃda
ಆವ ಶರವಿದ್ದೇಗುವುದು ಮೈ ಗಾವನಸುತರಾಂತಕನಲೈ ತಾ ನಾವ ವಹಿಲದೊಳುರಿಯೊಳೆಡೆಹಾಯ್ದನಿಲಜನ ತೆಗೆದ ನಾವರಿಯೆವಾ ಪವನಜನ ಶ ಸ್ತ್ರಾವಳಿಯನಾ ಫಲುಗುಣನ ಗಾಂ ಡೀವವನು ಹರಿ ಸೆಳೆದುಕೊಂಡನು ಬಿಸುಟನವನಿಯಲಿ
āva śaraviddēguvudu mai gāvanasutarāṃtakanalai tā nāva vahiladoḷuriyoḷeḍehāydanilajana tegeda nāvariyevā pavanajana śa strāvaḷiyanā phaluguṇana gāṃ ḍīvavanu hari seḷedukoṃḍanu bisuṭanavaniyali
ಮುರಿಮುರಿದು ಕಬ್ಬೊಗೆಯ ಹೊದರಿನ ಹೊರಳಿ ಹರೆದುದು ಸೂಸುಗಿಡಿಗಳ ನೆರವಿ ನಸಿದುದು ನಿಮಿರ್ದ ಹೊಂಗರಿಯಂಬುಹೊಳೆಹೊಳೆದು ಮುರಹರನ ಪಾದಾರವಿಂದದ ಹೊರೆಯೊಳಡಗಿತು ಹೋಯ್ತು ಭಯವು ಬ್ಬರದೊಳಗೆ ಬೊಬ್ಬಿರಿದವುರು ನಿಸ್ಸಾಳಕೋಟಿಗಳು
murimuridu kabbogeya hodarina horaḷi haredudu sūsugiḍigaḷa neravi nasidudu nimirda hoṃgariyaṃbuhoḷehoḷedu muraharana pādāraviṃdada horeyoḷaḍagitu hōytu bhayavu bbaradoḷage bobbiridavuru nissāḷakōṭigaḷu
ಜಗದುಸುರು ಪಸರಿಸಿತು ಹರುಷದ ಹೊಗರು ಮಸಗಿತು ರಿಪುನೃಪರ ನಿ ನ್ನಗಡು ಮಗನುತ್ಸಾಹವದ್ದುದು ಖೇದಪಂಕದಲಿ ಹೊಗೆವ ಮೋರೆಯ ಕಯ್ಯಗಲ್ಲದ ಬಿಗಿದ ಬೆರಗಿನ ಖತಿಯೊಳುಸುರುವ ನಗೆಯೊಳಶ್ವತ್ಥಾಮನಿದ್ದನು ಮೊಗದ ಮೋನದಲಿ
jagadusuru pasarisitu haruṣada hogaru masagitu ripunr̥para ni nnagaḍu maganutsāhavaddudu khēdapaṃkadali hogeva mōreya kayyagallada bigida beragina khatiyoḷusuruva nageyoḷaśvatthāmaniddanu mogada mōnadali
ಏನು ಮಾಡುವೆನಿನ್ನು ಭಾಗ್ಯ ವಿ ಹೀನನಕಟಾ ಕೌರವನು ಸುರ ಧೇನು ನೆರೆ ಗೊಡ್ಡಾಯ್ತು ಸುರತರು ಕಾಡಮರನಾಯ್ತು ಹಾನಿಯಿವದಿರಿಗೊಲಿದುದಾರಿ ದ್ದೇನಹುದು ಪರದೈವದನುಸಂ ಧಾನವತ್ತಲು ಸುಡಲೆನುತ ತಿರುಗಿದನು ಪಾಳೆಯಕೆ
ēnu māḍuveninnu bhāgya vi hīnanakaṭā kauravanu sura dhēnu nere goḍḍāytu surataru kāḍamaranāytu hāniyivadirigolidudāri ddēnahudu paradaivadanusaṃ dhānavattalu suḍalenuta tirugidanu pāḷeyake
ಬಂದು ವೇದವ್ಯಾಸಮುನಿ ಗುರು ನಂದನಂಗರುಹಿದನು ಪಾರ್ಥಮು ಕುಂದರನು ಪರ‍್ವದಲಿ ನರನಾರಾಯಣಾಹ್ವಯದ ಸಂದ ಋಷಿಗಳು ಭೂಮಿಭಾರವ ನೊಂದುಪಾಯದಲಪಹರಿಸಲೈ ತಂದ ಹದನನು ತಿಳುಹಿ ಬಂದನು ಫಲುಗುಣನ ಹೊರೆಗೆ
baṃdu vēdavyāsamuni guru naṃdanaṃgaruhidanu pārthamu kuṃdaranu parvadali naranārāyaṇāhvayada saṃda r̥ṣigaḷu bhūmibhārava noṃdupāyadalapaharisalai taṃda hadananu tiḷuhi baṃdanu phaluguṇana horege
ನರನ ಚಿತ್ತಗ್ಲಾನಿಯನು ಪರಿ ಹರಿಸಿದನು ಶೂಲದಲಿ ಮುಂಕೊಂ ಡರಿ ಬಲವನಿರಿದಾತನಾರೆನಲಿಂದುಧರನೆಂದು ಹರನ ಕರುಣದ ಹದನನೀತಂ ಗೊರೆದು ಶತರುದ್ರೀಯವನು ವಿ ಸ್ತರಿಸಿ ಬಿಜಯಂಗೈದನಾ ಮುನಿಪತಿ ನಿಜಾಶ್ರಮಕೆ
narana cittaglāniyanu pari harisidanu śūladali muṃkoṃ ḍari balavaniridātanārenaliṃdudharaneṃdu harana karuṇada hadananītaṃ goredu śatarudrīyavanu vi starisi bijayaṃgaidanā munipati nijāśramake
ಬಿಸುಟು ಕೈದುಗಳೆಲ್ಲವನು ಕೈ ವಶವ ಮಾಡಿತು ಸೇನೆ ಲಜ್ಜಾ ರಸಕೆ ಗುರಿಯಾಯ್ತೊಮ್ಮೆ ಮರಳಿದು ಹರುಷಮಯರಸಕೆ ಮುಸುಕುದಲೆಯಲಿ ಮುರಿದುದದು ಭಯ ರಸದ ರಹಿಯಲಿ ತಿರುಗಿತಿದು ರವಿ ಮುಸುಡ ತಿರುಹಿ ವಿರಾಗದಲಿ ಬೀಳ್ಕೊಟ್ಟನಂಬರವ
bisuṭu kaidugaḷellavanu kai vaśava māḍitu sēne lajjā rasake guriyāytomme maraḷidu haruṣamayarasake musukudaleyali muridudadu bhaya rasada rahiyali tirugitidu ravi musuḍa tiruhi virāgadali bīḷkoṭṭanaṃbarava
ಆವ ಶರದಲಿ ಕೊರತೆ ನಿನ್ನವ ರಾವ ಬಲದಲಿ ಕುಂದು ಭುವನದೊ ಳಾವನೈ ಸಮಜೋಳಿ ನಿನ್ನರಮನೆಯ ಸುಭಟರಿಗೆ ಆವನಿದ್ದೇನಹುದು ಜಗದಧಿ ದೈವದಲಿ ಸೆಣಸಿದಿರಿ ಪಾಂಡವ ಜೀವಿಯೆಂದರಿದರಿದು ಗದುಗಿನ ವೀರನಾರಯಣ
āva śaradali korate ninnava rāva baladali kuṃdu bhuvanado ḷāvanai samajōḷi ninnaramaneya subhaṭarige āvaniddēnahudu jagadadhi daivadali seṇasidiri pāṃḍava jīviyeṃdaridaridu gadugina vīranārayaṇa
Keys: ← → turn the page, J K step through the verses.
Illustration: Verse & Place (Project-owned).